Just In
Don't Miss!
- News
Bengaluru KR Market: ಫ್ಲೈಓವರ್ನಿಂದ ದುಡ್ಡು ಎಸೆದವ ಕೊರೊನಾ ವೇಳೆ 'ಬಿಕ್ಷೆ ಬೇಡಿದ್ದ'
- Sports
Ind vs NZ1st T20: ವಾಶಿಂಗ್ಟನ್ ಸುಂದರ ಆಟ ವ್ಯರ್ಥ: ಭಾರತಕ್ಕೆ ಮೊದಲ ಪಂದ್ಯದಲ್ಲೇ ಸೋಲಿನ ಆಘಾತ
- Lifestyle
2023ರಲ್ಲಿ ರಾಜಯೋಗದಿಂದಾಗಿ ಈ 4 ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನವಾಗಲಿದೆ
- Movies
3 ನಿಮಿಷದ ಐಟಂ ಸಾಂಗ್ಗೆ 'ಐರಾವತ'ನ ಅರಗಿಣಿ ಪಡೆದಿದ್ದು ಎಷ್ಟು ಕೋಟಿ?
- Finance
7th Pay Commission: ನೌಕರರಿಗೆ ಸಿಹಿ ಸುದ್ದಿ: ಬಾಕಿ DA ಹಣ ನೀಡಲು ಕೇಂದ್ರ ಸರ್ಕಾರ ನಿರ್ಧಾರ, ಹೇಗೆ?
- Technology
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಆಲ್ಟ್ರೊಜ್ ಹ್ಯಾಚ್‌ಬ್ಯಾಚ್‌ನಲ್ಲಿ ಪ್ರಮುಖ ವೆರಿಯೆಂಟ್ ಸ್ಥಗಿತಗೊಳಿಸಿದ ಟಾಟಾ ಮೋಟಾರ್ಸ್
ಆಲ್‌ಟ್ರೊಜ್ ಹ್ಯಾಚ್‌ಬ್ಯಾಕ್ ಮಾರಾಟದಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ಕೆಲವು ಬದಲಾವಣೆಗಳನ್ನು ಕೈಗೊಂಡಿದೆ.
Recommended Video
ಹೊಸ ಆಲ್‌ಟ್ರೊಜ್ ಕಾರಿನ ಎರಡೂ ಎಂಜಿನ್‌ಗಳಲ್ಲಿ ಕೆಲವು ರೂಪಾಂತರಗಳನ್ನು ಸ್ಥಗಿತಗೊಳಿಸಲಾಗಿದ್ದು, ಜೊತೆಗೆ ಹೊಸ ಬಣ್ಣದ ಆಯ್ಕೆ ನೀಡಲಾಗಿದೆ.

ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನಲ್ಲಿ ಸದ್ಯ ಉತ್ತಮ ಬೇಡಿಕೆ ಹೊಂದಿರುವ ಆಲ್‌ಟ್ರೊಜ್ ಮಾದರಿಯಲ್ಲಿ ಗ್ರಾಹಕರ ಬೇಡಿಕೆ ಆಧರಿಸಿ ಕಂಪನಿಯು ಕೆಲವು ವೆರಿಯೆಂಟ್‌ಗಳ ಮಾರಾಟವನ್ನು ಹೊಸ ವೆರಿಯೆಂಟ್‌ಗಳೊಂದಿಗೆ ವಿಲೀನಗೊಳಿಸಿದೆ. ಪೆಟ್ರೋಲ್ ಮತ್ತು ಡೀಸೆಲ್ ಎರಡು ಮಾದರಿಗಳಲ್ಲೂ ಲಭ್ಯವಿರುವ ಆಲ್‌ಟ್ರೊಜ್ ಮಾದರಿಗಾಗಿ ಕಂಪನಿಯು ಎಕ್ಸ್‌ಇ, ಎಕ್ಸ್‌ಜೆಡ್ ಡಾರ್ಕ್, ಎಕ್ಸ್‌ಜೆಡ್ ಆಪ್ಷನ್ ಮತ್ತು ಎಕ್ಸ್‌ಜೆಡ್ಎ ಆಪ್ಷನ್ ವೆರಿಯೆಂಟ್ ಸ್ಥಗಿತಗೊಳಿಸಲಾಗಿದೆ.

