ಭಾರತದಲ್ಲಿ ಕಾಣಿಸಿಕೊಂಡ ಬಹುಬೇಡಿಕೆಯ ಟೊಯೊಟಾ ಲ್ಯಾಂಡ್ ಕ್ರೂಸರ್ ಎಸ್‍ಯುವಿ
ಜಪಾನ್ ಮೂಲದ ಕಾರು ತಯಾರಕ ಕಂಪನಿಯಾದ ಟೊಯೊಟಾ(Toyota) ತನ್ನ ನ್ಯೂ ಜನರೇಷನ್ ಲ್ಯಾಂಡ್ ಕ್ರೂಸರ್(Land Cruiser) ಎಸ್‍ಯುವಿಯನ್ನು ಕಳೆದ ವರ್ಷ ಜಾಗತಿಕ ಮಟ್ಟದಲ್ಲಿ ಪರಿಚಯಿಸಿತು. ಈ ಹೊಸ ಟೊಯೊಟಾ ಲ್ಯಾಂಡ್ ಕ್ರೂಸರ್ ಎಸ್‍ಯುವಿಯು ಹೊಸ ಸಂಚಲವನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿದೆ.

ನ್ಯೂ ಜನರೇಷನ್ ಟೊಯೊಟಾ ಲ್ಯಾಂಡ್ ಕ್ರೂಸರ್ ಎಸ್‍ಯುವಿಯು ಭಾರತದಲ್ಲಿ ಬಿಡುಗಡೆಯಾಗುವ ಮುನ್ನವೇ ಇಲ್ಲಿ ಕಾಣಿಸಿಕೊಂಡಿದೆ. ಇದು ಬಲಗೈ-ಡ್ರೈವ್ ಟೊಯೊಟಾ ಲ್ಯಾಂಡ್ ಕ್ರೂಸರ್ ಎಸ್‍ಯುವಿಯಾಗಿದೆ. ಈ ಎಸ್‍ಯುವಿಯು ಯಾವುದೇ ನಂಬರ್ ಪ್ಲೇಟ್‌ಗಳನ್ನು ಹೊಂದಿಲ್ಲ. ಎಸ್‍ಯುವಿಯು ಡೆಮೊ ವಾಹನವಲ್ಲ ಮತ್ತು ಮಾದರಿಯನ್ನು ಯಾರದರು ಆಮದು ಮಾಡಿಕೊಂಡಿರುವ ಸಾಧ್ಯತೆ ಹೆಚ್ಚು. ಮುಂಬರುವ ಈ ಎಸ್‍ಯುವಿಯನ್ನು ತಮಿಳುನಾಡಿನ ಕೊಯಮತ್ತೂರಿನಲ್ಲಿ ಗುರುತಿಸಲಾಗಿದೆ.

ಮೊದಲು, ಟೊಯೊಟಾ ಭಾರತದಲ್ಲಿ ಲ್ಯಾಂಡ್ ಕ್ರೂಸರ್ ಎಲ್‌ಸಿ300 ಎಸ್‍ಯುವಿಗಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಿದ್ದಾರೆ. ಆದರೆ ಈ ಎಸ್‍ಯುವಿಯು ಬೇಡಿಕೆಯ ಕಾರಣ ಅದನ್ನು ಶೀಘ್ರದಲ್ಲೇ ಸ್ಥಗಿತಗೊಳಿಸಿತು. ವರದಿಗಳ ಪ್ರಕಾರ, ಟೊಯೊಟಾ ಲ್ಯಾಂಡ್ ಕ್ರೂಸರ್ ಎಲ್‌ಸಿ300ನ ಮೊದಲ ಬ್ಯಾಚ್ ಈಗಾಗಲೇ ಮಾರಾಟವಾಗಿದೆ.

ಭಾರತದಲ್ಲಿ ಮಾತ್ರವಲ್ಲದೆ ಟೊಯೊಟಾ ಲ್ಯಾಂಡ್ ಕ್ರೂಸರ್ ಎಲ್‌ಸಿ300 ಎಸ್‍ಯುವಿಗೆ ಬಿಡುಗಡೆ ಮಾಡಿದ ಪ್ರತಿಯೊಂದು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲೂ ಬೇಡಿಕೆ ಹೆಚ್ಚಿದೆ. ಟೊಯೋಟಾ ಲ್ಯಾಂಡ್ ಕ್ರೂಸರ್ ಎಸ್‍ಯುವಿಗೆ ವೈಟಿಂಗ್ ಪಿರೇಡ್ ಕೆಲವು ದೇಶಗಳಲ್ಲಿ 4 ವರ್ಷಗಳವರೆಗೆ ಇದೆ.

