ಒಂದೇ ದಿನದಲ್ಲಿ ಬರೋಬ್ಬರಿ 125 ಸ್ಲಾವಿಯಾ ಕಾರುಗಳನ್ನು ವಿತರಣೆ ಮಾಡಿದ ಸ್ಕೋಡಾ ಡೀಲರ್

ಸ್ಕೋಡಾ ಕಂಪನಿಯು ತನ್ನ ಹೊಸ ಸ್ಲಾವಿಯಾ ಸೆಡಾನ್ ಮಾದರಿಯ ಮೂಲಕ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಹೊಸ ಕಾರು ಮಾದರಿಗಾಗಿ ಇದುವರೆಗೆ ಸುಮಾರು 15 ಸಾವಿರಕ್ಕೂ ಹೆಚ್ಚು ಗ್ರಾಹಕರಿಂದ ದಾಖಲಾಗಿದೆ.

ಒಂದೇ ದಿನಗಳಲ್ಲಿ ಬರೋಬ್ಬರಿ 125 ಸ್ಲಾವಿಯಾ ಕಾರುಗಳನ್ನು ವಿತರಣೆ ಮಾಡಿದ ಸ್ಕೋಡಾ ಡೀಲರ್

ಗ್ರಾಹಕರ ಬುಕಿಂಗ್ ಆಧರಿಸಿ ಈಗಾಗಲೇ ವಿತರಣೆ ಆರಂಭಿಸಿರುವ ಸ್ಕೋಡಾ ಕಂಪನಿಯು ಇದುವರೆಗೆ 5 ಸಾವಿರಕ್ಕೂ ಹೆಚ್ಚು ಯುನಿಟ್‌ಗಳನ್ನು ವಿತರಣೆ ಮಾಡಿದ್ದು, ಉತ್ಪಾದನಾ ಪ್ರಮಾಣ ಆಧರಿಸಿ ವಿತರಣೆ ಪ್ರಕ್ರಿಯೆಯನ್ನು ಹೆಚ್ಚಿಸಲಾಗುತ್ತಿದೆ. ಇದೇ ವೇಳೆ ಸ್ಕೋಡಾ ಡೀಲರ್ ಒಬ್ಬರು ಒಂದೇ ದಿನದಲ್ಲಿ ಬರೋಬ್ಬರಿ 125 ಯುನಿಟ್‌ಗಳನ್ನು ವಿತರಣೆ ಮಾಡುವ ಹೊಸ ಸಂಚಲನ ಮೂಡಿಸಿದ್ದು, ಹೊಸ ಸೆಡಾನ್ ಕಾರು ಪ್ರತಿಸ್ಪರ್ಧಿ ಮಾದರಿಗಳಿಗೆ ಭರ್ಜರಿ ನೀಡುವ ಮೂಲಕ ಗ್ರಾಹಕರನ್ನು ಸೆಳೆಯುತ್ತಿದೆ.

ಒಂದೇ ದಿನಗಳಲ್ಲಿ ಬರೋಬ್ಬರಿ 125 ಸ್ಲಾವಿಯಾ ಕಾರುಗಳನ್ನು ವಿತರಣೆ ಮಾಡಿದ ಸ್ಕೋಡಾ ಡೀಲರ್

ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಎಸ್‌ಜಿಎ ಕಾರ್ಸ್ ಮಾರಾಟ ಮಳಿಗೆಯಲ್ಲಿ ಒಂದೇ ದಿನದಲ್ಲಿ ಅತಿ ಹೆಚ್ಚು ಕಾರುಗಳನ್ನು ವಿತರಣೆ ಮಾಡಿದ್ದು, ಹೊಸ ಕಾರು ಮಾದರಿಯು ಸೆಡಾನ್ ಕಾರುಗಳ ವಿಭಾಗದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದೆ.

