India
YouTube

2022ರ ಹ್ಯುಂಡೈ ವೆನ್ಯೂ ಕಾರಿನ ವಿವಿಧ ವೆರಿಯೆಂಟ್ ಮತ್ತು ಬೆಲೆಗಳ ಮಾಹಿತಿ ಬಿಡುಗಡೆ

ಹ್ಯುಂಡೈ ಕಂಪನಿಯು ವೆನ್ಯೂ ಕಂಪ್ಯಾಕ್ಟ್ ಎಸ್‌ಯುವಿಯ 2022ರ ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು, ಹೊಸ ಕಾರು ಹಿಂದಿನ ಆವೃತ್ತಿಯಲ್ಲಿನ ವೆರಿಯೆಂಟ್‌ಗಳೊಂದಿಗೆ ತಾಂತ್ರಿಕವಾಗಿ ಸಾಕಷ್ಟು ಬದಲಾವಣೆ ಪಡೆದುಕೊಂಡಿದೆ.

2022ರ ಹ್ಯುಂಡೈ ವೆನ್ಯೂ ಕಾರಿನ ವಿವಿಧ ವೆರಿಯೆಂಟ್ ಮತ್ತು ಬೆಲೆಗಳ ಮಾಹಿತಿ ಬಿಡುಗಡೆ

ಹೊಸ ವೆನ್ಯೂ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯು ವಿವಿಧ ಎಂಜಿನ್ ಆಯ್ಕೆಗಳಿಗೆ ಅನುಗುಣವಾಗಿ ಇ, ಎಸ್, ಎಸ್(ಒ), ಎಸ್ಎಕ್ಸ್ ಮತ್ತು ಎಸ್ಎಕ್ಸ್(ಒ) ವೆರಿಯೆಂಟ್‌ಗಳನ್ನು ಹೊಂದಿದ್ದು, ಹೊಸ ಕಾರು ಆರಂಭಿಕವಾಗಿ ಪ್ಯಾನ್ ಇಂಡಿಯಾ ಎಕ್ಸ್‌ಶೋರೂಂ ಪ್ರಕಾರ ರೂ. 7.53 ಲಕ್ಷ ಬೆಲೆ ಹೊಂದಿದೆ.

2022ರ ಹ್ಯುಂಡೈ ವೆನ್ಯೂ ಕಾರಿನ ವಿವಿಧ ವೆರಿಯೆಂಟ್ ಮತ್ತು ಬೆಲೆಗಳ ಮಾಹಿತಿ ಬಿಡುಗಡೆ

ಹ್ಯುಂಡೈ ಕಂಪನಿಯು ವೆನ್ಯೂ ವಿವಿಧ ವೆರಿಯೆಂಟ್‌ಗಳ ಬೆಲೆಯಲ್ಲಿ ಹಳೆಯ ಮಾದರಿಗಿಂತ ಸುಮಾರು ರೂ. 31,700 ರಿಂದ ರೂ. 1,42,501 ಬೆಲೆ ಹೆಚ್ಚಿಸಿದ್ದು, ಹೊಸ ಮಾದರಿಯು ಸದ್ಯ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 7.53 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 12.57 ಲಕ್ಷ ಬೆಲೆ ಹೊಂದಿದೆ.

