ಶೀಘ್ರದಲ್ಲಿಯೇ ಆಲ್‌ಟ್ರೊಜ್ ಆಟೋಮ್ಯಾಟಿಕ್ ವರ್ಷನ್ ಬಿಡುಗಡೆಗೆ ಸಿದ್ದವಾದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಕಂಪನಿಯು ಆಲ್‌ಟ್ರೊಜ್ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಮಾದರಿಗಾಗಿ ಆಟೋಮ್ಯಾಟಿಕ್ ಆವೃತ್ತಿಯನ್ನು ಬಿಡುಗಡೆ ಮಾಡುತ್ತಿದ್ದು, ಆಟೋಮ್ಯಾಟಿಕ್ ಆವೃತ್ತಿಯನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡುತ್ತಿರುವುದಾಗಿ ಕಂಪನಿಯೇ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.

ಶೀಘ್ರದಲ್ಲಿಯೇ ಆಲ್‌ಟ್ರೊಜ್ ಆಟೋಮ್ಯಾಟಿಕ್ ವರ್ಷನ್ ಬಿಡುಗಡೆಗೆ ಸಿದ್ದವಾದ ಟಾಟಾ ಮೋಟಾರ್ಸ್

ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಮಾದರಿಗಳಾದ ಮಾರುತಿ ಸುಜುಕಿ ಬಲೆನೊ ಮತ್ತು ಹ್ಯುಂಡೈ ಐ20 ಮಾದರಿಗಳಿಗೆ ಉತ್ತಮ ಪೈಪೋಟಿ ನೀಡುತ್ತಿರುವ ಟಾಟಾ ಆಲ್‌ಟ್ರೊಜ್ ಮಾದರಿಯು ಸದ್ಯ ಮ್ಯಾನುವಲ್ ಆವೃತ್ತಿಯಲ್ಲಿ ಮಾತ್ರವೇ ಖರೀದಿಗೆ ಲಭ್ಯವಿದ್ದು, ಗ್ರಾಹಕರ ಬಹುದಿನಗಳ ಬೇಡಿಕೆಯಾದ ಆಟೋಮ್ಯಾಟಿಕ್ ಆವೃತ್ತಿಯನ್ನು ಇದೀಗ 2022ರ ಮಾದರಿಯಲ್ಲಿ ಬಿಡುಗಡೆ ಮಾಡುತ್ತಿದೆ.

ಶೀಘ್ರದಲ್ಲಿಯೇ ಆಲ್‌ಟ್ರೊಜ್ ಆಟೋಮ್ಯಾಟಿಕ್ ವರ್ಷನ್ ಬಿಡುಗಡೆಗೆ ಸಿದ್ದವಾದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಕಂಪನಿಯು ತನ್ನ ಪ್ರಮುಖ ಕಾರು ಮಾದಿರಗಳಲ್ಲಿ ಗ್ರಾಹಕರ ಬೇಡಿಕೆಯೆಂತೆ ಎರಡು ತಿಂಗಳಿಗೆ ಒಂದು ಬಾರಿಗೆ ವೆರಿಯೆಂಟ್‌ಗಳ ಉನ್ನತೀಕರಣ ಮತ್ತು ಹೊಸ ವೆರಿಯೆಂಟ್ ಅಭಿವೃದ್ದಿಗೊಳಿಸುವ ಪ್ರಕ್ರಿಯೆ ಕೈಗೊಂಡಿದ್ದು, ಇದೀಗ ಆಲ್‌ಟ್ರೊಜ್ ಮಾದರಿಯಲ್ಲಿ ಆಟೋಮ್ಯಾಟಿಕ್ ಆವೃತ್ತಿಯ ಮಾರಾಟಕ್ಕೆ ಸಿದ್ದವಾಗಿದೆ.

