ಹೊಸ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಕಾರು ಉತ್ಪಾದನೆ ಪ್ರಾರಂಭ
ಮರ್ಸಿಡಿಸ್-ಬೆಂಝ್ ಸಿ-ಕ್ಲಾಸ್ ಬಹಳ ಹಿಂದಿನಿಂದಲೂ ಕಂಪನಿಯ ಸರಣಿಯಲ್ಲಿ ಹೆಚ್ಚು ಮಾರಾಟವಾಗುವ ಮಾದರಿಗಳಲ್ಲಿ ಒಂದಾಗಿದೆ. ಇದೀಗ ಮರ್ಸಿಡಿಸ್ ಬೆಂಝ್ ಕಂಪನಿಯು 5ನೇ ಜನರೇಷನ್ ಸಿ-ಕ್ಲಾಸ್ ಕಾರು ಭಾರತದಲ್ಲಿ ಬಿಡುಗಡೆಗೆ ಸಿದ್ಧವಾಗುತ್ತಿದೆ.

ಮರ್ಸಿಡಿಸ್ ಬೆಂಜ್ ಇಂಡಿಯಾ ಇಂದು ಹೊಸ ಸಿ ಕ್ಲಾಸ್ ಸೆಡಾನ್ ಉತ್ಪಾದನೆಯ ಪ್ರಾರಂಭವನ್ನು ಘೋಷಿಸಿದೆ. ಮೊದಲ ಯುನಿಟ್ ಪುಣೆ ಬಳಿಯ ಚಕನ್‌ನಲ್ಲಿ ಕಂಪನಿಯ ಸ್ಥಾವರವನ್ನು ಹೊರತಂದಿದೆ ಐಷಾರಾಮಿ ಕಾರು ತಯಾರಕ ಮರ್ಸಿಡಿಸ್-ಬೆಂಝ್ ಇಂಡಿಯಾ, ತನ್ನ ಹೊಸ ಸಿ-ಕ್ಲಾಸ್ ಸೆಡಾನ್ ಕಾರು ಖರೀದಿಗಾಗಿ ಬುಕಿಂಗ್ ಅನ್ನು ಬುಧವಾರದಿಂದ (ಏಪ್ರಿಲ್ 13) ಪ್ರಾರಂಭಿಸಲಾಗಿದೆ. ಕಾರಿನ ಬುಕ್ಕಿಂಗ್ ಟೋಕನ್ ಮೊತ್ತ ರೂ.50,000 ನಿಗದಿಪಡಿಸಲಾಗಿದೆ. ಹೊಸ ಮರ್ಸಿಡಿಸ್-ಬೆಂಝ್ ಸಿ-ಕ್ಲಾಸ್ ಕಾರು ಬಾಹ್ಯ ಮತ್ತು ಆಂತರಿಕ ನವೀಕರಣಗಳೊಂದಿಗೆ ಬರುತ್ತದೆ.

ಹೊಸ ತಲೆಮಾರಿನ ಬಹುನಿರೀಕ್ಷಿತ ಮರ್ಸಿಡಿಸ್-ಬೆಂಝ್ ಸಿ-ಕ್ಲಾಸ್ ಮೇ 10, 2022 ರಂದು ಭಾರತದಲ್ಲಿ ಪಾದಾರ್ಪಣೆ ಮಾಡಲಿದೆ. ಇದು ತನ್ನ ಫ್ರ್ಯಾಂಚೈಸ್ ಪಾಲುದಾರ ನೆಟ್ವರ್ಕ್‌ನಲ್ಲಿ ಮತ್ತು ಮರ್ಸಿಡಿಸ್-ಬೆಂಝ್ ಇಂಡಿಯಾ ಆನ್ಲೈನ್ ಸ್ಟೋರ್‌ನಲ್ಲಿ ಡಿಜಿಟಲ್ ಆಗಿ ಲಭ್ಯವಾಗಲಿದೆ.

ಈ ಹೊಸ ತಲೆಮಾರಿನ ಸಿ-ಕ್ಲಾಸ್ ಸೆಡಾನ್ ನಲ್ಲಿ ಸುಧಾರಿತ ತಂತ್ರಜ್ಞಾನವನ್ನು ಬಳಸಲಾಗಿದೆ. ಇದರ ಒಳಾಂಗಣವನ್ನು ಹೊಸ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಇದು ಪ್ರಮುಖ ಎಸ್-ಕ್ಲಾಸ್ ಸೆಡಾನ್ ಅನ್ನು ಹೋಲುತ್ತದೆ. ಹಾಗಾಗಿ ಸಿ-ಕ್ಲಾಸ್ ಅನ್ನು ಸಣ್ಣ ಎಸ್-ಕ್ಲಾಸ್ ಎಂದು ಕರೆಯಲಾಗುತ್ತದೆ.

ವಿನ್ಯಾಸದ ದೃಷ್ಟಿಯಿಂದ ನೋಡುವುದಾದರೆ ಇದು ಪ್ರಮುಖ ಸಿ-ಕ್ಲಾಸ್ ಡಬ್ಲ್ಯೂ 223 ಅನ್ನು ಹೋಲುತ್ತದೆ. ಇದರ ಗಾತ್ರವನ್ನು ನೋಡುವುದಾದರೆ ಹಳೆಯ ಮಾದರಿಗಿಂತ ದೊಡ್ಡದಾಗಿದೆ. ಈ ಮರ್ಸಿಡಿಸ್-ಬೆಂಝ್ ಸಿ-ಕ್ಲಾಸ್ 4,793 ಎಂಎಂ ಉದ್ದ, 2,033 ಎಂಎಂ ಅಗಲ, 1,446 ಎಂಎಂ ಎತ್ತರ ಮತ್ತು 2,865 ಎಂಎಂ ವ್ಹೀಲ್ ಬೇಸ್ ಅನ್ನು ಹೊಂದಿದೆ.

ಒಳಾಂಗಣದ ಬಗ್ಗೆ ಹೇಳುವುದಾದರೆ, ಈ ಸೆಡಾನ್ ಅವಂತ್-ದರ್ಜೆಯ ಕ್ಯಾಬಿನ್ ಅನ್ನು ಹೊಂದಿದೆ. ಇದು 12.3-ಇಂಚಿನ ಡ್ರೈವರ್ ಡಿಸ್ ಪ್ಲೇ ಮತ್ತು ಫಿಂಗರ್‌ಪ್ರಿಂಟ್ ಸೆನ್ಸಾರ್‌ನೊಂದಿಗೆ 11.9-ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ಒಳಗೊಂಡಿರುವ ಸ್ಪ್ಲಿಟ್ ಡಿಸ್ ಪ್ಲೇ ಸೆಟಪ್ ಅನ್ನು ಹೊಂದಿದೆ.

ಇದಲ್ಲದೆ ಸ್ಟೀರಿಂಗ್ ವ್ಹೀಲ್‌ನಲ್ಲಿ ಟಚ್-ಕೆಪಾಸಿಟಿವ್ ಸ್ವಿಚ್‌ಗಳು, ಅಡೆತಡೆಯಿಲ್ಲದ ಸೆಂಟರ್ ಕನ್ಸೋಲ್‌ಗಳು, ಹೊಸ ಏರ್-ಕಾನ್‌ವೆಂಟ್‌ಗಳು, ಆಂಬಿಯೆಂಟ್ ಲೈಟಿಂಗ್, ಸನ್‌ರೂಫ್, ಪವರ್ಡ್ ಫ್ರಂಟ್ ಸೀಟ್‌ಗಳನ್ನು ಒಳಗೊಂಡಿದೆ. ಕೆಲವು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ, ಸಿ-ಕ್ಲಾಸ್ ಸೆಡಾನ್ ಅನ್ನು ಹೈಬ್ರಿಡ್ ಎಂಜಿನ್ ಆಯ್ಕೆ ಸಿ 300 ಇ ನಲ್ಲಿ ನಾಲ್ಕು ಸಿಲಿಂಡರ್ ಆಯ್ಕೆಗಳಾದ C200, C300, C220d, C300d ನಲ್ಲಿ ಮಾರಾಟ ಮಾಡಲಾಗುತ್ತಿದೆ.

