ಟಾಟಾ ಪ್ರಮುಖ ಕಾರುಗಳ ಖರೀದಿ ಮೇಲೆ ಅಗಸ್ಟ್ ಅವಧಿಯ ಆಕರ್ಷಕ ಆಫರ್ ಘೋಷಣೆ

ಟಾಟಾ ಮೋಟಾರ್ಸ್ ಕಂಪನಿಯು ತನ್ನ ಸಂಭಾವ್ಯ ಗ್ರಾಹಕರಿಗೆ ಪ್ರಮುಖ ಕಾರುಗಳ ಖರೀದಿ ಮೇಲೆ ವಿವಿಧ ಆಫರ್‌ಗಳನ್ನು ಘೋಷಣೆ ಮಾಡಿದ್ದು, ಹೊಸ ಆಫರ್‌ಗಳು ಈ ತಿಂಗಳ ಕೊನೆಯ ತನಕ ಲಭ್ಯವಿರಲಿವೆ.

ಟಾಟಾ ಪ್ರಮುಖ ಕಾರುಗಳ ಖರೀದಿ ಮೇಲೆ ಅಗಸ್ಟ್ ಅವಧಿಯ ಆಕರ್ಷಕ ಆಫರ್ ಘೋಷಣೆ

ಸೆಮಿಕಂಡಕ್ಟರ್ ಕೊರತೆಯ ನಡುವೆಯೂ ಹೊಸ ಕಾರುಗಳ ಮಾರಾಟದಲ್ಲಿ ಸ್ಥಿರತೆ ಕಾಯ್ದುಕೊಂಡಿರುವ ಟಾಟಾ ಮೋಟಾರ್ಸ್ ಕಂಪನಿಯು ಗ್ರಾಹಕರ ಬೇಡಿಕೆಯಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಕಾರುಗಳ ಖರೀದಿ ಹೆಚ್ಚಿಸಲು ವಿವಿಧ ಆಫರ್‌ಗಳನ್ನು ಸಹ ಘೋಷಣೆ ಮಾಡಿದೆ. ಟಿಯಾಗೊ, ಟಿಗೋರ್, ಆಲ್‌ಟ್ರೊಜ್, ನೆಕ್ಸಾನ್, ಹ್ಯಾರಿಯರ್ ಮತ್ತು ನೆಕ್ಸಾನ್ ಕಾರುಗಳ ಮೇಲೆ ವಿಶೇಷ ಆಫರ್ ನೀಡಲಾಗುತ್ತಿದ್ದು, ಹೊಸ ಆಫರ್‌ಗಳು ಈ ತಿಂಗಳಾಂತ್ಯದ ತನಕ ಪಡೆದುಕೊಳ್ಳಬಹುದಾಗಿದೆ.

ಟಾಟಾ ಪ್ರಮುಖ ಕಾರುಗಳ ಖರೀದಿ ಮೇಲೆ ಅಗಸ್ಟ್ ಅವಧಿಯ ಆಕರ್ಷಕ ಆಫರ್ ಘೋಷಣೆ

ಹೊಸ ಆಫರ್‌ಗಳಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ಕ್ಯಾಶ್ ಡಿಸ್ಕೌಂಟ್, ಎಕ್ಸ್‌ಚೆಂಜ್ ಆಫರ್ ಜೊತೆಗೆ ವಿಶೇಷ ಪ್ಯಾಕೇಜ್ ನೀಡುತ್ತಿದ್ದು, ಕನಿಷ್ಠ ರೂ. 20 ಸಾವಿರದಿಂದ ಗರಿಷ್ಠ ರೂ. 40 ಸಾವಿರ ತನಕ ಉಳಿತಾಯ ಮಾಡಬಹುದಾಗಿದೆ.

