ಸುಧಾರಿತ ತಂತ್ರಜ್ಞಾನ ಮತ್ತು ಹೆಚ್ಚು ಮೈಲೇಜ್ ಪ್ರೇರಿತ ಟಾಟಾ ಕರ್ವ್ ಇವಿ ಕಾನ್ಸೆಪ್ಟ್ ಅನಾವರಣ

ದೇಶಿಯ ಮಾರುಕಟ್ಟೆಯಲ್ಲಿನ ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಟಾಟಾ ಮೋಟಾರ್ಸ್ ಕಂಪನಿಯು ತನ್ನ ಕಾನ್ಸೆಪ್ಟ್ ಕರ್ವ್ ಇವಿ ಕೂಪೆ ಎಸ್‌ಯುವಿ ಮಾದರಿಯನ್ನು ಭಾರತದಲ್ಲಿ ಅನಾವರಣಗೊಳಿಸಿದ್ದು, ಹೊಸ ಕಾರು ಮುಂಬರುವ ಕೆಲವೇ ವರ್ಷಗಳಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ.

ಸುಧಾರಿತ ತಂತ್ರಜ್ಞಾನ ಮತ್ತು ಮೈಲೇಜ್ ಹೊಂದಿರುವ ಕರ್ವ್ ಇವಿ ಕಾನ್ಸೆಪ್ಟ್ ಅನಾವರಣ

ಟಾಟಾ ಹೊಸ ಕಾನ್ಸೆಪ್ಟ್ ಕಾರು ಕೂಪೆ ಎಸ್‌ಯುವಿ ವಿನ್ಯಾಸವನ್ನು ಪಡೆದುಕೊಂಡಿದ್ದು, ಇದು ಆಕರ್ಷಕ ಮತ್ತು ಸ್ಪೋರ್ಟಿಯಾಗಿ ಕಾಣುತ್ತದೆ. ಈ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಟಾಟಾ ನಿರ್ಮಾಣದ ಮೊದಲ ಎಲೆಕ್ಟ್ರಿಕ್ ಎಸ್‌ಯುವಿಯಾಗಿ ಬಿಡುಗಡೆಯಾಗಲಿದೆ ಎಂದು ಕಂಪನಿ ತಿಳಿಸಿದ್ದು, ಹೊಸ ಕಾನ್ಸೆಪ್ಟ್ ಮಾದರಿಯು ಎಲೆಕ್ಟ್ರಿಕ್ ಮಾದರಿಯಲ್ಲಿ ಮಾತ್ರವಲ್ಲದೆ ಪೆಟ್ರೋಲ್ ಮಾದರಿಯಲ್ಲೂ ಬಿಡುಗಡೆ ಮಾಡುವ ಸುಳಿವು ನೀಡಿದೆ.

ಸುಧಾರಿತ ತಂತ್ರಜ್ಞಾನ ಮತ್ತು ಮೈಲೇಜ್ ಹೊಂದಿರುವ ಕರ್ವ್ ಇವಿ ಕಾನ್ಸೆಪ್ಟ್ ಅನಾವರಣ

ಹೊಸ ಕಾನ್ಸೆಪ್ಟ್ ಕರ್ವ್ ಇವಿ ಕಾರು ಮಾದರಿಯು ಪ್ರಸ್ತುತ ಮಾರುಕಟ್ಟೆಯಲ್ಲಿ ನೆಕ್ಸಾನ್ ಇವಿ ಮಾದರಿಗಿಂತಲೂ ಉನ್ನತ ಮಾದರಿಯಾಗಿ ಮಾರಾಟಗೊಳ್ಳಲಿದ್ದು, ಸ್ಪೋರ್ಟಿ ಕೂಪೆ ಬಾಡಿ ಶೈಲಿಯು ಹೊಸ ಕಾರಿನ ಪ್ರಮುಖ ಆಕರ್ಷಣೆಯಾಗಿದೆ.

