ಭಾರತದಲ್ಲಿ 1 ಲಕ್ಷ ಮಾರಾಟದ ಗಡಿ ದಾಟಿ ಹೊಸ ಮೈಲಿಗಲ್ಲು ಸಾಧಿಸಿದ ಸ್ಕೋಡಾ ಆಕ್ಟೀವಿಯಾ

ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಸ್ಕೋಡಾ ಆಕ್ಟೀವಿಯಾ ಸೆಡಾನ್ ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದೆ. ಮಾರುಕಟ್ಟೆಯಲ್ಲಿ 21 ವರ್ಷಗಳ ನಂತರ ಸ್ಕೋಡಾ ಇಂಡಿಯಾ ಅಧಿಕೃತವಾಗಿ ಆಕ್ಟೀವಿಯಾ ಸೆಡಾನ್‌ನ 1 ಲಕ್ಷ ಯುನಿಟ್‌ಗಳನ್ನು ಮಾರಾಟ ಮಾಡಿದೆ.

ಭಾರತದಲ್ಲಿ 1 ಲಕ್ಷ ಮಾರಾಟದ ಗಡಿ ದಾಟಿ ಹೊಸ ಮೈಲಿಗಲ್ಲು ಸಾಧಿಸಿದ ಸ್ಕೋಡಾ ಆಕ್ಟೀವಿಯಾ

ಸ್ಕೋಡಾ ಆಕ್ಟೀವಿಯಾ ಭಾರತದಲ್ಲಿ ಸಿಕೆಡಿ ಕಿಟ್‌ಗಳಿಂದ ಜೋಡಿಸಲಾದ ಅತಿ ಹೆಚ್ಚು ಮಾರಾಟವಾಗುವ ಮಾದರಿಗಳಲ್ಲಿ ಒಂದಾಗಿದೆ. 1996 ರಲ್ಲಿ ಜಾಗತಿಕವಾಗಿ ಅನಾವರಣಗೊಂಡ ನಂತರ, 2001 ರಲ್ಲಿ ಭಾರತದಲ್ಲಿ ಮೊದಲ ಜನರೇಷನ್ ಆಕ್ಟೀವಿಯಾವನ್ನು ಪರಿಚಯಿಸಲಾಯಿತು ಮತ್ತು 2004 ರಲ್ಲಿ RS ಆವೃತ್ತಿಯನ್ನು ಪರಿಚಯಿಸಲಾಯಿತು. ಈ RS ಭಾರತದಲ್ಲಿ ಮೊದಲ ಟರ್ಬೊ ಪೆಟ್ರೋಲ್ ಕಾರ್ಯಕ್ಷಮತೆಯ ಸೆಡಾನ್ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. 2005 ರಲ್ಲಿ, ಸ್ಕೋಡಾ ಎರಡನೇ ತಲೆಮಾರಿನ ಆಕ್ಟೀವಿಯಾವನ್ನು ಪರಿಚಯಿಸಿತು.

ಭಾರತದಲ್ಲಿ 1 ಲಕ್ಷ ಮಾರಾಟದ ಗಡಿ ದಾಟಿ ಹೊಸ ಮೈಲಿಗಲ್ಲು ಸಾಧಿಸಿದ ಸ್ಕೋಡಾ ಆಕ್ಟೀವಿಯಾ

ಮೂರನೇ ಜನರೇಷನ್ ಆಕ್ಟೀವಿಯಾವನ್ನು 2013 ರಲ್ಲಿ ಬಿಡುಗಡೆ ಮಾಡಲಾಯಿತು ಮತ್ತು ಇದು 2017 ರಲ್ಲಿ ಸಿಬಿಯು ಮಾರ್ಗದ ಮೂಲಕ RS 230 ರೂಪದಲ್ಲಿ RS ಆವೃತ್ತಿಯನ್ನು ಪಡೆದುಕೊಂಡಿತು. 2020 ರಲ್ಲಿ ಭಾರತದಲ್ಲಿ ಸ್ಕೋಡಾ - RS 245 ಮಾದರಿಯನ್ನು ಪರಿಚಯಿಸಿತು.