ಸ್ಥಗಿತಗೊಳಿಸಲಾದ ವೆರಿಯೆಂಟ್‌ಗಳನ್ನು ಎಕ್ಸ್‌ಟಿ ಡಾರ್ಕ್ ಆವೃತ್ತಿ ಮತ್ತು ಕಾಜಿರಂಗ ಆವೃತ್ತಿಗಳಲ್ಲಿ ವಿಲೀನಗೊಳಿಸಲಾಗಿದ್ದು, ಇದರೊಂದಿಗೆ ಮತ್ತೊಮ್ಮೆ ಹೈ ಸ್ಟ್ರೀಟ್ ಗೋಲ್ಡ್ ಬಣ್ಣದ ಆಯ್ಕೆಯನ್ನು ಆಲ್‌ಟ್ರೊಜ್ ಪ್ರಮುಖ ವೆರಿಯೆಂಟ್‌ಗಳಲ್ಲಿ ಸೇರಿಸಲಾಗಿದೆ.

ಹೊಸ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಮಾದರಿಯು ಇದೀಗ ಹೈ ಸ್ಟ್ರೀಟ್ ಗೋಲ್ಡ್ ಜೊತೆಗೆ ಒಪೆರಾ ಬ್ಲ್ಯೂ, ಆರ್ಕಾಡ್ ಗ್ರೇ, ಡೌನ್‌ಟೌನ್ ರೆಡ್, ಅವೆನ್ಯೂ ವೈಟ್, ಕಾಸ್ಮೊ ವೈಟ್, ಕಾಸ್ಮೊ ಬ್ಲ್ಯಾಕ್ ಮತ್ತು ಹಾರ್ಬರ್ ಬ್ಲ್ಯೂ ಬಣ್ಣಗಳ ಆಯ್ಕೆ ಹೊಂದಿದೆ.

ಇನ್ನು ಟಾಟಾ ಆಲ್‌ಟ್ರೊಜ್ ಮಧ್ಯಮ ಕ್ರಮಾಂಕದ ಹ್ಯಾಚ್‌ಬ್ಯಾಕ್ ಮಾದರಿಯಾಗಿದ್ದರೂ ಹಲವಾರು ಸೆಗ್ಮೆಂಟ್ ಫಸ್ಟ್ ಮತ್ತು ಈ ವಿಭಾಗದ ಅತ್ಯುತ್ತಮ ವೈಶಿಷ್ಟ್ಯಗಳನ್ನು ಹೊಂದಿದೆ. ಹೀಗಾಗಿ ಇದು ಗ್ರಾಹಕರ ಆಯ್ಕೆಗೆ ಪ್ರಮುಖ ಅಂಶವಾಗಿದೆ.

2020ರಲ್ಲಿ ಆರಂಭದಲ್ಲಿ ಮಾರಾಟ ಆರಂಭವಾದ ನಂತರ ಆಲ್‌ಟ್ರೊಜ್ ತನ್ನದೇ ಆದ ವಿಶಿಷ್ಟವಾದ ವಿನ್ಯಾಸದೊಂದಿಗೆ ಗ್ರಾಹಕರನ್ನು ಸೆಳೆಯುತ್ತಿದೆ. ಆಲ್‌ಟ್ರೊಜ್ ತನ್ನ ವಿಭಾಗದಲ್ಲಿನ ಇತರೆ ಕಾರುಗಳಿಂತಲೂ ಉತ್ತಮವಾಗಿ ಕಾಣುವ ಸೊಗಸಾದ ಹ್ಯಾಚ್‌ಬ್ಯಾಕ್ ಆಗಿದೆ ಎನ್ನಬಹುದು.

ಆಲ್ಟ್ರೊಜ್ ಕಾರು ಟಾಟಾದ ಇಂಪ್ಯಾಕ್ಟ್ 2.0 ವಿನ್ಯಾಸವನ್ನು ಅನುಸರಿಸಿದ್ದು, ಇದು ಸ್ಪೋರ್ಟಿ ಮತ್ತು ಪ್ರಬುದ್ಧವಾದ ನೋಟವನ್ನು ನೀಡುತ್ತದೆ. ಹಾಗೆಯೇ ಇದು ನಿಜಕ್ಕೂ ಒಂದು ಅನನ್ಯ ಸಂಯೋಜನೆಯಾಗಿದ್ದು, ಹೀಗಾಗಿಯೇ ಇದು ಎಲ್ಲಾ ವರ್ಗದ ಗ್ರಾಹಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ.

