ಏಸ್ ಎಲೆಕ್ಟ್ರಿಕ್ ವಾಣಿಜ್ಯ ವಾಹನ ವಿತರಣೆಗೆ ಸಿದ್ದವಾದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಕಂಪನಿಯು ತನ್ನ ಬಹುನೀರಿಕ್ಷಿತ ಏಸ್ ಎಲೆಕ್ಟ್ರಿಕ್ ವಾಣಿಜ್ಯ ವಾಹನವನ್ನು ಹಲವಾರು ಹೊಸ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆ ಮಾಡಿದ್ದು, ಕಂಪನಿಯು ಮುಂದಿನ ತಿಂಗಳು ಅಕ್ಟೋಬರ್ ಮಧ್ಯಂತರದಲ್ಲಿ ವಿತರಣೆ ಆರಂಭಿಸಲು ಸಿದ್ದವಾಗಿದೆ.

ಏಸ್ ಎಲೆಕ್ಟ್ರಿಕ್ ವಾಣಿಜ್ಯ ವಾಹನ ವಿತರಣೆಗೆ ಸಿದ್ದವಾದ ಟಾಟಾ ಮೋಟಾರ್ಸ್

ಮೇ ಆರಂಭದಲ್ಲಿ ಹೊಸ ಏಸ್ ಎಲೆಕ್ಟ್ರಿಕ್ ವಾಹನವನ್ನು ಬಿಡುಗಡೆ ಮಾಡಿದ್ದ ಟಾಟಾ ಮೋಟಾರ್ಸ್ ಕಂಪನಿಯು ಇದೀಗ ಹೊಸ ವಾಹನ ವಿತರಣೆಗೆ ಸಿದ್ದವಾಗುತ್ತಿದ್ದು, ಹೊಸ ಇವಿ ವಾಹನವು ಇದುವರೆಗೆ ಸುಮಾರು 40 ಸಾವಿರಕ್ಕೂ ಹೆಚ್ಚು ಬುಕಿಂಗ್‌ನೊಂದಿಗೆ ಹೊಸ ಸಂಚಲನಕ್ಕೆ ಕಾರಣವಾಗಿದೆ.

ಏಸ್ ಎಲೆಕ್ಟ್ರಿಕ್ ವಾಣಿಜ್ಯ ವಾಹನ ವಿತರಣೆಗೆ ಸಿದ್ದವಾದ ಟಾಟಾ ಮೋಟಾರ್ಸ್

ಸದ್ಯ ಪ್ರಯಾಣಿಕರ ಬಳಕೆಯ ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿರುವ ಟಾಟಾ ಮೋಟಾರ್ಸ್ ಕಂಪನಿಯು ಇದೀಗ ಏಸ್ ಇವಿ ಮೂಲಕ ಇವಿ ವಾಣಿಜ್ಯ ವಾಹನಗಳ ವಿಭಾಗದಲ್ಲೂ ಹೊಸ ಅಧ್ಯಾಯ ಆರಂಭಿಸಿದ್ದು, ಹೊಸ ಎಲೆಕ್ಟ್ರಿಕ್ ವಾಣಿಜ್ಯ ವಾಹನವು ಕಂಪನಿಯ ಸುಧಾರಿತ ತಂತ್ರಜ್ಞಾನ ಪ್ರೇರಿತ ಇವೊಜೆನ್(Evogen) ಪ್ಲಾಟ್‌ಫಾರ್ಮ್ ಆಧರಿಸಿ ಅಭಿವೃದ್ದಿಪಡಿಸಿದೆ.

ಏಸ್ ಎಲೆಕ್ಟ್ರಿಕ್ ವಾಣಿಜ್ಯ ವಾಹನ ವಿತರಣೆಗೆ ಸಿದ್ದವಾದ ಟಾಟಾ ಮೋಟಾರ್ಸ್

ಹೊಸ ಏಸ್ ಎಲೆಕ್ಟ್ರಿಕ್ ವಾಣಿಜ್ಯ ವಾಹನವು ಸುಧಾರಿತ ತಂತ್ರಜ್ಞಾನ ಪ್ರೇರಿತ 27kW ಮೋಟಾರ್ ಜೋಡಣೆ ಹೊಂದಿದ್ದು, 130 ಎನ್ಎಂ ಪೀಕ್ ಟಾರ್ಕ್‌ನೊಂದಿಗೆ 208 ಎಫ್‌ಟಿ3 ಅತ್ಯಧಿಕ ಕಾರ್ಗೋ ಖಚಿತಪಡಿಸುತ್ತದೆ.

