ಭಾರತದಲ್ಲಿ ನ್ಯೂ ಜನರೇಷನ್ Range Rover ಎಸ್‍ಯುವಿ ಬಿಡುಗಡೆ: ಬೆಲೆ ರೂ.2.32 ಕೋಟಿ

ಲ್ಯಾಂಡ್ ರೋವರ್ ಕಂಪನಿಯು ತನ್ನ ನ್ಯೂ ಜನರೇಷನ್ ರೇಂಜ್ ರೋವರ್ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಹೊಸ ನ್ಯೂ ಜನರೇಷನ್ ರೇಂಜ್ ರೋವರ್ ಎಸ್‍ಯುವಿಯ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.2.32 ಕೋಟಿಯಾಗಿದೆ.

ಭಾರತದಲ್ಲಿ ನ್ಯೂ ಜನರೇಷನ್ Range Rover ಎಸ್‍ಯುವಿ ಬಿಡುಗಡೆ: ಬೆಲೆ ರೂ.2.32 ಕೋಟಿ

ಭಾರತದಲ್ಲಿ ಈ ಹೊಸ ರೇಂಜ್ ರೋವರ್ ಎಸ್‍ಯುವಿಯ ಖರೀದಿಗಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಿದೆ, 2022ರ ರೇಂಜ್ ರೋವರ್ ಅನ್ನು ಹೊಸ ಎಂಎಲ್ಎ-ಫ್ಲೆಕ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಅಭಿವೃದ್ಧಿಪಡಿಸಲಾಗಿದೆ. ಹೊಸ ಮಾದರಿಯು ಅದರ ಹೆಚ್ಚಿನ ಶೈಲಿಯನ್ನು ಉಳಿಸಿಕೊಂಡಿದೆ. ಆದರೆ ಕೆಲವು ಕಾಸ್ಮೆಟಿಕ್ ನವೀಕರಣಗಳನ್ನು ಪಡೆದುಕೊಂಡಿದೆ, ಇನ್ನು ಈ ಹೊಸ ರೇಂಜ್ ರೋವರ್ ಎಸ್‌ಯುವಿಯು ಪರಿಚಿತವಾಗಿ ಕಾಣುತ್ತದೆ ಮತ್ತು ವಿಭಿನ್ನ ಸಿಲೂಯೆಟ್ ಅನ್ನು ತಕ್ಷಣವೇ ಗುರುತಿಸಬಹುದಾಗಿದೆ.

ಭಾರತದಲ್ಲಿ ನ್ಯೂ ಜನರೇಷನ್ Range Rover ಎಸ್‍ಯುವಿ ಬಿಡುಗಡೆ: ಬೆಲೆ ರೂ.2.32 ಕೋಟಿ

ನ್ಯೂ ಜನರೇಷನ್ ರೇಂಜ್ ರೋವರ್ ಎಸ್‍ಯುವಿಯ ಹೊಸ ಗ್ರಿಲ್ ಮತ್ತು ಹೆಡ್‌ಲ್ಯಾಂಪ್‌ನೊಂದಿಗೆ ಇದು ಹೆಚ್ಚು ಹೊಳಪು ತೋರುತ್ತಿದೆ. ಈ ರೇಂಜ್ ರೋವರ್ ಎಸ್‍ಯುವಿಯಲ್ಲಿ ಸಮತಟ್ಟಾದ ಮೇಲ್ಮೈಗಳು ಕೇವಲ 0.30 ಸಿಡಿಯ ಪ್ರಭಾವಶಾಲಿ ಡ್ರ್ಯಾಗ್ ಅಂಶವವನ್ನು ಒಳಗೊಂಡಿದೆ. ಈ ಮಾದರಿಯು 23-ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿವೆ.

