2030ರ ವೇಳೆಗೆ ನಿರ್ಮಾಣವಾಗಬೇಕಿದೆ ಬರೋಬ್ಬರಿ 46 ಸಾವಿರ ಇವಿ ಚಾರ್ಜಿಂಗ್ ನಿಲ್ದಾಣಗಳು

ಹೆಚ್ಚುತ್ತಿರುವ ಇವಿ ವಾಹನಗಳಿಗೆ ಪೂರಕವಾಗಿ ಹಲವಾರು ಚಾರ್ಜಿಂಗ್ ನಿಲ್ದಾಣ ನಿರ್ಮಾಣ ಕಂಪನಿಗಳು ಕಾರ್ಯನಿರ್ವಹಿಸುತ್ತಿದ್ದು, ದೇಶಾದ್ಯಂತ ಈಗಾಗಲೇ ಸಾವಿರಾರು ಸಾರ್ವಜನಿಕ ಬಳಕೆಯ ಇವಿ ಚಾರ್ಜಿಂಗ್ ನಿಲ್ದಾಣಗಳು ಗ್ರಾಹಕರ ಬಳಕೆಗೆ ಲಭ್ಯವಿವೆ.

2030ರ ವೇಳೆಗೆ ನಿರ್ಮಾಣವಾಗಬೇಕಿದೆ ಬರೋಬ್ಬರಿ 46 ಸಾವಿರ ಇವಿ ಚಾರ್ಜಿಂಗ್ ನಿಲ್ದಾಣಗಳು

ದುಬಾರಿ ಇಂಧನಗಳ ಪರಿಣಾಮ ಮುಂಬರುವ ದಿನಗಳಲ್ಲಿ ಇವಿ ವಾಹನಗಳ ಬಳಕೆ ಪ್ರಮಾಣವು ಇನ್ನಷ್ಟು ಹೆಚ್ಚಳವಾಗುವ ನೀರಿಕ್ಷೆಗಳಿದ್ದು, 2030ರ ವೇಳೆ ಶೇ.50ರಷ್ಟು ಇವಿ ವಾಹನಗಳು ರಸ್ತೆಗಿಳಿಯುವ ನೀರಿಕ್ಷೆಗಳಿವೆ. ಹೀಗಿರುವಾಗ ಅದಕ್ಕೆ ಪೂರಕವಾಗಿ ಸಾರ್ವಜನಿಕ ಬಳಕೆಯ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳ ಸಂಖ್ಯೆಯನ್ನು ಕೂಡಾ ಹೆಚ್ಚಳ ಮಾಡಬೇಕಾದ ಅವಶ್ಯಕತೆಯಿದೆ.

2030ರ ವೇಳೆಗೆ ನಿರ್ಮಾಣವಾಗಬೇಕಿದೆ ಬರೋಬ್ಬರಿ 46 ಸಾವಿರ ಇವಿ ಚಾರ್ಜಿಂಗ್ ನಿಲ್ದಾಣಗಳು

ವರದಿಗಳ ಪ್ರಕಾರ, ಎಲೆಕ್ಟ್ರಿಕ್ ವಾಹನ ಅಳವಡಿಕೆ ದರವನ್ನು ಆಧರಿಸಿ 2030ರ ವೇಳೆಗೆ ಕನಿಷ್ಠ 46 ಸಾವಿರ ಸಾರ್ವಜನಿಕ ಬಳಕೆಯ ಫಾಸ್ಟ್ ಚಾರ್ಜಿಂಗ್ ಇವಿ ಚಾರ್ಜಿಂಗ್ ನಿಲ್ದಾಣಗಳ ಅವಶ್ಯಕತೆಯಿದೆ ಎನ್ನಲಾಗಿದೆ.

