ಕರ್ನಾಟಕದಲ್ಲಿ ತಯಾರಾದ ಹೊಸ ವೋಲ್ವೋ ಎಲೆಕ್ಟ್ರಿಕ್ ಎಸ್‍ಯುವಿಯ ವಿತರಣೆ ಆರಂಭ
ಸ್ವೀಡಿಷ್ ಕಾರು ಉತ್ಪಾದನಾ ಕಂಪನಿಯಾಗಿರುವ ವೋಲ್ವೋ ಭಾರತದಲ್ಲಿ ತನ್ನ ಹೊಚ್ಚ ಹೊಸ ಎಕ್ಸ್‌ಸಿ40 ರಿಚಾರ್ಜ್ ಎಲೆಕ್ಟ್ರಿಕ್ ಕಾರನ್ನು ಈ ವರ್ಷದ ಜುಲೈ ತಿಂಗಳಿನಲ್ಲಿ ಬಿಡುಗಡೆಗೊಳಿಸಿತು. ಇದೀಗ ವೋಲ್ವೋ ಕಾರ್ ಇಂಡಿಯಾ ಭಾರತದಲ್ಲಿ ಸ್ಥಳೀಯವಾಗಿ ಜೋಡಿಸಲಾದ ವೋಲ್ವೋ XC40 ರೀಚಾರ್ಜ್ ಎಲೆಕ್ಟ್ರಿಕ್ ಎಸ್‍ಯುವಿಯ ವಿತರಣೆಯನ್ನು ಪ್ರಾರಂಭಿಸಿದೆ.

ಹೊಸ ವೋಲ್ವೋ ಎಲೆಕ್ಟ್ರಿಕ್ ಎಸ್‍ಯುವಿಯ ಮೊದಲ ಮಾದರಿಯನ್ನು ಗುಜರಾತ್ ನಲ್ಲಿ ವಿತರಿಸಲಾಗಿದೆ. ಈ ವೋಲ್ವೋ XC40 ರೀಚಾರ್ಜ್ ಎಲೆಕ್ಟ್ರಿಕ್ ಎಸ್‍ಯುವಿಯನ್ನು ಕರ್ನಾಟಕದ ಹೊಸಕೋಟೆಯಲ್ಲಿರುವ ಸ್ವೀಡಿಷ್ ವಾಹನ ತಯಾರಕರ ಅತ್ಯಾಧುನಿಕ ಘಟಕದಲ್ಲಿ ತಯಾರಿಸಲಾಗುತ್ತಿದೆ. ಹೊಸ ಎಕ್ಸ್‌ಸಿ40 ರೀಚಾರ್ಜ್ ಕಾರು ಮಾದರಿಯನ್ನು ಸಂಪೂರ್ಣವಾಗಿ ವಿದೇಶಿ ಮಾರುಕಟ್ಟೆಯಿಂದ ಆಮದು ಬದಲಾಗಿ ಕಂಪನಿಯು ಭಾರತದಲ್ಲಿಯೇ ಹೊಸ ಕಾರನ್ನು ಸಿಕೆಡಿ ಆಮದು ನೀತಿ ಅಡಿಯಲ್ಲಿ ಮರುಜೋಡಣೆ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಇದರಿಂದ ಹೊಸ ಇವಿ ಕಾರಿನ ಮೇಲಿನ ತೆರಿಗೆ ಇಳಿಕೆಯು ಉತ್ತಮ ಬೆಲೆ ನಿರ್ಧರಿಸಲು ಸಹಕಾರಿಯಾಗಿದೆ.

ಇದೇ ಕಾರಣಕ್ಕೆ ಹೊಸ ಇವಿ ಕಾರಿನ ಬೆಲೆಯು ಸಾಮಾನ್ಯ ಪೆಟ್ರೋಲ್ ಕಾರು ಮಾದರಿಗಿಂತ ಕೇವಲ ರೂ.11 ಲಕ್ಷದಷ್ಟು ಹೆಚ್ಚುವರಿ ಬೆಲೆ ಪಡೆದುಕೊಂಡಿದೆ. ಪೆಟ್ರೋಲ್ ಮಾದರಿಗಿಂತಲೂ ದುಪ್ಪಟ್ಟು ದರ ಹೊಂದಿರಬೇಕಿದ್ದ ಹೊಸ ಇವಿ ಕಾರು ಬೆಲೆಯು ಎಕ್ಸ್‌ಶೋರೂಂ ಪ್ರಕಾರ ರೂ.55.90 ಲಕ್ಷವಾಗಿದೆ.

