ಬಿಡುಗಡೆಯಾದ ಒಂದೇ ವಾರಕ್ಕೆ ಹೊಸ ಎಂಜಿ ಜೆಡ್ಎಸ್ ಎಲೆಕ್ಟ್ರಿಕ್ ಸೋಲ್ಡ್ ಔಟ್

ಎಂಜಿ ಮೋಟಾರ್ ಕಂಪನಿಯು ತನ್ನ ಹೊಸ ಜೆಡ್ಎಸ್ ಎಲೆಕ್ಟ್ರಿಕ್ ಕಾರು ಮಾದರಿಯನ್ನು ಅಧಿಕ ಮೈಲೇಜ್ ಪ್ರೇರಿತ ಬ್ಯಾಟರಿ ಪ್ಯಾಕ್‌ನೊಂದಿಗೆ ಉನ್ನತೀಕರಿಸಿದ್ದು, ಹೊಸ ಕಾರು ಬಿಡುಗಡೆಯಾದ ಒಂದೇ ವಾರದಲ್ಲಿ 2022ರ ಅವಧಿಗೆ ಮಾರಾಟಗೊಳಿಸಲು ನಿಗದಿಪಡಿಸಿದ್ದ ಎಲ್ಲಾ ಯುನಿಟ್‌ಗಳಿಗೂ ಬುಕ್ಕಿಂಗ್ ದಾಖಲಾಗಿದೆ.

ಬಿಡುಗಡೆಯಾದ ಒಂದೇ ವಾರಕ್ಕೆ ಹೊಸ ಎಂಜಿ ಜೆಡ್ಎಸ್ ಎಲೆಕ್ಟ್ರಿಕ್ ಸೋಲ್ಡ್ ಔಟ್

ಬ್ಯಾಟರಿ ಪ್ಯಾಕ್ ಮತ್ತು ಸೆಮಿಕಂಡಕ್ಟರ್ ಪೂರೈಕೆಯನ್ನು ಆಧರಿಸಿ 2022ರ ಅವಧಿಗೆ ನಿಗದಿತ ಸಂಖ್ಯೆಯಲ್ಲಿ ಜೆಡ್ಎಸ್ ಎಲೆಕ್ಟ್ರಿಕ್ ಮಾರಾಟ ಮಾಡುವ ಉದ್ದೇಶ ಹೊಂದಿರುವ ಎಂಜಿ ಮೋಟಾರ್ ಕಂಪನಿಗೆ ಹೊಸ ಕಾರು ಬಿಡುಗಡೆ ಮಾಡಿದ ಮೊದಲ ವಾರವೇ ಭರ್ಜರಿ ಬೇಡಿಕೆ ಹರಿದುಬಂದಿದ್ದು, 2022ರ ಅವಧಿಗೆ ಮಾರಾಟ ಮಾಡಲು ನಿರ್ಧರಿಸಿದ್ದ ಹೊಸ ಕಾರಿನ ಮಾರಾಟ ಪ್ರಮಾಣವು ಪೂರ್ಣಗೊಂಡಿರುವುದಾಗಿ ಕಂಪನಿಯೇ ಮಾಹಿತಿ ಹಂಚಿಕೊಂಡಿದೆ.

ಬಿಡುಗಡೆಯಾದ ಒಂದೇ ವಾರಕ್ಕೆ ಹೊಸ ಎಂಜಿ ಜೆಡ್ಎಸ್ ಎಲೆಕ್ಟ್ರಿಕ್ ಸೋಲ್ಡ್ ಔಟ್

ಜೆಡ್ಎಸ್ ಎಲೆಕ್ಟ್ರಿಕ್ ಕಾರು ಮಾದರಿಯು ಭಾರತದಲ್ಲಿ ಮೊದಲ ಬಾರಿಗೆ 2019ರಲ್ಲಿ ಬಿಡುಗಡೆ ನಂತರ ಹಲವಾರು ಅಪ್‌ಡೆಟ್ ಪಡೆದುಕೊಂಡಿದ್ದು, ಮೈಲೇಜ್ ಪ್ರಮಾಣದಲ್ಲಿ ಹೆಚ್ಚಳ ಮೂಲಕ ಇವಿ ಗ್ರಾಹಕರ ಪ್ರಮುಖ ಆಕರ್ಷಣೆಯಾಗಿದೆ.