ಏಸ್ ಎಲೆಕ್ಟ್ರಿಕ್ ವಾಣಿಜ್ಯ ವಾಹನ ವಿತರಣೆಗೆ ಸಿದ್ದವಾದ ಟಾಟಾ ಮೋಟಾರ್ಸ್

ಹೊಸ ತಂತ್ರಜ್ಞಾನ ಪರಿಣಾಮ ಏಸ್ ಇವಿ ಕಂಟೈನರ್ ಸಾಕಷ್ಟು ಹಗುರವಾಗಿದ್ದು, ಇ-ಕಾಮರ್ಸ್ ಲಾಜಿಸ್ಟಿಕ್ಸ್‌ ಅಪ್ಲಿಕೇಶನ್‌ಗಳಿಗೆ ಇದು ಲಾಭದಾಯಕ ಅಂಶವಾಗಿದೆ. ಜೊತೆಗೆ ಸಂಪೂರ್ಣವಾಗಿ ಲೋಡ್ ಮಾಡಲಾದ ಪರಿಸ್ಥಿತಿಗಳಲ್ಲೂ ಹೊಸ ಇವಿ ವಾಹನ ಸುಲಭವಾಗಿ ಚಾಲನೆಯಾಗಲಿದ್ದು, ಇದು ಪ್ರತಿ ಚಾರ್ಜ್‌ಗೆ 154 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.

ಏಸ್ ಎಲೆಕ್ಟ್ರಿಕ್ ವಾಣಿಜ್ಯ ವಾಹನ ವಿತರಣೆಗೆ ಸಿದ್ದವಾದ ಟಾಟಾ ಮೋಟಾರ್ಸ್

ಹೊಸ ವಾಹನ ಕೇವಲ ಸರಕು ಸಾಗಾಣಿಕೆ ವೇಳೆಯೂ ಕೇವಲ 7 ಸೆಕೆಂಡುಗಳಲ್ಲಿ ಸೊನ್ನೆಯಿಂದ 30 ಕಿ.ಮೀ ವೇಗಪಡೆದುಕೊಳ್ಳಲಿದ್ದು, ಸ್ಟ್ಯಾಂಡರ್ಡ್ ಆಗಿ ಐಪಿ67 ವಾಟರ್‌ಪ್ರೂಫಿಂಗ್ ಸೇರಿದಂತೆ ಪ್ರಮುಖ ತಾಂತ್ರಿಕ ಅಂಶಗಳನ್ನು ಹೊಂದಿದೆ.

ಏಸ್ ಎಲೆಕ್ಟ್ರಿಕ್ ವಾಣಿಜ್ಯ ವಾಹನ ವಿತರಣೆಗೆ ಸಿದ್ದವಾದ ಟಾಟಾ ಮೋಟಾರ್ಸ್

ಏಸ್ ಎಲೆಕ್ಟ್ರಿಕ್ ವಾಹನವು ಸಾಮಾನ್ಯ ಇವಿ ಚಾರ್ಜಿಂಗ್‌ ಮಾತ್ರವಲ್ಲದೇ ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನ ಸಹ ಹೊಂದಿದ್ದು, ಕೊನೆಯ ಮೈಲಿ ಸರಕು ಸಾಗಾಣಿಕೆಗೆ ಅನೂಕರವಾಗುವಂತೆ ಚಾರ್ಜಿಂಗ್ ನಿಲ್ದಾಣಗಳನ್ನು ಅಳವಡಿಸಿಕೊಳ್ಳಲು ಇದು ಗ್ರಾಹಕರಿಗೆ ನೆರವಾಗಲಿದೆ.

ಏಸ್ ಎಲೆಕ್ಟ್ರಿಕ್ ವಾಣಿಜ್ಯ ವಾಹನ ವಿತರಣೆಗೆ ಸಿದ್ದವಾದ ಟಾಟಾ ಮೋಟಾರ್ಸ್

ಜೊತೆಗೆ ಟಾಟಾ ಮೋಟಾರ್ಸ್ ಕಂಪನಿಯು ಹೊಸ ಏಸ್ ವಾಣಿಜ್ಯ ವಾಹನದ ಇವಿ ಬ್ಯಾಟರಿಯಲ್ಲಿ ಅಡ್ವಾನ್ಸ್ ಬ್ಯಾಟರಿ ಕೂಲಿಂಗ್ ಸಿಸ್ಟಂ ಜೋಡಣೆ ಮಾಡಿದ್ದು, ರಿಜನರೇಟಿವ್ ಬ್ರೇಕಿಂಗ್ ಸಿಸ್ಟಂ ಹಿನ್ನಲೆಯಲ್ಲಿ ಹೊಸ ವಾಹನ ಮೈಲೇಜ್ ಪ್ರಮಾಣವು ಗಣನೀಯವಾಗಿ ಹೆಚ್ಚಳವಾಗಲಿದೆ.