ಈ ನ್ಯೂ ಜನರೇಷನ್ ಟೊಯೊಟಾ ಲ್ಯಾಂಡ್ ಕ್ರೂಸರ್ ಎಲ್‌ಸಿ300 ಈ ವರ್ಷದ ಆಗಸ್ಟ್‌ನಲ್ಲಿ ಭಾರತದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಹಿಂದಿನ ಫೆಬ್ರವರಿಯಲ್ಲಿ, ಟೊಯೊಟಾ ವಿತರಕರು ವಿ6 ಡೀಸೆಲ್ ರೂಪಾಂತರಕ್ಕಾಗಿ ಬುಕ್ಕಿಂಗ್ ತೆಗೆದುಕೊಳ್ಳುತ್ತಿದ್ದರು. ಮೊದಲ ಬ್ಯಾಚ್ ಮಾರಾಟವಾಗಿದೆ. ಈ ಟೊಯೊಟಾ ಲ್ಯಾಂಡ್ ಕ್ರೂಸರ್ ಬೃಹತ್ ಗಾತ್ರದ ಆಫ್-ರೋಡ್ ಎಸ್‍ಯುವಿಯಾಗಿದೆ.

ಟೊಯೊಟಾ ಕಂಪನಿಯು ಐಕಾನಿಕ್ ಲ್ಯಾಂಡ್ ಕ್ರೂಸರ್ ಎಸ್‍ಯುವಿಯನ್ನು 1951 ರಲ್ಲಿ ಮೊದಲ ಬಾರಿಗೆ ಬಿಡುಗಡೆಗೊಳಿಸಿತು.ಇದುವರೆಗೂ 170 ದೇಶಗಳಲ್ಲಿ ಲ್ಯಾಂಡ್ ಕ್ರೂಸರ್‌ನ 1.04 ಕೋಟಿ ಯೂನಿಟ್‌ಗಳನ್ನು ಮಾರಾಟ ಮಾಡಿದೆ. ನ್ಯೂ ಜನರೇಷನ್ ಮಾದರಿಯನ್ನು ಹಿಂದಿನದಕ್ಕಿಂತ ಹೆಚ್ಚು ಆಧುನಿಕ ಮತ್ತು ಪ್ರೀಮಿಯಂ ಮಾದರಿಯಾಗಿದೆ. ಲ್ಯಾಂಡ್ ಕ್ರೂಸರ್' ಬ್ರ್ಯಾಂಡ್ ಹೆಸರು ಇಂದಿಗೂ ಜನಪ್ರಿಯ ಬ್ರ್ಯಾಂಡ್ ಆಗಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ ಟೊಯೊಟಾ ತನ್ನ ಲ್ಯಾಂಡ್ ಕ್ರೂಸರ್ ಎಸ್‍ಯುವಿಯನ್ನು 1951ರಲ್ಲಿ ಬಿಡುಗಡೆಗೊಳಿಸಿತ್ತು. ಇನ್ನು ಕಳೆದ ಕೆಲವು ವರ್ಷಗಳಿಗಿಂದ ಭಾರತೀಯ ಮಾರುಕಟ್ಟೆಯಲ್ಲಿ ಟೊಯೊಟಾ ಲ್ಯಾಂಡ್ ಕ್ರೂಸರ್ ಎಸ್‍ಯುವಿಯ ಜನಪ್ರಿಯತೆ ಮತ್ತು ಬೇಡಿಕೆಯು ಕಡಿಮೆಯಾಗಿತ್ತು. ಆದರೆ ಟೊಯೊಟಾ ಲ್ಯಾಂಡ್ ಕ್ರೂಸರ್ ಒಂದು ಕಾಲದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಪಾರುಪತ್ಯ ಸಾಧಿಸಿದ ಎಸ್‍ಯುವಿ ಇದಾಗಿದೆ.

