ಟಿಯಾಗೊ NRG ವಾರ್ಷಿಕೋತ್ಸವ ಸಲುವಾಗಿ ಹೊಸ XT ರೂಪಾಂತರ ಬಿಡುಗಡೆ ಮಾಡಿದ ಟಾಟಾ

ಭಾರತದ ಜನಪ್ರಿಯ ಕಾರು ತಯಾರಕ ಕಂಪನಿ ಟಾಟಾ ಮೋಟಾರ್ಸ್ ಭಾರತದಲ್ಲಿ ಹೊಸ Tiago NRG XT ಅನ್ನು ಬಿಡುಗಡೆ ಮಾಡಿದೆ. ಕಂಪನಿಯು Tiago NRGಯ ಮೊದಲ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಸಲುವಾಗಿ ಹೊಸ Tiago NRG XT ರೂಪಾಂತರವನ್ನು ಬಿಡುಗಡೆ ಮಾಡಲಾಗಿದೆ.

ಟಿಯಾಗೊ NRG ವಾರ್ಷಿಕೋತ್ಸವ ಸಲುವಾಗಿ ಹೊಸ XT ರೂಪಾಂತರ ಬಿಡುಗಡೆ ಮಾಡಿದ ಟಾಟಾ

ಟಾಟಾ Tiago NRG XT ರೂಪಾಂತರದ ಬೆಲೆ 6.42 ಲಕ್ಷ ರೂ. ಇದ್ದು ಈ ರೂಪಾಂತರದ ಬಿಡುಗಡೆಯೊಂದಿಗೆ, Tiago NRG ಎಲ್ಲಾ Tiago ಪೆಟ್ರೋಲ್ ಮಾದರಿಗಳ ಮಾರಾಟದಲ್ಲಿ ಶೇಕಡಾ 15 ರಷ್ಟು ಕೊಡುಗೆಯನ್ನು ನೀಡುತ್ತಿದೆ. ಈ ಮೂಲಕ XT ಮತ್ತು XZ ಎಂಬ ಎರಡು ರೂಪಾಂತರಗಳಿಗೂ ಈ ಕೊಡುಗೆ ಅನ್ವಯವಾಗಲಿದೆ.

ಟಿಯಾಗೊ NRG ವಾರ್ಷಿಕೋತ್ಸವ ಸಲುವಾಗಿ ಹೊಸ XT ರೂಪಾಂತರ ಬಿಡುಗಡೆ ಮಾಡಿದ ಟಾಟಾ

ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಲಿಮಿಟೆಡ್‌ನ ಸೇಲ್ಸ್, ಮಾರ್ಕೆಟಿಂಗ್ ಮತ್ತು ಕಸ್ಟಮರ್ ಕೇರ್‌ನ ಉಪಾಧ್ಯಕ್ಷ ರಾಜನ್ ಅಂಬಾ, "ಟಿಯಾಗೊ ಎನ್‌ಆರ್‌ಜಿ ಪ್ರಾರಂಭವಾದಾಗಿನಿಂದ ನಮ್ಮ ಗ್ರಾಹಕರ ಕಲ್ಪನೆಯನ್ನು ಸೆಳೆಯುತ್ತಿದೆ. ಉತ್ತಮ ಕೊಡುಗೆ ನೀಡುವ ಆದ್ಯತೆಯ ಹ್ಯಾಚ್‌ಬ್ಯಾಕ್ ಇದಾಗಿದ್ದು, ಮುಂಬರಲಿರುವ ಹಬ್ಬಗಳನ್ನು ಪ್ರಾರಂಭಿಸಲು, ನಮ್ಮ ಗ್ರಾಹಕರಿಗೆ Tiago XT NRG ಅನ್ನು ಪರಿಚಯಿಸಲು ನಾವು ಉತ್ಸುಕರಾಗಿದ್ದೇವೆ.

