ವಿತರಣೆಗೆ ಸಿದ್ದವಾಗಿರುವ 2022ರ ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಹೀಗಿರಲಿದೆ..

ಬಜೆಟ್ ಕಾರುಗಳ ಉತ್ಪಾದನೆಯಲ್ಲಿ ತನ್ನದೆ ಆದ ಜನಪ್ರಿಯತೆ ಹೊಂದಿರುವ ಮಾರುತಿ ಸುಜುಕಿ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ವಿವಿಧ ಕಾರು ಮಾದರಿಗಳ ಮಾರಾಟ ಹೊಂದಿದ್ದು, ಕಂಪನಿಯು ಇದೀಗ 2022ರ ಎಸ್-ಪ್ರೆಸ್ಸೊ ಮೈಕ್ರೊ ಎಸ್‌ಯುವಿ ಮಾದರಿಯನ್ನು ಹೊಸ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆ ಮಾಡಿದೆ.

ವಿತರಣೆಗೆ ಸಿದ್ದವಾಗಿರುವ 2022ರ ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಹೀಗಿರಲಿದೆ..

ಹೊಸ ಎಸ್-ಪ್ರೆಸ್ಸೊ ಕಾರು ಮಾದರಿ ಬಿಡುಗಡೆ ಮೂಲಕ ವಿತರಣೆ ಆರಂಭಕ್ಕೆ ಸಿದ್ದವಾಗಿರುವ ಮಾರುತಿ ಸುಜುಕಿ ಕಂಪನಿಯು ಪ್ರಮುಖ ಡೀಲರ್ಸ್‌ ಯಾರ್ಡ್‌ಗಳಲ್ಲಿ ಸ್ಟಾಕ್ ಮಾಡುತ್ತಿದ್ದು, ಹೊಸ ಕಾರಿನ ಸುಧಾರಿತ ತಂತ್ರಜ್ಞಾನ ಸೌಲಭ್ಯಗಳು ಗ್ರಾಹಕರನ್ನು ಸೆಳೆಯಲಿವೆ.

ವಿತರಣೆಗೆ ಸಿದ್ದವಾಗಿರುವ 2022ರ ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಹೀಗಿರಲಿದೆ..

2022ರ ಎಸ್-ಪ್ರೆಸ್ಸೊ ಮಾದರಿಯು ಪ್ರಮುಖ ಆರು ವೆರಿಯೆಂಟ್‌ಗಳೊಂದಿಗೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 4.25 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 5.99 ಲಕ್ಷ ಬೆಲೆ ಹೊಂದಿದೆ.

ವಿತರಣೆಗೆ ಸಿದ್ದವಾಗಿರುವ 2022ರ ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಹೀಗಿರಲಿದೆ..

ಹೊಸ ಕಾರು ಮಾದರಿಯು ಈ ಬಾರಿ ಹಲವಾರು ಹೊಸ ಫೀಚರ್ಸ್ ಸೇರಿದಂತೆ ಹೆಚ್ಚಿನ ಮಟ್ಟದ ಸುರಕ್ಷಾ ಸೌಲಭ್ಯಗಳನ್ನು ಪಡೆದುಕೊಂಡಿದ್ದು, ವಿಎಕ್ಸ್‌ಐ ಪ್ಲಸ್ ಆಪ್ಶನ್ ಎಜಿಎಸ್ ಮಾದರಿಯು ಹೆಚ್ಚಿನ ಮಟ್ಟದ ಫೀಚರ್ಸ್ ಹೊಂದಿದೆ.

ವಿತರಣೆಗೆ ಸಿದ್ದವಾಗಿರುವ 2022ರ ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಹೀಗಿರಲಿದೆ..

ಕೈಗೆಟುಕುವ ಬೆಲೆಯೊಂದಿಗೆ ಎಂಟ್ರಿ ಲೆವಲ್ ಕಾರುಗಳ ಮಾರಾಟದಲ್ಲಿ ಮುಂಚೂಣಿ ಹೊಂದಿರುವ ಎಸ್-ಪ್ರೆಸ್ಸೊ ಮಾದರಿಯು ಎಸ್‌ಯುವಿ ವೈಶಿಷ್ಟ್ಯತೆಯೊಂದಿಗೆ ಹ್ಯಾಚ್‌ಬ್ಯಾಕ್ ಮಾದರಿಗಳಿಂತಲೂ ವಿಭಿನ್ನವಾದ ವಿನ್ಯಾಸ ಹೊಂದಿದ್ದು, ಇದೀಗ ಹೊಸ ಮಾದರಿಯೊಂದಿಗೆ ಕಂಪನಿಯು ಸಾಕಷ್ಟು ಬದಲಾವಣೆಗಳನ್ನು ಪರಿಚಯಿಸಿದೆ.

ವಿತರಣೆಗೆ ಸಿದ್ದವಾಗಿರುವ 2022ರ ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಹೀಗಿರಲಿದೆ..

ಮಾರುತಿ ಸುಜುಕಿ ಹಾರ್ಟ್‌ಟೆಕ್ ಪ್ಲ್ಯಾಟ್‌ಫಾರ್ಮ್ ಅಡಿ ನಿರ್ಮಾಣಗೊಂಡಿರುವ ಹೊಸಕಾರು ಮಾದರಿಯು ಈ ಬಾರಿ ಹೊಸ ತಲೆಮಾರಿನ ವೈಶಿಷ್ಟ್ಯತೆಯ ಕೆ10ಸಿ ಪೆಟ್ರೋಲ್ ಎಂಜಿನ್ ಆಯ್ಕೆ ಪಡೆದುಕೊಂಡಿದ್ದು, ಇದು ಐಡಲ್ ಸ್ಟಾರ್ಟ್/ಸ್ಟಾಪ್ ಸೌಲಭ್ಯದೊಂದಿಗೆ ಹೆಚ್ಚಿನ ಮಟ್ಟದ ಇಂಧನ ದಕ್ಷತೆಯನ್ನು ಖಾತ್ರಿಪಡಿಸುತ್ತದೆ.

ವಿತರಣೆಗೆ ಸಿದ್ದವಾಗಿರುವ 2022ರ ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಹೀಗಿರಲಿದೆ..

ಐಡಲ್ ಸ್ಟಾರ್ಟ್/ಸ್ಟಾಪ್ ಸೌಲಭ್ಯವು ಟ್ರಾಫಿಕ್ ದಟ್ಟಣೆಯಲ್ಲಿ ಕಾರು ನಿಲುಗಡೆ ಸಂದರ್ಭದಲ್ಲಿ 30 ಸೆಕೆಂಡುಗಳಿಗೂ ಹೆಚ್ಚು ಕಾಲ ಕಾರು ನಿಲುಗಡೆ ಮಾಡಿದ್ದಲ್ಲಿ ಎಂಜಿನ್ ಅನ್ನು ಆಟೋಮ್ಯಾಟಿಕ್ ಆಗಿ ನಿಷ್ಕ್ರಿಯಗೊಳಿಸುವ ಮೂಲಕ ಇಂಧನ ವ್ಯರ್ಥವಾಗುವುದನ್ನು ತಡೆಯುತ್ತದೆ.

ವಿತರಣೆಗೆ ಸಿದ್ದವಾಗಿರುವ 2022ರ ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಹೀಗಿರಲಿದೆ..

ಈ ಮೂಲಕ ಹೊಸ ಕಾರು ಮಾದರಿಯು ಬೆಸ್ಟ್ ಇನ್ ಸೆಗ್ಮೆಂಟ್ ಮೈಲೇಜ್ ಖಾತ್ರಿಪಡಿಸಲಿದ್ದು, ಮ್ಯಾನುವಲ್ ಮತ್ತು ಎಜಿಎಸ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ಇದು ಪ್ರತಿ ಲೀಟರ್‌ಗೆ 25.3 ಕಿ.ಮೀ ಮೈಲೇಜ್ ನೀಡುತ್ತದೆ.

