ಹೊಸ ಪಾಲುದಾರಿಕೆ ಯೋಜನೆ ಅಡಿ 5 ಸಾವಿರ ಇವಿ ಕಾರುಗಳಿಗೆ ಬೇಡಿಕೆ ಪಡೆದುಕೊಂಡ ಟಾಟಾ ಮೋಟಾರ್ಸ್

ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿರುವ ಟಾಟಾ ಮೋಟಾರ್ಸ್ ಕಂಪನಿಯು ಪ್ರಮುಖ ಕ್ಯಾಬ್ ಸೇವಾ ಸಂಸ್ಥೆಗಳಿಂದ ಇವಿ ಕಾರು ಮಾದರಿಗಳಿಗೆ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಕಂಪನಿಯು ಇತ್ತೀಚೆಗೆ ಲಿಥಿಯಂ ಅರ್ಬನ್ ಟೆಕ್ನಾಲಜೀಸ್ ಜೊತೆ ಹೊಸ ಪಾಲುದಾರಿಕೆಯನ್ನು ಘೋಷಿಸಿದೆ.

ಹೊಸ ಪಾಲುದಾರಿಕೆ ಯೋಜನೆ ಅಡಿ 5 ಸಾವಿರ ಇವಿ ಕಾರುಗಳಿಗೆ ಬೇಡಿಕೆ ಪಡೆದುಕೊಂಡ ಟಾಟಾ ಮೋಟಾರ್ಸ್

ಹೊಸ ಪಾಲುದಾರಿಕೆ ಯೋಜನೆ ಅಡಿ ಲಿಥಿಯಂ ಅರ್ಬನ್ ಟೆಕ್ನಾಲಜೀಸ್ ಕಂಪನಿಯು ತನ್ನ ಉದ್ಯೋಗಿಗಳಿಗೆ ಕ್ಯಾಬ್ ಸೇವೆಯನ್ನು ಒದಗಿಸಲು ಟಾಟಾ ಮೋಟಾರ್ಸ್ ನಿರ್ಮಾಣದ ಎಕ್ಸ್‌ಪ್ರೆಸ್-ಟಿ ಇವಿ(XPres-T EV) ಮಾದರಿಯ 5 ಸಾವಿರ ಯುನಿಟ್‌ಗೆ ಬೇಡಿಕೆ ಸಲ್ಲಿಸಿದ್ದು, ಮುಂದಿನ ಒಂದು ವರ್ಷದೊಳಗಾಗಿ ಬೇಡಿಕೆ ಸಲ್ಲಿಸಲಾಗಿರುವ ಕಾರುಗಳನ್ನು ವಿತರಣೆ ಮಾಡುವುದಾಗಿ ಟಾಟಾ ಕಂಪನಿಯು ವಿಶ್ವಾಸ ವ್ಯಕ್ತಪಡಿಸಿದೆ.

ಹೊಸ ಪಾಲುದಾರಿಕೆ ಯೋಜನೆ ಅಡಿ 5 ಸಾವಿರ ಇವಿ ಕಾರುಗಳಿಗೆ ಬೇಡಿಕೆ ಪಡೆದುಕೊಂಡ ಟಾಟಾ ಮೋಟಾರ್ಸ್

ಟಾಟಾ ಕಂಪನಿಯು ನೆಕ್ಸಾನ್ ಇವಿ ಮತ್ತು ಟಿಗೋರ್ ಇವಿ ಮಾದರಿಗಳ ಮೂಲಕ ಪ್ರಯಾಣಿಕರ ಬಳಕೆಯ ಇವಿ ಕಾರು ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದರೆ ವಾಣಿಜ್ಯ ವಾಹನ ಬಳಕೆದಾರರಿಗಾಗಿಯೇ ವಿಶೇಷವಾಗಿ ಸಿದ್ದಗೊಂಡಿರುವ ಎಕ್ಸ್‌ಪ್ರೆಸ್-ಟಿ ಇವಿ ಮಾದರಿಯು ಕ್ಯಾಬ್ ಸೇವಾ ವಿಭಾಗದಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದೆ.

