ಹ್ಯಾರಿಯರ್ ಎಸ್‌ಯುವಿಯಲ್ಲಿ ಎಕ್ಸ್ಎಂಎಎಸ್ ಮತ್ತು ಎಕ್ಸ್ಎಂಎಸ್ ವೆರಿಯೆಂಟ್ ಪರಿಚಯಿಸಿದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಕಂಪನಿಯು ತನ್ನ ಜನಪ್ರಿಯ ಹ್ಯಾರಿಯರ್ ಎಸ್‌ಯುವಿಯಲ್ಲಿ ಹೊಸದಾಗಿ ಎಕ್ಸ್ಎಂಎಎಸ್ ಮತ್ತು ಎಕ್ಸ್ಎಂಎಸ್ ವೆರಿಯೆಂಟ್ ಪರಿಚಯಿಸಿದ್ದು, ಹೊಸ ವೆರಿಯೆಂಟ್‌ಗಳು ಎಕ್ಸ್‌ಶೋರೂಂ ಪ್ರಕಾರ ರೂ. 17.20 ಲಕ್ಷ ಆರಂಭಿಕ ಬೆಲೆ ಹೊಂದಿದೆ.

ಹ್ಯಾರಿಯರ್ ಎಸ್‌ಯುವಿಯಲ್ಲಿ ಎಕ್ಸ್ಎಂಎಎಸ್ ಮತ್ತು ಎಕ್ಸ್ಎಂಎಸ್ ವೆರಿಯೆಂಟ್ ಪರಿಚಯಿಸಿದ ಟಾಟಾ ಮೋಟಾರ್ಸ್

ಹೊಸ ಕಾರುಗಳಲ್ಲಿ ನಿರಂತರವಾಗಿ ಬದಲಾವಣೆಗಳನ್ನು ಪರಿಚಯಿಸುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ಹ್ಯಾರಿಯರ್ ಮಾದರಿಯಲ್ಲಿ ಹೊಸದಾಗಿ ಎಕ್ಸ್ಎಂಎಎಸ್ ಮತ್ತು ಎಕ್ಸ್ಎಂಎಸ್ ವೆರಿಯೆಂಟ್ ಬಿಡುಗಡೆ ಮಾಡಿದ್ದು, ಎಕ್ಸ್ಎಂಎಸ್ ವೆರಿಯೆಂಟ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದ್ದರೆ ಎಕ್ಸ್ಎಂಎಎಸ್ ಮಾದರಿಯು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದೆ.

ಹ್ಯಾರಿಯರ್ ಎಸ್‌ಯುವಿಯಲ್ಲಿ ಎಕ್ಸ್ಎಂಎಎಸ್ ಮತ್ತು ಎಕ್ಸ್ಎಂಎಸ್ ವೆರಿಯೆಂಟ್ ಪರಿಚಯಿಸಿದ ಟಾಟಾ ಮೋಟಾರ್ಸ್

ಎಕ್ಸ್ಎಂಎಸ್ ಮ್ಯಾನುವಲ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ 17.20 ಲಕ್ಷ ಬೆಲೆ ಹೊಂದಿದ್ದರೆ ಎಕ್ಸ್ಎಂಎಎಸ್ ಆಟೋಮ್ಯಾಟಿಕ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 18.50 ಲಕ್ಷ ಬೆಲೆ ಹೊಂದಿದೆ.

ಹ್ಯಾರಿಯರ್ ಎಸ್‌ಯುವಿಯಲ್ಲಿ ಎಕ್ಸ್ಎಂಎಎಸ್ ಮತ್ತು ಎಕ್ಸ್ಎಂಎಸ್ ವೆರಿಯೆಂಟ್ ಪರಿಚಯಿಸಿದ ಟಾಟಾ ಮೋಟಾರ್ಸ್