ಟಿಯಾಗೊ NRG ವಾರ್ಷಿಕೋತ್ಸವ ಸಲುವಾಗಿ ಹೊಸ XT ರೂಪಾಂತರ ಬಿಡುಗಡೆ ಮಾಡಿದ ಟಾಟಾ

ಆಕರ್ಷಕ ಬೆಲೆಯೊಂದಿಗೆ ಈ ರೂಪಾಂತರವನ್ನು ಉತ್ತಮವಾಗಿ ಪ್ಯಾಕ್ ಮಾಡಲ್ಪಟ್ಟಿದ್ದು, ಗ್ರಾಹಕರನ್ನು ಹೆಚ್ಚಿಸಿಕೊಳ್ಳುವ ಗುರಿಯನ್ನು ಹೊಂದಿದ್ದೇವೆ. ಟಾಪ್ XT ರೂಪಾಂತರದ ಸೇರ್ಪಡೆಯು NRG ಮತ್ತು ಒಟ್ಟಾರೆ Tiago ಪೋರ್ಟ್‌ಫೋಲಿಯೊವನ್ನು ಮತ್ತಷ್ಟು ಬಲಪಡಿಸುತ್ತದೆ. ಅಲ್ಲದೇ ಮುಂದಿನ ದಿನಗಳಲ್ಲಿ ಮಾರಾಟದ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ ಎಂಬ ನಿರೀಕ್ಷೆಯಿದೆ.

ಟಿಯಾಗೊ NRG ವಾರ್ಷಿಕೋತ್ಸವ ಸಲುವಾಗಿ ಹೊಸ XT ರೂಪಾಂತರ ಬಿಡುಗಡೆ ಮಾಡಿದ ಟಾಟಾ

ಹೊಸ ಟಾಟಾ ಟಿಯಾಗೊ ಎನ್‌ಆರ್‌ಜಿ ಎಕ್ಸ್‌ಟಿ, ಹೊಸ 14-ಇಂಚಿನ ಹೈಪರ್‌ಸ್ಟೈಲ್ ವೀಲ್‌ಗಳು, ಹರ್ಮನ್‌ನಿಂದ 3.5-ಇಂಚಿನ ಇನ್ಫೋಟೈನ್‌ಮೆಂಟ್ ಸ್ಕ್ರೀನ್, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್‌ಗಳು, ಎತ್ತರ ಹೊಂದಾಣಿಕೆಯ ಡ್ರೈವರ್ ಸೀಟ್ ಮತ್ತು ಫ್ರಂಟ್ ಫಾಗ್ ಲ್ಯಾಂಪ್‌ಗಳನ್ನು ಒಳಗೊಂಡಂತೆ ಹಲವಾರು ವೈಶಿಷ್ಟ್ಯಗಳನ್ನು ಪಡೆಯುತ್ತದೆ.

ಟಿಯಾಗೊ NRG ವಾರ್ಷಿಕೋತ್ಸವ ಸಲುವಾಗಿ ಹೊಸ XT ರೂಪಾಂತರ ಬಿಡುಗಡೆ ಮಾಡಿದ ಟಾಟಾ

ಹೊಸ ಟಾಟಾ ಟಿಯಾಗೊ ಎನ್‌ಆರ್‌ಜಿಯು ಟಿಯಾಗೊ ಹ್ಯಾಚ್‌ಬ್ಯಾಕ್‌ನ ಸಾಮಾನ್ಯ ಆವೃತ್ತಿಗಳಿಂದ ಎನ್‌ಆರ್‌ಜಿ ರೂಪಾಂತರಗಳನ್ನು ಪ್ರತ್ಯೇಕಿಸಲು ಸಹಾಯ ಮಾಡುವ ವಿನ್ಯಾಸ ಅಂಶಗಳನ್ನು ಸಹ ಪಡೆಯುತ್ತದೆ. ಈ ಅಂಶಗಳಲ್ಲಿ ಒರಟಾದ ಪ್ಲಾಸ್ಟಿಕ್ ಬಾಡಿ ಕ್ಲಾಡಿಂಗ್, ರೂಫ್ ರೈಲ್‌ಗಳನ್ನು ಹೊಂದಿರುವ ಕಪ್ಪು ಛಾವಣಿ, ಬ್ಲಾಕ್ ಇಂಟೀರಿಯರ್ ಮತ್ತು 181mm ರೈಡ್ ಎತ್ತರವು Tiago NRG ಗೆ ಹೆಚ್ಚು SUV ವಿನ್ಯಾಸವನ್ನು ನೀಡುತ್ತದೆ.