ಶೀಘ್ರದಲ್ಲಿಯೇ ಆಲ್‌ಟ್ರೊಜ್ ಆಟೋಮ್ಯಾಟಿಕ್ ವರ್ಷನ್ ಬಿಡುಗಡೆಗೆ ಸಿದ್ದವಾದ ಟಾಟಾ ಮೋಟಾರ್ಸ್

ಆಲ್‌ಟ್ರೊಜ್ ಕಾರು ಮಾದರಿಯು ಹೊಸದಾಗಿ ಸದ್ಯ ಬಿಡುಗಡೆ ಮಾಡಲಾದ ಎಕ್ಸ್‌ಇ ಪ್ಲಸ್ ಜೊತೆಗೆ ಎಕ್ಸ್‌ಇ, ಎಕ್ಸ್ಎಂ ಪ್ಲಸ್, ಎಕ್ಸ್‌ಟಿ, ಎಕ್ಸ್‌ಜೆಡ್, ಎಕ್ಸ್‌ಜೆಡ್ ಆಪ್ಷನ್ ಮತ್ತು ಎಕ್ಸ್‌ಜೆಡ್ ಅರ್ಬನ್ ವೆರಿಯೆಂಟ್‌‌ಗಳೊಂದಿಗೆ ಮಾರಾಟಗೊಳ್ಳುತ್ತಿದೆ.

ಶೀಘ್ರದಲ್ಲಿಯೇ ಆಲ್‌ಟ್ರೊಜ್ ಆಟೋಮ್ಯಾಟಿಕ್ ವರ್ಷನ್ ಬಿಡುಗಡೆಗೆ ಸಿದ್ದವಾದ ಟಾಟಾ ಮೋಟಾರ್ಸ್

ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನ ಎಲ್ಲಾ ರೂಪಾಂತರಗಳು 1.2 ಲೀಟರ್ ರೆವೊಟ್ರಾನ್ ಪೆಟ್ರೋಲ್ ಮತ್ತು 1.5 ಲೀಟರ್ ಟರ್ಬೊ ಚಾರ್ಜ್ಡ್ ರೆವೊಟಾರ್ಕ್ ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದ್ದು, ಎಲ್ಲಾ ವೆರಿಯೆಂಟ್‌ಗಳಲ್ಲೂ ಸದ್ಯಕ್ಕೆ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯನ್ನು ಮಾತ್ರವೇ ನೀಡಲಾಗುತ್ತಿದೆ.

ಶೀಘ್ರದಲ್ಲಿಯೇ ಆಲ್‌ಟ್ರೊಜ್ ಆಟೋಮ್ಯಾಟಿಕ್ ವರ್ಷನ್ ಬಿಡುಗಡೆಗೆ ಸಿದ್ದವಾದ ಟಾಟಾ ಮೋಟಾರ್ಸ್

ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 1.2-ಲೀಟರ್ ಪೆಟ್ರೋಲ್ ಎಂಜಿನ್ ಮಾದರಿಯು 86-ಬಿಎಚ್‌ಪಿ, 113-ಎನ್ಎಂ ಟಾರ್ಕ್ ಮತ್ತು 1.5-ಲೀಟರ್ ಡೀಸೆಲ್ ಆವೃತ್ತಿಯು 90-ಬಿಎಚ್‌ಪಿ, 200-ಎನ್ಎಂ ಟಾರ್ಕ್ ಉತ್ಪಾದನಾ ಗುಣ ಹೊಂದಿದ್ದು, ಹೊಸದಾಗಿ ಬಿಡುಗಡೆಯಾಗಲಿರುವ 5-ಸ್ಪೀಡ್ ಆಟೋಮ್ಯಾಟಿಕ್ ಆವೃತ್ತಿಯನ್ನು ಪಂಚ್ ಮಾದರಿಯೊಂದಿಗೆ ಹಂಚಿಕೊಳ್ಳಲಿದೆ.

ಶೀಘ್ರದಲ್ಲಿಯೇ ಆಲ್‌ಟ್ರೊಜ್ ಆಟೋಮ್ಯಾಟಿಕ್ ವರ್ಷನ್ ಬಿಡುಗಡೆಗೆ ಸಿದ್ದವಾದ ಟಾಟಾ ಮೋಟಾರ್ಸ್

ಆಲ್‌ಟ್ರೊಜ್ ಮಾದರಿಯಲ್ಲಿ ಟಾಟಾ ಕಂಪನಿಯು ಕಳೆದ ಒಂದು ವರ್ಷದಲ್ಲಿ ಹಲವಾರು ಹೊಸ ಬದಲಾವಣೆಗಳನ್ನು ಪರಿಚಯಿಸಿದ್ದು, ಹೊಸ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 5.89 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 9.64 ಲಕ್ಷ ಬೆಲೆ ಹೊಂದಿದೆ.

