ಕಸ್ಟಮೈಸ್ ಮಾಡಿದ ನ್ಯಾನೋ ಎಲೆಕ್ಟ್ರಿಕ್ ಕಾರಿನ ವಿತರಣೆ ಪಡೆದುಕೊಂಡ ರತನ್ ಟಾಟಾ
ರತನ್ ಟಾಟಾ ಅವರು ಭಾರತದ ಖ್ಯಾತ ಉದ್ಯಮಿ ಜೊತೆಗೆ ದೇಶ ಕಂಡ ಉದಾರಿ ಉದ್ಯಮಿ ಎಂದು ಜನಪ್ರಿಯರಾಗಿದ್ದಾರೆ. ಉದ್ಯಮಿ ಎಂದರೆ ಹಣ ಕೊಳ್ಳೆ ಹೊಡೆಯವವ ಎಂಬ ಭಾವನೆ ಮೂಡಿರುವ ಈ ಸಂದರ್ಭದಲ್ಲಿ ಭಿನ್ನವಾಗಿ ಕಾಣುತ್ತಾರೆ ರತನ್ ಟಾಟಾ.

ಕೊರೊನಾ ವಿರುದ್ಧ ಹೋರಾಡಲು ಸಾವಿರಾರು ಕೋಟಿ ರೂಪಾಯಿ ದೇಣಿಗೆ ನೀಡಿದ್ದ ರತನ್ ಟಾಟಾ ದೇಶದ ವಿಷಯದಲ್ಲಿ, ಸಾಮಾಜಿಕ ಸಮಸ್ಯೆಗಳ ವಿಚಾರದಲ್ಲಿ ಯಾವಾಗಲೂ ಉದಾರಿಯ ಆಗಿರುತ್ತಾರೆ ಹೀಗಾಗಿ ಇವರು ಕೇವಲ ಉದ್ಯಮಿ ಎಂದಷ್ಟೇ ಗುರುತಿಸದೆ, ಒಬ್ಬ ಉದಾರಿ ಸಮಾಜ ಸೇವಕನಾಗಿ ದೇಶದ ಜನಮಾನಸದಲ್ಲಿ ಉಳಿದಿದ್ದಾರೆ. ಇಷ್ಟೇ ಅಲ್ಲದ ಯುವಕರ ಸ್ಟಾರ್ಟ್‌ಅಪ್‌ಗೆ ಬೆಂಬಲವಾಗಿ ನಿಂತು ಅವರ ಕನಸನ್ನು ಸಾಕಾರಗೊಳಿಸುವಲ್ಲಿ ನೆರವಾಗಿರುವ ಅಪರೂಪದ ಉದ್ಯಮಿಯಾಗಿದ್ದಾರೆ.

ರತನ್ ಟಾಟಾ ಹೂಡಿಕೆ ಮಾಡಿರುವ ಎಲೆಕ್ಟ್ರಾ ಇವಿ ಅಭಿವೃದ್ಧಿಪಡಿಸಿದ ಟಾಟಾ ನ್ಯಾನೋ ಎಲೆಕ್ಟ್ರಿಕ್ ಕಾರನ್ನು ರತನ್ ಟಾಟಾ ಅವರಿಗೆ ನೀಡಿದೆ. ಇದೇ ಎಲೆಕ್ಟ್ರಾ ಇವಿ ಸ್ಟಾರ್ಟ್ಅಪ್ ಟಾಟಾ ಮೋಟಾರ್ಸ್ ಸಂಸ್ಥೆಯ ಜನಪ್ರಿಯ ನ್ಯಾನೋ ಆಧಾರಿತ ಎಲೆಕ್ಟ್ರಿಕ್ ವಾಹನವನ್ನು ನಿರ್ಮಿಸಿದೆ.

