Just In
- 57 min ago
6 ಏರ್ಬ್ಯಾಗ್ ಜೊತೆ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಸಿಗುವ ಟಾಪ್ 5 ಕಾರುಗಳು
- 1 hr ago
ಎಲೆಕ್ಟ್ರಿಕ್ ಬಳಿಕ ಸಿಎನ್ಜಿ ಕಾರುಗಳ ವಿಭಾಗದಲ್ಲೂ ಪಾರುಪತ್ಯ ಸಾಧಿಸಲು ಸಜ್ಜಾಗುತ್ತಿದೆ ಟಾಟಾ
- 1 hr ago
ಹೊಸ ಮಹೀಂದ್ರಾ ಎಲೆಕ್ಟ್ರಿಕ್ XUV700 ಟೀಸರ್ ಬಿಡುಗಡೆ... ಫೆ.10 ರಂದು BE ಸರಣಿ SUV ಗಳ ಪ್ರದರ್ಶನ
- 2 hrs ago
ಭಾರತದಲ್ಲಿ ಬಿಡುಗಡೆಯಾಗಲಿವೆ ಹೋಂಡಾದ 3 ಕಾರುಗಳು: ಇವು ಬಂದ್ರೆ...!
Don't Miss!
- Movies
ಕಿಚ್ಚ ಒಪ್ಪಿಲ್ಲ.. ಓಂ ಪ್ರಕಾಶ್ ರಾವ್ ಕೇಳಿಲ್ಲ? 'ಬಾಜಿಗರ್' ರಿಮೇಕ್ ಮಿಸ್ ಆಗಿದ್ದೆಲ್ಲಿ?
- News
ರಾಯಚೂರು: ಶಿವರಾಜ್ ಪಾಟೀಲ್ ಪ್ರಾಬಲ್ಯ ಕೊನೆಗೊಳಿಸಲು ವಿಪಕ್ಷಗಳ ತಂತ್ರ
- Sports
ಎಲ್ಲಾ ಮಾದರಿಯ ಕ್ರಿಕೆಟ್ಗೆ ವಿದಾಯ ಘೋಷಿಸಿದ 2007ರ ವಿಶ್ವಕಪ್ ಹೀರೋ ಜೋಗಿಂದರ್ ಶರ್ಮಾ
- Technology
ಹರಾಜಿನಲ್ಲಿರುವ ಈ ಹಳೆಯ ಐಫೋನ್ ಬೆಲೆ ಅರ್ಧಕೋಟಿ ದಾಟಿದ್ರೂ ಅಚ್ಚರಿಯಿಲ್ಲ!
- Finance
ಅಮುಲ್ ಹಾಲಿನ ದರ ಮತ್ತೆ 3 ರೂ ಏರಿಕೆ, ನೂತನ ದರ ಪರಿಶೀಲಿಸಿ
- Lifestyle
Maha Shivratri 2023 : ಮಹಾಶಿವರಾತ್ರಿ ದಿನಾಂಕ, ಪೂಜಾ ಮುಹೂರ್ತ, ಮಹತ್ವ, ಆಚರಣೆ ಹಿನ್ನೆಲೆ ಏನು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಆಕರ್ಷಕ ವಿನ್ಯಾಸದ ಕಾಂಪ್ಯಾಕ್ಟ್ ಎಸ್‍ಯುವಿ ಅನಾವರಣಗೊಳಿಸಿ ನಿರೀಕ್ಷೆ ಹುಟ್ಟಿಸಿದ ಟೊಯೊಟಾ
ಜನಪ್ರಿಯ ತಯಾರಕ ಕಂಪನಿಯಾದ ಟೊಯೊಟಾ ತನ್ನ bZ ಕಾಂಪ್ಯಾಕ್ಟ್ ಎಸ್‍ಯುವಿಯ ಕಾನ್ಸೆಪ್ಟ್ ಮಾದರಿಯನ್ನು ಅನಾವರಣಗೊಳಿಸಿದೆ. ಇದು ಬ್ರ್ಯಾಂಡ್‌ನ ಭವಿಷ್ಯದ ಸಣ್ಣ ಎಲೆಕ್ಟ್ರಿಕ್ ಕ್ರಾಸ್‌ಒವರ್ ಅನ್ನು ಪೂರ್ವವೀಕ್ಷಣೆಯಾಗಿದೆ.

