ಮಾರಾಟ ವಿಸ್ತರಣೆಗಾಗಿ ಹೊಸ ಪಾಲುದಾರಿಕೆ ಪ್ರಕಟಿಸಿದ ಓಮೆಗಾ ಸೈಕ್

ಎಲೆಕ್ಟ್ರಿಕ್ ವಾಹನ ಬಳಕೆಯನ್ನು ಉತ್ತೇಜಿಸಲು ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ವ್ಯಯಕ್ತಿಕ ಇವಿ ವಾಹನ ಮಾದರಿಗಳಲ್ಲದೆ ವಾಣಿಜ್ಯ ಇವಿ ವಾಹನಗಳ ಮಾರಾಟವು ಸಹ ಹೆಚ್ಚಳವಾಗುತ್ತಿದೆ. ಹೀಗಾಗಿ ಗ್ರಾಹಕರ ಬೇಡಿಕೆಯೆಂತೆ ಓಮೆಗಾ ಸೈಕ್ ಕಂಪನಿಯು ಮಾರಾಟ ಮಳಿಗೆಗಳನ್ನು ಹೆಚ್ಚಿಸುತ್ತಿದ್ದು, ಮಾರಾಟ ಮಳಿಗೆಗಳನ್ನು ಹೆಚ್ಚಿಸಲು ಹೊಸ ಪಾಲುದಾರಿಕೆ ಪ್ರಕಟಸಿದೆ.

ಮಾರಾಟ ವಿಸ್ತರಣೆಗಾಗಿ ಹೊಸ ಪಾಲುದಾರಿಕೆ ಪ್ರಕಟಿಸಿದ ಓಮೆಗಾ ಸೈಕ್

ತೈಲ ಬೆಲೆ ಹೆಚ್ಚಳ ಪರಿಣಾಮ ಸಾಂಪ್ರಾದಾಯಿಕ ವಾಹನಗಳ ನಿರ್ವಹಣಾ ವೆಚ್ಚದಲ್ಲಿ ಭಾರೀ ಏರಿಕೆಯಾಗಿದ್ದು, ಹೀಗಿರುವಾಗ ಹೊಸ ವಾಹನ ಖರೀದಿದಾರರಿಗೆ ಎಲೆಕ್ಟ್ರಿಕ್ ವಾಹನಗಳು ಪ್ರಮುಖ ಆಕರ್ಷಣೆಯಾಗುತ್ತಿವೆ. ಜೊತೆಗೆ ವ್ಯಯಕ್ತಿಕ ಇವಿ ವಾಹನಗಳ ಜೊತೆಗೆ ಇವಿ ವಾಣಿಜ್ಯ ವಾಹನಗಳಿಗೂ ಹೆಚ್ಚಿನ ಬೇಡಿಕೆ ಹರಿದುಬರುತ್ತಿದ್ದು, ಓಮೆಗಾ ಸೈಕ್ ಕಂಪನಿಯು ತನ್ನ ಪ್ರಮುಖ ಇವಿ ವಾಹನಗಳ ಮೂಲಕ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ಮಾರಾಟ ವಿಸ್ತರಣೆಗಾಗಿ ಹೊಸ ಪಾಲುದಾರಿಕೆ ಪ್ರಕಟಿಸಿದ ಓಮೆಗಾ ಸೈಕ್

ಓಮೆಗಾ ಸೈಕ್ ಕಂಪನಿಯು ಸದ್ಯ ದೇಶಾದ್ಯಂತ ಕೆಲವೇ ನಗರಗಳಲ್ಲಿ ಮಾರಾಟ ಸೌಲಭ್ಯಕ್ಕೆ ಚಾಲನೆ ನೀಡಿದ್ದು, ಇದೀಗ ಹೊಸ ಪಾಲುದಾರಿಕೆಯೊಂದಿಗೆ ವಿವಿಧ ನಗರಗಳಲ್ಲಿ 500 ಮಾರಾಟ ಮಳಿಗೆಗಳ ಮೂಲಕ ಖರೀದಿಗೆ ಲಭ್ಯವಾಗುತ್ತಿದೆ.