ಟಿಯಾಗೊ NRG ವಾರ್ಷಿಕೋತ್ಸವ ಸಲುವಾಗಿ ಹೊಸ XT ರೂಪಾಂತರ ಬಿಡುಗಡೆ ಮಾಡಿದ ಟಾಟಾ

ರೈಡ್ ಎತ್ತರ ಮತ್ತು ಹೆಚ್ಚುವರಿ 37mm ಉದ್ದವನ್ನು ಹೊರತುಪಡಿಸಿ, ಸಾಮಾನ್ಯ Tiago ಹ್ಯಾಚ್‌ಗೆ ಹೋಲಿಸಿದರೆ Tiago NRG ಯಾಂತ್ರಿಕವಾಗಿ ಯಾವುದೇ ಬದಲಾವಣೆಗಳನ್ನು ಪಡೆದುಕೊಂಡಿಲ್ಲ. Tiago NRG XT 1.2-ಲೀಟರ್ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತದೆ, ಇದು 6,000rpm ನಲ್ಲಿ 85bhp ಮತ್ತು 3,300rpm ನಲ್ಲಿ 113Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಟಿಯಾಗೊ NRG ವಾರ್ಷಿಕೋತ್ಸವ ಸಲುವಾಗಿ ಹೊಸ XT ರೂಪಾಂತರ ಬಿಡುಗಡೆ ಮಾಡಿದ ಟಾಟಾ

ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅಥವಾ ಆಟೋಮ್ಯಾಟಿಕ್ 5-ಸ್ಪೀಡ್ AMT ಯೊಂದಿಗೆ ಜೋಡಿಸಲಾಗಿದೆ. Tiago NRG XT ನಲ್ಲಿ ಕಂಡುಬರುವ ಕೆಲವು ಹೊಸ ವೈಶಿಷ್ಟ್ಯಗಳು ಸಾಮಾನ್ಯ Tiago ನ ನವೀಕರಿಸಿದ XT ರೂಪಾಂತರಗಳಲ್ಲಿಯೂ ಸಹ ಕಂಡುಬರುತ್ತವೆ. ಈ ವೈಶಿಷ್ಟ್ಯಗಳಲ್ಲಿ ಹೊಸ 14-ಇಂಚಿನ ವೀಲ್‌ಗಳು, ಎತ್ತರ ಹೊಂದಾಣಿಕೆಯ ಚಾಲಕ ಸೀಟು ಮತ್ತು ಹಿಂಭಾಗದ ಪಾರ್ಸೆಲ್ ಶೆಲ್ಫ್ ಸೇರಿವೆ.

ಟಿಯಾಗೊ NRG ವಾರ್ಷಿಕೋತ್ಸವ ಸಲುವಾಗಿ ಹೊಸ XT ರೂಪಾಂತರ ಬಿಡುಗಡೆ ಮಾಡಿದ ಟಾಟಾ

ಹೊಸ Tiago XT ಪೆಟ್ರೋಲ್ ಅನ್ನು ಐಚ್ಛಿಕ ರಿದಮ್ ಪ್ಯಾಕ್‌ನೊಂದಿಗೆ ನೀಡಲಾಗುತ್ತದೆ, ಇದು ರೂ. 30,000 ಕ್ಕೆ 7-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಹಿಂಬದಿಯ ಕ್ಯಾಮೆರಾ ಮತ್ತು 4 ಟ್ವೀಟರ್‌ಗಳನ್ನು ಒಳಗೊಂಡಿದೆ. ಹೊಸ XT ಟ್ರಿಮ್ ಅಸ್ತಿತ್ವದಲ್ಲಿರುವ ಓಪಲ್ ವೈಟ್, ಡೇಟೋನಾ ಗ್ರೇ, ಅರಿಝೋನಾ ಬ್ಲೂ ಮತ್ತು ಫ್ಲೇಮ್ ರೆಡ್ ಪೇಂಟ್ ಸ್ಕೀಮ್‌ಗಳ ಜೊತೆಗೆ ಹೊಸ ಮಿಡ್‌ನೈಟ್ ಪ್ಲಮ್ ಕಲರ್‌ವೇ ಅನ್ನು ಸೇರಿಸುತ್ತದೆ.