ಹೊಸ ವೋಲ್ವೋ ಎಕ್ಸ್‌ಸಿ40 ರೀಚಾರ್ಜ್ ಇವಿ ಕಾರು ಮಾದರಿಯು ಹೈ ಎಂಡ್ ವೆರಿಯೆಂಟ್ ಟ್ವಿನ್ ವರ್ಷನ್‌ನಲ್ಲಿ ಮಾತ್ರ ಖರೀದಿಗೆ ಲಭ್ಯವಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯಲ್ಲಿರುವ ವೋಲ್ವೋ ಹೊಸ ಘಟಕದಲ್ಲಿ ಉತ್ಪಾದನೆಯಾಗುತ್ತಿದೆ.

ಸಿಕೆಡಿ ಆಮದು ನೀತಿ ಅಡಿ ಮಾರಾಟಗೊಳ್ಳುವ ಕಾರುಗಳಿಂತಲೂ ಸಿಬಿಯು ಆಮದು ನೀತಿ ಮಾರಾಟಗೊಳ್ಳುವ ಕಾರು ಬೆಲೆ ಸಾಕಷ್ಟು ಹೆಚ್ಚಳವಾಗಿರುತ್ತದೆ. ಹೀಗಾಗಿ ತನ್ನ ಎಂಟ್ರಿ ಲೆವಲ್ ಕಾರನ್ನು ದುಬಾರಿ ಬೆಲೆಯಲ್ಲಿ ಬಿಡುಗಡೆ ಮಾಡಿದರೆ ನಿಗದಿತ ಗ್ರಾಹಕರ ಬೇಡಿಕೆಯನ್ನು ತಲುಪುವುದು ಕಷ್ಟ ಎಂದು ಅರಿತಿದ್ದ ವೊಲ್ವೊ ಕಂಪನಿಯು ಭಾರತದಲ್ಲಿಯೇ ನಿರ್ಮಾಣವಾದ ಎಕ್ಸ್‌ಸಿ40 ರೀಚಾರ್ಜ್ ಬಿಡುಗಡೆ ಮಾಡಲಾಗಿದೆ.

ಹೊಸ ಎಕ್ಸ್‌ಸಿ40 ರೀಚಾರ್ಜ್ ಮಾದರಿಯಲ್ಲಿ 78kWh ಬ್ಯಾಟರಿ ಪ್ಯಾಕ್ ಜೋಡಣೆ ಮಾಡಲಾಗಿದ್ದು, ಡ್ಯುಯಲ್ ಎಲೆಕ್ಟ್ರಿಕ್ ಮೋಟಾರ್ ಆಯ್ಕೆ ಹೊಂದಿರುವ ಹೊಸ ಕಾರು 402 ಬಿಎಚ್‌ಪಿ ಮತ್ತು 660 ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

ಈ ಕಾರಿನಲ್ಲಿ ಕಂಪನಿಯು ಸ್ಟ್ಯಾಂಡರ್ಡ್ ಆಗಿ 11kW ಹೋಂ ಚಾರ್ಜರ್ ಅನ್ನು ನೀಡಿದೆ. ಇದು ಪ್ರತಿ ಚಾರ್ಜ್‌ಗೆ ಗರಿಷ್ಠ 418 ಕಿ.ಮೀ ಮೈಲೇಜ್ ನೀಡುವುದಾಗಿ ಡಬ್ಲ್ಯುಎಲ್‌ಟಿಪಿ ಟೆಸ್ಟಿಂಗ್ ಮೂಲಕ ಪ್ರಮಾಣೀಕರಿಸಲಾಗಿದೆ.