ಹೊಸ ವೆರಿಯೆಂಟ್‌ಗಳಲ್ಲಿ ಕಂಪನಿಯು ಹೊಸದಾಗಿ ಹಲವಾರು ಪ್ರೀಮಿಯಂ ಫೀಚರ್ಸ್ ಜೋಡಣೆ ಮಾಡಿದ್ದು, ಎಕ್ಸ್ಎಂಎಎಸ್ ಮತ್ತು ಎಕ್ಸ್ಎಂಎಸ್ ವೆರಿಯೆಂಟ್ ಖರೀದಿಸುವ ಗ್ರಾಹಕರಿಗೆ ಪ್ಯಾನರೊಮಿಕ್ ಸನ್‌ರೂಫ್, ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಆ್ಯಪಲ್ ಕಾರ್‌ಪ್ಲೇ ಮತ್ತು ಅಂಡ್ರಾಯಿಡ್ ಆಟೋ, 8 ಸ್ಪೀಕರ್ಸ್ ಸೌಂಡ್ ಸಿಸ್ಟಂ ಮತ್ತು ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ ಸೌಲಭ್ಯಗಳನ್ನು ನೀಡಲಾಗಿದೆ.

ಹ್ಯಾರಿಯರ್ ಎಸ್‌ಯುವಿಯಲ್ಲಿ ಎಕ್ಸ್ಎಂಎಎಸ್ ಮತ್ತು ಎಕ್ಸ್ಎಂಎಸ್ ವೆರಿಯೆಂಟ್ ಪರಿಚಯಿಸಿದ ಟಾಟಾ ಮೋಟಾರ್ಸ್

ಹೊಸ ವೆರಿಯೆಂಟ್‌ಗಳಲ್ಲಿ ಸ್ಟ್ಯಾಂಡರ್ಡ್ ಮಾದರಿಯಲ್ಲಿನ ತಾಂತ್ರಿಕ ಸೌಲಭ್ಯಗಳ ಜೊತೆಗೆ ಹೊಸ ಫೀಚರ್ಸ್ ನೀಡಲಾದಿದ್ದು, ಸನ್‌ರೂಫ್ ಬಯಸುತ್ತಿದ್ದ ಗ್ರಾಹಕರಿಗೆ ಇದೀಗ ಈ ಹಿಂದೆ ಈ ಸೌಲಭ್ಯ ಹೊಂದಿದ್ದ ಎಕ್ಸ್‌ಟಿ ಪ್ಲಸ್ ಮಾದರಿಗಿಂತಲೂ ರೂ. 1 ಲಕ್ಷಕ್ಕಿಂತ ಕಡಿಮೆ ಬೆಲೆಗೆ ಲಭ್ಯವಾಗಲಿದೆ.

ಹ್ಯಾರಿಯರ್ ಎಸ್‌ಯುವಿಯಲ್ಲಿ ಎಕ್ಸ್ಎಂಎಎಸ್ ಮತ್ತು ಎಕ್ಸ್ಎಂಎಸ್ ವೆರಿಯೆಂಟ್ ಪರಿಚಯಿಸಿದ ಟಾಟಾ ಮೋಟಾರ್ಸ್

ಪ್ರಮುಖ ಪ್ರೀಮಿಯಂ ಫೀಚರ್ಸ್ ಹೊರತಾಗಿ ಎಕ್ಸ್ಎಂಎಎಸ್ ಮತ್ತು ಎಕ್ಸ್ಎಂಎಸ್ ವೆರಿಯೆಂಟ್‌ಗಳು ಸಾಮಾನ್ಯ ಮಾದರಿಯಲ್ಲಿನ ವೆರಿಯೆಂಟ್ ಆಧರಿಸಿ ತಾಂತ್ರಿಕ ಸೌಲಭ್ಯಗಳನ್ನು ಹೊಂದಿದ್ದು, ಹ್ಯಾರಿಯರ್ ಕಾರು ಮಾದರಿಯು ಸದ್ಯ ಎಕ್ಸ್ಇ, ಎಕ್ಸ್ಎಂ,, ಎಕ್ಸ್‌ಟಿ, ಎಕ್ಸ್‌ಜೆಡ್ ವೆರಿಯೆಂಟ್‌ಗಳೊಂದಿಗೆ ಮಾರಾಟಗೊಳ್ಳುತ್ತಿದೆ.

