ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಖರೀದಿಸಲು ಯೋಜಿಸುತ್ತಿರುವಿರಾ? ಇವುಗಳನ್ನು ಒಮ್ಮೆ ನೋಡಿ..
ಪ್ರಮುಖ ವಾಹನ ತಯಾರಿಕ ಕಂಪನಿ ಮಾರುತಿ ಸುಜುಕಿ ಕಾರುಗಳನ್ನು ಗ್ರಾಹಕರು ಇಷ್ಟಪಡುತ್ತಾರೆ. ಪ್ರಸ್ತುತ ದೇಶೀಯ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಲು ಗ್ರಾಂಡ್ ವಿಟಾರಾ ಎಸ್‌ಯುವಿಯನ್ನು ಮಾರುಕಟ್ಟೆಯಲ್ಲಿ ಪರಿಚಯಿಸಿದೆ. ಆದರೆ, ಹ್ಯಾಚ್‌ಬ್ಯಾಕ್ ಮಾರಾಟ ವಿಭಾಗದಲ್ಲಿ ಕುಸಿತ ದಾಖಲಿಸುತ್ತಿರುವ ಕಂಪನಿಯು, ಎಸ್‌ಯುವಿ ವಿಭಾಗದಲ್ಲಿ ಲಾಭಗಳಿಸುವತ್ತ ಮುಖ ಮಾಡಿದೆ.
'ಗ್ರ್ಯಾಂಡ್ ವಿಟಾರಾ' ಮಾರುತಿ ಸುಜುಕಿಯ ಪ್ರೀಮಿಯಂ ಕೊಡುಗೆಯಾಗಿದೆ. ಇದು ಮ್ಯಾನುಯಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗಳೊಂದಿಗೆ ಪೆಟ್ರೋಲ್ ಹಾಗೂ ಹೈಬ್ರಿಡ್ ಎಂಜಿನ್ ಆಯ್ಕೆಗಳಲ್ಲಿ ಮಾತ್ರ ಲಭ್ಯವಿದೆ. CNG ಆವೃತ್ತಿಯನ್ನು ಸಹ ನಿರೀಕ್ಷಿಸಲಾಗಿದೆ. ಇದು ಟೂ-ವೀಲ್-ಡ್ರೈವ್ ಮತ್ತು ಆಲ್-ವೀಲ್-ಡ್ರೈವ್ ಕಾನ್ಫಿಗರೇಶನ್‌ಗಳಲ್ಲಿ ಖರೀದಿಗೆ ಸಿಗಲಿದ್ದು, ರೂ.10.45 ಲಕ್ಷ ಆರಂಭಿಕ ಬೆಲೆಯಿದ್ದು, ಟಾಪ್ ಎಂಡ್ ಮಾದರಿ ಬೆಲೆ ರೂ.19.45 ಲಕ್ಷ ಇದೆ. (ಎಕ್ಸ್ ಶೋರೂಂ ಪ್ರಕಾರ). ಗ್ರ್ಯಾಂಡ್ ವಿಟಾರಾವನ್ನು ಖರೀದಿಸಲು ನೀವು ಯೋಚಿಸುತ್ತಿದ್ದಾರೆ. ಈ 5 ಎಸ್‌ಯುವಿ ಆಯ್ಕೆಯನ್ನು ಪರಿಶೀಲಿಸಬಹುದು.

ಟೊಯೊಟಾ ಅರ್ಬನ್ ಕ್ರೂಸರ್ ಹೈರಿಡರ್:
ಗ್ರ್ಯಾಂಡ್ ವಿಟಾರಾವನ್ನೇ ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಹೋಲುತ್ತದೆ. ಜೊತೆಗೆ ಅದೇ ಕಾನ್ಫಿಗರೇಶನ್‌ನಲ್ಲಿ ಲಭ್ಯವಿದೆ. ವಾಸ್ತವವಾಗಿ, ಟೊಯೊಟಾ ಮತ್ತು ಮಾರುತಿ ನಡುವಿನ ಒಪ್ಪಂದದ ಪ್ರಕಾರ, ಟೊಯೊಟಾ ತನ್ನ ಉತ್ಪಾದನಾ ಘಟಕದಲ್ಲೇ ಗ್ರಾಂಡ್ ವಿಟಾರಾವನ್ನು ತಯಾರಿಸಲಾಗುತ್ತಿದೆ. ಅರ್ಬನ್ ಕ್ರೂಸರ್ ಹೈರಿಡರ್ ಎಸ್‌ಯುವಿ ಬೆಲೆ ರೂ.10.48 ರಿಂದ 18.99 ಲಕ್ಷ (ಎಕ್ಸ್ ಶೋ ರೂಂ) ಇದೆ. ಇದರ ಖರೀದಿಯೊಂದಿಗೆ ನೀವು ಟೊಯೊಟಾ ಬ್ಯಾಡ್ಜ್ ಮತ್ತು ಸೇವಾ ಭರವಸೆಯನ್ನು ಪಡೆಯಲಿದ್ದೀರಿ.
