ಗರಿಷ್ಠ ಸುರಕ್ಷತೆ, ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಹೊಸ ಹ್ಯುಂಡೈ ಟ್ಯೂಸಾನ್

ಜನಪ್ರಿಯ ಕಾರು ತಯಾರಕ ಕಂಪನಿಯಾದ ಹ್ಯುಂಡೈ ಇಂಡಿಯಾ ತನ್ನ ನಾಲ್ಕನೇ ಜನರೇಷನ್ ಟ್ಯೂಸಾನ್ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಅನಾವರಣಗೊಳಿಸಿತ್ತು. ಈ ಬಹುನಿರೀಕ್ಷಿತ ನ್ಯೂ ಜನರೇಷನ್ ಹ್ಯುಂಡೈ ಟ್ಯೂಸಾನ್ ಎಸ್‍ಯುವಿಯು 2022ರ ಆಗಸ್ಟ್ 4 ರಂದು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.

ಗರಿಷ್ಠ ಸುರಕ್ಷತೆ, ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಹೊಸ ಹ್ಯುಂಡೈ ಟ್ಯೂಸಾನ್

ಈ ನ್ಯೂ ಜನರೇಷನ್ ಹ್ಯುಂಡೈ ಟ್ಯೂಸಾನ್ ಎಸ್‍ಯುವಿಯನ್ನು ಇದರ ಹಿಂದಿನ ಮಾದರಿಗೆ ಹೋಲಿಸಿದರೆ ಸಾಕಷ್ಟು ಬದಲಾವಣೆಗಳಿವೆ. ಈ ಹೊಸ ಹ್ಯುಂಡೈ ಟ್ಯೂಸಾನ್ ಎಸ್‍ಯುವಿಯು ಹ್ಯುಂಡೈನ 'ಸೆನ್ಶುಯಲ್ ಸ್ಪೋರ್ಟಿನೆಸ್' ವಿನ್ಯಾಸ ಶೈಲಿಯನ್ನು ಹೊಂದಿದೆ. ಈ ಹೊಸ ಹ್ಯುಂಡೈ ಟ್ಯೂಸಾನ್ ಎಸ್‍ಯುವಿಯು ಈಗಾಗಲೇ ಹಲವು ವಿದೇಶದ ಮಾರುಕಟ್ಟೆಗಳಲ್ಲಿ ಮಾರಾಟವಾಗುತ್ತಿದೆ. ಇದೀಗ ಈ ನ್ಯೂ ಜನರೇಷನ್ ಹೊಸ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲು ಸಜ್ಜಾಗಿದೆ.

ಗರಿಷ್ಠ ಸುರಕ್ಷತೆ, ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಹೊಸ ಹ್ಯುಂಡೈ ಟ್ಯೂಸಾನ್

ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ (HMIL) ಇಂದು ದೇಶೀಯ ಮಾರುಕಟ್ಟೆಯಲ್ಲಿ ಹೊಸ ತಲೆಮಾರಿನ ಟ್ಯೂಸಾನ್ ಎಸ್‍ಯುವಿ ಖರೀದಿಗಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಿದ್ದಾರೆ. ಈ ಎಸ್‍ಯುವಿಯನ್ನು ಖರೀದಿಸಲು ಹ್ಯುಂಡೈನ ಸಿಗ್ನೇಚರ್ ಔಟ್‌ಲೆಟ್‌ಗಳಲ್ಲಿ ಅಥವಾ ಆನ್‌ಲೈನ್ ಮೂಲಕ ನೀವು ಬುಕ್ಕಿಂಗ್ ಮಾಡಬಹುದು.