ಬಿಡುಗಡೆಯಾದ ಒಂದೇ ವಾರಕ್ಕೆ ಹೊಸ ಎಂಜಿ ಜೆಡ್ಎಸ್ ಎಲೆಕ್ಟ್ರಿಕ್ ಸೋಲ್ಡ್ ಔಟ್

2022ರ ಜೆಡ್ಎಸ್ ಎಲೆಕ್ಟ್ರಿಕ್ ಮಾದರಿಯು ಈ ಹಿಂದಿನಂತೆ ಎಕ್ಸೈಟ್ ಮತ್ತು ಎಕ್ಸ್‌ಕ್ಲೂಸಿವ್ ಎನ್ನುವ ಎರಡು ವೆರಿಯೆಂಟ್‌ಗಳಲ್ಲಿ ಬಿಡುಗಡೆಗೊಂಡಿದ್ದು, ಹೊಸ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 21,99,800 ರಿಂದ ಟಾಪ್ ಎಂಡ್ ಮಾದರಿಯು ರೂ. 25,88,000 ಬೆಲೆ ಹೊಂದಿದೆ.

ಬಿಡುಗಡೆಯಾದ ಒಂದೇ ವಾರಕ್ಕೆ ಹೊಸ ಎಂಜಿ ಜೆಡ್ಎಸ್ ಎಲೆಕ್ಟ್ರಿಕ್ ಸೋಲ್ಡ್ ಔಟ್

ಹೊಸ ಜೆಡ್ಎಸ್ ಎಲೆಕ್ಟ್ರಿಕ್ ಮಾದರಿಯು ವಿಸ್ತರಿತ ಬ್ಯಾಟರಿ ಪ್ಯಾಕ್ ಮತ್ತು ಸುಧಾರಿತ ಕಾರ್ ಕನೆಕ್ಟ್ ಫೀಚರ್ಸ್‌ಗಳೊಂದಿಗೆ 2021 ಮಾದರಿಗಿಂತ ರೂ. 60 ಸಾವಿರದಷ್ಟು ಹೆಚ್ಚುವರಿ ಬೆಲೆ ಹೊಂದಿದ್ದು, ಬೆಲೆ ಏರಿಕೆಗೆ ಅನುಗುಣವಾಗಿ ಹೊಸ ಕಾರಿನಲ್ಲಿ ಸಾಕಷ್ಟು ಹೊಸ ತಾಂತ್ರಿಕ ಸೌಲಭ್ಯಗಳನ್ನು ಒದಗಿಸಲಾಗಿದೆ.

ಬಿಡುಗಡೆಯಾದ ಒಂದೇ ವಾರಕ್ಕೆ ಹೊಸ ಎಂಜಿ ಜೆಡ್ಎಸ್ ಎಲೆಕ್ಟ್ರಿಕ್ ಸೋಲ್ಡ್ ಔಟ್

ಎಂಜಿ ಮೋಟಾರ್ ಕಂಪನಿಯು ಜೆಡ್ಎಸ್ ಎಲೆಕ್ಟ್ರಿಕ್ ಕಾರು ಮಾದರಿಯಲ್ಲಿ ಈ ಹಿಂದೆ ಪ್ರತಿ ಚಾರ್ಜ್‌ಗೆ 419 ಕಿ.ಮೀ ಒದಗಿಸುತ್ತಿದ್ದ 44.5 kWh ಬ್ಯಾಟರಿ ಪ್ಯಾಕ್ ಅನ್ನು 50.3 kWh ಅಡ್ವಾನ್ಸ್ ಬ್ಯಾಟರಿ ಪ್ಯಾಕ್‌ಗೆ ಉನ್ನತೀಕರಿಸಿದ್ದು, ಹೊಸ ಬ್ಯಾಟರಿ ಪ್ಯಾಕ್ ಪ್ರತಿ ಚಾರ್ಜ್‌ಗೆ ಗರಿಷ್ಠ 461 ಕಿ.ಮೀ ಮೈಲೇಜ್ ನೀಡುತ್ತದೆ.

