ಹೊಸ ದಾಖಲೆ: ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರಿಗೆ ಒಂದೇ ದಿನದಲ್ಲಿ 10 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್

ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಗಗನಕ್ಕೆರಿದೆ. ಏರುತ್ತಿರುವ ಇಂಧನ ಬೆಲೆಗಳಿಂದ ಪಾರಾಗಲು ಜನರು ಪರ್ಯಾಯ ಆಯ್ಕೆಗಳನ್ನು ಹುಡುಕಲಾರಂಭಿಸಿದ್ದಾರೆ. ಇದರಿಂದ ಜನರು ಈಗ ನಿಧಾನವಾಗಿ ಎಲೆಕ್ಟ್ರಿಕ್ ಕಾರುಗಳ ಕಡೆ ಮುಖ ಮಾಡುತ್ತಿದ್ದಾರೆ.

ಹೊಸ ದಾಖಲೆ: ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರಿಗೆ ಒಂದೇ ದಿನದಲ್ಲಿ 10 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್

ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯನ್ನು ಪಡೆದುಕೊಳ್ಳುತ್ತಿದೆ. ಈ ವೇಳೆ ಟಾಟಾ ಕಂಪನಿಯು ಎಲೆಕ್ಟ್ರಿಕ್ ಕಾರುಗಳ ವಿಭಾಗದಲ್ಲಿ ಪಾರುಪತ್ಯ ಮುಂದುವರೆಸಲು ಪ್ರಯತ್ನಿಸುತ್ತಿದೆ. ಸದ್ಯ ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ವಿಭಾಗದಲ್ಲಿ ಟಾಟಾ ಮೇಲುಗೈಯನ್ನು ಸಾಧಿಸಿದೆ. ಇತ್ತೀಚೆಗೆ ಸ್ವದೇಶಿ ಕಾರು ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ ಕಂಪನಿಯು ತನ್ನ ಹೊಸ ಟಿಯಾಗೋ ಎಲೆಕ್ಟ್ರಿಕ್ ಕಾರನ್ನು ಕೂಡ ಬಿಡುಗಡೆಗೊಳಿಸಿತು.

ಹೊಸ ದಾಖಲೆ: ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರಿಗೆ ಒಂದೇ ದಿನದಲ್ಲಿ 10 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್

ಈ ಹೊಸ ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರಿನ ಆರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.8.49 ಲಕ್ಷವಾಗಿದೆ. ನಿನ್ನೆ ಮಧ್ಯಾಹ್ನ 12 ಗಂಟೆಗೆ ಅಧಿಕೃತವಾಗಿ ಈ ಎಲೆಕ್ಟ್ರಿಕ್ ಕಾರಿಗಾಗಿ ಬುಕ್ಕಿಂಗ್ ಪ್ರಾರಂಭವಾಗಿತ್ತು. ಇದೀಗ ಈ ಎಲೆಕ್ಟ್ರಿಕ್ ಕಾರಿನ ಬುಕ್ಕಿಂಗ್ 10,000 ದಾಟಿದೆ ಎಂದು ಟಾಟಾ ಮೋಟಾರ್ಸ್ ಹೇಳಿದೆ.

ಹೊಸ ದಾಖಲೆ: ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರಿಗೆ ಒಂದೇ ದಿನದಲ್ಲಿ 10 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್

ಎಲೆಕ್ಟ್ರಿಕ್ ಕಾರಿಗೆ ಗ್ರಾಹಕರಿಂದ ಇಷ್ಟೊಂದು ಅದ್ಭುತ ಪ್ರತಿಕ್ರಿಯೆ ಸಿಕ್ಕಿರುವುದು ಇದೇ ಮೊದಲು. ಈ ಕಾರು ಖರೀದಿಸಲು ಬಯಸುವ್ ಆಸಕ್ತ ಗ್ರಾಹಕರು ಟಾಟಾ ಡೀಲರ್‌ಶಿಪ್‌ನಲ್ಲಿ ಮತ್ತು ಕಂಪನಿಯ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಮುಂಗಡ ಬುಕ್ ಮಾಡಬಹುದು. ಬುಕ್ಕಿಂಗ್ ಟೋಕನ್ ಮೊತ್ತ 21,000 ರೂ. ಆಗಿದೆ.