2022ರ ಹ್ಯುಂಡೈ ವೆನ್ಯೂ ಕಾರಿನ ವಿವಿಧ ವೆರಿಯೆಂಟ್ ಮತ್ತು ಬೆಲೆಗಳ ಮಾಹಿತಿ ಬಿಡುಗಡೆ

ಹ್ಯುಂಡೈ ಕಂಪನಿಯು ಹೊಸ ಕಾರು ಮಾದರಿಯನ್ನು ಈ ಹಿಂದಿನಂತೆ 1.2 ಲೀಟರ್ ಪೆಟ್ರೋಲ್, 1.0 ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5 ಲೀಟರ್ ಡೀಸೆಲ್ ವೆರಿಯೆಂಟ್‌ಗಳಲ್ಲಿ ಬಿಡುಗಡೆ ಮಾಡಿದ್ದು, ಹೊಸ ಕಾರು ಮಾದರಿಯು ಸಾಮಾನ್ಯ ಪೆಟ್ರೋಲ್ ಮಾದರಿಗೆ ಆರಂಭಿಕವಾಗಿ ರೂ. 7.53 ಲಕ್ಷ ಬೆಲೆ ಹೊಂದಿದ್ದರೆ ಟರ್ಬೊ ಪೆಟ್ರೋಲ್ ಮಾದರಿಗೆ ಆರಂಭಿಕವಾಗಿ ರೂ. 9.99 ಲಕ್ಷ ಮತ್ತು ಡೀಸೆಲ್ ಮಾದರಿಯು ಆರಂಭಿಕವಾಗಿ ರೂ. 9.99 ಲಕ್ಷ ಬೆಲೆ ಹೊಂದಿದೆ.

ವೆನ್ಯೂ ಪೆಟ್ರೋಲ್ ಹೊಸ ದರಗಳು ಹಳೆಯ ದರ ಹೆಚ್ಚಳವಾದ ದರ
ಇ 1.2 ಎಂಟಿ ರೂ. 7,53,100 ರೂ. 7,11,200 ರೂ. 41,900
ಎಸ್ 1.2 ಎಂಟಿ ರೂ. 8,70,400 ರೂ. 7,91,100 ರೂ. 79,300
ಎಸ್ ಪ್ಲಸ್ 1.2 ಎಂಟಿ ರೂ. 9,50,200 ರೂ. 8,78,800 ರೂ. 71,400
ಎಸ್ಎಕ್ಸ್ 1.2 ಎಂಟಿ ರೂ. 10,69,500 NA -

ಎಸ್ (ಒ) 1.0 ಐಎಂಟಿ

ರೂ. 9,99,900 ರೂ. 9,24,800 ರೂ. 75,100
ಎಸ್ (ಒ) 1.0 ಡಿಸಿಟಿ ರೂ. 10,96,700 ರೂ. 10,15,300 ರೂ. 81,400
ಎಸ್ಎಕ್ಸ್ 1.0 ಎಂಟಿ NA ರೂ. 10,21,100 -
ಎಸ್ಎಕ್ಸ್ 1.0 iMT NA ರೂ. 10,21,100 -
ಎಸ್ಎಕ್ಸ್ ಪ್ಲಸ್ (ಒ) 1.0 ಐಎಂಟಿ ರೂ. 11,92,000 ರೂ. 11,49,900 ರೂ. 42,100
ಎಸ್ಎಕ್ಸ್ ಪ್ಲಸ್ 1.0 ಡಿಸಿಟಿ ರೂ. 12,57,000 ರೂ. 11,82,300 ರೂ. 74,700
ವೆನ್ಯೂ ಡೀಸೆಲ್ ಹೊಸ ದರಗಳು ಹಳೆಯ ದರ ಹೆಚ್ಚಳವಾದ ದರ
ಎಸ್ (ಒ) 1.5 ಎಂಟಿ ರೂ. 9,99,900 ರೂ. 9,68,200 ರೂ. 31,700
ಎಸ್ಎಕ್ಸ್ 1.5 ಎಂಟಿ ರೂ. 11,42,500 ರೂ. 9,99,999 ರೂ. 1,42,501
ಎಸ್ಎಕ್ಸ್ (ಒ) 1.5 ಎಂಟಿ NA ರೂ. 11,20,200 -
ಎಸ್ಎಕ್ಸ್ (ಒ) 1.5 ಎಂಟಿ ರೂ. 12,32,000 ರೂ. 11,83,700 ರೂ. 48,300
2022ರ ಹ್ಯುಂಡೈ ವೆನ್ಯೂ ಕಾರಿನ ವಿವಿಧ ವೆರಿಯೆಂಟ್ ಮತ್ತು ಬೆಲೆಗಳ ಮಾಹಿತಿ ಬಿಡುಗಡೆ

ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಸದ್ಯ ಮುಂಚೂಣಿಯಲ್ಲಿರುವ ವೆನ್ಯೂ ಮಾದರಿಯನ್ನು ಹ್ಯುಂಡೈ ಕಂಪನಿಯು ಟಾಟಾ ನೆಕ್ಸಾನ್ ಮಾದರಿಗೆ ಪೈಪೋಟಿಯಾಗಿ ಹಲವಾರು ಹೊಸ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಗೊಳಿಸಿದ್ದು, ಹೊಸ ಕಾರು ಮಾದರಿಯು ನವೀಕೃತ ವಿನ್ಯಾಸದೊಂದಿಗೆ ಹಲವಾರು ಹೊಸ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಂಡಿದೆ.