ಸುಧಾರಿತ ತಂತ್ರಜ್ಞಾನ ಮತ್ತು ಮೈಲೇಜ್ ಹೊಂದಿರುವ ಕರ್ವ್ ಇವಿ ಕಾನ್ಸೆಪ್ಟ್ ಅನಾವರಣ

ಹೊಸ ಕರ್ವ್ ಕಾನ್ಸೆಪ್ಟ್ ಮಾದರಿಯನ್ನು ಮೊದಲು ಇವಿ ಮಾದರಿಯಾಗಿ ಮಾರಾಟ ಮಾಡಲಿರುವ ಟಾಟಾ ಮೋಟಾರ್ಸ್ ಕಂಪನಿಯು ಆಸಕ್ತ ಗ್ರಾಹಕರಿಗಾಗಿ ಸಾಮಾನ್ಯ ಮಾದರಿಯಲ್ಲೂ ಪರಿಚಯಿಸುವ ಯೋಜನೆಯಲ್ಲಿದ್ದು, ಹೊಸ ಕಾರಿನ ಅಧಿಕೃತ ಹೆಸರು ಮುಂಬರುವ ದಿನಗಳಲ್ಲಿ ಬಹಿರಂಗವಾಗಲಿದೆ.

ಸುಧಾರಿತ ತಂತ್ರಜ್ಞಾನ ಮತ್ತು ಮೈಲೇಜ್ ಹೊಂದಿರುವ ಕರ್ವ್ ಇವಿ ಕಾನ್ಸೆಪ್ಟ್ ಅನಾವರಣ

ಹೊಸ ಕರ್ವ್ ಇವಿ ಕಾನ್ಸೆಪ್ಟ್ ಮಾದರಿಯನ್ನು ಕಂಪನಿಯು ಸಂಪೂರ್ಣವಾಗಿ ಡಿಜಿಟಲ್ ಡಿಸೈನ್ ಲಾಂಗ್ವೆಜ್ ಆಧರಿಸಿ ಅಭಿವೃದ್ದಿಗೊಳಿಸುತ್ತಿದ್ದು, 2024ರ ವೇಳೆಗೆ ಹೊಸ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

ಸುಧಾರಿತ ತಂತ್ರಜ್ಞಾನ ಮತ್ತು ಮೈಲೇಜ್ ಹೊಂದಿರುವ ಕರ್ವ್ ಇವಿ ಕಾನ್ಸೆಪ್ಟ್ ಅನಾವರಣ

ಕಟಿಂಗ್ ಎಡ್ಜ್ ವಿನ್ಯಾಸದೊಂದಿಗೆ ಸ್ಲಿಕ್ ಡಿಸೈನ್, ಫ್ಲೋಟರಿಂಗ್ ಬಾನೆಟ್, ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್, ಸರಳ ವಿನ್ಯಾಸ ಹೊಂದಿರುವ ಒಳಾಂಗಣ ವಿನ್ಯಾಸ ಮತ್ತು ಸ್ಪೋರ್ಟಿ ಕೂಪೆ ಬಾಡಿ ಶೈಲಿ ಹೊದಿರುವ ಹೊಸ ಕಾರು ಟಾಟಾ ಇತರೆ ಕಾರು ಮಾದರಿಗಿಂತಲೂ ಹೆಚ್ಚಿನ ಮಟ್ಟದ ಮೊದಲು ಉನ್ನತ-ಮಟ್ಟದ ಐಷಾರಾಮಿ ವಿಭಾಗದ ಕಾರುಗಳಲ್ಲಿನ ವೈಶಿಷ್ಟ್ಯತೆಗಳನ್ನು ಹೊಂದಿರಲಿದ್ದು, ಹೊಸ ಕಾರು ಡಿಸೈನ್ ವಿನ್ಯಾಸದ ಪ್ರದರ್ಶನದ ಹೊರತಾಗಿ ಯಾವುದೇ ಅಧಿಕೃತ ಮಾಹಿತಿಗಳನ್ನು ಹಂಚಿಕೊಂಡಿಲ್ಲ.

ಸುಧಾರಿತ ತಂತ್ರಜ್ಞಾನ ಮತ್ತು ಮೈಲೇಜ್ ಹೊಂದಿರುವ ಕರ್ವ್ ಇವಿ ಕಾನ್ಸೆಪ್ಟ್ ಅನಾವರಣ

ಹೊಸ ಕಾರು ಸಂಪೂರ್ಣವಾಗಿ ಹೊಸ ಪ್ಲ್ಯಾಟ್‌ಫಾರ್ಮ್ ಆಧರಿಸಿರುವುದರಿಂದ ಜಿಪ್‌ಟ್ರಾನ್ ತಂತ್ರಜ್ಞಾನ ಹೊಂದಿರುವ ಅತ್ಯುತ್ತಮ ಬ್ಯಾಟರಿ ಪ್ಯಾಕ್ ಪಡೆದುಕೊಳ್ಳುವ ಸಾಧ್ಯತೆಗಳಿದ್ದು, ಹೊಸ ಕಾರು ಪ್ರತಿ ಚಾರ್ಜ್‌ಗೆ ಕನಿಷ್ಠ 450 ಕಿ.ಮೀ ನಿಂದ 500 ಕಿ.ಮೀ ಮೈಲೇಜ್ ಹಿಂದಿರುಗಿಸಬಹುದಾಗಿದೆ.