ಗರಿಷ್ಠ ಸುರಕ್ಷತೆ, ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಹೊಸ ಹ್ಯುಂಡೈ ಟ್ಯೂಸಾನ್

ಈ ಹೊಸ ಹ್ಯುಂಡೈ ಟ್ಯೂಸಾನ್ ಎಸ್‍ಯುವಿಯ ಮುಂಭಾಗದಲ್ಲಿ ಟ್ಯೂಸಾನ್ ಪ್ಯಾರಾಮೆಟ್ರಿಕ್ ಜ್ಯುವೆಲ್ ಮಾದರಿಯೊಂದಿಗೆ ದೊಡ್ಡ ಗ್ರಿಲ್ ಅನ್ನು ಹೊಂದಿದೆ. ಹೊಸ ಗ್ರಿಲ್ ಜೊತೆಗೆ ಅಗ್ರೇಸಿವ್ ಸಮಗ್ರ ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್‌ಗಳನ್ನು ಹೊಂದಿದೆ. ಈ ಎಸ್‍ಯುವಿಯಲ್ಲಿ ಹೆಡ್‌ಲೈಟ್‌ಗಳನ್ನು ಲಂಬವಾಗಿ ಜೋಡಿಸಲಾಗಿದೆ ಮತ್ತು ಗ್ರಿಲ್‌ನ ಎರಡೂ ಬದಿಯಲ್ಲಿ ಇರಿಸಲಾಗಿದೆ.

ಗರಿಷ್ಠ ಸುರಕ್ಷತೆ, ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಹೊಸ ಹ್ಯುಂಡೈ ಟ್ಯೂಸಾನ್

ಈ ಹೊಸ ಟ್ಯೂಸಾನ್ ಎಸ್‍ಯುವಿಯ ಮುಂಭಾಗದ ತುದಿಯು ಸೆಂಟ್ರಲ್ ಏರ್ ಡ್ಯಾಮ್ ಮತ್ತು ಸಿಲ್ವರ್ ಫಾಕ್ಸ್ ಬ್ಯಾಷ್ ಪ್ಲೇಟ್ ಅನ್ನು ಸಹ ಹೊಂದಿದೆ. ಈ ಎಸ್‍ಯುವಿಯು ಹೊಸ 18-ಇಂಚಿನ ಅಲಾಯ್ ವ್ಹೀಲ್ ಗಳನ್ನು ಪಡೆದುಕೊಂಡಿದೆ. ಇದು ಕೆಲವು ಬಲ್ಬಸ್ ವೀಲ್ ಆರ್ಚ್‌ಗಳ ಒಳಗೆ ಇರುತ್ತದೆ. ಈ ಎಸ್‍ಯುವಿಯಲ್ಲಿ ಹೊಸ ಹ್ಯುಂಡೈ ಬ್ಯಾಡ್ಜ್ ಅನ್ನು ಕೋನೀಯ ಹಿಂಭಾಗದ ವಿಂಡ್‌ಸ್ಕ್ರೀನ್‌ನಲ್ಲಿ ಇರಿಸಿದೆ.

ಗರಿಷ್ಠ ಸುರಕ್ಷತೆ, ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಹೊಸ ಹ್ಯುಂಡೈ ಟ್ಯೂಸಾನ್

ಹೊಸ ಹ್ಯುಂಡೈ ಟ್ಯೂಸಾನ್ ಎಸ್‍ಯುವಿ ರೂಫ್-ಮೌಂಟೆಡ್ ಸ್ಪಾಯ್ಲರ್ ಅಂಶವನ್ನು ಸಹ ಹೊಂದಿದೆ. ಹಿಂಭಾಗದಲ್ಲಿ ಫಾಕ್ಸ್ ಸಿಲ್ವರ್ ಬ್ಯಾಷ್ ಪ್ಲೇಟ್ ಕೂಡ ಕಂಡುಬರುತ್ತದೆ. ಈ ನಾಲ್ಕನೇ ತಲೆಮಾರಿನ ಟ್ಯೂಸಾನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ಗಾಗಿ ಡ್ಯುಯಲ್ ಡಿಸ್‌ಪ್ಲೇಗಳನ್ನು ಹೊಂದಿದೆ. ಇದರಲ್ಲಿ ಡಿಸ್‌ಪ್ಲೇ ಮತ್ತು ಇನ್ಫೋಟೈನ್‌ಮೆಂಟ್ ಸ್ಕ್ರೀನ್ ಎರಡೂ 10.25-ಇಂಚಿನ ಅಳತೆಯನ್ನು ಹೊಂದಿದ್ದು, ಎರಡನೆಯದು ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಮತ್ತು ಪಿಯಾನೋ ಬ್ಲ್ಯಾಕ್ ಸರೌಂಡ್‌ಗೆ ಬೆಂಬಲ ಹೊಂದಿರುವ ಟಚ್‌ಸ್ಕ್ರೀನ್ ಯುನಿಟ್ ಆಗಿದೆ.

