ಆಕರ್ಷಕ ವಿನ್ಯಾಸ, ವೈಶಿಷ್ಟ್ಯಗಳೊಂದಿಗೆ ಹ್ಯುಂಡೈ ಕ್ರೆಟಾವನ್ನು ಹಿಂದಿಕ್ಕಲು ಬರುತ್ತಿದೆ ಟಾಟಾ ಬ್ಲ್ಯಾಕ್‌ಬರ್ಡ್‌

ಟಾಟಾ ಬ್ಲ್ಯಾಕ್‌ಬರ್ಡ್ ಎಸ್‌ಯುವಿ 2023 ರಲ್ಲಿ ಭಾರತದಲ್ಲಿ ಪಾದಾರ್ಪಣೆ ಮಾಡುವ ನಿರೀಕ್ಷೆಯಿದ್ದು, ಇದು ಸುರಕ್ಷಿತ, ಆರಾಮದಾಯಕ ಮತ್ತು ಪ್ರಾಯೋಗಿಕ ಮಧ್ಯಮ ಗಾತ್ರದ ಎಸ್‌ಯುವಿಯಾಗಿ ಬಿಡುಗಡೆಯಾಗಲಿದೆ. ಈ SUV ಕುರಿತು ಹೆಚ್ಚಿನ ವಿವರಗಳನ್ನು ಟಾಟಾ ಇನ್ನೂ ಹಂಚಿಕೊಳ್ಳದಿದ್ದರೂ, ನಮಗೆ ಇಲ್ಲಿಯವರೆಗೆ ತಿಳಿದಿರುವ ಟಾಟಾ ಬ್ಲಾಕ್‌ಬರ್ಡ್ ಕುರಿತ ಎಲ್ಲಾ ವಿವರಗಳನ್ನು ಇಲ್ಲಿ ನೀಡಲಾಗಿದೆ.

ಹೊಸ ಟಾಟಾ ಬ್ಲ್ಯಾಕ್‌ಬರ್ಡ್ ಅದೇ X1 ಪ್ಲಾಟ್‌ಫಾರ್ಮ್‌ನಿಂದ ನಿರ್ಮಾಣವಾಗಲಿದೆ, ಇದೇ ಪ್ಲಾಟ್‌ಫಾರ್ಮ್ ಜನಪ್ರಿಯ ಟಾಟಾ ನೆಕ್ಸನ್‌ಗೂ ಆಧಾರವಾಗಿದೆ. ಹಾಗೆಯೇ ಹೊಸ ಬ್ಲಾಕ್‌ಬರ್ಡ್ ಕೂಪ್ ತರಹದ ಸಿಲೂಯೆಟ್ ಅನ್ನು ಪಡೆಯುವ ಸಾಧ್ಯತೆಯಿದೆ. ಇದು ಫೀಚರ್ಸ್, ಡಿಸೈನ್, ಪವರ್ ವಿಷಯದಲ್ಲಿ ಬ್ರ್ಯಾಂಡ್‌ನ ಸಾಲಿನಲ್ಲಿ ಉತ್ತಮ ಬೇಡಿಕೆಯಿರುವ ನೆಕ್ಸಾನ್ ಮತ್ತು ಹ್ಯಾರಿಯರ್ SUVಯ ಮಿಶ್ರಣದೊಂದಿಗೆ ಇವೆರೆಡರ ನಡುವೆ ಸ್ಥಾನ ಪಡೆಯಲಿದ್ದು, ನೆಕ್ಸಾನ್‌ಗಿಂತ ಗಮನಾರ್ಹ ಉದ್ದ ಮತ್ತು ದೊಡ್ಡದಾಗಿರಲಿದೆ.