ಮಾರಾಟ ವಿಸ್ತರಣೆಗಾಗಿ ಹೊಸ ಪಾಲುದಾರಿಕೆ ಪ್ರಕಟಿಸಿದ ಓಮೆಗಾ ಸೈಕ್

2023-24 ಹಣಕಾಸು ವರ್ಷದ ವೇಳೆಗೆ ಭಾರತದಾದ್ಯಂತ 500 ಡೀಲರ್‌ಶಿಪ್‌ಗಳನ್ನು ತೆರೆಯುವ ಗುರಿಹೊಂದಿರುವ ಓಮೆಗಾ ಸೈಕ್ ಕಂಪನಿಯು ಗೋಯೆಂಕಾ ಗ್ರೀನ್ ಪ್ರೈವೇಟ್ ಲಿಮಿಟೆಡ್‌ನೊಂದಿಗೆ ಪಾಲುದಾರಿಕೆಯನ್ನು ಘೋಷಿಸಿದೆ.

ಮಾರಾಟ ವಿಸ್ತರಣೆಗಾಗಿ ಹೊಸ ಪಾಲುದಾರಿಕೆ ಪ್ರಕಟಿಸಿದ ಓಮೆಗಾ ಸೈಕ್

ದೇಶಾದ್ಯಂತ ಈಗಾಗಲೇ ಅತ್ಯುತ್ತಮ ಮಾರಾಟ ಮಳಿಗೆಗಳನ್ನು ಹೊಂದಿರುವ ಗೋಯೆಂಕಾ ಕಂಪನಿಯು ಮೊದಲ ಬಾರಿಗೆ ಎಲೆಕ್ಟ್ರಿಕ್ ವಾಹನ ಮಾದರಿಗಳಿಗಾಗಿಯೇ ಪ್ರತ್ಯೇಕ ಮಾರಾಟ ಸೌಲಭ್ಯವನ್ನು ತೆರೆದಿದ್ದು, ಎಲೆಕ್ಟ್ರೋ ರೈಡ್ ಮಾರಾಟ ಮಳಿಗೆಗಳ ಮೂಲಕ ಒಂದೇ ಸೂರಿನಡಿ ವಿವಿಧ ಬ್ರಾಂಡ್ ವಾಣಿಜ್ಯ ಇವಿ ಮಾದರಿಗಳನ್ನು ಮಾರಾಟ ಮಾಡಲಿದೆ.

ಮಾರಾಟ ವಿಸ್ತರಣೆಗಾಗಿ ಹೊಸ ಪಾಲುದಾರಿಕೆ ಪ್ರಕಟಿಸಿದ ಓಮೆಗಾ ಸೈಕ್

ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯು (EV) 2030 ರ ವೇಳೆಗೆ 152 ಶತಕೋಟಿ ಡಾಲರ್‌ಗಿಂತಲೂ ಹೆಚ್ಚು ತಲುಪುವ ನಿರೀಕ್ಷೆಯಿದ್ದು, ಬೆಳೆಯುತ್ತಿರುವ ಮಾರುಕಟ್ಟೆಯ ಲಾಭ ಪಡೆಯಲು ಒಮೆಗಾ ಸೈಕಿ ಮೊಬಿಲಿಟಿಯು ಕಳೆದ ವರ್ಷ ಫ್ಲೀಟ್‌ ವಿಭಾಗದಡಿಯಲ್ಲಿ 100ಕ್ಕೂ ಹೆಚ್ಚು ಡೀಲರ್‌ಶಿಪ್‌ಗಳನ್ನು ತೆರೆದಿದೆ.