ಬಿಡುಗಡೆಯಾದ ಒಂದೇ ವಾರಕ್ಕೆ ಹೊಸ ಎಂಜಿ ಜೆಡ್ಎಸ್ ಎಲೆಕ್ಟ್ರಿಕ್ ಸೋಲ್ಡ್ ಔಟ್

ಹೊಸ ಕಾರು ಮಾದರಿಯು ಹೊಸ ತಂತ್ರಜ್ಞಾನ ಪ್ರೇರಿತ ಬ್ಯಾಟರಿ ಪ್ಯಾಕ್ ಜೊತೆ 8 ಲೆಯರ್ ಹೆರ್ ಪಿನ್ ಎಲೆಕ್ಟ್ರಿಕ್ ಮೋಟಾರ್ ಮೂಲಕ ಅತ್ಯುತ್ತಮ ಪರ್ಫಾಮೆನ್ಸ್ ಸಹ ಖಚಿತಪಡಿಸಿದ್ದು, ಹೊಸ ಕಾರು ಕೇವಲ 8.5 ಸೆಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮೀ ವೇಗಪಡೆದುಕೊಳ್ಳುವ ಮೂಲಕ 176 ಬಿಎಚ್‌ಪಿ ಉತ್ಪಾದನೆ ಮಾಡಬಲ್ಲದು.

ಬಿಡುಗಡೆಯಾದ ಒಂದೇ ವಾರಕ್ಕೆ ಹೊಸ ಎಂಜಿ ಜೆಡ್ಎಸ್ ಎಲೆಕ್ಟ್ರಿಕ್ ಸೋಲ್ಡ್ ಔಟ್

ಜೊತೆಗೆ ಹೊಸ ಕಾರು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮಾದರಿಗಿಂತಲೂ ಹೆಚ್ಚು ಪ್ರೀಮಿಯಂ ಆಗಿ ಅಭಿವೃದ್ದಿಗೊಂಡಿದ್ದು, ಹೊಸ ಕಾರಿನಲ್ಲಿ ಈ ಹಿಂದಿನ ರೆಡ್, ವೈಟ್ ಮತ್ತು ಪೊಲಾರ್ ವೈಟ್ ಬಣ್ಣಗಳ ಜೊತೆಗೆ ಹೊಸ ಮಾದರಿಯಲ್ಲಿ ಸಿಲ್ವರ್, ಬ್ರೌನ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರಲಿದೆ.

ಬಿಡುಗಡೆಯಾದ ಒಂದೇ ವಾರಕ್ಕೆ ಹೊಸ ಎಂಜಿ ಜೆಡ್ಎಸ್ ಎಲೆಕ್ಟ್ರಿಕ್ ಸೋಲ್ಡ್ ಔಟ್

ಹೊಸ ಕಾರಿನಲ್ಲಿ ಎಂಜಿ ಮೋಟಾರ್ ಕಂಪನಿಯು ಫುಲ್ ಎಲ್‌ಇಡಿ ಯುನಿಟ್ ಹೊಂದಿರುವ ಹ್ವಾಕ್ ಐ ಹೆಡ್‌ಲ್ಯಾಂಪ್, ಎಲ್ಇಡಿ ಟೈಲ್ ಲೈಟ್ಸ್, ಎಲ್ಇಡಿ ಟರ್ನ್ ಇಂಡಿಕೇಟರ್ ಮತ್ತು ಫಾಗ್‌ಲ್ಯಾಂಪ್ ಹೊಂದಿದ್ದು, ಹಾಗೆಯೇ ಹೊಸ ಕಾರಿನಲ್ಲಿ ಈ ಹಿಂದಿನ ಗ್ರಿಲ್ ಅನ್ನು ಬಾಡಿ ಕಲರ್ ಕವರ್ಡ್ ಪ್ಲೇಟ್ ನಿಂದ ಬದಲಾಯಿಸಲಾಗಿದೆ.