ಒಂದೇ ದಿನಗಳಲ್ಲಿ ಬರೋಬ್ಬರಿ 125 ಸ್ಲಾವಿಯಾ ಕಾರುಗಳನ್ನು ವಿತರಣೆ ಮಾಡಿದ ಸ್ಕೋಡಾ ಡೀಲರ್

ಭಾರತದಲ್ಲಿ ರ‍್ಯಾಪಿಡ್ ಸೆಡಾನ್ ಬದಲಾಗಿ ಸ್ಲಾವಿಯಾ ಮಾದರಿಯನ್ನು ಹೊಸ ತಂತ್ರಜ್ಞಾನ ಪ್ರೇರಣೆಯೊಂದಿಗೆ ಬಿಡುಗಡೆ ಮಾಡಿರುವ ಸ್ಕೋಡಾ ಕಂಪನಿಯು ಹೊಸ ಕಾರಿನ ಮೂಲಕ ಮಾರಾಟ ಪ್ರಮಾಣ ಸುಧಾಸಿದ್ದು, ಹೊಸ ಕಾರನ್ನು ಸ್ಕೋಡಾ ಕಂಪನಿಯು ಫೋಕ್ಸ್‌ವ್ಯಾಗನ್ ಜೊತೆಗೂಡಿ ಇಂಡಿಯಾ 2.0 ಪ್ರೊಜೆಕ್ಟ್ ಯೋಜನೆ ಅಡಿ ಬಿಡುಗಡೆ ಮಾಡಿದೆ.

ಒಂದೇ ದಿನಗಳಲ್ಲಿ ಬರೋಬ್ಬರಿ 125 ಸ್ಲಾವಿಯಾ ಕಾರುಗಳನ್ನು ವಿತರಣೆ ಮಾಡಿದ ಸ್ಕೋಡಾ ಡೀಲರ್

ಇಂಡಿಯಾ 2.0 ಪ್ರೊಜೆಕ್ಟ್ ಯೋಜನೆ ಅಡಿಯಲ್ಲಿ ಸ್ಕೋಡಾ ಮತ್ತು ಫೋಕ್ಸ್‌ವ್ಯಾಗನ್ ಕಂಪನಿಗಳು ಒಟ್ಟು ನಾಲ್ಕು ಕಾರುಗಳನ್ನು ಬಿಡುಗಡೆ ಮಾಡಲಾಗಿದ್ದು, ಕುಶಾಕ್, ಟೈಗನ್, ಸ್ಲಾವಿಯಾ ಮತ್ತು ವರ್ಟಸ್ ಕಾರುಗಳು ವಿಭಿನ್ನವಾದ ಸೆಗ್ಮೆಂಟ್‌ಗಳಲ್ಲಿ ಬಿಡುಗಡೆಯಾದರೂ ಈ ನಾಲ್ಕು ಕಾರುಗಳಲ್ಲೂ ಒಂದೇ ಮಾದರಿಯ ಎಂಜಿನ್ ಆಯ್ಕೆ ಹೊಂದಿವೆ.

ಒಂದೇ ದಿನಗಳಲ್ಲಿ ಬರೋಬ್ಬರಿ 125 ಸ್ಲಾವಿಯಾ ಕಾರುಗಳನ್ನು ವಿತರಣೆ ಮಾಡಿದ ಸ್ಕೋಡಾ ಡೀಲರ್

ಇದರರಲ್ಲಿ ಸ್ಲಾವಿಯಾ ಹೊಸ ಕಾರು ಪ್ರತಿಸ್ಪರ್ಧಿ ಮಾದರಿಗಳಿಂತಲೂ ಹೆಚ್ಚಿನ ಮಟ್ಟದ ಪ್ರೀಮಿಯಂ ಫೀಚರ್ಸ್ ಜೊತೆಗೆ ಗರಿಷ್ಠ ಸುರಕ್ಷಾ ಸೌಲಭ್ಯಗಳನ್ನು ಪಡೆದುಕೊಂಡಿದ್ದು, ಸ್ಲಾವಿಯಾ ಸೆಡಾನ್ ಕಾರು ಪ್ರಸ್ತುತ ಮಾರುಕಟ್ಟೆಯಲ್ಲಿನ ಹೋಂಡಾ ಸಿಟಿ, ಮಾರುತಿ ಸುಜುಕಿ ಸಿಯಾಜ್, ಹ್ಯುಂಡೈ ವೆರ್ನಾ ಕಾರುಗಳಿಗೆ ಉತ್ತಮ ಪೈಪೋಟಿ ನೀಡುತ್ತಿದೆ.

