Just In
- 11 hrs ago
ಮಂಗಳೂರಿನಲ್ಲಿರುವ ಒಕಿನಾವ ಇವಿ ಸ್ಕೂಟರ್ ಮಾರಾಟ ಮಳಿಗೆಯಲ್ಲಿ ಅಗ್ನಿ ಅವಘಡ
- 12 hrs ago
ಮ್ಯೂಸಿಕಲ್ ಸ್ಕೂಟರ್ನ ವಿಡಿಯೋ ಹಂಚಿಕೊಂಡು "ಭಾರತದಲ್ಲಿ ಮಾತ್ರ" ಎಂದ ಆನಂದ್ ಮಹೀಂದ್ರಾ
- 14 hrs ago
ಕೋಟಿ ಬೆಲೆಯ ಮರ್ಸಿಡಿಸ್ ಜಿಎಲ್ಎಸ್ ಎಸ್‍ಯುವಿ ಖರೀದಿಸಿದ ನಟ ವರುಣ್ ಧವನ್
- 16 hrs ago
ಮೇ ತಿಂಗಳಿನಲ್ಲಿ 10 ಸಾವಿರಕ್ಕೂ ಹೆಚ್ಚು ಮಾರಾಟ ದಾಖಲಿಸಿದ 8 ಮಾರುತಿ ಸುಜುಕಿ ಕಾರುಗಳು
Don't Miss!
- News
ಮಹಾರಾಷ್ಟ್ರದಲ್ಲಿ ಸಿಎಂ ಠಾಕ್ರೆ ಬಣದ ಶಾಸಕರಿಂದ ಮಹತ್ವದ ಸಭೆ
- Lifestyle
Today RashiBhavishya: ಶನಿವಾರದ ದಿನ ಭವಿಷ್ಯ: ವೃಷಭ, ಕುಂಭ, ಮೀನ ರಾಶಿಯ ಉದ್ಯೋಗಿಗಳು ಕಚೇರಿ ಕೆಲಸದ ಮೇಲೆ ಗಮನಹರಿಸಿ
- Sports
ENG vs NZ: ನ್ಯೂಜಿಲೆಂಡ್ ವಿರುದ್ಧ ಸತತ 2ನೇ ಶತಕ ದಾಖಲಿಸಿದ ಜಾನಿ ಬೈಸ್ಟ್ರೋವ್
- Finance
ಈ 220 ಉದ್ಯೋಗಿಗಳಿಗೆ ವಾರ್ಷಿಕ 1 ಕೋಟಿ ರು ಸಂಬಳ, ಯಾವ್ದು ಕಂಪನಿ?
- Movies
ಕಾರ್ತಿಕ್ ಆರ್ಯನ್ಗೆ ಕೋಟಿಗಟ್ಟಲೆ ಮೌಲ್ಯದ ಕಾರು ಉಡುಗೊರೆ ನೀಡಿದ ನಿರ್ಮಾಪಕ!
- Education
CLAT 2022 Result : ಕ್ಲಾಟ್ ಪರೀಕ್ಷೆಯ ಫಲಿತಾಂಶ ಶೀಘ್ರದಲ್ಲಿ ಪ್ರಕಟ
- Technology
60,000ರೂ.ಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯವಾಗುವ ಲ್ಯಾಪ್ಟಾಪ್ಗಳು!
- Travel
ನಿಮ್ಮ ಮುಂದಿನ ಪ್ರವಾಸದ ಪಟ್ಟಿಯಲ್ಲಿ ಕರ್ನಾಟಕದ ಬಾದಾಮಿ ಯಾಕಿರಬೇಕು? ಇಲ್ಲಿದೆ ಕಾರಣ!
ಮೈಲ್ಡ್-ಹೈಬ್ರಿಡ್ ಡೀಸೆಲ್ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದೆ ಟೊಯೊಟಾ ಫಾರ್ಚುನರ್ ಎಸ್‍ಯುವಿ
ಜಪಾನ್ ಮೂಲದ ಜನಪ್ರಿಯ ಕಾರು ತಯಾರಕ ಕಂಪನಿಯಾದ ಟೊಯೊಟಾ ತಮ್ಮ ದೊಡ್ಡ ಎಸ್‍ಯುವಿಗಳಿಗಾಗಿ ಹೊಸ ಡೀಸೆಲ್ ಹೈಬ್ರಿಡ್ ಪವರ್‌ಟ್ರೇನ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ಹೊಸ ವರದಿಗಳ ಪ್ರಾಕರ, ಪವರ್‌ಟ್ರೇನ್ ಮೈಲ್ಡ್ ಹೈಬ್ರಿಡ್ ಟರ್ಬೊ ಡೀಸೆಲ್ ಯುನಿಟ್ ಆಗಿದೆ.

