Just In
- 23 min ago
ಭಾರತದಲ್ಲಿ ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿದೆ ಹೊಸ ಎಂಜಿ ಎಲೆಕ್ಟ್ರಿಕ್ ಕಾರು
- 30 min ago
ರೈಲು ಚಾಲನೆಗೆ ಇಬ್ಬರು ಲೋಕೋ ಪೈಲಟ್ಗಳನ್ನು ಏಕೆ ನೇಮಿಸುತ್ತಾರೆ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ
- 1 hr ago
ಆಕರ್ಷಕದ ವಿನ್ಯಾಸದಲ್ಲಿ ಹ್ಯುಂಡೈ ಐಯಾನಿಕ್ ಎಲೆಕ್ಟ್ರಿಕ್ ಕಾರು ಅನಾವರಣ
- 2 hrs ago
ಮಳೆಯಲ್ಲಿ ಬೈಕ್ ಚಾಲನೆ ಮಾಡುವ ಸವಾರರು ಸುರಕ್ಷಿತವಾಗಿರಲು ಈ ಟಿಪ್ಸ್ ಫಾಲೋ ಮಾಡಿ
Don't Miss!
- News
Breaking; ಬೆಂಗಳೂರು ನಗರದಲ್ಲಿ ಬುಧವಾರ ಸಂಜೆ ಮಳೆ ಆರ್ಭಟ
- Sports
ಭಾರತ vs ಇಂಗ್ಲೆಂಡ್ 5ನೇ ಟೆಸ್ಟ್: ಎಡ್ಜ್ಬಾಸ್ಟನ್ ಪಿಚ್ ವರದಿ, ಸ್ಕ್ವಾಡ್
- Education
IWST Recruitment 2022 : 13 ಪ್ರಾಜೆಕ್ಟ್ ಫೆಲೋ ಮತ್ತು ಪ್ರಾಜೆಕ್ಟ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ಸುನೇತ್ರಾ ಪಂಡಿತ್: ಆಕ್ಸಿಡೆಂಟ್ ಬಳಿಕ ನಟನೆಗೆ ಮರಳಿದ ಸುನೇತ್ರಾ ಪಂಡಿತ್
- Finance
ಡಾಲರ್ ಎದುರು ಮತ್ತೆ ಸಾರ್ವಕಾಲಿತ ಕುಸಿತ ಕಂಡ ರೂಪಾಯಿ
- Technology
ಅಮೆಜಾನ್ ಫ್ಯಾಬ್ ಫೋನ್ಸ್ ಫೆಸ್ಟ್ ಸೇಲ್ನಲ್ಲಿ ಈ ಫೋನ್ಗಳಿಗೆ ಬಿಗ್ ಆಫರ್!
- Lifestyle
ಫಸ್ಟ್ ಟೈಮ್ ಪ್ರೆಗ್ನೆನ್ಸಿ?ನೀವು ತಿಳಿಯಲೇಬೇಕಾದ ಸಂಗತಿಗಳಿವು
- Travel
ದೇವಿ ಮೂಕಾಂಬಿಕೆಯ ದೈವಿಕ ಸನ್ನಿಧಿಯ ಸ್ಥಳ - ಕೊಲ್ಲೂರು
ವಿವಿಧ ಕಾರುಗಳ ಖರೀದಿ ಮೇಲೆ ಜೂನ್ ಆಫರ್ ಘೋಷಣೆ ಮಾಡಿದ ಟಾಟಾ ಮೋಟಾರ್ಸ್
ದೇಶಿಯ ಮಾರುಕಟ್ಟೆಯಲ್ಲಿನ ಕಾರು ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ತನ್ನ ಸಂಭಾವ್ಯ ಗ್ರಾಹಕರಿಗೆ ಪ್ರಮುಖ ಕಾರುಗಳ ಖರೀದಿ ಮೇಲೆ ವಿವಿಧ ಆಫರ್‌ಗಳನ್ನು ನೀಡುತ್ತಿದ್ದು, ಹೊಸ ಆಫರ್‌ಗಳು ಜೂನ್ 30ರ ತನಕ ಲಭ್ಯವಿರಲಿವೆ.

