ಭಾರತದಲ್ಲಿ 2023ಕ್ಕೆ ಟಾಟಾದಿಂದ ಮೂರು ಹೊಸ ಕಾರು ಬಿಡುಗಡೆ ಸಾಧ್ಯತೆ!

ಭಾರತದ ಪ್ರಮುಖ ವಾಹನ ತಯಾರಿಕ ಕಂಪನಿಯಾಗಿರುವ ಟಾಟಾ ಮೋಟಾರ್ಸ್ ಈ ವರ್ಷ ತನ್ನ ಮಾರಾಟದ ಪ್ರಗತಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಮೇ 2022ರಲ್ಲಿ ಹ್ಯುಂಡೈ ಕಂಪನಿಯನ್ನು ಹಿಂದೆ ಹಾಕುವಲ್ಲಿ ಯಶಸ್ವಿಯಾಗಿತ್ತು. ಅದರ ಎಸ್‌ಯುವಿ ಮತ್ತು ಎಲೆಕ್ಟ್ರಿಕ್ ವಾಹನಗಳು ಉತ್ತಮವಾಗಿ ಮಾರಾಟವಾಗಿದ್ದು, ಮುಂದಿನ ವರ್ಷ ಮೂರು ಹೊಸ ಮಾದರಿಗಳನ್ನು ಪರಿಚಯಿಸಲು ಯೋಜಿಸುತ್ತಿದೆ.

ಟಾಟಾ ಮೋಟಾರ್ಸ್, ಈಗಾಗಲೇ ಹ್ಯಾರಿಯರ್ ಮತ್ತು ಸಫಾರಿಯ ಫೇಸ್‌ಲಿಫ್ಟೆಡ್ ಆವೃತ್ತಿಗಳನ್ನು ಪರೀಕ್ಷಿಸುತ್ತಿದ್ದು, ಮಧ್ಯಮ ಗಾತ್ರದ ಎಸ್‌ಯುವಿ ವಿಭಾಗದಲ್ಲಿ ADAS - ಆಧಾರಿತ ಚಾಲಕ-ಸಹಾಯಕ ವ್ಯವಸ್ಥೆ ಹಾಗೂ ಸುರಕ್ಷತಾ ವೈಶಿಷ್ಟ್ಯಗಳನ್ನು ಸೇರಿಸುವುದರ ಜೊತೆಗೆ ಹೊರ ಭಾಗ ಮತ್ತು ಒಳ ಭಾಗದ ಪರಿಷ್ಕರಣೆಗಳೊಂದಿಗೆ 2023 ರಲ್ಲಿ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಹೊಸ ಕಾರುಗಳು, ಎಮೆರ್ಜೆನ್ಸಿ ಬ್ರೇಕಿಂಗ್, ಬ್ಲೈಂಡ್ ಸ್ಪಾಟ್ ಮಾನಿಟರಿಂಗ್, ಲೇನ್ ಎಕ್ಸಿಟ್ ಅಲರ್ಟ್ ಇತ್ಯಾದಿಗಳನ್ನು ಪಡೆಯಬಹುದು.

ಈ ಎಸ್‌ಯುವಿಯ ಹೊರಭಾಗವು ಪರಿಷ್ಕೃತ ಮುಂಭಾಗದ ಗ್ರಿಲ್, ನವೀಕರಿಸಿದ ಸ್ಪ್ಲಿಟ್ ಹೆಡ್‌ಲೈಟ್ ಕ್ಲಸ್ಟರ್ ಮತ್ತು ಹೊಸ ಎಲ್‌ಇಡಿ ಡೇಟೈಮ್ ರನ್ನಿಂಗ್ ಲೈಟ್‌ಗಳು, ಮರುವಿನ್ಯಾಸಗೊಳಿಸಲಾದ ಮುಂಭಾಗದ ಬಂಪರ್, ಕೊಂಚ ನವೀಕರಿಸಿದ ಹಿಂಭಾಗ, ಹೊಸದಾಗಿ ವಿನ್ಯಾಸಗೊಳಿಸಲಾದ ಅಲಾಯ್ ವೀಲ್ಸ್ ಅನ್ನು ಪಡೆಯಬಹುದು. ಸದ್ಯ ಇರುವಂತಹ 2.0-ಲೀಟರ್ 4-ಸಿಲಿಂಡರ್ ಫಿಯೆಟ್-ಸೌರ್ಸ್ಡ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಹೊಂದಿರಬಹದು. ಇದು 170 ಪಿಎಸ್ ಗರಿಷ್ಠ ಪವರ್ ಮತ್ತು 350 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ.

