ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಟೊಯೊಟಾ ಹೈರೈಡರ್ ಸಿಎನ್‌ಜಿ ಎಸ್‍ಯುವಿ

ಇತ್ತೀಚೆಗೆ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಹೊಸ ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಎಸ್‍ಯುವಿಯು ಹೊಸ ಸಂಚಲವನ್ನು ಸೃಷ್ಟಿಸಿದೆ. ಈ ಹೊಸ ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಎಸ್‍ಯುವಿಯು ಆಕರ್ಷಕ ವಿನ್ಯಾಸ, ಅತ್ಯಾಧುನಿಕ ತಂತ್ರಜ್ಞಾನ ಮತ್ತು ಹೊಸ ಫೀಚರ್ಸ್ ಗಳೊಂದಿಗೆ ಹೆಚ್ಚಿನ ಗ್ರಾಹಕರನ್ನು ಆಕರ್ಷಿಸುತ್ತಿದೆ.

ಇದೇ ವೇಳೆ ಟೊಯೊಟಾ ಶೀಘ್ರದಲ್ಲೇ ಹೊಸ ಅರ್ಬನ್ ಕ್ರೂಸರ್ ಹೈರೈಡರ್ ಎಸ್‌ಯುವಿಯ ಸಿಎನ್‌ಜಿ ಆವೃತ್ತಿಯನ್ನು ದೇಶದಲ್ಲಿ ಬಿಡುಗಡೆ ಮಾಡುವುದಾಗಿ ಅಧಿಕೃತವಾಗಿ ಘೋಷಿಸಿದೆ. ಕಂಪನಿಯು ನಿನ್ನೆ ತನ್ನ ಗ್ಲಾಂಝಾ ಸಿಎನ್‌ಜಿ ಕಾರನ್ನು ರೂ. 8.43 ಲಕ್ಷದ ಆರಂಭಿಕ ಬೆಲೆಗೆ ಬಿಡುಗಡೆ ಮಾಡಿದೆ. ಟೊಯೊಟಾ ಹೈರೈಡರ್ ಸಿಎನ್‌ಜಿ ಮಿಡ್ ಸೈಜ್ ಎಸ್‍ಯುವಿ ವಿಭಾಗದಲ್ಲಿ ಮೊದಲ ಸಿಎನ್‌ಜಿ ಚಾಲಿತ ಮಾದರಿಯಾಗಲಿದೆ. ಟೊಯೊಟಾ ಕಂಪನಿಯು ಇತ್ತೀಚೆಗೆ ಹೈರೈಡರ್ ಸಿಎನ್‌ಜಿ ಎಸ್‍ಯುವಿಯ ಬುಕ್ಕಿಂಗ್ ಅನ್ನು ಪ್ರಾರಂಭಿಸಿದ್ದಾರೆ.

ಈ ಹೊಸ ಸಿಎನ್‌ಜಿ ಎಸ್‍ಯುವಿ ಖರೀದಿಸಲು ಬಯಸುವ ಗ್ರಾಹಕರು ರೂ 25,000 ಟೋಕನ್ ಮೊತ್ತವನ್ನು ಪಾವತಿಸಿ ಬುಕ್ ಮಾಡಬಹುದು. ಟೊಯೊಟಾ ಹೈರೈಡರ್ ಎಸ್‍ಯುವಿಯು ಶೀಘ್ರದಲ್ಲೇ 3 ಪವರ್‌ಟ್ರೇನ್ ಆಯ್ಕೆಗಳಲ್ಲಿ ನೀಡಲಾಗುವ ಮೊದಲ ಮಾದರಿಯಾಗಲಿದೆ. ಇದರಲ್ಲಿ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನದೊಂದಿಗೆ 1.5 ಲೀಟರ್ NA ಪೆಟ್ರೋಲ್, ಸ್ಟ್ರಾಂಗ್ ಹೈಬ್ರಿಡ್ ಟೆಕ್ ಮತ್ತು ಸಿಎನ್‌ಜಿ ಆವೃತ್ತಿಯೊಂದಿಗೆ 1.5 ಲೀಟರ್ ಪೆಟ್ರೋಲ್ ಸೇರಿದಂತೆ. ಸಿಎನ್‌ಜಿ ಕಿಟ್ ಅನ್ನು ಮಾರುತಿ ಮೂಲದ 1.5-ಲೀಟರ್ K15C, 4-ಸಿಲಿಂಡರ್ ಎಂಜಿನ್‌ನೊಂದಿಗೆ ಬರಲಿದೆ.

