ಟಿಗೋರ್ ಸೆಡಾನ್ ಮಾದರಿಯಲ್ಲಿ ಹೊಸ ಡ್ಯುಯಲ್ ಟೋನ್ ಬಣ್ಣದ ಆಯ್ಕೆ ಪರಿಚಯಿಸಿದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಕಂಪನಿಯು ತನ್ನ ಜನಪ್ರಿಯ ಕಂಪ್ಯಾಕ್ಟ್ ಸೆಡಾನ್ ಮಾದರಿಯಾದ ಟಿಗೋರ್‌ನಲ್ಲಿ ಹೊಸದಾಗಿ ಡ್ಯುಯಲ್ ಟೋನ್ ಬಣ್ಣದ ಆಯ್ಕೆ ನೀಡಲಾಗಿದ್ದು, ಹೊಸ ಬಣ್ಣದ ಆಯ್ಕೆಯು ಕಾರಿನ ವಿನ್ಯಾಸಕ್ಕೆ ಮತ್ತಷ್ಟು ಸ್ಪೋರ್ಟಿ ಲುಕ್ ನೀಡುತ್ತದೆ.

ಟಿಗೋರ್ ಸೆಡಾನ್ ಮಾದರಿಯಲ್ಲಿ ಹೊಸ ಡ್ಯುಯಲ್ ಟೋನ್ ಬಣ್ಣದ ಆಯ್ಕೆ ಪರಿಚಯಿಸಿದ ಟಾಟಾ ಮೋಟಾರ್ಸ್

ಕಂಪ್ಯಾಕ್ಟ್ ಸೆಡಾನ್ ಮಾರಾಟದಲ್ಲಿ ವಿನೂತನ ಫೀಚರ್ಸ್‌ಗಳೊಂದಿಗೆ ತನ್ನದೇ ಆದ ಜನಪ್ರಿಯತೆ ಹೊಂದಿರುವ ಟಿಗೋರ್ ಮಾದರಿಯು ಈಗಾಗಲೇ ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ಹಲವಾರು ಬಾರಿ ಉನ್ನತೀಕರಣ ಹೊಂದಿದ್ದು, ಇದೀಗಹೊಸ ಬಣ್ಣದ ಆಯ್ಕೆಯೊಂದಿಗೆ ಒಪೆಲ್ ವೈಟ್ ಜೊತೆ ಬ್ಲ್ಯಾಕ್ ಬಣ್ಣದ ರೂಫ್ ಹೊಂದಿದೆ.

ಟಿಗೋರ್ ಸೆಡಾನ್ ಮಾದರಿಯಲ್ಲಿ ಹೊಸ ಡ್ಯುಯಲ್ ಟೋನ್ ಬಣ್ಣದ ಆಯ್ಕೆ ಪರಿಚಯಿಸಿದ ಟಾಟಾ ಮೋಟಾರ್ಸ್

ಒಪೆಲ್ ವೈಟ್ ಜೊತೆ ಬ್ಲ್ಯಾಕ್ ಬಣ್ಣದ ರೂಫ್ ಜೊತೆಗೆ ಈಗಾಗಲೇ ಮಾರುಕಟ್ಟೆಯಲ್ಲಿಮ್ಯಾಗ್ನೆಟಿಕ್ ರೆಡ್ ಜೊತೆ ಬ್ಲ್ಯಾಕ್ ಬಣ್ಣದ ರೂಫ್ ಆಯ್ಕೆ ಲಭ್ಯವಿದ್ದು, ಡ್ಯುಯಲ್ ಟೋನ್ ಹೊರತಾಗಿ ಟಿಗೋರ್‌ನಲ್ಲಿ ಮೂರು ಮೊನೊಟೋನ್ ಬಣ್ಣಗಳ ಆಯ್ಕೆ ಮಾಡಬಹುದು.