ಟಾಟಾ ಪ್ರಮುಖ ಕಾರುಗಳ ಖರೀದಿ ಮೇಲೆ ಅಗಸ್ಟ್ ಅವಧಿಯ ಆಕರ್ಷಕ ಆಫರ್ ಘೋಷಣೆ

ಟಾಟಾ ಹೊಸ ಆಫರ್‌ಗಳಲ್ಲಿ ಆರಂಭಿಕ ಕಾರು ಮಾದರಿಯಾದ ಟಿಯಾಗೋ ಹ್ಯಾಚ್‌ಬ್ಯಾಕ್ ಮಾದರಿಯ ಮೇಲೆ ಕಂಪನಿಯು ರೂ. 20 ಸಾವಿರ ತನಕ ಆಫರ್ ಘೋಷಿಸಿದ್ದು, ರೂ. 20 ಸಾವಿರ ಮೌಲ್ಯದ ಆಫರ್‌ನಲ್ಲಿ ರೂ. 10 ಸಾವಿರ ಕ್ಯಾಶ್ ಡಿಸ್ಕೌಂಟ್, ರೂ. 10 ಸಾವಿರ ಎಕ್ಸ್‌ಚೆಂಜ್ ಆಫರ್ ಮತ್ತು ಆಯ್ದ ಮಾದರಿಗಳ ಮೇಲೆ ರೂ. 3 ಸಾವಿರ ಕಾರ್ಪೊರೇಟ್ ಡಿಸ್ಕೌಂಟ್ ಸಹ ನೀಡುತ್ತಿದೆ.

ಟಾಟಾ ಪ್ರಮುಖ ಕಾರುಗಳ ಖರೀದಿ ಮೇಲೆ ಅಗಸ್ಟ್ ಅವಧಿಯ ಆಕರ್ಷಕ ಆಫರ್ ಘೋಷಣೆ

ಟಿಯಾಗೋ ನಂತರ ಟಿಗೋರ್ ಕಂಪ್ಯಾಕ್ಟ್ ಕಂಪ್ಯಾಕ್ಟ್ ಸೆಡಾನ್ ಮಾದರಿಯ ಮೇಲೂ ಟಾಟಾ ಮೋಟಾರ್ಸ್ ಕಂಪನಿಯು ಆಕರ್ಷಕ ಡಿಸ್ಕೌಂಟ್ ನೀಡುತ್ತಿದೆ. ಟಿಗೋರ್ ಕಾರು ಖರೀದಿಯ ಮೇಲೂ ಗ್ರಾಹಕರು ಗರಿಷ್ಠ ರೂ. 23 ಸಾವಿರ ತನಕ ಉಳಿತಾಯ ಮಾಡಬಹುದಾಗಿದ್ದು, ರೂ. 23 ಸಾವಿರದಲ್ಲಿ ರೂ. 10 ಸಾವಿರ ಕ್ಯಾಶ್ ಡಿಸ್ಕೌಂಟ್, ರೂ.10 ಸಾವಿರ ತನಕ ಎಕ್ಸ್‌ಚೆಂಜ್ ಆಫರ್ ಮತ್ತು ಆಯ್ದ ಮಾದರಿಗಳ ಮೇಲೆ ರೂ. 3 ಸಾವಿರ ತನಕ ಕಾರ್ಪೊರೇಟ್ ಡಿಸ್ಕೌಂಟ್ ಸಿಗಲಿದೆ.

ಟಾಟಾ ಪ್ರಮುಖ ಕಾರುಗಳ ಖರೀದಿ ಮೇಲೆ ಅಗಸ್ಟ್ ಅವಧಿಯ ಆಕರ್ಷಕ ಆಫರ್ ಘೋಷಣೆ

ಹೊಸ ಆಫರ್‌ಗಳಲ್ಲಿ ಟಿಯಾಗೋ ಮತ್ತು ಟಿಗೋರ್ ಮಾದರಿಗಳ ಎಕ್ಸ್ಇ, ಎಕ್ಸ್ಎಂ ಮತ್ತು ಎಕ್ಸ್‌ಟಿ ಮಾದರಿಗಳ ಮೇಲೆ ಕನಿಷ್ಠ ಆಫರ್ ಲಭ್ಯವಿದ್ದರೆ ಎಕ್ಸ್‌ಜೆಡ್ ಮಾದರಿಗಳ ಮೇಲೆ ಹೆಚ್ಚಿನ ಆಫರ್ ನೀಡಲಾಗುತ್ತಿದೆ. ಆದರೆ ಟಿಯಾಗೋ ಮತ್ತು ಟಿಗೋರ್ ಸಿಎನ್‌ಜಿ ಮಾದರಿಗಳ ಮೇಲೆ ಯಾವುದೇ ಆಫರ್ ನೀಡಲಾಗಿಲ್ಲ.