ಈ ಪವರ್‌ಟ್ರೇನ್ ಪ್ರಸ್ತುತ ಎರ್ಟಿಗಾ ಮತ್ತು XL6 ಸಿಎನ್‌ಜಿ ಮಾದರಿಗಳಲ್ಲಿ ಲಭ್ಯವಿದೆ. ಟೊಯೊಟಾ ಅಧಿಕೃತವಾಗಿ ಹೈರೈಡರ್ ಸಿಎನ್‌ಜಿಯ ಪವರ್ ಮತ್ತು ಟಾರ್ಕ್ ಅಂಕಿಅಂಶಗಳನ್ನು ಬಹಿರಂಗಪಡಿಸಿಲ್ಲ. ಸಿಎನ್‌ಜಿ ಮೋಡ್‌ನಲ್ಲಿ, ಪವರ್‌ಟ್ರೇನ್ 88 ಬಿಹೆಚ್‍ಪಿ ಪವರ್ ಮತ್ತು 121.5 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ, ಆದರೆ ಪೆಟ್ರೋಲ್ ಮೋಡ್‌ನಲ್ಲಿ ಇದು 101 ಬಿಹೆಚ್‍ಪಿ ಪವರ್ ಮತ್ತು 137 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹೈರೈಡರ್ ಸಿಎನ್‌ಜಿಯನ್ನು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ನೀಡಲಾಗುವುದು ಎಂದು ಟೊಯೊಟಾ ಖಚಿತಪಡಿಸಿದೆ.

ಇದು 26.10 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ ಎಂದು ಹೇಳಲಾಗುತ್ತಿದೆ. ಜಪಾನಿನ ವಾಹನ ತಯಾರಕರು ಹೈರೈಡರ್ ಸಿಎನ್‌ಜಿಯನ್ನು ಸ್ಟ್ಯಾಂಡರ್ಡ್ ಎಸ್‌ಯುವಿಯ ಮಿಡ್-ಸ್ಪೆಕ್ ಎಸ್ ಮತ್ತು ಜಿ ಟ್ರಿಮ್‌ಗಳಲ್ಲಿ ನೀಡಲಾಗುವುದು ಎಂದು ಖಚಿತಪಡಿಸಿದೆ. ಇನ್ನು ಸುರಕ್ಷತಾ ವೈಶಿಷ್ಟ್ಯಗಳ ವಿಷಯದಲ್ಲೂ ಗಮನಸೆಳೆಯಲಿರುವ ಅರ್ಬನ್ ಕ್ರೂಸರ್ ಹೈರೈಡರ್ ಎಸ್‍ಯುವಿ 6 ಏರ್‌ಬ್ಯಾಗ್‌ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, ಇಎಸ್‌ಪಿ, ಹಿಲ್-ಹೋಲ್ಡ್ ಅಸಿಸ್ಟ್ ಮತ್ತು ಹಿಲ್ ಡಿಸೆಂಟ್ ಕಂಟ್ರೋಲ್ ಅನ್ನು ಪಡೆಯುತ್ತದೆ.

ಈ ಟೊಯೊಟಾ ಹೈರೈಡರ್ ಎಸ್‍ಯುವಿಯು ಟು ಲೆಯರ್ ಹೊಂದಿರುವ ಡೇಟೈಮ್ ರನ್ನಿಂಗ್ ಲ್ಯಾಂಪ್‌ಗಳನ್ನು ಹೊಂದಿದ್ದು, ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್‌ಗಳನ್ನು ಎರಡು ಲೇಯರ್‌ಗಳಾಗಿ ವಿಭಜಿಸಿ ಗ್ರಿಲ್‌ನ ಒಂದು ಮೂಲೆಯಿಂದ ಇನ್ನೊಂದಕ್ಕೆ ವಿಸ್ತರಿಸಿರುವ ಕ್ರೋಮ್ ಸ್ಟ್ರಿಪ್ ಅನ್ನು ಬಳಸಲಾಗಿದೆ. ದೊಡ್ಡ ಗಾತ್ರದ ಎಲ್ಇಡಿ ಹೆಡ್‌ಲ್ಯಾಂಪ್‌ಗಳಿಂದ ಸುತ್ತುವರೆದಿರುವ ಎತ್ತರದ ಏರ್‌ಡ್ಯಾಮ್‌ನೊಂದಿಗೆ ಸ್ಪೋರ್ಟಿ ಮುಂಭಾಗದ ಬಂಪರ್‌ಗಳನ್ನು ಸಹ ಒಳಗೊಂಡಿದ್ದು, ಎರಡು ಬದಿಯಲ್ಲಿ ಹೈರೈಡರ್‌ನ ಪ್ರಬಲ ಹೈಬ್ರಿಡ್ ಬ್ಯಾಡ್ಜಿಂಗ್ ಅನ್ನು ಪಡೆದುಕೊಂಡಿವೆ.