ಹ್ಯಾರಿಯರ್ ಎಸ್‌ಯುವಿಯಲ್ಲಿ ಎಕ್ಸ್ಎಂಎಎಸ್ ಮತ್ತು ಎಕ್ಸ್ಎಂಎಸ್ ವೆರಿಯೆಂಟ್ ಪರಿಚಯಿಸಿದ ಟಾಟಾ ಮೋಟಾರ್ಸ್

ಪ್ರಮುಖ ವೆರಿಯೆಂಟ್‌ಗಳೊಂದಿಗ ಡಾರ್ಕ್, ಕಾಜಿರಂಗ, ಜೆಟ್ ವಿಶೇಷ ಆವೃತ್ತಿಗಳಲ್ಲಿ ಖರೀದಿಗೆ ಲಭ್ಯವಿರುವ ಹ್ಯಾರಿಯರ್ ಕಾರು ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 14.70 ಲಕ್ಷದಿಂದ ಆರಂಭಿಕವಾಗಿ ಟಾಪ್ ಎಂಡ್ ಮಾದರಿಯು ರೂ. 22.20 ಲಕ್ಷ ಬೆಲೆ ಹೊಂದಿದೆ.

ಹ್ಯಾರಿಯರ್ ಎಸ್‌ಯುವಿಯಲ್ಲಿ ಎಕ್ಸ್ಎಂಎಎಸ್ ಮತ್ತು ಎಕ್ಸ್ಎಂಎಸ್ ವೆರಿಯೆಂಟ್ ಪರಿಚಯಿಸಿದ ಟಾಟಾ ಮೋಟಾರ್ಸ್

2019ರ ಆರಂಭದಲ್ಲಿ ಬಿಎಸ್-4 ಮಾದರಿಯೊಂದಿಗೆ ಬಿಡುಗಡೆಯಾಗಿದ್ದ ಹ್ಯಾರಿಯರ್ ಕಾರು ಮಾದರಿಯು 2020ರ ಮಧ್ಯಂತರದಲ್ಲಿ ಬಿಎಸ್-6 ಆವೃತ್ತಿಯೊಂದಿಗೆ ಉನ್ನತೀಕರಣಗೊಂಡಿತ್ತು. ಬಿಎಸ್-4 ಮಾದರಿಯೊಂದಿಗೆ ಕನಿಷ್ಠ ಬೇಡಿಕೆ ಹೊಂದಿದ್ದ ಹ್ಯಾರಿಯರ್ ಕಾರು ಮಾದರಿಯು ಬಿಎಸ್-6 ಮಾದರಿಯ ಬಿಡುಗಡೆಯ ನಂತರ ಸಾಕಷ್ಟು ಬೇಡಿಕೆ ಪಡೆದುಕೊಳ್ಳುತ್ತಿದೆ.

ಹ್ಯಾರಿಯರ್ ಎಸ್‌ಯುವಿಯಲ್ಲಿ ಎಕ್ಸ್ಎಂಎಎಸ್ ಮತ್ತು ಎಕ್ಸ್ಎಂಎಸ್ ವೆರಿಯೆಂಟ್ ಪರಿಚಯಿಸಿದ ಟಾಟಾ ಮೋಟಾರ್ಸ್

ಬಿಎಸ್-4 ಮಾದರಿಯೊಂದಿಗೆ ಕೇವಲ 17 ಸಾವಿರ ಯುನಿಟ್ ಮಾರಾಟಗೊಂಡಿದ್ದ ಹ್ಯಾರಿಯರ್ ಕಾರು ಮಾದರಿಯು ಬಿಎಸ್-6 ಎಂಜಿನ್‌ನೊಂದಿಗೆ ಉನ್ನತೀಕರಣಗೊಂಡ ನಂತರ ಸುಮಾರು 50 ಸಾವಿರಕ್ಕೂ ಹೆಚ್ಚು ಯುನಿಟ್ ಮಾರಾಟಗೊಂಡಿದೆ. ಇದೀಗ 2022ರ ಮಾದರಿಯಲ್ಲಿ ಮತ್ತಷ್ಟು ಹೊಸ ಬದಲಾವಣೆಗಳೊಂದಿಗೆ ಗ್ರಾಹಕರನ್ನು ಸೆಳೆಯಲು ಸಜ್ಜುಗೊಳ್ಳುತ್ತಿದ್ದು, ಹೊಸ ಬದಲಾವಣೆ ತಕ್ಕಂತೆ ತುಸು ದುಬಾರಿಯಾಗಲಿದೆ.