ಟೊಯೊಟಾ bZ ಕಾಂಪ್ಯಾಕ್ಟ್ ಎಸ್‍ಯುವಿಯ ಕಾನ್ಸೆಪ್ಟ್ ಭಾರೀ ಕ್ರೀಸ್ ಮತ್ತು ಸ್ಕ್ಲಟಡ್ ನ್ಯಾಸವನ್ನು ಹೊಂದಿದೆ. ಮುಂಭಾಗದ ಫಾಸಿಕ ಬ್ರ್ಯಾಂಡ್‌ನ ಹೊಸ ಸಿಗ್ನಿಚರ್ ಲೈಟ್ ಅನ್ನು ಹೊಂದಿದೆ. ಇದನ್ನು ನಾವು ಈಗಾಗಲೇ ಹೊಸ ಪ್ರಿಯಸ್‌ನಲ್ಲಿ ನೋಡಿದ್ದೇವೆ.ಹೆಡ್‌ಲ್ಯಾಂಪ್ ಸ್ಟೈಲಿಂಗ್ ಪ್ರತಿ ಬದಿಯಲ್ಲಿ ಬ್ರಾಕೆಟ್-ಆಕಾರದ ಲ್ಯಾಂಪ್ ಗಳನ್ನು ಹೊಂದಿದೆ ಮತ್ತು ಅಗಲದ ಉದ್ದಕ್ಕೂ ಚಲಿಸುವ ಪ್ರಕಾಶಿತ ಸ್ಟ್ರಿಪ್ ಅನ್ನು ಹೊಂದಿದೆ. ಇದು ಕೆಳಗಿನ ಅಂಚಿನ ಉದ್ದಕ್ಕೂ ಅಗ್ರೇಸಿವ್ ಫಾಸಿಕವನ್ನು ಹೊಂದಿದೆ.

ಈ ಹೊಸ ಟೊಯೊಟಾ bZ ಕಾಂಪ್ಯಾಕ್ಟ್ ಎಸ್‍ಯುವಿ ಸಣ್ಣ ಓವರ್‌ಹ್ಯಾಂಗ್‌ಗಳೊಂದಿಗೆ ಹೆಚ್ಚು ಕ್ರಾಸ್ಒವರ್-ಸ್ಟೈಲಿಂಗ್ ಹೊಂದಿದೆ. ರೂಫ್ ವಿಂಡ್ ಷೀಲ್ಡ್ ಮತ್ತು ಮುಂಭಾಗದ ಡೋರುಗಳ ಮೇಲೆ ತೆಳುವಾದ ಲೈನ್ ಗಳನ್ನು ಹೊಂದಿದೆ.

ಆದರೆ ಈ ಸಾಲುಗಳು ಹಿಂಭಾಗದಲ್ಲಿ ದಪ್ಪವಾಗುತ್ತವೆ. ಮೂರನೇ ಬ್ರೇಕ್ ರೂಫ್ ಮೇಲೆ ಇರಿಸಲಾದ ಫಿನ್‌ನ ಒಂದು ಭಾಗವಾಗಿದೆ. ಈ ಸಣ್ಣ ಎಸ್‍ಯುವಿಯ ಉದ್ದಕ್ಕೂ ಚಲಿಸುವ ತೀಕ್ಷ್ಣವಾದ ಕ್ರೀಸ್ ಇದೆ. ಇದು ಫ್ಲಶ್ ಮಾದರಿಯ ಮುಂಭಾಗದ ಡೋರುಗಳ ಹ್ಯಾಂಡಲ್ ಗಳನ್ನು ಹೊಂದಿವೆ.

ಆದರೆ ಹಿಂದಿನ ಡೋರುಗಳ ಪ್ಯಾನೆಲ್ ಗಳು ಪಿಲ್ಲರ್‌ನಲ್ಲಿ ಸಂಯೋಜಿಸಲ್ಪಟ್ಟಿವೆ. ಹಿಂಭಾಗದ ಸಣ್ಣ ಎಸ್‍ಯುವಿಯ ಅಗಲದ ಉದ್ದಕ್ಕೂ ಚಲಿಸುವ ಸಿಂಗಲ್ ಟೈಲ್-ಲ್ಯಾಂಪ್ ಯುನಿಟ್ ದೊಂದಿಗೆ ಚೆನ್ನಾಗಿ ವಿಲೀನಗೊಳ್ಳುತ್ತವೆ. ಟೇಲ್ ಕೆಳಗಿನ ಭಾಗದಲ್ಲಿ ಪ್ರಮುಖ ಡಿಫ್ಯೂಸರ್ ಅನ್ನು ಇರಿಸಲಾಗಿದೆ.

