ಮತ್ತೆ ಬೆಲೆ ಏರಿಕೆ ಪಡೆದುಕೊಂಡ ಸ್ಕೋಡಾ ಸ್ಲಾವಿಯಾ ಕಾರು

ಭಾರತೀಯ ಕಾರು ಮಾರುಕಟ್ಟೆಯಲ್ಲಿ ಕೆಲವು ವರ್ಷಗಳಲ್ಲಿ ಸೆಡಾನ್‌ಗಳು ಬಹಳಷ್ಟು ಮಾರುಕಟ್ಟೆ ಪಾಲನ್ನು ಕಳೆದುಕೊಂಡಿವೆ, ಎಸ್‍ಯುವಿಗಳ ಬೇಡಿಕೆ ಹೆಚ್ಚಾಗುತ್ತಿದೆ. ಆದರೆ ಕಾರು ತಯಾರಕರು ಸೆಡಾನ್ ವಿಭಾಗದಲ್ಲಿ ಪುನರುಜ್ಜೀವನವನ್ನು ನೋಡಲು ಆಶಿಸುತ್ತಿದ್ದಾರೆ.

ಮತ್ತೆ ಬೆಲೆ ಏರಿಕೆ ಪಡೆದುಕೊಂಡ ಸ್ಕೋಡಾ ಸ್ಲಾವಿಯಾ ಕಾರು

ಸ್ಕೋಡಾ ಅಂತಹ ತಯಾರಕರಲ್ಲಿ ಒಂದಾಗಿದೆ, ಅದರ ಸೆಡಾನ್ ಕೊಡುಗೆಗಳೊಂದಿಗೆ ಭಾರತೀಯ ಖರೀದಿದಾರರನ್ನು ಆಕರ್ಷಿಸಲು ಪ್ರಯತ್ನಿಸುತ್ತಿದೆ. ಅದರಲ್ಲಿ ಇತ್ತೀಚಿನದು ಸ್ಲಾವಿಯಾ. ಸ್ಕೋಡಾ ಸ್ಲಾವಿಯಾ ಭಾರತೀಯ ಮಾರುಕಟ್ಟೆಯಲ್ಲಿ ಜೆಕ್ ಕಾರು ತಯಾರಕರ ಶ್ರೇಣಿಯಲ್ಲಿ ಹೆಚ್ಚು ಮಾರಾಟವಾಗುವ ಮಾದರಿಗಳಲ್ಲಿ ಒಂದಾಗಿದೆ. ಇದೀಗ ಸ್ಕೋಡಾ ಭಾರತದಲ್ಲಿ ಸ್ಲಾವಿಯಾ ಸೆಡಾನ್ ಬೆಲೆಯನ್ನು ಮತ್ತೊಮ್ಮೆ ಹೆಚ್ಚಿಸಿದೆ. ಜೆಕ್ ವಾಹನ ತಯಾರಕರು ದೇಶದಲ್ಲಿ ಸ್ಲಾವಿಯಾ ಸೆಡಾನ್‌ನ ಬೆಲೆಗಳನ್ನು ಹೆಚ್ಚಿಸಿರುವುದು ಇದು ಎರಡನೇ ಬಾರಿಯಾಗಿದ್ದು, ಈ ಬಾರಿ ಸ್ಲಾವಿಯಾ ಸೆಡಾನ್ ಬೆಲೆಗಳು 40,000 ರೂ.ಗಳಷ್ಟು ಹೆಚ್ಚಿಸಲಾಗಿದೆ.

ಮತ್ತೆ ಬೆಲೆ ಏರಿಕೆ ಪಡೆದುಕೊಂಡ ಸ್ಕೋಡಾ ಸ್ಲಾವಿಯಾ ಕಾರು

ಸ್ಕೋಡಾ ಸ್ಲಾವಿಯಾ ಕಾರಿನ ಎಲ್ಲಾ ರೂಪಾಂತರಗಳ ಬೆಲೆಯನ್ನು ಹೆಚ್ಚಿಸಲಾಗಿದೆ. ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಿದ ಸ್ಲಾವಿಯಾ ಸೆಡಾನ್‌ನ ಆಂಬಿಷನ್ ರೂಪಾಂತರದಲ್ಲಿ ರೂಪಾಂತರದಲ್ಲಿ ಹೆಚ್ಚಿನ ಬೆಲೆ ಏರಿಕೆ ಕಂಡುಬಂದಿದೆ. ಸ್ಕೋಡಾ ಸ್ಲಾವಿಯಾ ಸೆಡಾನ್‌ನ ಈ ರೂಪಾಂತರ ಬೆಲೆಯು ರೂ.40,000 ವರೆಗೆ ಹೆಚ್ಚಿಸಲಾಗಿದ್ದು, ಇದೀಗ ಇದರ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ತಕಾರ ರೂ.14.29 ಲಕ್ಷವಾಗಿದೆ.