2030ರ ವೇಳೆಗೆ ನಿರ್ಮಾಣವಾಗಬೇಕಿದೆ ಬರೋಬ್ಬರಿ 46 ಸಾವಿರ ಇವಿ ಚಾರ್ಜಿಂಗ್ ನಿಲ್ದಾಣಗಳು

ಎಲೆಕ್ಟ್ರಿಕ್ ವಾಹನಗಳಿಗೆ ತ್ವರಿತ ಚಾರ್ಜಿಂಗ್ ಮೂಲಸೌಕರ್ಯವನ್ನು ನಿರ್ಮಿಸದಿದ್ದರೆ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಅಭಿವೃದ್ಧಿಯ ವೇಗವು ನೀರಿಕ್ಷೆಗಿಂತಲೂ ಸಾಕಷ್ಟು ನಿಧಾನವಾಗಬಹುದೆಂಬ ಸಲಹೆ ನೀಡಿದ್ದು, ಇವಿ ಚಾರ್ಜಿಂಗ್ ನಿಲ್ದಾಣಗಳ ನಿರ್ಮಾಣವು ಇವಿ ವಾಹನಗಳ ಆದ್ಯತೆ ಹೆಚ್ಚಿಸಲಿದೆ ಎಂದಿದೆ.

2030ರ ವೇಳೆಗೆ ನಿರ್ಮಾಣವಾಗಬೇಕಿದೆ ಬರೋಬ್ಬರಿ 46 ಸಾವಿರ ಇವಿ ಚಾರ್ಜಿಂಗ್ ನಿಲ್ದಾಣಗಳು

ಭಾರತವು ಮುಂಬರುವ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಅತಿದೊಡ್ಡ ಮಾರುಕಟ್ಟೆಗಳಲ್ಲಿ ಒಂದಾಗಲಿದ್ದು, ಕಳೆದ ಕೆಲ ವರ್ಷಗಳಲ್ಲಿ ಹಲವಾರು ಸ್ಟಾರ್ಟ್ಅಪ್ ಕಂಪನಿಗಳು ಇವಿ ದ್ವಿಚಕ್ರ ವಾಹನ ವಿಭಾಗದಲ್ಲಿ ಭಾರೀ ಪ್ರಮಾಣದ ಉತ್ಪಾದನೆಯೊಂದಿಗೆ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿವೆ.

2030ರ ವೇಳೆಗೆ ನಿರ್ಮಾಣವಾಗಬೇಕಿದೆ ಬರೋಬ್ಬರಿ 46 ಸಾವಿರ ಇವಿ ಚಾರ್ಜಿಂಗ್ ನಿಲ್ದಾಣಗಳು

ಜೊತೆಗೆ ದೇಶಾದ್ಯಂತ ಇವಿ ವಾಹನಗಳ ಬಳಕೆಯು ಕಳೆದ ಎರಡು ವರ್ಷಗಳಲ್ಲಿ ಸಾಕಷ್ಟು ಸುಧಾರಿಸಿದ್ದು, ಇವಿ ದ್ವಿಚಕ್ರ ವಾಹನಗಳ ಅಳವಡಿಕೆಯು 2030ರ ಅಂತ್ಯಕ್ಕೆ ಶೇ. 78 ತಲುಪುವುದಾಗಿ ಅಧ್ಯಯನವೊಂದು ಮಹತ್ವ ಮಾಹಿತಿ ಬಹಿರಂಗಪಡಿಸಿದೆ.

2030ರ ವೇಳೆಗೆ ನಿರ್ಮಾಣವಾಗಬೇಕಿದೆ ಬರೋಬ್ಬರಿ 46 ಸಾವಿರ ಇವಿ ಚಾರ್ಜಿಂಗ್ ನಿಲ್ದಾಣಗಳು

ಹೆಚ್ಚುತ್ತಿರುವ ಇಂಧನ ದರಗಳು ಮತ್ತು ಮಾಲಿನ್ಯದ ಕಾರಣಕ್ಕೆ ಹೊಸ ವಾಹನ ಖರೀದಿದಾರರು ಪರಿಸರ ಸ್ನೇಹಿಯಾಗಿರುವ ಮತ್ತು ಕಡಿಮೆ ವೆಚ್ಚದಾಯಕವಾಗಿರುವ ಇವಿ ವಾಹನಗಳ ಬಳಕೆಗೆ ಆದ್ಯತೆ ನೀಡುತ್ತಿದ್ದು, ಚಾರ್ಜಿಂಗ್ ನಿಲ್ದಾಣಗಳು ಹೆಚ್ಚುತ್ತಿರುವಂತೆ ಇವಿ ವಾಹನ ನೋಂದಣಿ ಸಂಖ್ಯೆ ಕೂಡಾ ಸಾಕಷ್ಟು ಸುಧಾರಣೆ ಕಂಡಿದೆ.