ಒಂದೇ ದಿನಗಳಲ್ಲಿ ಬರೋಬ್ಬರಿ 125 ಸ್ಲಾವಿಯಾ ಕಾರುಗಳನ್ನು ವಿತರಣೆ ಮಾಡಿದ ಸ್ಕೋಡಾ ಡೀಲರ್

ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೊಸ ಕಾರಿನಲ್ಲಿ 1.0-ಲೀಟರ್ ಟಿಎಸ್ಐ ಮತ್ತು 1.5 ಲೀಟರ್ ಟರ್ಬೊ ಪೆಟ್ರೋಲ್ ಮಾದರಿಗಳನ್ನು ಅಭಿವೃದ್ದಿಗೊಳಿಸಲಾಗಿದ್ದು, ಆಕ್ಟಿವಾ, ಆ್ಯಂಬಿಷನ್ ಮತ್ತು ಸ್ಟೈಲ್ ವೆರಿಯೆಂಟ್‌ಗಳೊಂದಿಗೆ ಖರೀದಿಗೆ ಲಭ್ಯವಿದೆ.

ಒಂದೇ ದಿನಗಳಲ್ಲಿ ಬರೋಬ್ಬರಿ 125 ಸ್ಲಾವಿಯಾ ಕಾರುಗಳನ್ನು ವಿತರಣೆ ಮಾಡಿದ ಸ್ಕೋಡಾ ಡೀಲರ್

ಸ್ಲಾವಿಯಾ ಹೊಸ ಕಾರಿನಲ್ಲಿ 1.0 ಲೀಟರ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 10.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 15.79 ಲಕ್ಷ ಬೆಲೆ ಹೊಂದಿದ್ದರೆ 1.5 ಲೀಟರ್ ಮಾದರಿಯು ಆರಂಭಿಕವಾಗಿ ರೂ. 16.79 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 18.39 ಲಕ್ಷ ಬೆಲೆ ಹೊಂದಿದೆ.

ಒಂದೇ ದಿನಗಳಲ್ಲಿ ಬರೋಬ್ಬರಿ 125 ಸ್ಲಾವಿಯಾ ಕಾರುಗಳನ್ನು ವಿತರಣೆ ಮಾಡಿದ ಸ್ಕೋಡಾ ಡೀಲರ್

1.0 ಲೀಟರ್ ಮಾದರಿಯು ಆಕ್ಟಿವಾ, ಆ್ಯಂಬಿಷನ್ ಮತ್ತು ಸ್ಟೈಲ್ ವೆರಿಯೆಂಟ್‌‌ಗಳಲ್ಲಿ ಖರೀದಿಗೆ ಲಭ್ಯವಿದ್ದರೆ 1.5 ಲೀಟರ್ ಮಾದರಿಯು ಕೇವಲ ಸ್ಟೈಲ್ ವೆರಿಯೆಂಟ್‌ನಲ್ಲಿ ಖರೀದಿಗೆ ಲಭ್ಯವಿದ್ದು, 1.5 ಲೀಟರ್ ಮಾದರಿಯು 1.0 ಲೀಟರ್ ಮಾದರಿಗಿಂತಲೂ ಹೆಚ್ಚಿನ ಮಟ್ಟದ ಪ್ರೀಮಿಯಂ ಫೀಚರ್ಸ್ ಹೊಂದಿದೆ.

ಒಂದೇ ದಿನಗಳಲ್ಲಿ ಬರೋಬ್ಬರಿ 125 ಸ್ಲಾವಿಯಾ ಕಾರುಗಳನ್ನು ವಿತರಣೆ ಮಾಡಿದ ಸ್ಕೋಡಾ ಡೀಲರ್

ಹೊಸ ಕಾರಿನಲ್ಲಿ 1.0 ಲೀಟರ್ ಮಾದರಿಯು ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್‌ನೊಂದಿಗೆ 6 ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 6 ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಿದ್ದು, 115 ಬಿಹೆಚ್‍ಪಿ ಪವರ್ ಮತ್ತು 178 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಒಂದೇ ದಿನಗಳಲ್ಲಿ ಬರೋಬ್ಬರಿ 125 ಸ್ಲಾವಿಯಾ ಕಾರುಗಳನ್ನು ವಿತರಣೆ ಮಾಡಿದ ಸ್ಕೋಡಾ ಡೀಲರ್

