ದೈತ್ಯ ಕಾರು ಕಂಪನಿಯ ಘಟಕವನ್ನು ವಶಕ್ಕೆ ಪಡೆಯಲು ಸಜ್ಜಾದ ಟಾಟಾ: ಜ.10ಕ್ಕೆ ಮುಹೂರ್ತ ಫೀಕ್ಸ್

ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್ (TPEML) ಮತ್ತು ಫೋರ್ಡ್ ಮೋಟಾರ್ಸ್ ಪ್ರೈ. Ltd (FIPL) ಒಪ್ಪಂದವನ್ನು ಮಾಡಿಕೊಂಡಿದ್ದು, ಟಾಟಾ ಮೋಟಾರ್ಸ್ ಗುಜರಾತ್‌ನ ಸಾನಂದ್‌ನಲ್ಲಿರುವ ಫೋರ್ಡ್ ಮೋಟಾರ್‌ನ ಉತ್ಪಾದನಾ ಘಟಕವನ್ನು ಒಟ್ಟು $91.5 ಮಿಲಿಯನ್ (ರೂ. 726 ಕೋಟಿ) ಮೊತ್ತಕ್ಕೆ ಸ್ವಾಧೀನಪಡಿಸಿಕೊಳ್ಳಲಿದೆ.

ಈ ಒಪ್ಪಂದದ ಪ್ರಕಾರ, ಎಲ್ಲಾ ಅರ್ಹ ಉದ್ಯೋಗಿಗಳೊಂದಿಗೆ ಆ ಪ್ರದೇಶ, ವಾಹನ ಉತ್ಪಾದನಾ ಘಟಕ, ಯಂತ್ರೋಪಕರಣಗಳು ಮತ್ತು ಸಲಕರಣೆಗಳನ್ನು ಒಳಗೊಂಡಿದೆ. ಟಾಟಾ ಮೋಟಾರ್ಸ್ ತನ್ನ ಅಸ್ತಿತ್ವದಲ್ಲಿರುವ ಸ್ಥಾವರಗಳಲ್ಲಿ ಉತ್ಪಾದನಾ ಸಾಮರ್ಥ್ಯದ ನಿರ್ಬಂಧಗಳನ್ನು ಎದುರಿಸುತ್ತಿರುವ ಸಮಯದಲ್ಲಿ ಈ ಸ್ವಾಧೀನಪಡಿಸಿಕೊಳ್ಳುವಿಕೆಯು ಅದರ ಕೆಲವು ಮಾದರಿಗಳಿಗೆ ದೀರ್ಘ ಕಾಯುವ ಅವಧಿಯನ್ನು ಇಳಿಕೆ ಮಾಡಲು ನೆರವಾಗುತ್ತದೆ. ಇದರಿಂದ ಬೇಡಿಕೆಗೆ ತಕ್ಕಂತೆ ಪೂರೈಕೆ ಮಾಡಬಹುದು ಈ ಸ್ವಾಧೀನವಾದ ಘಟಕವು ವಾರ್ಷಿಕವಾಗಿ 300,000 ಯುನಿಟ್‌ಗಳ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ.

ದೈತ್ಯ ಕಾರು ಕಂಪನಿಯ ಘಟಕವನ್ನು ವಶಕ್ಕೆ ಪಡೆಯಲು ಸಜ್ಜಾದ ಟಾಟಾ

ಇದು ವಾರ್ಷಿಕವಾಗಿ 420,000 ಯುನಿಟ್‌ಗಳಿಗೆ ಸ್ಕೇಲೆಬಲ್ ಆಗಬಹುದು ಏಕೆಂದರೆ ಟಾಟಾ ಮೋಟಾರ್ಸ್ ದೇಶದಲ್ಲಿ ನಿರಂತರವಾಗಿ ಬೆಳೆಯುತ್ತಿರುವ ಎಲೆಕ್ಟ್ರಿಕ್ ವಾಹನ ವಿಭಾಗದಲ್ಲಿ ತನ್ನ ನಾಯಕತ್ವದ ಸ್ಥಾನವನ್ನು ಮುಂದುವರೆಸಿದೆ. ಟಾಟಾ ಮೋಟಾರ್ಸ್‌ನಿಂದ ಫೋರ್ಡ್‌ನ ಸನಂದ್ ಸ್ಥಾವರವನ್ನು ಸ್ವಾಧೀನಪಡಿಸಿಕೊಂಡ ನಂತರ, ಎಫ್‌ಐಪಿಎಲ್ ತನ್ನ ಪವರ್‌ಟ್ರೇನ್ ಉತ್ಪಾದನಾ ಪ್ರಕ್ರಿಯೆಗಳನ್ನು ಟಾಟಾ ಮೋಟಾರ್ಸ್‌ನಿಂದ ಒಪ್ಪಿಕೊಂಡ ನಿಯಮಗಳು ಮತ್ತು ಷರತ್ತುಗಳ ಮೇಲೆ ಗುತ್ತಿಗೆ ನೀಡುವ ಮೂಲಕ ಅದೇ ಸ್ಥಾವರದಲ್ಲಿ ಮುಂದುವರಿಸುತ್ತದೆ ಎಂದು ಹೇಳಲಾಗುತ್ತಿದೆ,

