ಸ್ಮಾರ್ಟ್‌ವಾಚ್ ಕನೆಕ್ಟಿವಿಟಿ ಫೀಚರ್‌ನೊಂದಿಗೆ ಬಿಡುಗಡೆಯಾಗಲಿದೆ ಟೊಯೊಟಾ ಗ್ಲಾಂಝಾ ಕಾರು

ಮಾರುತಿ ಸುಜುಕಿ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಬಲೆನೊ ಕಾರನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತು. ಈ ಕಾರಿಗೆ ಈಗಾಗಲೇ 25,000 ಬುಕ್ಕಿಂಗ್‌ಗಳೊಂದಿಗೆ ಭರ್ಜರಿ ಬೇಡಿಕೆಯನ್ನು ಪಡೆದುಕೊಂಡಿದೆ. ಇದೀಗ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (TKM) ಕಂಪನಿ ಕೂಡ ಮಾರುತಿ ಸುಜುಕಿ ಬಲೆನೊ ಮಾದರಿಯ ರಿಬ್ಯಾಡ್ಜ್ ಆವೃತ್ತಿಯಾದ ಗ್ಲಾಂಜಾವನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.

ಸ್ಮಾರ್ಟ್‌ವಾಚ್ ಕನೆಕ್ಟಿವಿಟಿ ಫೀಚರ್‌ನೊಂದಿಗೆ ಬಿಡುಗಡೆಯಾಗಲಿದೆ ಟೊಯೊಟಾ ಗ್ಲಾಂಝಾ ಕಾರು

ಟೊಯೊಟಾ ಗ್ಲಾಂಝಾ ಮಾರುತಿ ಸುಜುಕಿ ಬಲೆನೊ ಮಾದರಿಯ ರಿಬ್ಯಾಡ್ಜ್ ಆವೃತ್ತಿಯಾಗಿರುವುದರಿಂದ, ಜಪಾನಿನ ತಯಾರಕರು ನವೀಕರಿಸಿದ ಮಾರುತಿ ಸುಜುಕಿ ಬಲೆನೊವನ್ನು ಆಧರಿಸಿ ಹೊಸ ಗ್ಲಾಂಜಾವನ್ನು ಬಿಡುಗಡೆ ಮಾಡುತ್ತಾರೆ. ಹೊಸ ಟೊಯೊಟಾ ಗ್ಲಾಂಝಾ ಕಾರು ಸ್ಪಾಟ್ ಟೆಸ್ಟ್ ನಡೆಸುತ್ತಿರುವ ಸ್ಪೈ ಚಿತ್ರಗಳು ಇತ್ತೀಚೆಗೆ ಬಹಿರಂಗವಾಗಿತ್ತು. ಈ ಹೊಸ ಟೊಯೊಟಾ ಗ್ಲಾಂಝಾ ಕಾರು ಇದೇ ಮಾರ್ಚ್ 15 ರಂದು ಬಿಡುಗಡೆಯಾಗಲಿದೆ. ನವೀಕರಿಸಿದ ಹ್ಯಾಚ್‌ಬ್ಯಾಕ್‌ಗಾಗಿ ಟೀಸರ್‌ಗಳನ್ನು ಬಿಡುಗಡೆ ಮಾಡುತ್ತಿದ್ದಾರೆ.

ಸ್ಮಾರ್ಟ್‌ವಾಚ್ ಕನೆಕ್ಟಿವಿಟಿ ಫೀಚರ್‌ನೊಂದಿಗೆ ಬಿಡುಗಡೆಯಾಗಲಿದೆ ಟೊಯೊಟಾ ಗ್ಲಾಂಝಾ ಕಾರು

ಇದು ಕಾರಿನ ಹೊಸ ವೈಶಿಷ್ಟ್ಯಗಳನ್ನು ತೋರಿಸುತ್ತದೆ. ಇತ್ತೀಚಿನ ಟೀಸರ್ ವೀಡಿಯೊಗಳು ಟೊಯೊಟಾದ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕನೆಕ್ಟೆಡ್ ಕಾರ್ ತಂತ್ರಜ್ಞಾನದೊಂದಿಗೆ ಸ್ಮಾರ್ಟ್ ವಾಚ್ ಕನೆಕ್ಟಿವಿಟಿಯನ್ನು ಪಡೆಯುತ್ತದೆ ಎಂದು ಬಹಿರಂಗಪಡಿಸುತ್ತದೆ.