ಸುಧಾರಿತ ತಂತ್ರಜ್ಞಾನ ಮತ್ತು ಮೈಲೇಜ್ ಹೊಂದಿರುವ ಕರ್ವ್ ಇವಿ ಕಾನ್ಸೆಪ್ಟ್ ಅನಾವರಣ

ಹೀಗಾಗಿ ಹೊಸ ಕಾರು ಮಾದರಿಯು ಟಾಟಾ ಮೋಟಾರ್ಸ್ ಕಂಪನಿಗೆ ಮತ್ತೊಂದು ಹೊರ ತಿರುವು ನೀಡಲಿದ್ದು, ಇವಿ ಮಾರಾಟದಲ್ಲಿ ಸದ್ಯ ಅಗ್ರಸ್ಥಾನದಲ್ಲಿರುವ ಕಂಪನಿಯು ಮುಂದಿನ ಐದು ವರ್ಷಗಳಲ್ಲಿ ಒಟ್ಟು 5 ಹೊಸ ಇವಿ ಕಾರು ಮಾದರಿಗಳನ್ನು ಪರಿಚಯಿಸುವ ಸಿದ್ದತೆಯಲ್ಲಿದೆ.

ಸುಧಾರಿತ ತಂತ್ರಜ್ಞಾನ ಮತ್ತು ಮೈಲೇಜ್ ಹೊಂದಿರುವ ಕರ್ವ್ ಇವಿ ಕಾನ್ಸೆಪ್ಟ್ ಅನಾವರಣ

ಟಾಟಾ ಮೋಟಾರ್ಸ್ ಕಂಪನಿಯು ಸದ್ಯ ನೆಕ್ಸಾನ್ ಇವಿ, ಟಿಗೋರ್ ಇವಿ ನಂತ ಗ್ರಾಹಕರ ಬೇಡಿಕೆಯೆಂತೆ ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಕಾರು ಮಾದರಿಗಳನ್ನು ಬಿಡುಗಡೆ ಮಾಡುವ ಸಿದ್ದತೆಯಲ್ಲಿದ್ದು, ಕಂಪನಿಯು ಇವಿ ವಾಹನಗಳ ಅಭಿವೃದ್ದಿ, ಉತ್ಪಾದನೆ ಮತ್ತು ಮಾರಾಟಕ್ಕಾಗಿ ಪ್ರತ್ಯೇಕ ಪ್ಲ್ಯಾಟ್‌ಫಾರ್ಮ್ ಕೂಡಾ ಆರಂಭಿಸಿದೆ.

ಸುಧಾರಿತ ತಂತ್ರಜ್ಞಾನ ಮತ್ತು ಮೈಲೇಜ್ ಹೊಂದಿರುವ ಕರ್ವ್ ಇವಿ ಕಾನ್ಸೆಪ್ಟ್ ಅನಾವರಣ

ಸದ್ಯ ಮಾರುಕಟ್ಟೆಯಲ್ಲಿರುವ ಇವಿ ಕಾರುಗಳನ್ನು ಸಾಮಾನ್ಯ ಕಾರುಗಳ ಉತ್ಪಾದನಾ ಪ್ಲ್ಯಾಟ್‌ಫಾರ್ಮ್‌ನಲ್ಲಿ ಅಭಿವೃದ್ದಿಪಡಿಸುತ್ತಿರುವ ಕಂಪನಿಯು ಭವಿಷ್ಯದ ಬೃಹತ್ ಯೋಜನೆಗಳಿಗಾಗಿ ಪ್ರತ್ಯೇಕ ನಿಯಂತ್ರಣ ಹೊಂದಿರುವ ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್ (TPEML) ಅಂಗಸಂಸ್ಥೆಯನ್ನು ಸಹ ಆರಂಭಿಸಿದೆ.

