ಬೆಲೆ ಹೆಚ್ಚಳ: ಟಾಟಾ ಮೋಟಾರ್ಸ್ ಕಾರುಗಳ ಖರೀದಿ ಇದೀಗ ಬಲು ದುಬಾರಿ..

ಟಾಟಾ ಮೋಟಾರ್ಸ್ ಕಂಪನಿಯು ತನ್ನ ಪ್ರಮುಖ ಕಾರು ಮಾದರಿಗಳ ಬೆಲೆ ಹೆಚ್ಚಿಸಿದ್ದು, ಕಂಪನಿಯ ಬಹುತೇಕ ಕಾರು ಮಾದರಿಗಳು ಬೆಲೆ ಹೆಚ್ಚಳ ಪಡೆದುಕೊಂಡಿವೆ. ಹೊಸ ದರಗಳು ಇಂದಿನಿಂದಲೇ ಜಾರಿಗೆ ಬಂದಿದ್ದು, ವಿವಿಧ ಮಾದರಿಗಳಿಗೆ ಅನುಸಾರವಾಗಿ ಗರಿಷ್ಠ ಶೇ.0.55 ರಿಂದ ಶೇ. 1.50 ರಷ್ಟು ದರ ಹಚ್ಚಿಸಲಾಗಿದೆ.

ಬೆಲೆ ಹೆಚ್ಚಳ: ಟಾಟಾ ಮೋಟಾರ್ಸ್ ಕಾರುಗಳ ಖರೀದಿ ಇದೀಗ ಬಲು ದುಬಾರಿ..

ಹೆಚ್ಚುತ್ತಿರುವ ಬಿಡಿಭಾಗಗಳ ನಿರ್ವಹಣಾ ವೆಚ್ಚ ಹಿನ್ನಲೆಯಲ್ಲಿ ಪ್ರಮುಖ ಕಾರು ಕಂಪನಿಗಳು ತಮ್ಮ ಪ್ರಮುಖ ವಾಹನಗಳ ಬೆಲೆಯಲ್ಲಿ ನಿರಂತರವಾಗಿ ಹೆಚ್ಚಿಸುತ್ತಿದ್ದು, ಟಾಟಾ ಮೋಟಾರ್ಸ್ ಕಂಪನಿಯು ಸಹ ತನ್ನ ಹೊಸ ಕಾರುಗಳ ಬೆಲೆಯಲ್ಲಿ ಹೆಚ್ಚಳ ಘೋಷಿಸಿದೆ. ಇದು ಈ ವರ್ಷದ ಮೂರನೇ ದರ ಹೆಚ್ಚಳವಾಗಿದ್ದು, ಹೊಸ ದರ ಪಟ್ಟಿಯನ್ನು ಶೀಘ್ರದಲ್ಲಿ ಪ್ರಕಟಿಸುವುದಾಗಿ ಹೇಳಿಕೊಂಡಿದೆ.

ಬೆಲೆ ಹೆಚ್ಚಳ: ಟಾಟಾ ಮೋಟಾರ್ಸ್ ಕಾರುಗಳ ಖರೀದಿ ಇದೀಗ ಬಲು ದುಬಾರಿ..

ಜಾಗತಿಕ ಮಾರುಕಟ್ಟೆಯಲ್ಲಿ ಆಟೋ ಬಿಡಿಭಾಗಗಳ ವೆಚ್ಚ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಹೊಸ ವಾಹನಗಳ ಬೆಲೆಯು ನಿರಂತರವಾಗಿ ಏರಿಕೆಯಾಗುತ್ತಿದ್ದು, ಮಧ್ಯಮ ಕ್ರಮಾಂಕದ ಕಾರುಗಳ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ಸಹ ಇದೀಗ ತನ್ನ ಪ್ರಮುಖ ಕಾರು ಮಾದರಿಗಳ ಬೆಲೆಯಲ್ಲಿ ಹೆಚ್ಚಳ ಮಾಡಿದೆ.

ಬೆಲೆ ಹೆಚ್ಚಳ: ಟಾಟಾ ಮೋಟಾರ್ಸ್ ಕಾರುಗಳ ಖರೀದಿ ಇದೀಗ ಬಲು ದುಬಾರಿ..