ಇನ್ನು ಈ ಎಸ್‍ಯುವಿಯು ಟೈಲ್ ಗೇಟ್ ಚೂಪಾದ ಅಂಚುಗಳೊಂದಿಗೆ ಆಯತಾಕಾರದ ಆಕಾರವನ್ನು ಹೊಂದಿದೆ. ಈ ಹೊಸ ಟೊಯೋಟಾ bZ ಕಾಂಪ್ಯಾಕ್ಟ್ ಎಸ್‍ಯುವಿ ಕಾನ್ಸೆಪ್ಟ್ ನಲ್ಲಿ ಕನಿಷ್ಠ ವಿನ್ಯಾಸವನ್ನು ಹೊಂದಿದೆ.

ಅಷ್ಟಭುಜಾಕೃತಿಯ ಸ್ಟೀರಿಂಗ್ ವೀಲ್ ಮತ್ತು ಡ್ಯಾಶ್‌ಬೋರ್ಡ್‌ನ ಮಧ್ಯದಲ್ಲಿ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಒಳಗೊಂಡಿದೆ. ಸ್ಟೀರಿಂಗ್ ವ್ಹೀಲ್ ಹಿಂದೆಯೇ ಹೊಸ ಪ್ರಿಯಸ್ ತರಹದ ಇನ್ಸ್ಟ್ರುಮೆಂಟ್ ಕನ್ಸೋಲ್ ಅನ್ನು ಹೊಂದಿದೆ. ಡ್ರೈವ್ ಸೆಲೆಕ್ಟರ್ ಕನ್ಸೋಲ್‌ನ ತಳದಲ್ಲಿರುವ ಬಟನ್‌ಗಳ ಸರಳ ಕಾಲಮ್ ಆಗಿದೆ.

ಟೊಯೊಟಾ bZ ಮಾದರಿ ಫ್ಯಾಮಿಲಿ ಕಾರ್ ಆಗಿ ಪರಿಚಯಿಸಲು ಯೋಜಿಸಿದೆ. ಕಂಪನಿಯು ಈಗಾಗಲೇ ಜಾಗತಿಕವಾಗಿ bZ4X ಮತ್ತು ಚೀನಾ ಮಾರುಕಟ್ಟೆಯಲ್ಲಿ bZ3 ಅನ್ನು ಬಿಡುಗಡೆ ಮಾಡಿದೆ. ಈ ಟೊಯೊಟಾ bZ3 ಕಾಂಪ್ಯಾಕ್ಟ್ ಇವಿಯು ಯುರೋಪಿಯನ್ ಮಾರುಕಟ್ಟೆಗಳಲ್ಲಿಯೂ ಮಾರಾಟವಾಗಲಿದೆ. ಹೊಸ bZ ಕಾಂಪ್ಯಾಕ್ಟ್ ಎಸ್‍ಯುವಿಯ ಕಾನ್ಸೆಪ್ಟ್ ಭವಿಷ್ಯದಲ್ಲಿ ಹೊಸ ಎಲೆಕ್ಟ್ರಿಕ್ ಮಾದರಿಯನ್ನು ಹುಟ್ಟುಹಾಕಬಹುದು.

ಇನ್ನು ಜಪಾನ್ ಮೂಲದ ಜನಪ್ರಿಯ ಕಾರು ತಯಾರಕ ಕಂಪನಿಯಾದ ಟೊಯೊಟಾ ಹಲವಾರು ಜನಪ್ರಿಯ ಕಾರುಗಳನ್ನು ಮಾರಾಟ ಮಾಡುತ್ತಿದೆ. ಇದೀಗ ಟೊಯೊಟಾ ಕಂಪನಿಯ ಹೊಸ ಇನೋವಾ ಹೈಕ್ರಾಸ್ ಕಾರು ಇದೇ ತಿಂಗಳಿನಲ್ಲಿ ಮಾಡಲು ಸಜ್ಜಾಗಿದೆ.

ಈ ಹೊಸ ಟೊಯೊಟಾ ಇನೋವಾ ಹೈಕ್ರಾಸ್ ಎಂಪಿವಿಯು ಭಾರತೀಯ ಮಾರುಕಟ್ಟೆಯಲ್ಲಿಯೂ ಬಿಡುಗಡೆಯಾಗಲಿದೆ. ಈ ಬಹುನಿರೀಕ್ಷಿತ ಟೊಯೊಟಾ ಇನೋವಾ ಹೈಕ್ರಾಸ್ ಕಾರು ನವೆಂಬರ್ 25 ರಂದು ಭಾರತದಲ್ಲಿ ಪಾದಾರ್ಪಣೆ ಮಾಡಲಿದೆ. ಭಾರತಕ್ಕಿಂತ ಮೊದಲು, ಈ ಕಾರು ನವೆಂಬರ್ 21 ರಂದು ಇಂಡೋನೇಷ್ಯಾದಲ್ಲಿ ಪಾದಾರ್ಪಣೆ ಮಾಡಲಿದೆ.