ನ್ಯೂ ಜನರೇಷನ್ ಟೊಯೊಟಾ ಲ್ಯಾಂಡ್ ಕ್ರೂಸರ್ ಎಸ್‍ಯುವಿಯು ಎರಡು ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಇದು 3.5 ಎಲ್ ವಿ6 ಟ್ವಿನ್-ಟರ್ಬೊ ಪೆಟ್ರೋಲ್ ಮತ್ತು 3.3 ಎಲ್ ವಿ6 ಟ್ವಿನ್-ಟರ್ಬೊ ಡೀಸೆಲ್ ಎಂಜಿನ್ ಆಯ್ಕೆಗಳಾಗಿವೆ. ಇದರಲ್ಲಿ 3.5-ಲೀಟರ್ ವಿ6 ಟ್ವಿನ್-ಟರ್ಬೊ ಎಂಜಿನ್ ಅನ್ನು 409 ಬಿಹೆಚ್‍ಪಿ ಪವರ್ ಮತ್ತು 650 ಎನ್ಎಂ ಟಾರ್ಕ್ ಉತ್ಪಾದಿಸತ್ತದೆ.

ಇನ್ನು ನ್ಯೂ ಜನರೇಷನ್ ಟೋಯೊಟಾ ಲ್ಯಾಂಡ್ ಕ್ರೂಸರ್ ಎಸ್‍ಯುವಿಯಲ್ಲಿ 3.5-ಲೀಟರ್ ವಿ6 ಟ್ವಿನ್-ಟರ್ಬೊ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 409 ಬಿಹೆಚ್‍ಪಿ ಪವರ್ ಮತ್ತು 650 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.ಈ ಎಂಜಿನ್ ನೊಂದಿಗೆ 10-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗುತ್ತದೆ. ಈ ಗೇರ್ ಬಾಕ್ಸ್ ಇಂಧನ ಬಳಕೆ ಮತ್ತು ಇಂಗಾಲದ ಹೊರಸೂಸುವಿಕೆಯನ್ನು ಹಿಂದಿನದಕ್ಕಿಂತ ಶೇ.10 ಕಡಿಮೆ ಮಾಡುತ್ತದೆ ಎಂದು ಕಂಪನಿ ಹೇಳಿದೆ,

ಈ ಟೊಯೊಟಾ ಲ್ಯಾಂಡ್ ಕ್ರೂಸರ್ ಎಸ್‍ಯುವಿಯು ಹೊಸ ಟಿಎನ್‌ಜಿಎ (ಟೊಯೊಟಾ ನ್ಯೂ ಗ್ಲೋಬಲ್ ಆರ್ಕಿಟೆಕ್ಚರ್) ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದ ಬ್ರಾಂಡ್‌ನ ಮೊದಲ ಬಾಡಿ-ಆನ್-ಫ್ರೇಮ್ ವಾಹನ ಇದಾಗಿದೆ, ಈ ಹೊಸ ಟೊಯೊಟಾ ಲ್ಯಾಂಡ್ ಕ್ರೂಸರ್ ಎಸ್‍ಯುವಿಯಲ್ಲಿ ಕೆಲವು ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡಲಾಗಿದೆ. ಈ ಬ್ರ್ಯಾಂಡ್‌ನ ಹೊಸ ಪ್ರಮುಖ ಎಸ್‍ಯುವಿ ಹೆಚ್ಚು ಪ್ರಮುಖವಾದ ಗ್ರಿಲ್, ಹೊಸ ಲೈಟಿಂಗ್ ಸೆಟಪ್, ಪರಿಷ್ಕೃತ ಟೈಲ್‌ಗೇಟ್ ಮತ್ತು ಹೊಸದಾಗಿ ವಿನ್ಯಾಸಗೊಳಿಸಲಾದ ಟೈಲ್‌ಲ್ಯಾಂಪ್‌ಗಳನ್ನು ಪಡೆಯುತ್ತದೆ.

ಈ ಟೊಯೊಟಾ ಲ್ಯಾಂಡ್ ಕ್ರೂಸರ್ ಎಸ್‍ಯುವಿಯು ಹೊಸ ಟಿಎನ್‌ಜಿಎ (ಟೊಯೊಟಾ ನ್ಯೂ ಗ್ಲೋಬಲ್ ಆರ್ಕಿಟೆಕ್ಚರ್) ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದ ಬ್ರಾಂಡ್‌ನ ಮೊದಲ ಬಾಡಿ-ಆನ್-ಫ್ರೇಮ್ ವಾಹನ ಇದಾಗಿದೆ, ಈ ಹೊಸ ಟೊಯೊಟಾ ಲ್ಯಾಂಡ್ ಕ್ರೂಸರ್ ಎಸ್‍ಯುವಿಯಲ್ಲಿ ಕೆಲವು ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡಲಾಗಿದೆ. ಈ ಬ್ರ್ಯಾಂಡ್‌ನ ಹೊಸ ಪ್ರಮುಖ ಎಸ್‍ಯುವಿ ಹೆಚ್ಚು ಪ್ರಮುಖವಾದ ಗ್ರಿಲ್, ಹೊಸ ಲೈಟಿಂಗ್ ಸೆಟಪ್, ಪರಿಷ್ಕೃತ ಟೈಲ್‌ಗೇಟ್ ಮತ್ತು ಹೊಸದಾಗಿ ವಿನ್ಯಾಸಗೊಳಿಸಲಾದ ಟೈಲ್‌ಲ್ಯಾಂಪ್‌ಗಳನ್ನು ಪಡೆಯುತ್ತದೆ.