ಮತ್ತೆ ಬೆಲೆ ಏರಿಕೆ ಪಡೆದುಕೊಂಡ ಸ್ಕೋಡಾ ಸ್ಲಾವಿಯಾ ಕಾರು

ಜೆಕ್ ಕಾರು ತಯಾರಕರು 2.0 ಯೋಜನೆಯ ಅಡಿಯಲ್ಲಿ ಬಿಡುಗಡೆಗೊಳಿಸಿದ ಸ್ಕೋಡಾದ ಎರಡನೇ ಮಾದರಿ ಸ್ಲಾವಿಯಾ ಆಗಿದೆ. ಈ ಹೊಸ ಸ್ಲಾವಿಯಾ ಕಾರು 4,541 ಎಂಎಂ ಉದ್ದ, 1,752 ಅಗಲ ಮತ್ತು 1,487 ಎಂಎಂ ಎತ್ತರ ಮತ್ತು 2,651 ಎಂಎಂ ವ್ಹೀಲ್‌ಬೇಸ್‌ನೊಂದಿಗೆ 560 ಲೀಟರ್ ನಷ್ಟು ಬೂಟ್‌‌ಸ್ಪೆಸ್ ಹೊಂದಿದೆ.

ಮತ್ತೆ ಬೆಲೆ ಏರಿಕೆ ಪಡೆದುಕೊಂಡ ಸ್ಕೋಡಾ ಸ್ಲಾವಿಯಾ ಕಾರು

ಈ ಸ್ಕೋಡಾ ಸ್ಲಾವಿಯಾ ಕಾರು ಟೊರ್ನಾಟ್ ರೆಡ್, ಕ್ರಿಸ್ಟಲ್ ಬ್ಲ್ಯೂ, ಕ್ಯಾಂಡಿ ವೈಟ್, ರೆಫ್ಲೆಕ್ಸರ್ ಸಿಲ್ವರ್ ಮತ್ತು ಕಾರ್ಬನ್ ಸ್ಟೀಲ್ ಬಣ್ಣದಲ್ಲಿ ಖರೀದಿಗೆ ಲಭ್ಯವಿರಲಿದೆ. ಸಿಗ್ನಿಚೆರ್ ಬಟರ್‌ಪ್ಲೈ ಗ್ರಿಲ್, ಸ್ಲಿಕ್ ಹೆಡ್‌ಲ್ಯಾಂಪ್, ಎಲ್ ಆಕಾರದಲ್ಲಿರುವ ಡೇ ಟೈಮ್ ರನ್ನಿಂಗ್ ಲ್ಯಾಂಪ್ ಸ್ಟ್ರೀಪ್, ಸ್ಪೋರ್ಟಿ ಫ್ರಂಟ್ ಬಂಪರ್, ಫಾಗ್ ಲ್ಯಾಂಪ್ ಹೌಸ್, ಎಲ್ಇಡಿ ಟೈಲ್ ಲೈಟ್ಸ್‌ನೊಂದಿಗೆ ಒಳಾಂಗಣವು ಸಾಕಷ್ಟು ಸುಧಾರಿತ ತಂತ್ರಜ್ಞಾನ ಪ್ರೇರಣೆ ಹೊಂದಿದೆ.

