ಎಡಿಎಎಸ್ ಸೌಲಭ್ಯ ಹೊಂದಿರುವ ಹೊಸ ಹ್ಯುಂಡೈ ಟ್ಯೂಸಾನ್ ಎಸ್‌ಯುವಿ ಭಾರತದಲ್ಲಿ ಬಿಡುಗಡೆ

ಹ್ಯುಂಡೈ ಇಂಡಿಯಾ ಕಂಪನಿಯು ತನ್ನ ಫುಲ್ ಸೈಜ್ ಪ್ರೀಮಿಯಂ ಎಸ್‌ಯುವಿ ಮಾದರಿಯಾದ ಟ್ಯೂಸಾನ್ 2022ರ ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 27.70 ಲಕ್ಷ ಬೆಲೆ ಹೊಂದಿದೆ.

ಎಡಿಎಎಸ್ ಸೌಲಭ್ಯ ಹೊಂದಿರುವ ಹೊಸ ಹ್ಯುಂಡೈ ಟ್ಯೂಸಾನ್ ಎಸ್‌ಯುವಿ ಭಾರತದಲ್ಲಿ ಬಿಡುಗಡೆ

ಜಾಗತಿಕ ಮಾರುಕಟ್ಟೆಯಲ್ಲಿ ಹಲವಾರು ಪ್ರೀಮಿಯಂ ಎಸ್‌ಯುವಿ ಫ್ಲ್ಯಾಗ್‌ಶಿಪ್ ಮಾರಾಟ ಹೊಂದಿರುವ ಹ್ಯುಂಡೈ ಕಂಪನಿಯು ಟ್ಯೂಸಾನ್ ಹೊಸ ಮಾದರಿಯನ್ನು ಹಲವಾರು ಬದಲಾವಣೆಗಳೊಂದಿಗೆ ಬಿಡುಗಡೆ ಮಾಡಿದೆ. ಹೊಸ ಕಾರು ಮಾದರಿಯು ಗ್ರಾಹಕರ ಬೇಡಿಕೆ ಆಧರಿಸಿ ಪ್ಲ್ಯಾಟಿನಂ ಮತ್ತು ಸಿಗ್ನೆಚರ್ ಎನ್ನುವ ಎರಡು ವೆರಿಯೆಂಟ್‌ಗಳೊಂದಿಗೆ ಖರೀದಿಗೆ ಲಭ್ಯವಿದ್ದು, ಹೊಸ ಕಾರು ಮಾದರಿಯು ಮೊದಲ ಬಾರಿಗೆ ಎಡಿಎಎಸ್ ಸೌಲಭ್ಯದೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.

ಟ್ಯೂಸಾನ್ ಕಾರಿನ ಪ್ಲ್ಯಾಟಿನಂ ಮತ್ತು ಸಿಗ್ನೆಚರ್ ವೆರಿಯೆಂಟ್‌ಗಳಲ್ಲಿ ಸದ್ಯಕ್ಕೆ ಕಂಪನಿಯು ಪ್ಲ್ಯಾಟಿನಂ ವೆರಿಯೆಂಟ್ ಬೆಲೆ ಮಾತ್ರ ಘೋಷಣೆ ಮಾಡಿದ್ದು, ಹೈ ಎಂಡ್ ಮಾದರಿಯ ಬೆಲೆಯನ್ನು ಶೀಘ್ರದಲ್ಲಿಯೇ ಪ್ರಕಟಿಸುವುದಾಗಿ ಹೇಳಿಕೊಂಡಿದೆ.