ಶೀಘ್ರದಲ್ಲಿಯೇ ಆಲ್‌ಟ್ರೊಜ್ ಆಟೋಮ್ಯಾಟಿಕ್ ವರ್ಷನ್ ಬಿಡುಗಡೆಗೆ ಸಿದ್ದವಾದ ಟಾಟಾ ಮೋಟಾರ್ಸ್

ಐ-ಟರ್ಬೊ ಮಾದರಿಯು ಸಿಟಿ ಮತ್ತು ಸ್ಟೋರ್ಟ್ ಡ್ರೈವಿಂಗ್ ಮೋಡ್‌ಗಳನ್ನು ನೀಡಲಾಗಿದ್ದು, ಸದ್ಯಕ್ಕೆ ಹೊಸ ಮಾದರಿಯಲ್ಲಿ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆ ನೀಡಿರುವ ಕಂಪನಿಯು ಶೀಘ್ರದಲ್ಲೇ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ಸಹ ನೀಡಲಿದೆಯೆಂತೆ.

ಶೀಘ್ರದಲ್ಲಿಯೇ ಆಲ್‌ಟ್ರೊಜ್ ಆಟೋಮ್ಯಾಟಿಕ್ ವರ್ಷನ್ ಬಿಡುಗಡೆಗೆ ಸಿದ್ದವಾದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಕಂಪನಿಯು ಆಲ್‌ಟ್ರೊಜ್ ಕಾರಿನ ಟರ್ಬೊ ಮಾದರಿಗಳಲ್ಲಿ ಮತ್ತು ಸಾಮಾನ್ಯ ಪೆಟ್ರೋಲ್ ಮಾದರಿಯ ಹೈ ಎಂಡ್ ವೆರಿಯೆಂಟ್‌ಗಳಲ್ಲಿ ಕನೆಕ್ಟೆಡ್ ಟೆಕ್ನಾಲಜಿ ಬಳಕೆ ಮಾಡಿದ್ದು, ಹೊಸ ತಂತ್ರಜ್ಞಾನವು ಕಾರಿಗೆ ಗರಿಷ್ಠ ಭದ್ರತೆ ನೀಡುತ್ತದೆ.

ಶೀಘ್ರದಲ್ಲಿಯೇ ಆಲ್‌ಟ್ರೊಜ್ ಆಟೋಮ್ಯಾಟಿಕ್ ವರ್ಷನ್ ಬಿಡುಗಡೆಗೆ ಸಿದ್ದವಾದ ಟಾಟಾ ಮೋಟಾರ್ಸ್

ಹಾಗೆಯೇ ಹೊಸ ಕಾರುಗಳಲ್ಲಿ ಪ್ರತಿ ಎರಡು ತಿಂಗಳಿಗೆ ಒಂದು ಬಾರಿ ಉನ್ನತೀಕರಣದೊಂದಿಗೆ ಮುಂಚೂಣಿ ಸಾಧಿಸುತ್ತಿದ್ದು, ಆಲ್‌ಟ್ರೊಜ್ ಎಕ್ಸ್ಇ ಪ್ಲಸ್ ಮಾದರಿಯು ಪೆಟ್ರೋಲ್ ಮತ್ತು ಡೀಸೆಲ್ ಮಾದರಿಗಳೊಂದಿಗೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 6.34 ಲಕ್ಷದಿಂದ ರೂ. 7.54 ಲಕ್ಷ ಬೆಲೆ ಹೊಂದಿದೆ.

ಶೀಘ್ರದಲ್ಲಿಯೇ ಆಲ್‌ಟ್ರೊಜ್ ಆಟೋಮ್ಯಾಟಿಕ್ ವರ್ಷನ್ ಬಿಡುಗಡೆಗೆ ಸಿದ್ದವಾದ ಟಾಟಾ ಮೋಟಾರ್ಸ್

ಹೊಸ ಕಾರು ಎಕ್ಸ್ಇ ಪ್ಲಸ್ ಮಾದರಿಯಲ್ಲಿ ಫ್ಲಿಪ್ ಕೀ, ಲಾಕ್, ಅನ್‌ಲಾಕ್, ಫಾಲೋ ಮಿ ಹೆಡ್‌ಲ್ಯಾಂಪ್, ಎಲೆಕ್ಟ್ರಿಕ್ ಮೂಲಕ ಮಡಿಕೆ ಮಾಡಬಹುದಾದ ರಿಯರ್ ವ್ಯೂ ಮಿರರ್, ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್, ಹರ್ಮನ್ ಸೌಂಡ್ ಸಿಸ್ಟಂ, ಯುಎಸ್‌ಬಿ ಫೋರ್ಟ್ ಈ ವೆರಿಯೆಂಟ್‌‌ನ ಪ್ರಮುಖ ಗುಣಲಕ್ಷಣವಾಗಿದೆ.

