ಸೆಮಿ ಕಂಡಕ್ಟರ್ ಕೊರತೆ: ಟಾಟಾ ಇವಿ ಕಾರುಗಳ ಮಾರಾಟದಲ್ಲಿ ಕುಸಿತ
ಟಾಟಾ ಮೋಟಾರ್ಸ್(Tata Motors) ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿನ ಕಾರು ಮಾರಾಟದಲ್ಲಿ ಮಹತ್ವದ ಬೆಳವಣಿಯೊಂದಿಗೆ ಮೂರನೇ ಸ್ಥಾನ ಕಾಯ್ದುಕೊಂಡಿದ್ದು, ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದಿದೆ.

ಇವಿ ಕಾರುಗಳ ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿರುವ ಟಾಟಾ ಮೋಟಾರ್ಸ್ ಕಂಪನಿಯು ತಿಂಗಳಿನಿಂದ ತಿಂಗಳಿಗೆ ಇವಿ ಕಾರು ಮಾರಾಟದಲ್ಲಿ ದಾಖಲೆಯ ಬೆಳವಣಿಗೆ ಕಾಣುತ್ತಿದ್ದು, ವಾರ್ಷಿಕವಾಗಿ ಶೇ.300 ಬೆಳವಣಿಗೆ ಸಾಧಿಸಿದೆ. ಆದರೆ ಕಳೆದ ಕೆಲ ತಿಂಗಳಿನಿಂದ ಉಂಟಾಗುತ್ತಿರುವ ಸೆಮಿ ಕಂಡಕ್ಟರ್ ಕೊರತೆಯೂ ಇವಿ ವಾಹನ ಉತ್ಪಾದನೆ ಮೇಲೆ ಪರಿಣಾಮ ಬೀರುತ್ತಿದೆ.

ಸೆಮಿ ಕಂಡಕ್ಟರ್ ಕೊರತೆಯೂ ನಡುವೆಯೂ ಕಳೆದ ತಿಂಗಳು 2,322 ಯುನಿಟ್ ಇವಿ ಕಾರುಗಳನ್ನು ಮಾರಾಟ ಮಾಡಿದ್ದ ಟಾಟಾ ಮೋಟಾರ್ಸ್ ಕಂಪನಿಯು ಕಳೆದ ವರ್ಷದ ಏಪ್ರಿಲ್ ಅವಧಿಗಿಂತಲೂ ಶೇ.300 ರಷ್ಟು ಬೆಳವಣಿಗೆ ಸಾಧಿಸಿದೆ.

ಆದರೆ ಟಾಟಾ ಮೋಟಾರ್ಸ್ ಇವಿ ಕಾರು ಮಾರಾಟವನ್ನು ತಿಂಗಳಿನಿಂದ ತಿಂಗಳ ಮಾರಾಟ ಬೆಳವಣಿಗೆ ಹೋಲಿಕೆ ಮಾಡಿದರೆ ಮಾರ್ಚ್‌ಗಿಂತ ಏಪ್ರಿಲ್‌ನಲ್ಲಿ ಇವಿ ಮಾರಾಟ ಸಾಕಷ್ಟು ಇಳಿಕೆಯಾಗಿದ್ದು, ಬೇಡಿಕೆ ಹೆಚ್ಚಿದ್ದರೂ ಕೂಡಾ ಉತ್ಪಾದನೆಗೆ ಬೇಕಿರುವ ಅಗತ್ಯ ಸೆಮಿಕಂಡಕ್ಟರ್ ಪೂರೈಕೆಯು ಸಾಕಷ್ಟು ಕೊರತೆ ಉಂಟಾಗುತ್ತಿದೆ.

ಕಳೆದ ಮಾರ್ಚ್‌ನಲ್ಲಿ 3,357 ಯುನಿಟ್ ಎಲೆಕ್ಟ್ರಿಕ್ ಕಾರುಗಳನ್ನು ವಿತರಿಸಿದ್ದ ಟಾಟಾ ಮೋಟಾರ್ಸ್ ಕಂಪನಿಯು ಏಪ್ರಿಲ್‌ನಲ್ಲಿ 2,322 ಯುನಿಟ್ ಇವಿ ಕಾರುಗಳ ವಿತರಣೆ ಮೂಲಕ ಸಾಕಷ್ಟು ಹಿನ್ನಡೆ ಅನುಭವಿಸಿದ್ದು, ಮುಂಬರುವ ದಿನಗಳಲ್ಲಿ ಸೆಮಿ ಕಂಡಕ್ಟರ್ ಕೊರತೆ ಇನ್ನಷ್ಟು ಹೆಚ್ಚಳವಾಗುವ ಆತಂಕ ವ್ಯಕ್ತಪಡಿಸಲಾಗುತ್ತಿದೆ.