ಟಾಟಾ ಪ್ರಮುಖ ಕಾರುಗಳ ಖರೀದಿ ಮೇಲೆ ಅಗಸ್ಟ್ ಅವಧಿಯ ಆಕರ್ಷಕ ಆಫರ್ ಘೋಷಣೆ

ಟಾಟಾ ಹೊಸ ಆಫರ್‌ಗಳಲ್ಲಿ ಜನಪ್ರಿಯ ಕಾರು ಮಾದರಿಯಾದ ನೆಕ್ಸಾನ್ ಆವೃತ್ತಿಯ ಮೇಲೆ ಗರಿಷ್ಠ ರೂ. 5 ಕಾರ್ಪೊರೇಟ್ ಡಿಸ್ಕೌಂಟ್ ಮಾತ್ರ ಘೋಷಣೆ ಮಾಡಲಾಗಿದ್ದು, ಹೊಸ ಆಫರ್ ನಲ್ಲಿ ಪೆಟ್ರೋಲ್ ವೆರಿಯೆಂಟ್‌ಗಳ ಮೇಲೆ ಕಡಿಮೆ ಆಫರ್ ಲಭ್ಯವಿವೆ.

ಟಾಟಾ ಪ್ರಮುಖ ಕಾರುಗಳ ಖರೀದಿ ಮೇಲೆ ಅಗಸ್ಟ್ ಅವಧಿಯ ಆಕರ್ಷಕ ಆಫರ್ ಘೋಷಣೆ

ಇನ್ನು ಟಾಟಾ ಕಂಪನಿಯು ತನ್ನ ಹೊಸ ಆಫರ್‌ಗಳಲ್ಲಿ ಹ್ಯಾರಿಯರ್ ಎಸ್‌ಯುವಿ ಕಾರು ಮಾದರಿಯ ಮೇಲೂ ರೂ. 45 ಸಾವಿರ ತನಕ ಆಫರ್ ನೀಡುತ್ತಿದ್ದು, ಎಲ್ಲಾ ವೆರಿಯೆಂಟ್‌ಗಳಿಗೂ ಅನ್ವಯಿಸುವಂತೆ ರೂ. 40 ಸಾವಿರ ತನಕ ಎಕ್ಸ್‌ಚೆಂಜ್ ಆಫರ್ ಮತ್ತು ರೂ. 5 ಸಾವಿರ ಕಾರ್ಪೊರೇಟ್ ಡಿಸ್ಕೌಂಟ್ ನೀಡುತ್ತಿದೆ.

ಹೆಚ್ಚುತ್ತಿರುವ ಬಿಡಿಭಾಗಗಳ ನಿರ್ವಹಣಾ ವೆಚ್ಚ ಹಿನ್ನಲೆಯಲ್ಲಿ ಪ್ರಮುಖ ಕಾರು ಕಂಪನಿಗಳು ತಮ್ಮ ಪ್ರಮುಖ ವಾಹನಗಳ ಬೆಲೆಯಲ್ಲಿ ನಿರಂತರವಾಗಿ ಹೆಚ್ಚಿಸುತ್ತಿದ್ದು, ಟಾಟಾ ಮೋಟಾರ್ಸ್ ಕಂಪನಿಯು ಸಹ ತನ್ನ ಹೊಸ ಕಾರುಗಳ ಬೆಲೆಯಲ್ಲಿ ತುಸು ಏರಿಕೆ ಮಾಡಿದೆ.

ಟಾಟಾ ಪ್ರಮುಖ ಕಾರುಗಳ ಖರೀದಿ ಮೇಲೆ ಅಗಸ್ಟ್ ಅವಧಿಯ ಆಕರ್ಷಕ ಆಫರ್ ಘೋಷಣೆ

ಟಾಟಾ ಮೋಟಾರ್ಸ್ ಕಂಪನಿಯು ತನ್ನ ಪ್ರಮುಖ ಕಾರು ಮಾದರಿಗಳ ಬೆಲೆ ಹೆಚ್ಚಿಸಿದ್ದು, ಹೊಸ ದರ ಪಟ್ಟಿಯಲ್ಲಿ ವಿವಿಧ ಮಾದರಿಗಳಿಗೆ ಅನುಸಾರವಾಗಿ ಗರಿಷ್ಠ ಶೇ. 0.55 ರಿಂದ ಶೇ. 1.50 ರಷ್ಟು ದರ ಹಚ್ಚಿಸಲಾಗಿದೆ.

