Just In
Don't Miss!
- Lifestyle
ಆಯುರ್ವೇದ ಔಷಧಿ ಸೇವಿಸುವ ಮುನ್ನ ಈ ಎಚ್ಚರಿಕೆಗಳನ್ನು ನೀವು ತೆಗೆದುಕೊಳ್ಳಲೇಬೇಕು
- News
ಪಲ್ಲವಿ ಡೇ ಬಳಿಕ ಮತ್ತೊಬ್ಬ ಯುವ ರೂಪದರ್ಶಿ ಆತ್ಮಹತ್ಯೆ
- Sports
ಮಹಿಳಾ ಟಿ20 ಚಾಲೆಂಜ್: ವೆಲಾಸಿಟಿ ವಿರುದ್ಧ ಗೆದ್ದ ಟ್ರೈಲ್ಬ್ಲೇಜರ್ಸ್, ಆದ್ರೂ ಫೈನಲ್ ಮಿಸ್
- Finance
ಮೇ 26ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Movies
ಬಾಲಕೃಷ್ಣ 107ನೇ ಸಿನಿಮಾದ ಟೈಟಲ್ 'ಜೈ ಬಾಲಯ್ಯ'
- Technology
ಸ್ಯಾಮ್ಸಂಗ್ ಗ್ಯಾಲಕ್ಸಿ M13 ಸ್ಮಾರ್ಟ್ಫೋನ್ ಬಿಡುಗಡೆ! ವಿಶೇಷತೆ ಏನು?
- Education
Karnataka SSLC Revaluation 2022 : ಮರುಮೌಲ್ಯಮಾಪನ ಮತ್ತು ಮರುಎಣಿಕೆಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ವಿವಿಧ ಕಾರುಗಳ ಖರೀದಿಗೆ ಆಕರ್ಷಕ ಡಿಸ್ಕೌಂಟ್ ಘೋಷಣೆ ಮಾಡಿದ ಟಾಟಾ ಮೋಟಾರ್ಸ್
ಕಾರು ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ತನ್ನ ಸಂಭಾವ್ಯ ಗ್ರಾಹಕರಿಗೆ ಪ್ರಮುಖ ಕಾರುಗಳ ಖರೀದಿ ಮೇಲೆ ವಿವಿಧ ಆಫರ್‌ಗಳನ್ನು ನೀಡುತ್ತಿದ್ದು, ಹೊಸ ಆಫರ್‌ಗಳು ಮಾರ್ಚ್ ಕೊನೆಯ ತನಕವೂ ಲಭ್ಯವಿರಲಿವೆ.

ಸೆಮಿಕಂಡಕ್ಟರ್ ಕೊರತೆಯ ನಡುವೆಯೂ ಕಾರುಗಳ ಮಾರಾಟದಲ್ಲಿ ಸ್ಥಿರತೆ ಕಾಯ್ದುಕೊಂಡಿರುವ ಟಾಟಾ ಮೋಟಾರ್ಸ್ ಕಂಪನಿಯು 2022ರಲ್ಲಿ ಮತ್ತಷ್ಟು ಹೊಸ ಕಾರು ಮಾದರಿಗಳೊಂದಿಗೆ ಗ್ರಾಹಕರ ಬೇಡಿಕೆ ಹೆಚ್ಚಳ ನೀರಿಕ್ಷೆಯಲ್ಲಿದ್ದು, ವಿವಿಧ ಕಾರುಗಳ ಮೇಲೆ ಆಕರ್ಷಕ ಆಫರ್‌ಗಳನ್ನು ಘೋಷಣೆ ಮಾಡುತ್ತಿದೆ. ಟಿಯಾಗೊ, ಟಿಗೋರ್, ಆಲ್‌ಟ್ರೊಜ್, ನೆಕ್ಸಾನ್, ಹ್ಯಾರಿಯರ್ ಮತ್ತು ನೆಕ್ಸಾನ್ ಕಾರುಗಳ ಮೇಲೆ ವಿಶೇಷ ಆಫರ್ ಲಭ್ಯವಿದ್ದು, ಹೊಸ ಆಫರ್‌ಗಳು ಈ ತಿಂಗಳಾಂತ್ಯದ ತನಕ ಪಡೆದುಕೊಳ್ಳಬಹುದಾಗಿದೆ.

