ಆಟೋಮ್ಯಾಟಿಕ್ ಆವೃತ್ತಿಯೊಂದಿಗೆ ಬಿಡುಗಡೆಯಾಗಲಿದೆ ಹೊಸ ಟಾಟಾ ಆಲ್‌ಟ್ರೊಜ್

ಟಾಟಾ ಮೋಟಾರ್ಸ್(Tata Motors) ಕಂಪನಿಯು ತನ್ನ ಪ್ರಮುಖ ಕಾರು ಮಾದರಿಗಳಲ್ಲಿ ಗ್ರಾಹಕರ ಬೇಡಿಕೆಯೆಂತೆ ನಿರಂತವಾಗಿ ಉನ್ನತೀಕರಿಸುತ್ತಿದ್ದು, ಕಂಪನಿಯು ಇದೀಗ ಆಲ್‌‌ಟ್ರೊಜ್ ಕಾರಿನಲ್ಲಿ ಹೊಸ ಗೇರ್‌ಬಾಕ್ಸ್ ಆಯ್ಕೆ ನೀಡುತ್ತಿರುವುದಾಗಿ ಮಾಹಿತಿ ಹಂಚಿಕೊಂಡಿದೆ.

ಆಟೋಮ್ಯಾಟಿಕ್ ಆವೃತ್ತಿಯೊಂದಿಗೆ ಬಿಡುಗಡೆಯಾಗಲಿದೆ ಹೊಸ ಟಾಟಾ ಆಲ್‌ಟ್ರೊಜ್

ಆಲ್‌ಟ್ರೊಜ್ ಹ್ಯಾಚ್‌ಬ್ಯಾಕ್ ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿ ಯಶಸ್ವಿ ಎರಡು ವರ್ಷಗಳನ್ನು ಪೂರೈಸಿರುವ ಟಾಟಾ ಮೋಟಾರ್ಸ್ ಕಂಪನಿಯು ಹೊಸ ಕಾರು ಬಿಡುಗಡೆ ಮಾಡಿದ ಎರಡನೇ ವರ್ಷದ ಸಂಭ್ರಮಕ್ಕಾಗಿ ಕಳೆದ ವಾರವಷ್ಟೇ ಡಾರ್ಕ್ ಎಡಿಷನ್‌ನಲ್ಲಿರುವ ಎಕ್ಸ್‌ಟಿ ಮತ್ತು ಎಕ್ಸ್‌ಜೆಡ್ ಪ್ಲಸ್ ಡೀಸೆಲ್ ಮಾದರಿಯನ್ನು ಉನ್ನತೀಕರಿಸಿ ಬಿಡುಗಡೆ ಮಾಡಿತ್ತು.

ಆಟೋಮ್ಯಾಟಿಕ್ ಆವೃತ್ತಿಯೊಂದಿಗೆ ಬಿಡುಗಡೆಯಾಗಲಿದೆ ಹೊಸ ಟಾಟಾ ಆಲ್‌ಟ್ರೊಜ್

ಆಲ್‌ಟ್ರೊಜ್ ಕಾರು ಮಾದರಿಯ ಮೂಲಕ ಟಾಟಾ ಮೋಟಾರ್ಸ್ ಕಂಪನಿಯು ಪ್ರೀಮಿಯಂ ಹ್ಯಾಚ್‌ಬ್ಯಾಕ್ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಕಂಪನಿಯು ಶೀಘ್ರದಲ್ಲೇ ಆಲ್‌ಟ್ರೊಜ್ ಮಾದರಿಯಲ್ಲಿ ಪೆಟ್ರೋಲ್ ಆಟೋಮ್ಯಾಟಿಕ್ ಆವೃತ್ತಿಯನ್ನು ಸಹ ಬಿಡುಗಡೆ ಮಾಡುವುದಾಗಿ ಟೀಸರ್ ಚಿತ್ರವನ್ನು ಹಂಚಿಕೊಂಡಿದೆ.

ಆಟೋಮ್ಯಾಟಿಕ್ ಆವೃತ್ತಿಯೊಂದಿಗೆ ಬಿಡುಗಡೆಯಾಗಲಿದೆ ಹೊಸ ಟಾಟಾ ಆಲ್‌ಟ್ರೊಜ್

ಟಾಟಾ ಮೋಟಾರ್ಸ್ ಕಂಪನಿಯು ತನ್ನ ಪ್ರಮುಖ ಕಾರು ಮಾದಿರಗಳಲ್ಲಿ ಗ್ರಾಹಕರ ಬೇಡಿಕೆಯೆಂತೆ ಪ್ರತಿ ಎರಡು ತಿಂಗಳಿಗೆ ಒಂದು ಬಾರಿಗೆ ವೆರಿಯೆಂಟ್‌ಗಳ ಉನ್ನತೀಕರಣ ಮತ್ತು ಹೊಸ ವೆರಿಯೆಂಟ್ ಅಭಿವೃದ್ದಿಗೊಳಿಸುವ ಪ್ರಕ್ರಿಯೆ ಕೈಗೊಂಡಿದ್ದು, ಇದೀಗ ಆಲ್‌ಟ್ರೊಜ್ ಮಾದರಿಯಲ್ಲಿ ಆಟೋಮ್ಯಾಟಿಕ್ ಆವೃತ್ತಿಯ ಬಿಡುಗಡೆಗಾಗಿ ಸಿದ್ದವಾಗಿದೆ.

ಆಟೋಮ್ಯಾಟಿಕ್ ಆವೃತ್ತಿಯೊಂದಿಗೆ ಬಿಡುಗಡೆಯಾಗಲಿದೆ ಹೊಸ ಟಾಟಾ ಆಲ್‌ಟ್ರೊಜ್

ಆಲ್‌ಟ್ರೊಜ್ ಕಾರು ಮಾದರಿಯು ಎಕ್ಸ್‌ಇ ಪ್ಲಸ್ ಜೊತೆಗೆ ಎಕ್ಸ್‌ಇ, ಎಕ್ಸ್ಎಂ ಪ್ಲಸ್, ಎಕ್ಸ್‌ಟಿ, ಎಕ್ಸ್‌ಜೆಡ್, ಎಕ್ಸ್‌ಜೆಡ್ ಆಪ್ಷನ್ ಮತ್ತು ಎಕ್ಸ್‌ಜೆಡ್ ಅರ್ಬನ್ ವೆರಿಯೆಂಟ್‌‌ಗಳೊಂದಿಗೆ ಮಾರಾಟಗೊಳ್ಳುತ್ತಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಎರಡು ಮಾದರಿಯಲ್ಲೂ ಖರೀದಿಗೆ ಲಭ್ಯವಿದೆ.

ಆಟೋಮ್ಯಾಟಿಕ್ ಆವೃತ್ತಿಯೊಂದಿಗೆ ಬಿಡುಗಡೆಯಾಗಲಿದೆ ಹೊಸ ಟಾಟಾ ಆಲ್‌ಟ್ರೊಜ್

ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನ ಎಲ್ಲಾ ರೂಪಾಂತರಗಳಲ್ಲೂ 1.2 ಲೀಟರ್ ರೆವೊಟ್ರಾನ್ ಪೆಟ್ರೋಲ್ ಮತ್ತು 1.5 ಲೀಟರ್ ಟರ್ಬೊ ಚಾರ್ಜ್ಡ್ ರೆವೊಟಾರ್ಕ್ ಡೀಸೆಲ್ ಎಂಜಿನ್ ಆಯ್ಕೆ ಹೊಂದಿದ್ದು, ಸದ್ಯಕ್ಕೆ ಆಲ್‌ಟ್ರೊಜ್ ಕಾರಿನಲ್ಲಿ ಕೇವಲ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯನ್ನು ಮಾತ್ರ ನೀಡಲಾಗುತ್ತಿದೆ.

ಆಟೋಮ್ಯಾಟಿಕ್ ಆವೃತ್ತಿಯೊಂದಿಗೆ ಬಿಡುಗಡೆಯಾಗಲಿದೆ ಹೊಸ ಟಾಟಾ ಆಲ್‌ಟ್ರೊಜ್

ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 1.2-ಲೀಟರ್ ಪೆಟ್ರೋಲ್ ಎಂಜಿನ್ ಮಾದರಿಯು 86-ಬಿಎಚ್‌ಪಿ, 113-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದರೆ 1.5-ಲೀಟರ್ ಡೀಸೆಲ್ ಆವೃತ್ತಿಯು 90-ಬಿಎಚ್‌ಪಿ, 200-ಎನ್ಎಂ ಟಾರ್ಕ್ ಉತ್ಪಾದನಾ ಗುಣ ಹೊಂದಿದೆ.

ಆಟೋಮ್ಯಾಟಿಕ್ ಆವೃತ್ತಿಯೊಂದಿಗೆ ಬಿಡುಗಡೆಯಾಗಲಿದೆ ಹೊಸ ಟಾಟಾ ಆಲ್‌ಟ್ರೊಜ್

ಇದೀಗ ಬಿಡುಗಡೆಯಾಗಲಿರುವ 5-ಸ್ಪೀಡ್ ಆಟೋಮ್ಯಾಟಿಕ್ ಆವೃತ್ತಿಯನ್ನು ಪಂಚ್ ಮಾದರಿಯೊಂದಿಗೆ ಹಂಚಿಕೊಳ್ಳಲಿದ್ದು, ನಗರ ಪ್ರದೇಶಗಳಲ್ಲಿ ಚಾಲನೆಯನ್ನು ಸುಲಭವಾಗಿಸಲು ಎಎಂಟಿ ಮಾದರಿಯು ಹೆಚ್ಚಿನ ಬೇಡಿಕೆ ಪಡೆದುಕೊಳ್ಳಲಿದೆ.