ರತನ್ ಟಾಟಾ ಅವರಿಗಾಗಿ ನ್ಯಾನೋ ಎಲೆಕ್ಟ್ರಿಕ್ ಕಾರಿನ ವಿನ್ಯಾಸ, ಒಳಭಾಗದ ಸೇರಿದಂತೆ ಹಲವು ಮಾಡಿಫಿಕೇಶನ್ ಮಾಡಲಾಗಿದೆ. ವಿಶೇಷತೆ ಏನೆಂದರೆ, ಎಲೆಕ್ಟ್ರಾ ಇವಿ ಅಭಿವೃದ್ಧಿಪಡಿಸಿದ ಕಸ್ಟಮ್ ಬಿಲ್ಟ್ ನ್ಯಾನೋ ಎಲೆಕ್ಟ್ರಿಕ್ ವಾಹನವವನ್ನು ರತನ್ ಟಾಟಾ ಅವರೇ ತೆರಳಿ ವಿತರಣೆಯನ್ನು ಪಡೆದಿದ್ದಾರೆ.

ಎಲೆಕ್ಟ್ರಾ ಇವಿ ಹಳೆ ಇಂಧನ ವಾಹನಗಳನ್ನು ಎಲಕ್ಟ್ರಿಕ್ ಕಾರುಗಳಾಗಿ ಪರಿವರ್ತಿಸಲು ಬೇಕಾದ ಟೆಕ್ನಾಲಜಿ ಕಿಟ್ ಅಭಿೃದ್ಧಿಪಡಿಸುತ್ತಿದೆ. ಇದೆ ಟೆಕ್ನಾಲಜಿಯಲ್ಲಿ ಎಲೆಕ್ಟ್ರಾ ಇವಿ ಟಾಟಾ ನ್ಯಾನೋ ಕಾರನ್ನು ಅಭಿವೃದ್ಧಿಪಡಿಸಿದೆ.

ರತನ್ ಟಾಟಾಗೆ ನೀಡಲಾಗಿರುವ ಮಾಡಿಫಿಕೇಶನ್ ಟಾಟಾ ನ್ಯಾನೋ ಎಲೆಕ್ಟ್ರಿಕ್ ಕಾರು ಒಂದು ಬಾರಿ ಪೂರ್ತಿಯಾಗಿ ಚಾರ್ಜ್ ಮಾಡಿದರೆ 160 ಕಿ.ಮೀವರೆಗೆ ಚಲಿಸಲಿದೆ.

ಕಸ್ಟಮೈಸ್ ಮಾಡಿದ ನ್ಯಾನೋ ಎಲೆಕ್ಟ್ರಿಕ್ ಕಾರು 10 ಸೆಕೆಂಡ್‌ಗಳಿಗಿಂತ ಕಡಿಮೆ ಅವಧಿಯಲ್ಲಿ 0-60 ಕಿಮೀ ವರೆಗೆ ವೇಗವನ್ನು ಪಡೆದುಕೊಳ್ಳುತ್ತದೆ. ಮತ್ತೆ ಟಾಟಾ ನ್ಯಾನೋ ಎಲೆಕ್ಟ್ರಿಕ್ ಕಾರ್ ಆಗಿ ಬಂದರೆ, ಪರಿಸರಕ್ಕೆ ಹಾನಿಯಾಗದಂತೆ ಇದು ಪರಿಪೂರ್ಣ ಸಿಟಿ ಕಾರ್ ಎಂದು ಸಾಬೀತುಪಡಿಸುತ್ತದೆ ಎಂದು ನಾವು ಊಹಿಸುತ್ತೇವೆ.

