India
YouTube

ಜುಲೈನಲ್ಲಿ ಅತಿ ಹೆಚ್ಚು ಮಾರಾಟ- 50 ಸಾವಿರ ಯುನಿಟ್ ಗಡಿದಾಟಿದ ನಿಸ್ಸಾನ್ ಮ್ಯಾಗ್ನೈಟ್ ಮಾರಾಟ

ನಿಸ್ಸಾನ್ ಇಂಡಿಯಾ ಕಂಪನಿಯು ಜುಲೈ ಅವಧಿಯ ಕಾರು ಮಾರಾಟ ವರದಿ ಪ್ರಕಟಿಸಿದ್ದು, ಕಂಪನಿಯು ಜುಲೈನಲ್ಲಿ ಸುಮಾರು 8,012 ಯುನಿಟ್ ಮಾರಾಟದೊಂದಿಗೆ ಶೇ.2 ರಷ್ಟು ಬೆಳವಣಿಗೆ ಸಾಧಿಸಿದೆ.

ಕಾರು ಮಾರಾಟ- 50 ಸಾವಿರ ಯುನಿಟ್ ಗಡಿದಾಟಿದ ನಿಸ್ಸಾನ್ ಮ್ಯಾಗ್ನೈಟ್ ಮಾರಾಟ

ಭಾರತದಲ್ಲಿ ನಿಸ್ಸಾನ್ ಕಂಪನಿಯು ಸದ್ಯ ಕಿಕ್ಸ್ ಕಂಪ್ಯಾಕ್ಟ್ ಎಸ್‌ಯುವಿ ಮತ್ತು ಮ್ಯಾಗ್ನೈಟ್ ಸಬ್ ಫೋರ್ ಮೀಟರ್ ಕಂಪ್ಯಾಕ್ಟ್ ಎಸ್‌ಯುವಿಯನ್ನು ಮಾರಾಟ ಮಾಡುತ್ತಿದ್ದು, ಕಂಪನಿಯು ಮ್ಯಾಗ್ನೈಟ್ ಮಾದರಿಯ ಮೂಲಕ ಅತಿಹೆಚ್ಚು ಬೇಡಿಕೆ ಪಡೆದುಕೊಳ್ಳುತ್ತಿದೆ.

ಕಾರು ಮಾರಾಟ- 50 ಸಾವಿರ ಯುನಿಟ್ ಗಡಿದಾಟಿದ ನಿಸ್ಸಾನ್ ಮ್ಯಾಗ್ನೈಟ್ ಮಾರಾಟ

ಜುಲೈನಲ್ಲಿ ಶೇ.2 ರಷ್ಟು ಬೆಳವಣಿಗೆಯೊಂದಿಗೆ ನಿಸ್ಸಾನ್ ಕಂಪನಿಯು ಮ್ಯಾಗ್ನೈಟ್ ಕಾರು ಮಾದರಿಯ ಮಾರಾಟದಲ್ಲಿ 50 ಸಾವಿರ ಯುನಿಟ್‌ಗೆ ತಲುಪಿದ್ದು, 1 ಲಕ್ಷ ಬುಕಿಂಗ್ ಮೂಲಕ ಹೊಸ ಕಾರು ಭಾರತದಲ್ಲಿ ಮಾತ್ರವಲ್ಲ ವಿದೇಶಿ ಮಾರುಕಟ್ಟೆಗಳಲ್ಲೂ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದೆ.

ಕಾರು ಮಾರಾಟ- 50 ಸಾವಿರ ಯುನಿಟ್ ಗಡಿದಾಟಿದ ನಿಸ್ಸಾನ್ ಮ್ಯಾಗ್ನೈಟ್ ಮಾರಾಟ

2020ರ ಡಿಸೆಂಬರ್ 2ರಂದು ಬಿಡುಗಡೆಯಾಗಿದ್ದ ನಿಸ್ಸಾನ್ ಮಾಗ್ನೈಟ್ ಕಾರು ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಹಲವಾರು ಹೊಸ ಫೀಚರ್ಸ್ ಮತ್ತು ಬಜೆಟ್ ಬೆಲೆಯೊಂದಿಗೆ ಉತ್ತಮ ಬೇಡಿಕೆ ಕಾಯ್ದುಕೊಂಡಿದ್ದು, ಹೊಸ ಕಾರು ವಿನೂತನ ವಿನ್ಯಾಸ ಮತ್ತು ಹೊಸ ವೈಶಿಷ್ಟ್ಯತೆಗಳೊಂದಿಗೆ ಕಂಪಾಕ್ಟ್ ಎಸ್‌ಯುವಿ ಗ್ರಾಹಕರನ್ನು ಮಾತ್ರವಲ್ಲದೆ ಹ್ಯಾಚ್‌ಬ್ಯಾಕ್ ಕಾರು ಖರೀದಿದಾರರನ್ನು ಸಹ ಸೆಳೆಯುತ್ತಿದೆ.

