ಕೈಗೆಟುಕುವ ಬೆಲೆಯಲ್ಲಿ ಹೊಸ ಟಿಯಾಗೋ ಎಲೆಕ್ಟ್ರಿಕ್ ಕಾರು ಬಿಡುಗಡೆಗೊಳಿಸಲು ಸಜ್ಜಾದ ಟಾಟಾ

ದೇಶದಲ್ಲಿ ಇಂಧನ ಬೆಲೆಗಳು ಗಗನಕ್ಕೆರಿದೆ. ಏರುತ್ತಿರುವ ಇಂಧನ ಬೆಲೆಗಳಿಂದ ಪಾರಾಗಲು ಜನರು ಪರ್ಯಾಯ ಆಯ್ಕೆಗಳನ್ನು ಹುಡುಕಲಾರಂಭಿಸಿದ್ದಾರೆ. ಇದರ ಪರಿಣಾಮವಾಗಿ ಹೆಚ್ಚಿನ ಜನರು ಈಗ ಎಲೆಕ್ಟ್ರಿಕ್ ಕಾರುಗಳನ್ನು ಸಹ ಪರಿಗಣಿಸುತ್ತಿದ್ದಾರೆ.

ಕೈಗೆಟುಕುವ ಬೆಲೆಯಲ್ಲಿ ಹೊಸ ಟಿಯಾಗೋ ಎಲೆಕ್ಟ್ರಿಕ್ ಕಾರು ಬಿಡುಗಡೆಗೊಳಿಸಲು ಸಜ್ಜಾದ ಟಾಟಾ

ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯನ್ನು ಪಡೆದುಕೊಳ್ಳುತ್ತಿದೆ. ಇತ್ತೀಚೆಗೆ ಹೆಚ್ಚಿನ ಗ್ರಾಹಕರು ಎಲೆಕ್ಟ್ರಿಕ್ ಕಾರುಗಳ ಕಡೆ ಮುಖ ಮಾಡುತ್ತಿದ್ದಾರೆ. ಈ ವೇಳೆ ಟಾಟಾ ಕಂಪನಿಯು ಎಲೆಕ್ಟ್ರಿಕ್ ಕಾರುಗಳ ವಿಭಾಗದಲ್ಲಿ ಪಾರುಪತ್ಯ ಮುಂದುವರೆಸಲು ಪ್ರಯತ್ನಿಸುತ್ತಿದೆ. ಸದ್ಯ ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ವಿಭಾಗದಲ್ಲಿ ಟಾಟಾ ಮೇಲುಗೈಯನ್ನು ಸಾಧಿಸಿದೆ. ಟಾಟಾ ಮೋಟಾರ್ಸ್ ಕಂಪನಿಯು ನಾಳೆ ಹೊಸ ಟಿಯಾಗೋ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ.

ಕೈಗೆಟುಕುವ ಬೆಲೆಯಲ್ಲಿ ಹೊಸ ಟಿಯಾಗೋ ಎಲೆಕ್ಟ್ರಿಕ್ ಕಾರು ಬಿಡುಗಡೆಗೊಳಿಸಲು ಸಜ್ಜಾದ ಟಾಟಾ

ಟಾಟಾ ಟಿಗೊರ್ ಇವಿ ಮತ್ತು ನೆಕ್ಸಾನ್ ಇವಿ ಬಿಡುಗಡೆಯ ನಂತರ ಮೂರನೇ ಎಲೆಕ್ಟ್ರಿಕ್ ಮಾದರಿಯಾಗಿ ಟಿಯಾಗೋ ಇವಿಯನ್ನು ಬಿಡುಗಡೆಗೊಳಿಸಲಿದೆ. ಇದೀಗ ಟಾಟಾ ಮೋಟಾರ್ಸ್ ಕಂಪನಿಯು ಈ ಹೊಸ ಟಿಯಾಗೋ ಎಲೆಕ್ಟ್ರಿಕ್ ಕಾರಿನ ಟೀಸರ್ ವಿಡಿಯೋವನ್ನು ಬಿಡುಗಡೆಗೊಳಿಸಿದೆ.