ಸೆಮಿಕಂಡಕ್ಟರ್ ಕೊರತೆಯ ನಡುವೆಯೂ ಕಾರುಗಳ ಮಾರಾಟದಲ್ಲಿ ಸ್ಥಿರತೆ ಕಾಯ್ದುಕೊಂಡಿರುವ ಟಾಟಾ ಮೋಟಾರ್ಸ್ ಕಂಪನಿಯು ಹೊಸ ಕಾರು ಮಾದರಿಗಳೊಂದಿಗೆ ಗ್ರಾಹಕರ ಬೇಡಿಕೆಯಲ್ಲಿ ಮುಂಚೂಣಿ ಸಾಧಿಸುತ್ತಿದೆ. ಜೊತೆಗೆ ವಿವಿಧ ಕಾರುಗಳ ಮೇಲೆ ಆಕರ್ಷಕ ಆಫರ್‌ಗಳನ್ನು ಘೋಷಣೆ ಮಾಡುತ್ತಿದ್ದು, ಹೊಸ ಆಫರ್‌ಗಳು ಈ ತಿಂಗಳಾಂತ್ಯದ ತನಕ ಪಡೆದುಕೊಳ್ಳಬಹುದಾಗಿದೆ.

ಟಿಯಾಗೊ, ಟಿಗೋರ್, ಆಲ್‌ಟ್ರೊಜ್, ನೆಕ್ಸಾನ್, ಹ್ಯಾರಿಯರ್ ಮತ್ತು ನೆಕ್ಸಾನ್ ಕಾರುಗಳ ಮೇಲೆ ವಿಶೇಷ ಆಫರ್ ನೀಡಲಾಗುತ್ತಿದ್ದು, ಹೊಸ ಆಫರ್‌ಗಳಲ್ಲಿ ಕ್ಯಾಶ್ ಡಿಸ್ಕೌಂಟ್, ಎಕ್ಸ್‌ಚೆಂಜ್ ಆಫರ್ ಜೊತೆಗೆ ವಿಶೇಷ ಪ್ಯಾಕೇಜ್ ಲಭ್ಯವಿದೆ.

ಟಾಟಾ ಮೋಟಾರ್ಸ್ ಹೊಸ ಆಫರ್‌ಗಳಲ್ಲಿ ಕನಿಷ್ಠ ರೂ.10 ಸಾವಿರದಿಂದ ಗರಿಷ್ಠ ರೂ. 60 ಸಾವಿರ ತನಕ ಉಳಿತಾಯ ಮಾಡಬಹುದಾಗಿದ್ದು, ನೆಕ್ಸಾನ್ ಮಾದರಿಯ ಮೇಲೆ ಕಡಿಮೆ ಪ್ರಮಾಣದ ಆಫರ್ ಲಭ್ಯವಿದ್ದಲ್ಲಿ ಹ್ಯಾರಿಯರ್ ಮಾದರಿಯ ಮೇಲೆ ಹೆಚ್ಚಿನ ಆಫರ್ ನೀಡಲಾಗುತ್ತಿದೆ.

ಟಾಟಾ ಹೊಸ ಆಫರ್‌ಗಳಲ್ಲಿ ಆರಂಭಿಕ ಕಾರು ಮಾದರಿಯಾದ ಟಿಯಾಗೋ ಹ್ಯಾಚ್‌ಬ್ಯಾಕ್ ಮಾದರಿಯ ಮೇಲೆ ಕಂಪನಿಯು ರೂ. 31,500 ತನಕ ಆಫರ್ ಘೋಷಿಸಿದೆ. ಹೊಸ ಆಫರ್‌ನಲ್ಲಿ ಎಕ್ಸ್ಇ, ಎಕ್ಸ್ಎಂ ಮತ್ತು ಎಕ್ಸ್‌ಟಿ ಮಾದರಿಗಳ ಮೇಲೆ ರೂ.21,500 ತನಕ ಉಳಿತಾಯ ಮಾಡಬಹುದಾಗಿದ್ದರೆ ಎಕ್ಸ್‌ಜೆಡ್ ಟಾಪ್ ಎಂಡ್ ಮಾದರಿಯ ಮೇಲೆ ಗರಿಷ್ಠ ರೂ. 31,500 ಆಫರ್ ಪಡೆದುಕೊಳ್ಳಬಹುದು.