1.5 ಲೀಟರ್ ಮಾದರಿಯು ನಾಲ್ಕು ಸಿಲಿಂಡರ್ ಎಂಜಿನ್‌ನೊಂದಿಗೆ 6 ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 7 ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದ್ದು, 150 ಬಿಹೆಚ್‍ಪಿ ಪವರ್ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಒಂದೇ ದಿನಗಳಲ್ಲಿ ಬರೋಬ್ಬರಿ 125 ಸ್ಲಾವಿಯಾ ಕಾರುಗಳನ್ನು ವಿತರಣೆ ಮಾಡಿದ ಸ್ಕೋಡಾ ಡೀಲರ್

ಹೊಸ ಕಾರು ಟೊರ್ನಾಟ್ ರೆಡ್, ಕ್ರಿಸ್ಟಲ್ ಬ್ಲ್ಯೂ, ಕ್ಯಾಂಡಿ ವೈಟ್, ರೆಫ್ಲೆಕ್ಸರ್ ಸಿಲ್ವರ್ ಮತ್ತು ಕಾರ್ಬನ್ ಸ್ಟೀಲ್ ಬಣ್ಣದಲ್ಲಿ ಖರೀದಿಗೆ ಲಭ್ಯವಿರಲಿದ್ದು, ಸಿಗ್ನಿಚೆರ್ ಬಟರ್‌ಪ್ಲೈ ಗ್ರಿಲ್, ಸ್ಲಿಕ್ ಹೆಡ್‌ಲ್ಯಾಂಪ್, ಎಲ್ ಆಕಾರದಲ್ಲಿರುವ ಡೇ ಟೈಮ್ ರನ್ನಿಂಗ್ ಲ್ಯಾಂಪ್ ಸ್ಟ್ರೀಪ್, ಸ್ಪೋರ್ಟಿ ಫ್ರಂಟ್ ಬಂಪರ್, ಫಾಗ್ ಲ್ಯಾಂಪ್ ಹೌಸ್, ಎಲ್ಇಡಿ ಟೈಲ್ ಲೈಟ್ಸ್‌ನೊಂದಿಗೆ ಒಳಾಂಗಣವು ಕೂಡಾ ಸಾಕಷ್ಟು ಸುಧಾರಿತ ತಂತ್ರಜ್ಞಾನ ಪ್ರೇರಣೆ ಹೊಂದಿದೆ.

ಒಂದೇ ದಿನಗಳಲ್ಲಿ ಬರೋಬ್ಬರಿ 125 ಸ್ಲಾವಿಯಾ ಕಾರುಗಳನ್ನು ವಿತರಣೆ ಮಾಡಿದ ಸ್ಕೋಡಾ ಡೀಲರ್

ಹೊಸ ಕಾರಿನ ಒಳಾಂಗಣ ಸೌಲಭ್ಯವು ಆಕ್ಟಿವಿಯಾ ಸೆಡಾನ್ ಮಾದರಿಯನ್ನು ನೆನಪಿಸಲಿದ್ದು, 8 ಇಂಚಿನ ಇನ್ಪೋಟೈನ್‌ಮೆಂಟ್, 8 ಇಂಚಿನ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಮೈ ಸ್ಕೋಡಾ ಕಾರ್ ಕನೆಕ್ಟೆಡ್ ನೊಂದಿಗೆ ವೆಂಟಿಲೆಟೆಡ್ ಲೆದರ್ ಆಸನಗಳು, ಎಲೆಕ್ಟ್ರಿಕ್ ಸನ್‌ರೂಫ್, ವೈರ್‌ಲೆಸ್ ಚಾರ್ಜರ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಕೀ ಲೆಸ್ ಎಂಟ್ರಿ, ಆಟೋ ಡಿಮ್ಮಿಂಗ್ ಹೊಂದಿರುವ ರಿಯರ್ ವ್ಯೂ ಮಿರರ್ ಸೇರಿದಂತೆ ಪ್ರಮುಖ ಪ್ರೀಮಿಯಂ ಫೀಚರ್ಸ್ ಹೊಂದಿದೆ.

