ಅಗಸ್ಟ್ ತಿಂಗಳ ಕಾರು ಮಾರಾಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಂಡ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಕಂಪನಿಯು ಕಳೆದ ತಿಂಗಳು ಅಗಸ್ಟ್‌ ಅವಧಿಯಲ್ಲಿನ ಕಾರು ಮಾರಾಟ ವರದಿಯನ್ನು ಪ್ರಕಟಿಸಿದೆ.

Recommended Video

Toyota Urban Cruiser Hyryder Kannada Walkaround | ಹೈಬ್ರಿಡ್ ಎಂಜಿನ್, ಗೇರ್ ಬಾಕ್ಸ್, ವೈಶಿಷ್ಟ್ಯತೆಗಳು..

ಕಾರು ಮಾರಾಟದಲ್ಲಿ ಸದ್ಯ ಮೂರನೇ ಸ್ಥಾನ ಕಾಯ್ದುಕೊಂಡಿರುವ ಟಾಟಾ ಕಂಪನಿಯು ಕಳೆದ ತಿಂಗಳು ಶೇ. 68 ರಷ್ಟು ಬೆಳವಣಿಗೆಯೊಂದಿಗೆ 47,166 ಕಾರುಗಳನ್ನು ಮಾರಾಟ ಮಾಡಿದೆ.

ಅಗಸ್ಟ್ ತಿಂಗಳ ಕಾರು ಮಾರಾಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಂಡ ಟಾಟಾ

ಸೆಮಿಕಂಡಕ್ಟರ್ ಪೂರೈಕೆಯಲ್ಲಿನ ಕೊರತೆ ಮತ್ತು ಆರ್ಥಿಕ ಏರಿಳಿತದ ನಡುವೆಯೂ ಕಳೆದ ವರ್ಷದ ಅಗಸ್ಟ್‌ನಲ್ಲಿ 28,018 ಯುನಿಟ್ ಕಾರುಗಳನ್ನು ಮಾರಾಟ ಮಾಡಿದ್ದ ಟಾಟಾ ಮೋಟಾರ್ಸ್ ಕಂಪನಿಯು ಈ ವರ್ಷದ ಅಗಸ್ಟ್ ಅವಧಿಯಲ್ಲಿ 47,166 ಯುನಿಟ್ ಕಾರುಗಳ ಮಾರಾಟದ ಮೂಲಕ ಶೇ. 68 ರಷ್ಟು ಬೆಳವಣಿಗೆ ಸಾಧಿಸಿದೆ.

ಅಗಸ್ಟ್ ತಿಂಗಳ ಕಾರು ಮಾರಾಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಂಡ ಟಾಟಾ

ಕಾರು ಮಾರಾಟ ಪಟ್ಟಿಯಲ್ಲಿ ಸದ್ಯ ಮೂರನೇ ಸ್ಥಾನ ಕಾಯ್ದುಕೊಂಡಿರುವ ಟಾಟಾ ಮೋಟಾರ್ಸ್ ಕಂಪನಿಯು ಅಗಸ್ಟ್ ಅವಧಿಯಲ್ಲಿ ಒಟ್ಟು 76,479 ಯುನಿಟ್ ವಾಹನಗಳನ್ನು ಮಾರಾಟ ಮಾಡಿದ್ದು, ಪ್ರಯಾಣಿಕರ ಕಾರು ಮಾರಾಟದಲ್ಲಿ ಮಾತ್ರವಲ್ಲದೆ ವಾಣಿಜ್ಯ ವಾಹನಗಳ ಮಾರಾಟದಲ್ಲೂ ಉತ್ತಮ ಬೆಳವಣಿಗೆ ಸಾಧಿಸಿದೆ.

ಅಗಸ್ಟ್ ತಿಂಗಳ ಕಾರು ಮಾರಾಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಂಡ ಟಾಟಾ

2022ರ ಅಗಸ್ಟ್ ಅವಧಿಯಲ್ಲಿನ ಒಟ್ಟು ವಾಹನ ಮಾರಾಟದಲ್ಲಿ ಶೇ. 41 ರಷ್ಟು ಬೆಳವಣಿಗೆ ಸಾಧಿಸಿರುವ ಟಾಟಾ ಮೋಟಾರ್ಸ್ ಕಂಪನಿಯು 47,166 ಯುನಿಟ್ ಪ್ರಯಾಣಿಕರ ಕಾರುಗಳನ್ನು ಮತ್ತು 31,492 ಯುನಿಟ್ ವಾಣಿಜ್ಯ ವಾಹನಗಳನ್ನು ಮಾರಾಟ ಮಾಡಿದೆ.