ಟಿಯಾಗೋ ನಂತರ ಟಿಗೋರ್ ಕಂಪ್ಯಾಕ್ಟ್ ಸೆಡಾನ್ ಮಾದರಿಯ ಮೇಲೂ ಟಾಟಾ ಮೋಟಾರ್ಸ್ ಕಂಪನಿಯು ಆಕರ್ಷಕ ಡಿಸ್ಕೌಂಟ್ ನೀಡುತ್ತಿದೆ. ಟಿಗೋರ್ ಕಾರು ಖರೀದಿಯ ಮೇಲೂ ಗ್ರಾಹಕರು ರೂ. 31,500 ತನಕ ಉಳಿತಾಯ ಮಾಡಬಹುದಾಗಿದ್ದು, ಎಕ್ಸ್ಇ, ಎಕ್ಸ್ಎಂ ಮತ್ತು ಎಕ್ಸ್‌ಟಿ ಮಾದರಿಗಳ ಮೇಲೆ ರೂ.21,500 ತನಕ ಉಳಿತಾಯ ಮಾಡಬಹುದಾಗಿದ್ದರೆ ಎಕ್ಸ್‌ಜೆಡ್ ಟಾಪ್ ಎಂಡ್ ಮಾದರಿಯ ಮೇಲೆ ಗರಿಷ್ಠ ರೂ. 31,500 ಆಫರ್ ಪಡೆದುಕೊಳ್ಳಬಹುದು.

ಸದ್ಯ ಟಿಯಾಗೋ ಕಾರು ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 5.38 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 7.45 ಲಕ್ಷ ಬೆಲೆ ಹೊಂದಿದ್ದರೆ ಟಿಗೋರ್ ಕಾರು ಮಾದರಿಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 5.98 ಲಕ್ಷದಿಂದ ರೂ. 8.27 ಲಕ್ಷ ಬೆಲೆ ಹೊಂದಿದೆ.

ಟಾಟಾ ಹೊಸ ಆಫರ್‌ಗಳಲ್ಲಿ ಜನಪ್ರಿಯ ಕಾರು ಮಾದರಿಯಾದ ನೆಕ್ಸಾನ್ ಆವೃತ್ತಿಯ ಮಾದರಿಯ ಮೇಲೆ ರೂ.10 ಸಾವಿರ ತನಕ ಆಫರ್ ನೀಡುತ್ತಿದ್ದು, ಪೆಟ್ರೋಲ್ ಮಾದರಿಯ ಮೇಲೆ ರೂ.6 ಸಾವಿರ ಮತ್ತು ಡೀಸೆಲ್ ಆವೃತ್ತಿಯ ಮೇಲೆ ಗರಿಷ್ಠ ರೂ. 10 ಸಾವಿರ ಎಕ್ಸ್‌ಚೆಂಜ್ ಆಫರ್ ನೀಡುತ್ತಿದೆ. ಹೊಸ ಆಫರ್ ನಲ್ಲಿ ನೆಕ್ಸಾನ್ ಡಾರ್ಕ್ ಎಡಿಷನ್ ಮತ್ತು ಪೆಟ್ರೋಲ್ ಮಾದರಿಗಳನ್ನು ಹೊರತುಪಡಿಸಿ ಇನ್ನುಳಿದ ಎಲ್ಲಾ ಸ್ಟ್ಯಾಂಡರ್ಡ್ ಡೀಸೆಲ್ ವೆರಿಯೆಂಟ್‌ಗಳ ಮೇಲೆ ಆಫರ್ ಘೋಷಣೆ ಮಾಡಿದೆ.

ಸದ್ಯ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯಲ್ಲಿ ಅತಿ ಹೆಚ್ಚು ಬೇಡಿಕೆ ಪಡೆದುಕೊಳ್ಳುತ್ತಿರುವ ನೆಕ್ಸಾನ್ ಕಾರು ಮಾದರಿಯು ಪ್ರತಿಸ್ಪರ್ಧಿ ಕಾರು ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡುತ್ತಿದ್ದು, ನೆಕ್ಸಾನ್ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 7.55 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 13.90 ಲಕ್ಷ ಬೆಲೆ ಹೊಂದಿದೆ.

ನೆಕ್ಸಾನ್ ಕಾರು ಮಾದರಿಯು 1.2-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಮಾರಾಟಗೊಳ್ಳುತ್ತಿದ್ದು, ಹೊಸ ಕಾರಿನಲ್ಲಿ ಇತ್ತೀಚೆಗೆ ಬಿಡುಗಡೆಯಾಗಿರುವ ಕಾಜಿರಂಗ ಎಡಿಷನ್ ಉನ್ನತ ಮಾದರಿಯಾಗಿ ಮಾರಾಟಗೊಳ್ಳುತ್ತಿದೆ.