ಭಾರತದಲ್ಲಿ 1 ಲಕ್ಷ ಮಾರಾಟದ ಗಡಿ ದಾಟಿ ಹೊಸ ಮೈಲಿಗಲ್ಲು ಸಾಧಿಸಿದ ಸ್ಕೋಡಾ ಆಕ್ಟೀವಿಯಾ

ನಾಲ್ಕನೇ ತಲೆಮಾರಿನ ಆಕ್ಟೀವಿಯಾವನ್ನುಕಳೆದ ವರ್ಷ ಜೂನ್‌ ತಿಂಗಳಿನಲ್ಲಿ ರೂ.25.99 ಲಕ್ಷ ಬೆಲೆಯಲ್ಲಿ ಪ್ರಾರಂಭಿಸಲಾಯಿತು, ಈ ವರ್ಷ ಸ್ಕೋಡಾ ಕಂಪನಿಯು ಆಕ್ಟೀವಿಯಾದ ಒಟ್ಟು 1,915 ಯುನಿಟ್ ಗಳನ್ನು ಮಾರಾಟ ಮಾಡಿತು. ಹೋಂಡಾ ಸಿವಿಕ್, ರೆನಾಲ್ಟ್ ಫ್ಲೂಯೆನ್ಸ್, ಫೋಕ್ಸ್‌ವ್ಯಾಗನ್ ಜೆಟ್ಟಾ, ಹ್ಯುಂಡೈ ಎಲಾಂಟ್ರಾ ಮತ್ತು ಟೊಯೊಟಾ ಕೊರೊಲ್ಲಾಗಳನ್ನು ಸ್ಥಗಿತಗೊಳಿಸಿರುವುದರಿಂದ ಇದು ಪ್ರಸ್ತುತ ದೇಶದ ಏಕೈಕ ಎಕ್ಸಿಕ್ಯೂಟಿವ್ ಸೆಡಾನ್ ಆಗಿದೆ.

ಭಾರತದಲ್ಲಿ 1 ಲಕ್ಷ ಮಾರಾಟದ ಗಡಿ ದಾಟಿ ಹೊಸ ಮೈಲಿಗಲ್ಲು ಸಾಧಿಸಿದ ಸ್ಕೋಡಾ ಆಕ್ಟೀವಿಯಾ

ಪ್ರಸ್ತುತ ಮಾರುಕಟ್ಟೆಯಲ್ಲಿರುವ ಸ್ಕೋಡಾ ಆಕ್ಟೀವಿಯಾ ಕಾರು ಶಾರ್ಪ್ ಆಗಿ ಹಾಗೂ ಸ್ಪೋರ್ಟಿಯಾಗಿ ಕಾಣುತ್ತದೆ. ಈ ಕಾರಿನಲ್ಲಿ ಕ್ರಿಸ್ಟಲ್ ಲೈಟಿಂಗ್ ಹೊಂದಿರುವ ಸ್ಲೀಕ್ ಆದ ಹೆಡ್ ಲ್ಯಾಂಪ್ ಯುನಿಟ್, ಹೈ ಹಾಗೂ ಲೋ ಬೀಮ್'ಗಳಿಗಾಗಿ ಎಲ್ಇಡಿ ಪ್ರೊಜೆಕ್ಟರ್ ಸೆಟಪ್ ನೀಡಲಾಗಿದೆ.

ಭಾರತದಲ್ಲಿ 1 ಲಕ್ಷ ಮಾರಾಟದ ಗಡಿ ದಾಟಿ ಹೊಸ ಮೈಲಿಗಲ್ಲು ಸಾಧಿಸಿದ ಸ್ಕೋಡಾ ಆಕ್ಟೀವಿಯಾ

ಈ ಕಾರಿನಲ್ಲಿರುವ ಡಿಆರ್‌ಎಲ್‌ಗಳು ಕಾರಿಗೆ ಸ್ಪೋರ್ಟಿ ಲುಕ್ ನೀಡುತ್ತವೆ. ಹೊಸ ಆಕ್ಟೀವಿಯಾ ಕಾರ್ ಅನ್ನು ಸ್ಟೈಲ್ ಹಾಗೂ ಎಲ್ ಅಂಡ್ ಕೆ ಎಂಬ ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಈ ಕಾರು ಸುಮಾರು 140 ಎಂಎಂನಷ್ಟು ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ವಿಂಡೋ ಟ್ರಿಮ್ ಸುತ್ತಲೂ ಕ್ರೋಮ್ ಅಸೆಂಟ್ ಹಾಗೂ ಹೆಡ್‌ಲೈಟ್‌ನಿಂದ ಟೇಲ್‌ಲೈಟ್‌ವರೆಗೆ ಕೆಲವು ಬಾಡಿ ಲೈನ್'ಗಳನ್ನು ನೀಡಲಾಗಿದೆ.