ಟಿಯಾಗೊ NRG ವಾರ್ಷಿಕೋತ್ಸವ ಸಲುವಾಗಿ ಹೊಸ XT ರೂಪಾಂತರ ಬಿಡುಗಡೆ ಮಾಡಿದ ಟಾಟಾ

ಇನ್ನು ಜುಲೈ ತಿಂಗಳ ಮಾರಾಟದ ವಿಷಯಕ್ಕೆ ಬಂದರೆ ಅತ್ಯಧಿಕ ಕಾರುಗಳನ್ನು ಮಾರಾಟ ಮಾಡುವ ಮೂಲಕ ಜುಲೈ ತಿಂಗಳಲ್ಲಿ ಶೇಕಡಾ 51 ರಷ್ಟು ಪ್ರಗತಿ ಸಾಧಿಸಿದೆ. ಜುಲೈ 2022ರಲ್ಲಿ ಟಾಟಾ ಮೋಟಾರ್ಸ್ 81,790 ಕಾರು ಮಾರಾಟ ಮಾಡಿದೆ. ಕಳೆದ ವರ್ಷ ಅಂದರೆ 2021ರ ಜುಲೈ ತಿಂಗಳಲ್ಲಿ 54,119 ಟಾಟಾ ಕಾರುಗಳು ಮಾರಾಟಗೊಂಡಿತ್ತು.

ಟಿಯಾಗೊ NRG ವಾರ್ಷಿಕೋತ್ಸವ ಸಲುವಾಗಿ ಹೊಸ XT ರೂಪಾಂತರ ಬಿಡುಗಡೆ ಮಾಡಿದ ಟಾಟಾ

ಇದರಲ್ಲಿ ಎಲೆಕ್ಟ್ರಿಕ್ ಕಾರು ಮಾರಾಟವೂ ಒಳಗೊಂಡಿದೆ. SUV ಕಾರುಗಳ ಮಾರಾಟದಲ್ಲಿ ಶೇಕಡಾ 64 ರಷ್ಟು ಪ್ರಗತಿ ಸಾಧಿಸಿದೆ. ಇದರಲ್ಲಿ ಟಾಟಾ ಪಂಚ್, ನೆಕ್ಸಾನ್, ಹ್ಯಾರಿಯರ್ ಹಾಗೂ ಸಫಾರಿ ಕಾರುಗಳ ಬೇಡಿಕೆ ಹೆಚ್ಚಾಗಿದೆ. ಅದರಲ್ಲೂ ಟಾಟಾ ಪಂಚ್ ಗರಿಷ್ಠ ಮಾರಾಟ ದಾಖಲೆ ಬರೆದಿದೆ. ಜುಲೈ ತಿಂಗಳಲ್ಲಿ ಟಾಟಾ ಪಂಚ್ 11,007 ಕಾರುಗಳು ಮಾರಾಟಗೊಂಡಿವೆ. ಟಿಗೋರ್ ಸಣ್ಣ ಹ್ಯಾಚ್‌ಬ್ಯಾಕ್ ಕಾರು 5,433 ಕಾರುಗಳು ಮಾರಾಟಗೊಂಡಿವೆ.

ಟಿಯಾಗೊ NRG ವಾರ್ಷಿಕೋತ್ಸವ ಸಲುವಾಗಿ ಹೊಸ XT ರೂಪಾಂತರ ಬಿಡುಗಡೆ ಮಾಡಿದ ಟಾಟಾ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಟಾಟಾ ಟಿಯಾಗೊ ಎನ್‌ಆರ್‌ಜಿ ಎಕ್ಸ್‌ಟಿಯು ಎನ್‌ಆರ್‌ಜಿ ಟ್ರಿಮ್ ಅನ್ನು ಟಿಯಾಗೊದ ಹೆಚ್ಚು ಕೈಗೆಟುಕುವ ಎಕ್ಸ್‌ಟಿ ರೂಪಾಂತರಕ್ಕೆ ತರುವ ಮೂಲಕ ಹೆಚ್ಚಿನ ಗ್ರಾಹಕರಿಗೆ 'ರಗಡ್' ಎನ್‌ಆರ್‌ಜಿ ಸ್ಪೆಕ್ ಅನ್ನು ನೀಡುತ್ತಿದೆ. ನಮ್ಮ ಭಾರತೀಯ ರಸ್ತೆಗಳ ಗುಂಡಿಗಳು ಮತ್ತು ಉಬ್ಬುಗಳನ್ನು ತಪ್ಪಿಸಲು Tiago ನಲ್ಲಿ ಸ್ವಲ್ಪ ಹೆಚ್ಚುವರಿ ಬೆಂಬಲವನ್ನು ಹುಡುಕುತ್ತಿರುವವರಿಗೆ, NRG XT ಅನ್ನು ಹೊಂದಲು ಉತ್ತಮ ಆಯ್ಕೆಯಾಗಿದೆ.

Most Read Articles

Kannada
English summary
Tata has launched a new XT variant for the Tiago NRG anniversary
Story first published: Wednesday, August 3, 2022, 18:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X