ಭಾರತದಲ್ಲಿ ನ್ಯೂ ಜನರೇಷನ್ Range Rover ಎಸ್‍ಯುವಿ ಬಿಡುಗಡೆ: ಬೆಲೆ ರೂ.2.32 ಕೋಟಿ

ಆದರೆ ಇದರ ಸಣ್ಣ ಓವರ್‌ಹ್ಯಾಂಗ್‌ಗಳು ಬೃಹತ್ ಪ್ರಮಾಣವನ್ನು ನಿಯಂತ್ರಣದಲ್ಲಿಡುವುದನ್ನು ಖಚಿತಪಡಿಸುತ್ತದೆ. ಈ ಎಸ್‍ಯುವಿಯ ಟರ್ನ್ ಇಂಡಿಕೇಟರ್‌ಗಳನ್ನು ಸಂಯೋಜಿಸುವ ಟೈಲ್‌ಗೇಟ್‌ನಲ್ಲಿನ ಬ್ಲ್ಯಾಕ್ ಅಸ್ಸೆಂಟ್ ಗಳನ್ನು ಸಂಪರ್ಕಗೊಂಡಿರುವ ಹಿಂಭಾಗದ ಸ್ಪೋರ್ಟ್ಸ್ ಬ್ಲ್ಯಾಕ್ಡ್-ಔಟ್ ಟೈಲ್‌ಲೈಟ್‌ಗಳಾಗಿವೆ.

ಭಾರತದಲ್ಲಿ ನ್ಯೂ ಜನರೇಷನ್ Range Rover ಎಸ್‍ಯುವಿ ಬಿಡುಗಡೆ: ಬೆಲೆ ರೂ.2.32 ಕೋಟಿ

ಈ ನ್ಯೂ ಜನರೇಷನ್ ರೇಂಜ್ ರೋವರ್ ಎಸ್‍ಯುವಿಯ ಇಂಟಿರಿಯರ್ ನಲ್ಲಿ 13.7-ಇಂಚಿನ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಇನ್ನು ಸೆಂಟರ್ ಕನ್ಸೋಲ್ ದೊಡ್ಡ 13.1-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್ ಪ್ಲೇ ಹ್ಯಾಪ್ಟಿಕ್ ಪ್ರತಿಕ್ರಿಯೆಯೊಂದಿಗೆ ಹೊಂದಿದೆ. ಇದು ಗೊಂದಲ-ಮುಕ್ತ ವಿನ್ಯಾಸವಾಗಿದೆ ಮತ್ತು ವಿನ್ಯಾಸದ ವಿಷಯದಲ್ಲಿ ಬಹಳ ಪರಿಚಿತವಾಗಿದೆ.

ಭಾರತದಲ್ಲಿ ನ್ಯೂ ಜನರೇಷನ್ Range Rover ಎಸ್‍ಯುವಿ ಬಿಡುಗಡೆ: ಬೆಲೆ ರೂ.2.32 ಕೋಟಿ

ಇನ್ನು ಹಿಂಭಾಗದಲ್ಲಿ ಪ್ರಯಾಣಿಕರು 11.4-ಇಂಚಿನ ಮನರಂಜನಾ ಡಿಸ್ ಪ್ಲೇಯನ್ನು ಪಡೆಯುತ್ತಾರೆ. ಅದನ್ನು ಮುಂಭಾಗದ ಸೀಟ್‌ಬ್ಯಾಕ್‌ಗಳಿಗೆ ಜೋಡಿಸಲಾಗಿದೆ. ಇನ್ನು ಎಕ್ಸಿಕ್ಯುಟಿವ್ ಕ್ಲಾಸ್ ಹಿಂಬದಿಯ ಸೀಟುಗಳೊಂದಿಗೆ, ಸೆಂಟರ್ ಆರ್ಮ್‌ರೆಸ್ಟ್‌ನಲ್ಲಿ 8.0-ಇಂಚಿನ ಟಚ್‌ಸ್ಕ್ರೀನ್ ಕೂಡ ಇದೆ, ಇದರೊಂದಿಗೆ ನ್ಯೂ ಜನರೇಷನ್ ರೇಂಜ್ ರೋವರ್ 1600-ವ್ಯಾಟ್, 35-ಸ್ಪೀಕರ್ ಮೆರಿಡಿಯನ್ ಸಿಗ್ನೇಚರ್ ಸೌಂಡ್ ಸಿಸ್ಟಂ ಅನ್ನು ಸಹ ಪಡೆಯುತ್ತದೆ,