ಎಡಿಎಎಸ್ ಸೌಲಭ್ಯ ಹೊಂದಿರುವ ಹೊಸ ಹ್ಯುಂಡೈ ಟ್ಯೂಸಾನ್ ಎಸ್‌ಯುವಿ ಭಾರತದಲ್ಲಿ ಬಿಡುಗಡೆ

ಹೊಸ ಕಾರು ಮಾದರಿಯಲ್ಲಿ ಹ್ಯುಂಡೈ ಕಂಪನಿಯು ಪೆಟ್ರೋಲ್ ಮತ್ತು ಡಿಸೇಲ್ ಎಂಜಿನ್ ಆಯ್ಕೆ ನೀಡಿದ್ದು, 2.0-ಲೀಟರ್ ನ್ಯಾಚುರಲಿ ಆಸ್ಪೆರೆಟೆಡ್, ಫೋರ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಮಾದರಿಯು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 156-ಬಿಎಚ್‌ಪಿ ಮತ್ತು 192-ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಮತ್ತೊಂದು ಆಯ್ಕೆಯಲ್ಲಿರುವ 2.0-ಲೀಟರ್ ಡೀಸೆಲ್ ಎಂಜಿನ್ ಮಾದರಿಯು 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 186 ಬಿಎಚ್‌ಪಿ ಮತ್ತು 416 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಎಡಿಎಎಸ್ ಸೌಲಭ್ಯ ಹೊಂದಿರುವ ಹೊಸ ಹ್ಯುಂಡೈ ಟ್ಯೂಸಾನ್ ಎಸ್‌ಯುವಿ ಭಾರತದಲ್ಲಿ ಬಿಡುಗಡೆ

ಹೊಸ ಕಾರಿನಲ್ಲಿ ಕಂಪನಿಯು ಹೈ ಎಂಡ್ ಡೀಸೆಲ್ ಮಾದರಿಯಲ್ಲಿ ಆಲ್ ವ್ಹೀಲ್ ಡ್ರೈವ್ ಸಿಸ್ಟಂ ಮತ್ತು ಮಲ್ಟಿ ಟೆರೇನ್ ಮೋಡ್(ಸ್ನೋ, ಮಡ್, ಸ್ಯಾಂಡ್) ಸೌಲಭ್ಯಗಳನ್ನು ಸ್ಟ್ಯಾಂಡರ್ಡ್ ಆಗಿ ಜೋಡಣೆ ಮಾಡುವ ಬದಲು ಆಯ್ಕೆ ರೂಪದಲ್ಲಿ ನೀಡಲಾಗಿದ್ದು, ಹೊಸ ಸೌಲಭ್ಯಗಳನ್ನು ಬೇಕಿದ್ದಲ್ಲಿ ಹೆಚ್ಚುವರಿ ಮೊತ್ತದೊಂದಿಗೆ ಈ ಹೊಸ ಸೌಲಭ್ಯಗಳನ್ನು ಖರೀದಿಸಬೇಕಾಗುತ್ತದೆ.

ಎಡಿಎಎಸ್ ಸೌಲಭ್ಯ ಹೊಂದಿರುವ ಹೊಸ ಹ್ಯುಂಡೈ ಟ್ಯೂಸಾನ್ ಎಸ್‌ಯುವಿ ಭಾರತದಲ್ಲಿ ಬಿಡುಗಡೆ

ಇನ್ನುಳಿದಂತೆ ಟ್ಯೂಸಾನ್‌ ಕಾರಿನಲ್ಲಿ ಕಂಪನಿಯು ಹೊಸದಾಗಿ ಲೆವಲ್ 2 ಎಡಿಎಎಸ್(ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ) ಸೌಲಭ್ಯವನ್ನು ಮೊದಲ ಬಾರಿಗೆ ಪರಿಚಯಿಸಿದ್ದು, ಶೀಘ್ರದಲ್ಲಿಯೇ ಕಂಪನಿಯು ತನ್ನ ಭವಿಷ್ಯದ ಕಾರು ಮಾದರಿಗಳಾದ ಐಯಾನಿಕ್ 5, ಕ್ರೆಟಾ ಫೇಸ್‌ಲಿಫ್ಟ್ ಮಾದರಿಗಳಲ್ಲೂ ಎಡಿಎಎಸ್ ಪರಿಚಯಿಸುತ್ತಿದೆ.