ಹೊಸ ದಾಖಲೆ: ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರಿಗೆ ಒಂದೇ ದಿನದಲ್ಲಿ 10 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್

ಟಾಟಾ ಮೋಟಾರ್ಸ್ ಕಂಪನಿಯು 2026ರ ವೇಳೆಗೆ ಹತ್ತು ಎಲೆಕ್ಟ್ರಿಕ್ ವಾಹನಗಳ ಪೋರ್ಟ್‌ಫೋಲಿಯೊವನ್ನು ಹೊಂದಲು ಟಾಟಾದ ಯೋಜನೆಗಳ ಭಾಗವಾಗಿದೆ. ಇದರ ನೆಟ್‌ವರ್ಕ್ ಆಗಿ 80 ಹೊಸ ನಗರಗಳನ್ನು ಪ್ರವೇಶಿಸಿದೆ. 165ಕ್ಕೂ ಹೆಚ್ಚು ನಗರಗಳಿಗೆ ಕೂಡ ವಿಸ್ತರಿಸಲಾಗಿದೆ.

ಹೊಸ ದಾಖಲೆ: ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರಿಗೆ ಒಂದೇ ದಿನದಲ್ಲಿ 10 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್

ಈ ಹೊಸ ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರು IP67-ರೇಟೆಡ್ 24 kWh ಮತ್ತು 19.2 kWh ಬ್ಯಾಟರಿ ಪ್ಯಾಕ್‌ಗಳನ್ನು ಅಳವಡಿಸಲಾಗಿದೆ. ಮೊದಲನೆಯದು 315 ಕಿ.ಮೀ ರೇಂಜ್ ಅನ್ನು ನೀಡಿದರೆ, ಎರಡನೆಯದು ಸಿಂಗಲ್ ಚಾರ್ಜ್‌ನಲ್ಲಿ 250 ಕಿ.ಮೀ ರೇಂಜ್ ಅನ್ನು ನೀಡುತ್ತದೆ.

ಹೊಸ ದಾಖಲೆ: ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರಿಗೆ ಒಂದೇ ದಿನದಲ್ಲಿ 10 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್

ಕೊಡುಗೆಯನ್ನು ಹೆಚ್ಚು ಆಕರ್ಷಕವಾಗಿಸಲು, ಟಾಟಾ ಎಲೆಕ್ಟ್ರಿಕ್ ಹ್ಯಾಚ್ ಅನ್ನು ಎಂಟು ವರ್ಷ ಅಥವಾ 1.60 ಲಕ್ಷ ಕಿಮೀ ವಾರಂಟಿಯೊಂದಿಗೆ (ಯಾವುದು ಮೊದಲು ಬರುತ್ತದೆಯೋ ಅದು) ಬ್ಯಾಟರಿ ಮತ್ತು ಎಲೆಕ್ಟ್ರಿಕ್ ಮೋಟರ್ ಬರುತ್ತದೆ. ಹೆಚ್ಚಿನ ಅನುಕೂಲಕ್ಕಾಗಿ, ನಾಲ್ಕು ಚಾರ್ಜಿಂಗ್ ಆಯ್ಕೆಗಳು ಕೂಡ ಲಭ್ಯವಿರಲಿದೆ.

ಹೊಸ ದಾಖಲೆ: ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರಿಗೆ ಒಂದೇ ದಿನದಲ್ಲಿ 10 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್

