ಒಂದೇ ದಿನ 50 ಸ್ಲಾವಿಯಾ ಕಾರುಗಳನ್ನು ವಿತರಣೆ ಮಾಡಿದ ಸ್ಕೋಡಾ

ಸ್ಕೋಡಾ ಆಟೋ ಇಂಡಿಯಾ ಇತ್ತೀಚೆಗೆ ತಮ್ಮ ಪ್ರೀಮಿಯಂ ಸೆಡಾನ್ ಸ್ಲಾವಿಯಾವನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಕಂಪನಿಯ ಇಂಡಿಯಾ 2.0 ಯೋಜನೆಯ ಅಡಿಯಲ್ಲಿ ಬಿಡುಗಡೆಗೊಳಿಸಿದ ಸ್ಕೋಡಾದ ಎರಡನೇ ಮಾದರಿ ಸ್ಲಾವಿಯಾ ಆಗಿದೆ.

ಒಂದೇ ದಿನ 50 ಸ್ಲಾವಿಯಾ ಕಾರುಗಳನ್ನು ವಿತರಣೆ ಮಾಡಿದ ಸ್ಕೋಡಾ

ಸ್ಲಾವಿಯಾ ಕಾರು ಖರೀದಿಗಾಗಿ ಈಗಾಗಲೇ ಬುಕಿಂಗ್‌ಗಳನ್ನು ಪ್ರಾರಂಭವಾಗಿತ್ತು ಮತ್ತು ವಿತರಣೆಗಳೂ ಸಹ ಪ್ರಾರಂಭವಾಗಿದೆ. ವಿತರಣೆ ಮತ್ತು ಮಾಲೀಕತ್ವದ ಅನುಭವಗಳ ಕುರಿತಾದ ವೀಡಿಯೊಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಇಲ್ಲಿ ನಾವು 1 ಅಥವಾ 2 ಅಲ್ಲ, 50 ಸ್ಲಾವಿಯಾ ಸೆಡಾನ್‌ಗಳನ್ನು ಒಂದೇ ದಿನದಲ್ಲಿ ಗ್ರಾಹಕರಿಗೆ ತಲುಪಿಸುವ ವೀಡಿಯೊ ಆಗಿದೆ. ಈ ವೀಡಿಯೊವನ್ನು BMC HD ವೀಡಿಯೊಗಳು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದೆ. ಚೆನ್ನೈ ಮತ್ತು ಪಾಂಡಿಚೇರಿಯಲ್ಲಿ ಸ್ಕೋಡಾ ಬ್ರ್ಯಾಂಡ್‌ನ ಡೀಲರ್‌ಶಿಪ್ ನೆಟ್‌ವರ್ಕ್ ಆಗಿರುವ ಕುನ್ ಸ್ಕೋಡಾ ಆಯೋಜಿಸಿದ ಸಮಾರಂಭವನ್ನು ವೀಡಿಯೊ ಆಗಿದೆ.

ಒಂದೇ ದಿನ 50 ಸ್ಲಾವಿಯಾ ಕಾರುಗಳನ್ನು ವಿತರಣೆ ಮಾಡಿದ ಸ್ಕೋಡಾ

ಡೀಲರ್‌ಶಿಪ್‌ನ ಹೊರಗೆ ನಿಲ್ಲಿಸಿರುವ ಹೊಚ್ಚಹೊಸ ಸ್ಲಾವಿಯಾ ಸೆಡಾನ್‌ಗಳ ಉದ್ದನೆಯ ಸಾಲನ್ನು ಗ್ರಾಹಕರಿಗೆ ಹಸ್ತಾಂತರಿಸಲು ಕಾಯುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಕೀಲಿಯನ್ನು ಹಸ್ತಾಂತರಿಸುವ ಮೊದಲು, ಡೀಲರ್‌ಶಿಪ್ ಗ್ರಾಹಕರಿಗಾಗಿ ಒಂದು ಸಣ್ಣ ಕಾರ್ಯಕ್ರಮವನ್ನು ಆಯೋಜಿಸಿತು,