ಭಾರತದಲ್ಲಿ 1 ಲಕ್ಷ ಮಾರಾಟದ ಗಡಿ ದಾಟಿ ಹೊಸ ಮೈಲಿಗಲ್ಲು ಸಾಧಿಸಿದ ಸ್ಕೋಡಾ ಆಕ್ಟೀವಿಯಾ

ಈ ಆಕ್ಟೀವಿಯಾ ಕಾರಿನ ಹಿಂಭಾಗದಲ್ಲಿ ಸ್ಲೀಕ್ ಆದ ಎಲ್ಇಡಿ ಟೇಲ್ ಲೈಟ್ ನೀಡಲಾಗಿದೆ. ಈ ಕಾರಿನ ಹಿಂಭಾಗದಲ್ಲಿ ಸ್ಕೋಡಾ ಲೋಗೋ ನೀಡಿಲ್ಲ. ಆದರೆ ಬೂಟ್‌ನಲ್ಲಿ ಅಡ್ಡವಾಗಿ ಸ್ಕೋಡಾ ಎಂಬ ಹೆಸರನ್ನು ದಪ್ಪವಾಗಿ ಬರೆಯಲಾಗಿದೆ.

ಭಾರತದಲ್ಲಿ 1 ಲಕ್ಷ ಮಾರಾಟದ ಗಡಿ ದಾಟಿ ಹೊಸ ಮೈಲಿಗಲ್ಲು ಸಾಧಿಸಿದ ಸ್ಕೋಡಾ ಆಕ್ಟೀವಿಯಾ

ಈ ಆಕ್ಟೀವಿಯಾ ಕಾರಿನ ಕ್ಯಾಬಿನ್ ಒಳಗೆ ಸಾಕಷ್ಟು ಪ್ರಮಾಣದಲ್ಲಿ ಲೆದರ್ ಹಾಗೂ ಅಲ್ಕಾಂಟರಾ ಬಳಸಲಾಗಿದೆ. ಡ್ಯಾಶ್‌ಬೋರ್ಡ್ ಡ್ಯುಯಲ್ ಟೋನ್ ಬಣ್ಣವನ್ನು ಹೊಂದಿದ್ದು, ಅಲ್ಕಾಂಟರಾ ಜೊತೆಗೆ ಸಾಫ್ಟ್-ಟಚ್ ವಸ್ತುಗಳನ್ನು ಬಳಸಲಾಗಿದೆ. ಡೋರ್ ಹ್ಯಾಂಡಲ್‌ಗಳು ಸಾಕಷ್ಟು ಕ್ರೋಮ್ ಅಂಶವನ್ನು ಹೊಂದಿವೆ. ಈ ಕಾರಿನಲ್ಲಿ ಆಂಡ್ರಾಯ್ಡ್ ಆಟೋ ಹಾಗೂ ಆಪಲ್ ಕಾರ್ ಪ್ಲೇ ಮೂಲಕ ವೈರ್‌ಲೆಸ್ ಸ್ಮಾರ್ಟ್‌ಫೋನ್ ಕನೆಕ್ಟ್ ಆಗುವ 10 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂ ನೀಡಲಾಗಿದೆ.

ಭಾರತದಲ್ಲಿ 1 ಲಕ್ಷ ಮಾರಾಟದ ಗಡಿ ದಾಟಿ ಹೊಸ ಮೈಲಿಗಲ್ಲು ಸಾಧಿಸಿದ ಸ್ಕೋಡಾ ಆಕ್ಟೀವಿಯಾ

ಸ್ಕೋಡಾ ಆಕ್ಟೀವಿಯಾ 10.25 ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಹೊಂದಿದೆ. ಇದನ್ನು ಕಂಪನಿಯು ವರ್ಚುವಲ್ ಕಾಕ್‌ಪಿಟ್ ಎಂದು ಕರೆಯುತ್ತದೆ. ಮುಂಭಾಗದ ಎರಡು ಸೀಟುಗಳು 12 ವೇ ಎಲೆಕ್ಟ್ರಿಕ್ ಅಡ್ಜಸ್ಟ್ ಮೆಂಟ್ ಪಡೆಯುತ್ತವೆ. ಚಾಲಕನ ಬದಿಯಲ್ಲಿ ಮಾತ್ರ ಮೆಮೊರಿ ಫಂಕ್ಷನ್ ನೀಡಲಾಗಿದೆ.ಮುಂಭಾಗದ ಎರಡು ಸೀಟುಗಳು ಆರಾಮದಾಯಕವಾಗಿದ್ದು ಸೈಡ್ ಬೋಲ್ಸ್ಟರಿಂಗ್ ಹೊಂದಿದ್ದು ಪ್ರಯಾಣಿಕರನ್ನು ಸ್ಥಳದಲ್ಲಿ ಹಿಡಿದಿಡುತ್ತದೆ.