ಟಾಟಾ ಮೋಟಾರ್ಸ್ ಹೊಸ ಆಫರ್‌ಗಳಲ್ಲಿ ಕ್ಯಾಶ್ ಡಿಸ್ಕೌಂಟ್, ಎಕ್ಸ್‌ಚೆಂಜ್ ಆಫರ್ ಜೊತೆಗೆ ವಿಶೇಷ ಪ್ಯಾಕೇಜ್ ನೀಡುತ್ತಿದ್ದು, ಕನಿಷ್ಠ ರೂ.15 ಸಾವಿರದಿಂದ ಗರಿಷ್ಠ ರೂ. 40 ಸಾವಿರ ತನಕ ಉಳಿತಾಯ ಮಾಡಬಹುದಾಗಿದೆ.

ಹೊಸ ಆಫರ್‌ಗಳಲ್ಲಿ ಆರಂಭಿಕ ಕಾರು ಮಾದರಿಯಾದ ಟಿಯಾಗೋ ಹ್ಯಾಚ್‌ಬ್ಯಾಕ್ ಮಾದರಿಯ ಮೇಲೆ ಕಂಪನಿಯು ರೂ.15 ಸಾವಿರ ತನಕ ಆಫರ್ ಘೋಷಿಸಿದ್ದು, ರೂ. 15 ಸಾವಿರ ಮೌಲ್ಯದ ಆಫರ್‌ನಲ್ಲಿ ರೂ. 10 ಸಾವಿರ ಕ್ಯಾಶ್ ಡಿಸ್ಕೌಂಟ್, ರೂ. 5 ಸಾವಿರ ಎಕ್ಸ್‌ಚೆಂಜ್ ಆಫರ್ ಮತ್ತು ಆಯ್ದ ಮಾದರಿಗಳ ಮೇಲೆ ರೂ. 3 ಸಾವಿರ ಕಾರ್ಪೊರೇಟ್ ಡಿಸ್ಕೌಂಟ್ ನೀಡುತ್ತಿದೆ.

ಟಿಯಾಗೋ ನಂತರ ಟಿಗೋರ್ ಕಂಪ್ಯಾಕ್ಟ್ ಸೆಡಾನ್ ಮಾದರಿಯ ಮೇಲೂ ಟಾಟಾ ಮೋಟಾರ್ಸ್ ಕಂಪನಿಯು ಆಕರ್ಷಕ ಡಿಸ್ಕೌಂಟ್ ನೀಡುತ್ತಿದೆ. ಟಿಗೋರ್ ಕಾರು ಖರೀದಿಯ ಮೇಲೂ ಗ್ರಾಹಕರು ರೂ.20 ಸಾವಿರ ತನಕ ಉಳಿತಾಯ ಮಾಡಬಹುದಾಗಿದ್ದು, ರೂ. 20 ಸಾವಿರದಲ್ಲಿ ರೂ. 10 ಸಾವಿರ ಕ್ಯಾಶ್ ಡಿಸ್ಕೌಂಟ್, ರೂ.10 ಸಾವಿರ ತನಕ ಎಕ್ಸ್‌ಚೆಂಜ್ ಆಫರ್ ಮತ್ತು ಆಯ್ದ ಮಾದರಿಗಳ ಮೇಲೆ ಕಾರ್ಪೊರೇಟ್ ಡಿಸ್ಕೌಂಟ್ ನೀಡುತ್ತಿದೆ.

ಸದ್ಯ ಟಿಯಾಗೋ ಕಾರು ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 5.19 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 7.29 ಲಕ್ಷ ಬೆಲೆ ಹೊಂದಿದ್ದರೆ ಟಿಗೋರ್ ಕಾರು ಮಾದರಿಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 5.79 ಲಕ್ಷದಿಂದ ರೂ. 8.11 ಲಕ್ಷ ಬೆಲೆ ಹೊಂದಿದೆ.