ಸುಧಾರಿತ ತಂತ್ರಜ್ಞಾನ ಮತ್ತು ಮೈಲೇಜ್ ಹೊಂದಿರುವ ಕರ್ವ್ ಇವಿ ಕಾನ್ಸೆಪ್ಟ್ ಅನಾವರಣ

ಟಾಟಾ ಮೋಟಾರ್ಸ್ ಕಂಪನಿಯ ಹೊಸ ಅಂಗಸಂಸ್ಥೆಯನ್ನು ರೂ. 700 ಕೋಟಿ ರೂಪಾಯಿ ಆರಂಭಿಕ ಹೂಡಿಕೆಯೊಂದಿಗೆ ಆರಂಭಗೊಳಿಸಿದ್ದು, ಪ್ರತ್ಯೇಕ ಪ್ಲ್ಯಾಟ್‌ಫಾರ್ಮ ಮೂಲಕ ಇವಿ ವಾಹನಗಳ ಮೇಲೆ ಹೆಚ್ಚಿನ ಗಮನಹರಿಸಲು ನಿರ್ಧರಿಸಿದೆ.

ಸುಧಾರಿತ ತಂತ್ರಜ್ಞಾನ ಮತ್ತು ಮೈಲೇಜ್ ಹೊಂದಿರುವ ಕರ್ವ್ ಇವಿ ಕಾನ್ಸೆಪ್ಟ್ ಅನಾವರಣ

ಎಲೆಕ್ಟ್ರಿಕ್ ವಾಹನಗಳ ಅಭಿವೃದ್ದಿಗಾಗಿ ಸದ್ಯ ಐಸಿ ಎಂಜಿನ್ ಪರಿವರ್ತಿತ ಪ್ಲ್ಯಾಟ್‌ಫಾರ್ಮ್ ಬಳಸುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ಭವಿಷ್ಯದ ಇವಿ ಮಾದರಿಗಳಿಗಾಗಿ ಸಿಗ್ಮಾ ಆರ್ಕಿಟೆಕ್ಚರ್ ಮತ್ತು ಸ್ಕೇಟ್‌ಬೋರ್ಡ್ ಪ್ಲ್ಯಾಟ್‌ಫಾರ್ಮ್ ತೆರೆಯುತ್ತಿದೆ.

ಸುಧಾರಿತ ತಂತ್ರಜ್ಞಾನ ಮತ್ತು ಮೈಲೇಜ್ ಹೊಂದಿರುವ ಕರ್ವ್ ಇವಿ ಕಾನ್ಸೆಪ್ಟ್ ಅನಾವರಣ

ಐಸಿ ಎಂಜಿನ್ ಪರಿವರ್ತಿತ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿಯೇ ಟಿಗೋರ್ ಇವಿ, ನೆಕ್ಸಾನ್ ಇವಿ ಮಾದರಿಗಳನ್ನು ಅಭಿವೃದ್ದಿಗೊಳಿಸುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ಸಿಗ್ಮಾ ಪ್ಲಾಟ್‌ಫಾರ್ಮ್ ಮೂಲಕ ಸಂಪೂರ್ಣವಾಗಿ ಇವಿ ವಾಹನಗಳ ಉತ್ಪಾದನೆ ಮೀಸಲಿರಿಸಿದೆ.

ಸುಧಾರಿತ ತಂತ್ರಜ್ಞಾನ ಮತ್ತು ಮೈಲೇಜ್ ಹೊಂದಿರುವ ಕರ್ವ್ ಇವಿ ಕಾನ್ಸೆಪ್ಟ್ ಅನಾವರಣ

ಸಿಗ್ಮಾ ಪ್ಲಾಟ್‌ಫಾರ್ಮ್ ಮೂಲಕ ಮೊದಲ ಇವಿ ಕಾರು ಮಾದರಿಯಾಗಿ ಟಾಟಾ ಮೋಟಾರ್ಸ್ ಕಂಪನಿಯು ತನ್ನ ಬಹುನೀರಿಕ್ಷಿತ ಸಿಯೆರಾ ಇವಿ ಸೇರಿದಂತೆ ಪ್ರಮುಖ ಇವಿ ಕಾರು ಮಾದರಿಯನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದ್ದು, ಸಿಗ್ಮಾ ಪ್ಲಾಟ್‌ಫಾರ್ಮ್ ಅಡಿಯಲ್ಲಿ ನಿರ್ಮಾಣವಾಗುವ ಇವಿ ಕಾರುಗಳು ಐಸಿ ಎಂಜಿನ್ ಪರಿವರ್ತಿತ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿ ಇವಿ ಕಾರುಗಳಿಂತಲೂ ಹೆಚ್ಚು ಹಗುರ ಮತ್ತು ಹೆಚ್ಚಿನ ಕಾರ್ಯಕ್ಷಮತೆ ಪಡೆದುಕೊಂಡಿವೆ.