ಆಟೋಮ್ಯಾಟಿಕ್ ಆವೃತ್ತಿಯೊಂದಿಗೆ ಬಿಡುಗಡೆಯಾಗಲಿದೆ ಹೊಸ ಟಾಟಾ ಆಲ್‌ಟ್ರೊಜ್

ಆಲ್‌ಟ್ರೊಜ್ ಮಾದರಿಯಲ್ಲಿ ಟಾಟಾ ಕಂಪನಿಯು ಕಳೆದ ಒಂದು ವರ್ಷದಲ್ಲಿ ಹಲವಾರು ಹೊಸ ಬದಲಾವಣೆಗಳನ್ನು ಪರಿಚಯಿಸಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಸದ್ಯ ಆರಂಭಿಕವಾಗಿ ರೂ.6 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 10 ಲಕ್ಷ ಬೆಲೆ ಹೊಂದಿದೆ.

ಆಟೋಮ್ಯಾಟಿಕ್ ಆವೃತ್ತಿಯೊಂದಿಗೆ ಬಿಡುಗಡೆಯಾಗಲಿದೆ ಹೊಸ ಟಾಟಾ ಆಲ್‌ಟ್ರೊಜ್

ಇದೀಗ ಬಿಡುಗಡೆಯಾಗಲಿರುವ ಆಟೋಮ್ಯಾಟಿಕ್ ಮಾದರಿಯು ಪೆಟ್ರೋಲ್ ಮತ್ತು ಡೀಸೆಲ್ ಎರಡು ಮಾದರಿಗಳಿಗೂ ಜೋಡಣೆ ಮಾಡಬಹುದಾಗಿದ್ದು, ಟಾಪ್ ಎಂಡ್ ಮಾದರಿಗಳಲ್ಲಿ ಮಾತ್ರ ಖರೀದಿಗೆ ಲಭ್ಯವಾಗಲಿರುವ ಆಟೋಮ್ಯಾಟಿಕ್ ಆವೃತ್ತಿಯು ಮ್ಯಾನುವಲ್ ಮಾದರಿಗಿಂತಲೂ ತುಸು ದುಬಾರಿಯಾಗಿರಲಿವೆ.

ಆಟೋಮ್ಯಾಟಿಕ್ ಆವೃತ್ತಿಯೊಂದಿಗೆ ಬಿಡುಗಡೆಯಾಗಲಿದೆ ಹೊಸ ಟಾಟಾ ಆಲ್‌ಟ್ರೊಜ್

ನಗರಪ್ರದೇಶಗಳಲ್ಲಿ ಕಾರು ಚಾಲನೆಗೆ ಹೆಚ್ಚಿನ ಗ್ರಾಹಕರು ಮ್ಯಾನುವಲ್‌ಗಿಂತಲೂ ಹೆಚ್ಚು ಆಟೋಮ್ಯಾಟಿಕ್ ಆವೃತ್ತಿಗಳ ಖರೀದಿಗೆ ಆದ್ಯತೆ ನೀಡುತ್ತಿದ್ದು, ಆಟೋಮ್ಯಾಟಿಕ್ ಆವೃತ್ತಿಯ ನಂತರ ಹೊಸ ಕಾರು ಹ್ಯುಂಡೈ ಐ20 ಮಾದರಿಗೆ ಮತ್ತಷ್ಟು ಪೈಪೋಟಿ ನೀಡಲಿದೆ.

ಆಟೋಮ್ಯಾಟಿಕ್ ಆವೃತ್ತಿಯೊಂದಿಗೆ ಬಿಡುಗಡೆಯಾಗಲಿದೆ ಹೊಸ ಟಾಟಾ ಆಲ್‌ಟ್ರೊಜ್

ಇದರೊಂದಿಗೆ ಟಾಟಾ ಆಲ್‌ಟ್ರೊಜ್ ಮಾದರಿಯು ಕ್ರ್ಯಾಶ್‌ ಟೆಸ್ಟಿಂಗ್‌ನಲ್ಲಿ ಗರಿಷ್ಠ ಅಂಕಗಳೊಂದಿಗೆ 5 ಸ್ಟಾರ್ ಸೇಫ್ಟಿ ರೇಟಿಂಗ್ಸ್ ಪಡೆದುಕೊಂಡಿದ್ದು, ಆರಂಭಿಕ ಕಾರು ಮಾದರಿಯಲ್ಲೂ ಅತ್ಯುತ್ತಮ ಸೇಫ್ಟಿ ಫೀಚರ್ಸ್ ಹೊಂದಿರುವ ಮೊದಲ ಕಾರು ಮಾದರಿ ಎಂಬ ಹೆಗ್ಗಳಿಕೆ ಹೊಂದಿದೆ.