ಹೊಸ ಟೊಯೊಟಾ ಫಾರ್ಚುನರ್ ಮೈಲ್ಡ್ ಹೈಬ್ರಿಡ್ ಡೀಸೆಲ್ ಎಂಜಿನ್ ಅನ್ನು ಒಳಗೊಂಡಿರುವ ಮೊದಲ ಮಾದರಿಯಾಗಿದೆ. ಡೀಸೆಲ್ ಹೈಬ್ರಿಡ್ ಎಂಜಿನ್ ಹೊಂದಿರುವ ಹೊಸ ಟೊಯೊಟಾ ಫಾರ್ಚುನರ್ 2023 ರಲ್ಲಿ ಬಿಡುಗಡೆಯಾಗಲಿದೆ ಎಂದು ವರದಿಯಾಗಿದೆ. ಇದು ಮೊದಲು ಥೈಲ್ಯಾಂಡ್‌ನಲ್ಲಿ ಮಾರಾಟವಾಗಲಿದೆ, ನಂತರ ಇತರ ಮಾರುಕಟ್ಟೆಗಳಲ್ಲಿ ಮಾರಾಟವಾಗಲಿದೆ. ಹೊಸ ಫಾರ್ಚುನರ್ ಹೈಬ್ರಿಡ್ ಆವೃತ್ತಿಯು 1GD-FTV 2.8-ಲೀಟರ್ ಡೀಸೆಲ್ ಎಂಜಿನ್ ಅನ್ನು ಪಡೆಯುತ್ತದೆ.

ಸುಜುಕಿಯ ಮೈಲ್ಡ್-ಹೈಬ್ರಿಡ್ ಸಿಸ್ಟಮ್‌ನಂತೆಯೇ, ಹೊಸ ಫಾರ್ಚುನರ್ ಮೈಲ್ಡ್ ಹೈಬ್ರಿಡ್ ಡೀಸೆಲ್ ಆವೃತ್ತಿಯು ಇಂಟಿಗ್ರೇಟೆಡ್ ಸ್ಟಾರ್ಟರ್ ಜನರೇಟರ್ (ISG) ನೊಂದಿಗೆ ಬರುತ್ತದೆ. ಹೊಸ ಮೈಲ್ಡ್-ಹೈಬ್ರಿಡ್ ಡೀಸೆಲ್ ಎಂಜಿನ್ ಅನ್ನು ಜಿಡಿ ಹೈಬ್ರಿಡ್ ಎಂದು ಕರೆಯಬಹುದು ಎಂದು ಹೇಳಲಾಗುತ್ತಿದೆ.

