ಜೂನ್ ತಿಂಗಳ ಕಾರು ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಸ್ಕೋಡಾ

ಸ್ಕೋಡಾ ಕುಶಾಕ್ ಮತ್ತು ಸ್ಕೋಡಾ ಸ್ಲಾವಿಯಾ ಬಿಡುಗಡೆಯೊಂದಿಗೆ, ಸ್ಕೋಡಾ ಕಂಪನಿಯ ಕಾರು ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆಯನ್ನು ಸಾಧಿಸಿದೆ. ಇದಲ್ಲದೆ, ಸ್ಕೋಡಾ ಕುಶಾಕ್ ಫೋಕ್ಸ್‌ವ್ಯಾಗನ್ ಗ್ರೂಪ್‌ನ ಅಡಿಯಲ್ಲಿ ಭಾರತ 2.0 ವ್ಯಾಪಾರ ತಂತ್ರದೊಂದಿಗೆ ಭಾರತದಲ್ಲಿ ತಯಾರಿಸಲಾದ ಮೊದಲ ವಾಹನವಾಗಿದೆ.

ಜೂನ್ ತಿಂಗಳ ಕಾರು ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಸ್ಕೋಡಾ

ಉತ್ಪಾದನಾ ವೆಚ್ಚವನ್ನು ಕಡಿತಗೊಳಿಸಲು ಮತ್ತು ವಾಹನ ತಯಾರಕರಿಗೆ ಲಾಭವನ್ನು ಹೆಚ್ಚಿಸಲು 95 ಪ್ರತಿಶತದಷ್ಟು ವಾಹನವನ್ನು ಸ್ಥಳೀಯವಾಗಿ ತಯಾರಿಸಲಾಗುತ್ತದೆ. ಈ ಮೊದಲೇ ಹೇಳಿದಂತೆ, ಸ್ಕೋಡಾ ಕುಶಾಕ್ ಮತ್ತು ಸ್ಕೋಡಾ ಸ್ಲಾವಿಯಾ ಬಿಡುಗಡೆಯು ಭಾರತೀಯ ಮಾರುಕಟ್ಟೆಯಲ್ಲಿ ಸ್ಕೋಡಾ ಕಂಪನಿಗೆ ಕಾರು ಮಾರಾಟದಲ್ಲಿ ಹೆಚ್ಚಿನ ಕೊಡುಗೆಯನ್ನು ನೀಡುತ್ತಿದೆ. ಸ್ಕೋಡಾ ಇಂಡಿಯಾದ ಮಾರಾಟದ ಅಂಕಿಅಂಶಗಳು ಹಲವು ಪಟ್ಟು ಹೆಚ್ಚಾಗಿದೆ. ಇದರಲ್ಲಿ ಹೊಸ ಮಾದರಿಯ ಕೊಡುಗೆ ಹೆಚ್ಚಿದೆ.

ಜೂನ್ ತಿಂಗಳ ಕಾರು ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಸ್ಕೋಡಾ

2022ರ ಜೂನ್ ತಿಂಗಳಿನಲ್ಲಿ ಸ್ಕೋಡಾ ತನ್ನ ಒಟ್ಟು 6,023 ಯುನಿಟ್ ಕಾರುಗಳನ್ನು ಭಾರತದಲ್ಲಿ ಮಾರಾಟ ಮಾಡಿತು. 2021ರ ಜೂನ್ ತಿಂಗಳಿನಲ್ಲಿ ಸ್ಕೋಡಾ ಕಂಪನಿಯು ಕೇವಲ 734 ಯುನಿಟ್‌ಗಳನ್ನು ಮಾತ್ರ ಮಾರಾಟ ಮಾಡಲು ಸಾಧ್ಯವಾಗಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ವರ್ಷದಿಂದ ವರ್ಷದ ಮಾರಾಟದಲ್ಲಿ ಶೇಕಡಾ 720 ಕ್ಕಿಂತ ಹೆಚ್ಚು ಹೆಚ್ಚಾಗಿದೆ.