ಏಸ್ ಎಲೆಕ್ಟ್ರಿಕ್ ವಾಣಿಜ್ಯ ವಾಹನ ವಿತರಣೆಗೆ ಸಿದ್ದವಾದ ಟಾಟಾ ಮೋಟಾರ್ಸ್

ಹೊಸ ಇವಿ ವಾಣಿಜ್ಯ ವಾಹನ ಬಿಡುಗಡೆಗೂ ಮುನ್ನ ಹಲವಾರು ಮಾರುಕಟ್ಟೆ ಅಧ್ಯಯನಗಳನ್ನು ಕೈಗೊಂಡಿದ್ದ ಟಾಟಾ ಮೋಟಾರ್ಸ್ ಕಂಪನಿಯು ಇದೀಗ ಗ್ರಾಹಕರ ಸ್ನೇಹಿ ಇವಿ ಮಾದರಿಯನ್ನು ಸಿದ್ದಗೊಳಿಸಿದ್ದು, ಹೊಸ ವಾಹನ ಇಂಟಿರಿಯರ್ ಸೌಲಭ್ಯಗಳು ಸಹ ಅತ್ಯುತ್ತಮವಾಗಿವೆ.

ಏಸ್ ಎಲೆಕ್ಟ್ರಿಕ್ ವಾಣಿಜ್ಯ ವಾಹನ ವಿತರಣೆಗೆ ಸಿದ್ದವಾದ ಟಾಟಾ ಮೋಟಾರ್ಸ್

ವಾಹನ ಚಾಲಕರಿಗೆ ಅರಾಮದಾಯಕ ಪ್ರಯಾಣಿಸಲು ಅನುಕೂಲಕರವಾಗುವಂತಹ ಹಲವಾರು ಸುಧಾರಿತ ತಾಂತ್ರಿಕ ಅಂಶಗಳನ್ನು ಸೇರ್ಪಡೆಗೊಳಿಸಿದ್ದು, 7 ಇಂಚಿನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ರಿಯರ್ ವ್ಯೂ ಕ್ಯಾಮೆರಾ, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ, ನ್ಯೂ ಜನರೇಷನ್ ಇನ್‌ಟ್ರುಮೆಂಟ್ ಕ್ಲಸ್ಟರ್ ಮತ್ತು ಸಾಕಷ್ಟು ಸ್ಥಳಾವಕಾಶ ಹೊಂದಿರುವ ಡ್ಯಾಶ್‌ಬೋರ್ಡ್ ಹೊಂದಿದೆ.

ಏಸ್ ಎಲೆಕ್ಟ್ರಿಕ್ ವಾಣಿಜ್ಯ ವಾಹನ ವಿತರಣೆಗೆ ಸಿದ್ದವಾದ ಟಾಟಾ ಮೋಟಾರ್ಸ್

ಇದಲ್ಲದೆ ಹೊಸ ಇವಿ ವಾಹನದಲ್ಲಿ ಫ್ಲಿಟ್ ಮ್ಯಾನೆಜ್ಮೆಂಟ್ ಕನೆಕ್ಟೆಡ್ ಸೌಲಭ್ಯವನ್ನು ಜೋಡಿಸಲಾಗಿದ್ದು, ವಾಹನ ಮಾಹಿತಿಯನ್ನು ತಿಳಿಯಲು ಜಿಯೋ ಫೆನ್ಸಿಂಗ್, ನ್ಯಾವಿಗೇಷನ್ ಸೌಲಭ್ಯಗಳು ಮಾಲೀಕರಿಗೆ ಸಹಕಾರಿಯಾಗಲಿವೆ.