ಈ ಹೊಸ ಟಾಟಾ ಎಲೆಕ್ಟ್ರಿಕ್ ಕಾರಿನಲ್ಲಿ 3.3 kW ಎಸಿ ಚಾರ್ಜ್ ಮತ್ತು 7.2 kW ಎಸಿ ಚಾರ್ಜ್ ಸೌಲಭ್ಯಗಳನ್ನು ಆಯ್ಕೆ ರೂಪದಲ್ಲಿ ನೀಡಲಾಗುತ್ತದೆ. 7.2 kW ಎಸಿ ಚಾರ್ಜ್ ಸೌಲಭ್ಯದ ಮೂಲಕ 3 ಗಂಟೆ 36 ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಅನ್ನು ಮಾಡಬಹುದಾಗಿದೆ. 50kW ಸಾಮರ್ಥ್ಯದ ಡಿಸಿ ಫಾಸ್ಟ್ ಚಾರ್ಜಿಂಗ್ ಕೇಂದ್ರಗಳಲ್ಲಿ ಚಾರ್ಜ್ ಮಾಡಿದ್ದಲ್ಲಿ ಕೇವಲ 57 ನಿಮಿಷಗಳಲ್ಲಿ ಸೊನ್ನೆಯಿಂದ ನೂರರಷ್ಟು ಚಾರ್ಜ್ ಮಾಡಬಹುದಾಗಿದೆ.

ಹೊಸ ದಾಖಲೆ: ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರಿಗೆ ಒಂದೇ ದಿನದಲ್ಲಿ 10 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್

ಇನ್ನು 15ಎಎಂಪಿ ಹೋಂ ಚಾರ್ಜರ್ ಮೂಲಕ ಚಾರ್ಜ್‌ ಮಾಡಿದ್ದಲ್ಲಿ ಕನಿಷ್ಠ 15ರಿಂದ 18 ಗಂಟೆ ತೆಗೆದುಕೊಳ್ಳುತ್ತದೆ. ಸ್ವದೇಶಿ ತಯಾರಕರ ಟಾಟಾ ಹೇಳುವಂತೆ ಟಿಯಾಗೋ ಎಲೆಕ್ಟ್ರಿಕ್ ಕಾರು 1,000 ರೂ. 1,100 ಕಿಮೀ ಚಾಲನೆಗೆ ಇದು ಹೆಚ್ಚು ಆಕರ್ಷಕವಾದ ಪ್ರತಿಪಾದನೆಯಾಗಿದೆ ಮತ್ತು 250 ಕಿಮೀಗೆ 20 ಯೂನಿಟ್‌ಗಳ ಬಳಕೆಯೊಂದಿಗೆ, ನೀವು ಪ್ರತಿ ಕಿ.ಮೀ.ಗೆ 60 ಪೈಸೆ ವೆಚ್ಚವಾಗುತ್ತದೆ ಎಂದು ಹೇಳಲಾಗುತ್ತಿದೆ.

ಹೊಸ ದಾಖಲೆ: ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರಿಗೆ ಒಂದೇ ದಿನದಲ್ಲಿ 10 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್

ಹೊಸ ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರಿನ ಹೆಡ್‌ಲೈಟ್ ಸುತ್ತಲೂ ಬ್ಲ್ಯೂ ಹೈಲೈಟ್ಸ್ ನೀಡಲಾಗಿದ್ದು, ಕಾರಿನ ಒಳಭಾಗದ ವಿನ್ಯಾಸದಲ್ಲೂ ಕೆಲವು ಹೊಸ ಫೀಚರ್ಸ್ ಹೊರತುಪಡಿಸಿ ಸಾಮಾನ್ಯ ಮಾದರಿಯಂತೆಯೇ ಆಕರ್ಷಣೆಯಾಗಿದೆ. ಎಲೆಕ್ಟ್ರಿಕ್ ಮಾದರಿಯಾಗಿ ಗುರುತಿಸಲು ಬ್ಲ್ಯೂ ಆಕ್ಸೆಂಟ್ ಸಹಕಾರಿಯಾಗಿದ್ದು, ಗೇರ್ ಸ್ಥಾನದಲ್ಲಿ ಇದೀಗ ಡ್ರೈವ್ ಮೋಡ್ ಡಯಲ್ ಅನ್ನು ಹೊಂದಿದೆ.

