ಆಫ್ ರೋಡ್-1, ಪ್ರೀಮಿಯಂ-1: ಮಾರುತಿಯಿಂದ ಅನಾವರಣಕ್ಕೆ ಸಜ್ಜಾದ 2 ಹೊಸ ಕಾರುಗಳು
ಜನವರಿ 11 ರಂದು ನವದೆಹಲಿಯಲ್ಲಿ ಪ್ರಾರಂಭವಾಗುವ ಮುಂಬರುವ ಆಟೋ ಎಕ್ಸ್‌ಪೋ 2023 ರಲ್ಲಿ ಮಾರುತಿ ಸುಜುಕಿ ಒಂದಲ್ಲ ಎರಡು ಹೊಸ ಮಾದರಿಗಳನ್ನು ಹೊರತರಲಿದೆ. ಅವುಗಳೆಂದರೆ ಬಹು ನಿರೀಕ್ಷಿತ ಜಿಮ್ನಿ 5-ಬಾಗಿಲಿನ SUV ಹಾಗೂ ಪ್ರಸ್ತುತ-ಜನ್ ಬಲೆನೊ ಆಧಾರಿತ ಹೊಸ ಕ್ರಾಸ್ಒವರ್ ಮಾದರಿಗಳನ್ನು ಜಾಗತಿಕವಾಗಿ ಅನಾವರಣಗೊಳಿಸಲಿದೆ.
ಮಾರುತಿ ಸುಜುಕಿ ಜಿಮ್ನಿ 5-ಬಾಗಿಲು: ಭಾರತಲ್ಲಿ ಬಿಡುಗಡೆ ದಿನಾಂಕ
ಜಿಮ್ನಿ 5-ಡೋರ್ ಅನ್ನು ಮುಂದಿನ ತಿಂಗಳು ಭಾರತದಲ್ಲಿ ಮೊದಲ ಬಾರಿಗೆ ಪ್ರದರ್ಶಿಸಲಾಗುವುದು, ಆದರೆ ಅದರ ಬಿಡುಗಡೆ ಮತ್ತು ಬೆಲೆ ಘೋಷಣೆ ನಂತರ ತಿಳಿಯಲಿದೆ. ಮೂಲಗಳ ಪ್ರಕಾರ ಈ SUV ಆಗಸ್ಟ್ 2023 ರ ವೇಳೆಗೆ ಮಾರಾಟವಾಗಲಿದೆ. ಈ SUV ಅನ್ನು ಉತ್ತಮ ಆಫ್-ರೋಡ್ ಗೇರ್‌ನೊಂದಿಗೆ ಹೆಚ್ಚಿನ ಜೀವನಶೈಲಿ ವಾಹನವಾಗಿ ಇರಿಸಲು ಮಾರುತಿ ಯೋಜಿಸಿರುವ ಕಾರಣ ಜಿಮ್ನಿ 5-ಡೋರ್ ಬೇಗ ಮಾರುಕಟ್ಟೆಗೆ ಬರದಿರಲು ಪ್ರಮುಖ ಕಾರಣವಾಗಿದೆ.

ಇದರರ್ಥ ಮಾರುತಿಯು ಜಿಮ್ನಿ 5-ಡೋರ್ ಅನ್ನು ಮಳೆಗಾಲದ ಮೊದಲು ಅಥವಾ ಅದೇ ಸಮಯದಲ್ಲಿ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಇದನ್ನು ಆಫ್-ರೋಡ್ ಸೀಸನ್ ಎಂದೂ ಕರೆಯಲಾಗುತ್ತದೆ. ಈ ವಿಭಾಗವು ಪ್ರಸ್ತುತ ಮಹೀಂದ್ರಾ ಥಾರ್, ಫೋರ್ಸ್ ಗೂರ್ಖಾ ಮತ್ತು ಸ್ವಲ್ಪ ಮಟ್ಟಿಗೆ ಈಗ ಸ್ಥಗಿತಗೊಂಡಿರುವ ಮಾರುತಿ ಜಿಪ್ಸಿಯಿಂದ ಪ್ರಾಬಲ್ಯ ಹೊಂದಿದೆ. ಆಫ್-ರೋಡ್ ಸೀಸನ್‌ನಲ್ಲಿ ಜಿಮ್ನಿ 5-ಡೋರ್ ವರ್ಷನ್ ಬಿಡುಗಡೆ ಸಮಯವನ್ನು ನಿಗದಿಪಡಿಸುವ ಮೂಲಕ ಮಾರುತಿ ಈ ವಿಭಾಗದಲ್ಲಿ ನಿರೀಕ್ಷೆಗಳನ್ನು ಹೆಚ್ಚಿಸಲಿದೆ.
ಮಾರುತಿ ಸುಜುಕಿ ಬಲೆನೊ ಕ್ರಾಸ್ಒವರ್: ಬಿಡುಗಡೆ ದಿನಾಂಕ
ಆಟೋ ಎಕ್ಸ್‌ಪೋದಲ್ಲಿ ಪಾದಾರ್ಪಣೆ ಮಾಡಲಿರುವ ಮಾರುತಿಯ ಎರಡನೇ ಮಾದರಿಯೆಂದರೆ ಹೆಚ್ಚು ಬೇಡಿಕೆ ಹೊಂದಿರುವ ಪ್ರೀಮಿಯಂ ವಿಭಾಗದ ಬಲೆನೊ ಕ್ರಾಸ್‌ಒವರ್ ಆಗಿದೆ. ಈ ಕ್ರಾಸ್‌ಒವರ್ ಅನ್ನು ಆಂತರಿಕವಾಗಿ ಮಾರುತಿ ವೈಟಿಬಿ ಎಂದು ಕೋಡ್‌ನೇಮ್ ಇಡಲಾಗಿದೆ. ಇದು ತನ್ನ ಮೊನೊಕಾಕ್ ಅಂಡರ್‌ಪಿನ್ನಿಂಗ್‌ಗಳು, ಬಾಡಿಯ ಕೆಲವು ಭಾಗಗಳು ಮತ್ತು ಹೆಚ್ಚಿನ ಒಳಾಂಗಣವನ್ನು ಬಲೆನೊದೊಂದಿಗೆ ಹಂಚಿಕೊಳ್ಳುತ್ತದೆ ಎಂದು ಮೂಲಗಳು ತಿಳಿಸಿವೆ.