ಈ ಎಲ್ಲಾ ಎಂಜಿನ್‌ಗಳು 9-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್‌ಗಳನ್ನು ಹೊಂದಿವೆ. ಭಾರತೀಯ ಮಾರುಕಟ್ಟೆಯಲ್ಲಿ ಕಂಪನಿಯು ಹೊಸ ಸೆಡಾನ್ ಅನ್ನು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಮಾತ್ರ ಲಭ್ಯವಾಗುವಂತೆ ಮಾಡುತ್ತದೆ.

ಮರ್ಸಿಡಿಸ್-ಬೆಂಝ್ ಇಂಡಿಯಾ ಭಾರತದಲ್ಲಿ ತನ್ನ ಅತ್ಯುತ್ತಮ ತ್ರೈಮಾಸಿಕ (ಜನವರಿ-ಮಾರ್ಚ್) ಮಾರಾಟವನ್ನು ವರದಿ ಮಾಡಿದೆ. ಕಂಪನಿಯು ಈ ತ್ರೈಮಾಸಿಕದಲ್ಲಿ 4,022 ಯುನಿಟ್ ಕಾರುಗಳನ್ನು ಜನವರಿಯಿಂದ ಮಾರ್ಚ್ 2022 ರವರೆಗೆ ವಿತರಿಸುವುದರೊಂದಿಗೆ ಅತ್ಯಧಿಕ ಬೆಳವಣಿಗೆಯನ್ನು ದಾಖಲಿಸಿದೆ. ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ (ಜನವರಿ-ಮಾರ್ಚ್) ಮರ್ಸಿಡಿಸ್-ಬೆಂಝ್ ನ ಇ-ಕ್ಲಾಸ್ ಸೆಡಾನ್ ಕಂಪನಿಯ ಹೆಚ್ಚು ಮಾರಾಟವಾದ ಮಾದರಿಯಾಗಿದೆ, ಆದರೆ ಎಸ್‍ಯುವಿ ಮಾದರಿಗಳಲ್ಲಿ GLC ಮತ್ತು GLE ಮಾದರಿಗಳನ್ನು ಗ್ರಾಹಕರು ಹೆಚ್ಚು ಇಷ್ಟಪಟ್ಟಿದ್ದಾರೆ.

ಕಂಪನಿಯ ಪ್ರೀಮಿಯಂ ಎಎಂಜಿ ಮತ್ತು ಸೂಪರ್ ಐಷಾರಾಮಿ ಮಾದರಿಗಳ ಬೇಡಿಕೆಯು ಶೇಕಡಾ 35 ರಷ್ಟು ಹೆಚ್ಚಾಗಿದೆ. ಮರ್ಸಿಡಿಸ್-ಬೆಂಝ್ ಈ ತಿಂಗಳಿನಿಂದ ತನ್ನ ವಾಹನಗಳ ಬೆಲೆಯ ಹೆಚ್ಚಳವನ್ನು ಘೋಷಿಸಬಹುದು. ಈ ಐಷಾರಾಮಿ ಕಾರು ತಯಾರಕ ಸಂಸ್ಥೆಯು ಏಪ್ರಿಲ್ 2022 ರಿಂದ ತನ್ನ ಕಾರುಗಳ ಬೆಲೆಯನ್ನು ಶೇಕಡಾ 3 ರಷ್ಟು ಹೆಚ್ಚಿಸುವುದಾಗಿ ಈ ಹಿಂದೆಯೇ ಹೇಳಿತ್ತು. ಹೊಸ ವರ್ಷದ ಆರಂಭದಿಂದಲೂ ಕಂಪನಿಯು ತನ್ನ ಕಾರುಗಳ ಬೆಲೆಯನ್ನು ಎರಡನೇ ಬಾರಿಗೆ ಹೆಚ್ಚಿಸಿದೆ ಎಂಬುದು ಗಮನಿಸಬೇಕಾದ ಸಂಗತಿ. Mercedes-Benz ಇಂಡಿಯಾ ಪ್ರಕಾರ ರೂ.50,000 ರಿಂದ ರೂ.5 ಲಕ್ಷದವರೆಗೆ ಬೆಲೆ ಏರಿಕೆಯಾಗಬಹುದು.