ಹೊಸ ದಾಖಲೆ: ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರಿಗೆ ಒಂದೇ ದಿನದಲ್ಲಿ 10 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್

ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರಿನಲ್ಲಿ 7 ಇಂಚಿನ ಇನ್ಪೋಟೈನ್‌ಮೆಂಟ್ ಡಿಸ್‌ಪ್ಲೇ, ಅಂಡ್ರಾಯ್ಡ್ ಮತ್ತು ಆಟೋ ಕಾರ್ ಪ್ಲೇ, 8 ಸ್ಪೀಕರ್ಸ್ ಹರ್ಮನ್ ಆಡಿಯೋ ಸಿಸ್ಟಂ, ಜೆಡ್ ಕನೆಕ್ಟ್ ಟೆಲಿಮ್ಯಾಟಿಕ್ ಸಿಸ್ಟಂ ಅಳವಡಿಸಲಾಗಿದೆ ಪ್ರೀಮಿಯಂ ಅನುಭವಕ್ಕಾಗಿ ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ರೈನ್ ಸೆನ್ಸಿಂಗ್ ವೈಪರ್ಸ್, ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್, ಸ್ಟಾರ್ಟ್ ಮತ್ತು ಸ್ಟಾಪ್ ಪುಶ್ ಬಟನ್ ಅನ್ನು ಒಳಗೊಂಡಿದೆ,

ಹೊಸ ದಾಖಲೆ: ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರಿಗೆ ಒಂದೇ ದಿನದಲ್ಲಿ 10 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್

ಸುರಕ್ಷತೆಗಾಗಿ ಈ ಹೊಸ ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರಿನಲ್ಲಿ ಎಬಿಎಸ್ ಜೊತೆ ಇಬಿಡಿ, 4 ಏರ್‌ಬ್ಯಾಗ್, ಕ್ರೂಸ್ ಕಂಟ್ರೋಲ್, ರಿಯರ್ ಪಾರ್ಕಿಂಗ್ ಸೆನ್ಸಾರ್, ರಿಯರ್ ಪಾರ್ಕಿಂಗ್ ಕ್ಯಾಮೆರಾ ಮತ್ತು ಸೀಟ್ ಬೆಲ್ಟ್ ರಿಮೆಂಡರ್ ಅನ್ನು ನೀಡಿದೆ. ಗ್ರಾಹಕರು ಈ ಹೊಸ ಎಲೆಕ್ಟ್ರಿಕ್ ಕಾರನ್ನು ಟೀಲ್ ಬ್ಲ್ಯೂ, ಡೇ ಟೋನಾ ಗ್ರೇ, ಪ್ರಿಸ್ಟಿನ್ ವೈಟ್, ಮಿಡ್‌ನೈಟ್ ಪ್ಲಮ್ ಮತ್ತು ಟ್ರೋಪಿಕಲ್ ಮಿಸ್ಟ್ ಬಣ್ಣಗಳ ಆಯ್ಕೆಯಲ್ಲಿ ಕೂಡ ಖರೀದಿಸಬಹುದು.

ಹೊಸ ದಾಖಲೆ: ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರಿಗೆ ಒಂದೇ ದಿನದಲ್ಲಿ 10 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್

ಹೊಸ ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರಿನಲ್ಲಿ ಪರ್ಫಾಮೆನ್ಸ್ ಪ್ರಿಯರಿಗಾಗಿ ಟಾಟಾ ಕಂಪನಿಯು ಸಿಟಿ ಮತ್ತು ಸ್ಪೋರ್ಟ್ ಡ್ರೈವ್ ಮೋಡ್ ಅನ್ನು ನೀಡೀದೆ. ಹೊಸ ಕಾರಿನ 19.2 kWh ಬ್ಯಾಟರಿ ಆಯ್ಕೆಯ ಮಾದರಿಯು 60 ಬಿಎಚ್‌ಪಿ ಮತ್ತು 105 ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ 24 kWh ಬ್ಯಾಟರಿ ಪ್ಯಾಕ್ ಹೊಂದಿರುವ ಮಾದರಿಯು 74 ಬಿಎಚ್‌ಪಿ ಮತ್ತು 114 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

Most Read Articles

Kannada
English summary
New tata tiago electric car receives over 10000 bookings within a day details
Story first published: Tuesday, October 11, 2022, 13:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X