ಟ್ರಾನ್ಸ್‌ಮಿಷನ್ ಆಯ್ಕೆಗಳಿಗೆ ಸಂಬಂಧಿಸಿದಂತೆ ಹೇಳುವುದಾದರೆ, 6- ಸ್ವೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಮತ್ತು 6-ಸ್ವೀಡ್ ಟಾರ್ಕ್ ಕನ್ವರ್ಟರ್ ಆಟೋಮೆಟಿಕ್ ಯೂನಿಟ್ ಅನ್ನೇ ಹೊಸ ಕಾರುಗಳಲ್ಲಿಯೂ ಮುಂದುವರಿಯಬಹುದು. ಹೆಚ್ಚಿನ ಪ್ರೀಮಿಯಂ ಗುಣಮಟ್ಟದ ಟ್ರಿಮ್‌ಗಳು ಹಾಗೂ ಮೆಟಿರಿಯಲ್ ಬಳಕೆಯೊಂದಿಗೆ ನವೀಕರಿಸಿದ ಡ್ಯಾಶ್‌ಬೋರ್ಡ್ ಮತ್ತು ಸೆಂಟರ್ ಕನ್ಸೋಲ್ ಸೇರಿದಂತೆ ಹಲವಾರು ಬದಲಾವಣೆಗಳನ್ನು ಒಳ ಭಾಗವು ಪಡೆಯುವ ನಿರೀಕ್ಷೆಯಿದೆ. ಇವೆಲ್ಲ ಟಾಟಾದ ಹ್ಯಾರಿಯರ್ ಮತ್ತು ಸಫಾರಿಯ ಫೇಸ್‌ಲಿಫ್ಟೆಡ್ ಖರೀದಿಸುವ ಗ್ರಾಹಕರಿಗೆ ಇಷ್ಟವಾಗುತ್ತದೆ ಎಂದು ಹೇಳಬಹುದು.

ಇಷ್ಟೇ ಅಲ್ಲದೆ, ಈ ಹೊಸ ಕಾರುಗಳ ಫೀಚರ್ಸ್ ಬಗ್ಗೆ ಮಾತನಾಡುವುದಾದರೆ, ವೈರ್‌ಲೆಸ್ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿಯೊಂದಿಗೆ ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಹೆಚ್ಚು ಇನ್-ಕಾರ್ ಕನೆಕ್ಟಿವ್ ಟೆಕ್, ದೊಡ್ಡದಾದ ಸನ್‌ರೂಫ್, ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜರ್, ಅಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಸಿಸ್ಟಮ್, ನವೀಕರಿಸಿದ ಇಸ್ಟ್ರುಮೆಂಟ್ ಕನ್ಸೋಲ್ ಟೈಲ್‌ಗೇಟ್, 360-ಡಿಗ್ರಿ ಕ್ಯಾಮೆರಾ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿರಲಿವೆ. ಇದರಿಂದ ಖರೀದಿದಾರರನ್ನು ಟಾಟಾ ಕಂಪನಿ ಸೆಳೆಯುವುದು ಸುಲಭವಾಗುತ್ತದೆ.

ಈ ಎಸ್‌ಯುವಿಗಳ ಹೊರತಾಗಿ, ಟಾಟಾ ಹೊಸ ಎಲೆಕ್ಟ್ರಿಕ್ ವಾಹನವನ್ನು ಮಾರುಕಟ್ಟೆಯಲ್ಲಿ ಪರಿಚಯಿಸಬಹುದು. ಅದು 2023 ವರ್ಷದ ಅಂತ್ಯದ ವೇಳೆಗೆ ಪಂಚ್ ಅಥವಾ ಆಲ್ಟ್ರೋಜ್ ಕಾರು ಆಗಿರಬಹುದು. ಮುಂಬರುವ ವರ್ಷಗಳಲ್ಲಿ, ಟಾಟಾ ತನ್ನ ಸ್ಕೇಟ್‌ಬೋರ್ಡ್ ಪ್ಲಾಟ್‌ಫಾರ್ಮ್ ಆಧಾರಿತ ಇವಿಗಳನ್ನು ಬಿಡುಗಡೆ ಮಾಡಲಿದೆ. ಈ ಬಗ್ಗೆ ಕಂಪನಿಯೇ ಮಾಹಿತಿ ನೀಡಿದ್ದು, ಮುಂದಿನ 5 ವರ್ಷಗಳಲ್ಲಿ 10 ಎಲೆಕ್ಟ್ರಿಕ್ ವಾಹನಗಳನ್ನು ಲಾಂಚ್ ಮಾಡಲಿದೆಯಂತೆ. ಅದಕ್ಕಾಗಿ ಪ್ರಯತ್ನಗಳನ್ನು ಆರಂಭಿಸಿದೆ ಎಂದು ವರದಿಯಾಗದೆ.

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್‌ ಟಾಟಾ ಟಿಯಾಗೊವನ್ನು ಬಿಡುಗಡೆ ಮಾಡಿದ್ದು, ಪ್ರಸ್ತುತ,ಬೆಲೆ ರೂ.8.49 ಲಕ್ಷ-11.49 ಲಕ್ಷ (ಎಕ್ಸ್ ಶೋ ರೂಂ, ಭಾರತ). ರೂ. ಇದೆ. ದೊಡ್ಡ 24kWh ಬ್ಯಾಟರಿ ಪ್ಯಾಕ್‌ನೊಂದಿಗೆ ಬರುವ ಟಿಯಾಗೊ ಇವಿಯ ಟಾಪ್-ಸ್ಪೆಕ್ 73.75 ಬಿಹೆಚ್‍ಪಿ ಪವರ್ ಮತ್ತು 114 ಎನ್ಎಂ ಟಾರ್ಕ್‌ ಅನ್ನು ಉತ್ಪಾದಿಸಲಿದ್ದು, ಒಂದೇ ಚಾರ್ಜ್ ನಲ್ಲಿ 315 ಕಿ.ಮೀ ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ ಎಂದು ಹೇಳಬಹುದು.

ಬಹುನೀರಿಕ್ಷಿತ ಮಹೀಂದ್ರಾ XUV400 ಎಲೆಕ್ಟ್ರಿಕ್ ಎಸ್‌ಯುವಿ ಹೊಸ ವರ್ಷಕ್ಕೆ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಆದರೆ, ಬೆಲೆಯನ್ನು ಈವರೆಗೆ ಬಹಿರಂಗಪಡಿಸಿಲ್ಲ. ಮುಂದಿನ ತಿಂಗಳು ಅದರ ಬಗ್ಗೆ ತಿಳಿಸಲಾಗುವುದು ಎಂದು ಮಹೀಂದ್ರಾ ಕಂಪನಿ ಹೇಳಿದ್ದು, XUV400 ಎಸ್‌ಯುವಿ ಬೆಲೆ ಸುಮಾರು 15 ಲಕ್ಷ ರೂಪಾಯಿಯಿಂದ ಆರಂಭವಾಗಬಹುದು ಎಂದು ಅಂದಾಜಿಸಲಾಗಿದೆ. ಎಂಜಿ ಹೆಕ್ಟರ್ ಮತ್ತು ಹೆಕ್ಟರ್ ಪ್ಲಸ್ ಫೇಸ್‌ಲಿಫ್ಟ್ ಇವಿಗಳು ಮುಂದಿನ ತಿಂಗಳು ಭಾರತದ ಮಾರುಕಟ್ಟೆಯಲ್ಲಿ ಅನಾವರಣಗೊಳಿಸುವ ಸಾಧ್ಯತೆಯಿದೆ.

Most Read Articles

Kannada
English summary
Tata may launch three new cars in india by 2023
Story first published: Thursday, December 22, 2022, 16:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X