ಹೊಸ ಪಾಲುದಾರಿಕೆ ಯೋಜನೆ ಅಡಿ 5 ಸಾವಿರ ಇವಿ ಕಾರುಗಳಿಗೆ ಬೇಡಿಕೆ ಪಡೆದುಕೊಂಡ ಟಾಟಾ ಮೋಟಾರ್ಸ್

ಹೊಸ ಪಾಲುದಾರಿಕೆಯೊಂದಿಗೆ ಟಾಟಾ ಮೋಟಾರ್ಸ್ ಫ್ಲೀಟ್ ವಿಭಾಗದಲ್ಲಿ ಇಷ್ಟು ದೊಡ್ಡ ಸಂಖ್ಯೆಯ ಎಲೆಕ್ಟ್ರಿಕ್ ಕಾರುಗಳ ಬೇಡಿಕೆ ಪಡೆದುಕೊಂಡ ಮೊದಲ ವಾಹನ ತಯಾರಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಈ ಪಾಲುದಾರಿಕೆಯು ಭಾರತದಲ್ಲಿ ಫ್ಲೀಟ್ ವಿಭಾಗದಲ್ಲಿ ಎಲೆಕ್ಟ್ರಿಕ್ ಕಾರುಗಳ ಭವಿಷ್ಯವನ್ನು ನಿರ್ಧರಿಸಲಿದೆ ಎಂದು ಟಾಟಾ ಮೋಟಾರ್ಸ್ ಭರವಸೆ ವ್ಯಕ್ತಪಡಿಸಿದೆ.

ಹೊಸ ಪಾಲುದಾರಿಕೆ ಯೋಜನೆ ಅಡಿ 5 ಸಾವಿರ ಇವಿ ಕಾರುಗಳಿಗೆ ಬೇಡಿಕೆ ಪಡೆದುಕೊಂಡ ಟಾಟಾ ಮೋಟಾರ್ಸ್

ಹೆಚ್ಚುತ್ತಿರುವ ಇಂಧನಗಳ ಪರಿಣಾಮ ವಾಹನಗಳ ನಿರ್ವಹಣಾ ವೆಚ್ಚ ಹೆಚ್ಚುತ್ತಿರುವುದರಿಂದ ಗ್ರಾಹಕರು ಪರಿಸರ ಸ್ನೇಹಿ ವಾಹನಗಳ ಬಳಕೆಗೆ ಆದ್ಯತೆ ನೀಡುತ್ತಿದ್ದು, ಹೊಸ ಪಾಲುದಾರಿಕೆಯೊಂದಿಗೆ ಟಾಟಾ ಮೋಟಾರ್ಸ್ ಕಂಪನಿಯು ಇವಿ ವಾಹನ ವಿಭಾಗದಲ್ಲಿ ಹೊಸ ಬದಲಾವಣೆಯ ನೀರಿಕ್ಷೆಯಲ್ಲಿದೆ.

ಹೊಸ ಪಾಲುದಾರಿಕೆ ಯೋಜನೆ ಅಡಿ 5 ಸಾವಿರ ಇವಿ ಕಾರುಗಳಿಗೆ ಬೇಡಿಕೆ ಪಡೆದುಕೊಂಡ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಕಂಪನಿಯು ಫ್ಲೀಟ್ ಗ್ರಾಹಕರಿಗಾಗಿಯೇ ಪ್ರತ್ಯೇಕವಾಗಿ ಎಕ್ಸ್‌ಪ್ರೆಸ್-ಟಿ ಎಲೆಕ್ಟ್ರಿಕ್ ಸೆಡಾನ್ ಅನ್ನು ವಿಶೇಷವಾಗಿ ಅಭಿವೃದ್ಧಿಪಡಿಸಿದ್ದು, ಎಕ್ಸ್‌ಪ್ರೆಸ್-ಟಿ ಎಲೆಕ್ಟ್ರಿಕ್ ಕಾರು ಉತ್ತಮ ಶ್ರೇಣಿ, ವೇಗದ ಚಾರ್ಜಿಂಗ್ ಪರಿಹಾರ ಮತ್ತು ಪ್ರಯಾಣಿಕರಿಗೆ ಹೆಚ್ಚಿನ ಸುರಕ್ಷತೆ ಮತ್ತು ಸೌಕರ್ಯದೊಂದಿಗೆ ಬರುತ್ತದೆ.