ಭಾರತದಲ್ಲಿ ನ್ಯೂ ಜನರೇಷನ್ Range Rover ಎಸ್‍ಯುವಿ ಬಿಡುಗಡೆ: ಬೆಲೆ ರೂ.2.32 ಕೋಟಿ

ಆದರೆ ಆಟೋಬಯೋಗ್ರಫಿ ಟ್ರಿಮ್ ಹೆಡ್‌ರೆಸ್ಟ್‌ನಲ್ಲಿ ಎಂಬೆಡ್ ಮಾಡಲಾದ ವಿಶ್ವದ ಮೊದಲ ಆಕ್ಟಿವ್ ಸ್ಪೀಕರ್‌ಗಳನ್ನು ಹೊಂದಿದೆ. ಈ ಹೊಸ ರೇಂಜ್ ರೋವರ್ ಕ್ಯಾಬಿನ್‌ನಲ್ಲಿ ಹೆಚ್ಚು ಸಮರ್ಥನೀಯ ಐಷಾರಾಮಿ ವಸ್ತುಗಳನ್ನು ಬಳಸುತ್ತದೆ.ಹೊಸ ರೇಂಜ್ ರೋವರ್ ಎಸ್‍ಯುವಿಯು ಹೊಸ ಐದು-ಲಿಂಕ್ ಹಿಂಬದಿಯ ಆಕ್ಸಲ್‌ನೊಂದಿಗೆ ಅಡಾಪ್ಟಿವ್ ಏರ್ ಸಸ್ಪೆಂಕ್ಷನ್ ಅನ್ನು ಹೊಂದಿದೆ. ಇದು ನ್ಯಾವಿಗೇಷನ್ ಸಿಸ್ಟಂ ಅನ್ನು ಮುಂದಿನ ರಸ್ತೆಗೆ ಅನುಗುಣವಾಗಿ ಹೊಂದಿಸಲು ಬಳಸುತ್ತದೆ.

ಭಾರತದಲ್ಲಿ ನ್ಯೂ ಜನರೇಷನ್ Range Rover ಎಸ್‍ಯುವಿ ಬಿಡುಗಡೆ: ಬೆಲೆ ರೂ.2.32 ಕೋಟಿ

ಈ ಯುನಿಟ್ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ರೈಡ್ ಗುಣಮಟ್ಟವನ್ನು ಮತ್ತಷ್ಟು ಸುಗಮಗೊಳಿಸಲು ಸ್ಟೀರಿಂಗ್ ಅಸಿಸ್ಟ್ ಅನ್ನು ಸಹ ನಿರ್ವಹಿಸುತ್ತದೆ. ಈ ಎಸ್‍ಯುವಿಯ ನಿಯಂತ್ರಿತ ಆ್ಯಂಟಿ-ರೋಲ್ ಬಾರ್‌ಗಳನ್ನು ಸಹ ಪಡೆಯುತ್ತದೆ, ಅದು ಈಗ ವೇಗವಾದ ರೆಸ್ಪಾನ್ಸ್ ಹೊಂದಿದೆ. ಈ ಐದನೇ ತಲೆಮಾರಿನ ರೇಂಜ್ ರೋವರ್ ಆಲ್-ವ್ಹೀಲ್ ಸ್ಟೀರಿಂಗ್ ಅನ್ನು ಹೊಂದಿದೆ, ಇದು ಹಿಂದಿನ ಚಕ್ರಗಳನ್ನು 7.3 ಡಿಗ್ರಿಗಳವರೆಗೆ ಎಲೆಕ್ಟ್ರಿಕಲ್ ಆಗಿ ಚಲಿಸುತ್ತದೆ.