ಒಂದೇ ದಿನ 50 ಸ್ಲಾವಿಯಾ ಕಾರುಗಳನ್ನು ವಿತರಣೆ ಮಾಡಿದ ಸ್ಕೋಡಾ

ಡೀಲರ್‌ಶಿಪ್ ಕೇಕ್ ಕತ್ತರಿಸಿ ಗ್ರಾಹಕರು ಸಂಭ್ರಮಿಸಿದರು. ನಂತರ ಗ್ರಾಹಕರಿಗೆ ತಮ್ಮ ಹೊಚ್ಚಹೊಸ ಸ್ಕೋಡಾ ಸ್ಲಾವಿಯಾ ಸೆಡಾನ್‌ನ ಕೀಗಳನ್ನು ಹಸ್ತಾಂತರಿಸಲಾಯಿತು. ಎಲ್ಲಾ ವಾಹನಗಳಿಗೆ ಪ್ರಾರ್ಥನೆ ಸಲ್ಲಿಸಲಾಯಿತು ಮತ್ತು ಅದರ ನಂತರ ಗ್ರಾಹಕರು ಡೀಲರ್‌ಶಿಪ್‌ನಿಂದ ಕಾರನ್ನು ಓಡಿಸಲು ಪ್ರಾರಂಭಿಸಿದರು.

ಒಂದೇ ದಿನ 50 ಸ್ಲಾವಿಯಾ ಕಾರುಗಳನ್ನು ವಿತರಣೆ ಮಾಡಿದ ಸ್ಕೋಡಾ

ಒಂದೇ ಬಾರಿಗೆ ಇಷ್ಟೊಂದು ಸ್ಕೋಡಾ ಸ್ಲಾವಿಯಾ ಸೆಡಾನ್‌ಗಳನ್ನು ವಿತರಿಸಿರುವುದು ಬಹುಶಃ ಇದೇ ಮೊದಲು. ಹಬ್ಬ ಹರಿದಿನಗಳಲ್ಲಿ ಇಂತಹ ಸಮೂಹ ವಾಹನ ವಿತರಣೆಯನ್ನು ನೋಡಿದ್ದೇವೆ. ತಮ್ಮ ಹೊಚ್ಚಹೊಸ ಕಾರಿನ ಡೆಲಿವರಿ ತೆಗೆದುಕೊಂಡ ಗ್ರಾಹಕರ ಸಂತಸವನ್ನು ವಿಡಿಯೋದಲ್ಲಿ ಕಾಣಬಹುದು.

ಒಂದೇ ದಿನ 50 ಸ್ಲಾವಿಯಾ ಕಾರುಗಳನ್ನು ವಿತರಣೆ ಮಾಡಿದ ಸ್ಕೋಡಾ

ಸ್ಲಾವಿಯಾ ಸೆಡಾನ್ ಕಾರು ಪ್ರಸ್ತುತ ಮಾರುಕಟ್ಟೆಯಲ್ಲಿನ ಹೋಂಡಾ ಸಿಟಿ, ಮಾರುತಿ ಸುಜುಕಿ ಸಿಯಾಜ್, ಹ್ಯುಂಡೈ ವೆರ್ನಾ ಕಾರುಗಳಿಗೆ ಉತ್ತಮ ಪೈಪೋಟಿ ನೀಡುತದೆ. ಈಹೊಸ ಕಾರು 4,541 ಎಂಎಂ ಉದ್ದ, 1,752 ಅಗಲ ಮತ್ತು 1,487 ಎಂಎಂ ಎತ್ತರ ಮತ್ತು 2,651 ಎಂಎಂ ವ್ಹೀಲ್‌ಬೇಸ್‌ನೊಂದಿಗೆ 560 ಲೀಟರ್ ನಷ್ಟು ಬೂಟ್‌‌ಸ್ಪೆಸ್ ಅನ್ನು ಹೊಂದಿದೆ.