ಇನ್ನು 11kW ಹೋಂ ಚಾರ್ಜರ್ ಮೂಲಕ ಬ್ಯಾಟರಿ ಪೂರ್ತಿ ಚಾರ್ಜ್ ಮಾಡಲು ಕನಿಷ್ಠ 12 ರಿಂದ 18 ಗಂಟೆಗಳ ಕಾಲ ಸಮಯಾವಕಾಶ ತೆಗೆದುಕೊಂಡರೆ 50kW ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳಲ್ಲಿ ಎರಡೂವರೆ ಗಂಟೆಗಳಲ್ಲಿ ಪೂರ್ತಿ ಚಾರ್ಜ್ ಮಾಡಬಹುದಾಗಿದೆ.

ಇದರ ಜೊತಗೆ ಕೇವಲ 33 ನಿಮಿಷಗಳಲ್ಲಿ ಶೇ.80 ರಷ್ಟು ಚಾರ್ಜಿಂಗ್ ಒಗದಗಿಸಬಲ್ಲ 150kW ಡಿಸಿ ಫಾಸ್ಟ್ ಚಾರ್ಜಿಂಗ್ ಸೌಲಭ್ಯಕ್ಕೆ ಹೊಸ ಕಾರಿನ ಬ್ಯಾಟರಿ ಪ್ಯಾಕ್ ಸರ್ಪೊಟ್ ಮಾಡಲಿದೆ. ಭಾರೀ ಗಾತ್ರದ ಬ್ಯಾಟರಿ ಪ್ಯಾಕ್ ಪರಿಣಾಮ ಹೊಸ ಕಾರು ಬರೋಬ್ಬರಿ 2,188 ಕೆ.ಜಿ ಪಡೆದುಕೊಂಡಿದೆ.

ಹೊಸ ಎಕ್ಸ್‌ಸಿ40 ರೀಚಾರ್ಜ್ ಇವಿ ಕಾರು ಮಾದರಿಯು ಸಾಮಾನ್ಯ ಎಕ್ಸ್‌ಸಿ40 ಪೆಟ್ರೋಲ್ ಕಾರಿಗಿಂತಲೂ 400 ಕೆ.ಜಿಯಷ್ಟು ಹೆಚ್ಚಿನ ತೂಕ ಹೊಂದಿದ್ದು, ಭಾರೀ ಗಾತ್ರದ ಬ್ಯಾಟರಿ ಅವಳವಡಿಕೆಯ ನಂತರವೂ ಹೊಸ ಕಾರು ಕೇವಲ 4.9 ಸೆಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮೀ ವೇಗ ಪಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ.

ಈ ಹೊಸ ಕಾರಿನಲ್ಲಿ ಪ್ರತಿ ಗಂಟೆಗೆ 180 ಕಿ.ಮೀ ಟಾಪ್ ಸ್ಪೀಡ್ ನೀಡಲಾಗಿದ್ದು, ಇದು ಸಿಂಗಲ್ ಸ್ಪೀಡ್ ಗೇರ್‌ಬಾಕ್ಸ್ ಮೂಲಕ ನಾಲ್ಕು ಚಕ್ರಗಳಿಗೆ ಪವರ್ ಪೂರೈಕೆ ಮಾಡುತ್ತದೆ. ಹಾಗೆಯೇ ಹೊಸ ಕಾರು ಪೆಟ್ರೋಲ್ ಮಾದರಿಗಿಂತಲೂ 15 ಎಂಎಂ ಹೆಚ್ಚಿನ ಉದ್ದಳತೆಯೊಂದಿಗೆ 4,425 ಎಂಎಂ ಉದ್ದ, 1,863 ಎಂಎಂ ಅಗಲ, 1,652 ಎಂಎಂ ಅಗಲ ಮತ್ತು 175 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಹೊಂದಿದೆ.

ಚಾರ್ಸಿಯಲ್ಲಿ ಬ್ಯಾಟರಿ ಜೋಡಣೆಯ ಪರಿಣಾಮ ಹೊಸ ಕಾರಿನ ಗ್ರೌಂಡ್ ಕ್ಲಿಯೆರೆನ್ಸ್ ಪೆಟ್ರೋಲ್ ಮಾದರಿಗಿಂತಲೂ ತುಸು ಕಡಿಮೆಯಾಗಿದ್ದು, 19 ಇಂಚಿನ ಅಲಾಯ್ ವ್ಹೀಲ್, 452 ಲೀಟರ್ ಸಾಮರ್ಥ್ಯದ ಬೂಟ್‌ಸ್ಪೆಸ್ ನೀಡಲಾಗಿದೆ. ಇವಿ ಮಾದರಿಯಾಗಿರುವುದರಿಂದ ಹೊಸ ಕಾರಿನ ಬಾನೆಟ್ ಅಡಿಯಲ್ಲೂ ಸುಮಾರು 31 ಲೀಟರ್ ನಷ್ಟು ಸ್ಟೋರೇಜ್ ಸ್ಪೆಸ್ ಲಭ್ಯವಿದೆ. ಹೊಸ ಕಾರಿನಲ್ಲಿ ಐಷಾರಾಮಿ ಚಾಲನೆಗೆ ಪೂರಕವಾದ ಹಲವಾರು ತಾಂತ್ರಿಕ ಸೌಲಭ್ಯಗಳಿವೆ.

ಈ ಎಲೆಕ್ಟ್ರಿಕ್ ಎಸ್‍ಯುವಿಯ ಒಳಭಾಗದಲ್ಲೂ ಹಲವಾರು ಆಕರ್ಷಕ ತಾಂತ್ರಿಕ ಸೌಲಭ್ಯಗಳಿದ್ದು, ಪೆಟ್ರೋಲ್ ಮಾದರಿಯಲ್ಲಿರುವಂತೆಯೇ ಕ್ಯಾಬಿನ್ ಸೌಲಭ್ಯದೊಂದಿಗೆ ಅಂಡ್ರಾಯಿಡ್ ಆಟೋ ಮತ್ತು ಕಾರ್ ಪ್ಲೇ ಸರ್ಪೊಟ್ ಹೊಂದಿರುವ ಇನ್ಪೋಟೈನ್‌ಮೆಂಟ್ ಸಿಸ್ಟಂ, ಆನ್ ಬೋರ್ಡ್ ಇ-ಸಿಮ್ ಮೂಲಕ ಗೂಗಲ್ ಮ್ಯಾಪ್ ಅಂಡ್ ಅಸಿಸ್ಟ್, ಸನ್‌ರೂಫ್, ವೈರ್‌ಲೆಸ್ ಸ್ಮಾರ್ಟ್ ಫೋನ್ ಚಾರ್ಜರ್, ಸೆನ್ಸಾರ್ ಆಧರಿಸಿರುವ ಲೆವಲ್ 2 ಎಡಿಎಸ್ ಸಿಸ್ಟಂ ಇದರಲ್ಲಿದೆ.

ಇದರೊಂದಿಗೆ ಪ್ರೀಮಿಯಂ ಫೀಚರ್ಸ್‌ಗಳಾದ ಕನೆಕ್ಟೆಡ್ ಕಾರ್ ಟೆಕ್, ಎಲೆಕ್ಟ್ರಿಕ್ ಮೂಲಕ ಹೊಂದಾಣಿಕೆ ಮಾಡಬಹುದು ಮುಂಭಾಗದ ಆಸನಗಳು, ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಂ ಜೊತೆಗೆ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದೆ. ಹೊಸ ಕಾರಿನ ಮೇಲೆ ಕಂಪನಿಯು ಒಟ್ಟು ಮೂರು ವರ್ಷಗಳ ಸ್ಟ್ಯಾಂಡರ್ಡ್ ವಾರಂಟಿ ಘೋಷಣೆ ಮಾಡಿದೆ. ಇನ್ನು ಇದರ ಬ್ಯಾಟರಿ ಪ್ಯಾಕ್ ಮೇಲೆ 8 ವರ್ಷಗಳ ವಾರಂಟಿಯನ್ನು ನೀಡುತ್ತಿದೆ.


Click it and Unblock the Notifications