ಹ್ಯಾರಿಯರ್ ಎಸ್‌ಯುವಿಯಲ್ಲಿ ಎಕ್ಸ್ಎಂಎಎಸ್ ಮತ್ತು ಎಕ್ಸ್ಎಂಎಸ್ ವೆರಿಯೆಂಟ್ ಪರಿಚಯಿಸಿದ ಟಾಟಾ ಮೋಟಾರ್ಸ್

ಇದರೊಂದಿಗೆ ಕಂಪನಿಯು ಮುಂಬರುವ ದಿನಗಳಲ್ಲಿ 2022ರ ಮಾದರಿಗಾಗಿ ಹೆಚ್ಚುವರಿ ಬಣ್ಣಗಳನ್ನು ನೀಡಲು ಯೋಜಿಸಿದ್ದು, ಹೊಸ ಮಾದರಿಗಳ ಮೂಲಕ ಟಾಟಾ ಕಂಪನಿಯು ಪ್ರತಿಸ್ಪರ್ಧಿ ಕಾರು ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡುವ ತವಕದಲ್ಲಿದೆ.

ಹ್ಯಾರಿಯರ್ ಎಸ್‌ಯುವಿಯಲ್ಲಿ ಎಕ್ಸ್ಎಂಎಎಸ್ ಮತ್ತು ಎಕ್ಸ್ಎಂಎಸ್ ವೆರಿಯೆಂಟ್ ಪರಿಚಯಿಸಿದ ಟಾಟಾ ಮೋಟಾರ್ಸ್

ಟಾಟಾ ಕಂಪನಿಯು ಸದ್ಯ ಹ್ಯಾರಿಯರ್ ಎಸ್‌ಯುವಿಯಲ್ಲಿ ಡೀಸೆಲ್ ಎಂಜಿನ್ ಆಯ್ಕೆ ಮಾತ್ರ ನೀಡುತ್ತಿದ್ದು, ಹೊಸ ಕಾರಗಳಲ್ಲಿರುವ 2.0-ಲೀಟರ್(1,956 ಸಿಸಿ) 4 ಸಿಲಿಂಡರ್, ಕ್ರೆಯೊಟೆಕ್ ಡೀಸೆಲ್ ಎಂಜಿನ್ ಮಾದರಿಯಲ್ಲಿ 6 ಸ್ಪೀಡ್ ಮ್ಯಾನುವಲ್ ಮತ್ತು 6 ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಆಯ್ಕೆ ಹೊಂದಿವೆ.

ಹ್ಯಾರಿಯರ್ ಎಸ್‌ಯುವಿಯಲ್ಲಿ ಎಕ್ಸ್ಎಂಎಎಸ್ ಮತ್ತು ಎಕ್ಸ್ಎಂಎಸ್ ವೆರಿಯೆಂಟ್ ಪರಿಚಯಿಸಿದ ಟಾಟಾ ಮೋಟಾರ್ಸ್

ಫ್ರಂಟ್ ವೀಲ್ಹ್ ಡ್ರೈವ್ ಸಿಸ್ಟಂನೊಂದಿಗೆ 168-ಬಿಎಚ್‌ಪಿ ಮತ್ತು 350-ಎನ್ಎಂ ಟಾರ್ಕ್ ಉತ್ಪಾದನಾ ಗುಣ ಹೊಂದಿದ್ದು, ಡೀಸೆಲ್ ಕಾರುಗಳ ಮೇಲೆ ಹೆಚ್ಚಿನ ನಿರ್ಬಂಧಗಳನ್ನು ವಿಧಿಸುತ್ತಿರುವ ಹಿನ್ನಲೆಯಲ್ಲಿ ಹ್ಯಾರಿಯರ್ ಮಾದರಿಯು ಶೀಘ್ರದಲ್ಲಿಯೇ ಪೆಟ್ರೋಲ್ ಮಾದರಿಯಲ್ಲೂ ಬಿಡುಗಡೆಯಾಗಲಿದೆ.