ಬಿಡುಗಡೆಯಾದ ಒಂದೇ ವಾರಕ್ಕೆ ಹೊಸ ಎಂಜಿ ಜೆಡ್ಎಸ್ ಎಲೆಕ್ಟ್ರಿಕ್ ಸೋಲ್ಡ್ ಔಟ್

ಜೊತೆಗೆ ಇನ್ ಟೆಕ್ ವಿನ್ಯಾಸವು ಸಹ ಹಳೆಯ ಮಾದರಿಗೆ ಹೋಲಿಸಿದರೆ ಒಟ್ಟಾರೆ ವಿನ್ಯಾಸವು ಏರೋಡೈನಾಮಿಕ್ ಹೆಚ್ಚು ಪರಿಣಾಮಕಾರಿಯಾಗಿ ಕಾಣಲಿದ್ದು, ಮರುವಿನ್ಯಾಸಗೊಳಿಸಿದ 17 ಇಂಚಿನ ಟೊಮ್ಹಾಕ್ ಹಬ್ ಅಲಾಯ್ ವ್ಹೀಲ್ ಗಳು ಕಾರಿನ ಹೆಚ್ಚಿನ ಆಕರ್ಷಣೆ ನೀಡುತ್ತದೆ.

ಬಿಡುಗಡೆಯಾದ ಒಂದೇ ವಾರಕ್ಕೆ ಹೊಸ ಎಂಜಿ ಜೆಡ್ಎಸ್ ಎಲೆಕ್ಟ್ರಿಕ್ ಸೋಲ್ಡ್ ಔಟ್

ನವೀಕರಿಸಿದ ಎಂಜಿ ಜೆಡ್ಎಸ್ ಇವಿ ಫೇಸ್‌ಲಿಫ್ಟ್ ಮಾದರಿಯ ಕ್ಯಾಬಿನ್ ಒಳಗೂ ಕೂಡಾ ನವೀಕರಿಸಿದ ಹಲವು ಬದಲಾವಣೆಗಳಾಗಿದ್ದು, ಹೊಸ ಕಾರಿನಲ್ಲಿ ಎಂಜಿ ಐಸ್ಮಾರ್ಟ್ ಇನ್ಫೋಟೈನ್‌ಮೆಂಟ್ ಸಿಸ್ಟಂನೊಂದಿಗೆ ದೊಡ್ಡದಾದ ಪನೊರಮಿಕ್ ಸನ್‌ರೂಫ್, ಪಿಎಂ 2.5 ಫಿಲ್ಟರ್ ಹೊಂದಿರುವ ಏರ್ ಪ್ಯೂರಿಫೈಯರ್ ಹೊಂದಿದೆ.

ಬಿಡುಗಡೆಯಾದ ಒಂದೇ ವಾರಕ್ಕೆ ಹೊಸ ಎಂಜಿ ಜೆಡ್ಎಸ್ ಎಲೆಕ್ಟ್ರಿಕ್ ಸೋಲ್ಡ್ ಔಟ್

ಇದರೊಂದಿಗೆ ಐಷಾರಾಮಿ ವೈಶಿಷ್ಟ್ಯಗಳೊಂದಿಗೆ ಅಭಿವೃದ್ದಿಗೊಂಡಿರುವ ಹೊಸ ಕಾರಿನಲ್ಲಿ ಸುಧಾರಿತ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ ಕೂಡಾ ಅಳವಡಿಸಿದ್ದು, 10.1 ಇಂಚಿನ ಹೆಚ್‌ಡಿ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ ಅತ್ಯುತ್ತಮ ಗ್ರಾಫಿಕ್ಸ್ ಮತ್ತು ಮೆನು ಲೇಔಟ್‌ನೊಂದಿಗೆ ಆ್ಯಪಲ್ ಕಾರ್‌ಪ್ಲೇ ಹಾಗೂ ಆಂಡ್ರಾಯಿಡ್ ಆಟೋ ಜೋಡಣೆ ಹೊಂದಿದೆ.