ಈ ಹೊಸ ಟೊಯೊಟಾ ಲ್ಯಾಂಡ್ ಕ್ರೂಸರ್ ವಿಶ್ವದ ಮೊದಲ ಎಲೆಕ್ಟ್ರಾನಿಕ್ ಕೈನೆಟಿಕ್ ಡೈನಾಮಿಕ್ ಸಸ್ಪೆಂಕ್ಷನ್ ಸಿಸ್ಟಮ್ (ಇ-ಕೆಡಿಎಸ್ಎಸ್) ಅನ್ನು ಒಳಗೊಂಡಿದೆ. ಮಲ್ಟಿ-ಟೆರೈನ್ ಮಾನಿಟರ್ ಅನ್ನು ಒಳಗೊಂಡಿರುವ ಬ್ರ್ಯಾಂಡ್‌ನ ಮೊದಲ ಮಾದರಿಯಾಗಿದೆ, ಇನ್ನು ಟೊಯೊಟಾ ಕಂಪನಿಯು ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಲ್ಯಾಂಡ್ ಕ್ರೂಸರ್ ಎಸ್‍ಯುವಿಯ ಆಫ್-ರೋಡ್ ಪರ್ಫಾಮೆನ್ಸ್ ವೀಡಿಯೊವನ್ನು ಇತ್ತೀಚೆಗೆ ಹಂಚಿಕೊಂಡಿತ್ತು. ಈ ವೀಡಿಯೊಗಳಲ್ಲಿನ ವಾಯ್ಸ್‌ಓವರ್ ಕೇವಲ ಜಪಾನೀಸ್‌ನಲ್ಲಿ ಮಾತ್ರವಿದೆ. ಆದರೆ ವೀಡಿಯೊದಲ್ಲಿ ಲ್ಯಾಂಡ್ ಕ್ರೂಸರ್ ಎಷ್ಟು ಸಮರ್ಥ ಆಫ್-ರೋಡರ್ ಎಂದು ತಿಳಿಯುತ್ತದೆ. ಈ ವೀಡಿಯೋದಲ್ಲಿ ಲ್ಯಾಂಡ್ ಕ್ರೂಸರ್ ಎಸ್‍ಯುವಿ ಬೆಟ್ಟ, ಗುಡ್ಡಗಳ ಜೊತೆಯಲ್ಲಿ ಮರಳಿನಲ್ಲಿ ಸಾಗುವುದನ್ನು ಪ್ರದರ್ಶಿಸಿದ್ದಾರೆ. ಇನ್ನು ಈ ಎಸ್‍ಯುವಿಯು ಜಿಗಿಯುವುದನ್ನು ತೋರಿಸಿದ್ದಾರೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ಬಹುಬೇಡಿಕೆಯ ನ್ಯೂ ಜನರೇಷನ್ ಟೊಯೊಟಾ ಲ್ಯಾಂಡ್ ಕ್ರೂಸರ್ ಎಸ್‍ಯುವಿಯು ಭಾರತದಲ್ಲಿ ಬಿಡುಗಡೆಯಾಗುವ ಮುನ್ನವೇ ಇಲ್ಲಿ ಕಾಣಿಸಿಕೊಂಡಿದೆ. ಈ ಮಾದರಿಯನ್ನು ಯಾರದರು ಆಮದು ಮಾಡಿಕೊಂಡಿರುವ ಸಾಧ್ಯತೆ ಹೆಚ್ಚು. ಇನ್ನು ನ್ಯೂ ಜನರೇಷನ್ ಟೋಯೊಟಾ ಲ್ಯಾಂಡ್ ಕ್ರೂಸರ್ ಎಸ್‍ಯುವಿಯು ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಬಹುದು.


Click it and Unblock the Notifications