ಟಿಗೋರ್ ಸೆಡಾನ್ ಮಾದರಿಯಲ್ಲಿ ಹೊಸ ಡ್ಯುಯಲ್ ಟೋನ್ ಬಣ್ಣದ ಆಯ್ಕೆ ಪರಿಚಯಿಸಿದ ಟಾಟಾ ಮೋಟಾರ್ಸ್

ಮೊನೊಟೋನ್ ಬಣ್ಣಗಳ ಆಯ್ಕೆಯಲ್ಲಿ ಡೀಪ್ ರೆಡ್, ಅರಿಜೋನಾ ಬ್ಲೂ ಮತ್ತು ಡೇ ಟೋನಾ ಗ್ರೇ ಲಭ್ಯವಿದ್ದು, ಟಾಟಾ ಟಿಗೊರ್ ಮಾದರಿಯು ಕಂಪ್ಯಾಕ್ಟ್ ಸೆಡಾನ್ ವಿಭಾಗದಲ್ಲಿ ಕಪ್ಪು ಬಣ್ಣದ ರೂಫ್ ಆಯ್ಕೆಯನ್ನು ಪಡೆಯುವ ಏಕೈಕ ಕಾರು ಮಾದರಿಯಾಗಿದೆ ಎನ್ನಬಹುದು.

ಟಿಗೋರ್ ಸೆಡಾನ್ ಮಾದರಿಯಲ್ಲಿ ಹೊಸ ಡ್ಯುಯಲ್ ಟೋನ್ ಬಣ್ಣದ ಆಯ್ಕೆ ಪರಿಚಯಿಸಿದ ಟಾಟಾ ಮೋಟಾರ್ಸ್

ಹೊಸ ಬಣ್ಣದ ಆಯ್ಕೆಯನ್ನು ಹೊರತುಪಡಿಸಿ ಟಿಗೋರ್ ಕಂಪ್ಯಾಕ್ಟ್ ಸೆಡಾನ್ ಮಾದರಿಯ ಇತರೆ ವೈಶಿಷ್ಟ್ಯಗಳ ಪಟ್ಟಿಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಹೊಸ ಕಾರು ಸದ್ಯ ಎಕ್ಸ್ಇ, ಎಕ್ಸ್ಎಂ, ಎಕ್ಸ್‌ಜೆಡ್, ಎಕ್ಸ್‌ಜೆಡ್ ಪ್ಲಸ್ ಮತ್ತು ಸಿಎನ್‌ಜಿ ವೆರಿಯೆಂಟ್ ಹೊಂದಿದ್ದು, ಇದರಲ್ಲಿ ಸಾಮಾನ್ಯ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 6 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 8.29 ಲಕ್ಷ ಬೆಲೆ ಹೊಂದಿದೆ.

ಟಿಗೋರ್ ಸೆಡಾನ್ ಮಾದರಿಯಲ್ಲಿ ಹೊಸ ಡ್ಯುಯಲ್ ಟೋನ್ ಬಣ್ಣದ ಆಯ್ಕೆ ಪರಿಚಯಿಸಿದ ಟಾಟಾ ಮೋಟಾರ್ಸ್

ಫ್ಯಾಕ್ಟರಿ ಫಿಟೆಡ್ ಸಿಎನ್‌ಜಿ ಕಿಟ್ ಹೊಂದಿರುವ ಮಾದರಿಯು ಟಿಗೋರ್ ಮಾದರಿಯು ಎಕ್ಸ್ಎಂ, ಎಕ್ಸ್‌ಜೆಡ್, ಎಕ್ಸ್‌ಜೆಡ್‌ಪ್ಲಸ್ ವೆರಿಯೆಂಟ್‌ಗಳೊಂದಿಗೆ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 7.40 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 8.59 ಲಕ್ಷ ಬೆಲೆ ಹೊಂದಿದೆ.

ಟಿಗೋರ್ ಸೆಡಾನ್ ಮಾದರಿಯಲ್ಲಿ ಹೊಸ ಡ್ಯುಯಲ್ ಟೋನ್ ಬಣ್ಣದ ಆಯ್ಕೆ ಪರಿಚಯಿಸಿದ ಟಾಟಾ ಮೋಟಾರ್ಸ್

ಟಿಗೋರ್ ಮಾದರಿಯಲ್ಲಿ ಕಂಪನಿಯು 1.2 ಲೀಟರ್ ನ್ಯಾಚುರಲ್ ಆಸ್ಪೆರೆಟೆಡ್ ಪೆಟ್ರೋಲ್ ಎಂಜಿನ್ ಆಯ್ಕೆ ನೀಡಿದ್ದು, 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ ಆಯ್ಕೆಯೊಂದಿಗೆ ಅತ್ಯುತ್ತಮ ಮೈಲೇಜ್ ಮತ್ತು ಪರ್ಫಾಮೆನ್ಸ್ ಮಾದರಿಯಾಗಿ ಗುರುತಿಸಿಕೊಂಡಿದೆ.

