ಭಾರತದಲ್ಲಿ ಹೊಸ ಲ್ಯಾಂಡ್ ರೋವರ್ ಡಿಸ್ಕವರಿ ಮೆಟ್ರೋಪಾಲಿಟನ್ ಎಡಿಷನ್ ಬಿಡುಗಡೆ
ಐಷಾರಾಮಿ ಎಸ್‌ಯುವಿ ತಯಾರಕ ಲ್ಯಾಂಡ್ ರೋವರ್ ತನ್ನ ಡಿಸ್ಕವರಿ ಮೆಟ್ರೋಪಾಲಿಟನ್ ಎಡಿಷನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಲ್ಯಾಂಡ್ ರೋವರ್ ಡಿಸ್ಕವರಿ ಮೆಟ್ರೋಪಾಲಿಟನ್ ಎಡಿಷನ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.1.26 ಕೋಟಿಯಾಗಿದೆ.

ಲ್ಯಾಂಡ್ ರೋವರ್ ಕಂಪನಿಯು ಈ ಹೊಸ ಡಿಸ್ಕವರಿ ಮೆಟ್ರೋಪಾಲಿಟನ್ ಎಡಿಷನ್ ಖರೀದಿಗಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಿದೆ. ಆಸಕ್ತ ಗ್ರಾಹಕರು ಟೋಕನ್ ಮೊತ್ತವನ್ನು ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದು. ಲ್ಯಾಂಡ್ ರೋವರ್ ಡಿಸ್ಕವರಿ ಮೆಟ್ರೋಪಾಲಿಟನ್ ಎಡಿಷನ್ ಹೊಸ ಟಾಪ್-ಆಫ್-ಲೈನ್ ಆವೃತ್ತಿಯಾಗಿದೆ. ಲ್ಯಾಂಡ್ ರೋವರ್ ಡಿಸ್ಕವರಿ ಮೆಟ್ರೋಪಾಲಿಟನ್ ಎಡಿಷನ್ ಆರ್-ಡೈನಾಮಿಕ್ HSE ರೂಪಾಂತರವನ್ನು ಆಧರಿಸಿದೆ ಮತ್ತು ಗ್ರಿಲ್ ಮತ್ತು ಡಿಸ್ಕವರಿ ಸ್ಕ್ರಿಪ್ಟ್‌ಗಾಗಿ ವಿವರವಾದ ಬ್ರೈಟ್ ಅಟ್ಲಾಸ್ ಅನ್ನು ಒಳಗೊಂಡಿದೆ.

ಲ್ಯಾಂಡ್ ರೋವರ್ ಡಿಸ್ಕವರಿ ಮೆಟ್ರೋಪಾಲಿಟನ್ ಎಡಿಷನ್ ಹಕುಬಾ ಸಿಲ್ವರ್, 20-ಇಂಚಿನ ಸ್ಯಾಟಿನ್ ಡಾರ್ಕ್ ಗ್ರೇ ಅಲಾಯ್ ವ್ಹೀಲ್ ಗಳು ಮತ್ತು ಬ್ಲ್ಯಾಕ್ ಲ್ಯಾಂಡ್ ರೋವರ್ ಬ್ರೇಕ್ ಕ್ಯಾಲಿಪರ್‌ಗಳನ್ನು ಒಳಗೊಂಡಿದೆ. ಇತರ ಬಾಹ್ಯ ಸೇರ್ಪಡೆಗಳಲ್ಲಿ ಸ್ಲೈಡಿಂಗ್ ಫ್ರಂಟ್ ಸನ್‌ರೂಫ್ ಮತ್ತು ಸ್ಥಿರ ಹಿಂಭಾಗದ ಪನೊರೊಮಿಕ್ ಸನ್‌ರೂಫ್ ಸೇರಿವೆ.

ಡಿಸ್ಕವರಿ ಮೆಟ್ರೋಪಾಲಿಟನ್ ಎಡಿಷನ್ ಒಳಭಾಗದಲ್ಲಿ ಐಷಾರಾಮಿ ಫೀಚರ್ಸ್ ಗಳನ್ನು ಹೊಂದಿವೆ. ಈ ಎಸ್‍ಯುವಿಯಲ್ಲಿ 12.3-ಇಂಚಿನ ಡ್ರೈವರ್ ಡಿಸ್ಪ್ಲೇ, ಫೋನ್ ಸಿಗ್ನಲ್ ಬೂಸ್ಟರ್‌ನೊಂದಿಗೆ ವೈರ್‌ಲೆಸ್ ಚಾರ್ಜಿಂಗ್, ಫ್ರಂಟ್ ಕೂಲರ್ ಕಂಪಾರ್ಟ್‌ಮೆಂಟ್, ನಾಲ್ಕು-ಝೋನ್ ಕ್ಲೈಮೇಂಟ್ ಕಂಟ್ರೋಲ್ ಮತ್ತು ಹಿಟಡ್ ಸ್ಟೀರಿಂಗ್ ವ್ಹೀಲ್ ಅನ್ನು ಒಳಗೊಂಡಿದೆ.