ಒಂದೇ ದಿನಗಳಲ್ಲಿ ಬರೋಬ್ಬರಿ 125 ಸ್ಲಾವಿಯಾ ಕಾರುಗಳನ್ನು ವಿತರಣೆ ಮಾಡಿದ ಸ್ಕೋಡಾ ಡೀಲರ್

ಹಾಗೆಯೇ ಹೊಸ ಕಾರಿನಲ್ಲಿ ಸುರಕ್ಷತೆಗಾಗಿ ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್ ನೀಡಲಾಗಿದ್ದು, ಸ್ಲಾವಿಯಾ ಹೈ ಎಂಡ್ ಮಾದರಿಯಲ್ಲಿ ಹೆಚ್ಚಿನ ಸಂಖ್ಯೆಯ ಸುರಕ್ಷಾ ಫೀಚರ್ಸ್ ಅಳವಡಿಸಲಾಗಿದೆ.

ಒಂದೇ ದಿನಗಳಲ್ಲಿ ಬರೋಬ್ಬರಿ 125 ಸ್ಲಾವಿಯಾ ಕಾರುಗಳನ್ನು ವಿತರಣೆ ಮಾಡಿದ ಸ್ಕೋಡಾ ಡೀಲರ್

ಟಾಪ್ ಎಂಡ್ ಮಾದರಿಯಲ್ಲಿ ಆರು ಏರ್‌ಬ್ಯಾಗ್‌ಗಳನ್ನು ಒಳಗೊಂಡು ಇಎಸ್‌ಸಿ, ಇಡಿಎಸ್, ಟೈರ್ ಪ್ರೆಷರ್ ಮಾನಿಟರ್, ಹಿಲ್ ಹೋಲ್ಡ್ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ, ಆ್ಯಂಟಿ ಥೇಪ್ಟ್ ಅಲಾರಾಂ, ರಿಯರ್ ಪಾರ್ಕಿಂಗ್ ಕ್ಯಾಮೆರಾ, ಮಲ್ಟಿ ಕೂಲಿಷನ್ ಬ್ರೇಕ್, ಐಸೋಫಿಕ್ಸ್ ಚೈಲ್ಡ್ ಸೀಟ್ ಮೌಂಟ್ಸ್, ರೈನ್ ಸೆನ್ಸಿಂಗ್ ವೈಪ್ಸ್ ಸೇರಿದಂತೆ ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್ ನೀಡಲಾಗಿದೆ.

ಒಂದೇ ದಿನಗಳಲ್ಲಿ ಬರೋಬ್ಬರಿ 125 ಸ್ಲಾವಿಯಾ ಕಾರುಗಳನ್ನು ವಿತರಣೆ ಮಾಡಿದ ಸ್ಕೋಡಾ ಡೀಲರ್

ಹೊಸ ಕಾರು 4,541 ಎಂಎಂ ಉದ್ದ, 1,752 ಅಗಲ ಮತ್ತು 1,487 ಎಂಎಂ ಎತ್ತರ ಮತ್ತು 2,651 ಎಂಎಂ ವ್ಹೀಲ್‌ಬೇಸ್‌ನೊಂದಿಗೆ 560 ಲೀಟರ್ ನಷ್ಟು ಬೂಟ್‌‌ಸ್ಪೆಸ್ ಹೊಂದಿದ್ದು, ಪ್ರತಿಸ್ಪರ್ಧಿ ಮಾದರಿಗಿಂತಲೂ ಬೂಟ್‌ಸ್ಪೆಸ್ ಮತ್ತು ಎರಡನೇ ಸಾಲಿನಲ್ಲಿ ಹೆಚ್ಚಿನ ಸ್ಥಳಾವಕಾಶ ಹೊಂದಿದೆ.

Most Read Articles

Kannada
Read more on ಸ್ಕೋಡಾ skoda
English summary
Sga skoda dealer delivered 125 units of slavia sedan in one day
Story first published: Thursday, June 23, 2022, 10:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X