ಮಾರಾಟ ವಿಸ್ತರಣೆಗಾಗಿ ಹೊಸ ಪಾಲುದಾರಿಕೆ ಪ್ರಕಟಿಸಿದ ಓಮೆಗಾ ಸೈಕ್

ಒಮೆಗಾ ಸೈಕಿ ಮೊಬಿಲಿಟಿಯು ಇವಿ ವಾಹನಗಳ ಉತ್ಪಾದನೆ ಸ್ಥಳೀಯ ಬಿಡಿಭಾಗಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ರೇಂಜ್ ಪ್ಲಸ್ ಬ್ರ್ಯಾಂಡ್ ಅಡಿಯಲ್ಲಿ ತನ್ನದೇ ಆದ ಎಲೆಕ್ಟ್ರಿಕ್ ತ್ರಿಚಕ್ರ ವಾಹನಗಳನ್ನು ತಯಾರಿಸುತ್ತದೆ. ಕಂಪನಿಯು ರೇಜ್ + ಫ್ರಾಸ್ಟ್ ಬ್ರಾಂಡ್ ಹೆಸರಿನಲ್ಲಿ ಭಾರತದ ಮೊದಲ ರೆಫ್ರಿಜರೇಟೆಡ್ ಎಲೆಕ್ಟ್ರಿಕ್ ತ್ರಿಚಕ್ರ ವಾಹನವನ್ನು ಸಹ ಬಿಡುಗಡೆ ಮಾಡಿದೆ.

ಮಾರಾಟ ವಿಸ್ತರಣೆಗಾಗಿ ಹೊಸ ಪಾಲುದಾರಿಕೆ ಪ್ರಕಟಿಸಿದ ಓಮೆಗಾ ಸೈಕ್

ಇನ್ನು ಇವಿ ವಾಹನಗಳಿಗೆ ಸೂಕ್ತ ಚಾರ್ಜಿಂಗ್ ಸೌಲಭ್ಯ ಒದಗಿಸಲು ಸನ್ ಮೊಲಿಬಿಟಿ ಕಂಪನಿಯು ದೇಶಾದ್ಯಂತ ಬ್ಯಾಟರಿ ವಿನಿಮಯ ಕೇಂದ್ರಗಳನ್ನು ತೆರೆಯುತ್ತಿದ್ದು, ಇವಿ ವಾಣಿಜ್ಯ ವಾಹನಗಳ ತಡೆರಹಿತ ಕಾರ್ಯಾಚರಣೆಗಾಗಿ ಒಮೆಗಾ ಸೈಕಿ ಕಂಪನಿಯು ಕೂಡಾ ಸನ್ ಮೊಲಿಬಿಟಿ ಜೊತೆ ಹೊಸ ಪಾಲುದಾರಿಕೆ ಪ್ರಕಟಿಸಿದೆ.

ಮಾರಾಟ ವಿಸ್ತರಣೆಗಾಗಿ ಹೊಸ ಪಾಲುದಾರಿಕೆ ಪ್ರಕಟಿಸಿದ ಓಮೆಗಾ ಸೈಕ್

ಹೊಸ ಪಾಲುದಾರಿಕೆ ಅಡಿಯಲ್ಲಿ ಒಮೆಗಾ ಸೈಕಿ ನಿರ್ಮಾಣದ 10 ಸಾವಿರ ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳಿಗೆ ಸನ್ ಮೊಬಿಲಿಟಿ ಕಂಪನಿಯು ಸ್ಮಾರ್ಟ್ ಮತ್ತು ಸ್ವ್ಯಾಪ್ ಮಾಡಬಹುದಾದ ಬ್ಯಾಟರಿಗಳನ್ನು ಪರಿಚಯಿಸಲಿದ್ದು, ಕ್ವಿಕ್ ಇಂಟರ್‌ಚೇಂಜ್ ಸ್ಟೇಷನ್ (QIS) ಜೊತೆಗೆ ಸನ್ ಮೊಬಿಲಿಟಿಯ ರಾಷ್ಟ್ರವ್ಯಾಪಿ ಸ್ವಾಪ್‌ಪಾಯಿಂಟ್ ನೆಟ್‌ವರ್ಕ್‌ಗೆ ಪ್ರವೇಶವನ್ನು ಒದಗಿಸುತ್ತದೆ.