ಕಾರು ಮಾರಾಟ- 50 ಸಾವಿರ ಯುನಿಟ್ ಗಡಿದಾಟಿದ ನಿಸ್ಸಾನ್ ಮ್ಯಾಗ್ನೈಟ್ ಮಾರಾಟ

ಹೊಸ ಕಾರು ಅತ್ಯುತ್ತಮ ಫೀಚರ್ಸ್‌ಗಳೊಂದಿಗೆ ಪ್ರತಿಸ್ಪರ್ಧಿ ಕಾರುಗಳಿಂತಲೂ ಅತಿ ಕಡಿಮೆ ಬೆಲೆಯಲ್ಲಿ ಮಾರಾಟವಾಗುತ್ತಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 5.88 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.10.56 ಲಕ್ಷ ಬೆಲೆ ಪಡೆದುಕೊಂಡಿದೆ.

ಕಾರು ಮಾರಾಟ- 50 ಸಾವಿರ ಯುನಿಟ್ ಗಡಿದಾಟಿದ ನಿಸ್ಸಾನ್ ಮ್ಯಾಗ್ನೈಟ್ ಮಾರಾಟ

ಇತ್ತೀಚೆಗೆ ಕಂಪನಿಯು ಮ್ಯಾಗ್ನೈಟ್ ಮಾದರಿಯಲ್ಲಿ ವಿಶೇಷ ಆವೃತ್ತಿಯನ್ನು ಸಹ ಬಿಡುಗಡೆ ಮಾಡಿದ್ದು, ಮ್ನಾಗ್ನೈಟ್ ರೆಡ್ ಎಡಿಷನ್ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 7,86,500 ಬೆಲೆ ಹೊಂದಿದೆ.

ಕಾರು ಮಾರಾಟ- 50 ಸಾವಿರ ಯುನಿಟ್ ಗಡಿದಾಟಿದ ನಿಸ್ಸಾನ್ ಮ್ಯಾಗ್ನೈಟ್ ಮಾರಾಟ

ಹೊಸ ಮ್ಯಾಗ್ನೈಟ್ ರೆಡ್ ಎಡಿಷನ್ ಮಾದರಿಯು ಪ್ರಮುಖ ಮೂರು ವೆರಿಯೆಂಟ್‌ಗಳನ್ನು ಹೊಂದಿದ್ದು, ಎಕ್ಸ್‌ವಿ ಮ್ಯಾನುವಲ್ ರೆಡ್ ವೆರಿಯೆಂಟ್ ರೂ. 7,86,500 ಆರಂಭಿಕ ಬೆಲೆ ಹೊಂದಿದ್ದರೆ ಎಕ್ಸ್‌ವಿ ಟರ್ಬೊ ಮ್ಯಾನುವಲ್ ವೆರಿಯೆಂಟ್ ರೂ. 9,24,500 ಬೆಲೆ ಹೊಂದಿದೆ.

ಕಾರು ಮಾರಾಟ- 50 ಸಾವಿರ ಯುನಿಟ್ ಗಡಿದಾಟಿದ ನಿಸ್ಸಾನ್ ಮ್ಯಾಗ್ನೈಟ್ ಮಾರಾಟ

ಹಾಗೆಯೇ ಎಕ್ಸ್‌ವಿ ಟರ್ಬೊ ಸಿವಿಟಿ ಟಾಪ್ ಎಂಡ್ ಮಾದರಿಯು ರೂ. 9,99,900 ಬೆಲೆ ಹೊಂದಿದ್ದು, ವಿಶೇಷ ಮಾದರಿಯಲ್ಲಿ ನೀಡಲಾಗಿರುವ ಬಣ್ಣದ ಆಯ್ಕೆಯು ಸ್ಟ್ಯಾಂಡರ್ಡ್ ಮಾದರಿಗಿಂತಲೂ ಭಿನ್ನವಾಗಿ ಕಾಣುವಂತೆ ಮಾಡಿದೆ.