ಆಟೋಮ್ಯಾಟಿಕ್ ಆವೃತ್ತಿಯೊಂದಿಗೆ ಬಿಡುಗಡೆಯಾಗಲಿದೆ ಹೊಸ ಟಾಟಾ ಆಲ್‌ಟ್ರೊಜ್

ಕಳೆದ ವಾರವಷ್ಟೇ ಎರಡನೇ ವರ್ಷದ ಸಂಭ್ರಮಕ್ಕಾಗಿ ಆಲ್‌ಟ್ರೊಜ್ ಡಾರ್ಕ್ ಮಾದರಿಯಲ್ಲಿನ ಎಕ್ಸ್‌ಟಿ ಮತ್ತು ಎಕ್ಸ್‌ಜೆಡ್ ಪ್ಲಸ್ ಡೀಸೆಲ್ ಆವೃತ್ತಿಯು ಕೆಲವು ಪ್ರಮುಖ ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಉನ್ನತೀಕರಿಸಲಾಗಿದ್ದು, ಗ್ರಾಹಕರ ಬೇಡಿಕೆಯೆಂತೆ ಉನ್ನತೀಕರಿಸಿದ ಮಾದರಿಗಳಲ್ಲಿ ವೆಂಟಿಲೆಟೆಡ್ ಲೆದರ್ ಆಸನಗಳು, ಹಿಂಭಾಗದ ಆಸನಗಳಲ್ಲೂ ಆರ್ಮ್‌ರೆಸ್ಟ್, ಡಾರ್ಕ್ ಟಿಂಟ್ ಹೈಪರ್-ಸ್ಟೈಲ್ ಚಕ್ರಗಳನ್ನು ನೀಡಲಾಗಿದೆ.

ಆಟೋಮ್ಯಾಟಿಕ್ ಆವೃತ್ತಿಯೊಂದಿಗೆ ಬಿಡುಗಡೆಯಾಗಲಿದೆ ಹೊಸ ಟಾಟಾ ಆಲ್‌ಟ್ರೊಜ್

ಜೊತೆಗೆ ಉನ್ನತೀಕರಿಸಿದ ಡಾರ್ಕ್ ಎಡಿಷನ್‌ಗಳಲ್ಲಿ ಎತ್ತರವನ್ನು ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್, ಹಿಂಭಾಗದಲ್ಲೂ ಹೆಡ್‌ರೆಸ್ಟ್, ಮುಂಭಾಗದಲ್ಲಿ ಹೊಂದಾಣಿಕೆಯ ಸೀಟ್ ಬೆಲ್ಟ್‌ಗಳು, ಲೆದರ್‌ನೊಂದಿಗೆ ಸುತ್ತಲಾಗಿರುವ ಸ್ಟೀರಿಂಗ್ ಚಕ್ರಗಳು, ಲೆದರ್‌ನಿಂದ ಸುತ್ತಲಾದ ಗೇರ್ ನಾಬ್ ಸೇರಿದಂತೆ ಪ್ರಮುಖ ಪ್ರೀಮಿಯಂ ವೈಶಿಷ್ಟ್ಯತೆಗಳನ್ನು ನೀಡಲಾಗಿದೆ.

ಆಟೋಮ್ಯಾಟಿಕ್ ಆವೃತ್ತಿಯೊಂದಿಗೆ ಬಿಡುಗಡೆಯಾಗಲಿದೆ ಹೊಸ ಟಾಟಾ ಆಲ್‌ಟ್ರೊಜ್

ಆಲ್‌ಟ್ರೊಜ್ ಎಕ್ಸ್‌ಟಿ ವೆರಿಯೆಂಟ್‌ನಲ್ಲಿ ಪ್ರಮುಖ ಫೀಚರ್ಸ್‌ಗಳ ಜೊತೆಗೆ ಹೊರಭಾಗದಲ್ಲಿ ಮತ್ತು ಒಳಭಾಗದಲ್ಲಿ ಡಾರ್ಕ್ ಥೀಮ್ ಆಕರ್ಷಕವಾಗಿದ್ದು, ಇದರ ಜೊತೆಗೆ ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ ಸಹ ಹೊಸ ಕಾರಿಗೆ ಮತ್ತಷ್ಟು ಸುರಕ್ಷತೆಯನ್ನು ಖಾತ್ರಿಪಡಿಸುತ್ತದೆ.

Most Read Articles

Kannada
English summary
Tata altroz automatic variant new teaser
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X