ಶೀಘ್ರದಲ್ಲಿಯೇ ಆಲ್‌ಟ್ರೊಜ್ ಆಟೋಮ್ಯಾಟಿಕ್ ವರ್ಷನ್ ಬಿಡುಗಡೆಗೆ ಸಿದ್ದವಾದ ಟಾಟಾ ಮೋಟಾರ್ಸ್

ಈ ಹಿಂದಿನ ಎಕ್ಸ್ಎಂ ರೂಪಾಂತರದ ನಡುವೆ ಗಮನಾರ್ಹ ಬೆಲೆಯ ಅಂತರವಿದ್ದ ಕಾರಣ ಟಾಟಾ ಮೋಟಾರ್ಸ್ ಕಂಪನಿಯು ಹೊಸ ಹೆಚ್ಚು ಕೈಗೆಟುಕುವ ಬೆಲೆಯ ಎಕ್ಸ್ಇ ಪ್ಲಸ್ ಆವೃತ್ತಿಯನ್ನು ಪರಿಚಯಿಸಿದೆ. ಹೊಸ ಮಾದರಿಯನ್ನು ಹೆಚ್ಚು ಕೈಗೆಟುಕುವಂತೆ ಮಾಡಲು ಖರೀದಿ ನಿರ್ಧಾರಗಳ ಮೇಲೆ ಪರಿಣಾಮ ಬೀರದ ಕೆಲವು ವೈಶಿಷ್ಟ್ಯಗಳನ್ನು ತೆಗೆದುಹಾಕಲಾಗಿದ್ದು, ಪ್ರಮುಖ ಪ್ರೀಮಿಯಂ ಫೀಚರ್ಸ್‌ಗಳನ್ನು ಕೈಬಿಡಲಾಗಿದೆ.

ಶೀಘ್ರದಲ್ಲಿಯೇ ಆಲ್‌ಟ್ರೊಜ್ ಆಟೋಮ್ಯಾಟಿಕ್ ವರ್ಷನ್ ಬಿಡುಗಡೆಗೆ ಸಿದ್ದವಾದ ಟಾಟಾ ಮೋಟಾರ್ಸ್

ಆಲ್‌ಟ್ರೊಜ್ ಬೇಸ್ ಮಾದರಿಯಾದ ಎಕ್ಸ್ಇ ರೂಪಾಂತರಕ್ಕೆ ಹೋಲಿಸಿದರೆ ಹೊಸ ಆವೃತ್ತಿಯಲ್ಲಿ 4 ಸ್ಪೀಕರ್‌ಗಳು, ಬ್ಲೂಟೂತ್ ಸಂಪರ್ಕ, ಎಫ್ಎಂ/ ಎಎಂ ರೇಡಿಯೋ, ಯುಎಸ್‌ಬಿ ಪೋರ್ಟ್ ಮತ್ತು ಸ್ಪೀಡ್ ಯುಎಸ್‌ಬಿ ಚಾರ್ಜರ್‌ನೊಂದಿಗೆ ಬರುತ್ತದೆ. ಹೊಸ ಮಾದರಿಯಲ್ಲಿ ಬೇಸ್ ರೂಪಾಂತರದಲ್ಲಿರುವಂತೆಯೇ ಕೆಲವು ಹೆಚ್ಚುವರಿ ತಾಂತ್ರಿಕ ಸೌಲಭ್ಯಗಳನ್ನು ನೀಡಲಾಗಿದ್ದು, ಹೊಸ ಮಾದರಿಯ ಆಗಮನದ ಜೊತೆಗೆ ಟಾಟಾ ಮೋಟಾರ್ಸ್ ಆಲ್‌ಟ್ರೊಜ್ ಬೆಲೆ ಹೆಚ್ಚಿಸಿದೆ.

Most Read Articles

Kannada
English summary
Tata altroz automatic launch confirmed via the company s official twitter handle
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X