ಮಾರಾಟ ವಿಸ್ತರಣೆಗಾಗಿ ಹೊಸ ಪಾಲುದಾರಿಕೆ ಪ್ರಕಟಿಸಿದ ಓಮೆಗಾ ಸೈಕ್

ಜೊತೆಗೆ ಅತ್ಯಾಧುನಿಕ IoT-ಆಧಾರಿತ ಎಂಡ್-ಟು-ಎಂಡ್ ಮೂಲಕ ಮೂಲಸೌಕರ್ಯ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಲಿದ್ದು, ಇವಿ ಉತ್ಪನ್ನ ಪೋರ್ಟ್‌ಫೋಲಿಯೊಗೆ ಹೊಸ ಮೌಲ್ಯವನ್ನು ಸೇರಿಸಲು ಈ ಮೈತ್ರಿಯೂ ಸಾಕಷ್ಟು ಸಹಕಾರಿಯಾಗಲೆಂದು ಒಮೆಗಾ ಸೈಕಿ ಸಂಸ್ಥಾಪಕ ಮತ್ತು ಅಧ್ಯಕ್ಷ ಉದಯ್ ನಾರಂಗ್ ಮಾಹಿತಿ ನೀಡಿದ್ದಾರೆ.

ಮಾರಾಟ ವಿಸ್ತರಣೆಗಾಗಿ ಹೊಸ ಪಾಲುದಾರಿಕೆ ಪ್ರಕಟಿಸಿದ ಓಮೆಗಾ ಸೈಕ್

ಫೇಮ್ 2 ಸಬ್ಸಡಿ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಜಿಎಸ್‌ಟಿ ವಿನಾಯ್ತಿ, ಗರಿಷ್ಠ ಸಬ್ಸಡಿ ಮತ್ತು ತೆರಿಗೆ ವಿನಾಯ್ತಿಗಳನ್ನು ನೀಡಲಾಗುತ್ತಿದ್ದು, ವಾಹನ ಉತ್ಪಾದನಾ ಕಂಪನಿಗಳಿಗೂ ಹಲವಾರು ಪ್ರೋತ್ಸಾಹ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಮಾರಾಟ ವಿಸ್ತರಣೆಗಾಗಿ ಹೊಸ ಪಾಲುದಾರಿಕೆ ಪ್ರಕಟಿಸಿದ ಓಮೆಗಾ ಸೈಕ್

ಎಲೆಕ್ಟ್ರಿಕ್ ವಾಹನಗಳ ಹೆಚ್ಚಳಕ್ಕಾಗಿ ಕೇಂದ್ರ ಸರ್ಕಾರದ ಫೇಮ್ 2 ಹೊರತುಪಡಿಸಿ ರಾಜ್ಯಗಳ ಮಟ್ಟದಲ್ಲೂ ವಿವಿಧ ರಾಜ್ಯ ಸರ್ಕಾರಗಳು ಸಹ ಹೆಚ್ಚಿನ ಮಟ್ಟದ ಪ್ರೊತ್ಸಾಹ ನೀಡುತ್ತಿದ್ದು, ಕೇಂದ್ರದ ಫೇಮ್ 2 ಜೊತೆಗೆ ವಿವಿಧ ರಾಜ್ಯ ಸರ್ಕಾರಗಳು ಕೂಡಾ ಹೊಸ ಇವಿ ನೀತಿ ಘೋಷಣೆ ಮಾಡುತ್ತಿವೆ.

ಮಾರಾಟ ವಿಸ್ತರಣೆಗಾಗಿ ಹೊಸ ಪಾಲುದಾರಿಕೆ ಪ್ರಕಟಿಸಿದ ಓಮೆಗಾ ಸೈಕ್

ಹಾಗೆಯೇ ಇವಿ ವಾಹನಗಳಿಗೆ ಸೂಕ್ತವಾದ ಚಾರ್ಜಿಂಗ್ ನಿಲ್ದಾಣಗಳ ನಿರ್ಮಾಣವು ಇದೀಗ ಹೊಸ ಸವಾಲಾಗಿದ್ದು, ಇವಿ ವಾಹನಗಳು ಹೆಚ್ಚಿದಂತೆ ಅವುಗಳಿಗೆ ಸೂಕ್ತವಾದ ಚಾರ್ಜಿಂಗ್ ನಿಲ್ದಾಣಗಳನ್ನು ನಿರ್ಮಾಣಕ್ಕೂ ಯೋಜನೆ ಜಾರಿಗೆ ತರಲಾಗಿದೆ.