ಕಳೆದ ಮಾರ್ಚ್‌ನಲ್ಲಿ ಪ್ರತಿ ಕಾರು ಬೆಲೆಯಲ್ಲಿ ಶೇ. 1ರಿಂದ ಶೇ.2 ರಷ್ಟು ಹೆಚ್ಚಳ ಘೋಷಿಸಿದ್ದ ಟಾಟಾ ಮೋಟಾರ್ಸ್ ಕಂಪನಿಯು ಇದೀಗ ಜುಲೈ 9ರಿಂದ ಜಾರಿಗೆ ಬರುವಂತೆ ವಿವಿಧ ಕಾರುಗಳ ಬೆಲೆಯಲ್ಲಿ ವೆರಿಯೆಂಟ್‌ಗಳಿಗೆ ಅನುಗುಣವಾಗಿ ಶೇ. 0.55ರಿಂದ ಶೇ.1.50 ರಷ್ಟು ಬೆಲೆ ಏರಿಕೆ ಮಾಡುತ್ತಿದೆ.

ಬೆಲೆ ಹೆಚ್ಚಳ: ಟಾಟಾ ಮೋಟಾರ್ಸ್ ಕಾರುಗಳ ಖರೀದಿ ಇದೀಗ ಬಲು ದುಬಾರಿ..

ಆಟೋ ಬಿಡಿಭಾಗಗಳ ಕೊರತೆ ಮತ್ತು ಹೆಚ್ಚುತ್ತಿರುವ ವೆಚ್ಚಗಳನ್ನು ನಿರ್ವಹಿಸಲು ಪ್ರಮುಖ ವಾಹನ ತಯಾರಕ ಕಂಪನಿಗಳು ಹೊಸ ವಾಹನಗಳ ಬೆಲೆಯನ್ನು ನಿರಂತರವಾಗಿ ಪರಿಷ್ಕರಣೆ ಮಾಡುತ್ತಲೇ ಇದ್ದು, ನಿರಂತರ ಬೆಲೆ ಏರಿಕೆ ಪರಿಣಾಮ ಹೊಸ ವಾಹನಗಳ ಮಾಲೀಕತ್ವವು ದಿನದಿಂದ ದಿನಕ್ಕೆ ದುಬಾರಿಯಾಗಿ ಪರಿಣಮಿಸುತ್ತಿದೆ.

ಬೆಲೆ ಹೆಚ್ಚಳ: ಟಾಟಾ ಮೋಟಾರ್ಸ್ ಕಾರುಗಳ ಖರೀದಿ ಇದೀಗ ಬಲು ದುಬಾರಿ..

ಕಳೆದ ಕೆಲವು ತಿಂಗಳುಗಳಲ್ಲಿ ಹೊಸ ವಾಹನಗಳ ಬೆಲೆಯು ಸಾಕಷ್ಟು ಏರಿಕೆಯಾಗಿದ್ದು, ಇದೀಗ ಟಾಟಾ ಪ್ರಮುಖ ಕಾರುಗಳ ವಿವಿಧ ವೆರಿಯೆಂಟ್‌ಗಳ ಬೆಲೆಯಲ್ಲಿ ರೂ. 3 ಸಾವಿರದಿಂದ ಗರಿಷ್ಠ ರೂ. 45 ಸಾವಿರ ತನಕ ಹೆಚ್ಚಳ ಮಾಡಬಹುದಾಗಿದೆ.

ಬೆಲೆ ಹೆಚ್ಚಳ: ಟಾಟಾ ಮೋಟಾರ್ಸ್ ಕಾರುಗಳ ಖರೀದಿ ಇದೀಗ ಬಲು ದುಬಾರಿ..

ಟಾಟಾ ಮೋಟಾರ್ಸ್ ಕಂಪನಿಯು ಸದ್ಯ ಟಿಗೋರ್, ಟಿಯಾಗೋ, ಪಂಚ್, ನೆಕ್ಸಾನ್, ನೆಕ್ಸಾನ್ ಇವಿ, ಟಿಗೋರ್ ಇವಿ, ಟಿಯಾಗೋ ಸಿಎನ್‌ಜಿ, ಟಿಗೋರ್ ಸಿಎನ್‌ಜಿ, ಟಿಯಾಗೋ ಎನ್ಆರ್‌ಜಿ, ಆಲ್‌ಟ್ರೊಜ್, ಹ್ಯಾರಿಯರ್ ಮತ್ತು ಸಫಾರಿ ಕಾರುಗಳನ್ನು ಮಾರಾಟ ಮಾಡುತ್ತಿದ್ದು, ಪ್ರತಿ ಮಾದರಿಯಲ್ಲೂ ಇದೀಗ ದರ ಹೆಚ್ಚಳವಾಗಲಿದೆ.