ಹುಂಡೈ ಕ್ರೆಟಾ:
ಭಾರತದಲ್ಲಿ ಅತ್ಯಂತ ಜನಪ್ರಿಯ ಎಸ್‌ಯುವಿ ಹ್ಯುಂಡೈ ಕ್ರೆಟಾ ಆಗಿದೆ. ಇದು ಗ್ರ್ಯಾಂಡ್ ವಿಟಾರಾ ಪ್ರಬಲ ಪ್ರತಿಸ್ಪರ್ಧಿ ಎಂದೇ ಹೇಳಬಹುದು. ಕ್ರೆಟಾದ ಬೆಲೆ ರೂ.10.44 ದಿಂದ ರೂ.18.24 ಲಕ್ಷ (ಎಕ್ಸ್ ಶೋ ರೂಂ) ಇದೆ. ಮಾರುಕಟ್ಟೆಯಲ್ಲಿ ಗ್ರಾಹಕರು ಇದನ್ನು ಲೈಕ್ ಮಾಡುತ್ತಾರೆ. ಇದು ಸೆಗ್ಮೆಂಟ್ ಲೀಡರ್ ಎಂದೇ ಖ್ಯಾತಿಗಳಿಸಿದೆ. ಇದಕ್ಕೆ ಕಾರಣ, ವೈಶಿಷ್ಟ್ಯಗಳು ಹಾಗೂ ಅದರ ಒಳಾಂಗಣದ ಗುಣಮಟ್ಟ. ಆದ್ದರಿಂದ ನೀವು ಹೆಚ್ಚು ಪ್ರೀಮಿಯಂ ಆಯ್ಕೆಯನ್ನು ಹುಡುಕುತ್ತಿದ್ದರೆ ಹ್ಯುಂಡೈ ಕ್ರೆಟಾವನ್ನು ಆಯ್ಕೆಯಾಗಿ ಟ್ರೈ ಮಾಡಬಹುದು.
ಕಿಯಾ ಸೆಲ್ಟೋಸ್:
ಈ ಪಟ್ಟಿಯಲ್ಲಿರುವ ಅತ್ಯಂತ ಪ್ರಮುಖ ಎಸ್‌ಯುವಿ ಕಿಯಾ ಸೆಲ್ಟೋಸ್ ಆಗಿದೆ. ಇದರ ಲುಕ್ ಅತ್ಯುತ್ತಮವಾಗಿದ್ದು, ಈ ಎಸ್‌ಯುವಿ ಬೆಲೆ ರೂ.10.49 ಲಕ್ಷದಿಂದ ರೂ.18.65 ಲಕ್ಷ (ಎಕ್ಸ್ ಶೋ ರೂಂ). ಕ್ರೆಟಾ ಮತ್ತು ಸೆಲ್ಟೋಸ್ ಎರಡು 3 ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಖರೀದಿಗೆ ಸಿಗಲಿದೆ. ಅವುಗಳೆಂದರೆ ನ್ಯಾಚುರಲ್ ಆಸ್ಪಿರೇಟೇಡ್ ಪೆಟ್ರೋಲ್, ಟರ್ಬೊ ಡೀಸೆಲ್ ಮತ್ತು ಟರ್ಬೊ ಪೆಟ್ರೋಲ್. ಅಲ್ಲದೆ, ಈ ಕಾರು ಆಲ್ ವೀಲ್ ಡ್ರೈವ್ ಆಯ್ಕೆಯನ್ನು ಹೊಂದಿದೆ.