ಎಡಿಎಎಸ್ ಸೌಲಭ್ಯ ಹೊಂದಿರುವ ಹೊಸ ಹ್ಯುಂಡೈ ಟ್ಯೂಸಾನ್ ಎಸ್‌ಯುವಿ ಭಾರತದಲ್ಲಿ ಬಿಡುಗಡೆ

ಲೆವಲ್ 2 ಎಡಿಎಎಸ್ ಪ್ಯಾಕೇಜ್‌ನಲ್ಲಿ ಹಲವಾರು ಸುರಕ್ಷಾ ಸೌಲಭ್ಯಗಳನ್ನು ಜೋಡಿಸಲಾಗಿದ್ದು, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಫಾರ್ವಡ್ ಕೂಲಿಷನ್ ವಾರ್ನಿಂಗ್, ಆಟೋ ಎಮರ್ಜೆನ್ಸಿ ಬ್ರೇಕಿಂಗ್, ಲೇನ್ ಕಿಪ್ ಅಸಿಸ್ಟ್, ಲೇನ್ ಡಿಫಾರ್ಚರ್, ಲೇನ್ ಡಿಫಾರ್ಚರ್ ಪ್ರಿವೆಷನ್, ಸ್ಪೀಡ್ ವಾರ್ನಿಂಗ್, ಸ್ಪೀಡ್ ಅಸಿಸ್ಟ್ ಸಿಸ್ಟಂ, ರಿಯರ್ ಕ್ರಾಸ್ ಟ್ರಾಫಿಕ್ ಅಲರ್ಟ್, ಲೇನ್ ಚೇಂಜ್ ಅಸಿಸ್ಟ್, ಬ್ಲೈಂಡ್ ಸ್ಪಾಟ್ ಡಿಟೆಕ್ಷನ್, ಇಂಟೆಲಿಜೆಂಟ್ ಹೆಡ್‌ಲ್ಯಾಂಪ್ ಸೇರಿದಂತೆ ಹಲವು ಸೌಲಭ್ಯಗಳಿವೆ.

ಎಡಿಎಎಸ್ ಸೌಲಭ್ಯ ಹೊಂದಿರುವ ಹೊಸ ಹ್ಯುಂಡೈ ಟ್ಯೂಸಾನ್ ಎಸ್‌ಯುವಿ ಭಾರತದಲ್ಲಿ ಬಿಡುಗಡೆ

ಇದರೊಂದಿಗೆ ಹೊಸ ಕಾರಿನಲ್ಲಿ ಸ್ಟ್ಯಾಂಡರ್ಡ್ ಆಗಿ ಆರು ಏರ್‌ಬ್ಯಾಗ್‌ಗಳು, ಇಎಸ್ಇ ಹಿಲ್ ಡಿಸೆಂಟ್ ಕಂಟ್ರೋಲ್, ಆಲ್ ವ್ಹೀಲ್ ಡಿಸ್ಕ್ ಬ್ರೇಕ್ ಸೌಲಭ್ಯಗಳಿದ್ದು, ಹೊಸ ಕಾರಿನ ವಿನ್ಯಾಸ ಮತ್ತು ತಾಂತ್ರಿಕ ಸೌಲಭ್ಯಗಳು ಕೂಡಾ ಸಾಕಷ್ಟು ಬದಲಾವಣೆಗೊಂಡಿವೆ. ಹೊಸ ಕಾರಿನಲ್ಲಿ ಈ ಬಾರಿ ನೀಡಲಾಗಿರುವ ಸೆನ್ಶುವಲ್ ಸ್ಪೋರ್ಟಿನೆಸ್ ವಿನ್ಯಾಸ ಭಾಷೆಯು ಸಾಕಷ್ಟು ಆಕರ್ಷಕ ಮತ್ತು ಬಲಿಷ್ಠವಾಗಿದ್ದು, ಕಾರಿನ ಮೇಲ್ಭಾಗದಲ್ಲಿ ನೀಡಲಾಗಿರುವ ಶಾರ್ಪ್ ಕಟ್ ವಿನ್ಯಾಸವು ಕಾರಿನ ಹೊಸ ಲುಕ್ ನೀಡುವಲ್ಲಿ ಸಹಕಾರಿಯಾಗಿವೆ.

ಎಡಿಎಎಸ್ ಸೌಲಭ್ಯ ಹೊಂದಿರುವ ಹೊಸ ಹ್ಯುಂಡೈ ಟ್ಯೂಸಾನ್ ಎಸ್‌ಯುವಿ ಭಾರತದಲ್ಲಿ ಬಿಡುಗಡೆ

ಜೊತೆಗೆ ಕಾರಿನಲ್ಲಿರುವ ಡಾರ್ಕ್ ಕ್ರೋಮ್ ಸೌಲಭ್ಯವು ಮುಂಭಾಗದ ಗ್ರಿಲ್‌ಗೆ ಉತ್ತಮ ಹೋರನೋಟ ನೀಡಿರುವುದಲ್ಲದೇ ಎಲ್ಇಡಿ ಡೇಟೈಮ್ ರನ್ನಿಂಗ್ ಲ್ಯಾಂಪ್‌ಗಳೊಂದಿಗೆ ಸಂಯೋಜಿಸಿದ್ದು, ಹೆಡ್‌ಲ್ಯಾಂಪ್‌ಗಳನ್ನು ಮುಂಭಾಗದ ಬಂಪರ್‌ನಲ್ಲಿ ಇರಿಸಲಾಗಿದೆ.