2022ರ ಹ್ಯುಂಡೈ ವೆನ್ಯೂ ಕಾರಿನ ವಿವಿಧ ವೆರಿಯೆಂಟ್ ಮತ್ತು ಬೆಲೆಗಳ ಮಾಹಿತಿ ಬಿಡುಗಡೆ

ಹೊಸ ಕಾರು ಈ ಬಾರಿ ಹಲವಾರು ನವೀಕೃತ ವಿನ್ಯಾಸಗಳೊಂದಿಗೆ ಮುಂಭಾಗದ ವಿನ್ಯಾಸವು ಮಧ್ಯಮ ಕ್ರಮಾಂಕದ ಐಷಾರಾಮಿ ಎಸ್‌ಯುವಿ ಟ್ಯೂಸಾನ್ ಮಾದರಿಯಿಂದ ಪ್ರೇರಣೆ ಹೊಂದಿದ್ದು, ಮೊದಲ ನೋಟದಲ್ಲಿಯೇ ಹೊಸ ಕಾರು ಐಷಾರಾಮಿ ಕಾರಿನ ಅನುಭವ ನೀಡುತ್ತದೆ.

2022ರ ಹ್ಯುಂಡೈ ವೆನ್ಯೂ ಕಾರಿನ ವಿವಿಧ ವೆರಿಯೆಂಟ್ ಮತ್ತು ಬೆಲೆಗಳ ಮಾಹಿತಿ ಬಿಡುಗಡೆ

ಹೊಸ ಕಾರನಲ್ಲಿ ಮುಂಭಾಗದ ಗ್ರಿಲ್ ಅನ್ನು ಡಾರ್ಕ್ ಕ್ರೋಮ್‌ಗಳೊಂದಿಗೆ ಅಭಿವೃದ್ದಿಪಡಿಸಲಾಗಿದ್ದು, ಮುಂಭಾಗದ ಬಂಪರ್ ಅನ್ನು ಕೂಡಾ ಸಾಕಷ್ಟು ಪರಿಷ್ಕರಣೆ ಮಾಡಲಾಗಿದೆ. ಹೊಸ ಬಂಪರ್ ಜೊತೆ ಈ ಬಾರಿ ದೊಡ್ಡದಾದ ಏರ್ ಡ್ಯಾಮ್ ನೀಡಲಾಗಿದ್ದು, ಇದರಲ್ಲಿ ಸಿಲ್ವರ್ ಫಾಕ್ಸ್ ಬ್ಯಾಷ್ ಪ್ಲೇಟ್ ಕೂಡಾ ಕಂಡುಬರುತ್ತದೆ.

2022ರ ಹ್ಯುಂಡೈ ವೆನ್ಯೂ ಕಾರಿನ ವಿವಿಧ ವೆರಿಯೆಂಟ್ ಮತ್ತು ಬೆಲೆಗಳ ಮಾಹಿತಿ ಬಿಡುಗಡೆ

ಹಾಗೆಯೇ ಕಾರಿನ ಎರಡು ಬದಿಯಲ್ಲೂ ಹೊಸ ವಿನ್ಯಾಸದ 16 ಇಂಚಿನ ಡ್ಯುಯಲ್ ಟೋನ್ ಅಲಾಯ್ ವ್ಹೀಲ್‌ಗಳನ್ನು ನೀಡಲಾಗಿದ್ದು, ಎಲ್ಇಡಿ ಟೈಲ್‌ಲೈಲ್, ಸಿಲ್ವರ್ ಫಾಕ್ಸ್ ಬ್ಯಾಷ್ ಪ್ಲೇಟ್ ಜೊತೆಗೆ ಸ್ಕೂಪ್-ಔಟ್‌ನೊಂದಿಗೆ ನವೀಕೃತಗೊಂಡಿರುವ ಹಿಂಭಾಗದ ಬಂಪರ್ ಮತ್ತು ನಂಬರ್ ಪ್ಲೇಟ್ ವಿಭಾಗವನ್ನು ಕಪ್ಪು ಬಣ್ಣದ ಪ್ಲಾಸ್ಟಿಕ್‌ನೊಂದಿಗೆ ಜೋಡಿಸಲಾಗಿದೆ.