ಒಂದೇ ದಿನ 50 ಸ್ಲಾವಿಯಾ ಕಾರುಗಳನ್ನು ವಿತರಣೆ ಮಾಡಿದ ಸ್ಕೋಡಾ

ಸ್ಕೋಡಾ ಸ್ಲಾವಿಯಾ ಕಾರು ಟೊರ್ನಾಟ್ ರೆಡ್, ಕ್ರಿಸ್ಟಲ್ ಬ್ಲ್ಯೂ, ಕ್ಯಾಂಡಿ ವೈಟ್, ರೆಫ್ಲೆಕ್ಸರ್ ಸಿಲ್ವರ್ ಮತ್ತು ಕಾರ್ಬನ್ ಸ್ಟೀಲ್ ಬಣ್ಣದಲ್ಲಿ ಖರೀದಿಗೆ ಲಭ್ಯವಿರಲಿದ್ದು, ಸಿಗ್ನಿಚೆರ್ ಬಟರ್‌ಪ್ಲೈ ಗ್ರಿಲ್, ಸ್ಲಿಕ್ ಹೆಡ್‌ಲ್ಯಾಂಪ್, ಎಲ್ ಆಕಾರದಲ್ಲಿರುವ ಡೇ ಟೈಮ್ ರನ್ನಿಂಗ್ ಲ್ಯಾಂಪ್ ಸ್ಟ್ರೀಪ್, ಸ್ಪೋರ್ಟಿ ಫ್ರಂಟ್ ಬಂಪರ್, ಫಾಗ್ ಲ್ಯಾಂಪ್ ಹೌಸ್, ಎಲ್ಇಡಿ ಟೈಲ್ ಲೈಟ್ಸ್‌ನೊಂದಿಗೆ ಒಳಾಂಗಣವು ಕೂಡಾ ಸಾಕಷ್ಟು ಸುಧಾರಿತ ತಂತ್ರಜ್ಞಾನ ಪ್ರೇರಣೆ ಹೊಂದಿದೆ.

ಒಂದೇ ದಿನ 50 ಸ್ಲಾವಿಯಾ ಕಾರುಗಳನ್ನು ವಿತರಣೆ ಮಾಡಿದ ಸ್ಕೋಡಾ

ಈ ಹೊಸ ಕಾರಿನ ಒಳಭಾಗದಲ್ಲಿ ಆಕ್ಟಿವಿಯಾ ಸೆಡಾನ್ ಮಾದರಿಯನ್ನು ನೆನಪಿಸುತ್ತದೆ. ಇದರಲ್ಲಿ 10 ಇಂಚಿನ ಇನ್ಪೋಟೈನ್‌ಮೆಂಟ್, 8 ಇಂಚಿನ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಮೈ ಸ್ಕೋಡಾ ಕಾರ್ ಕನೆಕ್ಟೆಡ್ ನೊಂದಿಗೆ ವೆಂಟಿಲೆಟೆಡ್ ಲೆದರ್ ಆಸನಗಳು, ಎಲೆಕ್ಟ್ರಿಕ್ ಸನ್‌ರೂಫ್, ವೈರ್‌ಲೆಸ್ ಚಾರ್ಜರ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಕೀ ಲೆಸ್ ಎಂಟ್ರಿ, ಆಟೋ ಡಿಮ್ಮಿಂಗ್ ಹೊಂದಿರುವ ರಿಯರ್ ವ್ಯೂ ಮಿರರ್ ಸೇರಿದಂತೆ ಪ್ರಮುಖ ಪ್ರೀಮಿಯಂ ಫೀಚರ್ಸ್ ಹೊಂದಿದೆ.

ಒಂದೇ ದಿನ 50 ಸ್ಲಾವಿಯಾ ಕಾರುಗಳನ್ನು ವಿತರಣೆ ಮಾಡಿದ ಸ್ಕೋಡಾ

ಜೊತೆಗೆ ಹೊಸ ಕಾರಿನಲ್ಲಿ ಸುರಕ್ಷತೆಗಾಗಿ ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್ ನೀಡಲಾಗಿದ್ದು, ಸ್ಲಾವಿಯಾ ಹೈ ಎಂಡ್ ಮಾದರಿಯಲ್ಲಿ ಆರು ಏರ್‌ಬ್ಯಾಗ್‌ಗಳು ಇಎಸ್‌ಸಿ, ಇಡಿಎಸ್, ಟೈರ್ ಪ್ರೆಷರ್ ಮಾನಿಟರ್, ಹಿಲ್ ಹೋಲ್ಡ್, ರಿಯರ್ ಪಾರ್ಕಿಂಗ್ ಕ್ಯಾಮೆರಾ, ಮಲ್ಟಿ ಕೂಲಿಷನ್ ಬ್ರೇಕ್, ಐಸೋಫಿಕ್ಸ್ ಚೈಲ್ಡ್ ಸೀಟ್ ಮೌಂಟ್ಸ್, ರೈನ್ ಸೆನ್ಸಿಂಗ್ ವೈಪ್ಸ್ ಸೇರಿದಂತೆ ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್ ಒಳಗೊಂಡಿದೆ,

ಒಂದೇ ದಿನ 50 ಸ್ಲಾವಿಯಾ ಕಾರುಗಳನ್ನು ವಿತರಣೆ ಮಾಡಿದ ಸ್ಕೋಡಾ

ಸ್ಕೋಡಾ ಕಂಪನಿಯು ಸ್ಲಾವಿಯಾದಲ್ಲಿ 1.5 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಯೊಂದಿಗೆ ಹೈ ಎಂಡ್ 1.0ಲೀಟರ್ ಮಾದರಿಗಿಂತಲೂ ಇನ್ನು ಹೆಚ್ಚಿನ ಮಟ್ಟದ ಕೆಲವು ಫೀಚರ್ಸ್‌ಗಳನ್ನು ಜೋಡಣೆ ಮಾಡಲಿದೆ.ಬೆಲೆಯೂ ಕೂಡಾ 1.0 ಲೀಟರ್ ಮಾದರಿಗಿಂತಲೂ ತುಸು ದುಬಾರಿಯಾಗಿಲಿದೆ.