ಜೂನ್ ತಿಂಗಳ ಕಾರು ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಸ್ಕೋಡಾ

ಇನ್ನು 2022ರ ಮೇ ತಿಂಗಳಿನಲ್ಲಿ ಸ್ಕೋಡಾ ಕಂಪನಿಯು 4,604 ಯುನಿಟ್‌ಗಳನ್ನು ಮಾರಾಟ ಮಾಡಲು ಯಶಸ್ವಿಯಾಗಿದೆ, ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ತಿಂಗಳಿನಿಂದ ತಿಂಗಳ ಮಾರಾಟದಲ್ಲಿ ಶೇ.30 ರಷ್ಟು ಬೆಳವಣಿಗೆಯಾಗಿದೆ. ತಿಂಗಳಿನಿಂದ ತಿಂಗಳ ಮಾರಾಟದಲ್ಲಿ 1,419 ಯುನಿಟ್‌ಗಳಷ್ಟು ಸುಧಾರಿಸಿದೆ.

ಜೂನ್ ತಿಂಗಳ ಕಾರು ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಸ್ಕೋಡಾ

ಸ್ಕೋಡಾ ಕಂಪನಿಯು ತನ್ನ ಹೊಸ ಕಾರು ಮಾದರಿಗಳಾದ ಕುಶಾಕ್ ಮತ್ತು ಸ್ಲಾವಿಯಾ ಮೂಲಕ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದೆ. ಕಂಪನಿಯು ಇತ್ತೀಚೆಗೆ ಹೊಸ ಕಾರು ಮಾದರಿಗಳಿಗಾಗಿ ಹೊಸ ಇನ್ಪೋಟೈನ್‌ಮೆಂಟ್ ಸಿಸ್ಟಂ ಜೋಡಣೆ ಮಾಡಲಾಗಿದೆ.

ಜೂನ್ ತಿಂಗಳ ಕಾರು ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಸ್ಕೋಡಾ

ಇನ್ನು ಸೆಮಿಕಂಡಕ್ಟರ್ ಕೊರೆತಯ ಪರಿಣಾಮ ಹೊಸ ಕಾರು ಮಾದರಿಗಳಲ್ಲಿ ಈ ಹಿಂದಿ ನೀಡಲಾಗುತ್ತಿದ್ದ 10 ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ ಬದಲಾಗಿ ಕಂಪನಿಯು 8 ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ ಜೋಡಣೆ ಮಾಡಲಾಗುತ್ತಿದೆ. ಹೊಸ ಕಾರುಗಳಲ್ಲಿ ನೀಡಲಾಗುತ್ತಿರುವ ಪರಿಷ್ಕೃತ ಇನ್ಪೋಟೈನ್‌ಮೆಂಟ್ ಸಿಸ್ಟಂ ಸೌಲಭ್ಯವು ಈ ಹಿಂದಿನ ಮಾದರಿಯೆಂತೆ ಹಲವಾರು ಫೀಚರ್ಸ್ ಹೊಂದಿದ್ದು, ಆದರೆ ಇದು ಅತಿ ಕಡಿಮೆ ಚಿಪ್‌ಗಳನ್ನು ಹೊಂದಿರಲಿದೆ.

ಜೂನ್ ತಿಂಗಳ ಕಾರು ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಸ್ಕೋಡಾ

ಸೆಮಿಕಂಡಕ್ಟರ್ ಬಳಕೆಯನ್ನು ತಗ್ಗಿಸುವ ಉದ್ದೇಶದಿಂದಲೇ ಕಂಪನಿಯು ಕಡಿಮೆ ಚಿಪ್‌ಗಳನ್ನು ಹೊಂದಿರುವ 8 ಇಂಚಿನ ಇನ್ಪೋಟೈನ್‌ಮೆಂಟ್ ಆಯ್ಕೆ ಮಾಡಿದೆ. ಈ ಹೊಸ ಇನ್ಫೋಟೈನ್‌ಮೆಂಟ್ ಸಿಸ್ಟಂ ಸೌಲಭ್ಯವು ಇತರೆ ಇನ್ಪೋಟೈನ್‌ಮೆಂಟ್ ಸೌಲಭ್ಯಗಳಂತೆ ಡೇಟಾವನ್ನು ಪ್ರಕ್ರಿಯೆಗೊಳಿಸಲು ಡಿಸ್ಪ್ಲೇ ಮತ್ತು ಅದರ ಹಿಂದೆ ಕಂಪ್ಯೂಟ್ ಅಂಶವನ್ನು ಹೊಂದಿರುತ್ತದೆ.