ಹಿಂಭಾಗದಲ್ಲಿ ಟೊಯೊಟಾ ಹೈರೈಡರ್ ಎಸ್‌ಯುವಿ ಸ್ಲಿಮ್ ಸಿ-ಆಕಾರದ ಟೈಲ್-ಲೈಟ್‌ಗಳನ್ನು ಹೊಂದಿದ್ದು, ಡ್ಯುಯಲ್ ಸಿ-ಆಕಾರದ ಪಾರ್ಕಿಂಗ್ ಲ್ಯಾಂಪ್‌ಗಳೊಂದಿಗೆ ಟೈಲ್‌ಗೇಟ್‌ಗೆ ವಿಸ್ತರಿಸುತ್ತದೆ. ಹಾಗೆಯ ಒಂದು ಪ್ರಮುಖ ಕ್ರೋಮ್ ಸ್ಟ್ರಿಪ್ ಮಧ್ಯದಿಂದ ಆರಂಭಗೊಂಡು ಟೈಲ್ ಲ್ಯಾಂಪ್‌ಗಳಲ್ಲಿ ವಿಲೀನಗೊಳ್ಳಲಿದ್ದು, ಇದರಲ್ಲಿ ಟೊಯೊಟಾ ಲೋಗೋವನ್ನು ಜೋಡಿಸಲಾಗಿದೆ. ಹೈರೈಡರ್ ಜಿ ಟ್ರಿಮ್ನಲ್ಲಿ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಗಳೊಂದಿಗೆ 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ಕನೆಕ್ಟಿವಿಟಿ ಕಾರ್ ಟೆಕ್, ಫುಲ್ ಎಲ್ಇಡಿ, ಆಂಬಿಯೆಂಟ್ ಇಂಟೀರಿಯರ್ ಲೈಟಿಂಗ್, ಮತ್ತು ಇತರ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.

ಜಿ ಟ್ರಿಮ್ನಲ್ಲಿ 17-ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿವೆ. ಟೊಯೊಟಾ ಹೈರೈಡರ್ ಎಸ್‌ಯುವಿ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ಅತ್ಯಂತ ಪ್ರೀಮಿಯಂ ಸಿಎನ್‌ಜಿ ಮಾದರಿಯಾಗಲಿದೆ. ಟೊಯೊಟಾ ಹೈರೈಡರ್‌ನಂತೆಯೇ, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಎಸ್‍ಯುವಿಯು ಕೂಡ ಫ್ಯಾಕ್ಟರಿ-ಫಿಟ್ ಮಾಡಿದ ಸಿಎನ್‌ಜಿ ಕಿಟ್‌ನೊಂದಿಗೆ ಬರಲಿದೆ. ಇದಲ್ಲದೆ, ಸಿಎನ್‌ಜಿ ಮತ್ತು ಸ್ಟ್ರಾಂಗ್ ಹೈಬ್ರಿಡ್ ಪವರ್‌ಟ್ರೇನ್ ಗಳೊಂದಿಗೆ ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಹೆಚ್ಚಿನ ಮೈಲೇಜ್ ಅನ್ನು ನೀಡುವ ಎಸ್‍ಯುವಿ ಆಗಿರುತ್ತದೆ.

Most Read Articles

Kannada
Read more on ಟೊಯೊಟಾ toyota
English summary
New toyota urban cruiser hyryder cng launch this month details
Story first published: Monday, December 5, 2022, 10:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X