ಎಲೆಕ್ಟ್ರಾ ಇವಿ ಕಸ್ಟಮ್-ನಿರ್ಮಿತ ನ್ಯಾನೋ ಇವಿಗಾಗಿ 72V ಆರ್ಕಿಟೆಕ್ಚರ್ ಅನ್ನು ಬಳಸಿದೆ. ಈ ಆರ್ಟಿಟೆಕ್ನಚರ್ ಎಲೆಕ್ಟ್ರಾ ಇವಿ ಟಿಗೊರ್ ಇವಿ (ಟ್ಯಾಕ್ಸಿ ಆವೃತ್ತಿ) ಯಿಂದ 140 ಕಿಮೀ ರೇಂಜ್ ಅನ್ನು ವಿಸ್ತರಿಸಲು ಮತ್ತು ಡ್ರೈವಿಂಗ್ ರೇಂಜ್ ಅನ್ನು ಹೆಚ್ಚಿಸಲು ವಿನ್ಯಾಸವನ್ನು ಮಾರ್ಪಡಿಸಲು ಸಹಾಯ ಮಾಡಿತು. Tigor ನ Xpress T EV ಆವೃತ್ತಿಯ ರೇಂಜ್ ಪವರ್‌ಟ್ರೇನ್‌ಗೆ ಯಾವುದೇ ಬದಲಾವಣೆಗಳನ್ನು ಮಾಡದೆಯೇ 213 ಕಿಮೀಗಳಿಗೆ ಹೆಚ್ಚಿಸಲಾಗಿದೆ.

ಕಾರು ವಿತರಣೆ ಪಡೆಯುವ ಚಿತ್ರಗಳಲ್ಲಿ ಕಂಡುಬರುವ ಟಾಟಾ ನ್ಯಾನೋ ಇವಿ ನಿಖರವಾಗಿ ಪೆಟ್ರೋಲ್ ಚಾಲಿತ ನ್ಯಾನೋದಂತೆ ಕಾಣುತ್ತದೆ. ಇದು ಇನ್ನೂ ನಾಲ್ಕು ಡೋರುಗಳು, ನಾಲ್ಕೂ ಸೀಟುಗಳ ಸಣ್ಣ ಹ್ಯಾಚ್‌ಬ್ಯಾಕ್ ಆಗಿದೆ. ಕಾರು ಈಗ ಸೂಪರ್ ಪಾಲಿಮರ್ ಲಿಥಿಯಂ-ಐಯಾನ್ ಬ್ಯಾಟರಿಗಳಿಂದ ಚಾಲಿತವಾಗಿದೆ.

ಎಲೆಕ್ಟ್ರಾ ಇವಿ ಬೆಂಗಳೂರು ಮೂಲದ ಸ್ಟಾರ್ಟ್ಅಪ್ ದೇಶದಲ್ಲಿ ಎಲಕ್ಟ್ರಿಕ್ ವಾಹನ ಟೆಕ್ನಾಲಜಿ, ಬ್ಯಾಟರಿ ಮ್ಯಾನೇಜ್ಮೆಂಟ್ ಸಿಸ್ಟಮ್, ಪವರ್‌ಟ್ರೈನ್ ಅಭಿವೃದ್ಧಿ ಸೇರಿದಂತೆ ಇವಿ ಕ್ಷೇತ್ರದಲ್ಲಿ ತೂಡಗಿಸಿಕೊಂಡಿದೆ.

ಅತಿ ಕಡಿಮೆ ಬೆಲೆ, ಸಣ್ಣ ಕಾರು ಎಂಬ ಹೆಗ್ಗಳಿಕೆಯೊಂದಿಗೆ ಭಾರತದ ಮಾರುಕಟ್ಟೆಗೆ ಬಿಡುಗಡೆಗೊಂಡ ಟಾಟಾ ನ್ಯಾನೋ ಇದೀಗ ಎಲೆಕ್ಟ್ರಿಕ್ ರೂಪದಲ್ಲಿ ನೀಡಿರುವುದು ವಿಶೇಷ.

ಇನ್ನು ಟಾಟಾ ನ್ಯಾನೋ ಕಾರು ರತನ್ ಟಾಟಾ ಅವರ ಕನಸಿನ ಕಾರಾಗಿತ್ತು. ದೇಶದ ಪ್ರತಿಯೊಬ್ಬರಿಗೆ ಕೈಗೆಟುಕುವ ದರಲ್ಲಿ ಕಾರು ಲಭ್ಯವಾಗಬೇಕು ಎಂದು ನಾನ್ಯೋ ಕಾರನ್ನು ಬಿಡುಗಡೆ ಮಾಡಲಾಯಿತು.