ಟಾಟಾ ಪ್ರಮುಖ ಕಾರುಗಳ ಖರೀದಿ ಮೇಲೆ ಅಗಸ್ಟ್ ಅವಧಿಯ ಆಕರ್ಷಕ ಆಫರ್ ಘೋಷಣೆ

ಹೆಚ್ಚುತ್ತಿರುವ ಬಿಡಿಭಾಗಗಳ ನಿರ್ವಹಣಾ ವೆಚ್ಚ ಹಿನ್ನಲೆಯಲ್ಲಿ ಪ್ರಮುಖ ಕಾರು ಕಂಪನಿಗಳು ತಮ್ಮ ಪ್ರಮುಖ ವಾಹನಗಳ ಬೆಲೆಯಲ್ಲಿ ನಿರಂತರವಾಗಿ ಪರಿಷ್ಕರಣೆ ಮಾಡುತ್ತಿದ್ದು, ಟಾಟಾ ಮೋಟಾರ್ಸ್ ಕಂಪನಿಯು ಸಹ ತನ್ನ ಹೊಸ ಕಾರುಗಳ ಬೆಲೆಯಲ್ಲಿ ಹೆಚ್ಚಳ ಘೋಷಿಸಿದೆ. ಇದು ಈ ವರ್ಷದಲ್ಲಿ ಮೂರನೇ ಬಾರಿಗೆ ದರ ಹೆಚ್ಚಳವಾಗಿದ್ದು, ಹೊಸ ದರ ಪಟ್ಟಿಯಲ್ಲಿ ಪ್ರಮುಖ ಬೆಲೆಯಲ್ಲಿ ಹೆಚ್ಚಳವಾಗಿದೆ.

ಟಾಟಾ ಪ್ರಮುಖ ಕಾರುಗಳ ಖರೀದಿ ಮೇಲೆ ಅಗಸ್ಟ್ ಅವಧಿಯ ಆಕರ್ಷಕ ಆಫರ್ ಘೋಷಣೆ

ಜಾಗತಿಕ ಮಾರುಕಟ್ಟೆಯಲ್ಲಿ ಆಟೋ ಬಿಡಿಭಾಗಗಳ ವೆಚ್ಚ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಹೊಸ ವಾಹನಗಳ ಬೆಲೆಯು ನಿರಂತರವಾಗಿ ಏರಿಕೆಯಾಗುತ್ತಿದ್ದು, ಮಧ್ಯಮ ಕ್ರಮಾಂಕದ ಕಾರುಗಳ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ಸಹ ಇದೀಗ ತನ್ನ ಪ್ರಮುಖ ಕಾರು ಮಾದರಿಗಳ ಬೆಲೆಯಲ್ಲಿ ಹೆಚ್ಚಳ ಮಾಡಿದೆ.

ಟಾಟಾ ಪ್ರಮುಖ ಕಾರುಗಳ ಖರೀದಿ ಮೇಲೆ ಅಗಸ್ಟ್ ಅವಧಿಯ ಆಕರ್ಷಕ ಆಫರ್ ಘೋಷಣೆ

ಕಳೆದ ಮಾರ್ಚ್‌ನಲ್ಲಿ ಪ್ರತಿ ಕಾರು ಬೆಲೆಯಲ್ಲಿ ಶೇ. 1ರಿಂದ ಶೇ.2 ರಷ್ಟು ಹೆಚ್ಚಳ ಘೋಷಿಸಿದ್ದ ಟಾಟಾ ಮೋಟಾರ್ಸ್ ಕಂಪನಿಯು ಇದೀಗ ಜುಲೈ 9ರಿಂದ ಜಾರಿಗೆ ಬರುವಂತೆ ವಿವಿಧ ಕಾರುಗಳ ಬೆಲೆಯಲ್ಲಿ ವೆರಿಯೆಂಟ್‌ಗಳಿಗೆ ಅನುಗುಣವಾಗಿ ಶೇ. 0.55ರಿಂದ ಶೇ.1.50 ರಷ್ಟು ಬೆಲೆ ಏರಿಕೆ ಮಾಡಿದೆ.

ಟಾಟಾ ಪ್ರಮುಖ ಕಾರುಗಳ ಖರೀದಿ ಮೇಲೆ ಅಗಸ್ಟ್ ಅವಧಿಯ ಆಕರ್ಷಕ ಆಫರ್ ಘೋಷಣೆ

ಹೊಸ ದರ ಪಟ್ಟಿಯಲ್ಲಿ ವಿವಿಧ ರೂಪಾಂತರಗಳ ಆಧಾರದ ಮೇಲೆ ರೂ. 17 ಸಾವಿರ ತನಕ ಬೆಲೆ ಹೆಚ್ಚಿಸಲಾಗಿದ್ದು, ನೆಕ್ಸಾನ್‌ ಮಾದರಿಯಲ್ಲಿ ಗರಿಷ್ಠ ರೂ 17 ಸಾವಿರ ತನಕ ದರ ಹೆಚ್ಚಿಸಲಾಗಿದೆ.

Article Published On: Friday, August 5, 2022, 11:18 [IST]
English summary
Tata motors august 2022 offers for selected model details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+