ಕಾಜಿರಂಗ ಸ್ಪೆಷಲ್ ಎಡಿಷನ್ ಕುರಿತು ಹೊಸ ಮಾಹಿತಿ ಹಂಚಿಕೊಂಡ ಟಾಟಾ ಮೋಟಾರ್ಸ್
2022ರ ಐಪಿಎಲ್‌ನ ಅಧಿಕೃತ ಪ್ರಾಯೋಜಕತ್ವ ವಹಿಸಿರುವ ಹಿನ್ನಲೆಯಲ್ಲಿ ಟಾಟಾ ಮೋಟಾರ್ಸ್(Tata Motors) ಕಂಪನಿಯು ತನ್ನ ಪ್ರಮುಖ ಎಸ್‌ಯುವಿ ಮಾದರಿಗಳಲ್ಲಿ ಕಾಜಿರಂಗ ಸ್ಪೆಷಲ್ ಎಡಿಷನ್ ಪರಿಚಯಿಸುತ್ತಿದ್ದು, ಪಂಚ್ ಜೊತೆಗೆ ನೆಕ್ಸಾನ್, ಹ್ಯಾರಿಯರ್ ಮತ್ತು ಸಫಾರಿ ಮಾದರಿಗಳಲ್ಲೂ ವಿಶೇಷ ಆವೃತ್ತಿಯನ್ನು ಪರಿಚಯಿಸುತ್ತಿದೆ.

ಜನಪ್ರಿಯ ಐಪಿಎಲ್ ಸರಣಿಯಲ್ಲಿ ಸತತ ನಾಲ್ಕನೇ ವರ್ಷವೂ ಪ್ರಾಯೋಜಕತ್ವ ವಹಿಸಿರುವ ಟಾಟಾ ಮೋಟಾರ್ಸ್ ಕಂಪನಿಯು ಈ ಬಾರಿಯ ಐಪಿಎಲ್‌ನಲ್ಲಿ ಹೊಚ್ಚ ಹೊಸ ಪಂಚ್ ಕಾರು ಮಾದರಿಯನ್ನು ಪ್ರದರ್ಶನಗೊಳಿಸಲು ನಿರ್ಧರಿಸಿದ್ದು, ಪ್ರಾಯೋಜಕತ್ವ ವಿಶೇಷತೆಗಾಗಿ ಟಾಟಾ ಕಂಪನಿಯು ಪಂಚ್ ಕಾರಿನಲ್ಲಿ ಕಾಜಿರಂಗ ಎನ್ನುವ ವಿಶೇಷ ಆವೃತ್ತಿಯನ್ನು ಅಭಿವೃದ್ದಿಪಡಿಸಿದೆ.

ಐಪಿಎಲ್‌ನಲ್ಲಿ ಪ್ರದರ್ಶನಗೊಳ್ಳುವ ಹೊಸ ಪಂಚ್ ಕಾಜಿರಂಗ ಆವೃತ್ತಿಯು ಟೂರ್ನಿ ಮುಕ್ತಾಯದ ನಂತರ ಹರಾಜುಗೊಳ್ಳಲಿದ್ದು, ಹರಾಜು ಪ್ರಕ್ರಿಯೆಯಿಂದ ಬಂದ ಹಣವನ್ನು ಟಾಟಾ ಮೋಟಾರ್ಸ್ ಸಂಪೂರ್ಣವಾಗಿ ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಸಂರಕ್ಷಣಾ ಅಭಿವೃದ್ದಿ ಕಾರ್ಯಗಳಿಗೆ ದೇಣಿಗೆ ನೀಡಲು ನಿರ್ಧರಿಸಿದೆ.

ಈ ಮೊದಲು ಪಂಚ್ ಕಾರು ಮಾದರಿಗಾಗಿ ಮಾತ್ರ ಕಾಜಿರಂಗ ಆವೃತ್ತಿಯನ್ನು ಪರಿಚಯಿಸಿದ್ದ ಟಾಟಾ ಮೋಟಾರ್ಸ್ ಕಂಪನಿಯು ಇದೀಗ ಇನ್ನುಳಿದ ಎಸ್‌ಯುವಿ ಮಾದರಿಗಳಿಗೂ ಹೊಸ ಆವೃತ್ತಿಗಳಾದ ನೆಕ್ಸಾನ್, ಹ್ಯಾರಿಯರ್ ಮತ್ತು ಸಫಾರಿ ಮಾದರಿಗಳಲ್ಲೂ ಹೊಸ ಆವೃತ್ತಿ ಪರಿಚಯಿಸಲು ನಿರ್ಧರಿಸಿದೆ.