ಕೈಗೆಟುಕುವ ಬೆಲೆಯಲ್ಲಿ ಹೊಸ ಟಿಯಾಗೋ ಎಲೆಕ್ಟ್ರಿಕ್ ಕಾರು ಬಿಡುಗಡೆಗೊಳಿಸಲು ಸಜ್ಜಾದ ಟಾಟಾ

ಈ ಟೀಸರ್ ವಿಡಿಯೋದಲ್ಲಿ ಟಿಯಾಗೋ ಎಲೆಕ್ಟ್ರಿಕ್ ಕಾರಿನ ಹೊರಭಾಗವನ್ನು ಬಹಿರಂಗಪಡಿಸಿದ್ದಾರೆ. ಈ ಟಿಯಾಗೋ ಎಲೆಕ್ಟ್ರಿಕ್ ಕಾರಿನ ಎರಡೂ ಬದಿಯಲ್ಲಿ ಟ್ರೈ-ಆರೋ ಪ್ಯಾಟರ್ನ್‌ಗಳೊಂದಿಗೆ ಬ್ಲ್ಯಾಕ್ ಬಣ್ಣದ ಮುಂಭಾಗದ ಗ್ರಿಲ್ ಅನ್ನು ಹೊಂದಿದೆ. ಇದಲ್ಲದೆ, ಸಾಮಾನ್ಯ ಮಾದರಿಗಳಿಂದ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಅನ್ನು ಮತ್ತಷ್ಟು ಪ್ರತ್ಯೇಕಿಸಲು ಮುಂಭಾಗದ ಗ್ರಿಲ್‌ನ ಬಲಭಾಗದಲ್ಲಿ '.EV' ಬ್ಯಾಡ್ಜ್ ಕೂಡ ಇದೆ.

ಕೈಗೆಟುಕುವ ಬೆಲೆಯಲ್ಲಿ ಹೊಸ ಟಿಯಾಗೋ ಎಲೆಕ್ಟ್ರಿಕ್ ಕಾರು ಬಿಡುಗಡೆಗೊಳಿಸಲು ಸಜ್ಜಾದ ಟಾಟಾ

ಈ ಹಿಂದೆ, ಟಾಟಾ ಟಿಯಾಗೊ ಇವಿ ವಾಹನ ತಯಾರಕರ ZConnect ಕನೆಕ್ಟಿವಿಟಿ ಕಾರ್ ತಂತ್ರಜ್ಞಾನ, ಲೆಥೆರೆಟ್ ಸೀಟ್‌ಗಳು, ಕ್ರೂಸ್ ಮೋಡ್ ಮತ್ತು ಒನ್-ಪೆಡಲ್ ಡ್ರೈವ್ ಅನ್ನು ಒಳಗೊಂಡಿರುತ್ತದೆ ಎಂದು ಟಾಟಾ ಮೋಟಾರ್ಸ್ ಬಹಿರಂಗಪಡಿಸಿತ್ತು.

ಕೈಗೆಟುಕುವ ಬೆಲೆಯಲ್ಲಿ ಹೊಸ ಟಿಯಾಗೋ ಎಲೆಕ್ಟ್ರಿಕ್ ಕಾರು ಬಿಡುಗಡೆಗೊಳಿಸಲು ಸಜ್ಜಾದ ಟಾಟಾ

ಈ ಹೊಸ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಕ್ರೂಸ್ ಕಂಟ್ರೋಲ್ ಮತ್ತು ಮಲ್ಟಿ-ಮೋಡ್ ರಿಜೆನ್ ಫಂಕ್ಷನ್‌ನಂತಹ ಫೀಚರ್ಸ್ ಗಳೊಂದಿಗೆ ಸಜ್ಜುಗೊಂಡಿದೆ. ಇನ್ಫೋಟೈನ್‌ಮೆಂಟ್ ಸಿಸ್ಟಂನ ಕೆಳಗಿರುವ ಡ್ಯಾಶ್‌ಬೋರ್ಡ್‌ನಲ್ಲಿ ರಿ-ಜನರೇಷನ್ ಮೋಡ್‌ಗಳ ಕಂಟ್ರೋಲ್ ಗಳನ್ನು ಹೊಂದಿರಲಿದೆ,