ಟಾಟಾ ಹೊಸ ಆಫರ್‌ಗಳಲ್ಲಿ ಜನಪ್ರಿಯ ಕಾರು ಮಾದರಿಯಾದ ನೆಕ್ಸಾನ್ ಆವೃತ್ತಿಯ ಮಾದರಿಯ ಡೀಸೆಲ್ ಆವೃತ್ತಿಯ ಮೇಲೆ ಕಂಪನಿಯು ರೂ. 15 ಸಾವಿರ ಎಕ್ಸ್‌ಚೆಂಜ್ ಆಫರ್ ನೀಡುತ್ತಿದ್ದು, ಹೊಸ ಆಫರ್ ನಲ್ಲಿ ನೆಕ್ಸಾನ್ ಡಾರ್ಕ್ ಎಡಿಷನ್ ಹೊರತುಪಡಿಸಿ ಇನ್ನುಳಿದ ಎಲ್ಲಾ ಸ್ಟ್ಯಾಂಡರ್ಡ್ ಡೀಸೆಲ್ ವೆರಿಯೆಂಟ್‌ಗಳ ಮೇಲೆ ಆಫರ್ ಘೋಷಣೆ ಮಾಡಿದೆ.

ಸದ್ಯ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯಲ್ಲಿ ಅತಿ ಹೆಚ್ಚು ಬೇಡಿಕೆ ಪಡೆದುಕೊಳ್ಳುತ್ತಿರುವ ನೆಕ್ಸಾನ್ ಕಾರು ಮಾದರಿಯು ಪ್ರತಿಸ್ಪರ್ಧಿ ಕಾರು ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡುತ್ತಿದ್ದು, ನೆಕ್ಸಾನ್ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 7.40 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 13.73 ಲಕ್ಷ ಬೆಲೆ ಹೊಂದಿದೆ.

ನೆಕ್ಸಾನ್ ಕಾರು ಮಾದರಿಯು 1.2-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಮಾರಾಟಗೊಳ್ಳುತ್ತಿದ್ದು, ಹೊಸ ಕಾರಿನಲ್ಲಿ ಇತ್ತೀಚೆಗೆ ಬಿಡುಗಡೆಯಾಗಿರುವ ಕಾಜಿರಂಗ ಎಡಿಷನ್ ಉನ್ನತ ಮಾದರಿಯಾಗಿ ಮಾರಾಟಗೊಳ್ಳುತ್ತಿದೆ.

ಹೊಸ ಆಫರ್‌ಗಳಲ್ಲಿ ಟಾಟಾ ಕಂಪನಿಯು ಪ್ರೀಮಿಯಂ ಹ್ಯಾಚ್‌ಬ್ಯಾಕ್ ಆಲ್‌ಟ್ರೊಜ್ ಟರ್ಬೊ-ಪೆಟ್ರೋಲ್ ರೂಪಾಂತರಗಳ ಖರೀದಿ ಮೇಲೆ ರೂ. 10 ಸಾವಿರ ತನಕ ಎಕ್ಸ್‌ಚೆಂಜ್ ಆಫರ್ ನೀಡುತ್ತಿದ್ದು, ಆಲ್‌ಟ್ರೊಜ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.5.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 10 ಲಕ್ಷ ಬೆಲೆ ಹೊಂದಿದೆ.

ಇನ್ನು ಟಾಟಾ ಕಂಪನಿಯು ತನ್ನ ಹೊಸ ಆಫರ್‌ಗಳಲ್ಲಿ ಹ್ಯಾರಿಯರ್ ಎಸ್‌ಯುವಿ ಕಾರು ಮಾದರಿಯ ಮೇಲೂ ರೂ. 60 ಸಾವಿರ ತನಕ ಆಫರ್ ನೀಡುತ್ತಿದ್ದು, ಎಲ್ಲಾ ವೆರಿಯೆಂಟ್‌ಗಳಿಗೂ ಅನ್ವಯಿಸುವಂತೆ ರೂ.40 ಸಾವಿರ ತನಕ ಎಕ್ಸ್‌ಚೆಂಜ್ ಆಫರ್ ಮತ್ತು ರೂ.20 ಸಾವಿರ ಕ್ಯಾಶ್ ಡಿಸ್ಕೌಂಟ್ ನೀಡುತ್ತಿದೆ.