ನವೆಂಬರ್‌ನಲ್ಲಿ ಭಾರತದ ಚೊಚ್ಚಲ ಪ್ರದರ್ಶನವನ್ನು ನಿಗದಿಪಡಿಸಲಾಗಿದ್ದರೂ, ಹೊಸ ಇನೋವಾ ಹೈಕ್ರಾಸ್ ಕಾರಿನ ಬೆಲೆಯು 2023ರ ಆಟೋ ಎಕ್ಸ್‌ಪೋದಲ್ಲಿ ಬಹಿರಂಗವಾಗಲಿದೆ. ಇಂಡಿಯಾ-ಸ್ಪೆಕ್ ಇನೋವಾ ಹೈಕ್ರಾಸ್ ಎಂಪಿವಿಗಾಗಿ ಟೀಸರ್ ಚಿತ್ರವನ್ನು ಸೋಷಿಯಲ್ ಮೀಡಿಯಾದಲ್ಲಿ ಬಿಡುಗಡೆಗೊಳಿಸಿದೆ.

ಈ ಟೀಸರ್ ನಲ್ಲಿ ಎಂಪಿವಿಯ ಮುಂಭಾಗದ ಬದಿಯ ನೋಟವನ್ನು ಪ್ರದರ್ಶಿಸುತ್ತಿದೆ. ಇದು ಇಂಟರ್‌ವೆಬ್‌ಗಳಲ್ಲಿ ಸೋರಿಕೆಯಾದ ಚಿತ್ರಗಳಲ್ಲಿ ಬಹಿರಂಗವಾಗಿದೆ. ಪ್ರಸ್ತುತ ತಲೆಮಾರಿನ ಇನೋವಾ ಕ್ರಿಸ್ಟಾಗೆ ಹೋಲಿಸಿದರೆ, ಹೊಸ ಇನೋವಾ ಹೈಕ್ರಾಸ್ ವಿನ್ಯಾಸ ಮತ್ತು ಎಂಜಿನ್ ಕಾರ್ಯವಿಧಾನದ ವಿಷಯದಲ್ಲಿ ವಿಭಿನ್ನವಾಗಿರುತ್ತದೆ. ವಾಸ್ತವವಾಗಿ, ಇದು ಲ್ಯಾಡರ್ ಫ್ರೇಮ್ ಚಾಸಿಸ್ ಬದಲಿಗೆ ಮೊನೊಕಾಕ್ ಪ್ಲಾಟ್‌ಫಾರ್ಮ್ ಅನ್ನು ಆಧಾರವಾಗಿರುತ್ತದೆ.

ಇತ್ತೀಚಿನ ಟೀಸರ್ ನಲ್ಲಿ ಪನೊರೊಮಿಕ್ ಸನ್‌ರೂಫ್ ಅನ್ನು ಹೊಂದಿರುತ್ತದೆ. ಸನ್‌ರೂಫ್ ಪ್ಯಾನೆಲ್‌ಗಳ ಪಕ್ಕದಲ್ಲಿರುವ ಸುತ್ತುವರಿದ ಬೆಳಕಿನಂತಹ ಇತರ ವಿವರಗಳು ಸಹ ಸ್ಪಷ್ಟವಾಗಿವೆ. ಈ ಹೈಕ್ರಾಸ್ ಮ್ಯಾನುಯಲ್ ಐಆರ್‌ವಿಎಂ, ಸನ್‌ರೂಫ್ ಪ್ಯಾನೆಲ್‌ಗಳಿಗೆ ಸಮಾನಾಂತರವಾಗಿ ಹಿಂಭಾಗದ ಎಸಿ ವೆಂಟ್‌ಗಳು ಮತ್ತು ಎರಡನೇ ಸಾಲಿನ ಪ್ರಯಾಣಿಕರಿಗೆ ಮೀಸಲಾದ ಡಿಸ್ ಪ್ಲೇಯನ್ನು ಪಡೆಯಲಿದೆ. ಡ್ಯಾಶ್‌ಕ್ಯಾಮ್ ಅನ್ನು ಸಹ ನೀಡಬಹುದು.