ಬೆಲೆ ಹೆಚ್ಚಳ: ಟಾಟಾ ಮೋಟಾರ್ಸ್ ಕಾರುಗಳ ಖರೀದಿ ಇದೀಗ ಬಲು ದುಬಾರಿ..

ಕೇವಲ ಪ್ರಯಾಣಿಕರ ಕಾರುಗಳ ಮಾದರಿಗಳ ಬೆಲೆಯಲ್ಲಿ ಮಾತ್ರವಲ್ಲದೆ ವಾಣಿಜ್ಯ ವಾಹನಗಳ ಬೆಲೆಯಲ್ಲೂ ಹೆಚ್ಚಳ ಮಾಡಿದ್ದು, ವಾಣಿಜ್ಯ ವಾಹನಗಳ ಬೆಲೆಯಲ್ಲಿ ಕಂಪನಿಯು ಶೇ. 1.50 ರಿಂದ ಶೇ. 2.50 ರಷ್ಟು ದರ ಹೆಚ್ಚಿಸಿದೆ.

ಬೆಲೆ ಹೆಚ್ಚಳ: ಟಾಟಾ ಮೋಟಾರ್ಸ್ ಕಾರುಗಳ ಖರೀದಿ ಇದೀಗ ಬಲು ದುಬಾರಿ..

ಜುಲೈ 1ರಂದಲೇ ಅನ್ವಯಿಸುವಂತೆ ಹೊಸ ದರ ಪಟ್ಟಿ ಬಿಡುಗಡೆ ಮಾಡಿದ್ದು, ಹೊಸ ದರ ಪಟ್ಟಿಯಲ್ಲಿ ವಿವಿಧ ವೆರಿಯೆಂಟ್‌ಗಳ ಬೆಲೆಯು ಸುಮಾರು ರೂ. 20 ಸಾವಿರದಿಂದ ರೂ. 60 ಸಾವಿರ ತನಕ ಹೆಚ್ಚಳವಾಗಿದೆ.

ಬೆಲೆ ಹೆಚ್ಚಳ: ಟಾಟಾ ಮೋಟಾರ್ಸ್ ಕಾರುಗಳ ಖರೀದಿ ಇದೀಗ ಬಲು ದುಬಾರಿ..

ಟಾಟಾ ಮೋಟಾರ್ಸ್ ಕಂಪನಿಯು ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ವಾಣಿಜ್ಯ ವಾಹನಗಳ ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದು, ಕಂಪನಿಯು ವಿವಿಧ ವಾಣಿಜ್ಯ ವಲಯಗಳಲ್ಲಿ ಗ್ರಾಹಕರ ಬೇಡಿಕೆ ಅನುಸಾರವಾಗಿ ಸುಮಾರು 12 ವಾಹನಗಳನ್ನು ಮಾರಾಟ ಮಾಡುತ್ತಿದೆ.

ಬೆಲೆ ಹೆಚ್ಚಳ: ಟಾಟಾ ಮೋಟಾರ್ಸ್ ಕಾರುಗಳ ಖರೀದಿ ಇದೀಗ ಬಲು ದುಬಾರಿ..

ವಾಣಿಜ್ಯ ವಾಹನಗಳ ಪಟ್ಟಿಯಲ್ಲಿರುವ ಏಸ್ ಗೋಲ್ಡ್, ಇಂಟ್ರಾ ವಿ-10, ಇಂಟ್ರಾ ವಿ-30, ಯೋಧಾ ಪಿಕ್‌ಅಪ್, ಎಲ್‌ಸಿವಿ ಟ್ರಕ್, ಐಸಿವಿ ಟ್ರಕ್, ಐಸಿವಿ ಲೋಡಿಂಗ್ ಟ್ರಕ್, ಅಲ್ಟ್ರಾ ಐಸಿವಿ, ಐಎಲ್‌ಸಿವಿ ಟಿಪ್ಲರ್, ಎಂಅಂಡ್‌ಹೆಚ್‌ಸಿವಿ ರಿಗಿಡ್ ಟ್ರಕ್, ಎಂಅಂಡ್‌ಹೆಚ್‌ಸಿವಿ ಟ್ರ್ಯಾಕ್ಟರ್ ಟಿಲ್ಲರ್, ಎಂಅಂಡ್‌ಹೆಚ್‌ಸಿವಿ ಕನ್ಸ್ಟ್ರಕಟ್ ಮತ್ತು ಅಲ್ಟ್ರಾ ಎಂಹೆಚ್‌ಸಿವಿ ಟ್ರಕ್ ಮಾರಾಟ ಹೊಂದಿದೆ.