ವಿಶೇಷ ಕಾರು ಮಾದರಿಗಳ ಅಳಿವಿಂಚಿನಲ್ಲಿರುವ ಘೆಂಡಾಮೃಗಗಳ ಸಂರಕ್ಷಣೆಗೆ ಸಹಕಾರ ನೀಡಲು ಭಾರೀ ಪ್ರಮಾಣ ದೇಣಿಗೆ ಸಂಗ್ರಹಿಸಲು ನಿರ್ಧರಿಸಿರುವ ಟಾಟಾ ಮೋಟಾರ್ಸ್ ಕಂಪನಿಯು ಪಂಚ್ ಕಾರಿನಲ್ಲಿ ಹೊಸ ಆವೃತ್ತಿಯನ್ನು ಅಭಿವೃದ್ದಿಪಡಿಸಿದೆ. ಪಂಚ್ ಕಾರಿನಲ್ಲಿ ಒಂದೇ ಯುನಿಟ್ ಕಾಜಿರಂಗ ಎಡಿಷನ್ ಉತ್ಪಾದನೆ ಮಾಡಿ ಹರಾಜು ಮಾಡಲಿರುವ ಟಾಟಾ ಮೋಟಾರ್ಸ್ ಕಂಪನಿಯು ಇನ್ನುಳಿದ ಎಸ್‌ಯುವಿ ಮಾದರಿಗಳಲ್ಲಿನ ಕಾಜಿರಂಗ ಮಾದರಿಗಳನ್ನು ಸಾಮಾನ್ಯ ಕಾರು ಮಾದರಿಯೆಂತೆ ಮಾರಾಟಗೊಳಿಸಲಿದೆ.

ಹೀಗಾಗಿ ಪಂಚ್ ಕಾರಿನಲ್ಲಿ ಒಂದೇ ಯುನಿಟ್ ಕಾಜಿರಂಗ ಮಾದರಿಯು ಹೆಚ್ಚಿನ ಬೆಲೆಗೆ ಹರಾಜುಗೊಳ್ಳಬಹುದೆಂಬ ನೀರಿಕ್ಷೆಗಳಿದ್ದು, ಇನ್ನುಳಿದ ಕಾರು ಮಾದರಿಗಳಲ್ಲಿ ಪರಿಚಯಿಸಲಾಗುವ ಕಾಜಿರಂಗ ಮಾದರಿಗಳು ಟಾಪ್ ಎಂಡ್ ಮಾದರಿಯನ್ನು ಆಧರಿಸಿ ನಿರ್ಮಾಣಗೊಳ್ಳಲಿವೆ.

2020ರಲ್ಲಿ ಭೀಕರ ಪ್ರವಾಹದ ಪರಿಣಾಮ ಹೆಚ್ಚಿನ ಮಟ್ಟದ ಹಾನಿಗೊಳಗಾಗಿದ್ದ ಕಾಜಿರಂಗ ರಾಷ್ಟ್ರೀಯ ಉದ್ಯಾನವನವನ್ನು ಅಭಿವೃದ್ದಿ ಕಾರ್ಯಗಳಿಗೆ ಸಹಾಯಹಸ್ತ ಚಾಚಲು ವಿಶೇಷ ಕಾರು ಮಾದರಿಗಳನ್ನು ಅಭಿವೃದ್ದಿಪಡಿಸಿ ಹರಾಜು ಪ್ರಕ್ರಿಯೆ ನಡೆಸಲು ನಿರ್ಧರಿಸಿದ್ದು, ಹೈ ಎಂಡ್ ಮಾದರಿಗಳನ್ನು ಆಧರಿಸಿ ನಿರ್ಮಾಣವಾಗಿರುವ ಕಾಜಿರಂಗ ಆವೃತ್ತಿಗಳು ವಿಶೇಷ ಬಣ್ಣದ ಆಯ್ಕೆ ಮತ್ತು ಲೊಗೊ ಮೂಲಕ ಆಕರ್ಷಕ ವಿನ್ಯಾಸ ಹೊಂದಿವೆ.

ಕಾಜಿರಂಗ ಆವೃತ್ತಿಗಳಿಗೆ ಮೆಟೆರಿಯಲ್ ಬ್ರೋಂಜ್ ಬಣ್ಣದ ಆಯ್ಕೆ ನೀಡಲಾಗಿದ್ದು, ಹೊಸ ಬಣ್ಣದ ಜೊತೆಗೆ ಕಾರಿನ ಹಿಂಬದಿಯ ಟೈಲ್‌ಗೇಟ್, ವ್ಹೀಲ್, ಫೆಂಡರ್‌ಗಳು ಮತ್ತು ಇಂಟಿರಿಯರ್‌ನಲ್ಲಿ ರೈನೊ ಬ್ಯಾಜ್ಡ್ ಜೊತೆಗೆ ಕಾರಿನ ಇಂಟಿರಿಯರ್‌ನಲ್ಲಿ ರೈನೊ ಮೋಟಿಫ್ ಜೋಡಿಸಲಾಗಿದೆ.

