ಭಾರತದ ಮಾರುಕಟ್ಟೆಗೆ ಈ ವರ್ಷ ಬರಲಿರುವ ಹೊಸ ಮಿಡ್-ಸೈಜ್ ಎಸ್‌ಯುವಿಗಳು

ಮಿಡ್-ಸೈಜ್ ಎಸ್‌ಯುವಿ ವಿಭಾಗವು ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ ಹಾಟೆಸ್ಟ್ ವಿಭಾಗಗಳಲ್ಲಿ ಒಂದಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಹಲವಾರು ತಯಾರಕರು ಇಂತಹ ಕಾರುಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುತ್ತಿದ್ದಾರೆ. ಆಟೋ ಎಕ್ಸ್‌ಪೋ 2023 ಇದೇ ತಿಂಗಳು ನಡೆಯಲಿದ್ದು, ಅಲ್ಲಿ ವಿವಿಧ ಮಿಡ್-ಸೈಜ್ ಎಸ್‌ಯುವಿಗಳನ್ನು ಅನಾವರಣಗೊಳಲಿದ್ದು, ನಿರೀಕ್ಷೆಗಳು ಹೆಚ್ಚಿವೆ.

ಹುಂಡೈ ಕ್ರೆಟಾ ಫೇಸ್‌ಲಿಫ್ಟ್:
ಕ್ರೆಟಾ ಭಾರತದಲ್ಲಿ ಹ್ಯುಂಡೈನ ಅತಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದ್ದು, ಹ್ಯುಂಡೈ ಕ್ರೆಟಾಗಾಗಿ ಮಿಡ್-ಲೈಫ್ ಫೇಸ್‌ಲಿಫ್ಟ್ ಅನ್ನು ಸಿದ್ಧಪಡಿಸುತ್ತಿದೆ. ಇದು ಈಗಾಗಲೇ ವಿವಿಧ ಮಾರುಕಟ್ಟೆಗಳಲ್ಲಿ ಲಭ್ಯವಿದೆ. ಮುಂಭಾಗದಲ್ಲಿ ಟಕ್ಸನ್-ಪ್ರೇರಿತ ಪ್ಯಾರಾಮೆಟ್ರಿಕ್ ಜ್ಯುವೆಲ್ ಗ್ರಿಲ್‌ನಂತಹ ಸ್ಟೈಲಿಂಗ್ ನವೀಕರಣಗಳು ಮತ್ತು ಪ್ರತ್ಯೇಕವಾದ ಟೈಲ್ ಲೈಟ್‌ಗಳನ್ನು ಹೊಂದಬಹುದು ಎಂದು ನಿರೀಕ್ಷಿಸಲಾಗಿದೆ. ಹುಂಡೈ ಕ್ರೆಟಾ ಫೇಸ್‌ಲಿಫ್ಟ್ ADAS (ಸುಧಾರಿತ ಚಾಲಕ-ಸಹಾಯ ವ್ಯವಸ್ಥೆ) ಸುರಕ್ಷತಾ ತಂತ್ರಜ್ಞಾನದೊಂದಿಗೆ ಬರಬಹುದು.

ಭಾರತದ ಮಾರುಕಟ್ಟೆಗೆ ಈ ವರ್ಷ ಬರಲಿರುವ ಹೊಸ ಮಿಡ್-ಸೈಜ್ ಎಸ್‌ಯುವಿಗಳು

ಹುಂಡೈ ಕ್ರೆಟಾ ಫೇಸ್‌ಲಿಫ್ಟ್ ಪವರ್‌ಟ್ರೇನ್‌ನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಹೇಳಲಾಗಿದೆ. ಹ್ಯುಂಡೈ ಅದೇ 1.5-ಲೀಟರ್ NA ಪೆಟ್ರೋಲ್ (115 PS), 1.4-ಲೀಟರ್ ಟರ್ಬೊ ಪೆಟ್ರೋಲ್ (140 PS) ಮತ್ತು 1.5-ಲೀಟರ್ ಡೀಸೆಲ್ (115 PS) ಎಂಜಿನ್ ಆಯ್ಕೆಗಳೊಂದಿಗೆ ಮ್ಯಾನುವಲ್ ಮತ್ತು ಆಟೋಮೆಟಿಕ್ ಟ್ರಾನ್ಸ್ಮಿಷನ್ ಹೊಂದಿದೆ. ಹ್ಯುಂಡೈ, ಈ ಆಟೋ ಎಕ್ಸ್‌ಪೋದಲ್ಲಿ ಹೊಸ ಕ್ರೆಟಾವನ್ನು ಅನಾವರಗೊಳಿಸಬಹುದು. ಗ್ರಾಹಕರಿಗೆ ಹುಂಡೈ ಡೀಲರ್‌ಶಿಪ್ ಮೂಲಕ ಏಪ್ರಿಲ್‌ನಲ್ಲಿ ಖರೀದಿಗೆ ಸಿಗಲಿದೆ.

ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್:
ಕಿಯಾ ಸೆಲ್ಟೋಸ್ ಕೂಡ ಶೀಘ್ರದಲ್ಲೇ ಮಿಡ್-ಲೈಫ್ ಮೇಕ್ ಓವರ್ ಪಡೆಯಲಿದೆ ಎನ್ನಲಾಗಿದೆ. ಆಟೋ ಎಕ್ಸ್‌ಪೋದಲ್ಲಿ ಚೊಚ್ಚಲ ಬಾರಿಗೆ ಅನಾವರಣಗೊಳಿಸಬಹುದು. ನವೀಕರಿಸಿದ ಕಿಯಾ ಸೆಲ್ಟೋಸ್ ಕೆಲವು ತಿಂಗಳುಗಳ ಹಿಂದೆ ಜಾಗತಿಕ ಮಾರುಕಟ್ಟೆಗೆ ಪ್ರವೇಶವನ್ನು ಮಾಡಿತು. ಮುಂಭಾಗದಲ್ಲಿ ಸ್ವಲ್ಪ ದೊಡ್ಡದಾದ ಗ್ರಿಲ್, ಹೊಸ ಎಲ್ಇಡಿ ಡಿಆರ್ಎಲ್ ಪ್ಲೇಸ್‌ಮೆಂಟ್, ಸೊಗಸಾಗಿ ಕಾಣುವ ಅಲಾಯ್ ವೀಲ್ಸ್ ಮತ್ತು ಟೈಲ್ ಲೈಟ್‌ಗಳೊಂದಿಗೆ ಮರು ವಿನ್ಯಾಸಗೊಳಿಸಲಾಗಿದೆ ಎಂದು ಹೇಳಲಾಗಿದೆ

ಕಿಯಾ ಸೆಲ್ಟೋಸ್ ಕೂಡ 1.5 - ಲೀಟರ್ ಪೆಟ್ರೋಲ್, 1.4 - ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5 - ಲೀಟರ್ ಡೀಸೆಲ್ ಪವರ್‌ಟ್ರೇನ್‌ ಅನ್ನು ಹೊಂದಿರಬಹುದು. ಫ್ರಂಟ್-ವೀಲ್ ಡ್ರೈವ್ ಕಾನ್ಫಿಗರೇಶನ್‌, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಅಡಿಶನಲ್ ಕನೆಕ್ಟ್ದ್-ಕಾರ್ ಹಾಗೂ ದೊಡ್ಡ ವಿಹಂಗಮ ಸನ್‌ರೂಫ್ ಸೇರಿದಂತೆ ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ಹೇಳಬಹುದು. ಮುಂಬರುವ ತಿಂಗಳುಗಳಲ್ಲಿ ದೇಶೀಯ ಮಾರುಕಟ್ಟೆಗೆ ಬರುವ ಸಾಧ್ಯತೆಯಿದ್ದು, ಇವೆಲ್ಲವು ಗ್ರಾಹಕರಿಗೆ ಖಂಡಿತ ಇಷ್ಟವಾಗುತ್ತದೆ.