ಹೊಸ ಪಾಲುದಾರಿಕೆ ಯೋಜನೆ ಅಡಿ 5 ಸಾವಿರ ಇವಿ ಕಾರುಗಳಿಗೆ ಬೇಡಿಕೆ ಪಡೆದುಕೊಂಡ ಟಾಟಾ ಮೋಟಾರ್ಸ್

ಫ್ಲೀಟ್ ಆಪರೇಟರ್‌ಗಳಿಗೆ ಇದು ವಿಶ್ವಾಸಾರ್ಹ ಕಡಿಮೆ ವೆಚ್ಚದ ಎಲೆಕ್ಟ್ರಿಕ್ ಕಾರ್ ಆಗಿದ್ದು, ಇದರ ಚಾಲನೆಯ ವೆಚ್ಚವು ಪೆಟ್ರೋಲ್ ಕಾರ್‌ಗಿಂತಲೂ ಕಡಿಮೆಯಿರುತ್ತದೆ. ಹೊಸ ಇವಿ ಕಾರು ಫ್ಲೀಟ್ ಆಪರೇಟರ್‌ಗಳ ಲಾಭವನ್ನು ಹೆಚ್ಚಿಸಲು ಸಹಕಾರಿಯಾಗಲಿದ್ದು, ಹೊಸ ಕಾರು ಡೀಸೆಲ್ ಕಾರುಗಳಿಂತಲೂ ಶೇ. 60 ರಷ್ಟು ಕಡಿಮೆ ನಿರ್ವಹಣಾ ವೆಚ್ಚವನ್ನ ಹೊಂದಿದೆ.

ಹೊಸ ಪಾಲುದಾರಿಕೆ ಯೋಜನೆ ಅಡಿ 5 ಸಾವಿರ ಇವಿ ಕಾರುಗಳಿಗೆ ಬೇಡಿಕೆ ಪಡೆದುಕೊಂಡ ಟಾಟಾ ಮೋಟಾರ್ಸ್

ಟಾಟಾ ಕಂಪನಿಯು ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟವನ್ನು ಹೆಚ್ಚಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಇತ್ತೀಚೆಗೆ ಹೊಸ ಟಿಗೋರ್ ಎಲೆಕ್ಟ್ರಿಕ್ ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು.

ಹೊಸ ಪಾಲುದಾರಿಕೆ ಯೋಜನೆ ಅಡಿ 5 ಸಾವಿರ ಇವಿ ಕಾರುಗಳಿಗೆ ಬೇಡಿಕೆ ಪಡೆದುಕೊಂಡ ಟಾಟಾ ಮೋಟಾರ್ಸ್

ಟಿಗೋರ್ ಇವಿ ಆಧರಿಸಿ ಎಕ್ಸ್‌ಪ್ರೆಸ್-ಟಿ ಮಾದರಿಯನ್ನು ಫ್ಲೀಟ್ ಗ್ರಾಹಕರಿಗಾಗಿಯೇ ಪ್ರತ್ಯೇಕವಾಗಿ ಅಭಿವೃದ್ದಿಗೊಳಿಸಿದ್ದು, XM, XZ, XM + ಹಾಗೂ XZ + ಎಂಬ ನಾಲ್ಕು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಹೊಸ ಪಾಲುದಾರಿಕೆ ಯೋಜನೆ ಅಡಿ 5 ಸಾವಿರ ಇವಿ ಕಾರುಗಳಿಗೆ ಬೇಡಿಕೆ ಪಡೆದುಕೊಂಡ ಟಾಟಾ ಮೋಟಾರ್ಸ್

ಎಕ್ಸ್‌ಪ್ರೆಸ್-ಟಿ ಎಲೆಕ್ಟ್ರಿಕ್ ಕಾರಿನಲ್ಲಿರುವ ಪ್ರಮುಖ ಲಕ್ಷಣವೆಂದರೆ ಈ ಕಾರು 21.5 ಕಿ.ವ್ಯಾ ಹಾಗೂ 16.5 ಕಿ.ವ್ಯಾ ಬ್ಯಾಟರಿಯನ್ನು ಹೊಂದಿದ್ದು, 16.5 ಕಿ.ವ್ಯಾ ಬ್ಯಾಟರಿಯನ್ನು ಹೊಂದಿರುವ ಒಂದು ಮಾದರಿಯ ಬೆಲೆ ರೂ. 9.54 ಲಕ್ಷಗಳಾದರೆ, ಮತ್ತೊಂದು ಮಾದರಿಯ ಬೆಲೆ ರೂ. 10.04 ಲಕ್ಷಗಳಾಗಿದೆ.