ಇದು ವಿಶ್ವದ ಅತೀ ಕಡಿಮೆ ಬೆಲೆಯ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರೆ ನ್ಯಾನೋ ಕಾರು ಭಾರತದಲ್ಲಿ ನಿರೀಕ್ಷಿಯ ಯಶಸ್ಸು ಕಂಡಿಲ್ಲ. ಸಣ್ಣ ಕಾರನ್ನು ಖರೀದಿಸಲು ಭಾರತೀಯರು ಹೆಚ್ಚಿನ ಆಸಕ್ತಿ ತೋರಲಿಲ್ಲ.

ಅಚ್ಚರಿಯೆಂದರೆ, ಟಾಟಾ ನ್ಯಾನೋವನ್ನು ಎಲೆಕ್ಟ್ರಿಕ್ ವಾಹನವನ್ನಾಗಿ ಪರಿವರ್ತಿಸಿದ್ದು ಇದೇ ಮೊದಲಲ್ಲ. ಒಂದೆರಡು ವರ್ಷಗಳ ಹಿಂದೆ, ಇತ್ತೀಚೆಗೆ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದ ಓಲಾ ಟಾಟಾ ನ್ಯಾನೋದ ಬ್ಯಾಟರಿ ಚಾಲಿತ ಆವೃತ್ತಿಯನ್ನು ಅಭಿವೃದ್ಧಿಪಡಿಸಿತ್ತು.

ಕೊಯಮತ್ತೂರು ಮೂಲದ ಜಯಮ್ ಆಟೋಮೋಟಿವ್ಸ್‌ಗೆ ಸಂಬಂಧಿಸಿದ ಸೀಮಿತ ಸಂಖ್ಯೆಯ ಎಲೆಕ್ಟ್ರಿಕ್ ನ್ಯಾನೊಗಳನ್ನು ನಿರ್ಮಿಸಲಾಗಿದೆ. ದುರದೃಷ್ಟವಶಾತ್, ಯೋಜನೆಯು ಎಂದಿಗೂ ಉತ್ಪಾದನೆಗೆ ದಾರಿ ಮಾಡಲಿಲ್ಲ. ಎಲೆಕ್ಟ್ರಾದಿಂದ ನ್ಯಾನೋ ಇವಿ ವಾಸ್ತವವಾಗಿ ನಗರದೊಳಗೆ ತಮ್ಮ ಡ್ರೈವ್‌ಗಳಿಗಾಗಿ ಸಣ್ಣ ಎಲೆಕ್ಟ್ರಿಕ್ ಕಾರನ್ನು ಬಯಸುವವರಿಗೆ ಉತ್ತಮ ಆಯ್ಕೆಯಾಗಿದೆ.

ಬೆಲೆ ಮತ್ತು ಅದು ಉತ್ಪಾದನೆಗೆ ದಾರಿ ಮಾಡಿಕೊಡುತ್ತದೆಯೇ ಅಥವಾ ಇಲ್ಲವೇ ಎಂಬಂತಹ ಮಾಹಿತಿಯು ಪ್ರಸ್ತುತ ಲಭ್ಯವಿಲ್ಲ. ಇನ್ನು ಭಾರತೀಯ ಎಲೆಕ್ಟ್ರಿಕ್ ಕಾರುಗಳ ವಿಭಾಗದಲ್ಲಿ ಟಾಟಾ ಮೋಟಾರ್ಸ್ ಪಾರುಪತ್ಯವನ್ನು ಸಾಧಿಸಿದೆ. ಟಾಟಾ ಎಲೆಕ್ಟ್ರಿಕ್ ಕಾರುಗಳು ಉತ್ತಮವಾಗಿ ಮಾರಾಟವಾಗುತ್ತಿದೆ.


Click it and Unblock the Notifications