ಕಾರು ಮಾರಾಟ- 50 ಸಾವಿರ ಯುನಿಟ್ ಗಡಿದಾಟಿದ ನಿಸ್ಸಾನ್ ಮ್ಯಾಗ್ನೈಟ್ ಮಾರಾಟ

ಬಿಡಿಭಾಗಗಳ ಬೆಲೆ ಹೆಚ್ಚಳ ಹಿನ್ನಲೆಯಲ್ಲಿ ಹೊಸ ಕಾರು ಬಿಡುಗಡೆಯ ನಂತರ ಹಲವು ಬಾರಿ ಬೆಲೆ ಹೆಚ್ಚಳ ಪಡೆದುಕೊಂಡಿದ್ದು, ಬೆಲೆ ಹೆಚ್ಚಳ ನಂತರವು ಹೊಸ ಕಾರು ಪ್ರತಿಸ್ಪರ್ಧಿ ಮಾದರಿಗಿಂತಲೂ ಕಡಿಮೆ ದರದಲ್ಲಿ ಮಾರಾಟಗೊಳ್ಳುತ್ತಿರುವುದೇ ಈ ಕಾರಿನ ಪ್ರಮುಖ ವೈಶಿಷ್ಟ್ಯತೆಯಾಗಿದೆ.

ಕಾರು ಮಾರಾಟ- 50 ಸಾವಿರ ಯುನಿಟ್ ಗಡಿದಾಟಿದ ನಿಸ್ಸಾನ್ ಮ್ಯಾಗ್ನೈಟ್ ಮಾರಾಟ

ಹೊಸ ಕಾರು ಭಾರತದಲ್ಲಿ ಮಾತ್ರವಲ್ಲ ವಿದೇಶಿ ಮಾರುಕಟ್ಟೆಗಳಲ್ಲೂ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಬಿಡಿಭಾಗಗಳ ಬೆಲೆ ಹೆಚ್ಚಳ ಹಿನ್ನಲೆಯಲ್ಲಿ ಹಲವಾರು ಬಾರಿ ಬೆಲೆ ಹೆಚ್ಚಳ ಪಡೆದುಕೊಂಡಿದ್ದರೂ ಸಹ ಇದರ ಪ್ರತಿಸ್ಪರ್ಧಿ ಮಾದರಿಗಿಂತಲೂ ಕಡಿಮೆಯಿದೆ.

ಕಾರು ಮಾರಾಟ- 50 ಸಾವಿರ ಯುನಿಟ್ ಗಡಿದಾಟಿದ ನಿಸ್ಸಾನ್ ಮ್ಯಾಗ್ನೈಟ್ ಮಾರಾಟ

ಮ್ಯಾಗ್ನೈಟ್ ಕಾರು ಮಾದರಿಯನ್ನು ನಿಸ್ಸಾನ್ ಕಂಪನಿಯು ಭಾರತದಲ್ಲಿ ನಿರ್ಮಾಣ ಮಾಡಿ ವಿಶ್ವದ ಪ್ರಮುಖ 15 ರಾಷ್ಟ್ರಗಳಿಗೆ ರಫ್ತು ಕೈಗೊಳ್ಳುತ್ತಿದ್ದು, ಭಾರತದಿಂದ ಇಂಡೋನೇಷ್ಯಾ, ದಕ್ಷಿಣ ಆಫ್ರಿಕಾ, ನೇಪಾಳ, ಭೂತಾನ್, ಬಾಂಗ್ಲಾದೇಶ, ಶ್ರೀಲಂಕಾ, ಬ್ರೂನೈ, ಉಗಾಂಡಾ, ಕೀನ್ಯಾ, ಸೀಶೆಲ್ಸ್, ಮೊಜಾಂಬಿಕ್, ಜಾಂಬಿಯಾ, ಮಾರಿಷಸ್, ತಾಂಜಾನಿಯಾ, ಮಲಾವಿ ದೇಶಗಳಿಗೆ ರಫ್ತುಗೊಳಿಸುತ್ತಿದೆ.

ಕಾರು ಮಾರಾಟ- 50 ಸಾವಿರ ಯುನಿಟ್ ಗಡಿದಾಟಿದ ನಿಸ್ಸಾನ್ ಮ್ಯಾಗ್ನೈಟ್ ಮಾರಾಟ

ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಉತ್ತಮ ಸೇಫ್ಟಿ ರೇಟಿಂಗ್ಸ್ ಪಡೆದುಕೊಂಡ ನಂತರ ಹೊಸ ಕಾರಿನ ಬೇಡಿಕೆ ಮತ್ತಷ್ಟು ಹೆಚ್ಚಳವಾಗಿದ್ದು, ಗ್ರಾಹಕರ ಬೇಡಿಕೆಯೆಂತೆ ಹೊಸ ಕಾರು ಎಕ್ಸ್‌ಇ, ಎಕ್ಸ್ಎಲ್, ಎಕ್ಸ್‌ವಿ ಮತ್ತು ಎಕ್ಸ್‌ವಿ ಪ್ರೀಮಿಯಂ ಆವೃತ್ತಿಗಳೊಂದಿಗೆ ಮಾರಾಟಗೊಳ್ಳುತ್ತಿದೆ.