ಸೆಮಿಕಂಡಕ್ಟರ್ ಕೊರತೆ ಕಳೆದ ತಿಂಗಳ ಒಟ್ಟಾರೆ ಕಾರು ಮಾರಾಟದಲ್ಲಿ ಶೇ.66 ರಷ್ಟು ಬೆಳವಣಿಯೊಂದಿಗೆ ಪ್ರಮುಖ ಕಾರು ಕಂಪನಿಗಳಿಗೆ ಭರ್ಜರಿ ಪೈಪೋಟಿ ನೀಡಿರುವ ಟಾಟಾ ಮೋಟಾರ್ಸ್ ಕಂಪನಿಯು ಸಾಮಾನ್ಯ ಕಾರುಗಳ ಜೊತೆಗೆ ಎಲೆಕ್ಟ್ರಿಕ್ ಕಾರು ಮಾರಾಟದಲ್ಲೂ ಉತ್ತಮ ಬೆಳವಣಿಗೆ ಸಾಧಿಸುತ್ತಿದೆ.

ಮುಂಬರುವ ದಿನಗಳಲ್ಲಿ ಬಿಡುಗಡೆಗೆ ಸಿದ್ದವಾಗಿರುವ 2022ರ ನೆಕ್ಸಾನ್ ಇವಿ ಮಾದರಿಯು ಕಂಪನಿಗೆ ಮತ್ತಷ್ಟು ಬೇಡಿಕೆ ತಂದುಕೊಡಲಿದ್ದು, ಹೊಸ ಕಾರು ಮಾದರಿಯು ಇದೇ ತಿಂಗಳಾಂತ್ಯಕ್ಕೆ ಮಾರುಕಟ್ಟೆಗೆ ಪ್ರವೇಶಿಸಲಿದೆ.

ಸದ್ಯ ಮಾರುಕಟ್ಟೆಯಲ್ಲಿ ಇತರೆ ಕಾರು ಉತ್ಪಾದನಾ ಕಂಪನಿಗಳಿಂತ ಟಾಟಾ ಮೋಟಾರ್ಸ್ ಕಂಪನಿಯು ಇವಿ ವಾಹನಗಳ ಮೇಲೆ ಹೆಚ್ಚಿನ ಗಮನಹರಿಸಿರುವುದರಿಂದ ಇತರೆ ಇವಿ ಕಾರು ಕಂಪನಿಗಳನ್ನು ಹಿಂದಿಕ್ಕಿ ಗ್ರಾಹಕರನ್ನು ಸೆಳೆಯುತ್ತಿದೆ.

ದೇಶಿಯ ಮಾರುಕಟ್ಟೆಯಲ್ಲಿನ ಇವಿ ಕಾರುಗಳ ಮಾರಾಟದಲ್ಲಿ ಸದ್ಯ ಶೇ.80 ರಷ್ಟು ಮಾರುಕಟ್ಟೆ ಪಾಲು ತನ್ನದಾಗಿಸಿಕೊಂಡಿರುವ ಟಾಟಾ ಮೋಟಾರ್ಸ್ ಕಂಪನಿಯು ಅಗ್ರಸ್ಥಾನ ಕಾಯ್ದುಕೊಂಡಿದ್ದು, ಮುಂಬರುವ ದಿನಗಳಲ್ಲಿ ಸಾಮಾನ್ಯ ಕಾರು ಮಾದರಿಗಳನ್ನು ಆಧರಸಿ ಮತ್ತಷ್ಟು ಹೊಸ ಮಾದರಿಗಳನ್ನು ಬಿಡುಗಡೆಗಾಗಿ ಸಿದ್ದವಾಗುತ್ತಿದೆ.

ಸಾಮಾನ್ಯ ಮಾದರಿಯ ಪ್ರಯಾಣಿಕರ ಕಾರು ಮಾರಾಟದಲ್ಲಿ ಸದ್ಯ ಮಾರುತಿ ಸುಜುಕಿ ಕಂಪನಿಯು ಅಗ್ರಸ್ಥಾನದಲ್ಲಿದ್ದು, ಎರಡನೇ ಸ್ಥಾನದಲ್ಲಿ ಹ್ಯುಂಡೈ ಕಂಪನಿಯು ಮುಂದುವರೆದಿದೆ. ತದನಂತರ ಮೂರನೇ ಸ್ಥಾನದಲ್ಲಿರುವ ಟಾಟಾ ಮೋಟಾರ್ಸ್ ಕಂಪನಿಯು ಹ್ಯುಂಡೈ ಕಂಪನಿಯ ಕಾರುಗಳ ಮಾರಾಟಕ್ಕೆ ತೀವ್ರ ಪೈಪೋಟಿ ನೀಡುತ್ತಿದ್ದು, ಇವಿ ಕಾರು ಮಾದರಿಗಳ ಮೂಲಕ ಮತ್ತಷ್ಟು ಹೊಸ ಮೈಲಿಗಲ್ಲು ಸಾಧಿಸುವ ತವಕದಲ್ಲಿದೆ.