ಇತರ ಸ್ಟ್ಯಾಂಡರ್ಡ್ ವೈಶಿಷ್ಟ್ಯಗಳು, ಹೆಟಡ್ ಸೀಟುಗಳು, ಚಾಲಿತ ಸೀಟ್ ರಿಕ್ಲೈನ್ ಮತ್ತು ಟೈಟಾನಿಯಂ ಮೆಶ್ ಟ್ರಿಮ್ ವಿವರಗಳನ್ನು ಒಳಗೊಂಡಿವೆ. ಲ್ಯಾಂಡ್ ರೋವರ್ ಡಿಸ್ಕವರಿ ಹೊಸ ಮೆಟ್ರೋಪಾಲಿಟನ್ ಆವೃತ್ತಿಯು ಪಿಎಮ್ 2.5 ಏರ್ ಫಿಲ್ಟರೇಶನ್‌ನೊಂದಿಗೆ ಕ್ಯಾಬಿನ್ ಏರ್ ಶುದ್ಧೀಕರಣವನ್ನು ಸಹ ಒಳಗೊಂಡಿದೆ,

ಇದು ಒಳಗೆ ಗಾಳಿಯ ಗುಣಮಟ್ಟವನ್ನು ಮೇಲ್ವಿಚಾರಣೆ ಮಾಡುತ್ತದೆ ಮತ್ತು ಆರೋಗ್ಯಕರ ಆಂತರಿಕ ಪರಿಸರಕ್ಕಾಗಿ ಹಾನಿಕಾರಕ ಕಣಗಳನ್ನು ಫಿಲ್ಟರ್ ಮಾಡುತ್ತದೆ. ಈ ಲ್ಯಾಂಡ್ ರೋವರ್ ಡಿಸ್ಕವರಿ ಮೆಟ್ರೋಪಾಲಿಟನ್ ಎಡಿಷನ್ ಪೆಟ್ರೋಲ್ ಮತ್ತು ಡೀಸೆಲ್ ಮಾದರಿಗಳಲ್ಲಿ 3.0-ಲೀಟರ್ ಎಂಜಿನ್ ಅನ್ನು ನೀಡಲಾಗುತ್ತದೆ.

ಈ ಲ್ಯಾಂಡ್ ರೋವರ್ ಡಿಸ್ಕವರಿ ಮೆಟ್ರೋಪಾಲಿಟನ್ ಎಡಿಷನ್ P360 ನ ಟರ್ಬೋಚಾರ್ಜ್ಡ್ 3.0-ಲೀಟರ್ ಎಂಜಿನ್ 5,500 ಮತ್ತು 6,500 ಆರ್‌ಪಿಎಂ ನಡುವೆ 355 ಬಿಹೆಚ್‍ಪಿ ಪವರ್ ಮತ್ತು 1,750 ಮತ್ತು 5,000 ಆರ್‌ಪಿಎಂ ನಡುವೆ 50 ಎನ್ಎಂ ಟಾರ್ಕ್ ಅನ್ನು ಉತ್ಪದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ ಅದು ಎಲ್ಲಾ ನಾಲ್ಕು ಚಕ್ರಗಳಿಗೆ ಶಕ್ತಿಯನ್ನು ಕಳುಹಿಸುತ್ತದೆ.

ಈ ಎಯುವಿಯ D300 ನ 3.0-ಲೀಟರ್ ಟರ್ಬೋಡೀಸೆಲ್ 4,000 ಆರ್‌ಪಿಎಂನಲ್ಲಿ 296 ಬಿಹೆಚ್‍ಪಿ ಪವರ್ ಮತ್ತು 1,500 ಮತ್ತು 2,500 ಆರ್‌ಪಿಎಂ ನಡುವೆ 650 ಎನ್ಎಂ ಟಾರ್ಕ್ ಅನ್ನು ಉತ್ಪದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 8-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಎಂಜಿನ್ ಎಲ್ಲಾ ನಾಲ್ಕು ಚಕ್ರಗಳಿಗೆ ಪವರ್ ಕಳುಹಿಸುತ್ತದೆ.

ಲ್ಯಾಂಡ್ ರೋವರ್ ತನ್ನ ಜನಪ್ರಿಯ ಆಫ್ ರೋಡ್ ಎಸ್‌ಯುವಿ ಮಾದರಿಯಾದ ಡಿಫೆಂಡರ್ ಆವೃತ್ತಿಯಲ್ಲಿ ವಿ8 ಬಾಂಡ್ ಎಡಿಷನ್ ಅನ್ನು ಕಳೆದ ವರ್ಷ ಅನಾವರಣಗೊಳಿಸಿತ್ತು. ವಿಶ್ವಾದ್ಯಂತ ಇದೇ ತಿಂಗಳಾಂತ್ಯಕ್ಕೆ ತೆರೆಕಾಣುತ್ತಿರುವ ಜೇಮ್ಸ್ ಬಾಂಡ್ ಸರಣಿಯ ನೋ ಟೈಮ್ ಟು ಡೈ(No Time To Die) ಚಿತ್ರದ ಪ್ರಾಯೋಜಕತ್ವ ಹೊಂದಿರುವ ಲ್ಯಾಂಡ್ ರೋವರ್ ಕಂಪನಿಯು ತನ್ನ ಜನಪ್ರಿಯ ಡಿಫೆಂಡರ್ ಎಸ್‌ಯುವಿ ಮಾದರಿಯಲ್ಲಿ ಬಾಂಡ್ ಎಡಿಷನ್ ಪರಿಚಯಿಸಲು ನಿರ್ಧರಿಸಿದ್ದು, ಬಾಂಡ್ ವಿಶೇಷ ಆವೃತ್ತಿಯನ್ನು ಡಿಫೆಂಡರ್ ವಿ8 ಮಾದರಿಯಲ್ಲಿ ಬಿಡುಗಡೆ ಮಾಡುತ್ತಿದೆ.