ಕೈಗೆಟುಕುವ ಬೆಲೆಯಲ್ಲಿ ಹೊಸ ಟಿಯಾಗೋ ಎಲೆಕ್ಟ್ರಿಕ್ ಕಾರು ಬಿಡುಗಡೆಗೊಳಿಸಲು ಸಜ್ಜಾದ ಟಾಟಾ

ಮೇಲೆ ತಿಳಿಸಲಾದ ವೈಶಿಷ್ಟ್ಯಗಳು ಟಿಗೊರ್ ಇವಿ ನಲ್ಲಿ ಲಭ್ಯವಿಲ್ಲ. ಆದರೆ ಟಿಯಾಗೋ ಇವಿ ಈ ಹೊಸ ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಂಡಿದೆ. ಗಮನಾರ್ಹವಾಗಿ, ಟಾಟಾ ನೆಕ್ಸಾನ್ ಮತ್ತು ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್ ಎರಡೂ ಈ ಎರಡೂ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ. ಟಾಟಾ ಎಲೆಕ್ಟ್ರಿಕ್ ಟಿಯಾಗೊಗೆ ಹಲವಾರು ವೈಶಿಷ್ಟ್ಯಗಳನ್ನು ಹೊಂದಿರುತ್ತದೆ ಎಂದು ದೃಢಪಡಿಸಿದೆ.

ಕೈಗೆಟುಕುವ ಬೆಲೆಯಲ್ಲಿ ಹೊಸ ಟಿಯಾಗೋ ಎಲೆಕ್ಟ್ರಿಕ್ ಕಾರು ಬಿಡುಗಡೆಗೊಳಿಸಲು ಸಜ್ಜಾದ ಟಾಟಾ

ಟಾಟಾ ಟಿಗೊರ್ ಇವಿ ಗಿಂತ ಚಿಕ್ಕದಾದ ಬ್ಯಾಟರಿ ಪ್ಯಾಕ್ ಜೊತೆಗೆ ಸಣ್ಣ ಕಾಸ್ಮೆಟಿಕ್ ಬದಲಾವಣೆಗಳನ್ನು ಪಡೆಯುತ್ತದೆ. ಎರಡನೆಯದು 26kWh ಬ್ಯಾಟರಿ ಪ್ಯಾಕ್‌ನೊಂದಿಗೆ ಸಿಂಗಲ್ ಚಾರ್ಜ್‌ನಲ್ಲಿ 306 ಕಿ.ಮೀ ವರೆಗೆ ರೇಂಜ್ ಅನ್ನು ನೀಡುತ್ತದೆ. ಆದರೆ ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರು ಸುಮಾರು 300 ಕಿ.ಮೀ ರೇಂಜ್ ಅನ್ನು ನೀಡುವ ನಿರೀಕ್ಷೆಯಿದೆ ಬ್ಯಾಟರಿ ಪ್ಯಾಕ್‌ನೊಂದಿಗೆ, ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಟಿಗೋರ್ ಇವಿಗಿಂತ ಸ್ವಲ್ಪ ಕಡಿಮೆ ಪವರ್ ಮತ್ತು ಟಾರ್ಕ್ ಅನ್ನು ಉತ್ಪಾದಿಸಬಹುದು.