ಭಾರತದಲ್ಲಿ ನ್ಯೂ ಜನರೇಷನ್ Range Rover ಎಸ್‍ಯುವಿ ಬಿಡುಗಡೆ: ಬೆಲೆ ರೂ.2.32 ಕೋಟಿ

ವಿಶೇಷವಾಗಿ ಬಿಗಿಯಾದ ಸ್ಥಳಗಳಲ್ಲಿ ಮತ್ತು ಟರ್ನಿಂಗ್ ವೇಳೆ 11 ಮೀಟರ್‌ಗಿಂತಲೂ ಕಡಿಮೆಗೊಳಿಸುತ್ತದೆ. ಹೊಸ ರೇಂಜ್ ರೋವರ್ ಎಸ್‍ಯುವಿಯ ನೈಟ್‌ಶಿಫ್ಟ್ ಮೋಡ್‌ನೊಂದಿಗೆ 360-ಡಿಗ್ರಿ ಕ್ಯಾಮೆರಾವನ್ನು ಮತ್ತು ಆ್ಯಪ್-ಆಧಾರಿತ ಪಾರ್ಕಿಂಗ್ ವೈಶಿಷ್ಟ್ಯವನ್ನು ಸಹ ಪಡೆಯುತ್ತದೆ, ಇದು ವಾಹನದಿಂದ ಹೊರಬರಲು ಮತ್ತು ಮೊಬೈಲ್ ಅಪ್ಲಿಕೇಶನ್ ಅನ್ನು ಬಳಸಿಕೊಂಡು ವಾಹನ ಫಾರ್ಕಿಂಗ್ ಮಾಡಬಹುದು,

ಭಾರತದಲ್ಲಿ ನ್ಯೂ ಜನರೇಷನ್ Range Rover ಎಸ್‍ಯುವಿ ಬಿಡುಗಡೆ: ಬೆಲೆ ರೂ.2.32 ಕೋಟಿ

ಐದನೇ ತಲೆಮಾರಿನ ಲ್ಯಾಂಡ್ ರೋವರ್ ರೇಂಜ್ ರೋವರ್ ಎಸ್‍ಯುವಿ ನವೀಕರಿಸಿದ ಟೆರೈನ್ ರೆಸ್ಪಾನ್ಸ್ 2 ಸಿಸ್ಟಮ್‌ನೊಂದಿಗೆ ಸೇರಿಸಿದೆ, ಆದರೆ ನೀರಿನ ವೇಡಿಂಗ್ ಸಾಮರ್ಥ್ಯವು ಈಗ 900 ಎಂಎಂ ನಲ್ಲಿ ನಿಂತಿದೆ ಮತ್ತು ಸೋನಾರ್ ತಂತ್ರಜ್ಞಾನ ಹೊಂದಿದೆ. ಅದು ವೇಡಿಂಗ್ ಆಳವು ಹೆಚ್ಚಾದರೆ ನಿಮಗೆ ತಿಳಿಸುತ್ತದೆ. ಇದರ ಹೊಸ ಚಾಸಿಸ್ ಹಿಂದಿನ ಪುನರಾವರ್ತನೆಗಿಂತ ಶೇಕಡಾ 50 ರಷ್ಟು ಗಟ್ಟಿಯಾಗಿದೆ. ಇದು ಮೊದಲಿಗಿಂತ 25 ಶೇಕಡಾ ಕಡಿಮೆ ಕಂಪನವನ್ನು ಹೊಂದಿರಲಿದೆ,.