ಹೊಸ ಟೊಯೊಟಾ ಫಾರ್ಚುನರ್ ಮೈಲ್ಡ್-ಹೈಬ್ರಿಡ್ ಆವೃತ್ತಿಯು ಹೆಚ್ಚಿನ ಇಂಧನ ದಕ್ಷತೆ ಮತ್ತು ಬೇಡಿಕೆಯ ಮೇಲೆ ಟಾರ್ಕ್ ಅನ್ನು ನೀಡುವ ಸಾಧ್ಯತೆಯಿದೆ. ಎಸ್‍ಯುವಿ ಎಂಜಿನ್ ಸ್ಟಾರ್ಟ್/ಸ್ಟಾಪ್ ಸಿಸ್ಟಂನೊಂದಿಗೆ ಬರಲಿದೆ. ಮೈಲ್ಡ್-ಹೈಬ್ರಿಡ್ ಸಿಸ್ಟಮ್‌ನೊಂದಿಗೆ, ಹೊಸ ಫಾರ್ಚುನರ್ ಬ್ರೇಕಿಂಗ್ ಅಥವಾ ಡಿಸ್ಲೆರೇಶನ್ ಸಮಯದಲ್ಲಿ ಚಲನ ಶಕ್ತಿಯನ್ನು ಸಂಗ್ರಹಿಸಬಹುದು ಅದು ವೇಗವರ್ಧನೆಯ ಅಡಿಯಲ್ಲಿ ಹೆಚ್ಚುವರಿ ಟಾರ್ಕ್ ಅನ್ನು ಒದಗಿಸುತ್ತದೆ.

ಹೊಸ ಫಾರ್ಚುನರ್ ಮೈಲ್ಡ್ ಹೈಬ್ರಿಡ್ ಸಿಸ್ಟಮ್ ಬಗ್ಗೆ ಹೆಚ್ಚಿನ ವಿವರಗಳನ್ನು ಈ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಪ್ರಕಟಿಸುವ ಸಾಧ್ಯತೆಯಿದೆ. ಹೊಸ ಮಾದರಿಯು ಹೆಚ್ಚಿನ ಇಂಧನ ದಕ್ಷತೆಯ ಜೊತೆಗೆ ಸುಧಾರಿತ ಶಕ್ತಿ ಮತ್ತು ಟಾರ್ಕ್ ಅನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.

ಥಾಯ್-ಸ್ಪೆಕ್ ಫಾರ್ಚುನರ್ ಲೆಜೆಂಡರ್ 4WD ಅಸ್ತಿತ್ವದಲ್ಲಿರುವ 1GD-FTV 2.8L ಎಂಜಿನ್ ಅನ್ನು ಹೊಂದಿದೆ ಅದು 204 ಬಿಹೆಚ್‍ಪಿ ಪವರ್ ಮತ್ತು 500 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್ ಅನ್ನು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಅನುಕ್ರಮ ಶಿಫ್ಟ್ ಮತ್ತು ಪ್ಯಾಡಲ್ ಶಿಫ್ಟ್‌ನೊಂದಿಗೆ ಜೋಡಿಸಲಾಗಿದೆ.

ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ತನ್ನ ಹೊಸ ಟೊಯೊಟಾ ಫಾರ್ಚುನರ್ ಜಿಆರ್ ಸ್ಪೋರ್ಟ್ ವೆರಿಯೆಂಟ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಈ ಹೊಸ ಟೊಯೊಟಾ ಫಾರ್ಚುನರ್ ಜಿಆರ್ ಸ್ಪೋರ್ಟ್ ಮಾದರಿಯ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ,48.43 ಲಕ್ಷವಾಗಿದೆ.