ಮತ್ತೆ ಬೆಲೆ ಏರಿಕೆ ಪಡೆದುಕೊಂಡ ಸ್ಕೋಡಾ ಸ್ಲಾವಿಯಾ ಕಾರು

ಈ ಸ್ಲಾವಿಯಾ ಕಾರಿನ ಒಳಭಾಗದಲ್ಲಿ ಆಕ್ಟಿವಿಯಾ ಸೆಡಾನ್ ಮಾದರಿಯನ್ನು ನೆನಪಿಸುತ್ತದೆ. ಇದರಲ್ಲಿ 10 ಇಂಚಿನ ಇನ್ಪೋಟೈನ್‌ಮೆಂಟ್, 8 ಇಂಚಿನ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಮೈ ಸ್ಕೋಡಾ ಕಾರ್ ಕನೆಕ್ಟೆಡ್ ನೊಂದಿಗೆ ವೆಂಟಿಲೆಟೆಡ್ ಲೆದರ್ ಸೀಟುಗಳು ಮತ್ತು ಎಲೆಕ್ಟ್ರಿಕ್ ಸನ್‌ರೂಫ್ ಅನ್ನು ಹೊಂದಿದೆ.

ಮತ್ತೆ ಬೆಲೆ ಏರಿಕೆ ಪಡೆದುಕೊಂಡ ಸ್ಕೋಡಾ ಸ್ಲಾವಿಯಾ ಕಾರು

ಇದರೊಂದಿಗೆ ವೈರ್‌ಲೆಸ್ ಚಾರ್ಜರ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಕೀ ಲೆಸ್ ಎಂಟ್ರಿ, ಆಟೋ ಡಿಮ್ಮಿಂಗ್ ಹೊಂದಿರುವ ರಿಯರ್ ವ್ಯೂ ಮಿರರ್ ಸೇರಿದಂತೆ ಪ್ರಮುಖ ಪ್ರೀಮಿಯಂ ಫೀಚರ್ಸ್ ಗಳನ್ನು ಒಳಗೊಂಡಿದೆ.

ಮತ್ತೆ ಬೆಲೆ ಏರಿಕೆ ಪಡೆದುಕೊಂಡ ಸ್ಕೋಡಾ ಸ್ಲಾವಿಯಾ ಕಾರು

ಈ ಕಾರಿನಲ್ಲಿ ಸುರಕ್ಷತೆಗಾಗಿ ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್ ನೀಡಲಾಗಿದ್ದು, ಸ್ಲಾವಿಯಾ ಹೈ ಎಂಡ್ ಮಾದರಿಯಲ್ಲಿ ಆರು ಏರ್‌ಬ್ಯಾಗ್‌ಗಳು ಇಎಸ್‌ಸಿ, ಇಡಿಎಸ್, ಟೈರ್ ಪ್ರೆಷರ್ ಮಾನಿಟರ್, ಹಿಲ್ ಹೋಲ್ಡ್, ರಿಯರ್ ಪಾರ್ಕಿಂಗ್ ಕ್ಯಾಮೆರಾ, ಮಲ್ಟಿ ಕೂಲಿಷನ್ ಬ್ರೇಕ್, ಐಸೋಫಿಕ್ಸ್ ಚೈಲ್ಡ್ ಸೀಟ್ ಮೌಂಟ್ಸ್, ರೈನ್ ಸೆನ್ಸಿಂಗ್ ವೈಪ್ಸ್ ಸೇರಿದಂತೆ ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್ ಗಳನ್ನು ಹೊಂದಿವೆ.

ಮತ್ತೆ ಬೆಲೆ ಏರಿಕೆ ಪಡೆದುಕೊಂಡ ಸ್ಕೋಡಾ ಸ್ಲಾವಿಯಾ ಕಾರು

ಸ್ಲಾವಿಯಾ ಕಾರಿನಲ್ಲಿ 1.0 ಲೀಟರ್ ಮಾದರಿಯು ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 115 ಬಿಹೆಚ್‍ಪಿ ಪವರ್ ಮತ್ತು 178 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.ಈ ಎಂಜಿನ್‌ನೊಂದಿಗೆ 6 ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 6 ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಜೋಡಿಸಲಾಗಿದೆ.