2030ರ ವೇಳೆಗೆ ನಿರ್ಮಾಣವಾಗಬೇಕಿದೆ ಬರೋಬ್ಬರಿ 46 ಸಾವಿರ ಇವಿ ಚಾರ್ಜಿಂಗ್ ನಿಲ್ದಾಣಗಳು

ಪ್ರಸ್ತುತ ಮಾರುಕಟ್ಟೆಯಲ್ಲಿ ಇಂಧನ ಆಧರಿತ ವಾಹನಗಳ ಮಾರಾಟಕ್ಕೆ ಹೋಲಿಕೆ ಮಾಡಿದರೆ ಇವಿ ವಾಹನಗಳ ಮಾರಾಟವು ಸಾಕಷ್ಟು ಕಡಿಮೆ ಪ್ರಮಾಣದಲ್ಲಿದ್ದರೂ ಇದರ ಪ್ರಮಾಣ ಮುಂಬರುವ ದಿನಗಳಲ್ಲಿ ವೇಗವಾಗಿ ಬದಲಾಗುವ ನೀರಿಕ್ಷೆಗಳಿದ್ದು, ಅದರಲ್ಲೂ ಇವಿ ದ್ವಿಚಕ್ರ ವಾಹನಗಳು ಮುಂಬರುವ ಕೆಲವೇ ವರ್ಷಗಳಲ್ಲಿ ಭಾರೀ ಪ್ರಮಾಣದಲ್ಲಿ ಮಾರಾಟಗೊಳ್ಳಲಿವೆ.

2030ರ ವೇಳೆಗೆ ನಿರ್ಮಾಣವಾಗಬೇಕಿದೆ ಬರೋಬ್ಬರಿ 46 ಸಾವಿರ ಇವಿ ಚಾರ್ಜಿಂಗ್ ನಿಲ್ದಾಣಗಳು

ರೆಡ್ ಸೀರ್ ಎಂಬ ಸಂಸ್ಥೆಯು ಎಲೆಕ್ಟ್ರಿಕ್ ವಾಹನಗಳ ಮಾರಾಟ ಮತ್ತು ಎಲೆಕ್ಟ್ರಿಕ್ ವಾಹನಗಳ ಭವಿಷ್ಯದ ಬಳಕೆಯ ಕುರಿತು ಅಧ್ಯಯೊಂದನ್ನು ನಡೆಸಿದ್ದು, ಭವಿಷ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೇಗಿರುತ್ತದೆ? ಜನರು ಎಲೆಕ್ಟ್ರಿಕ್ ವಾಹನಗಳನ್ನು ಏಕೆ ಖರೀದಿಸುತ್ತಿದ್ದಾರೆ ಎಂಬುದರ ಕುರಿತಾದ ಆಸಕ್ತಿದಾಯಕ ಅಧ್ಯಯದ ಮೂಲಕ ಮಹತ್ವದ ಮಾಹಿತಿ ಹಂಚಿಕೊಂಡಿದೆ.