ಬೆಲೆ ಹೆಚ್ಚಳ: ಟಾಟಾ ಮೋಟಾರ್ಸ್ ಕಾರುಗಳ ಖರೀದಿ ಇದೀಗ ಬಲು ದುಬಾರಿ..

ಸೆಮಿಕಂಡಕ್ಟರ್ ಕೊರತೆಯ ನಡುವೆಯೂ ವಾಹನಹೊಸ ಕಾರುಗಳ ಖರೀದಿ ನಂತರದ ಸೇವಾ ಸೌಲಭ್ಯಗಳ ಕುರಿತಂತೆ ಗ್ರಾಹಕರ ಅಸಮಾಧಾನದ ಬಗೆಗೆ ಗಮನಹರಿಸಿರುವ ಟಾಟಾ ಮೋಟಾರ್ಸ್ ಕಂಪನಿಯು ಗ್ರಾಹಕರಿಗೆ ನಿಗದಿತ ಅವಧಿಯಲ್ಲಿ ಗುಣಮಟ್ಟದ ಸೇವೆಗಳನ್ನು ಒದಗಿಸಲು ಹಲವಾರು ಸುಧಾರಣಾ ಕ್ರಮಗಳನ್ನು ಅಳವಡಿಸಿಕೊಳ್ಳುತ್ತಿದ್ದು, ಈ ವರ್ಷಾಂತ್ಯಕ್ಕೆ ಕಂಪನಿಯು ತನ್ನ ಅಧಿಕೃತ ಸೇವಾ ಕೇಂದ್ರಗಳ ಸಂಖ್ಯೆಯನ್ನು 705ಕ್ಕೆ ಹೆಚ್ಚಿಸುವ ಗುರಿಹೊಂದಿದೆ.

ಬೆಲೆ ಹೆಚ್ಚಳ: ಟಾಟಾ ಮೋಟಾರ್ಸ್ ಕಾರುಗಳ ಖರೀದಿ ಇದೀಗ ಬಲು ದುಬಾರಿ..

ಮಾರಾಟದಲ್ಲಿ ಸ್ಥಿರತೆ ಕಾಯ್ದುಕೊಂಡಿರುವ ಟಾಟಾ ಮೋಟಾರ್ಸ್ ಕಂಪನಿಯು 2022ರಲ್ಲಿ ಮತ್ತಷ್ಟು ಹೊಸ ಕಾರು ಮಾದರಿಗಳೊಂದಿಗೆ ಗ್ರಾಹಕರ ಬೇಡಿಕೆ ಹೆಚ್ಚಳ ನೀರಿಕ್ಷೆಯಲ್ಲಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಮಾರಾಟ ನಂತರದ ಸೇವಾ ಜಾಲವನ್ನು ಸಹ ವಿಸ್ತರಿಸುತ್ತಿದೆ.

ಬೆಲೆ ಹೆಚ್ಚಳ: ಟಾಟಾ ಮೋಟಾರ್ಸ್ ಕಾರುಗಳ ಖರೀದಿ ಇದೀಗ ಬಲು ದುಬಾರಿ..

ಇದೀಗ ಹೊಸದಾಗಿ 160 ಅಧಿಕೃತ ಸೇವಾ ಕೇಂದ್ರಗಳೊಂದಿಗೆ 485 ನಗರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ಹೊಸ ವಾಹನಗಳು ಹೆಚ್ಚಿದಂತೆ ಅದಕ್ಕೆ ಪೂರಕವಾಗಿ ಸೇವಾ ಕೇಂದ್ರ ಕಾರ್ಯಕ್ಷಮತೆಯನ್ನು ಸುಧಾರಿಸುತ್ತಿದೆ.

Most Read Articles

Kannada
English summary
Tata motors car price hike third time in 2022 details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X