ಭಾರತದಲ್ಲಿ 1 ಲಕ್ಷ ಮಾರಾಟದ ಗಡಿ ದಾಟಿ ಹೊಸ ಮೈಲಿಗಲ್ಲು ಸಾಧಿಸಿದ ಸ್ಕೋಡಾ ಆಕ್ಟೀವಿಯಾ

ಹಿಂಭಾಗದಲ್ಲಿ ಎಸಿ ವೆಂಟ್ ಸಹ ನೀಡಲಾಗಿದೆ. ರೇರ್ ಎಸಿ ವೆಂಟ್'ಗಳ ಕೆಳಗೆ ಎರಡು ಟೈಪ್ ಸಿ ಚಾರ್ಜಿಂಗ್ ಸಾಕೆಟ್‌ಗಳಿವೆ. ಹೊಸ ಆಕ್ಟೀವಿಯಾ ಸುಮಾರು 600-ಲೀಟರ್ ಬೂಟ್ ಸ್ಪೇಸ್ ಹೊಂದಿದೆ. ಹಿಂದಿನ ಸೀಟಿನಲ್ಲಿ 60:40 ಸ್ಪ್ಲಿಟ್ ಆಯ್ಕೆ ನೀಡಲಾಗಿದ್ದು, ಬೂಟ್‌ನಲ್ಲಿ ಹೆಚ್ಚು ಸ್ಪೇಸ್ ಬೇಕಾದಲ್ಲಿ ಈ ಸೀಟುಗಳನ್ನು ಫೋಲ್ಡ್ ಮಾಡಬಹುದಾಗಿದೆ.

ಭಾರತದಲ್ಲಿ 1 ಲಕ್ಷ ಮಾರಾಟದ ಗಡಿ ದಾಟಿ ಹೊಸ ಮೈಲಿಗಲ್ಲು ಸಾಧಿಸಿದ ಸ್ಕೋಡಾ ಆಕ್ಟೀವಿಯಾ

ಈ ಸ್ಕೋಡಾ ಆಕ್ಟೀವಿಯಾ ಕಾರಿನ ಎರಡೂ ಮಾದರಿಗಳನ್ನು 2.0 ಲೀಟರ್ ಟಿಎಫ್‌ಎಸ್‌ಐ ಪೆಟ್ರೋಲ್ ಎಂಜಿನ್‌ನೊಂದಿಗೆ ಮಾರಾಟ ಮಾಡಲಾಗುತ್ತದೆ.ಈ ಎಂಜಿನ್ 4,180 ಆರ್‌ಪಿ‌ಎಂನಲ್ಲಿ 187.4 ಬಿ‌ಹೆಚ್‌ಪಿ ಪವರ್ ಹಾಗೂ 1,500 - 3,990 ಆರ್‌ಪಿ‌ಎಂನಲ್ಲಿ 320 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ಎಲ್ಲಾ ಪವರ್ ಹಾಗೂ ಟಾರ್ಕ್ ಅನ್ನು ಏಳು ಸ್ಪೀಡಿನ ಡಿಎಸ್‌ಜಿ ಗೇರ್ ಬಾಕ್ಸ್ ಮೂಲಕ ಫ್ರಂಟ್ ವ್ಹೀಲ್'ಗಳಿಗೆ ಕಳುಹಿಸುತ್ತದೆ. ಕಂಪನಿಯು ಶಿಫ್ಟ್-ಬೈ-ವೈರ್ ಟೆಕ್ನಾಲಜಿಯನ್ನು ಬಳಸಿದೆ.