2030ರ ವೇಳೆಗೆ ನಿರ್ಮಾಣವಾಗಬೇಕಿದೆ ಬರೋಬ್ಬರಿ 46 ಸಾವಿರ ಇವಿ ಚಾರ್ಜಿಂಗ್ ನಿಲ್ದಾಣಗಳು

ಪ್ರಸ್ತುತ ಎಲೆಕ್ಟ್ರಿಕ್ ವಾಹನಗಳ ಮಾರಾಟ ದರವು ಹಾಗೆಯೇ ಮುಂದುವರಿದರೆ 2030ರಲ್ಲಿ ಶೇ.100 ರಷ್ಟು ದ್ವಿಚಕ್ರ ವಾಹನಗಳಲ್ಲಿ ಶೇ.78 ರಷ್ಟು ಇವಿ ದ್ವಿಚಕ್ರ ವಾಹನಗಳು ರಸ್ತೆಯಲ್ಲಿ ಸಂಚರಿಸಲಿವೆ ಎನ್ನಲಾಗಿದ್ದು, ಈ ಗುರಿ ಮುಟ್ಟಲು ಕೇವಲ ಗ್ರಾಹಕರಲ್ಲಿ ಉತ್ಸಾಹ ಮಾತುಗಳು ಸಾಕಾಗುವುದಿಲ್ಲ ಎನ್ನುವುದನ್ನು ಸಹ ಸ್ಪಷ್ಟವಾಗಿ ಉಲ್ಲೇಖಿಸಿದೆ.

2030ರ ವೇಳೆಗೆ ನಿರ್ಮಾಣವಾಗಬೇಕಿದೆ ಬರೋಬ್ಬರಿ 46 ಸಾವಿರ ಇವಿ ಚಾರ್ಜಿಂಗ್ ನಿಲ್ದಾಣಗಳು

ಇವಿ ವಾಹನಗಳ ಬಳಕೆಯನ್ನು ಉತ್ತೇಜಿಸಲು ಸರ್ಕಾರಗಳು ಹೆಚ್ಚಿನ ಮಟ್ಟದ ಪ್ರೊತ್ಸಾಹ ಯೋಜನೆಗಳ ಜೊತೆ ಹೆಚ್ಚಿನ ಮಟ್ಟದ ಚಾರ್ಜಿಂಗ್ ನಿಲ್ದಾಣಗಳು ಮತ್ತು ಹೆಚ್ಚಿನ ಶ್ರೇಣಿ ಹೊಂದಿರುವ ಇವಿ ಮಾದರಿಗಳು ಮಾರುಕಟ್ಟೆ ಪ್ರವೇಶಿಸುವುದು ಅವಶ್ಯವಿದೆ ಎಂದಿದೆ.

2030ರ ವೇಳೆಗೆ ನಿರ್ಮಾಣವಾಗಬೇಕಿದೆ ಬರೋಬ್ಬರಿ 46 ಸಾವಿರ ಇವಿ ಚಾರ್ಜಿಂಗ್ ನಿಲ್ದಾಣಗಳು

ಎಲೆಕ್ಟ್ರಿಕ್ ವಾಹನಗಳ ಬಳಕೆಯು ಒಬ್ಬ ಗ್ರಾಹಕನಿಂದ ಮತ್ತೊಬ್ಬ ಗ್ರಾಹಕರಿಗೆ ಸ್ಪೂರ್ತಿಯಾಗಬೇಕಾದರೆ ಇಂಧನ ಚಾಲಿತ ಮಾದರಿಗಿಂತಲೂ ಇವಿ ವಾಹನ ಬಳಕೆಯ ವೆಚ್ಚಗಳು ಕನಿಷ್ಠ ಶೇ. 20ರಿಂದ ಶೇ.30 ರಷ್ಟು ಕಡಿಮೆ ಇದ್ದಾಗ ಮಾತ್ರ ಸಾರ್ವಜನಿಕರಿಗೂ ಇದರತ್ತ ಹೆಚ್ಚಿನ ಗಮನಹರಿಸುತ್ತಾರೆ ಎನ್ನಲಾಗಿದೆ.

2030ರ ವೇಳೆಗೆ ನಿರ್ಮಾಣವಾಗಬೇಕಿದೆ ಬರೋಬ್ಬರಿ 46 ಸಾವಿರ ಇವಿ ಚಾರ್ಜಿಂಗ್ ನಿಲ್ದಾಣಗಳು

ಮಾರುಕಟ್ಟೆಯಲ್ಲಿ ಕಳೆದ ಕೆಲ ವರ್ಷಗಳಿಂದ ಖರೀದಿಗೆ ಲಭ್ಯವಿದ್ದರೂ ಕಳೆದ ಎರಡು ವರ್ಷಗಳಿಂದ ಹೆಚ್ಚಿನ ಮಟ್ಟದ ಬೇಡಿಕೆ ಹರಿದುಬರುತ್ತಿದ್ದು, ಗ್ರಾಹಕರ ಬೇಡಿಕೆಯೆಂತೆ ಹಲವಾರು ಸ್ಪಾರ್ಟ್ ಅಪ್ ಕಂಪನಿಗಳು ಸ್ಪರ್ಧಾತ್ಮಕ ಬೆಲೆಗಳಲ್ಲಿ ಇವಿ ದ್ವಿಚಕ್ರಗಳನ್ನು ಬಿಡುಗಡೆ ಮಾಡಿವೆ.