ಹೊಸ ಸ್ಲಾವಿಯಾ ಸೆಡಾನ್ ಆವೃತ್ತಿಯನ್ನು ಸ್ಕೋಡಾ ಕಂಪನಿಯು ಫೋಕ್ಸ್‌ವ್ಯಾಗನ್ ಕಂಪನಿ ಜೊತೆಗಿನ ಸಹಭಾಗಿತ್ವ ಯೋಜನೆ ಅಡಿ ಅಭಿವೃದ್ದಿಗೊಳಿಸಿದ್ದು, ಸ್ಕೋಡಾ ಕಂಪನಿಯು ಫೋಕ್ಸ್‌ವ್ಯಾಗನ್ ಕಂಪನಿಗಳು ಇಂಡಿಯಾ 2.0 ಪ್ರೊಜೆಕ್ಟ್ ಯೋಜನೆ ಅಡಿಯಲ್ಲಿ ಒಟ್ಟು ನಾಲ್ಕು ಹೊಸ ಕಾರುಗಳನ್ನು ಬಿಡುಗಡೆ ಮಾಡುವ ಯೋಜನೆ ಹೊಂದಿವೆ. ಹೊಸ ಯೋಜನೆಯಡಿ ಈಗಾಗಲೇ ಮೂರು ಕಾರು ಮಾದರಿಗಳು ಬಿಡುಗಡೆಗೊಂಡಿದ್ದು, ಸ್ಕೋಡಾ ಕಂಪನಿಯು ಕುಶಾಕ್ ಮತ್ತು ಸ್ಲಾವಿಯಾ ಮಾದರಿಯನ್ನು ಬಿಡುಗಡೆ ಮಾಡಿದೆ.

ಮತ್ತೆ ಬೆಲೆ ಏರಿಕೆ ಪಡೆದುಕೊಂಡ ಸ್ಕೋಡಾ ಸ್ಲಾವಿಯಾ ಕಾರು

ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಆಡಿ, ಲ್ಯಾಂಬೋರ್ಗಿನಿ, ಪೋರ್ಷೆ, ಸ್ಕೋಡಾ ಮತ್ತು ಫೊಕ್ಸ್‌ವ್ಯಾಗನ್ ಸೇರಿದಂತೆ ಕಂಪನಿಗಳು ಸ್ಕೋಡಾ ಆಟೋ ವೋಕ್ಸ್‌ವ್ಯಾಗನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (SAVWIPL) ಅಡಿಯಲ್ಲಿ ನಿರ್ವಹಿಸುತ್ತಿದೆ.

ಮತ್ತೆ ಬೆಲೆ ಏರಿಕೆ ಪಡೆದುಕೊಂಡ ಸ್ಕೋಡಾ ಸ್ಲಾವಿಯಾ ಕಾರು

ಸ್ಕೋಡಾ ಆಟೋ ಫೋಕ್ಸ್‌ವ್ಯಾಗನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (SAVWIPL) ಗ್ರೂಪ್ ಈಗಾಗಲೇ ತನ್ನ 5,50,000 ಯುನಿಟ್ ಕಾರುಗಳನ್ನು ದಕ್ಷಿಣ ಅಮೇರಿಕಾ, ಮಧ್ಯ ಅಮೇರಿಕಾ, ಆಫ್ರಿಕಾ, ಗಲ್ಫ್ ಸಹಕಾರ ಮಂಡಳಿ (GCC) ಮತ್ತು ಕೆರಿಬಿಯನ್ ಪ್ರದೇಶದ 44 ದೇಶಗಳಿಗೆ ರಫ್ತು ಮಾಡಿದೆ.

ಮತ್ತೆ ಬೆಲೆ ಏರಿಕೆ ಪಡೆದುಕೊಂಡ ಸ್ಕೋಡಾ ಸ್ಲಾವಿಯಾ ಕಾರು

ಇತ್ತೀಚೆಗೆ ಈ ಗ್ರೂಪ್ ಸ್ಕೋಡಾ ಕುಶಾಕ್ ಎಸ್‍ಯುವಿಯೊಂದಿಗೆ ತನ್ನ ರಫ್ತು ಬಂಡವಾಳವನ್ನು ವಿಸ್ತರಿಸಿದೆ. ಸ್ಥಳೀಯವಾಗಿ ನಿರ್ಮಿಸಲಾದ ಎಡಗೈ-ಡ್ರೈವ್ ಕುಶಾಕ್‌ನ ಮೊದಲ ಬ್ಯಾಚ್ ಅನ್ನು ಅರಬ್ ಗಲ್ಫ್ ಸಹಕಾರ ದೇಶಗಳಿಗೆ (ಎಜಿಸಿಸಿ) ರಫ್ತು ಮಾಡಿದೆ.

More from DriveSpark

Article Published On: Wednesday, November 9, 2022, 19:07 [IST]
English summary
Skoda hikes prices of slavia sedan up to rs 40000 details
Read more on ಸ್ಕೋಡಾ skoda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+