ಗರಿಷ್ಠ ಸುರಕ್ಷತೆ, ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಹೊಸ ಹ್ಯುಂಡೈ ಟ್ಯೂಸಾನ್

ಈ ಎಸ್‍ಯುವಿಯ ಇನ್ಫೋಟೈನ್‌ಮೆಂಟ್ ಡಿಸ್ ಪ್ಲೇ ಕೆಳಗೆ ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್ ಸಿಸ್ಟಮ್‌ಗಾಗಿ ಕಂಟ್ರೋಲ್‌ಗಳನ್ನು ಹೋಸ್ಟ್ ಮಾಡುವ ಮತ್ತೊಂದು ಟಚ್-ಆಧಾರಿತ ಪ್ಯಾನೆಲ್ ಇರುತ್ತದೆ. ಟ್ಯೂಸಾನ್ ಎಸ್‍ಯುವಿಯ ಮುಂಭಾಗದಲ್ಲಿ ಹಿಟ್ಡ್ ಮತ್ತು ವೆಂಟಿಲೆಟಡ್ ಸೀಟುಗಳನ್ನು ಹೊಂದಿದೆ. ಆದರೆ ಹಿಂಭಾಗದಲ್ಲಿ ರಿಕ್ಲೈನ್ ಕಾರ್ಯವನ್ನು ಹೊಂದಿವೆ. ಎಲ್ಲಾ ಸೀಟುಗಳನ್ನು ಲೆಥೆರೆಟ್ ಅಪ್ಹೋಲ್ಸ್ಟರಿ ಅನ್ನು ಹೊಂದಿದೆ.

ಗರಿಷ್ಠ ಸುರಕ್ಷತೆ, ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಹೊಸ ಹ್ಯುಂಡೈ ಟ್ಯೂಸಾನ್

ಈ ಹೊಸ ಟ್ಯೂಸಾನ್ ಎಸ್‍ಯುವಿಯಲ್ಲಿ ವೈರ್‌ಲೆಸ್ ಫೋನ್ ಚಾರ್ಜಿಂಗ್, 64-ಬಣ್ಣದ ಆಂಬಿಯೆಂಟ್ ಲೈಟಿಂಗ್, 8-ಸ್ಪೀಕರ್ ಬೋಸ್ ಸಿಸ್ಟಮ್, ಪನರೋಮಿಕ್ ಸನ್‌ರೂಫ್, ಚಾಲಿತ ಟೈಲ್‌ಗೇಟ್, ಏರ್ ಪ್ಯೂರಿಫೈಯರ್, ರೈನ್ ಸೆನ್ಸಿಂಗ್ ವೈಪರ್‌ಗಳು ಮತ್ತು ಎಲೆಕ್ಟ್ರಿಕ್ ಆಗಿ ಅಡಜಸ್ಟ್ ಮಾಡಬಹುದಾದ ಫೀಚರ್ಸ್ ಗಳನ್ನು ಸಹ ಪಡೆಯಲಿದೆ. ಈ ಹೊಸ ಹ್ಯುಂಡೈ ಟ್ಯೂಸಾನ್ ಎಸ್‍ಯುವಿಯಲ್ಲಿ ಹ್ಯುಂಡೈನ ಬ್ಲೂಲಿಂಕ್ ಸಿಸ್ಟಮ್ ಮೂಲಕ ಸಂಪರ್ಕಿತ ಕಾರ್ ವೈಶಿಷ್ಟ್ಯಗಳೊಂದಿಗೆ ಪ್ಯಾಕ್ ಮಾಡಲ್ಪಟ್ಟಿದೆ, ಇದು OTA ನವೀಕರಣಗಳು, ವಾಯ್ಸ್ ಕಾಮೆಂಡ್, ಅಲೆಕ್ಸಾ ಮತ್ತು ಗೂಗಲ್ ಅಸಿಸ್ಟ್ ಅನ್ನು ಒಳಗೊಂಡಿದೆ.