ಕೈಗೆಟುಕುವ ಬೆಲೆಯಲ್ಲಿ ಹೊಸ ಟಿಯಾಗೋ ಎಲೆಕ್ಟ್ರಿಕ್ ಕಾರು ಬಿಡುಗಡೆಗೊಳಿಸಲು ಸಜ್ಜಾದ ಟಾಟಾ

ಈ ಹೊಸ ಟಿಯಾಗೋ ಎಲೆಕ್ಟ್ರಿಕ್ ಕಾರಿನ ವಿನ್ಯಾಸದಲ್ಲಿ ಕೆಲವು ಬದಲಾವಣೆಗಳನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಕಾರಿನ ವಿನ್ಯಾಸವು ಆಕರ್ಷಕವಾಗಿರಲಿದೆ. ಬೆಲೆಗೆ ಸಂಬಂಧಿಸಿದಂತೆ, ಈ ಹೊಸಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರಿನ ಬೆಲೆಯು ಸುಮಾರು 10 ಲಕ್ಷ ರೂ (ಎಕ್ಸ್ ಶೋ ರೂಂ) ವೆಚ್ಚವಾಗಲಿದೆ.

ಕೈಗೆಟುಕುವ ಬೆಲೆಯಲ್ಲಿ ಹೊಸ ಟಿಯಾಗೋ ಎಲೆಕ್ಟ್ರಿಕ್ ಕಾರು ಬಿಡುಗಡೆಗೊಳಿಸಲು ಸಜ್ಜಾದ ಟಾಟಾ

ಈ ಬೆಲೆಯಲ್ಲಿ ಬಿಡುಗಡೆಯಾದರೆ, ಇದು ದೇಶದ ಅತ್ಯಂತ ಕೈಗೆಟುಕುವ ಎಲೆಕ್ಟ್ರಿಕ್ ಕಾರ್ ಆಗುತ್ತದೆ. ಪ್ರಸ್ತುತ, ಟಿಗೋರ್ ಇವಿ ರೂ.12.49 ಲಕ್ಷ - ರೂ 13.64 ಲಕ್ಷ (ಎಲ್ಲಾ, ಎಕ್ಸ್ ಶೋ ರೂಂ ದೆಹಲಿ) ಬೆಲೆಯ ವ್ಯಾಪ್ತಿಯಲ್ಲಿ ಲಭ್ಯವಿರುತ್ತದೆ,

ಕೈಗೆಟುಕುವ ಬೆಲೆಯಲ್ಲಿ ಹೊಸ ಟಿಯಾಗೋ ಎಲೆಕ್ಟ್ರಿಕ್ ಕಾರು ಬಿಡುಗಡೆಗೊಳಿಸಲು ಸಜ್ಜಾದ ಟಾಟಾ

ಇನ್ನು ಟಾಟಾ ಮೋಟಾರ್ಸ್ ಕಂಪನಿಯು 2026ರ ಮಾರ್ಚ್ ವೇಳೆಗೆ 10 ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡುವ ಯೋಜನೆಯನ್ನು ಪ್ರಕಟಿಸಿದೆ. ಈ ಯೋಜನೆಯು ಹೊಸ ವಾಹನ ಫ್ಲಾಟ್ ಫಾರ್ಮ್ ಮತ್ತು ಸಂಬಂಧಿತ ತಂತ್ರಜ್ಞಾನ ಮತ್ತು ಮೂಲಸೌಕರ್ಯಕ್ಕಾಗಿ ಸುಮಾರು $2 ಬಿಲಿಯನ್ ಹೂಡಿಕೆಯನ್ನು ಮಾಡಲಿದೆ. ಭವಿಷ್ಯದ ಟಾಟಾ ಎಲೆಕ್ಟ್ರಿಕ್ ಕಾರುಗಳು ಕನಿಷ್ಠ 500 ಕಿಮೀ ರೇಂಜ್ ಮತ್ತು ಹೆಚ್ಚಿನ ಪ್ರೇಕ್ಷಕರನ್ನು ಗುರಿಯಾಗಿಸಲು ಸುಧಾರಿತ ತಂತ್ರಜ್ಞಾನದ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ.