ಮರ್ಸಿಡಿಸ್-ಬೆಂಝ್ ತನ್ನ ಹೊಸ ಎಲೆಕ್ಟ್ರಿಕ್ ಎಸ್‍ಯುವಿ ಇಕ್ಯೂಎಸ್ ಅನ್ನು ಅನಾವರಣಗೊಳಿಸಿದೆ. ಇದು ಕಂಪನಿಯ ಪ್ರಮುಖ ಎಲೆಕ್ಟ್ರಿಕ್ ಎಸ್‍ಯುವಿ ಆಗಿದ್ದು ಇದನ್ನು 7-ಸೀಟರ್ ಆಯ್ಕೆಯಲ್ಲಿ ಪರಿಚಯಿಸಲಾಗಿದೆ. ಕಂಪನಿಯು ಆರಂಭದಲ್ಲಿ ಈ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಯುರೋಪ್ ಮತ್ತು ಅಮೆರಿಕದ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲಿದೆ. ಮರ್ಸಿಡಿಸ್-ಬೆಂಝ್ ತನ್ನ ಹೊಸ ಇಕ್ಯೂಎಸ್ ಎಲೆಕ್ಟ್ರಿಕ್ ಎಸ್‍ಯುವಿ ಕಂಪನಿಯ ಅತ್ಯಂತ ವಿಶೇಷವಾದ ಎಲೆಕ್ಟ್ರಿಕ್ ಎಸ್‌ಯುವಿ ಎಂದು ಕಂಪನಿ ಹೇಳಿಕೊಂಡಿದೆ. ಇದನ್ನು ಅತ್ಯಂತ ಶಕ್ತಿಶಾಲಿ ಬ್ಯಾಟರಿ ಮತ್ತು ಎಲೆಕ್ಟ್ರಿಕ್ ಪವರ್‌ಟ್ರೇನ್‌ನೊಂದಿಗೆ ಪರಿಚಯಿಸಲಾಗಿದೆ.

ಮರ್ಸಿಡಿಸ್-ಬೆಂಝ್ ತನ್ನ ಹೊಸ ಎಲೆಕ್ಟ್ರಿಕ್ ಇಕ್ಯೂಎಸ್ ಎಸ್‍ಯುವಿ ಕಂಪನಿಯ ಅತ್ಯಂತ ವಿಶೇಷವಾದ ಎಲೆಕ್ಟ್ರಿಕ್ ಎಸ್‌ಯುವಿ ಎಂದು ಕಂಪನಿ ಹೇಳಿಕೊಂಡಿದೆ. ಇದನ್ನು ಅತ್ಯಂತ ಶಕ್ತಿಶಾಲಿ ಬ್ಯಾಟರಿ ಮತ್ತು ಎಲೆಕ್ಟ್ರಿಕ್ ಪವರ್‌ಟ್ರೇನ್‌ನೊಂದಿಗೆ ಪರಿಚಯಿಸಲಾಗಿದೆ. ಇನ್ನು ಹೊಸ ಮರ್ಸಿಡಿಸ್-ಬೆಂಝ್ ಸಿ-ಕ್ಲಾಸ್ ಭಾರತೀಯ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ


Click it and Unblock the Notifications