ಹೊಸ ಆಫರ್‌ಗಳಲ್ಲಿ ಕಂಪನಿಯು ನ್ಯೂ ಜನರೇಷನ್ ಸಫಾರಿ ಮೇಲೂ ಡಿಸ್ಕೌಂಟ್ ನೀಡುತ್ತಿದ್ದು, ರೂ. 40 ಸಾವಿರ ತನಕ ಎಕ್ಸ್‌ಚೆಂಜ್ ಆಫರ್ ಮತ್ತು ರೂ.20 ಸಾವಿರ ಕ್ಯಾಶ್ ಡಿಸ್ಕೌಂಟ್ ಘೋಷಣೆ ಮಾಡಿದೆ. ಇದರೊಂದಿಗೆ ಎಲ್ಲಾ ಕಾರುಗಳಿಗೂ ಅನ್ವಯಿಸುವಂತೆ ಆಕರ್ಷಕ ಕಾರ್ಪೊರೆಟ್ ಡಿಸ್ಕೌಂಟ್ ಸಹ ನೀಡುತ್ತಿದೆ.

ಕಾರ್ಪೊರೇಟ್ ಡಿಸ್ಕೌಂಟ್‌ಗಳಲ್ಲಿ ಗ್ರಾಮೀಣ ಭಾಗದ ಶಿಕ್ಷಕರಿಗೂ ವಿಶೇಷ ಉಳಿತಾಯ ಯೋಜನೆಗಳನ್ನು ಘೋಷಣೆ ಮಾಡಿದ್ದು, ಹೆಲ್ತ್ ಕೇರ್ ಸಿಬ್ಬಂದಿ ಸಹ ಹೊಸ ಸ್ಕೀಮ್ ಅಡಿಯಲ್ಲಿ ಕೆಲವು ವಿನಾಯ್ತಿ ಪಡೆದುಕೊಳ್ಳಬಹುದಾಗಿದೆ.

ಹೊಸ ಆಫರ್‌ಗಳಲ್ಲಿ ಟಿಯಾಗೋ ಎನ್ಆರ್‌ಜಿ, ಸಿಎನ್‌ಜಿ, ನೆಕ್ಸಾನ್ ಇವಿ, ಪಂಚ್ ಆವೃತ್ತಿಗಳ ಮೇಲೆ ಯಾವುದೇ ಆಫರ್ ನೀಡುತ್ತಿಲ್ಲವಾದರೂ ಡೀಲರ್ಸ್ ಮಟ್ಟದಲ್ಲಿ ಹೊಸ ವರ್ಷದ ವಿಶೇಷವಾಗಿ ವಿವಿಧ ಆಫರ್‌ಗಳು ಲಭ್ಯವಿದ್ದು, ಹೊಸ ಕಾರುಗಳ ಬೇಡಿಕೆಗೆ ಅನುಗುಣವಾಗಿ ಟಾಟಾ ಕಂಪನಿಯು ಮತ್ತಷ್ಟು ಹೊಸ ಕಾರುಗಳನ್ನು ರಸ್ತೆಗಿಳಿಸುತ್ತಿದೆ.

2022ರ ಫೆಬ್ರವರಿ ಅವಧಿಯಲ್ಲಿನ ಪ್ರಯಾಣಿಕರ ಕಾರು ಮಾರಾಟದಲ್ಲಿ ಶೇ.47 ರಷ್ಟು ಬೆಳವಣಿಯೊಂದಿಗೆ ಸುಮಾರು 40 ಸಾವಿರ ಕಾರುಗಳನ್ನು ಮಾರಾಟ ಮಾಡಿದ್ದು, ಫೆಬ್ರವರಿ ಅವಧಿಯ ಕಾರು ಮಾರಾಟದಲ್ಲಿ ಶೇ.47 ರಷ್ಟು ಬೆಳವಣಿಯೊಂದಿಗೆ ಪ್ರಮುಖ ಕಾರು ಕಂಪನಿಗಳಿಗೆ ಭರ್ಜರಿ ಪೈಪೋಟಿ ನೀಡಿದೆ.

ಫೆಬ್ರವರಿ ಅವಧಿಯಲ್ಲಿ ಟಾಟಾ ಮೋಟಾರ್ಸ್ ಕಂಪನಿಯು 39,981 ಯುನಿಟ್ ಕಾರುಗಳನ್ನು ಮಾರಾಟ ಮಾಡಿದ್ದು, ಇದು ಕಳೆದ ವರ್ಷದ ಫೆಬ್ರವರಿ ಅವಧಿಯಲ್ಲಿ ಮಾರಾಟಗೊಂಡಿದ್ದ 27,225 ಯುನಿಟ್‌ಗಿಂತಲೂ ಶೇ.47 ರಷ್ಟು ಹೆಚ್ಚಳವಾಗಿದೆ.