ಅಗಸ್ಟ್ ತಿಂಗಳ ಕಾರು ಮಾರಾಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಂಡ ಟಾಟಾ

ಟಾಟಾ ಮೋಟಾರ್ಸ್ ಕಂಪನಿಯು ಕಳೆದ ಎರಡೂವರೆ ವರ್ಷಗಳಿಂದ ಉತ್ತಮ ಬೆಳವಣಿಗೆ ಸಾಧಿಸುತ್ತಿದ್ದು, ದೇಶಿಯ ಮಾರುಕಟ್ಟೆಯಲ್ಲಿನ ಕಾರು ಮಾರಾಟದಲ್ಲಿ ಹೊಸ ಬದಲಾವಣೆ ಮೂಲಕ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುತ್ತಿದೆ.

ಅಗಸ್ಟ್ ತಿಂಗಳ ಕಾರು ಮಾರಾಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಂಡ ಟಾಟಾ

ಹೊಸ ಕಾರುಗಳಲ್ಲಿ ನಿರಂತರವಾಗಿ ಸುಧಾರಿತ ತಂತ್ರಜ್ಞಾನ ಪ್ರೇರಿತ ಸೌಲಭ್ಯಗಳ ಉನ್ನತೀಕರಣದೊಂದಿಗೆ ಸಾಕಷ್ಟು ಬೇಡಿಕೆ ಪಡೆದುಕೊಂಡಿರುವ ಟಾಟಾ ಮೋಟಾರ್ಸ್ ಕಂಪನಿಯು ಕಳೆದ ವಾರವಷ್ಟೇ ತನ್ನ ಪ್ರಮುಖ ಕಾರು ಮಾದರಿಗಳಿಗಾಗಿ ಜೆಟ್ ಎಡಿಷನ್ ಪರಿಚಯಿಸಿತು.

ಅಗಸ್ಟ್ ತಿಂಗಳ ಕಾರು ಮಾರಾಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಂಡ ಟಾಟಾ

ಹೊಸದಾಗಿ ಮಾರುಕಟ್ಟೆ ಪ್ರವೇಶಿಸಿರುವ ಜೆಟ್ ಎಡಿಷನ್ ಮಾದರಿಗಳು ಸ್ಟ್ಯಾಂಡರ್ಡ್ ಆವೃತ್ತಿಗಿಂತಲೂ ಹೆಚ್ಚಿನ ಫೀಚರ್ಸ್‌ ಮತ್ತು ವಿಶೇಷ ಬಣ್ಣದ ಆಯ್ಕೆಯೊಂದಿಗೆ ಗ್ರಾಹಕರನ್ನು ಸೆಳೆಯತ್ತಿವೆ.

ಅಗಸ್ಟ್ ತಿಂಗಳ ಕಾರು ಮಾರಾಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಂಡ ಟಾಟಾ

ನೆಕ್ಸಾನ್, ನೆಕ್ಸಾನ್ ಇವಿ, ಹ್ಯಾರಿಯರ್ ಮತ್ತು ಸಫಾರಿ ಜೆಟ್ ಆವೃತ್ತಿಯಲ್ಲಿ ಸ್ಟ್ಯಾಂಡರ್ಡ್ ಮಾದರಿಗಿಂತಲೂ ವಿಭಿನ್ನವಾಗಿ ಕಾಣಲು ಹೊರಭಾಗ ಮತ್ತು ಒಳಭಾಗವನ್ನು ನವೀಕರಿಸಲಾಗಿದ್ದು, ಹೊಸ ಸೌಲಭ್ಯದೊಂದಿಗೆ ಪ್ರೀಮಿಯಂ ಅನುಭವ ನೀಡಲಿದೆ.

ಅಗಸ್ಟ್ ತಿಂಗಳ ಕಾರು ಮಾರಾಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಂಡ ಟಾಟಾ

ಹೊಸ ಮಾದರಿಗಳಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ವಿಶೇಷವಾದ ಸ್ಟಾರ್‌ಲೈಟ್ ಬಣ್ಣದೊಂದಿಗೆ ಪರಿಚಯಿಸಲಾಗಿದ್ದು, ಜೆಟ್ ಮಾದರಿಯು ಎಲ್ಲಾ ಕಾರುಗಳಲ್ಲೂ ಹೈ ಎಂಡ್ ಮಾದರಿಯಾಗಿ ಮಾರಾಟಗೊಳ್ಳುತ್ತವೆ.