ಜೂನ್ ತಿಂಗಳ ಕಾರು ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಸ್ಕೋಡಾ

ಹೀಗಾಗಿ ಹೊಸ ಇನ್ಪೋಟೈನ್‌ಮೆಂಟ್ ಮೂಲಕ ಚಿಪ್ ಕೊರತೆಗೆ ಪರ್ಯಾಯ ಕಂಡುಕೊಂಡಿರುವ ಕಂಪನಿಯು ಕೆಲವು ವೈಶಿಷ್ಟ್ಯತೆಗಳನ್ನು ಕೈಬಿಟ್ಟಿದ್ದು, ಕುಶಾಕ್ ಮಾಂಟೆ ಕಾರ್ಲೊ ಮಾದರಿಯಲ್ಲಿ ಮಾತ್ರವೇ ಹೊಸ ಇನ್ಪೋಟೈನ್‌ಮೆಂಟ್ ಸಿಸ್ಟಂ ಜೋಡಣೆಯನ್ನು ಮುಂದುವರಿಸಿದೆ. ಹೀಗಾಗಿ ಹೊಸ ಇನ್ಪೋಟೈನ್‌ಮೆಂಟ್ ಮೂಲಕ ಚಿಪ್ ಕೊರತೆಗೆ ಪರ್ಯಾಯ ಕಂಡುಕೊಂಡಿರುವ ಕಂಪನಿಯು ಕೆಲವು ವೈಶಿಷ್ಟ್ಯತೆಗಳನ್ನು ಕೈಬಿಟ್ಟಿದ್ದು, ಕುಶಾಕ್ ಮಾಂಟೆ ಕಾರ್ಲೊ ಮಾದರಿಯಲ್ಲಿ ಮಾತ್ರವೇ ಹೊಸ ಇನ್ಪೋಟೈನ್‌ಮೆಂಟ್ ಸಿಸ್ಟಂ ಜೋಡಣೆಯನ್ನು ಮುಂದುವರಿಸಿದೆ.

ಜೂನ್ ತಿಂಗಳ ಕಾರು ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಸ್ಕೋಡಾ

ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಸ್ಕೋಡಾ ಆಕ್ಟೀವಿಯಾ ಸೆಡಾನ್ ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದೆ. ಮಾರುಕಟ್ಟೆಯಲ್ಲಿ 21 ವರ್ಷಗಳ ನಂತರ ಸ್ಕೋಡಾ ಇಂಡಿಯಾ ಅಧಿಕೃತವಾಗಿ ಆಕ್ಟೀವಿಯಾ ಸೆಡಾನ್‌ನ 1 ಲಕ್ಷ ಯುನಿಟ್‌ಗಳನ್ನು ಮಾರಾಟ ಮಾಡಿದೆ. ಸ್ಕೋಡಾ ಆಕ್ಟೀವಿಯಾ ಭಾರತದಲ್ಲಿ ಸಿಕೆಡಿ ಕಿಟ್‌ಗಳಿಂದ ಜೋಡಿಸಲಾದ ಅತಿ ಹೆಚ್ಚು ಮಾರಾಟವಾಗುವ ಮಾದರಿಗಳಲ್ಲಿ ಒಂದಾಗಿದೆ. 1996 ರಲ್ಲಿ ಜಾಗತಿಕವಾಗಿ ಅನಾವರಣಗೊಂಡ ನಂತರ, 2001 ರಲ್ಲಿ ಭಾರತದಲ್ಲಿ ಮೊದಲ ಜನರೇಷನ್ ಆಕ್ಟೀವಿಯಾವನ್ನು ಪರಿಚಯಿಸಲಾಯಿತು ಮತ್ತು 2004 ರಲ್ಲಿ RS ಆವೃತ್ತಿಯನ್ನು ಪರಿಚಯಿಸಲಾಯಿತು. ಈ RS ಭಾರತದಲ್ಲಿ ಮೊದಲ ಟರ್ಬೊ ಪೆಟ್ರೋಲ್ ಕಾರ್ಯಕ್ಷಮತೆಯ ಸೆಡಾನ್ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. 2005 ರಲ್ಲಿ, ಸ್ಕೋಡಾ ಎರಡನೇ ತಲೆಮಾರಿನ ಆಕ್ಟೀವಿಯಾವನ್ನು ಪರಿಚಯಿಸಿತು.