ಏಸ್ ಎಲೆಕ್ಟ್ರಿಕ್ ವಾಣಿಜ್ಯ ವಾಹನ ವಿತರಣೆಗೆ ಸಿದ್ದವಾದ ಟಾಟಾ ಮೋಟಾರ್ಸ್

ಹೀಗಾಗಿ ಇದು ಸಾಮಾನ್ಯ ಡೀಸೆಲ್ ಮಾದರಿಗಿಂತಲೂ ಅತಿ ಕಡಿಮೆ ನಿರ್ವಹಣಾ ವೆಚ್ಚ ಹೊಂದಿದ್ದು, ಸದ್ಯಕ್ಕೆ ಹೊಸ ವಾಹನದ ಅಧಿಕೃತ ಬೆಲೆ ಮಾಹಿತಿಯನ್ನು ಬಹಿರಂಗಪಡಿಸದ ಕಂಪನಿಯು ಮುಂಬರುವ ತ್ರೈಮಾಸಿಕ ವೇಳೆಗೆ ಬೆಲೆ ಮಾಹಿತಿ ಹಂಚಿಕೊಳ್ಳುವುದಾಗಿ ಹೇಳಿಕೊಂಡಿದೆ.

ಏಸ್ ಎಲೆಕ್ಟ್ರಿಕ್ ವಾಣಿಜ್ಯ ವಾಹನ ವಿತರಣೆಗೆ ಸಿದ್ದವಾದ ಟಾಟಾ ಮೋಟಾರ್ಸ್

ದುಬಾರಿ ಇಂಧನಗಳ ಪರಿಣಾಮ ಸಾರಿಗೆ ವೆಚ್ಚವು ದಿನಂಪ್ರತಿ ಹೆಚ್ಚುತ್ತಲೇ ಇದ್ದು, ನಿಗದಿತ ನಿರ್ವಹಣಾ ವೆಚ್ಚ ಹೊಂದಿರುವ ಇವಿ ಮಾದರಿಗಳು ಇ-ಕಾಮರ್ಸ್ ಕಂಪನಿಗಳು ಅತ್ಯಧಿಕ ಲಾಭ ತಂದುಕೊಡಲಿವೆ ಎನ್ನಬಹುದು.

ಏಸ್ ಎಲೆಕ್ಟ್ರಿಕ್ ವಾಣಿಜ್ಯ ವಾಹನ ವಿತರಣೆಗೆ ಸಿದ್ದವಾದ ಟಾಟಾ ಮೋಟಾರ್ಸ್

ಹೊಸ ಏಸ್ ಇವಿ ಮಾದರಿಗಾಗಿ ಈಗಾಗಲೇ ಅಮೆಜಾನ್, ಫ್ಲಿಪ್‌ಕಾರ್ಟ್, ಬಿಗ್ ಬಾಸ್ಕೆಟ್, ಸಿಟಿ ಲಿಂಕ್, ಮೂವಿಂಗ್, ಡಾಟ್, ಲೆಟ್ಸ್‌ಟ್ರಾನ್ಸ್‌ಪೋರ್ಟ್, ಯೆಲೂ -ಕಾಮರ್ಸ್ ಕಂಪನಿಗಳು ಟಾಟಾ ಜೊತೆಗೆ ಹೊಸ ಒಡಂಬಡಿಕೆ ಮಾಡಿಕೊಂಡಿದ್ದು, ಹೊಸ ಒಡಂಬಡಿಕೆಯೊಂದಿಗೆ ಟಾಟಾ ಕಂಪನಿಯು ಈ ಎಂಟು ಕಂಪನಿಗಳಿಗೆ ಮೊದಲ ಹಂತದಲ್ಲಿ ವಿತರಣೆ ಮಾಡಿದೆ.

ಏಸ್ ಎಲೆಕ್ಟ್ರಿಕ್ ವಾಣಿಜ್ಯ ವಾಹನ ವಿತರಣೆಗೆ ಸಿದ್ದವಾದ ಟಾಟಾ ಮೋಟಾರ್ಸ್

ಪ್ರಮುಖ ಲಾಜಿಸ್ಟಿಕ್ ಕಂಪನಿಗಳಿಗೆ ಹೊಸ ವಾಹನ ವಿತರಣೆ ನಂತರವಷ್ಟೇ ಸಾಮಾನ್ಯ ಗ್ರಾಹಕರಿಗೂ ಹೊಸ ಇವಿ ವಿತರಣೆ ಆರಂಭಿಸಲಿದ್ದು, ವಾಣಿಜ್ಯ ವಾಹನ ವಿಭಾಗದಲ್ಲಿ ಮಹೀಂದ್ರಾ ಇವಿ ಮಾದರಿಗಳಿಗೆ ಹೆಚ್ಚಿನ ಪೈಪೋಟಿ ನೀಡಲಿದೆ.

Article Published On: Tuesday, September 27, 2022, 20:34 [IST]
English summary
Tata ace electric deliveries will commence from next month
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+