ಆಕರ್ಷಕ ವಿನ್ಯಾಸ, ವೈಶಿಷ್ಟ್ಯಗಳೊಂದಿಗೆ ಹ್ಯುಂಡೈ ಕ್ರೆಟಾವನ್ನು ಹಿಂದಿಕ್ಕಲು ಬರುತ್ತಿದೆ ಟಾಟಾ ಬ್ಲ್ಯಾಕ್‌ಬರ್ಡ್

ಹೊರಾಂಗಣ ವಿಷಯಕ್ಕೆ ಬಂದರೆ ಹೊಸ ಬ್ಲ್ಯಾಕ್‌ಬರ್ಡ್ ಮುಂಭಾಗದಲ್ಲಿ ಎಲ್‌ಇಡಿ ಹೆಡ್‌ಲೈಟ್‌ಗಳು, ನಯವಾದ ಮುಂಭಾಗದ ಗ್ರಿಲ್ ಮತ್ತು ಎತ್ತರದ ಬಾನೆಟ್ ಒರಟಾಗಿ ಕಂಡರೂ ಆಕರರ್ಷಕ ಲುಕ್‌ನಲ್ಲಿ ಬರಲಿದೆ ಎಂದು ನಿರೀಕ್ಷಿಸಲಾಗಿದೆ. ಅಂತೆಯೇ, ಇದು ಒಟ್ಟಾರೆ ವಿನ್ಯಾಸ ಭಾಷೆಗೆ ಪೂರಕವಾಗಿ ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್ ಮತ್ತು ಪ್ಲಾಸ್ಟಿಕ್ ಬಾಡಿ ಕ್ಲಾಡಿಂಗ್ ಅನ್ನು ಹೊಂದಿರಲಿದೆ. ಈ ಮೂಲಕ ರಗಡ್ ಲುಕ್‌ನೊಂದಿಗೆ ಎಸ್‌ಯುವಿ ಪ್ರಿಯರನ್ನು ಸೆಳೆಯುವ ಎಲ್ಲಾ ಮುನ್ಸೂಚನೆಗಳು ಹೇರಳವಾಗಿ ಕಾಣುತ್ತಿವೆ.

ಒಳಭಾಗದಲ್ಲಿ ಹೊಸ ಬ್ಲ್ಯಾಕ್‌ಬರ್ಡ್ ಎಸ್‌ಯುವಿಯನ್ನು ವೈಶಿಷ್ಟ್ಯ-ಸಮೃದ್ಧ ಮತ್ತು ವಿಶಾಲವಾದ ಕ್ಯಾಬಿನ್‌ನೊಂದಿಗೆ ನೀಡಲಾಗುವುದು. ಇದು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಸೇರಿದಂತೆ ಇತ್ತೀಚಿನ ಸಂಪರ್ಕ ವೈಶಿಷ್ಟ್ಯಗಳೊಂದಿಗೆ ಹೊಸ ಮತ್ತು ದೊಡ್ಡ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಪಡೆಯುವ ನಿರೀಕ್ಷೆಯಿದೆ. ಇತ್ತಿಚಿನ ತನ್ನ ವಿಭಾಗದಲ್ಲಿ ಪೈಪೋಟಿಯಲ್ಲಿರುವ ಎಲ್ಲಾ ಕಾರುಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಟಾಟಾ ಮೋಟಾರ್ಸ್ ಈ ಬ್ಲ್ಯಾಕ್‌ಬರ್ಡ್ ಎಸ್‌ಯುವಿಯಲ್ಲಿನ ತಂತ್ರಾಜ್ಞಾನವನ್ನು ಅಭಿವೃದ್ಧಿ ಪಡಿಸುತ್ತಿದೆ ಎಂದು ತಿಳಿದುಬಂದಿದೆ.

ನಮಗೆ ತಿಳಿದಿರುವ ಮಾಹಿತಿಯಂತೆ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ವೆಂಟಿಲೇಟೆಡ್ ಫ್ರಂಟ್ ಸೀಟ್, ವೈರ್‌ಲೆಸ್ ಚಾರ್ಜರ್, 360-ಡಿಗ್ರಿ ಕ್ಯಾಮೆರಾ, ಸ್ವಯಂಚಾಲಿತ ವೈಪರ್‌ಗಳು, ರಿಯರ್ ಡಿಫಾಗರ್ ಮತ್ತು ಪುಶ್-ಬಟನ್ ಸ್ಟಾರ್ಟ್ ಮತ್ತು ಆಟೋ-ಡಿಮ್ಮಿಂಗ್ ಐಆರ್‌ವಿಎಂಗಳಂತಹ ಇತರ ವೈಶಿಷ್ಟ್ಯಗಳನ್ನು ಈ ಹೊಸ ಮಧ್ಯಮ ಗಾತ್ರದ ಎಸ್‌ಯುವಿಯೊಂದಿಗೆ ನೀಡಲಾಗುವುದು ಎಂದು ನಿರೀಕ್ಷಿಸಲಾಗಿದೆ. ಆದರೆ ಕಂಪನಿಯು ಇನ್ನೂ ಹೆಚ್ಚಿನ ಟೆಕ್ ಸುಧಾರಣೆಯೊಂದಿಗೆ ಅಚ್ಚರಿಗೊಳಿಸುವ ಸಾಧ್ಯತೆಯೂ ಇದೆ.

