ಅನಿರೀಕ್ಷಿತ ಟ್ವಿಸ್ಟ್! ಜನಪ್ರಿಯ ಟೊಯೊಟಾ ಕಾರೊಂದರ ಮಾರಾಟ ಸ್ಥಗಿತ: ವೆಬ್‌ಸೈಟ್‌ನಿಂದ ಕೈಬಿಟ್ಟ ಕಂಪನಿ

ಅತ್ಯಂತ ಜನಪ್ರಿಯ ಟೊಯೊಟಾ ಕಂಪನಿಯ ಕಾರೊಂದರ ಮಾರಾಟವನ್ನು ಇದ್ದಕ್ಕಿದ್ದಂತೆ ನಿಲ್ಲಿಸಲಾಗಿದೆ. ಇದರಿಂದ ಹಲವು ಭಾರತೀಯ ಗ್ರಾಹಕರು ಆಘಾತಕ್ಕೊಳಗಾಗಿದ್ದಾರೆ. ಈ ಕುರಿತ ವಿವರವಾದ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ.

ಸುಜುಕಿ ಮತ್ತು ಟೊಯೊಟಾ ಕಂಪನಿಗಳ ನಡುವಿನ ಮೈತ್ರಿಯಡಿ ಟೊಯೊಟಾ ತನ್ನ ಸ್ವಂತ ಬ್ರಾಂಡ್‌ನಲ್ಲಿ ಮಾರುತಿ ಕಾರುಗಳನ್ನು ಮಾರಾಟ ಮಾಡುತ್ತಿದೆ. ಮಾರುತಿ ಸುಜುಕಿ ಬಲೆನೊ ಈ ಮೈತ್ರಿ ಮೂಲಕ ಟೊಯೊಟಾ ಬಳಸುತ್ತಿರುವ ಮಾರುತಿ ಸುಜುಕಿಯ ಮೊದಲ ಕಾರಾಗಿದೆ.

ಟೊಯೊಟಾ ತನ್ನ ಬ್ರಾಂಡ್ ಹೆಸರಿನಲ್ಲಿ ಟೊಯೊಟಾ ಗ್ಲಾಂಝಾ ಕಾರನ್ನು ಬಿಡುಗಡೆ ಮಾಡಿತ್ತು. ಈ ಗ್ಲಾಂಝಾವನ್ನು ಜೂನ್ 2019 ರಲ್ಲಿ ಬಿಡುಗಡೆ ಮಾಡಲಾಯಿತು. ಇದರ ಬೆನ್ನಲ್ಲೇ ಮಾರುತಿ ಸುಜುಕಿ ವಿಟಾರಾ ಬ್ರೆಝಾವನ್ನು ಟೊಯೊಟಾ ಅರ್ಬನ್ ಕ್ರೂಸರ್ ಹೆಸರಿನಲ್ಲಿ ಬಿಡುಗಡೆ ಮಾಡಲಾಯಿತು. ನಂತರ ಟೊಯೊಟಾ ಅರ್ಬನ್ ಕ್ರೂಸರ್ ಕಾರನ್ನು ಸೆಪ್ಟೆಂಬರ್ 2020 ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಯಿತು.

ಈ ನಡುವೆ ಮಾರುತಿ ಸುಜುಕಿ ಬಲೆನೊವನ್ನು ನವೀಕರಿಸಿ ಹೊಸ 2022 ಮಾರುತಿ ಸುಜುಕಿ ಬಲೆನೊವನ್ನು ಈ ವರ್ಷದ ಫೆಬ್ರವರಿಯಲ್ಲಿ ಬಿಡುಗಡೆ ಮಾಡಲಾಯಿತು. ಆದ್ದರಿಂದ ಟೊಯೊಟಾ ಈ ವರ್ಷದ ಮಾರ್ಚ್‌ನಲ್ಲಿ 2022 ಗ್ಲಾಂಝಾವನ್ನು ಸಹ ಬಿಡುಗಡೆ ಮಾಡಿದೆ. ಆದರೆ ಟೊಯೊಟಾ ಅರ್ಬನ್ ಕ್ರೂಸರ್ ವಿಷಯದಲ್ಲಿ ಹಾಗಲ್ಲ.

ಮಾರುತಿ ಸುಜುಕಿ ಕಳೆದ ಜೂನ್‌ನಲ್ಲಿ 2022 ಬ್ರೆಝಾವನ್ನು ಬಿಡುಗಡೆ ಮಾಡಿತ್ತು. ಆದರೆ ಇಲ್ಲಿಯವರೆಗೆ 2022 ಟೊಯೋಟಾ ಅರ್ಬನ್ ಕ್ರೂಸರ್ ಕಾರು ಮಾರಾಟಕ್ಕೆ ಲಭ್ಯವಾಗಿಲ್ಲ. 2022 ರ ಟೊಯೋಟಾ ಅರ್ಬನ್ ಕ್ರೂಸರ್ ಶೀಘ್ರದಲ್ಲೇ ಮಾರಾಟಕ್ಕೆ ಬರಲಿದೆ ಎಂದು ಹಲವರು ನಿರೀಕ್ಷಿಸುತ್ತಿದ್ದರು. ನೀವು ಅವರಲ್ಲಿ ಒಬ್ಬರಾಗಿದ್ದರೆ, ನಿರಾಸೆಗೆ ಒಳಗಾಗಬಹುದು.