ಭಾರತದಲ್ಲಿ 1 ಲಕ್ಷ ಮಾರಾಟದ ಗಡಿ ದಾಟಿ ಹೊಸ ಮೈಲಿಗಲ್ಲು ಸಾಧಿಸಿದ ಸ್ಕೋಡಾ ಆಕ್ಟೀವಿಯಾ

ಸುರಕ್ಷತೆಗಾಗಿ ಈ ಸ್ಕೋಡಾ ಆಕ್ಟೀವಿಯಾ ಸೆಡಾನ್ ನಲ್ಲಿ ಫ್ರಂಟ್ ಹಾಗೂ ರೇರ್ ಏರ್‌ಬ್ಯಾಗ್‌, ಡ್ರೈವರ್ ಹಾಗೂ ಫ್ರಂಟ್ ಪ್ಯಾಸೆಂಜರ್ ಏರ್‌ಬ್ಯಾಗ್‌, ಕರ್ಟೇನ್ ಏರ್‌ಬ್ಯಾಗ್‌ ಸೇರಿದಂತೆ ಎಂಟು ಏರ್‌ಬ್ಯಾಗ್‌ಗಳನ್ನು ನೀಡಲಾಗಿದೆ. ಇದರ ಜೊತೆಗೆ ಎಬಿಎಸ್, ಇಬಿಡಿ, ಪಾರ್ಕ್ ಅಸಿಸ್ಟ್, ಇಬುಜ್ ಫ್ಯಾಟಿಗ್ ಅಲರ್ಟ್, ಮಲ್ಟಿ-ಕೊಲಿಷನ್ ಬ್ರೇಕ್ ಸೇರಿದಂತೆ ಹಲವಾರು ಫೀಚರ್'ಗಳನ್ನು ನೀಡಲಾಗಿದೆ.

ಭಾರತದಲ್ಲಿ 1 ಲಕ್ಷ ಮಾರಾಟದ ಗಡಿ ದಾಟಿ ಹೊಸ ಮೈಲಿಗಲ್ಲು ಸಾಧಿಸಿದ ಸ್ಕೋಡಾ ಆಕ್ಟೀವಿಯಾ

ಆಕ್ಟೀವಿಯಾದ ಸ್ಟೈಲ್ ಮಾದರಿಯನ್ನು ಕ್ಯಾಂಡಿ ವೈಟ್, ಲಾವಾ ಬ್ಲೂ ಹಾಗೂ ಮ್ಯಾಜಿಕ್ ಬ್ಲ್ಯಾಕ್ ಎಂಬ ಮೂರು ಬಣ್ಣಗಳಲ್ಲಿ ಮಾರಾಟ ಮಾಡಲಾಗುತ್ತದೆ. ಇನ್ನು ಎಲ್ ಅಂಡ್ ಕೆ ಮಾದರಿಯನ್ನು ಬ್ರಿಲಿಯಂಟ್ ಸಿಲ್ವರ್, ಮ್ಯಾಪಲ್ ಬ್ರೌನ್, ಕ್ಯಾಂಡಿ ವೈಟ್, ಲಾವಾ ಬ್ಲೂ ಹಾಗೂ ಮ್ಯಾಜಿಕ್ ಬ್ಲ್ಯಾಕ್ ಎಂಬ ಐದು ಬಣ್ಣಗಳಲ್ಲಿ ಮಾರಾಟ ಮಾಡಲಾಗುತ್ತದೆ. ನಾವು ಮ್ಯಾಜಿಕ್ ಬ್ಲ್ಯಾಕ್ ಬಣ್ಣದ ಕಾರ್ ಅನ್ನು ಚಾಲನೆ ಮಾಡಿದೆವು.

ಭಾರತದಲ್ಲಿ 1 ಲಕ್ಷ ಮಾರಾಟದ ಗಡಿ ದಾಟಿ ಹೊಸ ಮೈಲಿಗಲ್ಲು ಸಾಧಿಸಿದ ಸ್ಕೋಡಾ ಆಕ್ಟೀವಿಯಾ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಸ್ಕೋಡಾ ಆಕ್ಟೀವಿಯಾ ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದೆ. ಸ್ಕೋಡಾ ಕಂಪನಿಯು ಆಕ್ಟೀವಿಯಾ ಹೆಸರಿನ ಕಾರ್ ಅನ್ನು ಹಲವು ವರ್ಷಗಳಿಂದ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದೆ. ಕಳೆದ ವರ್ಷ ಬಿಡುಗಡೆಯಾದ ಸ್ಕೋಡಾ ಆಕ್ಟೀವಿಯಾ ಪೂರ್ತಿಯಾಗಿ ಹೊಸದಾಗಿದ್ದು, ಹಳೆಯ ಮಾದರಿ ಕಾರುಗಳಿಗಿಂತ ಭಿನ್ನವಾಗಿದೆ. ಈ ಕಾರಿನ ಕ್ಯಾಬಿನ್ ವಿಶಾಲವಾಗಿದೆ.

Most Read Articles

Kannada
Read more on ಸ್ಕೋಡಾ skoda
English summary
Skoda octavia sedan sales cross over 1 lakhs units find here all details
Story first published: Wednesday, June 22, 2022, 16:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X