ಭಾರತದಲ್ಲಿ ನ್ಯೂ ಜನರೇಷನ್ Range Rover ಎಸ್‍ಯುವಿ ಬಿಡುಗಡೆ: ಬೆಲೆ ರೂ.2.32 ಕೋಟಿ

ಎಂಜಿನ್‌ಗಳಿಗೆ ಸಂಬಂಧಿಸಿದಂತೆ, 2022ರ ರೇಂಜ್ ರೋವರ್ ಎಸ್‍ಯುವಿಯಲ್ಲಿ 3 ಎಂಜಿನ್ ಆಯ್ಕೆಗಳಲ್ಲಿ ನೀಡಲಾಗಿದೆ. ಇದು 3.0-ಲೀಟರ್ ಪೆಟ್ರೋಲ್ ಮೈಲ್ಡ್-ಹೈಬ್ರಿಡ್, 3.0-ಲೀಟರ್ ಟರ್ಬೊ-ಡೀಸೆಲ್ ಮತ್ತು 4.4-ಲೀಟರ್ ಟ್ವಿನ್-ಟರ್ಬೊ ವಿ8 ಎಂಜಿನ್ ಗಳಾಗಿವೆ. ಇದರಲ್ಲಿ 3.0-ಲೀಟರ್ ಪೆಟ್ರೋಲ್ ಮೈಲ್ಡ್-ಹೈಬ್ರಿಡ್ 394 ಬಿಹೆಚ್‍ಪಿ ಪವರ್ ಮತ್ತು 550 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಭಾರತದಲ್ಲಿ ನ್ಯೂ ಜನರೇಷನ್ Range Rover ಎಸ್‍ಯುವಿ ಬಿಡುಗಡೆ: ಬೆಲೆ ರೂ.2.32 ಕೋಟಿ

ಇನ್ನು ಟರ್ಬೊ-ಡೀಸೆಲ್ ಎಂಜಿನ್ 346 ಬಿಹೆಚ್‍ಪಿ ಪವರ್ ಮತ್ತು 700 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಿದರೆ, ಟ್ವಿನ್-ಟರ್ಬೊ ವಿ8 ಎಂಜಿನ್ 523 ಬಿಹೆಚ್‍ಪಿ ಪವರ್ ಮತ್ತು 750 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಸ್‍ಯುವಿಯು 5.3 ಸೆಕೆಂಡ್‌ಗಳಲ್ಲಿ 0-100 ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಈ ಎಸ್‍ಯುವಿಯು ಸುಮಾರು 80 ಕಿ.ಮೀ ರೇಂಜ್ ಹೊಂದಿರಲಿದೆ. ಎಲ್ಲಾ ಮಾದರಿಗಳು ಆಲ್-ವೀಲ್ ಡ್ರೈವ್ ಮತ್ತು ಸಕ್ರಿಯ-ಲಾಕಿಂಗ್ ರಿಯರ್ ಡಿಫರೆನ್ಷಿಯಲ್ ಜೊತೆಗೆ ಸ್ಟ್ಯಾಂಡರ್ಡ್ ಬರುತ್ತವೆ.

ಭಾರತದಲ್ಲಿ ನ್ಯೂ ಜನರೇಷನ್ Range Rover ಎಸ್‍ಯುವಿ ಬಿಡುಗಡೆ: ಬೆಲೆ ರೂ.2.32 ಕೋಟಿ

ಇನ್ನು ಲ್ಯಾಂಡ್ ರೋವರ್ ಕಂಪನಿಯು ಸ್ತುತ ಸಂಪೂರ್ಣವಾಗಿ ಎಲೆಕ್ಟ್ರಿಕ್ ರೇಂಜ್ ರೋವರ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ, ಇದು 2024 ರ ವೇಳೆಗೆ ಪಾದಾರ್ಪಣೆ ಮಾಡುವ ನಿರೀಕ್ಷೆಯಿದೆ. ಮುಂಬರುವ ರೇಂಜ್ ರೋವರ್ ಎಲೆಕ್ಟ್ರಿಕ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿಯು ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ. ಬಹುಶಃ ಅದರ ಅಂತರರಾಷ್ಟ್ರೀಯ ಅನಾವರಣಗೊಂಡ ಕೆಲವು ತಿಂಗಳ ನಂತರ ಬರಬಹುದು,

Most Read Articles

Kannada
English summary
New land rover range rover luxurious suv launched in india price bookings details
Story first published: Thursday, January 13, 2022, 12:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X