ಹೊಸ ಪಾಲುದಾರಿಕೆ ಯೋಜನೆ ಅಡಿ 5 ಸಾವಿರ ಇವಿ ಕಾರುಗಳಿಗೆ ಬೇಡಿಕೆ ಪಡೆದುಕೊಂಡ ಟಾಟಾ ಮೋಟಾರ್ಸ್

21.5 ಕಿ.ವ್ಯಾ ಬ್ಯಾಟರಿ ಹೊಂದಿರುವ ಇತರ ಎರಡು ಮಾದರಿಗಳ ಬೆಲೆ ಕ್ರಮವಾಗಿ ರೂ. 10.14 ಲಕ್ಷ ಹಾಗೂ ರೂ.10.64 ಲಕ್ಷಗಳಾಗಿದೆ. 16.5 ಕಿ.ವ್ಯಾ ಬ್ಯಾಟರಿಯನ್ನು ಹೊಂದಿರುವ ಮಾದರಿಯು ಪೂರ್ತಿಯಾಗಿ ಚಾರ್ಜ್ ಆದ ನಂತರ 165 ಕಿ.ಮೀಗಳವರೆಗೆ ಚಲಿಸುತ್ತದೆ. ಇನ್ನು 21.5 ಕಿ.ವ್ಯಾ ಬ್ಯಾಟರಿಯನ್ನು ಹೊಂದಿರುವ ಮಾದರಿಯು ಪೂರ್ತಿಯಾಗಿ ಚಾರ್ಜ್ ಆದ ನಂತರ ಗರಿಷ್ಠ 213 ಕಿ.ಮೀಗಳವರೆಗೆ ಚಲಿಸುತ್ತದೆ.

ಹೊಸ ಪಾಲುದಾರಿಕೆ ಯೋಜನೆ ಅಡಿ 5 ಸಾವಿರ ಇವಿ ಕಾರುಗಳಿಗೆ ಬೇಡಿಕೆ ಪಡೆದುಕೊಂಡ ಟಾಟಾ ಮೋಟಾರ್ಸ್

ಈ ಬ್ಯಾಟರಿಗಳನ್ನು 90 ರಿಂದ 110 ನಿಮಿಷಗಳಲ್ಲಿ 0 - 80% ವರೆಗೂ ಚಾರ್ಜ್ ಮಾಡಬಹುದು ಎಂದು ಟಾಟಾ ಕಂಪನಿ ಹೇಳಿದೆ. 15 ಆಂಪಿಯರ್ ಎಲೆಕ್ಟ್ರಿಕ್ ಚಾರ್ಜರ್ ಹಾಗೂ ಫಾಸ್ಟ್ ಚಾರ್ಜರ್ ಗಳಿಂದ ಈ ಬ್ಯಾಟರಿಗಳನ್ನು ಚಾರ್ಜ್ ಮಾಡಬಹುದು. ವಾಣಿಜ್ಯ ಬಳಕೆಗಾಗಿ ಈ ಕಾರಿನ ಸುತ್ತಲೂ ಬಿಳಿ ಬಣ್ಣದೊಂದಿಗೆ ನೀಲಿ ಸ್ಪರ್ಶವನ್ನು ನೀಡಲಾಗಿದೆ.