ಡಿಫೆಂಡರ್ 90 ಮತ್ತು ಡಿಫೆಂಡರ್ 110 ಎರಡು ಮಾದರಿಗಳಲ್ಲೂ ಹೊಸ ಬಾಂಡ್ ಎಡಿಷನ್ ಖರೀದಿಗೆ ಲಭ್ಯವಿರಲಿದ್ದು, ಡಿಫೆಂಡರ್ ಹೈ ಎಂಡ್ ಮಾದರಿಯಾದ ವಿ8 ಎಂಜಿನ್ ಪ್ರೇರಿತ ಮಾದರಿಗಳಲ್ಲಿ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಲಾಗುತ್ತಿದೆ. ಡಿಫೆಂಡರ್ ವಿ8 ಬಾಂಡ್ ಎಡಿಷನ್ ಆಕರ್ಷಣೆಗಾಗಿ ವಿಶೇಷ ವಿನ್ಯಾಸದ 'Defender 007' ಬ್ಯಾಡ್ಜ್ ನೀಡಲಾಗಿದ್ದು, ಐಕಾನಿಕ್ 007 ಬ್ಯಾಡ್ಜ್‌ಗಳು ಕಾರಿನ ಸ್ಟೀರಿಂಗ್ ವೀಲ್ಹ್‌ನಲ್ಲಿ, ಹಿಂಬದಿಯ ಟೈಲ್‌ಗೆಟ್ ಮೇಲೆ ನೀಡಲಾಗಿದೆ.

ಜೊತೆಗೆ 'Defender 007' ಬ್ಯಾಡ್ಜ್‌ಗಳು ಡೋರ್ ಪೆಡಲ್ ಲ್ಯಾಂಪ್ ಗ್ರಾಫಿಕ್ ಮೂಲಕ ಗಮನಸೆಳೆಯಲಿದ್ದು, ಹೊಸ ಕಾರಿನ ಇನ್ಪೋಟೈನ್‌ಮೆಂಟ್ ಸಿಸ್ಟಂ ಕಾರ್ಯನಿರ್ವಹಣೆ ಆರಂಭ ಸಂದರ್ಭದಲ್ಲೂ Defender 007 ಆ್ಯನಿಮೆಷನ್ ಗಮನಸೆಳೆಯಲಿದೆ.

ಇದರ ಹೊರತಾಗಿ ಹೊಸ ಕಾರಿನಲ್ಲಿ ಕಸ್ಟಮೈಷನ್ ಸಹಭಾಗಿತ್ವ ಕಂಪನಿಯಾಗಿರುವ ಎಸ್‌ವಿ ಬಿಸ್ಪೋರ್ಕ್ ಲೊಗೊ ಸಹ ಕಾಣಬಹುದಾಗಿದ್ದು, ಡಿಫೆಂಡರ್ ವಿ8 ಬಾಂಡ್ ಎಡಿಷನ್ ವಿಶ್ವಾದ್ಯಂತ ಕೇವಲ 300 ಯುನಿಟ್‌ಗಳು ಮಾತ್ರ ಮಾರಾಟಗೊಳ್ಳಲಿವೆ.

ಹೊಸ ಡಿಸ್ಕವರಿ ಮೆಟ್ರೋಪಾಲಿಟನ್ ಎಡಿಷನ್ ಲ್ಯಾಂಡ್ ರೋವರ್‌ನ ಹೊಸ ಟಾಪ್-ಆಫ್-ಲೈನ್ ಆವೃತ್ತಿಯಾಗಿದೆ. ಮೆಟ್ರೋಪಾಲಿಟನ್ ಎಡಿಷನ್ ಹಲವಾರು ನವೀಕರಣಗಳನ್ನು ನೀಡುತ್ತದೆ, ಅದು ಲ್ಯಾಂಡ್ ರೋವರ್ ಡಿಸ್ಕವರಿಯ ಹೊಸ ಟಾಪ್-ಸ್ಪೆಕ್ ಆವೃತ್ತಿಯಾಗಿ ಹೆಚ್ಚಿನ ಗ್ರಾಹಕರನ್ನು ಸೆಳೆಯಬಹುದು.


Click it and Unblock the Notifications