ಒಂದೇ ದಿನ 50 ಸ್ಲಾವಿಯಾ ಕಾರುಗಳನ್ನು ವಿತರಣೆ ಮಾಡಿದ ಸ್ಕೋಡಾ

ಹೊಸ ಕಾರಿನಲ್ಲಿ 1.0 ಲೀಟರ್ ಮಾದರಿಯು ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 115 ಬಿಹೆಚ್‍ಪಿ ಪವರ್ ಮತ್ತು 178 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.ಈ ಎಂಜಿನ್‌ನೊಂದಿಗೆ 6 ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 6 ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಜೋಡಿಸಲಾಗಿದೆ. ಇನ್ನು 1..5 ಲೀಟರ್ ಮಾದರಿಯು ನಾಲ್ಕು ಸಿಲಿಂಡರ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 150 ಬಿಹೆಚ್‍ಪಿ ಪವರ್ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 6 ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 7 ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದ್ದು,

ಹೊಸ ಸ್ಲಾವಿಯಾ ಸೆಡಾನ್ ಆವೃತ್ತಿಯನ್ನು ಸ್ಕೋಡಾ ಕಂಪನಿಯು ಫೋಕ್ಸ್‌ವ್ಯಾಗನ್ ಕಂಪನಿ ಜೊತೆಗಿನ ಸಹಭಾಗಿತ್ವ ಯೋಜನೆ ಅಡಿ ಅಭಿವೃದ್ದಿಗೊಳಿಸಿದ್ದು, ಸ್ಕೋಡಾ ಕಂಪನಿಯು ಫೋಕ್ಸ್‌ವ್ಯಾಗನ್ ಕಂಪನಿಗಳು ಇಂಡಿಯಾ 2.0 ಪ್ರೊಜೆಕ್ಟ್ ಯೋಜನೆ ಅಡಿಯಲ್ಲಿ ಒಟ್ಟು ನಾಲ್ಕು ಹೊಸ ಕಾರುಗಳನ್ನು ಬಿಡುಗಡೆ ಮಾಡುವ ಯೋಜನೆ ಹೊಂದಿವೆ. ಹೊಸ ಯೋಜನೆಯಡಿ ಈಗಾಗಲೇ ಮೂರು ಕಾರು ಮಾದರಿಗಳು ಬಿಡುಗಡೆಗೊಂಡಿದ್ದು, ಸ್ಕೋಡಾ ಕಂಪನಿಯು ಕುಶಾಕ್ ಮತ್ತು ಸ್ಲಾವಿಯಾ ಮಾದರಿಯನ್ನು ಬಿಡುಗಡೆ ಮಾಡಿದೆ.

ಒಂದೇ ದಿನ 50 ಸ್ಲಾವಿಯಾ ಕಾರುಗಳನ್ನು ವಿತರಣೆ ಮಾಡಿದ ಸ್ಕೋಡಾ

ಕುಶಾಕ್, ಟೈಗುನ್ ಮತ್ತು ಸ್ಲಾವಿಯಾ, ವಿರ್ಟಸ್ ಮಾದರಿಗಳು ಬ್ರಾಂಡ್ ವಿನ್ಯಾಸ ಹೊರತುಪಡಿಸಿ ಒಂದೇ ಮಾದರಿಯ ಎಂಜಿನ್ ಆಯ್ಕೆ ಹೊಂದಿದ್ದು, ಹೊಸ ಮಾದರಿಗಳೊಂದಿಗೆ ಸ್ಕೋಡಾ ಮತ್ತು ಫೋಕ್ಸ್‌ವ್ಯಾಗನ್ ಕಂಪನಿಗಳು ಭಾರತದಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದೆ.

More from DriveSpark

Article Published On: Saturday, March 26, 2022, 12:41 [IST]
English summary
Skoda delivers 50 units of slavia sedan on a single day details
Read more on ಸ್ಕೋಡಾ skoda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+