ಹೊಸ ಆವೃತ್ತಿಗಳು ಆಕರ್ಷಕ ಬಣ್ಣದ ಆಯ್ಕೆ ಜೊತೆಗೆ ಕೆಲವು ಕೆಲವು ಬದಲಾವಣೆಗಳನ್ನು ಪಡೆದುಕೊಂಡಿದ್ದು, ಇನ್ನುಳಿದಂತೆ ಎಲ್ಲಾ ತಾಂತ್ರಿಕ ಸೌಲಭ್ಯಗಳು ಸಾಮಾನ್ಯ ಮಾದರಿಯಲ್ಲಿರುವಂತೆಯೇ ಇರಲಿವೆ.
ಇನ್ನು ಟಾಟಾ ಮೋಟಾರ್ಸ್ ಕಂಪನಿಯು ತನ್ನ ಪ್ರಮುಖ ಕಾರು ಮಾದರಿಗಳನ್ನು ಗ್ರಾಹಕರ ಬೇಡಿಕೆಯೆಂತೆ ನಿರಂತರವಾಗಿ ಹೊಸ ಬದಲಾವಣೆಗಳೊಂದಿಗೆ ಉನ್ನತೀಕರಿಸುತ್ತಿದ್ದು, ಕಂಪನಿಯು ತನ್ನ ಎಸ್‌ಯುವಿ ಮಾದರಿಯಾದ ಸಫಾರಿ ಎಸ್‌ಯುವಿಯಲ್ಲಿ ಹೊಸ ಬಣ್ಣದ ಆಯ್ಕೆ ನೀಡಿದೆ.

ಸಫಾರಿ ಎಸ್‌ಯುವಿಯಲ್ಲಿ ಡಾರ್ಕ್ ಎಡಿಷನ್ ಬಿಡುಗಡೆಯ ನಂತರ ಇದೀಗ ಅಡ್ವೆಂಚರ್ ಪೆರಸೊನಾ ಆವೃತ್ತಿಯಲ್ಲಿ ಹೊಸ ಫೀಚರ್ಸ್‌ನೊಂದಿಗೆ ಉನ್ನತೀಕರಿಸಿದ್ದು, ಕಳೆದ ತಿಂಗಳು ಹೊಸ ಕಾರಿನ ಎರಡನೇ ಸಾಲಿನ ಆಸನಗಳಲ್ಲೂ ಏರ್ ವೆಂಟಿಲೆಟೆಡ್ ಸೌಲಭ್ಯವನ್ನು ನೀಡಿದ್ದ ಟಾಟಾ ಕಂಪನಿಯು ಇದೀಗ ಹೊಸ ಬಣ್ಣದ ಆಯ್ಕೆ ನೀಡಿದೆ.

ಟಾಟಾ ಕಂಪನಿಯು ಅಡ್ವೆಂಚರ್ ಪೆರಸೊನಾ ಸಫಾರಿ ಮಾದರಿಯಲ್ಲಿ ಹೊಸ ಆರ್ಕಸ್ ವೈಟ್ ಬಣ್ಣದ ಆಯ್ಕೆ ನೀಡಲಾಗಿದ್ದು, ಆಕರ್ಸ್ ವೈಟ್ ಜೊತೆಗೆ ಸಫಾರಿ ಮಾದರಿಯಲ್ಲಿ ಈಗಾಗಲೇ ವಿವಿಧ ಏಳು ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.

ಕಳೆದ ತಿಂಗಳು ಅಡ್ವೆಂಚರ್ ಪೆರಸೊನಾ ಆವೃತ್ತಿಯಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ಎರಡನೇ ಸಾಲಿನ ಆಸನಗಳಲ್ಲೂ ಏರ್ ವೆಂಟಿಲೆಟೆಡ್ ಸೌಲಭ್ಯವನ್ನು ನೀಡಿದ್ದು, ಕಾರು ಪ್ರಯಾಣದ ವೇಳೆ ಸೀಟುಗಳನ್ನು ತಂಪಾಗಿ ಇಡಲು ಇದು ಉಪಯುಕ್ತವಾದ ವೈಶಿಷ್ಟ್ಯವಾಗಿದೆ.

ಟಾಟಾ ಮೋಟಾರ್ಸ್ ಕಂಪನಿಯು 7 ಆಸನಗಳ ಎಸ್‌ಯುವಿಯಲ್ಲಿ ನೀಡಿರುವ ಹೊಸ ವೈಶಿಷ್ಟ್ಯತೆಯು ಪ್ರತಿಸ್ಪರ್ಧಿಯಾದ ಮಹೀಂದ್ರಾ ಎಕ್ಸ್‌ಯುವಿ700 ಮಾದರಿಯಲ್ಲೂ ಕೂಡಾ ಲಭ್ಯವಿಲ್ಲ. ಫ್ರಂಟ್ ಸೀಟ್‌ಗಳಲ್ಲಿ ಈಗಾಗಲೇ ಪ್ರಮುಖ ಕಾರು ಕಂಪನಿಗಳು ಈ ವೈಶಿಷ್ಟ್ಯತೆ ನೀಡುತ್ತಿದ್ದರೂ ಟಾಟಾ ಕಂಪನಿಯು ಸಫಾರಿ ಮಾದರಿಗಾಗಿ ಎರಡನೇ ಸಾಲಿನಲ್ಲೂ ಈ ಹೊಸ ವೈಶಿಷ್ಟ್ಯತೆಯನ್ನು ನೀಡಿರುವುದು ಅತ್ಯುತ್ತಮ ಆಯ್ಕೆಯಾಗಿದೆ.


Click it and Unblock the Notifications