2022ರ ಹ್ಯುಂಡೈ ವೆನ್ಯೂ ಕಾರಿನ ವಿವಿಧ ವೆರಿಯೆಂಟ್ ಮತ್ತು ಬೆಲೆಗಳ ಮಾಹಿತಿ ಬಿಡುಗಡೆ

ಹೊರಭಾಗದಲ್ಲಿನ ಬದಲಾವಣೆಯೆಂತೆ ಕಾರಿನ ಇಂಟಿರಿಯರ್ ಕೂಡಾ ಸಾಕಷ್ಟು ಬದಲಾವಣೆಗೊಂಡಿದ್ದು, ಹಲವಾರು ಸೂಕ್ಷ್ಮ ಬದಲಾವಣೆಗಳು ಕಾರಿನ ಪ್ರಯಾಣವನ್ನು ಮತ್ತಷ್ಟು ಆರಾಮಾದಾಯಕಗೊಳಿಸಲಿವೆ. ಮುಖ್ಯವಾಗಿ ಹೊಸ ಕಾರಿನ ಒಳಭಾಗದಲ್ಲಿ 4 ಹಂತದಲ್ಲಿ ಹೊಂದಾಣಿಕೆ ಮಾಡಹುದಾದ ಚಾಲಕನ ಆಸನ ಮತ್ತು ಹಿಂಬದಿಯ ಆಸನಗಳಿಗೆ ಎರಡು ಹಂತದ ರಿಕ್ಲೈನ್ ಆಯ್ಕೆ ನೀಡಲಾಗಿದೆ.

2022ರ ಹ್ಯುಂಡೈ ವೆನ್ಯೂ ಕಾರಿನ ವಿವಿಧ ವೆರಿಯೆಂಟ್ ಮತ್ತು ಬೆಲೆಗಳ ಮಾಹಿತಿ ಬಿಡುಗಡೆ

ಇದರ ಜೊತೆಗೆ ಹೊಸ ಕಾರಿನಲ್ಲಿ ಆಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್ ಪ್ಲೇ ಗೆ ಬೆಂಬಲ ನೀಡುವ 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಜೊತೆಗೆ ಹೊಸ ಡಿಜಿಟಲ್ ಡ್ರೈವರ್‌ ಸೈಡ್ ಡಿಸ್ಪ್ಲೇ ನೀಡಲಾಗಿದೆ.

2022ರ ಹ್ಯುಂಡೈ ವೆನ್ಯೂ ಕಾರಿನ ವಿವಿಧ ವೆರಿಯೆಂಟ್ ಮತ್ತು ಬೆಲೆಗಳ ಮಾಹಿತಿ ಬಿಡುಗಡೆ

ಹೊಸ ಇನ್ಫೋಟೈನ್‌ಮೆಂಟ್ ಸಿಸ್ಟಂ ಇದೀಗ ಗೂಗಲ್ ಅಸಿಸ್ಟ್ ಮತ್ತು ಅಮೆಜಾನ್ ಅಲೆಕ್ಸಾಗೆ ಬೆಂಬಲ ಹೊಂದಿದ್ದು, ವೆನ್ಯೂ ಹೊಸ ಕಾರು ಮಾದರಿಗಾಗಿ ಹ್ಯುಂಡೈ ಕಂಪನಿಯು ಬ್ಲೂಲಿಂಕ್ ಸಂಪರ್ಕಿತ ಕಾರ್ ಸೂಟ್ ಮೂಲಕ 60ಕ್ಕೂ ಹೆಚ್ಚು ಸಂಪರ್ಕಿತ ಕಾರ್ ವೈಶಿಷ್ಟ್ಯಗಳನ್ನು ನೀಡಿದೆ.