ಸ್ಮಾರ್ಟ್‌ವಾಚ್ ಕನೆಕ್ಟಿವಿಟಿ ಫೀಚರ್‌ನೊಂದಿಗೆ ಬಿಡುಗಡೆಯಾಗಲಿದೆ ಟೊಯೊಟಾ ಗ್ಲಾಂಝಾ ಕಾರು

ಒಂದು ಟೀಸರ್ ಟೊಯೊಟಾ ಗ್ಲಾಂಝಾ ಕಾರನ್ನು ಸ್ಮಾರ್ಟ್‌ವಾಚ್ ಮೂಲಕ ಲಾಕ್/ಅನ್‌ಲಾಕ್ ಮಾಡಿರುವುದನ್ನು ತೋರಿಸಿದರೆ, ಇನ್ನೊಂದು ಕನೆಕ್ಟ್ ಮಾಡಿದ ಸ್ಮಾರ್ಟ್‌ಫೋನ್ ಅಪ್ಲಿಕೇಶನ್ ಮೂಲಕ 'ಫೈಂಡ್ ಮೈ ಕಾರ್' ವೈಶಿಷ್ಟ್ಯವನ್ನು ತೋರಿಸುತ್ತದೆ.

ಸ್ಮಾರ್ಟ್‌ವಾಚ್ ಕನೆಕ್ಟಿವಿಟಿ ಫೀಚರ್‌ನೊಂದಿಗೆ ಬಿಡುಗಡೆಯಾಗಲಿದೆ ಟೊಯೊಟಾ ಗ್ಲಾಂಝಾ ಕಾರು

ಮುಂಬರುವ ಗ್ಲಾಂಝಾ ಫೇಸ್‌ಲಿಫ್ಟ್ ಹೊರಹೋಗುವ ಆವೃತ್ತಿಗಿಂತ ಗಮನಾರ್ಹವಾಗಿ ಹೆಚ್ಚು ಪ್ರೀಮಿಯಂ ಆಗಿರುತ್ತದೆ. ಈ ಹಿಂದೆ, ತಯಾರಕರು ಹೊಸ ಫ್ರೀ-ಸ್ಟ್ಯಾಂಡಿಂಗ್ 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು 360-ಡಿಗ್ರಿ ಕ್ಯಾಮೆರಾದಂತಹ ಕೆಲವು ವೈಶಿಷ್ಟ್ಯಗಳನ್ನು ಟೀಸರ್ ಮಾಡಿದ್ದರು.

ಸ್ಮಾರ್ಟ್‌ವಾಚ್ ಕನೆಕ್ಟಿವಿಟಿ ಫೀಚರ್‌ನೊಂದಿಗೆ ಬಿಡುಗಡೆಯಾಗಲಿದೆ ಟೊಯೊಟಾ ಗ್ಲಾಂಝಾ ಕಾರು

ಈ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಆಕಾರ ಮತ್ತು ಗಾತ್ರದಲ್ಲಿ ಫೇಸ್‌ಲಿಫ್ಟೆಡ್ ಬಲೆನೊದಂತೆಯ ಇದೆ, ಹೊಸ ಇನ್ಫೋಟೈನ್‌ಮೆಂಟ್ ಸಿಸ್ಟಮ್ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ, ನ್ಯಾವಿಗೇಷನ್ ಮತ್ತು ವಾಯ್ಸ್ ಕಮಾಂಡ್‌ಗಳೊಂದಿಗೆ ಹೊಂದಿಕೊಳ್ಳುತ್ತದೆ. ಟಚ್‌ಸ್ಕ್ರೀನ್‌ನ ಕೆಳಗೆ ಇರಿಸಲಾಗಿರುವ ಕ್ಲೈಮೆಂಟ್ ವೆಂಟ್ ಗಳು ಮತ್ತು ಹಝರ್ಡ್ ಲ್ಯಾಂಪ್ ಸ್ವಿಚ್ ಸಹ 2022 ಬಲೆನೊಗೆ ಹೋಲುತ್ತವೆ,

ಸ್ಮಾರ್ಟ್‌ವಾಚ್ ಕನೆಕ್ಟಿವಿಟಿ ಫೀಚರ್‌ನೊಂದಿಗೆ ಬಿಡುಗಡೆಯಾಗಲಿದೆ ಟೊಯೊಟಾ ಗ್ಲಾಂಝಾ ಕಾರು

ಹೊಸ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಕಾರಿನ ಡ್ಯಾಶ್‌ಬೋರ್ಡ್‌ ಪಿಯಾನೋ ಬ್ಲ್ಯಾಕ್ ಫಿನಿಶಿಂಗ್ ಅನ್ನು ಹೊಂದಿದೆ, ಒಟ್ಟಾರೆ ವಿನ್ಯಾಸವು ಬಲೆನೊವನ್ನು ನೆನಪಿಸುತ್ತದೆ. ಲೋ ಸ್ಪೆಕ್ ರೂಪಾಂತರಗಳು ಸ್ಮಾರ್ಟ್‌ಫೋನ್ ಸಂಪರ್ಕದೊಂದಿಗೆ 7-ಇಂಚಿನ ಸ್ಮಾರ್ಟ್‌ಪ್ಲೇ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಪಡೆಯುವ ಸಾಧ್ಯತೆಯಿದೆ.