ಕೈಗೆಟುಕುವ ಬೆಲೆಯಲ್ಲಿ ಹೊಸ ಟಿಯಾಗೋ ಎಲೆಕ್ಟ್ರಿಕ್ ಕಾರು ಬಿಡುಗಡೆಗೊಳಿಸಲು ಸಜ್ಜಾದ ಟಾಟಾ

ಕಂಪನಿಯು ತನ್ನ ವಾರ್ಷಿಕ ಇವಿಗಳ ಉತ್ಪಾದನೆಯನ್ನು ಈ ಆರ್ಥಿಕ ವರ್ಷದಲ್ಲಿ 80,000 ಯುನಿಟ್‌ಗಳಿಗೆ ಹೆಚ್ಚಿಸುವ ಗುರಿಯನ್ನು ಹೊಂದಿದೆ. ಇನ್ನು ಟಾಟಾ ಟಿಯಾಗೊ ಇವಿ ಅನ್ನು ಮೊದಲು 2018 ಆಟೋ ಎಕ್ಸ್‌ಪೋದಲ್ಲಿ ಪರಿಚಯಿಸಲಾಯಿತು. ಆದರೆ ಈ ಕಾರನ್ನು ಹಿಂದೆ ಇಟ್ಟುಕೊಂಡು ಕಂಪನಿಯು ಮೊದಲು ನೆಕ್ಸನ್ ಇವಿ ಮತ್ತು ಟಿಗೋರ್ ಇವಿಯನ್ನು ಬಿಡುಗಡೆ ಮಾಡಿತು. ಟಿಯಾಗೋ ಇವಿ ರಿಜನರೇಟ್ ವಿಧಾನಗಳಲ್ಲಿ ಪ್ಯಾಕ್ ಮಾಡುತ್ತದೆ ಮತ್ತು ಒಂದು ಪೆಡಲ್ ಡ್ರೈವಿಂಗ್ ಅನ್ನು ಸಹ ನೀಡುತ್ತದೆ, ಟಾಟಾ ಮೋಟಾರ್ಸ್ ಹ್ಯಾಚ್‌ಬ್ಯಾಕ್‌ಗಳು, ಸೆಡಾನ್‌ಗಳು ಮತ್ತು ಎಸ್‍ಯುವಿಗಳಲ್ಲಿ ಎಲ್ಲಾ ಮೂರು ವಿಭಾಗಗಳಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆ ಮಾಡಲು ಮುಂದಾಗಿದೆ.

ಕೈಗೆಟುಕುವ ಬೆಲೆಯಲ್ಲಿ ಹೊಸ ಟಿಯಾಗೋ ಎಲೆಕ್ಟ್ರಿಕ್ ಕಾರು ಬಿಡುಗಡೆಗೊಳಿಸಲು ಸಜ್ಜಾದ ಟಾಟಾ

ಟಿಗೊರ್ ಇವಿ ಮತ್ತು ನೆಕ್ಸಾನ್ ಇವಿ ಈಗಾಗಲೇ ಸೆಡಾನ್ ಮತ್ತು ಎಸ್‍ಯುವಿವಿಭಾಗದಲ್ಲಿ ಲಭ್ಯವಿದ್ದು, ಕಂಪನಿಯ ಮುಂದಿನ ಎಲೆಕ್ಟ್ರಿಕ್ ಕಾರು ಟಿಯಾಗೋ ಹ್ಯಾಚ್‌ಬ್ಯಾಕ್ ಆಗಿದೆ. ಇದು ಜಿಪ್ಟ್ರಾನ್ ಪ್ಲಾಟ್‌ಫಾರ್ಮ್ ಆಧರಿಸಿರುತ್ತದೆ. ಕಂಪನಿಯ ಜಿಪ್ಟ್ರಾನ್ ಪ್ಲಾಟ್‌ಫಾರ್ಮ್ ಈ ಹಿಂದೆ ಬಳಸಲಾಗುತ್ತಿರುವ ಎಕ್ಸ್‌ಪ್ರೆಸ್-ಟಿ ಪ್ಲಾಟ್‌ಫಾರ್ಮ್‌ಗಿಂತ ಹೆಚ್ಚು ಆಧುನಿಕ ಮತ್ತು ಸುಧಾರಿತವಾಗಿದೆ.

Article Published On: Tuesday, September 27, 2022, 19:42 [IST]
English summary
New tata tiago electric car launch tomorrow exterior revealed details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+