ಎಡಿಎಎಸ್ ಸೌಲಭ್ಯ ಹೊಂದಿರುವ ಹೊಸ ಹ್ಯುಂಡೈ ಟ್ಯೂಸಾನ್ ಎಸ್‌ಯುವಿ ಭಾರತದಲ್ಲಿ ಬಿಡುಗಡೆ

ಹಾಗೆಯೇ ಹೊಸ ಕಾರಿನಲ್ಲಿ ಬಲಿಷ್ಠ ವಿನ್ಯಾಸಕ್ಕಾಗಿ ವ್ಹೀಲ್ ಆರ್ಚ್, ಬಾಡಿ ಕ್ಲ್ಯಾಡಿಂಗ್, ಡಿ ಪಿಲ್ಲರ್ ತನಕ ಹರಡಿಕೊಂಡಿರುವ ಕಿಟುಕಿಗಳ ಮೇಲಿನ ಸ್ಯಾಟಿನ್ ಕ್ರೋಮ್ ಸ್ಟ್ರೀಪ್, 18-ಇಂಚಿನ ಡ್ಯುಯಲ್ ಟೋನ್ ಅಲಾಯ್ ವ್ಹೀಲ್, ಡ್ಯುಯಲ್ ಟಿ-ಆಕಾರದ ಎಲ್ಇಡಿ ಟೈಲ್-ಲೈಟ್‌ಗಳು, ಎಲ್ಇಡಿ ಲೈಟ್ ಬಾರ್ ಗೇಟ್ ಹೊಂದಿದೆ.

ಎಡಿಎಎಸ್ ಸೌಲಭ್ಯ ಹೊಂದಿರುವ ಹೊಸ ಹ್ಯುಂಡೈ ಟ್ಯೂಸಾನ್ ಎಸ್‌ಯುವಿ ಭಾರತದಲ್ಲಿ ಬಿಡುಗಡೆ

ಹೊಸ ಕಾರಿನ ಹಿಂಭಾಗದ ಬಂಪರ್ ಡೈಮಂಡ್-ಪ್ಯಾಟರ್ನ್ ಫಿನಿಶ್ ಮತ್ತು ಫಕ್ಸ್ ಸಿಲ್ವರ್ ಸ್ಕಿಡ್ ಪ್ಲೇಟ್ ಅನ್ನು ಒಳಗೊಂಡಿದ್ದು, ಇದು ಹಿಂದಿನ ವಾಷರ್ ಮತ್ತು ವೈಪರ್ ಅನ್ನು ಮರೆಮಾಡುವ ರೂಫ್ ಸ್ಪಾಯ್ಲರ್ ಅನ್ನು ಸಹ ಪಡೆಯುತ್ತದೆ. ಇದರೊಂದಿಗೆ ಹೊಸ ಕಾರಿನ ಇಂಟಿರಿಯರ್ ಸೌಲಭ್ಯವು ಕೂಡಾ ಸಾಕಷ್ಟು ಸುಧಾರಿತ ಅಂಶಗಳನ್ನು ಹೊಂದಿದ್ದು, ಡ್ಯಾಶ್‌ಬೋರ್ಡ್‌ನಲ್ಲಿ ಈ ಬಾರಿ ತಾಂತ್ರಿಕ ಸೌಲಭ್ಯಗಳ ನಿಯಂತ್ರಕ ಬಟನ್‌ಗಳನ್ನು ಟಚ್-ಸೆನ್ಸಿಟಿವ್ ನಿಯಂತ್ರಣಗಳೊಂದಿಗೆ ಬದಲಾಯಿಸಲಾಗಿದೆ.

ಎಡಿಎಎಸ್ ಸೌಲಭ್ಯ ಹೊಂದಿರುವ ಹೊಸ ಹ್ಯುಂಡೈ ಟ್ಯೂಸಾನ್ ಎಸ್‌ಯುವಿ ಭಾರತದಲ್ಲಿ ಬಿಡುಗಡೆ

ಹಲವಾರು ತಾಂತ್ರಿಕ ಸೌಲಭ್ಯಗಳ ನಿಯಂತ್ರಕಗಳನ್ನು ಒಳಗೊಂಡಿರುವ ಫೋರ್-ಸ್ಪೋಕ್ ಸ್ಟೀರಿಂಗ್ ವ್ಹೀಲ್ ಜೋಡಿಸಲಾಗಿದ್ದು, ಡ್ಯಾಶ್‌ಬೋರ್ಡ್‌ನ ಒಟ್ಟಾರೆ ವಿನ್ಯಾಸವು ಕ್ರೆಟಾ ಮತ್ತು ಅಲ್ಕಾಜರ್‌ನಲ್ಲಿಯೆಂತೆ ಕಂಡುಬರುತ್ತದೆ. 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಡ್ಯಾಶ್‌ಬೋರ್ಡ್‌ನಲ್ಲಿ ಉತ್ತಮವಾಗಿ ಸಂಯೋಜಿಸಲಾಗಿದ್ದು, ಅದರ ಸುತ್ತಲೂ ಪಿಯಾನೋ ಕಪ್ಪು ಆಕ್ಸೆಂಟ್ ಹೊಂದಿದೆ.