ವಿತರಣೆಗೆ ಸಿದ್ದವಾಗಿರುವ 2022ರ ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಹೀಗಿರಲಿದೆ..

ಹಾಗೆಯೇ ಹೊಸ ಕಾರಿನಲ್ಲಿರುವ ಹೊಸ ತಾಂತ್ರಿಕ ಸೌಲಭ್ಯಗಳು ಗಮನಸೆಳೆಯಲಿದ್ದು, ಹೊಸ ಕಾರಿನ ಮುಂಭಾಗದಲ್ಲಿರುವ ಟ್ವಿನ್ ಚೆಂಬರ್ ಹೆಡ್‌ಲ್ಯಾಂಪ್, ಸ್ಪೋಟಿಯಾಗಿರುವ ಫ್ರಂಟ್ ಫಾಸಿಯಾ ಆಕರ್ಷಕವಾಗಿವೆ.

ವಿತರಣೆಗೆ ಸಿದ್ದವಾಗಿರುವ 2022ರ ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಹೀಗಿರಲಿದೆ..

ಹೊರಭಾಗದಲ್ಲಿನ ಬದಲಾವಣೆ ಜೊತೆಗೆ ಕಾರಿನ ಒಳಭಾಗದಲ್ಲೂ ಕೆಲವು ಹೊಸ ತಾಂತ್ರಿಕ ಸೌಲಭ್ಯಗಳನ್ನು ನೀಡಲಾಗಿದ್ದು, ಡೈನಾಮಿಕ್ ಸೆಂಟರ್ ಕನ್ಸೊಲ್ ಜೊತೆ ಸ್ಮಾರ್ಟ್ ಪ್ಲೇ ಬೋರ್ಡ್ ನೀಡಲಾಗಿದೆ. ಜೊತೆಗೆ ಹೊಸ ಕಾರಿನಲ್ಲಿ ಈ ಬಾರಿ ಎಲೆಕ್ಟ್ರಿಕ್ ಅಡ್ಜೆಸ್ಟ್ ಹೊಂದಿರುವ ರಿಯಲ್ ವ್ಯೂ ಮಿರರ್, ಸ್ಟಿರಿಂಗ್ ಮೌಂಟೆಡ್ ಆಡಿಯೋ ಮತ್ತು ವಾಯ್ಸ್ ಕನ್ಸೊಲ್ ನೀಡಲಾಗಿದ್ದು, ಹಿಂಬದಿಯ ಸವಾರರಿಗೆ ಅರಾಮದಾಯಕ ಪ್ರಯಾಣಕ್ಕಾಗಿ ಉತ್ತಮವಾದ ಲೆಗ್‌ರೂಂ ಜೊತೆಗೆ ಹೆಚ್ಚಿನ ಲಗೇಜ್ ತುಂಬಲು ವಿಸ್ತರಿತ ಬೂಟ್ ಸ್ಪೆಸ್ ನೀಡಿದೆ.

ವಿತರಣೆಗೆ ಸಿದ್ದವಾಗಿರುವ 2022ರ ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಹೀಗಿರಲಿದೆ..

ಇನ್ನು ಹೊಸ ಕಾರಿನಲ್ಲಿ ಮಾರುತಿ ಸುಜುಕಿ ಕಂಪನಿಯು 11ಕ್ಕೂ ಹೆಚ್ಚು ಸುರಕ್ಷಾ ಸೌಲಭ್ಯಗಳನ್ನು ಜೋಡಣೆ ಮಾಡಿದ್ದು, ಎಸ್-ಪ್ರೆಸ್ಸೊ ಖರೀದಿದಾರರಿಗೆ ಈ ಬಾರಿ ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಇಎಸ್‌ಪಿ, ಹಿಲ್ ಹೋಲ್ಡ್ ಅಸಿಸ್ಟ್ ಸೇರಿದಂತೆ ಹಲವು ಹೊಸ ಸುರಕ್ಷಾ ಸೌಲಭ್ಯಗಳನ್ನು ನೀಡಿದೆ.