ಎಂಜಿ ಹೆಕ್ಟರ್ ಫೇಸ್‌ಲಿಫ್ಟ್:
ಎಂಜಿ ಮೋಟಾರ್ ಇಂಡಿಯಾ ಈಗಾಗಲೇ ಹೆಕ್ಟರ್ ಫೇಸ್‌ಲಿಫ್ಟ್ ಉತ್ಪಾದನೆಯನ್ನು ಪ್ರಾರಂಭಿಸಿದೆ. ಹೊಸ ಎಂಜಿ ಹೆಕ್ಟರ್ ಈ ತಿಂಗಳು ಭಾರತದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ, ಆದಾಗ್ಯೂ, ನಿರ್ದಿಷ್ಟ ದಿನಾಂಕವನ್ನು ಇನ್ನೂ ದೃಢಪಡಿಸಿಲ್ಲ. ನವೀಕರಿಸಿದ ಎಸ್‌ಯುವಿಯೊಂದಿಗೆ ಎಂಜಿ ಕೆಲವು ಸುರಕ್ಷತಾ ವೈಶಿಷ್ಟ್ಯಗಳನ್ನು (ADAS) ಸಹ ನೀಡುತ್ತದೆ. ಮುಂಭಾಗದಲ್ಲಿ ಹೊಸ ದೊಡ್ಡ ಗ್ರಿಲ್ ಅನ್ನು ಒಳಗೊಂಡಿರಲಿದ್ದು, ಮರು-ವಿನ್ಯಾಸಗೊಳಿಸಲಾದ ಹೆಡ್‌ಲ್ಯಾಂಪ್‌ ಅನ್ನು ಹೊಂದಿದ್ದು, ಹೊಸ ಹೆಕ್ಟರ್ 14-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ ಸೇರಿ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

ಟಾಟಾ ಹ್ಯಾರಿಯರ್ ಫೇಸ್‌ಲಿಫ್ಟ್:
ಟಾಟಾ ಹ್ಯಾರಿಯರ್ ಫೇಸ್‌ಲಿಫ್ಟ್ ಅನ್ನು ಕಳೆದ ಕೆಲವು ವಾರಗಳಲ್ಲಿ ಒಂದೆರಡು ಬಾರಿ ಪರೀಕ್ಷೆಗೆ ಒಳಪಡಿಸಲಾಗಿದೆ. ಇದನ್ನು ಗಮನಿಸಿದಾಗ ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಬಹುದು ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ. ಆಟೋ ಎಕ್ಸ್‌ಪೋ ಇದೇ ತಿಂಗಳು ದೆಹಲಿಯಲ್ಲಿ ನಡೆಯಲಿರುವ ಆಟೋ ಎಕ್ಸ್‌ಪೋದಲ್ಲಿ ಟಾಟಾ ಮೋಟಾರ್ಸ್ ಹೊಸ ಹ್ಯಾರಿಯರ್ ಪ್ರದರ್ಶಿಬಹುದು ಎಂದು ನಿರೀಕ್ಷಿಸಲಾಗಿದ್ದು, ಆ ನಂತರ ಭಾರತದ ಮಾರುಕಟ್ಟೆಗೆ ಬಿಡುಗಡೆ ದಿನಾಂಕವನ್ನು ನಿಗದಿಪಡಿಸಬಹುದು.

ಮಾರುಕಟ್ಟೆಗೆ ಬರುವ ಹ್ಯಾರಿಯರ್‌ನ ಬಾಹ್ಯ ವಿನ್ಯಾಸಗಳು ಬಹುತೇಕ ಹಿಂದಿನ ಮಾದರಿಯಂತೆ ಇರುತ್ತದೆ. ಒಳಭಾಗದಲ್ಲಿ, ಟಾಟಾ ಹೊಸ ಎಸ್‌ಯುವಿಯನ್ನು ದೊಡ್ಡ ಇನ್ಫೋಟೈನ್‌ಮೆಂಟ್ ಸ್ಕ್ರೀನ್, ಪರಿಷ್ಕೃತ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಕೆಲವು ಹೆಚ್ಚುವರಿ ವೈಶಿಷ್ಟ್ಯಗಳನ್ನು ಹೊಂದಿರಬಹುದು. ಈ ಪಟ್ಟಿಯಲ್ಲಿರುವ ಇತರೆ SUVಗಳಂತೆ, ಹ್ಯಾರಿಯರ್ ಫೇಸ್‌ಲಿಫ್ಟ್ ಅನ್ನು ಸಹ ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್) ತಂತ್ರಜ್ಞಾನದೊಂದಿಗೆ ನೀಡಲಾಗುತ್ತದೆ ಎಂದು ಅಂದಾಜಿಸಲಾಗಿದೆ.

More from DriveSpark

Article Published On: Sunday, January 1, 2023, 9:00 [IST]
English summary
New mid size suvs coming to the indian market this year
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+