ಸ್ಮಾರ್ಟ್‌ವಾಚ್ ಕನೆಕ್ಟಿವಿಟಿ ಫೀಚರ್‌ನೊಂದಿಗೆ ಬಿಡುಗಡೆಯಾಗಲಿದೆ ಟೊಯೊಟಾ ಗ್ಲಾಂಝಾ ಕಾರು

ಇದು ಹೆಡ್ಸ್-ಅಪ್ ಡಿಸ್ ಪ್ಲೇ, 360 ಡಿಗ್ರಿ ಕ್ಯಾಮೆರಾ, ಆರು ಏರ್‌ಬ್ಯಾಗ್‌ಗಳು, ಇಎಸ್‌ಪಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ಕ್ರೂಸ್ ಕಂಟ್ರೋಲ್, ಹೊಸ ಮಲ್ಟಿ-ಫಂಕ್ಷನಲ್ ಸ್ಟೀರಿಂಗ್ ವ್ಹೀಲ್ ಮತ್ತು ಇತರ ಫೀಚರ್ಸ್ ಗಳನ್ನು ಹೊಂದಿರಲಿವೆ

ಸ್ಮಾರ್ಟ್‌ವಾಚ್ ಕನೆಕ್ಟಿವಿಟಿ ಫೀಚರ್‌ನೊಂದಿಗೆ ಬಿಡುಗಡೆಯಾಗಲಿದೆ ಟೊಯೊಟಾ ಗ್ಲಾಂಝಾ ಕಾರು

ಹೆಚ್ಚಿನ ವಿನ್ಯಾಸ ಮತ್ತು ಒಳಾಂಗಣ ಬದಲಾವಣೆಗಳು ಹೊಸ ಬಲೆನೊಗೆ ಅನುಗುಣವಾಗಿರುತ್ತವೆ, ಹೊಸ ಟೊಯೊಟಾ ಗ್ಲಾಂಝಾ ಕೂಡ ಕೆಲವು ಹೆಚ್ಚುವರಿ ಬದಲಾವಣೆಗಳನ್ನು ಪಡೆಯುತ್ತದೆ. ಈ ಟೊಯೊಟಾ ಗ್ಲಾಂಝಾ ಕಾರು ಹಿಂಭಾಗದ ಬಂಪರ್, ಫೆಂಡರ್‌ಗಳು ಮತ್ತು ಟೈಲ್‌ಗೇಟ್ ಅನ್ನು ಬಲೆನೊದೊಂದಿಗೆ ಹಂಚಿಕೊಳ್ಳುತ್ತದೆ.

ಸ್ಮಾರ್ಟ್‌ವಾಚ್ ಕನೆಕ್ಟಿವಿಟಿ ಫೀಚರ್‌ನೊಂದಿಗೆ ಬಿಡುಗಡೆಯಾಗಲಿದೆ ಟೊಯೊಟಾ ಗ್ಲಾಂಝಾ ಕಾರು

ಆದರೆ ಅಲಾಯ್ ವ್ಹೀಲ್ ಗಳು ಮತ್ತು ಟೈಲ್-ಲೈಟ್‌ಗಳಿಗಾಗಿ ಹೊಸ ಇನ್‌ಸರ್ಟ್‌ಗಳನ್ನು ಹೊಂದಿರುತ್ತದೆ. ಹೊಸ ಬಲೆನೊಗೆ ಹೋಲಿಸಿದರೆ ಹ್ಯಾಚ್‌ಬ್ಯಾಕ್ ವಿಭಿನ್ನ ಮುಂಭಾಗದ ವಿನ್ಯಾಸವನ್ನು ಪಡೆಯುತ್ತದೆ ಇದು ಹೊಸ ಮುಂಭಾಗದ ಬಂಪರ್, ವಿಭಿನ್ನ ಗ್ರಿಲ್ ವಿನ್ಯಾಸ ಮತ್ತು ವಿಭಿನ್ನ DRL (ಡೇಟೈಮ್ ರನ್ನಿಂಗ್ ಲೈಟ್) ಜೊತೆಗೆ ಹೊಸ ಹೆಡ್‌ಲ್ಯಾಂಪ್‌ಗಳನ್ನು ಒಳಗೊಂಡಿದೆ.