ಕಾರು ಮಾರಾಟ- 50 ಸಾವಿರ ಯುನಿಟ್ ಗಡಿದಾಟಿದ ನಿಸ್ಸಾನ್ ಮ್ಯಾಗ್ನೈಟ್ ಮಾರಾಟ

ಹೊಸ ಮ್ಯಾಗ್ನೈಟ್ ಕಾರಿನಲ್ಲಿ ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ 1.0-ಲೀಟರ್ ಬಿ4ಡಿ ಪೆಟ್ರೋಲ್ ಎಂಜಿನ್ ಮತ್ತು ಹೆಚ್ಆರ್‌ಎಓ 1.0-ಲೀಟರ್ ಟರ್ಬೋ ಪೆಟ್ರೋಲ್ ಮಾದರಿಗಳನ್ನು ಜೋಡಣೆ ಮಾಡಲಾಗಿದೆ.

ಕಾರು ಮಾರಾಟ- 50 ಸಾವಿರ ಯುನಿಟ್ ಗಡಿದಾಟಿದ ನಿಸ್ಸಾನ್ ಮ್ಯಾಗ್ನೈಟ್ ಮಾರಾಟ

1.0-ಲೀಟರ್ ನ್ಯಾಚುರಲಿ ಆಸ್ಪೆರೆಟೆಡ್ ಪೆಟ್ರೋಲ್ ಮಾದರಿಯು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 70-ಬಿಎಚ್‌ಪಿ, 96-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದ್ದರೆ 1.0-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್‌ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಎಕ್ಸ್-ಟ್ರಾನಿಕ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 100-ಬಿಎಚ್‌ಪಿ, 160-ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

ಕಾರು ಮಾರಾಟ- 50 ಸಾವಿರ ಯುನಿಟ್ ಗಡಿದಾಟಿದ ನಿಸ್ಸಾನ್ ಮ್ಯಾಗ್ನೈಟ್ ಮಾರಾಟ

ಇದರೊಂದಿಗೆ ಹೊಸ ಕಾರಿನಲ್ಲಿ ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಸುರಕ್ಷತೆಗಾಗಿ ಐಸೋಫಿಕ್ಸ್ ಸೀಟ್, ಸೆಂಟರ್ ಡೋರ್ ಲಾಕಿಂಗ್, ಸ್ಪೀಡ್ ಸೆನ್ಸಿಂಗ್ ಆಟೋ ಡೋರ್ ಲಾಕ್, ಇಂಪ್ಯಾಕ್ಟ್ ಸೆನ್ಸಿಂಗ್ ಆಟೋ ಡೋರ್ ಅನ್ ಲಾಕ್, ಹಿಲ್ ಸ್ಟಾರ್ಟ್ ಅಸಿಸ್ಟ್, ಟ್ರಾಕ್ಷನ್ ಕಂಟ್ರೋಲ್, ಬ್ರೇಕ್ ಅಸಿಸ್ಟ್, ರಿಮೋಟ್ ಕೀ ಲೆಸ್ ಎಂಟ್ರಿ ಸೌಲಭ್ಯಗಳಿವೆ.

ಕಾರು ಮಾರಾಟ- 50 ಸಾವಿರ ಯುನಿಟ್ ಗಡಿದಾಟಿದ ನಿಸ್ಸಾನ್ ಮ್ಯಾಗ್ನೈಟ್ ಮಾರಾಟ

ಜೊತೆಗೆ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಆ್ಯಂಟಿ ರೊಲ್ ಬಾರ್, ಸೀಟ್ ಬೆಲ್ಟ್ ಅಲರ್ಟ್, ಇಮ್‌ಮೊಬಿಲೈಸರ್ ಮತ್ತು ರಿಯರ್ ಪಾರ್ಕಿಂಗ್ ಕ್ಯಾಮೆರಾ, ವೆಹಿಕಲ್ ಡೈನಾಮಿಕ್ ಕಂಟ್ರೋಲ್, 360 ಡಿಗ್ರಿ ಕ್ಯಾಮೆರಾ, ಲೆದರ್ ವ್ಯಾರ್ಪ್ ಹೊಂದಿರುವ ಸ್ಟ್ರೀರಿಂಗ್ ವೀಲ್ಹ್, ಟೈರ್ ಪ್ರೆಷರ್ ಮಾನಿಟರಿಂಗ್ ಮತ್ತು ಬ್ರಾಂಡ್‌ನ ಕನೆಕ್ಟ್ ಫೀಚರ್ಸ್ ನೀಡಲಾಗಿದೆ.

Most Read Articles

Kannada
English summary
Nissan sales 8337 units cars in july 2022 details
Story first published: Wednesday, August 3, 2022, 8:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X