ಹೊಸ ಪಾಲುದಾರಿಕೆ ಯೋಜನೆ ಅಡಿ 5 ಸಾವಿರ ಇವಿ ಕಾರುಗಳಿಗೆ ಬೇಡಿಕೆ ಪಡೆದುಕೊಂಡ ಟಾಟಾ ಮೋಟಾರ್ಸ್

ಇದರಿಂದ ನೋಡುಗರಿಗೆ ಈ ಕಾರು ಎಲೆಕ್ಟ್ರಿಕ್ ಕಾರು ಎಂದು ತಿಳಿಯುತ್ತದೆ. ಈ ಎಲೆಕ್ಟ್ರಿಕ್ ಕಾರಿನ ಒಳ ಭಾಗದಲ್ಲಿ ನೀಲಿ ಬಣ್ಣವನ್ನು ನೀಡಲಾಗಿದೆ. ಈ ನೀಲಿ ಹೈಲೈಟ್‌ಗಳೇ ಎಲೆಕ್ಟ್ರಿಕ್ ಕಾರುಗಳನ್ನು ಟಾಟಾ ಕಂಪನಿಯ ಇತರೆ ಫ್ಯೂಯಲ್ ಕಾರುಗಳಿಂದ ಪ್ರತ್ಯೇಕಿಸುತ್ತವೆ.

ಹೊಸ ಪಾಲುದಾರಿಕೆ ಯೋಜನೆ ಅಡಿ 5 ಸಾವಿರ ಇವಿ ಕಾರುಗಳಿಗೆ ಬೇಡಿಕೆ ಪಡೆದುಕೊಂಡ ಟಾಟಾ ಮೋಟಾರ್ಸ್

ಈ ಹೊಸ ಕಮರ್ಷಿಯಲ್ ಎಲೆಕ್ಟ್ರಿಕ್ ಕಾರಿನ ಒಳಾಂಗಣ ಕ್ಯಾಬಿನ್ ಅನ್ನು ಪ್ರೀಮಿಯಂ ಗುಣಮಟ್ಟದ ಕಪ್ಪು ಬಣ್ಣದಲ್ಲಿರುವ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ನಂತಹ ಫೀಚರ್ ಗಳೊಂದಿಗೆ ವಿನ್ಯಾಸಗೊಳಿಸಲಾಗಿದೆ. ಇದರ ಜೊತೆಗೆ ಈ ಎಲೆಕ್ಟ್ರಿಕ್ ಕಾರು ಡ್ಯುಯಲ್ ಏರ್‌ಬ್ಯಾಗ್‌, ಇಬಿಡಿ ಹೊಂದಿರುವ ಎಬಿಎಸ್‌ನಂತಹ ಸುರಕ್ಷತಾ ಫೀಚರ್ ಗಳನ್ನು ಹೊಂದಿದೆ.

ಹೊಸ ಪಾಲುದಾರಿಕೆ ಯೋಜನೆ ಅಡಿ 5 ಸಾವಿರ ಇವಿ ಕಾರುಗಳಿಗೆ ಬೇಡಿಕೆ ಪಡೆದುಕೊಂಡ ಟಾಟಾ ಮೋಟಾರ್ಸ್

ಈಗಾಗಲೇ ಹೇಳಿದಂತೆ ಎಕ್ಸ್‌ಪ್ರೆಸ್ ಟಿ ಎಲೆಕ್ಟ್ರಿಕ್ ಕಾರ್ ಅನ್ನು ವಾಣಿಜ್ಯ ಬಳಕೆಗಾಗಿ ಮಾತ್ರ ಪರಿಚಯಿಸಲಾಗಿದೆ. ಈ ಎಲೆಕ್ಟ್ರಿಕ್ ಕಾರ್ ಅನ್ನು ವೈಯಕ್ತಿಕ ಬಳಕೆಗೆ ಮಾರಾಟ ಮಾಡುವುದಿಲ್ಲ. ವಾಣಿಜ್ಯ ಬಳಕೆಗಾಗಿ ಈ ಎಲೆಕ್ಟ್ರಿಕ್ ಕಾರ್ ಅನ್ನು ಕಾರ್ಪೊರೇಶನ್‌ಗಳು, ಬಾಡಿಗೆ ಕಾರ್ ಕಂಪನಿಗಳು ಹಾಗೂ ಸರ್ಕಾರಿ ಏಜೆನ್ಸಿಗಳಿಗೆ ಮಾರಾಟ ಮಾಡಲಾಗುತ್ತದೆ.

Article Published On: Wednesday, April 27, 2022, 12:43 [IST]
English summary
Tata motors and lithium urban technologies partner to expand the all electric fleet
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+