ಟೊಯೊಟಾ ಕಂಪನಿಯು ಫಾರ್ಚುನರ್ ಜಿಆರ್ ಸ್ಪೋರ್ಟ್ ಎಂಬ ಹೊಸ ಟಾಪ್ ವೇರಿಯಂಟ್‌ನ ಸೇರ್ಪಡೆಯೊಂದಿಗೆ ಫಾರ್ಚುನರ್ ಸರಣಿಯನ್ನು ವಿಸ್ತರಿಸಿದೆ.ಟೊಯೊಟಾ ಫಾರ್ಚುನರ್ ಜಿಆರ್ ಸ್ಪೋರ್ಟ್ ಮಾದರಿಯು ಫಾರ್ಚುನರ್ ಲೆಜೆಂಡರ್ 4X4 ಗಿಂತ ಸುಮಾರು ರೂ.3.8 ಲಕ್ಷ ದುಬಾರಿಯಾಗಿದೆ. ಈ ಎಸ್‍ಯುವಿಯ ಹೊಸ ರೂಪಾಂತರವು ಕೆಲವು ಕಾಸ್ಮೆಟಿಕ್ ನವೀಕರಣಗಳು, ವೈಶಿಷ್ಟ್ಯದ ನವೀಕರಣಗಳು ಮತ್ತು ಕೆಲವು ಯಾಂತ್ರಿಕ ಬದಲಾವಣೆಗಳೊಂದಿಗೆ ಬರುತ್ತದೆ.

ಲೆಜೆಂಡರ್ ಅನ್ನು ಆಧರಿಸಿದ ಹೊಸ ಟೊಯೊಟಾ ಫಾರ್ಚುನರ್ ಜಿಆರ್ ಸ್ಪೋರ್ಟ್ ಅನ್ನು ಸಾಮಾನ್ಯ ಮಾದರಿಯಿಂದ ಸುಲಭವಾಗಿ ಗುರುತಿಸಬಹುದು. ಈ ಟೊಯೊಟಾ ಫಾರ್ಚುನರ್ ಜಿಆರ್ ಸ್ಪೋರ್ಟ್ ಎಸ್‍ಯುವಿ ಪರಿಷ್ಕೃತ ಏರ್ ಡ್ಯಾಮ್‌ನೊಂದಿಗೆ ಹೊಸದಾಗಿ ವಿನ್ಯಾಸಗೊಳಿಸಲಾದ ಬಂಪರ್ ಅನ್ನು ಹೊಂದಿದೆ, 'GR ಬ್ಯಾಡ್ಜಿಂಗ್ ಮತ್ತು ಮುಂಭಾಗದ ತುದಿಯಲ್ಲಿ ಹೊಸ ಫಾಗ್ ಲ್ಯಾಂಪ್ ಕ್ಲಸ್ಟರ್‌ಗಳನ್ನು ಹೊಂದಿದೆ.

ಡಾರ್ಕ್ ಫಿನಿಶ್ ಹೊಂದಿರುವ ಅದರ ಡ್ಯುಯಲ್-ಟೋನ್ ಅಲಾಯ್ ವ್ಹೀಲ್ ಗಳು ಲೆಜೆಂಡರ್ ಅನ್ನು ಹೋಲುತ್ತವೆ, ಇದು ಸ್ವಲ್ಪ ಪರಿಷ್ಕೃತ ಹಿಂಬದಿಯ ಬಂಪರ್ ಮತ್ತು ಟೈಲ್ಲ್ಯಾಂಪ್‌ಗಳ ನಡುವೆ ಬಾಡಿಯ ಬಣ್ಣದ ಟ್ರಿಮ್ ಸ್ಟ್ರಿಪ್ ಅನ್ನು ಪಡೆಯುತ್ತದೆ. ಹೊಸ ಟೊಯೋಟಾ ಫಾರ್ಚುನರ್ GR-S ರೂಪಾಂತರವು GR ಲೋಗೋವನ್ನು ಒಳಗೊಂಡಿರುವ ರೆಡ್ ಬ್ರೇಕ್ ಕ್ಯಾಲಿಪರ್‌ಗಳೊಂದಿಗೆ ಬರುತ್ತದೆ. ಬ್ಲ್ಯಾಕ್ ಲೆದರ್ ಸೀಟ್‌ಗಳು ಮತ್ತು ಕೆಂಪು ಸ್ಟಿಚಿಂಗ್‌ನೊಂದಿಗೆ ಸ್ಯೂಡ್ ಸಜ್ಜುಗಳೊಂದಿಗೆ ಒಳಾಂಗಣವು ಸ್ಪೋರ್ಟಿಯರ್ ಆಗಿ ಕಾಣುತ್ತದೆ. ಹೆಡ್‌ರೆಸ್ಟ್ ಮತ್ತು ಸ್ಟೀರಿಂಗ್ ವೀಲ್‌ನಲ್ಲಿ GR ಲೋಗೋಗಳನ್ನು ನೀವು ಗಮನಿಸಬಹುದು. ಇದರ ಸೆಂಟರ್ ಕನ್ಸೋಲ್ ಮತ್ತು ಇನ್ಸ್ ಟ್ರೂಮೆಂಟ್ ಪ್ಯಾನೆಲ್ ವಿಭಿನ್ನ ಟ್ರಿಮ್ ಫಿನಿಶ್ ಅನ್ನು ಹೊಂದಿದೆ.