ಆದರೆ ತನ್ನದೇ ಆದ ಗುರುತನ್ನು ಹೊಂದಲು ವಿಭಿನ್ನ ಮಾರ್ಕೆಟಿಂಗ್ ಹೆಸರಿನೊಂದಿಗೆ ಬರುತ್ತಿದೆ. ಇದು 1.0-ಲೀಟರ್ ಟರ್ಬೊ-ಪೆಟ್ರೋಲ್ ಬೂಸ್ಟರ್‌ಜೆಟ್ ಎಂಜಿನ್‌ನ ಮರಳುವಿಕೆಯನ್ನು ಸೂಚಿಸುತ್ತಿದೆ. ಇದೇ ಎಂಜಿನ್ ಹಿಂದಿನ ಜನ್ ಬಲೆನೊದಲ್ಲೂ ಲಭ್ಯವಿದೆ. ಮಾರುತಿ YTB ಅಥವಾ Baleno - ಆಧಾರಿತ ಕ್ರಾಸ್ಒವರ್ ಮುಂದಿನ ವರ್ಷ ಮಾರಾಟವಾಗಲಿರುವ ಮೊದಲ ಮಾರುತಿ ಮಾಡೆಲ್ ಆಗುವ ಸಾಧ್ಯತೆಯಿದೆ. ಮೂಲಗಳ ಪ್ರಕಾರ ಏಪ್ರಿಲ್ ಆರಂಭದಲ್ಲಿ ಇದನ್ನು ಮಾರಾಟಕ್ಕೆ ತರುವ ನಿರೀಕ್ಎಯಿದೆ.
ಮುಂಬರುವ ಮಾರುತಿ ಸುಜುಕಿ ಮಾದರಿಗಳು: 2023 ಮತ್ತು ಅದರ ನಂತರ
ಬ್ರ್ಯಾಂಡ್‌ನ ಮೂರನೇ ಪ್ರಮುಖ ಬಿಡುಗಡೆ ಎಂದರೆ ಹೊಸ ಮೂರು-ಸಾಲು MPV ಆಗಿದ್ದು, ಇದು ಟೊಯೋಟಾದಿಂದ ಸರಬರಾಜು ಮಾಡಲ್ಪಡುತ್ತದೆ. ಇತ್ತೀಚೆಗೆ ಅನಾವರಣಗೊಂಡ ಇನ್ನೋವಾ ಹೈಕ್ರಾಸ್ ಅನ್ನು ಆಧರಿಸಿದೆ. ಈ ಮಾದರಿಯು ಭಾರತದಲ್ಲಿ ಮಾರುತಿಯ ಅತ್ಯಂತ ದುಬಾರಿ ಕೊಡುಗೆಯಾಗಿರಲಿದೆ, ಇದು ಗ್ರ್ಯಾಂಡ್ ವಿಟಾರಾವನ್ನು ಆಧರಿಸಿರಲಿದೆ. ಅಂದರೆ ಮಾರುತಿ ಗ್ರಾಂಡ್ ವಿಟಾರಾ ಹಾಗೂ ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್‌ನಂತೆ ಎಂದು ಹೇಳಬಹುದು.
ಮಾರುತಿಯ ಇನ್ನೋವಾ ಹೈಕ್ರಾಸ್-ಆಧಾರಿತ C-MPV ಗಾಗಿ ನಿರೀಕ್ಷಿತ ಬೆಲೆ ಘೋಷಣೆ ಮತ್ತು ಮಾರುಕಟ್ಟೆ ಬಿಡುಗಡೆಯನ್ನು, ಜಿಮ್ನಿ 5-ಡೋರ್‌ನ ಬಿಡುಗಡೆಯ ನಂತರ 2023 ರ ಹಬ್ಬದ ಸೀಸನ್‌ನಲ್ಲಿ ಮಾಡಲು ಯೋಜನೆ ರೂಪಿಸಿಕೊಂಡಿದೆ. ಹೆಚ್ಚುವರಿಯಾಗಿ, ಮಾರುತಿಯು 2024 ರಲ್ಲಿ ಮಾರುಕಟ್ಟೆ ಬಿಡುಗಡೆಗಾಗಿ ಮುಂದಿನ-ಜನ್ ಸ್ವಿಫ್ಟ್ ಡಿಜೈರ್ ಅನ್ನು ಸಹ ಸಿದ್ಧಗೊಳಿಸುತ್ತಿದೆ. ಎರಡೂ ಮಾದರಿಗಳು ಹೊಸದಾಗಿರುತ್ತವೆ. ಜೊತೆಗೆ ಸ್ಟ್ರಾಂಗ್ ಹೈಬ್ರಿಡ್ ಪವರ್‌ಟ್ರೇನ್ ಅನ್ನು ಒಳಗೊಂಡಿರುತ್ತವೆ ಎಂದು ಮೂಲಗಳು ತಿಳಿಸಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications








