ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಟಾಟಾ ಮೋಟಾರ್ಸ್
ಭಾರತದಲ್ಲಿ ಮಾರುತಿ ಸುಜುಕಿ, ಹ್ಯುಂಡೈ ಕಾರುಗಳೊಂದಿಗೆ ಸ್ಪರ್ಧಿಸುವ ದೇಶದ ಪ್ರಮುಖ ವಾಹನ ತಯಾರಕರಲ್ಲಿ ಟಾಟಾ ಮೋಟಾರ್ಸ್ ಒಂದಾಗಿದೆ. ಇನ್ನುಇತ್ತೀಚೆಗೆ ಎಲೆಕ್ಟ್ರಿಕ್ ಕಾರುಗಳು ಉತ್ತಮ ಬೇಡಿಕೆಯೊಂದಿಗೆ ಮಾರಾಟವಾಗುತ್ತಿದೆ. ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲಿ ಟಾಟಾ ಮೋಟಾರ್ಸ್ ತನ್ನ ಪಾರುಪತ್ಯವನ್ನು ಮುಂದುವರೆಸುತ್ತಿದ್ದಾರೆ.

ಜನರು ಈಗ ನಿಧಾನವಾಗಿ ಎಲೆಕ್ಟ್ರಿಕ್ ಕಾರುಗಳ ಕಡೆ ಮುಖ ಮಾಡುತ್ತಿರುವ ವೆಳೆಯಲ್ಲಿ ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ವಿಭಾಗದಲ್ಲಿ ಟಾಟಾ ಮೇಲುಗೈಯನ್ನು ಸಾಧಿಸಿದೆ. ಟಾಟಾ ಮೋಟಾರ್ಸ್ ಪ್ರಸ್ತುತ ತಮ್ಮ ಸಾಲಿನಲ್ಲಿ ಮೂರು ಮಾದರಿಗಳನ್ನು ಹೊಂದಿದ್ದಾರೆ ಮತ್ತು ಶೀಘ್ರದಲ್ಲೇ ಹೆಚ್ಚಿನ ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಇದರ ನಡುವೆ ಇಂದು ಟಾಟಾ ಮೋಟಾರ್ಸ್ ಕಂಪನಿಯು 50,000 ಎಲೆಕ್ಟ್ರಿಕ್ ವಾಹನಗಳ ಉತ್ಪಾದನಾ ಮೈಲಿಗಲ್ಲನ್ನು ಘೋಷಿಸಿದೆ.

ನೆಕ್ಸಾನ್ ಇವಿ ಮತ್ತು ಟಿಗೋರ್ ಇವಿ ಯೊಂದಿಗೆ ಪ್ರಯಾಣಿಕ ಇವಿ ವಿಭಾಗದಲ್ಲಿ ತನ್ನ ಪ್ರಾಬಲ್ಯವನ್ನು ಗುರುತಿಸುತ್ತದೆ. ಸ್ವದೇಶಿ ಆಟೋ ಮೇಜರ್ ತನ್ನ ಪುಣೆ ಸ್ಥಾವರದಿಂದ ತನ್ನ 50 ಸಾವಿರನೇ ಇವಿ ಕಾರನ್ನು ಹೊರತಂದಿದೆ ಮತ್ತು ಇದು ಕೆಲವು ತಿಂಗಳ ಹಿಂದೆ ಪರಿಚಯಿಸಲಾದ ಬಿಳಿ-ಬಣ್ಣದ ನೆಕ್ಸಾನ್ ಇವ್ ಮ್ಯಾಕ್ಸ್ ಆಗಿದೆ.

ಈ ಸಾಧನೆಯ ಕುರಿತು ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಲಿಮಿಟೆಡ್ ಮತ್ತು ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಶೈಲೇಶ್ ಚಂದ್ರ ಅವರು ಮಾತನಾಡಿ, ದೇಶದಲ್ಲಿ ಇವಿಗಳ ಪ್ರವರ್ತಕರಾಗಿ, ಯಶಸ್ವಿ ಅಳವಡಿಕೆಯನ್ನು ಖಚಿತಪಡಿಸಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ.

ಉತ್ತಮವಾಗಿ ಮಾಪನಾಂಕ ನಿರ್ಣಯಿಸಲಾದ ಉತ್ಪನ್ನ ಮಿಶ್ರಣ, ಪ್ರಬಲ ಗ್ರಾಹಕರು ಎದುರಿಸುತ್ತಿರುವ ಉಪಕ್ರಮಗಳೊಂದಿಗೆ, ನಾವು ಇವಿ ಅಳವಡಿಕೆಗೆ ಅಡೆತಡೆಗಳನ್ನು ಪರಿಹರಿಸಲು ಸಮರ್ಥರಾಗಿದ್ದೇವೆ. ನಮ್ಮ ಗ್ರಾಹಕರಿಗೆ ಸರಳವಾದ, ವೆಚ್ಚದ ಪರಿಣಾಮಕಾರಿ ಪರಿಹಾರಗಳನ್ನು ಒದಗಿಸಲು ನಾವು ಟಾಟಾ ಗ್ರೂಪ್ ಕಂಪನಿಗಳೊಂದಿಗೆ ಸಂಪೂರ್ಣ ಇವಿ ಪರಿಸರ ಸೇಹಿಯಾಗಿ ರಚಿಸಿದ್ದೇವೆ ಎಂದು ಹೇಳಿದರು.

ಟಾಟಾ ನೆಕ್ಸಾನ್ ಇವಿ, ನೆಕ್ಸಾನ್ ಇವಿ ಮ್ಯಾಕ್ಸ್, ಟಿಗೋರ್ ಇವಿ ಮತ್ತು ಎಕ್ಸ್‌ಪ್ರೆಸ್-ಟಿ ಇವಿ ಮಾದರಿಗಳಿಂದ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದೆ. ನೆಕ್ಸಾನ್ ಇವಿ, ನೆಕ್ಸಾನ್ ಇವಿ ಮ್ಯಾಕ್ಸ್ ಮತ್ತು ಟಿಗೋರ್ ಇವಿ ಮಾದರಿಗಳ ಮೂಲಕ ಟಾಟಾ ಕಂಪನಿಯು ಪ್ರಯಾಣಿಕರ ಬಳಕೆಯ ಇವಿ ಕಾರು ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ.

ವಾಣಿಜ್ಯ ವಾಹನ ಬಳಕೆದಾರರಿಗಾಗಿಯೇ ವಿಶೇಷವಾಗಿ ಸಿದ್ದಗೊಂಡಿರುವ ಎಕ್ಸ್‌ಪ್ರೆಸ್-ಟಿ ಇವಿ ಮಾದರಿಯು ಕೂಡಾ ಕ್ಯಾಬ್ ಸೇವಾ ವಿಭಾಗಗಳಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದೆ. ಇನ್ನು ನೆಕ್ಸಾನ್ ಇವಿ ಮಾದರಿಯು 2019ರಲ್ಲಿ ಮೊದಲ ಬಿಡುಗಡೆಯಾದ ನಂತರ ಹಲವಾರು ಹೊಸ ಬದಲಾಣೆಗಳೊಂದಿಗೆ ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದಕೊಂಡಿದೆ.

ಟಾಟಾ ಮೋಟಾರ್ಸ್ ಕಂಪನಿಯು ನೆಕ್ಸಾನ್ ಇವಿ ಮಾದರಿಯಲ್ಲಿ ಹೆಚ್ಚುವರಿ ಮೈಲೇಜ್ ಪ್ರೇರಿತ ನೆಕ್ಸಾನ್ ಇವಿ ಮ್ಯಾಕ್ಸ್ ವರ್ಷನ್ ಬಿಡುಗಡೆ ನಂತರ ಹೆಚ್ಚಿನ ಬೇಡಿಕೆ ದಾಖಲಿಸುತ್ತಿದ್ದು, ಗ್ರಾಹಕರು ಇದೀಗ ತಮ್ಮ ಬೇಡಿಕೆಗೆ ಅನುಗುಣವಾಗಿ ನೆಕ್ಸಾನ್ ಇವಿ ಮತ್ತು ನೆಕ್ಸಾನ್ ಇವಿ ಮ್ಯಾಕ್ ಮಾದರಿಗಳನ್ನು ಕೂಡ ಖರೀದಿ ಮಾಡಬಹುದಾಗಿದೆ.

ಈ ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್ ಮಾದರಿಯು ಸಾಮಾನ್ಯ ನೆಕ್ಸಾನ್ ಇವಿ ಮಾದರಿಗಿಂತಲೂ ಹೆಚ್ಚಿನ ಮೈಲೇಜ್‌ನೊಂದಿಗೆ ಹೆಚ್ಚುವರಿ ಫೀಚರ್ಸ್ ಪಡೆದುಕೊಂಡಿದೆ. ಅತ್ಯಧಿಕ ಮೈಲೇಜ್ ಪ್ರೇರಿತ ಬ್ಯಾಟರಿ ಪ್ಯಾಕ್ ಆಯ್ಕೆ ಹೊಂದಿರುವ ಹಿನ್ನಲೆಯಲ್ಲಿ ಹೊಸ ಕಾರಿಗಾಗಿ ಮ್ಯಾಕ್ಸ್ ನೇಮ್‌ಪ್ಲೆಮ್ ಬಳಕೆ ಮಾಡಲಾಗಿದೆ.

ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್ ಮಾದರಿಯು ಎಕ್ಸ್‌ಜೆಡ್ ಪ್ಲಸ್ ಮತ್ತು ಎಕ್ಸ್‌ಜೆಡ್ ಪ್ಲಸ್ ಲಕ್ಸ್ ಎನ್ನುವ ವೆರಿಯೆಂಟ್‌ಗಳಲ್ಲಿ ಲಭ್ಯವಿದೆ. ನೆಕ್ಸಾನ್ ಇವಿ ಮ್ಯಾಕ್ಸ್ ಮಾದರಿಯ ಎಕ್ಸ್‌ಜೆಡ್ ಪ್ಲಸ್ ಮತ್ತು ಎಕ್ಸ್‌ಜೆಡ್ ಪ್ಲಸ್ ಲಕ್ಸ್ ವೆರಿಯೆಂಟ್‌ಗಳಲ್ಲಿ ಕಂಪನಿಯು ಎರಡು ಮಾದರಿಯ ಚಾರ್ಜಿಂಗ್ ಆಯ್ಕೆಗಳನ್ನು ನೀಡಿದ್ದು, 3.3 kW ಮತ್ತು 7.2 kW AC ಫಾಸ್ಟ್ ಚಾರ್ಜಿಂಗ್ ಆಯ್ಕೆ ಅನ್ನು ನೀಡಿದೆ.

ಇನ್ನು 7.2 kW AC ಫಾಸ್ಟ್ ಚಾರ್ಜಿಂಗ್ ಆಯ್ಕೆ ಹೊಂದಿರುವ ಎಕ್ಸ್‌ಜೆಡ್ ಪ್ಲಸ್ ಮತ್ತು ಎಕ್ಸ್‌ಜೆಡ್ ಪ್ಲಸ್ ಲಕ್ಸ್ ವೆರಿಯೆಂಟ್‌ಗಳು ಸಾಮಾನ್ಯ ಮಾದರಿಗಿಂತಲೂ ತುಸು ಹೆಚ್ಚುವರಿ ಬೆಲೆ ಹೊಂದಿರಲಿದ್ದು, ಫಾಸ್ಟ್ ಚಾರ್ಜಿಂಗ್ ಮೂಲಕ ಅತಿ ಕಡಿಮೆ ಅವಧಿಯಲ್ಲಿ ಚಾರ್ಜ್ ಮಾಡಬಹುದಾಗಿದೆ.

3.3 kW ಚಾರ್ಜಿಂಗ್ ಆಯ್ಕೆ ಹೊಂದಿರುವ ನೆಕ್ಸಾನ್ ಇವಿ ಮ್ಯಾಕ್ಸ್ ಮಾದರಿಯು ಸೊನ್ನೆಯಿಂದ ಶೇ.100 ರಷ್ಟು ಚಾರ್ಜ್ ಮಾಡಲು ಕನಿಷ್ಠ 14 ರಿಂದ 15 ಗಂಟೆಗಳ ಕಾಲ ಸಮಯಾವಕಾಶ ತೆಗೆದುಕೊಂಡರೆ 7.2 kW AC ಫಾಸ್ಟ್ ಚಾರ್ಜಿಂಗ್ ಆಯ್ಕೆ ಹೊಂದಿರುವ ಮಾದರಿಯು ಪೂರ್ತಿಯಾಗಿ ಚಾರ್ಜ್ ಆಗಲು ಕನಿಷ್ಠ 5 ರಿಂದ 6 ಗಂಟೆಗಳ ಕಾಲ ಸಮಯಾವಕಾಶ ತೆಗದುಕೊಳ್ಳುತ್ತದೆ.

ಹೊಸ ನೆಕ್ಸಾನ್ ಇವಿ ಮ್ಯಾಕ್ಸ್ ಮಾದರಿಯಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ಈ ಹಿಂದಿನ 30kWh ಬ್ಯಾಟರಿ ಪ್ಯಾಕ್ ಸ್ಥಾನಕ್ಕೆ ಹೊಸದಾಗಿ 40.5kWh ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಜೋಡಣೆ ಮಾಡಿದ್ದು, ಇದು ARAI ಸಂಸ್ಥೆಯು ಪ್ರಮಾಣೀಕರಿಸಿದಂತೆ ಪ್ರತಿ ಚಾರ್ಜ್‌ಗೆ ಗರಿಷ್ಠ 437 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.

ನೆಕ್ಸಾನ್ ಇವಿ ಮ್ಯಾಕ್ಸ್ ಮಾದರಿಯು ಇಕೋ ಮೋಡ್‌ನಲ್ಲಿ 437 ಕಿ.ಮೀ ಮೈಲೇಜ್ ಹೊಂದಿದ್ದರೂ ಅದು ವಿವಿಧ ಡ್ರೈವಿಂಗ್ ಮೋಡ್ ಮತ್ತು ರಸ್ತೆ ಸೌಲಭ್ಯಕ್ಕೆ ಅನುಗುಣವಾಗಿ ರಿಯಲ್ ವರ್ಲ್ಡ್ ಮೈಲೇಜ್ ಪ್ರಮಾಣದಲ್ಲಿ ವ್ಯತ್ಯಾಸ ಉಂಟಾಗಲಿದ್ದು, ಇದು ವಿವಿಧ ಡ್ರೈವ್ ಮೋಡ್ ಮತ್ತು ರಸ್ತೆ ಸೌಲಭ್ಯಗಳಿಗೆ ಅನುಗುಣವಾಗಿ ಕನಿಷ್ಠ 300ರಿಂದ 320 ಕಿ.ಮೀ ರೇಂಜ್ ಅನ್ನು ಅರಾಮವಾಗಿ ಪಡೆದುಕೊಳ್ಳಬಹುದು.


Click it and Unblock the Notifications