ಹೊಸ ಟೊಯೊಟಾ ಫಾರ್ಚುನರ್ ಜಿಆರ್ ಸ್ಪೋರ್ಟ್‌ನ ಸ್ಟ್ಯಾಂಡರ್ಡ್ ಫೀಚರ್ ಕಿಟ್ ಗೆಸ್ಚರ್-ಕಂಟ್ರೋಲ್ ಟೈಲ್‌ಗೇಟ್, ಇತ್ತೀಚಿನ ಸ್ಮಾರ್ಟ್‌ಫೋನ್ ಸಂಪರ್ಕದೊಂದಿಗೆ 8.0-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಜೆಬಿಎಲ್ ಆಡಿಯೊ ಸಿಸ್ಟಮ್, ಡ್ಯುಯಲ್ ಜೋನ್ ಕ್ಲೈಮೇಟ್ ಕಂಟ್ರೋಲ್, ಕನೆಕ್ಟ್ ಕಾರ್ ಟೆಕ್, ಸ್ಟೆಬಿಲಿಟಿ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್, 7 ಏರ್‌ಬ್ಯಾಗ್‌ಗಳು ಮತ್ತು ಇನ್ನಷ್ಟು ಫೀಚರ್ಸ್ ಗಳನ್ನು ಹೊಂದಿವೆ. ಫಾರ್ಚುನರ್ GR ಸ್ಪೋರ್ಟ್ ರೂಪಾಂತರದಲ್ಲಿ 4WD ಸಿಸ್ತಂ ಅನ್ನು ಪ್ರತ್ಯೇಕವಾಗಿ ನೀಡಲಾಗುತ್ತದೆ. ಇನ್ನು ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಲೆಜೆಂಡರ್ ಎಸ್‍ಯುವಿಯು ಹೆಚ್ಚು ಅಗ್ರೇಸಿವ್ ಮತ್ತು ಸ್ಪೋರ್ಟಿಯರ್ ವಿನ್ಯಾಸವನ್ನು ಹೊಂದಿದೆ. ಲೆಜೆಂಡರ್ ಮರುವಿನ್ಯಾಸಗೊಳಿಸಲಾದ ಹೆಡ್‌ಲ್ಯಾಂಪ್ ಕ್ಲಸ್ಟರ್ ಅನ್ನು ಪಡೆಯುತ್ತದೆ.

ಟೊಯೊಟಾ ಫಾರ್ಚುನರ್ ಲೆಜೆಂಡರ್ 4X4 ವೆರಿಯೆಂಟ್ ನಲ್ಲಿರುವ ಅದೇ 2.8 ಲೀಟರ್ ಡೀಸೆಲ್ ಎಂಜಿನ್ ಅನ್ನು ರ್ಚುನರ್ ಜಿಆರ್ ಸ್ಪೋರ್ಟ್ ಹೊಂದಿದೆ. ಈ ಎಂಜಿನ್ 204 ಬಿಹೆಚ್‍ಪಿ ಪವರ್ ಮತ್ತು 500 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು ಆರು ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.