2022ರ ಹ್ಯುಂಡೈ ವೆನ್ಯೂ ಕಾರಿನ ವಿವಿಧ ವೆರಿಯೆಂಟ್ ಮತ್ತು ಬೆಲೆಗಳ ಮಾಹಿತಿ ಬಿಡುಗಡೆ

ಸುರಕ್ಷತೆಗಾಗಿ ಹೊಸ ಕಾರಿನಲ್ಲಿ ಕಂಪನಿಯು ಈ ಬಾರಿ ಹಲವಾರು ಫೀಚರ್ಸ್ ಜೋಡಣೆ ಮಾಡಿದ್ದು, ಹೈ ಎಂಡ್ ಮಾದರಿಗಳಲ್ಲಿ 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಹಿಲ್ ಅಸಿಸ್ಟ್ ಕಂಟ್ರೋಲ್ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ(TPMS) ಸೇರಿದಂತೆ 30ಕ್ಕೂ ಹೆಚ್ಚು ಸುರಕ್ಷತಾ ಸೌಲಭ್ಯಗಳನ್ನು ನೀಡಿದೆ.

2022ರ ಹ್ಯುಂಡೈ ವೆನ್ಯೂ ಕಾರಿನ ವಿವಿಧ ವೆರಿಯೆಂಟ್ ಮತ್ತು ಬೆಲೆಗಳ ಮಾಹಿತಿ ಬಿಡುಗಡೆ

ಹೈ ಎಂಡ್ ಮಾದರಿಗಳಲ್ಲಿ ಬೆಸ್ ಮಾದರಿಗಿಂತಲೂ ಹೆಚ್ಚಿನ ಮಟ್ಟದ ಪ್ರೀಮಿಯಂ ಫೀಚರ್ಸ್ ನೋಡಬಹುದಾಗಿದ್ದು, ಹೈ ಎಂಡ್ ಮಾದರಿಗಳಲ್ಲಿ ಡ್ರೈವರ್ ಸೈಡ್ ಡಿಜಿಟಲ್ ಡಿಸ್‌ಪ್ಲೇ, ವೈರ್‌ಲೆಸ್ ಸ್ಮಾರ್ಟ್ ಫೋನ್ ಚಾರ್ಜರ್, ಏರ್ ಪ್ಯೂರಿಫೈಯರ್, ಕೂಲ್ಡ್ ಗ್ಲೋ ಬಾಕ್ಸ್, ಕ್ರೂಸ್ ಕಂಟ್ರೋಲ್, ಪುಶ್ ಬಟನ್ ಸ್ಟಾರ್ಟ್/ಸ್ಟಾಪ್ ಮತ್ತು ಸನ್‌ರೂಫ್ ಸೌಲಭ್ಯಗಳಿರಲಿವೆ.

2022ರ ಹ್ಯುಂಡೈ ವೆನ್ಯೂ ಕಾರಿನ ವಿವಿಧ ವೆರಿಯೆಂಟ್ ಮತ್ತು ಬೆಲೆಗಳ ಮಾಹಿತಿ ಬಿಡುಗಡೆ

ಎಂಜಿನ್ ಮತ್ತು ಪರ್ಫಾಮೆನ್ಸ್

2022ರ ವೆನ್ಯೂ ಮಾದರಿಯಲ್ಲಿ ಕಂಪನಿಯು ಈ ಹಿಂದಿನಂತೆಯೇ 1.2 ಲೀಟರ್ ನ್ಯಾಚುರಲಿ ಆಸ್ಪೆರೆಟೆಡ್ ಪೆಟ್ರೋಲ್, 1.0 ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5 ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ನೀಡಲಾಗಿದ್ದು, ಹೊಸ ಕಾರಿನಲ್ಲಿ ವಿವಿಧ ಎಂಜಿನ್ ಆಯ್ಕೆಗಳಿಗೆ ಅನುಗುಣವಾಗಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್, 6-ಸ್ಪೀಡ್ ಮ್ಯಾನುವಲ್ ಮತ್ತು 6 -ಸ್ಪೀಡ್ ಐಎಂಟಿ ಗೇರ್‌ಬಾಕ್ಸ್ ಮತ್ತು 7 ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಮಾದರಿಗಳನ್ನು ಪರಿಚಯಿಸಲಾಗಿದೆ.

Most Read Articles

Kannada
English summary
New hyundai venue variants wise prices details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X