ಗರಿಷ್ಠ ಸುರಕ್ಷತೆ, ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಹೊಸ ಹ್ಯುಂಡೈ ಟ್ಯೂಸಾನ್

ನ್ಯೂ ಜನರೇಷನ್ ಹ್ಯುಂಡೈ ಟ್ಯೂಸಾನ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಗೆ ಹ್ಯುಂಡೈನ ಮೊದಲ ADAS ಸುಸಜ್ಜಿತ ವಾಹನವಾಗಿದೆ. ಈ ಎಸ್‍ಯುವಿ ಮುಂಭಾಗದ ಫಾರ್ವಡ್ ಕಲಿಷನ್ ವಾರ್ನಿಂಗ್, ಬ್ಲೈಂಡ್ ಸ್ಪಾಟ್ ಅಸಿಸ್ಟ್, ಲೇನ್ ಕೀಪ್ ಅಸಿಸ್ಟ್, ರಿಯರ್ ಕ್ರಾಸ್ ಟ್ರಾಫಿಕ್ ಅಲರ್ಟ್ ಇತ್ಯಾದಿ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಟ್ಯೂಸಾನ್ ಎಸ್‍ಯುವಿಯಲ್ಲಿ ಸುರಕ್ಷತೆಗಾಗಿ 6 ಏರ್‌ಬ್ಯಾಗ್‌ಗಳು, ಇಬಿಡಿ ಜೊತೆಗೆ ಎಬಿಎಸ್, ಇಎಸ್ಸಿ, ಹಿಲ್-ಹೋಲ್ಡ್ ಕಂಟ್ರೋಲ್ ಮತ್ತು ಆಲ್-ವೀಲ್ ಡಿಸ್ಕ್ ಬ್ರೇಕ್‌ಗಳನ್ನು ಸಹ ಹೊಂದಿದೆ. ಈ ನ್ಯೂ ಜನರೇಷನ್ ಹ್ಯುಂಡೈ ಟ್ಯೂಸಾನ್ ಎಸ್‍ಯುವಿಯನ್ನು ಎರಡು ಎಂಜಿನ್ ಆಯ್ಕೆಗಳೊಂದಿಗೆ ನೀಡುತ್ತದೆ,

ಗರಿಷ್ಠ ಸುರಕ್ಷತೆ, ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಹೊಸ ಹ್ಯುಂಡೈ ಟ್ಯೂಸಾನ್

ಇದು 2.0-ಲೀಟರ್ 4-ಸಿಲಿಂಡರ್ ನ್ಯಾಚುರಲ್ ಆಸ್ಪೈರ್ಡ್ ಪೆಟ್ರೋಲ್ ಮತ್ತು ಹೊಸ 2.0-ಲೀಟರ್ VGT ಟರ್ಬೊ ಡೀಸೆಲ್ ಎಂಜಿನ್ ಆಗಿದೆ. ಇದರಲ್ಲಿ 2.0-ಲೀಟರ್ ಪೆಟ್ರೋಲ್ ಎಂಜಿನ್ 156 ಬಿಹೆಚ್‍ಪಿ ಪವರ್ ಮತ್ತು 192 ಎನ್ಎಂ ಟಾರ್ಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಟಾರ್ಕ್ ಕರ್ನವಾಟರ್ ಗೇರ್‌ಬಾಕ್ಸ್‌ ಅನ್ನು ಜೋಡಿಸಲಾಗಿದೆ.

