ಹೊಸ ತಾಂತ್ರಿಕ ಸೌಲಭ್ಯಗಳೊಂದಿಗೆ ಬಿಡುಗಡೆಯಾಗಲಿವೆ 2022ರ ಇಸುಝು ವಿ-ಕ್ರಾಸ್ ಮತ್ತು ಎಂಯು-ಎಕ್ಸ್
ಜಪಾನ್ ವಾಹನ ತಯಾರಕ ಕಂಪನಿಯಾಗಿರುವ ಇಸುಝು ಮೋಟಾರ್ಸ್ ಕಂಪನಿಯು ಭಾರತದಲ್ಲಿ ತನ್ನ ಕಾರು ಮಾದರಿಗಳಾದ ಇಸುಝು ವಿ-ಕ್ರಾಸ್ ಮತ್ತು ಎಂಯು-ಎಕ್ಸ್ ಮಾದರಿಗಳ 2022ರ ಆವೃತ್ತಿಗಳನ್ನು ಬಿಡುಗಡೆ ಮಾಡುತ್ತಿದ್ದು, ಹೊಸ ಇಸುಝು ವಿ-ಕ್ರಾಸ್ ಮತ್ತು ಎಂಯು-ಎಕ್ಸ್ ಮಾದರಿಗಳು ಹಲವಾರು ಹೊಸ ಸೌಲಭ್ಯಗಳೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿವೆ.

2022ರ ಇಸುಝು ವಿ-ಕ್ರಾಸ್ ಮತ್ತು ಎಂಯು-ಎಕ್ಸ್ ಮಾದರಿಗಳು ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆ ಆಧರಿಸಿ ಪ್ರಮುಖ ತಾಂತ್ರಿಕ ಸೌಲಭ್ಯಗಳನ್ನು ಸ್ಟ್ಯಾಂಡರ್ಡ್ ಆಗಿ ಪಡೆದುಕೊಳ್ಳುತ್ತಿದ್ದು, ಹೊಸ ಕಾರುಗಳು 2022ರ ಮಾದರಿಗಳೊಂದಿಗೆ ಕಂಪನಿಯು ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ಮಾಹಿತಿಗಳ ಪ್ರಕಾರ ಹೊಸ ವಿ-ಕ್ರಾಸ್ ಮತ್ತು ಎಂಯು-ಎಕ್ಸ್ ಮಾದರಿಗಳು ಪ್ರಸ್ತುತ ಮಾರುಕಟ್ಟೆಯಲ್ಲಿನ ಮಾದರಿಗಿಂತಲೂ ಸುಧಾರಿತ ತಂತ್ರಜ್ಞಾನ ಪ್ರೇರಿತ 9 ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ ಪಡೆದುಕೊಂಡಿವೆ.

ಈ ಹಿಂದಿನ ವಿ-ಕ್ರಾಸ್ ಮತ್ತು ಎಂಯು-ಎಕ್ಸ್ ಮಾದರಿಗಳಲ್ಲಿ 7 ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ ನೀಡಿದ್ದ ಕಂಪನಿಯು ಇದೀಗ ಅಂಡ್ರಾಯಿಡ್ ಆಟೋ ಮತ್ತು ಆ್ಯಪಲ್ ಕಾರ್ ಪ್ಲೇ ಸರ್ಪೊಟ್ ಮಾಡುವ 9 ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ ಜೋಡಣೆ ಮಾಡಿದೆ.

ಇದರ ಹೊರತಾಗಿ 2022ರ ವಿ-ಕ್ರಾಸ್ ಮತ್ತು ಎಂಯು-ಎಕ್ಸ್ ಮಾದರಿಗಳು ಪ್ರಸ್ತುತ ಮಾರುಕಟ್ಟೆಯಲ್ಲಿರುವಂತೆಯೇ ಪ್ರಮುಖ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಂಡಿರಲಿದ್ದು, ಎರಡು ಮಾದರಿಗಳು ಸದ್ಯ ಭಾರತದಲ್ಲಿ ಬಿಎಸ್6 ಎಂಜಿನ್ ಆಯ್ಕೆಯೊಂದಿಗೆ ಖರೀದಿಗೆ ಲಭ್ಯವಿವೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ವಿ-ಕ್ರಾಸ್ ಮಾದರಿಯು ಗ್ರಾಹಕರ ಬೇಡಿಕೆಯೆಂತೆ ವಿನೂತನ ಹೈ-ಲ್ಯಾಂಡರ್ ಬೆಸ್ ವೆರಿಯೆಂಟ್‌ನೊಂದಿಗೆ ಪ್ರಮುಖ ಮೂರು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಹೈ-ಲ್ಯಾಂಡರ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 16.98 ಲಕ್ಷ ಬೆಲೆ ಹೊಂದಿದ್ದರೆ, ಜೆಡ್ ಸೀರಿಸ್ ಮಾದರಿಯು ರೂ. 19.98 ಲಕ್ಷದಿಂದ ರೂ.24.49 ಲಕ್ಷ ಬೆಲೆ ಹೊಂದಿವೆ.