ಟಾಟಾ ಕಂಪನಿಯು ನೆಕ್ಸಾನ್ ಇವಿ ಮತ್ತು ಟಿಗೋರ್ ಇವಿ ಮಾದರಿಗಳ ಮೂಲಕ ಪ್ರಯಾಣಿಕರ ಬಳಕೆಯ ಇವಿ ಕಾರು ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ವಾಣಿಜ್ಯ ವಾಹನ ಬಳಕೆದಾರರಿಗಾಗಿಯೇ ವಿಶೇಷವಾಗಿ ಸಿದ್ದಗೊಂಡಿರುವ ಎಕ್ಸ್‌ಪ್ರೆಸ್-ಟಿ ಇವಿ ಮಾದರಿಯು ಕೂಡಾ ಕ್ಯಾಬ್ ಸೇವಾ ವಿಭಾಗಗಳಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದೆ.

ಕಂಪನಿಯು ಶೀಘ್ರದಲ್ಲಿಯೇ 2022ರ ನೆಕ್ಸಾನ್ ಇವಿ ಆವೃತ್ತಿಯನ್ನು ಹಲವು ಸುಧಾರಿತ ತಂತ್ರಜ್ಞಾನ ಪ್ರೇರಣೆಯೊಂದಿಗೆ ಬಿಡುಗಡೆ ಮಾಡಲು ಸಿದ್ದಗೊಳ್ಳುತ್ತಿದ್ದು, ಹೊಸ ಕಾರು ಪ್ರಸ್ತುತ ಮಾರುಕಟ್ಟೆಯಲ್ಲಿ ಮಾದರಿಗಿಂತಲೂ ಹೆಚ್ಚಿನ ಮೈಲೇಜ್‌ನೊಂದಿಗೆ ಹೆಚ್ಚುವರಿ ಫೀಚರ್ಸ್ ಪಡೆದುಕೊಳ್ಳಲಿದೆ.

ಸದ್ಯ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಮಾದರಿಯು ಎಕ್ಸ್‌ಎಂ, ಎಕ್ಸ್‌ಝಡ್ ಪ್ಲಸ್, ಎಕ್ಸ್‌ಝಡ್ ಪ್ಲಸ್ ಲಕ್ಸ್ ಎನ್ನುವ ಮೂರು ಪ್ರಮುಖ ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಮೂರು ವೆರಿಯೆಂಟ್‌ಗಳಲ್ಲೂ ಹಲವಾರು ಹೊಸ ಪ್ರೀಮಿಯಂ ಫೀಚರ್ಸ್‌ಗಳಿವೆ. ನೆಕ್ಸಾನ್ ಇವಿ ಕಾರಿನಲ್ಲಿ 95kW ಎಲೆಕ್ಟ್ರಿಕ್ ಮೋಟಾರ್ ಮತ್ತು 30kWh ಲಿಥೀಯಂ ಅಯಾನ್ ಬ್ಯಾಟರಿ ಪ್ಯಾಕ್ ಅಳವಡಿಸಲಾಗಿದ್ದು, 2020ರ ಆವೃತ್ತಿಯು 40kWh ಲಿಥೀಯಂ ಅಯಾನ್ ಬ್ಯಾಟರಿ ಪ್ಯಾಕ್ ಹೊಂದಬಹುದಾಗಿದೆ.

ಎಆರ್‌ಎಐ ಸಂಸ್ಥೆಯು ಪ್ರಮಾಣಿಕರಿಸದಂತೆ 30kWh ಲಿಥೀಯಂ ಅಯಾನ್ ಬ್ಯಾಟರಿ ಪ್ಯಾಕ್ ಹೊಂದಿರುವ ನೆಕ್ಸಾನ್ ಇವಿ ಕಾರು ಇಕೋ ಡ್ರೈವ್ ಮೋಡ್‌ನಲ್ಲಿ ಗರಿಷ್ಠ 312 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, 2022ರ ಆವೃತ್ತಿಯಲ್ಲಿ ಮೈಲೇಜ್ ರೇಂಜ್ ಪ್ರಮಾಣವು ಪ್ರತಿ ಚಾರ್ಜ್ 400 ಕಿ.ಮೀ ಗೆ ಹೆಚ್ಚಳವಾಗುವ ಸಾಧ್ಯತೆಗಳಿವೆ.


Click it and Unblock the Notifications