ಗರಿಷ್ಠ ಸುರಕ್ಷತೆ, ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಹೊಸ ಹ್ಯುಂಡೈ ಟ್ಯೂಸಾನ್

ಇನ್ನು ಟರ್ಬೊ-ಡೀಸೆಲ್ ಎಂಜಿನ್ 186 ಬಿಹೆಚ್‍ಪಿ ಪವರ್ ಮತ್ತು 416 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ವಾಹನವು ಮುಂಭಾಗದಲ್ಲಿ ಮೆಕ್‌ಫರ್ಸನ್ ಸ್ಟ್ರಟ್ ಮತ್ತು ಹಿಂಭಾಗದಲ್ಲಿ ಕಾಯಿಲ್ ಸ್ಪ್ರಿಂಗ್‌ನೊಂದಿಗೆ ಮಲ್ಟಿ-ಲಿಂಕ್ ಅನ್ನು ಹೊಂದಿದೆ.

ಗರಿಷ್ಠ ಸುರಕ್ಷತೆ, ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಹೊಸ ಹ್ಯುಂಡೈ ಟ್ಯೂಸಾನ್

ಹ್ಯುಂಡೈ ಕಂಪನಿಯು ತನ್ನ ಟ್ಯೂಸಾನ್ ಎಸ್‍ಯುವಿಯನ್ನು ಯುರೋ NCAP ಕ್ರ್ಯಾಶ್ ಟೆಸ್ಟ್‌ಗೆ ಇತ್ತೀಚೆಗೆ ಒಳಪಡಿಸಲಾಗಿತ್ತು. ಈ ಕ್ರ್ಯಾಶ್ ಟೆಸ್ಟ್‌ನಲ್ಲಿ ಹ್ಯುಂಡೈ ಟ್ಯೂಸಾನ್ ಎಸ್‍ಯುವಿಯು 5-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಪಡೆದುಕೊಂಡಿತ್ತು ಯುರೋ NCAP ಕ್ರ್ಯಾಶ್ ಟೆಸ್ಟ್‌ನಲ್ಲಿ, ಟ್ಯೂಸಾನ್ ಎಸ್‍ಯುವಿ ವಯಸ್ಕ ಪ್ರಯಾಣಿಕರ ವಿಭಾಗದಲ್ಲಿ ಶೇ.86 ರಷ್ಟು ಮತ್ತು ಮಕ್ಕಳ ಸುರಕ್ಷತಾ ವಿಭಾಗದಲ್ಲಿ ಶೇ.87 ರಷ್ಟು ಅಂಕಗಳನ್ನು ಗಳಿಸಿಕೊಂಡಿತು. ಈ ಯುರೋ NCAP ಪ್ರಕಾರ, ಈ ಟ್ಯೂಸಾನ್ ಎಸ್‍ಯುವಿ ಮುಂಭಾಗದ ಆಫ್‌ಸೆಟ್ ಪರೀಕ್ಷೆಯಲ್ಲಿಯು ಇದು ಸ್ಥಿರವಾಗಿತ್ತು.

ಗರಿಷ್ಠ ಸುರಕ್ಷತೆ, ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಹೊಸ ಹ್ಯುಂಡೈ ಟ್ಯೂಸಾನ್

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಈ ಹೊಸ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಈ ಬಹುನಿರೀಕ್ಷಿತ 2022ರ ಹ್ಯುಂಡೈ ಟ್ಯೂಸಾನ್ ಎಸ್‍ಯುವಿಯು ಹೊಸ ನವೀಕರಣಗಳೊಂದಿಗೆ ಭಾರತೀಯ ಮಾರುಕಟ್ಟೆಯನ್ನು ಮುಂದಿನ ತಿಂಗಳು ಅಧಿಕೃತವಾಗಿ ಪ್ರವೇಶಿಸಲಿದೆ. ಹೊಸ ತಲೆಮಾರಿನ ಟ್ಯೂಸಾನ್ ಎಸ್‍ಯುವಿಯು ಹೊಸ ನವೀಕರಣಗಳೊಂದಿಗೆ ಹೆಚ್ಚಿನ ಗ್ರಾಹಕರನ್ನು ಸೆಳೆಯಬಹುದು.

Most Read Articles

Kannada
English summary
New hyundai tucson suv comes with long feature list adas more details
Story first published: Saturday, July 30, 2022, 13:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X