ಟಿಗೋರ್ ಸೆಡಾನ್ ಮಾದರಿಯಲ್ಲಿ ಹೊಸ ಡ್ಯುಯಲ್ ಟೋನ್ ಬಣ್ಣದ ಆಯ್ಕೆ ಪರಿಚಯಿಸಿದ ಟಾಟಾ ಮೋಟಾರ್ಸ್

ಹಾಗೆಯೇ ಟಿಗೋರ್ ಮಾದರಿಯಲ್ಲಿ ಕಂಪನಿಯು ಸಿಎನ್‌ಜಿ ಆವೃತ್ತಿಯನ್ನು ಸಹ ಮಾರಾಟ ಮಾಡುತ್ತಿದ್ದು, ಸಿಎನ್‌ಜಿ ಮಾದರಿಯು ಪೆಟ್ರೋಲ್ ಎಂಜಿನ್ ಜೊತೆಗೆ ಸಿಎನ್‌ಜಿ ಕಿಟ್ ಹೊಂದಿದೆ. ಪೆಟ್ರೋಲ್ ಮಾದರಿಯು 86 ಬಿಎಚ್‌ಪಿ ಮತ್ತು 113 ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ ಸಿಎನ್‌ಜಿ ಮಾದರಿಯು 73 ಬಿಎಚ್‌ಪಿ ಮತ್ತು 95 ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

ಟಿಗೋರ್ ಸೆಡಾನ್ ಮಾದರಿಯಲ್ಲಿ ಹೊಸ ಡ್ಯುಯಲ್ ಟೋನ್ ಬಣ್ಣದ ಆಯ್ಕೆ ಪರಿಚಯಿಸಿದ ಟಾಟಾ ಮೋಟಾರ್ಸ್

ಸಿಎನ್‌ಜಿ ಮಾದರಿಯು ಸಾಮಾನ್ಯ ಪೆಟ್ರೋಲ್ ಮಾದರಿಗಿಂತಲೂ ಸುಮಾರು ರೂ. 1 ಲಕ್ಷ ಹೆಚ್ಚುವರಿ ಮೌಲ್ಯದೊಂದಿಗೆ ಮಾರಾಟಗೊಳ್ಳುತ್ತಿದ್ದು, ಹೆಚ್ಚುವರಿ ಮೌಲ್ಯ ಹೊಂದಿದ್ದರೂ ಪ್ರತಿಸ್ಪರ್ಧಿ ಮಾದರಿಗಿಂತಲೂ ಅತ್ಯುತ್ತಮ ಮೈಲೇಜ್ ಹಿಂದಿರುಗಿಸುತ್ತದೆ.

ಟಿಗೋರ್ ಸೆಡಾನ್ ಮಾದರಿಯಲ್ಲಿ ಹೊಸ ಡ್ಯುಯಲ್ ಟೋನ್ ಬಣ್ಣದ ಆಯ್ಕೆ ಪರಿಚಯಿಸಿದ ಟಾಟಾ ಮೋಟಾರ್ಸ್

ಇನ್ನು ಟಿಗೋರ್ ಕಂಪ್ಯಾಕ್ಟ್ ಸೆಡಾನ್ ಮಾದರಿಯಲ್ಲಿ ಲಭ್ಯವಿರುವ ವೈಶಿಷ್ಟ್ಯಗಳ ಬಗೆಗೆ ಹೇಳುವುದಾದರೆ ಹೊಸ ಕಾರಿನಲ್ಲಿ 7-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, ಪುಶ್-ಬಟನ್ ಸ್ಟಾರ್ಟ್/ಸ್ಟಾಪ್, ರೈನ್-ಸೆನ್ಸಿಂಗ್ ವೈಪರ್‌ಗಳು ಮತ್ತು ಸ್ವಯಂ-ಹೆಡ್‌ಲೈಟ್‌ಗಳಂತಹ ಆರಾಮದಾಯಕವಾದ ಹಲವಾರು ವೈಶಿಷ್ಟ್ಯತೆಗಳಿವೆ.