ಹ್ಯಾರಿಯರ್ ಎಸ್‌ಯುವಿಯಲ್ಲಿ ಎಕ್ಸ್ಎಂಎಎಸ್ ಮತ್ತು ಎಕ್ಸ್ಎಂಎಸ್ ವೆರಿಯೆಂಟ್ ಪರಿಚಯಿಸಿದ ಟಾಟಾ ಮೋಟಾರ್ಸ್

ಡೀಸೆಲ್ ಎಂಜಿನ್ ಮಾದರಿಯಲ್ಲೇ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಹೊಂದಿರುವ ಹ್ಯಾರಿಯರ್ ಕಾರು ಶೀಘ್ರದಲ್ಲೇ ಪೆಟ್ರೋಲ್ ಮಾದರಿಯನ್ನು ಸಹ ಪಡೆದುಕೊಳ್ಳಲಿದ್ದು, ಮಧ್ಯಮ ಕ್ರಮಾಂಕದ ಎಸ್‌ಯುವಿ ಕಾರುಗಳಲ್ಲೇ ಬಲಿಷ್ಠ ಕಾರು ಮಾದರಿಯಾಗಿದೆ.

ಹ್ಯಾರಿಯರ್ ಎಸ್‌ಯುವಿಯಲ್ಲಿ ಎಕ್ಸ್ಎಂಎಎಸ್ ಮತ್ತು ಎಕ್ಸ್ಎಂಎಸ್ ವೆರಿಯೆಂಟ್ ಪರಿಚಯಿಸಿದ ಟಾಟಾ ಮೋಟಾರ್ಸ್

ಹ್ಯಾರಿಯರ್ ಫೇಸ್‌ಲಿಫ್ಟ್ ಆವೃತ್ತಿಯು ಈ ಬಾರಿ ಹಲವಾರು ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು, ಹೊಸ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಸೇರಿದಂತೆ ಹಲವಾರು ಬದಲಾವಣೆಗಳನ್ನು ಪಡೆದುಕೊಂಡಿದೆ.

ಹ್ಯಾರಿಯರ್ ಎಸ್‌ಯುವಿಯಲ್ಲಿ ಎಕ್ಸ್ಎಂಎಎಸ್ ಮತ್ತು ಎಕ್ಸ್ಎಂಎಸ್ ವೆರಿಯೆಂಟ್ ಪರಿಚಯಿಸಿದ ಟಾಟಾ ಮೋಟಾರ್ಸ್

ಜೊತೆಗೆ ಪ್ರೀಮಿಯಂ ಫೀಚರ್ಸ್‌ಗಳಿಂದಾಗಿ ಹೊಸ ಕಾರಿನ ಬೆಲೆಯು ತುಸು ದುಬಾರಿಯಾಗಿದ್ದರೂ ಸಹ ಪ್ರೀಮಿಯಂ ಫೀಚರ್ಸ್‌ಗಳು ಫೇಸ್‌ಲಿಫ್ಟ್ ಕಾರಿಗೆ ಮತ್ತಷ್ಟು ಬಲಿಷ್ಠತೆ ನೀಡಲಿದ್ದು, ಎಂಜಿನ್ ಪರ್ಫಾಮೆನ್ಸ್‌ನಲ್ಲೂ ಸಾಕಷ್ಟು ಸುಧಾರಣೆ ತಂದಿರುವುದು ಮಾಲಿನ್ಯ ತಡೆಗೆ ಸಹಕಾರಿಯಾಗಿದೆ.

Most Read Articles

Kannada
English summary
Tata harrier new xmas and xms variants launched
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X