ಆಲ್ಟ್ರೊಜ್ ಅದರ ನಯವಾದ ವಿನ್ಯಾಸ ಮತ್ತು ಲೇಸರ್ ಕಟ್ ಲೈನ್‌ಗಳು ಮೂಲಕ ಆಕರ್ಷಿಸುತ್ತದೆ. ಅದರ ಡೈಮಂಡ್-ಕಟ್ ಮಿಶ್ರಲೋಹದ ಚಕ್ರಗಳು, ವಿಶಿಷ್ಟವಾದ ವಿಂಡೋ ಲೈನ್ ಮತ್ತು ಟೈಲ್-ಲ್ಯಾಂಪ್ ವಿನ್ಯಾಸದೊಂದಿಗೆ ಟಾಟಾ ಆಲ್ಟ್ರೊಜ್ ನಿಜವಾಗಿಯೂ ರಸ್ತೆಯಲ್ಲಿ ಅದರ ಪ್ರತಿಸ್ಪರ್ಧಿಗಳಿಗಿಂತಲೂ ಭಿನ್ನವಾಗಿ ಕಾಣುತ್ತದೆ.

ಟಾಟಾ ಆಲ್‌ಟ್ರೊಜ್ ವಿಶಾಲವಾದ ಮತ್ತು ಹೆಚ್ಚು ವೈಶಿಷ್ಟ್ಯತೆಯ ಸಮೃದ್ಧ ಕ್ಯಾಬಿನ್ ಹೊಂದಿದೆ. ಮೆಟಾಲಿಕ್ ಫಿನಿಶ್‌ನೊಂದಿಗೆ ಟ್ರಿಪಲ್-ಟೋನ್ ಡ್ಯಾಶ್‌ಬೋರ್ಡ್ ಅಂಶಗಳು ಆಲ್‌ಟ್ರೊಜ್‌ಗೆ ಪ್ರೀಮಿಯಂ ಅನುಭವವನ್ನು ನೀಡುತ್ತದೆ.

ಜೊತೆಗೆ ಈ ವಿಭಾಗದಲ್ಲಿ ಮೊದಲ ತಾಂತ್ರಿಕ ಅಂಶವಾದ 90-ಡಿಗ್ರಿಯಲ್ಲಿ ತೆರೆಯಬಹುದಾದ ಬಾಗಿಲುಗಳು ಉತ್ತಮವಾಗಿವೆ. ಇದರಿಂದ ಕಾರು ಪ್ರಯಾಣಿಕರು ಕ್ಯಾಬಿನ್ ಪ್ರವೇಶಿಸಲು ಮತ್ತು ಕೆಳಗೆ ಇಳಿಯಲು ತುಂಬಾ ಸುಲಭವಾಗಿದೆ.

ಹೊಸ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಮಾದರಿಯು ಗೋಲ್ಡ್ ಸ್ಟ್ಯಾಂಡರ್ಡ್ ಆವೃತ್ತಿಯು 5-ಸ್ಟಾರ್ ಗ್ಲೋಬಲ್ ಎನ್‌ಸಿಎಪಿ ಸುರಕ್ಷತಾ ರೇಟಿಂಗ್ ಅನ್ನು ಹೊಂದಿದೆ. ಈ ಮೂಲಕ ನಿರ್ಮಾಣದಲ್ಲಿನ ಗುಣಮಟ್ಟ ಸುಧಾರಣೆಯೊಂದಿಗೆ ಟಾಟಾ ಕಂಪನಿಯು ತನ್ನ ಕಾರುಗಳಲ್ಲಿ ಪ್ರಯಾಣಿಕರನ್ನು ಸಾಧ್ಯವಾದಷ್ಟು ಸುರಕ್ಷಿತವಾಗಿರಿಸಲು ಪ್ರಯತ್ನಿಸಿದೆ.

ಜೊತೆಗೆ ಆಲ್‌ಟ್ರೊಜ್ ಎಕ್ಸ್‌ಟಿಯಲ್ಲಿ ಡ್ಯುಯಲ್ ಏರ್‌ಬ್ಯಾಗ್‌ಗಳು, ಇಬಿಡಿ ಜೊತೆಗೆ ಎಬಿಎಸ್, ಐಸೋಫಿಕ್ಸ್ ಚೈಲ್ಡ್ ಸೀಟ್ ಆಂಕರ್‌ಗಳು, ಸಕ್ರಿಯ ಮಾರ್ಗಸೂಚಿಗಳಿಗಾಗಿ ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ ಸೇರಿದಂತೆ ಇನ್ನೂ ಅನೇಕ ಸುರಕ್ಷತಾ ವೈಶಿಷ್ಟ್ಯತೆಗಳು ಈ ಕಾರಿನಲ್ಲಿವೆ. ಇದಲ್ಲದೆ ಆಲ್‌ಟ್ರೊಜ್ ಎಕ್ಸ್‌ಟಿ ಹ್ಯಾಚ್‌ಬ್ಯಾಕ್‌ನಲ್ಲಿ ಚಾಲಕ ಮತ್ತು ಪ್ರಯಾಣಿಕರು ಚಲಿಸುವಾಗ ಎಲ್ಲಾ ಬಾಗಿಲುಗಳನ್ನು ಲಾಕ್ ಮಾಡಿರುವುದನ್ನು ಖಚಿತಪಡಿಸಿಕೊಳ್ಳಲು ಧ್ವನಿ ಎಚ್ಚರಿಕೆ ಸಂದೇಶಗಳನ್ನು ಸಹ ಒಳಗೊಂಡಿದೆ.