ಟೊಯೊಟಾ ಇಂಡಿಯಾ ಈಗ ತನ್ನ ಅಧಿಕೃತ ವೆಬ್‌ಸೈಟ್‌ನಿಂದ ಅರ್ಬನ್ ಕ್ರೂಸರ್ ಅನ್ನು ತೆಗೆದುಹಾಕಿದೆ. ಹಾಗಾಗಿ ಭಾರತದಲ್ಲಿ ಟೊಯೊಟಾ ಅರ್ಬನ್ ಕ್ರೂಸರ್ ಕಾರಿನ ಮಾರಾಟವನ್ನು ನಿಲ್ಲಿಸಲಾಗಿದೆ ಎಂಬ ವರದಿಗಳು ಬರುತ್ತಿವೆ. ಭಾರತೀಯ ಮಾರುಕಟ್ಟೆಯಲ್ಲಿ ಟೊಯೊಟಾ ಅರ್ಬನ್ ಕ್ರೂಸರ್ ಮಾರಾಟವು ಪ್ರತಿ ತಿಂಗಳು ಉತ್ತಮ ಮಾರಾಟ ದಾಖಲಿಸುತ್ತಿದೆ.

ಟೊಯೊಟಾ ಪ್ರತಿ ತಿಂಗಳು ಸರಾಸರಿ 2,000 ರಿಂದ 3,000 ಅರ್ಬನ್ ಕ್ರೂಸರ್ ಕಾರುಗಳನ್ನು ಮಾರಾಟ ಮಾಡುತ್ತಿತ್ತು. ಆದರೆ ಈ ವರ್ಷ ಸೆಪ್ಟೆಂಬರ್‌ನಲ್ಲಿ ಕೇವಲ 330 ಅರ್ಬನ್ ಕ್ರೂಸರ್ ಕಾರುಗಳು ಮಾರಾಟವಾಗಿವೆ. ಅಕ್ಟೋಬರ್ ತಿಂಗಳಿನಲ್ಲಿ, ಟೊಯೋಟಾ ಅರ್ಬನ್ ಕ್ರೂಸರ್ ಮಾರಾಟವು ಶೂನ್ಯಕ್ಕೆ ಇಳಿದಿತ್ತು. ಅಂದರೆ ಒಂದೇ ಒಂದು ಕಾರು ಕೂಡ ಮಾರಾಟವಾಗಿಲ್ಲ.

ಹಾಗಾಗಿ ಭಾರತದಲ್ಲಿ ಅರ್ಬನ್ ಕ್ರೂಸರ್ ಕಾರನ್ನು ಮಾರಾಟ ಮಾಡುವುದನ್ನು ಟೊಯೊಟಾ ನಿಲ್ಲಿಸಿರಬಹುದು ಎನ್ನಲಾಗಿದೆ. ಆದರೆ ಈ ಮಾರಾಟ ಸ್ಥಗಿತ ತಾತ್ಕಾಲಿಕವಾಗಿರಬಹುದು. ಟೊಯೊಟಾ ಇತ್ತೀಚೆಗೆ ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಎಂಬ ಕಾರನ್ನು ಬಿಡುಗಡೆ ಮಾಡಿದೆ. ಈ ಟೊಯೊಟಾ ಅರ್ಬನ್ ಕ್ರೂಸರ್ ವಿಭಿನ್ನವಾಗಿದೆ.

ಮೊದಲನೆಯದು ಸಬ್-4 ಮೀಟರ್ ಕಾಂಪ್ಯಾಕ್ಟ್ SUV ಆಗಿತ್ತು. ಇದೀಗ ಬಂದಿರುವುದು ಮಧ್ಯಮ ಗಾತ್ರದ SUV ವರ್ಗಕ್ಕೆ ಸೇರಿದೆ. ಆದರೆ ಈ 2 ಕಾರುಗಳ ಹೆಸರುಗಳು ಬಹುತೇಕ ಒಂದೇ ಆಗಿವೆ. ಬಹುತೇಕ ಒಂದೇ ಹೆಸರಿನ 2 ಕಾರುಗಳನ್ನು ಮಾರಾಟ ಮಾಡುವುದು ಉತ್ತಮ ಯೋಜನೆ ಅಲ್ಲ. ಹಾಗಾಗಿ ಟೊಯೊಟಾ ಅರ್ಬನ್ ಕ್ರೂಸರ್ ಕಾರಿನ ಮಾರಾಟವನ್ನು ತಾತ್ಕಾಲಿಕವಾಗಿ ನಿಲ್ಲಿಸಿರಬಹುದು.

ಬದಲಾಗಿ, ಟೊಯೊಟಾ ಬೇರೆ ಹೆಸರಿನಲ್ಲಿ ಕಾರನ್ನು ಮರುಪ್ರಾರಂಭಿಸುವ ನಿರೀಕ್ಷೆಯಿದೆ. ಟೊಯೊಟಾ ಈಗ ಭಾರತದಲ್ಲಿ ಟೈಸರ್ ಹೆಸರನ್ನು ನೋಂದಾಯಿಸಿದೆ. 2022 ರ ಮಾರುತಿ ಸುಜುಕಿ ಬ್ರೆಝಾ ಟೊಯೋಟಾದ ಮುಂಬರುವ ಕಾರಿನ ಹೆಸರನ್ನು ಇಡುವ ಸಾಧ್ಯತೆಯಿದೆ. ಶೀಘ್ರದಲ್ಲೇ ಈ ಬಗ್ಗೆ ಅಧಿಕೃತ ಮಾಹಿತಿಯನ್ನು ನಾವು ನಿರೀಕ್ಷಿಸಬಹುದು.

Most Read Articles

Kannada
Read more on ಟೊಯೊಟಾ toyota
English summary
Popular toyota car sales halt the company has been dropped from the website
Story first published: Wednesday, November 9, 2022, 18:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X