ಸ್ಮಾರ್ಟ್‌ವಾಚ್ ಕನೆಕ್ಟಿವಿಟಿ ಫೀಚರ್‌ನೊಂದಿಗೆ ಬಿಡುಗಡೆಯಾಗಲಿದೆ ಟೊಯೊಟಾ ಗ್ಲಾಂಝಾ ಕಾರು

ಒಟ್ಟಿನಲ್ಲಿ ಹೊಸ ಟೊಯೊಟಾ ಗ್ಲಾಂಝಾ ಕಾರು ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಯಾಗಲಿದೆ. ಈ ಹೊಸ ಬಲೆನೊದಂತೆಯೇ, ಹೊಸ ಟೊಯೊಟಾ ಗ್ಲಾಂಝಾ ಕಾರು 1.2-ಲೀಟರ್ ಡ್ಯುಯಲ್-ಜೆಟ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಈ ಎಂಜಿನ್ 89 ಬಿಹೆಚ್‍ಪಿ ಪವರ್ ಮತ್ತು 113 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಮತ್ತು ಎಎಂಟಿ ಗೇರ್ ಬಾಸ್ ಅನ್ನು ಜೋಡಿಸಲಾಗುತ್ತದೆ. ಇನ್ನು ಟೊಯೊಟಾ ತನ್ನ ಪೋರ್ಟ್ಫೋಲಿಯೊವನ್ನು ವಿಸ್ತರಿಸಲು ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ವಾಹನಗಳನ್ನು ಬಿಡುಗಡೆ ಮಾಡಲಿದೆ.

ಸ್ಮಾರ್ಟ್‌ವಾಚ್ ಕನೆಕ್ಟಿವಿಟಿ ಫೀಚರ್‌ನೊಂದಿಗೆ ಬಿಡುಗಡೆಯಾಗಲಿದೆ ಟೊಯೊಟಾ ಗ್ಲಾಂಝಾ ಕಾರು

ಟೊಯೊಟಾ ಕಿರ್ಲೋಸ್ಕರ್ ಮೋಟಾರ್ 2022ರ ಫೆಬ್ರವರಿ ತಿಂಗಳ ಮಾಸಿಕ ಮಾರಾಟ ವರದಿಯನ್ನು ಬಹಿರಂಗಪಡಿಸಿದೆ. ವರದಿಯ ಪ್ರಕಾರ, ಕಳೆದ ತಿಂಗಳು ಟೊಯೊಟಾ ಕಂಪನಿಯು ಒಟ್ಟು 8745 ಯುನಿಟ್‌ಗಳನ್ನು ಮಾರಾಟಗೊಳಿಸಿವೆ. ಟೊಯೊಟಾ ಕಂಪನಿಯು ಕಳೆದ ವರ್ಷ ಇದೇ ತಿಂಗಳಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಒಟ್ಟು 14,075 ಯುನಿಟ್‌ಗಳನ್ನು ಮಾರಾಟ ಮಾಡಿತ್ತು ಮತ್ತು ಆದ್ದರಿಂದ, ಶೇಕಡಾ 37.8 ರಷ್ಟು ಕುಸಿತವನ್ನು ಕಂಡಿದೆ. ಇನ್ನು ತಿಂಗಳಿನಿಂದ ತಿಂಗಳ ಮಾರಾಟಕ್ಕೆ ಹೋಲಿಸಿದರೆ, ಈ ವರ್ಷದ ಜನವರಿ ತಿಂಗಳಿನಲ್ಲಿ ಮಾರಾಟವಾದ 7,328 ಯುನಿಟ್‌ಗಳಿಗೆ ಹೋಲಿಸಿದರೆ ಶೇ.19 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ.

ಸ್ಮಾರ್ಟ್‌ವಾಚ್ ಕನೆಕ್ಟಿವಿಟಿ ಫೀಚರ್‌ನೊಂದಿಗೆ ಬಿಡುಗಡೆಯಾಗಲಿದೆ ಟೊಯೊಟಾ ಗ್ಲಾಂಝಾ ಕಾರು

ಟೊಯೊಟಾ ಗ್ಲಾಂಝಾದಂತಹ ಮಾದರಿಗಳು ಭಾರತದಲ್ಲಿ ಕಂಪನಿಗೆ ಮಾರಾಟದ ಸಂಖ್ಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಟೊಯೊಟಾ ಮುಂಬರುವ ಗ್ಲಾಂಝಾಗೆ ಕೆಲವು ಬದಲಾವಣೆಗಳನ್ನು ಸೇರಿಸುತ್ತದೆ. ಇದು 2022ರ ಮಾರುತಿ ಸುಜುಕಿ ಬಲೆನೊದಿಂದ ದೃಶ್ಯಾತ್ಮಕವಾಗಿ ಪ್ರತ್ಯೇಕಿಸುತ್ತದೆ.

Most Read Articles

Kannada
Read more on ಟೊಯೊಟಾ toyota
English summary
New toyota glanza to get connected car features teaser details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X