ಅಗಸ್ಟ್ ತಿಂಗಳ ಕಾರು ಮಾರಾಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಂಡ ಟಾಟಾ

ಆರಂಭಿಕ ಮಾದರಿಯಾದ ನೆಕ್ಸಾನ್ ಜೆಟ್ ಎಡಿಷನ್ ಮತ್ತು ನೆಕ್ಸಾನ್ ಇವಿ ಜೆಟ್ ವಿವಿಧ ವೆರಿಯೆಂಟ್‌ಗಳೊಂದಿಗೆ ಖರೀದಿಗೆ ಲಭ್ಯವಿದ್ದು, ನೆಕ್ಸಾನ್ ಜೆಟ್ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 12.13 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 14.08 ಲಕ್ಷ ಬೆಲೆ ಹೊಂದಿದ್ದರೆ ನೆಕ್ಸಾನ್ ಇವಿ ಜೆಟ್ ಆರಂಭಿಕವಾಗಿ ರೂ. 16.50 ಲಕ್ಷದಿಂದ ರೂ. 17.50 ಲಕ್ಷ ಬೆಲೆ ಹೊಂದಿದೆ.

ಅಗಸ್ಟ್ ತಿಂಗಳ ಕಾರು ಮಾರಾಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಂಡ ಟಾಟಾ

ಮಧ್ಯಮ ಕ್ರಮಾಂಕದ ಎಸ್‌ಯುವಿ ಮಾದರಿಯಾದ ಹ್ಯಾರಿಯರ್ ಜೆಟ್ ಎಡಿಷನ್ ಪ್ರಮುಖ ಎರಡು ವೆರಿಯೆಂಟ್‌ಗಳೊಂದಿಗೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 22.20 ಲಕ್ಷದಿಂದ ರೂ. 22.90 ಲಕ್ಷ ಬೆಲೆ ಹೊಂದಿದೆ.

ಅಗಸ್ಟ್ ತಿಂಗಳ ಕಾರು ಮಾರಾಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಂಡ ಟಾಟಾ

ಸಫಾರಿ ಎಸ್‌ಯುವಿಯ ಜೆಟ್ ಎಡಿಷನ್ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 21.35 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 22.75 ಲಕ್ಷ ಬೆಲೆ ಹೊಂದಿವೆ. ಹೊಸ ಮಾದರಿಗಳು ಸ್ಟ್ಯಾಂಡರ್ಡ್ ಮಾದರಿಗಿಂತ ವಿವಿಧ ಎಡಿಷನ್ ಆಧರಿಸಿ ರೂ. 10 ಸಾವಿರದಿಂದ ರೂ. 15 ಸಾವಿರದಷ್ಟು ಹೆಚ್ಚುವರಿ ಬೆಲೆ ಹೊಂದಿರಲಿವೆ.

ಅಗಸ್ಟ್ ತಿಂಗಳ ಕಾರು ಮಾರಾಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಂಡ ಟಾಟಾ

ಜೆಟ್ ಆವೃತ್ತಿಗಳು ಅಸ್ತಿತ್ವದಲ್ಲಿರುವ ಮಾದರಿಗಳ ಉನ್ನತ ರೂಪಾಂತರವನ್ನು ಆಧರಿಸಿದ್ದು, ಇವುಗಳು ವಿಶಿಷ್ಟವಾದ ಡ್ಯುಯಲ್ ಟೋನ್ ಸ್ಟಾರ್‌ಲೈಟ್ ಬಣ್ಣದ ಆಯ್ಕೆ ಹಾಗೂ ಕಂಚು ಬಣ್ಣದೊಂದಿಗೆ ಸಿಲ್ವರ್ ರೂಫ್ ಹೊಂದಿವೆ.