ಎಂಜಿ ಹೆಕ್ಟರ್:
ಎಂಜಿ 2023ರ ಹೆಕ್ಟರ್ ಆವೃತ್ತಿಯನ್ನು ಜನವರಿ 5, 2023 ರಂದು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ. ಈ ಎಸ್‌ಯುವಿ 14-ಇಂಚಿನ ಪೋಟ್ರೇಟ್ ಆಧಾರಿತ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಹೊಸ ಡ್ಯಾಶ್‌ಬೋರ್ಡ್, ಏರ್-ಕಾನ್ ವೆಂಟ್‌ಗಳು, ಸ್ಕ್ವೇರ್ಡ್ ಪುಶ್- . ಸ್ಟಾರ್ಟ್, 7-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. 2023ರ ಮೊದಲ ವಾರದಲ್ಲಿ ಇವು ನೋಡಲು ಸಿಗಲಿದ್ದು, ಇದು ಅತ್ಯಂತ ಆಸಕ್ತಿದಾಯಕ ಎಸ್‌ಯುವಿಗಳಲ್ಲಿ ಒಂದಾಗಿದೆ.
ಮಹೀಂದ್ರಾ ಸ್ಕಾರ್ಪಿಯೋ-ಎನ್:
ದೇಶಿಯ ಮಾರುಕಟ್ಟೆಯಲ್ಲಿ ಮಹೀಂದ್ರಾದ ಸ್ಕಾರ್ಪಿಯೋ ಕಾರಿಗೆ ಯಾವಾಗಲೂ ಅತ್ಯುತ್ತಮ ಬೇಡಿಕೆ ಇರುತ್ತದೆ ಎಂದು ಹೇಳಬಹುದು. ಗ್ರಾಹಕರು ಸಹ ಈ ಸ್ಕಾರ್ಪಿಯೋ ಎಸ್‌ಯುವಿಗಳನ್ನು ಖರೀದಿಸಲು ಹೆಚ್ಚು ಲೈಕ್ ಮಾಡುತ್ತಾರೆ. ಜೊತೆಗೆ ಈ ಎಸ್‌ಯುವಿ ಬೆಲೆಗಳು ಸಹ ಸ್ಪರ್ಧಾತ್ಮಕವಾಗಿ ಇರುತ್ತದೆ. ಸದ್ಯ ಮಹೀಂದ್ರಾ Z8 ರೂಪಾಂತರಕ್ಕಾಗಿ ಬುಕಿಂಗ್ ಮತ್ತು ಡೆಲಿವರಿಗಳಿಗೆ ಆದ್ಯತೆ ನೀಡುತ್ತಿರುವುದರಿಂದ ಸ್ಕಾರ್ಪಿಯೋದ ಇನ್ನಿತರೆ ರೂಪಾಂತರಗಳಿಗಾಗಿ ದೀರ್ಘ ಸಮಯದವೆರೆಗೆ ಖರೀದಿದಾರರು ಕಾಯುವುದು ಅನಿವಾರ್ಯವಾಗಿದೆ.
ಮಹೀಂದ್ರಾ ಸ್ಕಾರ್ಪಿಯೊ-ಎನ್ ಲೈನ್ Z2 MT 2WD ಪೆಟ್ರೋಲ್ ರೂಪಾಂತರಕ್ಕೆ 11.99 ಲಕ್ಷ ರೂಪಾಯಿಗಳ ಆರಂಭಿಕ (ಎಕ್ಸ್ ಶೋ ರೂಂ) ಬೆಲೆ ಇದೆ. ಅಲ್ಲದೆ, ಟಾಪ್ ಎಂಡ್ Z8L AT 4WD ಡೀಸೆಲ್ ವೇರಿಯಂಟ್‌ನ ಬೆಲೆ 23.90 ಲಕ್ಷ ರೂಪಾಯಿ (ಎಕ್ಸ್ ಶೋರೂಂ ಪ್ರಕಾರ) ಇದೆ. ಈ ಮೇಲಿನವು ಭಾರತದ ಮಾರುಕಟ್ಟೆಯಲ್ಲಿ ದೊರೆಯುವ ಅತ್ಯುನ್ನತ ಎಸ್‌ಯುವಿಗಳಾಗಿದ್ದು, ವೈಶಿಷ್ಟ್ಯಗಳಿಗೆ ಅನುಗುಣವಾಗಿ ಬೆಸ್ಟ್ ಆಗಿರುವುದನ್ನು ನೀವೇ ಆರಿಸಿಕೊಳ್ಳಿ.


Click it and Unblock the Notifications