ಬಿಡುಗಡೆಯಾದ ಒಂದೇ ವಾರಕ್ಕೆ ಹೊಸ ಎಂಜಿ ಜೆಡ್ಎಸ್ ಎಲೆಕ್ಟ್ರಿಕ್ ಸೋಲ್ಡ್ ಔಟ್

ನವೀಕರಿಸಿದ ವೈಶಿಷ್ಟ್ಯತೆಗಳಲ್ಲಿ ರಿಮೋಟ್ ಕಂಟ್ರೋಲ್‌ನೊಂದಿಗೆ ಹೆಚ್ಚಿನ ಕನೆಕ್ಟಿವಿಟಿ ಫೀಚರ್ಸ್‌ಗಳ ಆಯ್ಕೆಗಳನ್ನು ಪಡೆಯಬಹುದಾಗಿದ್ದು, ಹೊಸ ಕಾರನಲ್ಲಿ ಕಂಪನಿಯು ಲೆವಲ್ 2 ಅಡ್ವಾನ್ಸ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ ಹೊಂದಿರುವ ರಿಯರ್ ಎಡಿಎಎಸ್ ಜೋಡಣೆ ಮಾಡಿದೆ.

ಬಿಡುಗಡೆಯಾದ ಒಂದೇ ವಾರಕ್ಕೆ ಹೊಸ ಎಂಜಿ ಜೆಡ್ಎಸ್ ಎಲೆಕ್ಟ್ರಿಕ್ ಸೋಲ್ಡ್ ಔಟ್

ರಿಯರ್ ಎಡಿಎಎಸ್‌ನಲ್ಲಿ 360 ಡಿಗ್ರಿ ಕ್ಯಾಮೆರಾ ಮೂಲಕ ಲೈನ್ ಚೇಂಜ್ ಅಸಿಸ್ಟ್, ಬ್ಲೈಂಡ್ ಸ್ಪಾಟ್ ಡಿಟೆಕ್ಷನ್, ರಿಯರ್ ಕ್ರಾರ್ಸ್-ಟ್ರಾಫಿಕ್ ಅಲರ್ಟ್ ಸೌಲಭ್ಯಗಳನ್ನು ಹೊಂದಿದ್ದು, ಪ್ರಯಾಣಿಕರ ಸುರಕ್ಷತೆಗಾಗಿ ಹೊಸ ಕಾರಿನಲ್ಲಿ ಹಿಲ್ ಡಿಸೆಂಟ್ ಕಂಟ್ರೊಲ್, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೊಲ್, ಟೈರ್ ಪ್ರೆಷರ್ ಮಾನಿಟರಿಂಗ್ ಕಂಟ್ರೋಲ್, ಎಲೆಕ್ಟ್ರಾನಿಕ್ ಪಾರ್ಕಿಂಗ್ ಜೊತೆ ಆಟೋ ಹೋಲ್ಡ್ ಮತ್ತು 6 ಏರ್‌ಬ್ಯಾಗ್ ಸೌಲಭ್ಯಗಳನ್ನು ಹೊಂದಿದೆ.

ಬಿಡುಗಡೆಯಾದ ಒಂದೇ ವಾರಕ್ಕೆ ಹೊಸ ಎಂಜಿ ಜೆಡ್ಎಸ್ ಎಲೆಕ್ಟ್ರಿಕ್ ಸೋಲ್ಡ್ ಔಟ್

ಇನ್ನು ಹೊಸ ಕಾರಿಗೆ ಗರಿಷ್ಠ ವಾರಂಟಿ ನೀಡಿರುವ ಎಂಜಿ ಕಂಪನಿಯು ಎಂಜಿ ಇ-ಶೀಲ್ಡ್ ಪ್ಯಾಕೇಜ್ ಅಡಿಯಲ್ಲಿ 5 ವರ್ಷಗಳ ಅನ್‌ಲಿಮಿಟೆಡ್ ವಾರಂಟಿ ಜೊತೆ 5 ವರ್ಷಗಳ ರೋಡ್‌ಸೈಡ್ ಅಸಿಸ್ಟ್, 5 ಉಚಿತ ಲೆಬರ್ ಸರ್ವಿಸ್, ಬ್ಯಾಟರಿ ಮೇಲೆ 8 ವರ್ಷ ಅಥವಾ 1.50 ಲಕ್ಷ ಕಿ.ಮೀ ಮೇಲೆ ವಾರಂಟಿ ಘೋಷಣೆ ಮಾಡಿದೆ.

Article Published On: Friday, March 11, 2022, 15:44 [IST]
English summary
Newly launched 2022 mg zs ev bookings have been closed
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+