ಬಿಎಸ್-6 ಇಸುಝು ಡಿ-ಕ್ರಾಸ್ ವಿ-ಕ್ರಾಸ್ ಮಾದರಿಯಲ್ಲಿ ಹೈ-ಲ್ಯಾಂಡರ್ ಮಾದರಿಯು ಬೆಸ್ ವೆರಿಯೆಂಟ್ ಆಗಿ ಮಾರಾಟಗೊಳ್ಳುತ್ತಿದ್ದು, ಮ್ಯಾನುವಲ್ ಕಂಟ್ರೋಲ್ ಫೀಚರ್ಸ್ ಹೊಂದಿರುವ ಹೈ-ಲ್ಯಾಂಡರ್ ಪಿಕ್ಅಪ್ ಮಾದರಿಯು ಆರಂಭಿಕ ಪಿಕ್ಅಪ್ ಮಾದರಿಯನ್ನು ಖರೀದಿ ಬಯುಸುವ ಗ್ರಾಹಕರಿಗಾಗಿ ಸಿದ್ದಪಡಿಸಿದೆ.

ಡಿ-ಕ್ರಾಸ್ ವಿ-ಕ್ರಾಸ್ ಜೆಡ್ ಸರಣಿಯಲ್ಲಿ ಇಸುಝು ಕಂಪನಿಯು ಗ್ರಾಹಕರ ಬೇಡಿಕೆ ಅನುಸಾರವಾಗಿ ಜೆಡ್ 2 ವೀಲ್ಹ್ ಡ್ರೈವ್ ಆಟೋಮ್ಯಾಟಿಕ್, ಜೆಡ್ 4 ವೀಲ್ಹ್ ಡ್ರೈವ್ ಮ್ಯಾನುವಲ್ ಮತ್ತು ಜೆಡ್ ಪ್ರೆಸ್ಟಿಜ್ 4 ವೀಲ್ಹ್ ಡ್ರೈವ್ ಆಟೋಮ್ಯಾಟಿಕ್ ಮಾದರಿಗಳನ್ನು ಮಾರಾಟಗೊಳಿಸಲಾಗುತ್ತಿದೆ.

ಬಿಎಸ್-6 ವಿ-ಕ್ರಾಸ್ ಮಾದರಿಯಲ್ಲಿ ಇಸುಝು ಕಂಪನಿಯು ಈ ಹಿಂದಿನ 2.5-ಲೀಟರ್ ಡೀಸೆಲ್ ಮಾದರಿಯನ್ನು ಸ್ಥಗಿತಗೊಳಿಸಿ ಹೈ ಎಂಡ್ ಮಾದರಿಯಲ್ಲಿದ್ದ 1.9-ಲೀಟರ್ 4-ಸಿಲಿಂಡರ್ ಕಾಮನ್ ರೈಲ್ ಡೀಸೆಲ್ ಎಂಜಿನ್ ಮಾದರಿಯನ್ನೇ ಸ್ಟ್ಯಾಂಡರ್ಡ್ ಆಗಿ ಜೋಡಣೆ ಮಾಡುತ್ತಿದೆ.

1.9-ಲೀಟರ್ ಡೀಸೆಲ್ ಮಾದರಿಯು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 161-ಬಿಎಚ್‌ಪಿ ಮತ್ತು 360-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದ್ದು, ಆರಂಭಿಕ ಮಾದರಿಗಳಲ್ಲಿ 2 ವೀಲ್ಹ್ ಡ್ರೈವ್ ಮತ್ತು ಟಾಪ್ ಎಂಡ್ ಮಾದರಿಗಳಲ್ಲಿ ಶಿಫ್ಟ್ ಆನ್-ಫ್ಲೈ 4 ವೀಲ್ಹ್ ಡ್ರೈವ್ ಸಿಸ್ಟಂ ಹೊಂದಿರಲಿದೆ.