ಮಾರಾಟ ವಿಸ್ತರಣೆಗಾಗಿ ಹೊಸ ಪಾಲುದಾರಿಕೆ ಪ್ರಕಟಿಸಿದ ಓಮೆಗಾ ಸೈಕ್

ಇದಲ್ಲದೇ ಓಮೆಗಾ ಸೈಕಿ ಕಂಪನಿಯೊಂದಿಗೆ ಪಾಲುದಾರಿಕೆ ಘೋಷಣೆ ಮಾಡಿರುವ ಚಾರ್ಜರ್ ಕಂಪನಿಯು ಸಹಾ ವಿಶೇಷವಾಗಿ ವಾಣಿಜ್ಯ ವಾಹನಗಳಿಗಾಗಿಯೇ ಪ್ರತ್ಯೇಕ ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯುತ್ತಿದೆ.

ಮಾರಾಟ ವಿಸ್ತರಣೆಗಾಗಿ ಹೊಸ ಪಾಲುದಾರಿಕೆ ಪ್ರಕಟಿಸಿದ ಓಮೆಗಾ ಸೈಕ್

ಹೆಚ್ಚಿನ ಮಟ್ಟದ ವಾಣಿಜ್ಯ ಚಟುವಟಿಕೆ ಕಂಡುಬರುವ ಮಾರುಕಟ್ಟೆಗಳ ಪಾರ್ಕಿಂಗ್ ನಿಲ್ದಾಣಗಳಲ್ಲಿ, ಉಗ್ರಾಣಗಳ ವಾಹನ ನಿಲುಗಡೆ ಪ್ರದೇಶಗಳಲ್ಲಿ ಮತ್ತು ಸೂಪರ್ ಮಾರ್ಕೆಟ್‌ಗಳ ಆವರಣಗಳಲ್ಲಿ ಚಾರ್ಜರ್ ಕಂಪನಿಯು ಓಮೆಗಾ ಸೈಕಿ ಇವಿ ವಾಣಿಜ್ಯ ವಾಹನಗಳಿಗಾಗಿ ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯಲಿದೆ.

ಮಾರಾಟ ವಿಸ್ತರಣೆಗಾಗಿ ಹೊಸ ಪಾಲುದಾರಿಕೆ ಪ್ರಕಟಿಸಿದ ಓಮೆಗಾ ಸೈಕ್

ಚಾರ್ಜರ್ ಕಂಪನಿಯು ಗ್ರಾಹಕರ ಬೇಡಿಕೆ ಆಧಾರದ ಮೇಲೆ 3.3kW ಸಾಮರ್ಥ್ಯದ ಚಾರ್ಜರ್ ಲೈಟ್ ಮತ್ತು 22kW ಸಾಮರ್ಥ್ಯದ ಚಾರ್ಜರ್ ಟೆರಾ ನಿಲ್ದಾಣಗಳನ್ನು ನಿರ್ಮಾಣ ಮಾಡಲಿದ್ದು, ಇದರಲ್ಲಿ ಚಾರ್ಜರ್ ಲೈಟ್ ಚಾರ್ಜಿಂಗ್ ಸೌಲಭ್ಯವನ್ನು ಇವಿ ವಾಹನ ಮಾಲೀಕರು ವ್ಯಯಕ್ತಿಕ ಬಳಕೆಗಾಗಿ ಅಳವಡಿಸಿಕೊಳ್ಳಬಹುದಾಗಿದೆ.

Article Published On: Monday, February 7, 2022, 13:07 [IST]
English summary
Omega seiki mobility made partnership with goenka green details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+