ಅಗಸ್ಟ್ ತಿಂಗಳ ಕಾರು ಮಾರಾಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಂಡ ಟಾಟಾ

ಅದೇ ಸಮಯದಲ್ಲಿ ವಿಶೇಷ ಆವೃತ್ತಿಗಳಲ್ಲಿ ಕಪ್ಪು ಮಿಶ್ರಲೋಹದ ಚಕ್ರಗಳು ಮತ್ತು ಸಿಲ್ವರ್ ಸ್ಕಿಡ್ ಪ್ಲೇಟ್‌ಗಳು ಆಕರ್ಷಕವಾಗಿದ್ದು, ಒಳಾಂಗಣದಲ್ಲಿ ಐಷಾರಾಮಿ ಲುಕ್ ನೀಡುವುದಕ್ಕಾಗಿ ಡ್ಯುಯಲ್-ಟೋನ್ ಆಯ್‌ಸ್ಟರ್ ವೈಟ್ ಮತ್ತು ಗ್ರಾನೈಟ್ ಬ್ಲ್ಯಾಕ್ ಬಣ್ಣವನ್ನು ನೀಡಲಾಗಿದೆ.

ಅಗಸ್ಟ್ ತಿಂಗಳ ಕಾರು ಮಾರಾಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಂಡ ಟಾಟಾ

ಹಾಗೆಯೇ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ನಲ್ಲಿ ಟೆಕ್ನೋ-ಸ್ಟೀಲ್ ಸಿಲ್ವರ್ ಫಿನಿಶ್ ಮಿಡ್ ಪ್ಯಾಡ್, ಬಾಗಿಲು ಮತ್ತು ರೂಫ್‌ನಲ್ಲಿ ಸಿಲ್ವರ್ ಆಕ್ಸೆಂಟ್ ನೀಡಲಾಗಿದ್ದು, ಮುಂಭಾಗದ ಸೀಟಿನಲ್ಲಿ ಹೆಡ್ ರೆಸ್ಟ್‌ನಲ್ಲಿ ಜೆಟ್ ಎಡಿಷನ್ ಎಂಬ್ರಾಯಿಡರಿ ಹಾಗೂ ಸೀಟ್ ಗಳಲ್ಲಿ ಕಂಚಿನ ಬಣ್ಣದ ದಾರವನ್ನು ಬಳಸಿರುವುದು ಐಷಾರಾಮಿ ಅನುಭವ ನೀಡಲಿದೆ.

ಅಗಸ್ಟ್ ತಿಂಗಳ ಕಾರು ಮಾರಾಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಂಡ ಟಾಟಾ

ಇದಲ್ಲದೆ ಹೊಸ ಮಾದರಿಗಳಲ್ಲಿ ಕಂಪನಿಯು ಹೆಚ್ಚಿನ ಮಟ್ಟದ ಸುರಕ್ಷಾ ಫೀಚರ್ಸ್ ನೀಡಿದ್ದು, ಹ್ಯಾರಿಯರ್ ಮತ್ತು ಸಫಾರಿ ಜೆಟ್ ಎಡಿಷನ್ ಎಸ್‌ಯುವಿಗಳಲ್ಲಿ ಡ್ರೈವರ್ ಡೋಸ್ ಆಫ್ ಅಲರ್ಟ್, ಪ್ಯಾನಿಕ್ ಬ್ರೇಕ್ ಅಲರ್ಟ್, ಇಂಪ್ಯಾಕ್ಟ್ ಬ್ರೇಕಿಂಗ್, ಎರಡು ಮಾದರಿಗಳಲ್ಲೂ ಲಭ್ಯವಾಗುವಂತೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಜೊತೆಗೆ 4 ಡಿಸ್ಕ್ ಬ್ರೇಕ್‌ಗಳು ಸೇರಿದಂತೆ ಸುಧಾರಿತ ಇಎಸ್‌ಪಿ ಸೌಲಭ್ಯಗಳನ್ನು ನೀಡಲಾಗಿದೆ.

ಈ ವೈಶಿಷ್ಟ್ಯಗಳು ಈಗಾಗಲೇ ಅಸ್ತಿತ್ವದಲ್ಲಿರುವ 14 ಸುರಕ್ಷತಾ ಸೌಲಭ್ಯಗಳೊಂದಿಗೆ ಬರಲಿದ್ದು,ಎರಡೂ ಎಸ್‌ಯುವಿಗಳಲ್ಲೂ ಇದೀಗ ಎಲ್ಲಾ ಸಾಲುಗಳಲ್ಲಿ ಸಿ ಟೈಪ್ ಯುಎಸ್‌ಬಿ ಚಾರ್ಜರ್ ಅನ್ನು ನೀಡಲಾಗಿದೆ.

Article Published On: Thursday, September 1, 2022, 19:58 [IST]
English summary
Tata motors car sales in august 2022 details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+