ಹೊಸ ಮಾದರಿಯ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ಟಾಟಾ ಮೋಟಾರ್ಸ್ ಮುಂದಿನ ದಿನಗಳಲ್ಲಿ ಬಹರಂಗಪಡಿಸಲಿದೆ. ಈ ಹೊಸ ಎಸ್‌ಯುವಿಯ ಹೆಸರೇ ಸೂಚಿಸುವಂತೆ ಹೊಸ ಡಿಸೈನ್‌ನೊಂದಿಗೆ ಆಕರ್ಷಕ ಲುಕ್‌ನಲ್ಲಿ ನಾವು ನೋಡಬಹುದು. ಇದರ ಬಾಕ್ಸಿ ಡಿಸೈನ್ ಈ ಎಸ್‌ಯುವಿಗೆ ಹೆಚ್ಚು ಸ್ಪೋರ್ಟಿ ಹಾಗೂ ಅಗ್ರೆಸ್ಸಿವ್ ನೋಟವನ್ನು ನೀಡಲಿದೆ. ಒಟ್ಟಾರೆಯಾಗಿ ಇದು ಮಿಡ್‌ ಸೈಜ್ ಎಸ್‌ಯುವಿ ವಿಭಾಗದಲ್ಲಿ ಪ್ರತಿಸ್ಪರ್ಧಿಗಳನ್ನು ಯಾವ ಮಟ್ಟಕ್ಕೆ ಹಿಂದಿಕ್ಕಲಿದೆ ಎಂದಬುದನ್ನು ತಿಳಿಯಲು ಬಿಡುಗಡೆವರೆಗು ಕಾಯಬೇಕಿದೆ.

ಭಾರತದಲ್ಲಿ ಟಾಟಾ ಬ್ಲ್ಯಾಕ್‌ಬರ್ಡ್ ಎಸ್‌ಯುವಿ ಬೆಲೆಯು 10-12 ಲಕ್ಷ ರೂಪಾಯಿಗಳಿಂದ (ಎಕ್ಸ್ ಶೋರೂಂ) ಪ್ರಾರಂಭವಾಗುವ ಸಾಧ್ಯತೆಯಿದೆ. ಒಮ್ಮೆ ಬಿಡುಗಡೆಯಾದ ನಂತರ, ಇದು ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಫೋಕ್ಸ್‌ವ್ಯಾಗನ್ ಟೈಗೂನ್, ಸ್ಕೋಡಾ ಕುಶಾಕ್, ಮಾರುತಿ ಗ್ರ್ಯಾಂಡ್ ವಿಟಾರಾ, ಟೊಯೋಟಾ ಅರ್ಬನ್ ಕ್ರೂಸರ್ ಹೈರೈಡರ್ ಮತ್ತು ಎಂಜಿ ಆಸ್ಟರ್ ಮುಂತಾದ ಎಸ್‌ಯುವಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ. ಇವೆಲ್ಲವೂ ಸದ್ಯ ಮಿಡ್‌ ಎಸ್‌ಯುವಿ ವಿಭಾಗದಲ್ಲಿ ಸದ್ಯ ಉತ್ತಮ ಮಾರಾಟ ದಾಖಲಿಸುತ್ತಿರುವ ಎಸ್‌ಯುವಿಗಳಾಗಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Most Read Articles

Kannada
English summary
Tata blackbird is coming to overtake hyundai creta with attractive design
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X