ಇನ್ನು ಟಾಟಾ ಕಂಪನಿಯು ತನ್ನ ಹೊಸ ಆಫರ್‌ಗಳಲ್ಲಿ ಹ್ಯಾರಿಯರ್ ಎಸ್‌ಯುವಿ ಕಾರು ಮಾದರಿಯ ಮೇಲೂ ರೂ.60 ಸಾವಿರ ತನಕ ಆಫರ್ ನೀಡುತ್ತಿದ್ದು, ಎಲ್ಲಾ ವೆರಿಯೆಂಟ್‌ಗಳಿಗೂ ಅನ್ವಯಿಸುವಂತೆ ರೂ.40 ಸಾವಿರ ತನಕ ಎಕ್ಸ್‌ಚೆಂಜ್ ಆಫರ್ ಮತ್ತು ರೂ.20 ಸಾವಿರ ತನಕ ಕಾರ್ಪೊರೆಟ್ ಡಿಸ್ಕೌಂಟ್ ನೀಡುತ್ತಿದೆ.

ಹೊಸ ಆಫರ್‌ಗಳಲ್ಲಿ ಕಂಪನಿಯು ನ್ಯೂ ಜನರೇಷನ್ ಸಫಾರಿ ಎಸ್‌ಯುವಿ ಮೇಲೂ ರೂ.40 ಸಾವಿರ ಮೌಲ್ಯದ ಆಫರ್ ಘೋಷಣೆ ಮಾಡಿದ್ದು, ಎಲ್ಲಾ ವೆರಿಯೆಂಟ್‌ಗಳಿಗೂ ಎಕ್ಸ್‌ಚೆಂಜ್ ಆಫರ್ ಮತ್ತು ರೂ.5 ಸಾವಿರ ತನಕ ಕಾರ್ಪೊರೆಟ್ ಡಿಸ್ಕೌಂಟ್ ಸಹ ನೀಡುತ್ತಿದೆ.

ಕಾರ್ಪೊರೇಟ್ ಡಿಸ್ಕೌಂಟ್‌ಗಳಲ್ಲಿ ಗ್ರಾಮೀಣ ಭಾಗದ ಶಿಕ್ಷಕರಿಗೂ ವಿಶೇಷ ಉಳಿತಾಯ ಯೋಜನೆಗಳನ್ನು ಘೋಷಣೆ ಮಾಡಿದ್ದು, ಹೆಲ್ತ್ ಕೇರ್ ಸಿಬ್ಬಂದಿ ಸಹ ಹೊಸ ಸ್ಕೀಮ್ ಅಡಿಯಲ್ಲಿ ಕೆಲವು ವಿನಾಯ್ತಿ ಪಡೆದುಕೊಳ್ಳಬಹುದಾಗಿದೆ.

ಹೊಸ ಆಫರ್‌ಗಳಲ್ಲಿ ಟಿಯಾಗೋ ಎನ್ಆರ್‌ಜಿ, ಸಿಎನ್‌ಜಿ, ನೆಕ್ಸಾನ್ ಇವಿ, ಪಂಚ್ ಆವೃತ್ತಿಗಳ ಮೇಲೆ ಯಾವುದೇ ಆಫರ್ ನೀಡುತ್ತಿಲ್ಲವಾದರೂ ಡೀಲರ್ಸ್ ಮಟ್ಟದಲ್ಲೂ ವಿವಿಧ ಆಫರ್‌ಗಳು ಲಭ್ಯವಿದ್ದು, ಹೊಸ ಆಫರ್‌ಗಳೊಂದಿಗೆ ಕಂಪನಿಯು ಹ್ಯುಂಡೈ ಕಂಪನಿಗೆ ಭರ್ಜರಿ ಪೈಪೋಟಿ ನೀಡುತ್ತಿದೆ.

ಸೆಮಿಕಂಡಕ್ಟರ್ ಕೊರತೆ ಮತ್ತು ಕೋವಿಡ್‌ನಿಂದ ಉಂಟಾಗಿದ್ದ ಆರ್ಥಿಕ ಏರಿಳಿತದ ನಡುವೆ ಕಳೆದ ವರ್ಷದ ಮೇ ನಲ್ಲಿ 15,181 ಕಾರುಗಳನ್ನು ಮಾರಾಟ ಮಾಡಿದ್ದ ಟಾಟಾ ಮೋಟಾರ್ಸ್ ಕಂಪನಿಯು ಕಳೆದ ತಿಂಗಳ ಮೇ ಅವಧಿಯಲ್ಲಿ 43,341 ಕಾರುಗಳ ಮಾರಾಟದ ಮೂಲಕ ಶೇ.185 ರಷ್ಟು ಬೆಳವಣಿ ಸಾಧಿಸಿದೆ.