ಸುಧಾರಿತ ತಂತ್ರಜ್ಞಾನ ಮತ್ತು ಮೈಲೇಜ್ ಹೊಂದಿರುವ ಕರ್ವ್ ಇವಿ ಕಾನ್ಸೆಪ್ಟ್ ಅನಾವರಣ

ಹಾಗೆಯೇ ಕಂಪನಿಯ ಮತ್ತೊಂದು ಸ್ಕೇಟ್‌ಬೋರ್ಡ್ ಪ್ಲ್ಯಾಟ್‌ಫಾರ್ಮ್ ಅಡಿ ಅಭಿವೃದ್ದಿಗೊಳ್ಳಲಿರುವ ಇವಿ ಕಾರುಗಳು ಇನ್ನು ಹೆಚ್ಚಿನ ಮಟ್ಟದ ತಂತ್ರಜ್ಞಾನ ಪ್ರೇರಣೆ ಹೊಂದಿರಲಿದ್ದು, ಸದ್ಯಕ್ಕೆ ಐಸಿ ಎಂಜಿನ್ ಪರಿವರ್ತಿತ ಪ್ಲ್ಯಾಟ್‌ಫಾರ್ಮ್ ನಿಂದ ಸಿಗ್ಮಾ ಪ್ಲಾಟ್‌ಫಾರ್ಮ್‌ಗೆ ಬದಲಾಗುತ್ತಿರುವ ಕಂಪನಿಯು ಸ್ಕೇಟ್‌ಬೋರ್ಡ್ ಪ್ಲ್ಯಾಟ್‌ಫಾರ್ಮ್ ಅನ್ನು ಇನ್ನು ಕೆಲವು ವರ್ಷಗಳ ನಂತರ ಬಳಕೆಗೆ ಯೋಜನೆ ರೂಪಿಸಿದೆ.

ಸುಧಾರಿತ ತಂತ್ರಜ್ಞಾನ ಮತ್ತು ಮೈಲೇಜ್ ಹೊಂದಿರುವ ಕರ್ವ್ ಇವಿ ಕಾನ್ಸೆಪ್ಟ್ ಅನಾವರಣ

ಪ್ರಸ್ತುತ ಬಳಕೆಯಲ್ಲಿರುವ ಅಲ್ಪಾ ಪ್ಲ್ಯಾಟ್‌ಫಾರ್ಮ್‌ನೊಂದಿಗೆ ಇವಿ ಮಾದರಿಗಾಗಿ ಬದಲಾವಣೆಗೊಂಡಿರುವ ಸಿಗ್ಮಾ ಪ್ಯೂರ್ ಇವಿ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿ ಮೊದಲ ಕಾರು ಮಾದರಿಯಾಗಿ ಸಿಯೆರಾ ಇವಿ ನಂತರ ಇವಿ ಕಾರುಗಳು ಬಿಡುಗಡೆಯಾಗುತ್ತಿದ್ದು, ಹೆಚ್ಚು ಕಾರ್ಯಕ್ಷಮತೆ ಹೊಂದಿರುವ ಎಲೆಕ್ಟ್ರಿಕ್ ಮೋಟಾರ್, ಬ್ಯಾಟರಿ ಪ್ಯಾಕ್ ಮತ್ತು ಬಲಿಷ್ಠವಾದ ವಿನ್ಯಾಸವನ್ನು ಪಡೆದುಕೊಳ್ಳಲಿದೆ.

ಸುಧಾರಿತ ತಂತ್ರಜ್ಞಾನ ಮತ್ತು ಮೈಲೇಜ್ ಹೊಂದಿರುವ ಕರ್ವ್ ಇವಿ ಕಾನ್ಸೆಪ್ಟ್ ಅನಾವರಣ

ಜೊತೆಗೆ ಹೊಸ ಕಾರಿನಲ್ಲಿ ಸೂಪರ್ ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನ ಸುಧಾರಣೆಗೊಳಿಸುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು 15 ನಿಮಿಷ ಚಾರ್ಜ್ ಮೂಲಕ ಶೇ.80 ರಷ್ಟು ಚಾರ್ಜ್ ಮಾಡಬಹುದಾದ ಸೌಲಭ್ಯವನ್ನು ಈ ಕಾರಿನ ಅಳವಡಿಸುತ್ತಿದೆ.

Most Read Articles

Kannada
English summary
Tata curvv electric suv concept unveiled in india features details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X