ಇನ್ನು ಎಂಯು-ಎಕ್ಸ್ ಮಾದರಿಯು ಸಹ ಹಲವಾರು ಹೊಸ ಬದಲಾವಣೆಗಳೊಂದಿಗೆ ಮಾರಾಟಗೊಳ್ಳುತ್ತಿದ್ದು, ಈ ಹಿಂದಿನ 3.0-ಲೀಟರ್ ಡೀಸೆಲ್ ಎಂಜಿನ್ ಬದಲಾಗಿ1.9-ಲೀಟರ್ ಡೀಸೆಲ್ ಮಾದರಿಯನ್ನು ಪಡೆದುಕೊಂಡಿದೆ. ಎಂಯು-ಎಕ್ಸ್ ಮಾದರಿಯು ಪ್ರಮುಖ ಎರಡು ವೆರಿಯೆಂಟ್‌ಗಳೊಂದಿಗೆ 4x2 ಆಟೋಮ್ಯಾಟಿಕ್ ಮತ್ತು 4x4 ಆಟೋಮ್ಯಾಟಿಕ್ ಮಾದರಿಗಳೊಂದಿಗೆ ಫುಲ್ ಸೈಜ್ ಎಸ್‌ಯುವಿ ಮಾರಾಟದಲ್ಲಿ ಗಮನಸೆಳೆಯುತ್ತಿದೆ.

ಹೊಸ ಎಮಿಷನ್ ಪ್ರೇರಿತ 1.9-ಲೀಟರ್ 4-ಸಿಲಿಂಡರ್ ಕಾಮನ್ ರೈಲ್ ಡೀಸೆಲ್ ಎಂಜಿನ್ ಮಾದರಿಯು ವಿ-ಕ್ರಾಸ್ ಮಾದರಿಯೆಂತೆಯೇ 161-ಬಿಎಚ್‌ಪಿ ಮತ್ತು 360-ಎನ್ಎಂ ಟಾರ್ಕ್ ಉತ್ಪಾದಿಸಲಿದ್ದು, ಇಸುಝು ಕಂಪನಿಯು ಹೊಸ ಕಾರಿನಲ್ಲಿ ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್ ನೀಡಿದೆ.

ಇಸುಝು ಕಂಪನಿಯು ಎಂಯು-ಎಕ್ಸ್ ಮಾದರಿಯಲ್ಲಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, ಇಂಟಾಗ್ರೆಟೆಡ್ ಡಿಆರ್‌ಎಲ್ಎಸ್, ಎಲ್ಇಡಿ ಟೈಲ್‌ಲ್ಯಾಂಪ್ಸ್, 18-ಇಂಚಿನ ಅಲಾಯ್ ವೀಲ್ಹ್, ಸೈಡ್ ಸ್ಟೆಪ್ಸ್, ವೀಲ್ಹ್ ಆರ್ಚ್, ಸ್ಕಫ್ಲ್ ಪ್ಲೇಟ್, ಡ್ಯುಯಲ್ ಟೋನ್ ಬಂಪರ್ ನೀಡಲಾಗಿದೆ.

ಕಾರಿನ ಒಳಭಾಗದಲ್ಲಿನ ಫೀಚರ್ಸ್‌ಗಳು ಕೂಡಾ ಆಕರ್ಷಕವಾಗಿದ್ದು, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೊಲ್, ಕ್ರೂಸ್ ಕಂಟ್ರೋಲ್, ಸೆಮಿ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಎಂಡಿಐ ಸ್ಕ್ರೀನ್ ಮತ್ತು 7-ಇಂಚಿನ ಟಚ್ ಸ್ಕ್ರೀನ್ ಇನ್ಪೊಟೈನ್‌ಮೆಂಟ್ ಸಿಸ್ಟಂ ಸರ್ಪೊಟ್ ಮಾಡುವ ಅಂಡ್ರಾಯಿಡ್ ಆಟೋ ಮತ್ತು ಆಟೋ ಕಾರ್ ಪ್ಲೇ ಸೌಲಭ್ಯಗಳಿವೆ.

ಎಂಯು-ಎಕ್ಸ್ ಮಾದರಿಯು ಸದ್ಯ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 33.23 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ. 35.19 ಲಕ್ಷ ಬೆಲೆ ಹೊಂದಿದ್ದು, ಹೊಸ ಮಾದರಿಗಳು ತುಸು ಹೆಚ್ಚುವರಿ ಬೆಲೆ ಪಡೆದುಕೊಳ್ಳಲಿವೆ.


Click it and Unblock the Notifications