ವಿತರಣೆಗೆ ಸಿದ್ದವಾಗಿರುವ 2022ರ ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಹೀಗಿರಲಿದೆ..

ಭಾರತದಲ್ಲಿ ಕಾರುಗಳ ಸುರಕ್ಷತೆಗೆ ಸಂಬಂಧಿಸಿದಂತೆ ಭಾರತ ಸರ್ಕಾರವು ಹಲವು ಹೊಸ ಮಾನದಂಡಗಳನ್ನು ಕಡ್ಡಾಯಗೊಳಿಸುತ್ತಿರುವುದರಿಂದ ಮಾರುತಿ ಸುಜುಕಿ ಕಂಪನಿಯು ತನ್ನ ಹೊಸ ಮಾದರಿಗಳಲ್ಲಿ ಇದೀಗ ಹೆಚ್ಚಿನ ಮಟ್ಟದ ಸುರಕ್ಷಾ ಫೀಚರ್ಸ್ ನೀಡುತ್ತಿದ್ದು, ಕೆಲವು ಕಡ್ಡಾಯ ಸುರಕ್ಷಾ ಸೌಲಭ್ಯಗಳ ಪರಿಣಾಮ ಕಾರುಗಳ ಬೆಲೆ ಕೂಡಾ ಸಾಕಷ್ಟು ಹೆಚ್ಚಳವಾಗಿರುವುದು ಗ್ರಾಹಕರ ಮೇಲೆ ಹೆಚ್ಚಿನ ಹೊರೆ ಬಿಳುತ್ತಿದೆ.

ವಿತರಣೆಗೆ ಸಿದ್ದವಾಗಿರುವ 2022ರ ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಹೀಗಿರಲಿದೆ..

ಮಾರುತಿ ಸುಜುಕಿ ಕಂಪನಿಯು ಬಜೆಟ್ ಬೆಲೆಯ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿದ್ದರೂ ಇತ್ತೀಚೆಗೆ ಕಂಪನಿಯು ಸುರಕ್ಷಾ ಸೌಲಭ್ಯಗಳ ವಿಚಾರವಾಗಿ ಟೀಕೆಗಳಿಗೆ ಒಳಾಗಿತ್ತು. ಹೀಗಾಗಿ ಕಂಪನಿಯು ಹೊಸ ಕಾರು ಉತ್ಪಾದನೆಯಲ್ಲಿ ಪ್ರಮುಖ ಬದಲಾವಣೆಗಳೊಂದಿಗೆ 2022ರ ಮಾದರಿಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ.

ವಿತರಣೆಗೆ ಸಿದ್ದವಾಗಿರುವ 2022ರ ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಹೀಗಿರಲಿದೆ..

2022ರ ಮಾರುತಿ ಸುಜುಕಿ ಪ್ರಮುಖ ಕಾರುಗಳಲ್ಲಿ ಎಸ್-ಪ್ರೆಸ್ಸೊ ಕೂಡಾ ಹೊಸ ಬದಲಾವಣೆಗಳೊಂದಿಗೆ ಮಾರುಕಟ್ಟೆಗೆ ಪ್ರವೇಶಿಸಿದ್ದು, ಹೊಸ ಸುರಕ್ಷಾ ಸೌಲಭ್ಯಗಳು ಗ್ರಾಹಕರ ಆಯ್ಕೆ ಮೌಲ್ಯವನ್ನು ಹೆಚ್ಚಿಸಿವೆ. ಹೀಗಾಗಿ ಮುಂಬರುವ ದಿನಗಳಲ್ಲಿ ಹೊಸ ಕಾರಿನ ಬೇಡಿಕೆ ಹೇಗೆ ವ್ಯಕ್ತವಾಗಲಿದೆ ಎನ್ನುವುದನ್ನು ಕಾಯ್ದುನೋಡಬೇಕಿದೆ.

Article Published On: Saturday, July 23, 2022, 19:25 [IST]
English summary
New maruti s presso vxi top variant first look walkaround
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+