ಟಿಗೋರ್ ಸೆಡಾನ್ ಮಾದರಿಯಲ್ಲಿ ಹೊಸ ಡ್ಯುಯಲ್ ಟೋನ್ ಬಣ್ಣದ ಆಯ್ಕೆ ಪರಿಚಯಿಸಿದ ಟಾಟಾ ಮೋಟಾರ್ಸ್

ಹಾಗೆಯೇ 4-ಸ್ಪೀಕರ್ ಸಿಸ್ಟಂನೊಂದಿಗೆ ಹರ್ಮನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಪವರ್ ವಿಂಡೋಸ್, ಸೆಂಟ್ರಲ್ ಲಾಕಿಂಗ್, ರಿಯರ್ ಪಾರ್ಕಿಂಗ್ ಸೆನ್ಸಾರ್ ನೀಡಲಾಗಿದ್ದು, ಉನ್ನತ ರೂಪಾಂತರಗಳಲ್ಲಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಸಹ ಪಡೆಯುತ್ತದೆ.

ಟಿಗೋರ್ ಸೆಡಾನ್ ಮಾದರಿಯಲ್ಲಿ ಹೊಸ ಡ್ಯುಯಲ್ ಟೋನ್ ಬಣ್ಣದ ಆಯ್ಕೆ ಪರಿಚಯಿಸಿದ ಟಾಟಾ ಮೋಟಾರ್ಸ್

ಇದು ಸರಾಸರಿ ಮೈಲೇಜ್, ಸೀಟ್ ಬೆಲ್ಟ್ ರಿಮೈಂಡರ್, ಗೇರ್ ಶಿಫ್ಟ್ ಡಿಸ್ಪ್ಲೇ ಮುಂತಾದ ಮಾಹಿತಿಯನ್ನು ಒದಗಿಸಲಿದ್ದು, ಸುರಕ್ಷತೆಯ ವಿಷಯದಲ್ಲಿ ಮುಂಚೂಣಿಯಲ್ಲಿ ಈ ಕಾರು ಎಂಜಿನ್ ಇಮೊಬಿಲೈಜರ್, ಇಬಿಡಿ ಜೊತೆಗೆ ಎಬಿಎಸ್, ಹಿಂಭಾಗದ ಪಾರ್ಕಿಂಗ್ ಸೆನ್ಸಾರ್ ಮತ್ತು ಡಿಸ್ಪ್ಲೇ, ಆಟೋ ಡೋರ್ ಲಾಕ್, ಸೀಟ್ ಬೆಲ್ಟ್ ಪ್ರಿ-ಟೆನ್ಷನರ್, ಡ್ಯುಯಲ್ ಏರ್‌ಬ್ಯಾಗ್ ಸೇರಿದಂತೆ ಹಲವು ಫೀಚರ್ಸ್ ಹೊಂದಿದೆ.

ಟಿಗೋರ್ ಸೆಡಾನ್ ಮಾದರಿಯಲ್ಲಿ ಹೊಸ ಡ್ಯುಯಲ್ ಟೋನ್ ಬಣ್ಣದ ಆಯ್ಕೆ ಪರಿಚಯಿಸಿದ ಟಾಟಾ ಮೋಟಾರ್ಸ್

ಕೇವಲ ಪೆಟ್ರೋಲ್ ಮಾದರಿಯಲ್ಲಿ ಮಾತ್ರವಲ್ಲ ಸಿಎನ್‌ಜಿ ಮಾದರಿಯಲ್ಲೂ ಹಲವಾರು ಹೊಸ ವೈಶಿಷ್ಟ್ಯತೆಗಳನ್ನು ನೀಡಲಾಗಿದ್ದು, ಇದು ಕ್ರ್ಯಾಶ್ ಟೆಸ್ಟಿಂಗ್ ಅತ್ಯುತ್ತಮ ಪ್ರದರ್ಶನದೊಂದಿಗೆ 5 ಸ್ಟಾರ್ ರೇಟಿಂಗ್ಸ್‌ನಲ್ಲಿ 4 ಸೇಫ್ಟಿ ಸ್ಟಾರ್ ರೇಟಿಂಗ್ಸ್ ಮೂಲಕ ಈ ವಿಭಾಗದ ಅತ್ಯುತ್ತಮ ಸುರಕ್ಷಾ ಕಾರು ಮಾದರಿಯಾಗಿ ಗುರುತಿಸಿಕೊಂಡಿದೆ.

Most Read Articles

Kannada
English summary
Tata introduce black roof with white new dual tone color option in tigor details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X