ಇದರೊಂದಿಗೆ ವೈಯಕ್ತಿಕರಿಸಿದ ಥೀಮ್‌ಗಳೊಂದಿಗೆ 10.25-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಟರ್ನ್ ಬೈ ಟರ್ನ್ ನ್ಯಾವಿಗೇಷನ್ ಅನ್ನು ಟಚ್-ಸೆನ್ಸಿಟಿವ್ ಹ್ವಾಕ್ ನಿಯಂತ್ರಣಗಳಿವೆ.

ಎಡಿಎಎಸ್ ಸೌಲಭ್ಯ ಹೊಂದಿರುವ ಹೊಸ ಹ್ಯುಂಡೈ ಟ್ಯೂಸಾನ್ ಎಸ್‌ಯುವಿ ಭಾರತದಲ್ಲಿ ಬಿಡುಗಡೆ

ಇದಲ್ಲದೆ ಸೆಂಟರ್ ಕನ್ಸೋಲ್‌ನಲ್ಲಿ ಸ್ವಯಂಚಾಲಿತ ಗೇರ್ ಲಿವರ್ ಮತ್ತು ವೆಂಟಿಲೆಟೆಡ್ ವೈಶಿಷ್ಟ್ಯತೆಯ ಮುಂಭಾಗದ ಸೀಟ್‌ಗಳು ಮತ್ತು ಇತರೆ ತಾಂತ್ರಿಕ ನಿಯಂತ್ರಿಸುವ ಕೆಲವು ಬಟನ್‌ಗಳನ್ನು ನೀಡಲಾಗಿದ್ದು, ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್, ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜಿಂಗ್, ಪನೋರಮಿಕ್ ಸನ್‌ರೂಫ್, ಏರ್ ಪ್ಯೂರಿಫೈಯರ್, 64-ಬಣ್ಣಗಳನ್ನು ಒಳಗೊಂಡ ಆಂಬಿಯೆಂಟ್ ಲೈಟಿಂಗ್, 360-ಡಿಗ್ರಿ ಕ್ಯಾಮೆರಾ ಸೌಲಭ್ಯಗಳಿವೆ.

ಎಡಿಎಎಸ್ ಸೌಲಭ್ಯ ಹೊಂದಿರುವ ಹೊಸ ಹ್ಯುಂಡೈ ಟ್ಯೂಸಾನ್ ಎಸ್‌ಯುವಿ ಭಾರತದಲ್ಲಿ ಬಿಡುಗಡೆ

ಕಾರು ಚಾಲನೆಯನ್ನು ಮತ್ತಷ್ಟು ಸುಲಭವಾಗಿಸುವ ಡ್ರೈವರ್ ಸೀಟ್‌ ಮೆಮೊರಿ, ವಿದ್ಯುತ್ ಹೊಂದಾಣಿಕೆಯ ಡ್ರೈವರ್ ಸೈಡ್ ಸೀಟ್, ರೈನ್ ಸೆನ್ಸಿಂಗ್ ವೈಪರ್‌ಗಳು, ರಿಕ್ಲೈನಿಂಗ್ ಮಾಡಬಹುದಾದ ಹಿಂಬದಿ ಸೀಟುಗಳು, ಸಂಪರ್ಕಿತ ಕಾರ್ ವೈಶಿಷ್ಟ್ಯತೆಗಳು, ಧ್ವನಿ ಆಜ್ಞೆಗಳು, ಅಲೆಕ್ಸಾ ಮತ್ತು ಗೂಗಲ್ ಅಸಿಸ್ಟ್, 8-ಸ್ಪೀಕರ್ ಬೋಸ್ ಸೌಂಡ್ ಸಿಸ್ಟಮ್ ಸೇರಿದಂತೆ ಹಲವಾರು ಸೌಲಭ್ಯಗಳನ್ನು ಒಳಗೊಂಡಿದೆ.

Most Read Articles

Kannada
English summary
New hyundai tucson launched in india at rs 27 7 lakh details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X