2030ರ ವೇಳೆಗೆ ನಿರ್ಮಾಣವಾಗಬೇಕಿದೆ ಬರೋಬ್ಬರಿ 46 ಸಾವಿರ ಇವಿ ಚಾರ್ಜಿಂಗ್ ನಿಲ್ದಾಣಗಳು

ಇದು ಮುಂದಿನ ಎರಡರಿಂದ ಮೂರು ವರ್ಷಗಳಲ್ಲಿ ಇನ್ನು ಉತ್ತಮ ಸ್ಥಿತಿಯತ್ತ ಬದಲಾಗುವ ನೀರಿಕ್ಷೆಯಿದ್ದು, ಇವಿ ವಾಹನಗಳಿಗೆ ಪೂರಕವಾಗಿ ಹಲವಾರು ಹೊಸ ಯೋಜನೆಗಳನ್ನು ಜಾರಿಗೆ ತರಲಾಗಿದೆ.

2030ರ ವೇಳೆಗೆ ನಿರ್ಮಾಣವಾಗಬೇಕಿದೆ ಬರೋಬ್ಬರಿ 46 ಸಾವಿರ ಇವಿ ಚಾರ್ಜಿಂಗ್ ನಿಲ್ದಾಣಗಳು

ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ದೇಶಾದ್ಯಂತ ಕೇಂದ್ರ ಸರ್ಕಾರದೊಂದಿಗೆ ವಿವಿಧ ರಾಜ್ಯ ಸರ್ಕಾರಗಳು ಸಹ ಹಲವಾರು ಹೊಸ ಯೋಜನೆಗಳನ್ನು ಜಾರಿಗೆ ತಂದಿವೆ. ಇದರಲ್ಲಿ ಕೇಂದ್ರದ ಫೇಮ್ 2 ಸಬ್ಸಡಿ ಯೋಜನೆಯು ಪ್ರಮುಖವಾಗಿದ್ದು, ಫೇಮ್ 2 ಯೋಜನೆಯೊಂದಿಗೆ ವಿವಿಧ ರಾಜ್ಯ ಸರ್ಕಾರಗಳು ಸಹ ಇವಿ ವಾಹನಗಳ ಉತ್ತೇಜನಕ್ಕೆ ವಿವಿಧ ಸಬ್ಸಡಿ ಯೋಜನೆಗಳನ್ನು ಅಳವಡಿಸಿಕೊಂಡಿವೆ.

2030ರ ವೇಳೆಗೆ ನಿರ್ಮಾಣವಾಗಬೇಕಿದೆ ಬರೋಬ್ಬರಿ 46 ಸಾವಿರ ಇವಿ ಚಾರ್ಜಿಂಗ್ ನಿಲ್ದಾಣಗಳು

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರೋತ್ಸಾಹದಿಂದಾಗಿ ಎಲೆಕ್ಟ್ರಿಕ್ ವಾಹನಗಳ ಅಳವಡಿಕೆ ನಿಧಾನವಾಗಿ ಹೆಚ್ಚಳವಾಗುತ್ತಿದ್ದು, ಸಬ್ಸಡಿ ಯೋಜನೆಗಳಿಂದಾಗಿ ಇವಿ ವಾಹನಗಳ ಬಳಕೆಗೆ ಸಾರ್ವಜನಿಕರು ಆದ್ಯತೆ ನೀಡುತ್ತಿದ್ದಾರೆ.

Most Read Articles

Kannada
English summary
Over 46000 electric vehicle charging stations needs to by 2030
Story first published: Tuesday, August 2, 2022, 8:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X