ಆಲ್ಟ್ರೊಜ್ ಎಕ್ಸ್‌ಟಿ ಅನ್ನು ಮಧ್ಯಂತರ ರೂಪಾಂತರದೊಂದಿಗೆ ಮೂರು ಎಂಜಿನ್ ಆಯ್ಕೆಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಇದರಲ್ಲಿ 1.2-ಲೀಟರ್ ನ್ಯಾಚುರಲಿ ಆಸ್ಪೆರೆಟೆಡ್ ಪೆಟ್ರೋಲ್ ಎಂಜಿನ್ ಉತ್ತಮವಾಗಿದ್ದು, ಹೆಚ್ಚಿನ ಪರ್ಫಾಮೆನ್ಸ್ ಬಯಸುವವರು ಟರ್ಬೊ ಮಾದರಿಯನ್ನು ಆಯ್ಕೆ ಮಾಡಬಹುದು. ಇದರ ಜೊತೆಗೆ ಬಿಎಸ್6 ಮಾನದಂಡ ಹೊಂದಿರುವ 1.5 ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಖರೀದಿಗೆ ಲಭ್ಯವಿದೆ.

ಹೊಸ ಕಾರು ಖರೀದಿದಾರರು ಆಲ್‌ಟ್ರೊಜ್ ಮಾದರಿಯಲ್ಲಿ 5-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಮಾದರಿಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಇದರಲ್ಲಿ ಡ್ಯುಯಲ್ ಕ್ಲಚ್ ಆಟೋಮಾಟಿಕ್ ಮಾದರಿಯು ಸ್ವಯಂಚಾಲಿತ ವೈಶಿಷ್ಟ್ಯಗಳೊಂದಿಗೆ ಶಿಫ್ಟ್-ಬೈ-ವೈರ್ ತಂತ್ರಜ್ಞಾನವಿದೆ. ಜೊತೆಗೆ ಮೃದುವಾದ ಗೇರ್‌ಶಿಫ್ಟ್‌ಗಳು ಮತ್ತು ದೀರ್ಘಾಯುಷ್ಯವನ್ನು ಖಚಿತಪಡಿಸಿಕೊಳ್ಳಲು ಹೊಸ ಕಾರಿನಲ್ಲಿ ವೆಟ್ ಕ್ಲಚ್‌ನೊಂದಿಗೆ ಸ್ವಯಂ-ಗುಣಪಡಿಸುವ ಕಾರ್ಯವಿಧಾನವನ್ನು ಹೊಂದಿದೆ.

ವಿವಿಧ ಎಂಜಿನ್ ಆಯ್ಕೆಗಳೊಂದಿಗೆ ಆಲ್‌ಟ್ರೊಜ್ ಮಧ್ಯಮ ಕ್ರಮಾಂಕದ ರೂಪಾಂತರದಲ್ಲಿ ಕ್ರೂಸ್ ಕಂಟ್ರೋಲ್, ಮಲ್ಟಿಪಲ್ ಡ್ರೈವ್ ಮೋಡ್‌ಗಳು ಮತ್ತು ಪುಶ್-ಬಟನ್ ಸ್ಟಾರ್ಟ್‌ನಂತಹ ಸೆಗ್ಮೆಂಟ್ ಬೆಸ್ಟ್ ವೈಶಿಷ್ಟ್ಯಗಳನ್ನು ನೀಡಲಾಗಿದೆ. ಆದರೆ ಆಲ್‌ಟ್ರೊಜ್ ಪ್ರತಿಸ್ಪರ್ಧಿ ಕಾರುಗಳ ಮಧ್ಯಮ ಕ್ರಮಾಂಕದ ರೂಪಾಂತರಗಳಲ್ಲಿ ಈ ಎಲ್ಲಾ ಫೀಚರ್ಸ್ ನೋಡಲು ಸಿಗುವುದಿಲ್ಲ ಎನ್ನಬಹುದು.