ಜೂನ್ ತಿಂಗಳ ಕಾರು ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಸ್ಕೋಡಾ

ಮೂರನೇ ಜನರೇಷನ್ ಆಕ್ಟೀವಿಯಾವನ್ನು 2013 ರಲ್ಲಿ ಬಿಡುಗಡೆ ಮಾಡಲಾಯಿತು ಮತ್ತು ಇದು 2017 ರಲ್ಲಿ ಸಿಬಿಯು ಮಾರ್ಗದ ಮೂಲಕ RS 230 ರೂಪದಲ್ಲಿ RS ಆವೃತ್ತಿಯನ್ನು ಪಡೆದುಕೊಂಡಿತು. 2020 ರಲ್ಲಿ ಭಾರತದಲ್ಲಿ ಸ್ಕೋಡಾ - RS 245 ಮಾದರಿಯನ್ನು ಪರಿಚಯಿಸಿತು. ನಾಲ್ಕನೇ ತಲೆಮಾರಿನ ಆಕ್ಟೀವಿಯಾವನ್ನು ಕಳೆದ ವರ್ಷ ಜೂನ್‌ ತಿಂಗಳಿನಲ್ಲಿ ರೂ.25.99 ಲಕ್ಷ ಬೆಲೆಯಲ್ಲಿ ಪ್ರಾರಂಭಿಸಲಾಯಿತು, ಈ ವರ್ಷ ಸ್ಕೋಡಾ ಕಂಪನಿಯು ಆಕ್ಟೀವಿಯಾದ ಒಟ್ಟು 1,915 ಯುನಿಟ್ ಗಳನ್ನು ಮಾರಾಟ ಮಾಡಿತು. ಹೋಂಡಾ ಸಿವಿಕ್, ರೆನಾಲ್ಟ್ ಫ್ಲೂಯೆನ್ಸ್, ಫೋಕ್ಸ್‌ವ್ಯಾಗನ್ ಜೆಟ್ಟಾ, ಹ್ಯುಂಡೈ ಎಲಾಂಟ್ರಾ ಮತ್ತು ಟೊಯೊಟಾ ಕೊರೊಲ್ಲಾಗಳನ್ನು ಸ್ಥಗಿತಗೊಳಿಸಿರುವುದರಿಂದ ಇದು ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿ ಏಕೈಕ ಎಕ್ಸಿಕ್ಯೂಟಿವ್ ಸೆಡಾನ್ ಆಗಿದೆ.

ಜೂನ್ ತಿಂಗಳ ಕಾರು ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಸ್ಕೋಡಾ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಸ್ಕೋಡಾ ಕುಶಾಕ್ ಮತ್ತು ಸ್ಕೋಡಾ ಸ್ಲಾವಿಯಾ ಬಿಡುಗಡೆಯು ಭಾರತೀಯ ಮಾರುಕಟ್ಟೆಯಲ್ಲಿ ಸ್ಕೋಡಾ ಕಂಪನಿಗೆ ಕಾರು ಮಾರಾಟದಲ್ಲಿ ಹೆಚ್ಚಿನ ಕೊಡುಗೆಯನ್ನು ನೀಡುತ್ತಿದೆ. ಕಳೆದ ತಿಂಗಳ ಕಾರು ಮಾರಾಟದಲ್ಲಿ ಸ್ಕೋಡಾ ಕಂಪನಿಯು ದಾಖಲೆ ಮಟ್ಟದ ಬೆಳವಣಿಗೆಯನ್ನು ಸಾಧಿಸಿದೆ.

More from DriveSpark

Article Published On: Monday, July 4, 2022, 12:51 [IST]
English summary
Skoda auto india registered growth more than 700 percent in june 2022 sales details
Read more on ಸ್ಕೋಡಾ skoda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+