ಎರಡು ವಾಹನ ತಯಾರಕರು ಒಪ್ಪಂದದ ಎಲ್ಲಾ ಷರತ್ತುಗಳನ್ನು ಮತ್ತು ವಹಿವಾಟಿನ ಅನುಮೋದನೆಗಳನ್ನು ಪೂರೈಸಲು ಒಟ್ಟಾಗಿ ಕೆಲಸ ಮಾಡುತ್ತಾರೆ. ಫೋರ್ಡ್ ಇಂಡಿಯಾ ತನ್ನ ಖರೀದಿಯಿಂದ ಯಾವುದೇ ಅರ್ಹ ಉದ್ಯೋಗಿಗಳಿಗೆ ತೊಂದರೆಯಾಗುವುದಿಲ್ಲ ಎಂದು ಘೋಷಿಸಿದೆ ಮತ್ತು ಆದ್ದರಿಂದ ಟಾಟಾ ಮೋಟರ್‌ನ EV ಅಂಗಸಂಸ್ಥೆ, ಫೋರ್ಡ್ ಇಂಡಿಯಾ ದೇಶದಲ್ಲಿ ಅಂತಹ ಕಾರ್ಯಾಚರಣೆಗಳನ್ನು ನಿಲ್ಲಿಸಲು ನಿರ್ಧರಿಸಿದ ನಂತರ ಅವರ ಕಡೆಯಿಂದ ಫೋರ್ಡ್ ಇಂಡಿಯಾದ ಅರ್ಹ ಉದ್ಯೋಗಿಗಳನ್ನು ತೆಗೆದುಕೊಳ್ಳುತ್ತದೆ. ಸ್ಥಾವರವು 3,043 ನೇರ ಮತ್ತು 20,000 ಪರೋಕ್ಷ ಉದ್ಯೋಗಗಳನ್ನು ನೀಡುತ್ತದೆ.

ಟಾಟಾ ಮೋಟಾರ್ಸ್ ತನ್ನ ಅಂಗಸಂಸ್ಥೆಯಾದ ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್ (TPEML) ಗುಜರಾತ್‌ನ ಸನಂದ್‌ನಲ್ಲಿರುವ ಫೋರ್ಡ್ ಇಂಡಿಯಾದ ಉತ್ಪಾದನಾ ಘಟಕವನ್ನು 2023ರ ಜನವರಿ 10 ರಂದು ಸಂಪೂರ್ಣ ಸ್ವಾಧೀನ ಮಾಡಿಕೊಳ್ಳಲಿದೆ ಎಂದು ಘೋಷಿಸಿದೆ. ವಹಿವಾಟಿನ ಭಾಗವಾಗಿ, FIPL ನ ವಾಹನ ತಯಾರಿಕಾ ಘಟಕದ ಎಲ್ಲಾ ಅರ್ಹ ಉದ್ಯೋಗಿಗಳಿಗೆ TPEML ನಲ್ಲಿ ನಿಯಮಗಳು, ಷರತ್ತುಗಳು ಮತ್ತು ಸೇವೆಯ ಪ್ರಯೋಜನಗಳ ಮೇಲೆ ಪ್ರಸ್ತುತ ಅವರು ಪಡೆಯುತ್ತಿರುವಂತೆಯೇ ಉದ್ಯೋಗವನ್ನು ನೀಡಲಾಗುತ್ತದೆ.

ಅಮೆರಿಕಾ ಮೂಲದ ಕಾರು ತಯಾರಕ ಕಂಪನಿಯಾದ ಫೋರ್ಡ್ ಭಾರತೀಯ ಮಾರುಕಟ್ಟೆಯಲ್ಲಿ ಭಾರಿ ನಷ್ಟದ ಹಿನ್ನೆಲೆಯಲ್ಲಿ ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ಭಾರತದಲ್ಲಿ ಉತ್ಪಾದನೆ ಮತ್ತು ಮಾರಾಟವನ್ನು ಸ್ಥಗಿತಗೊಳಿಸಿತ್ತು. ಈ ಫೋರ್ಡ್ ಹಲವು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕಾರ್ಯಚರಣೆ ನಡೆಸುತ್ತಿರುವ ಜನಪ್ರಿಯ ಕಾರು ತಯಾರಕ ಕಂಪನಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಭಾರತೀಯ ವಾಹನೋದ್ಯಮಕ್ಕೆ ಅತ್ಯಂತ ದುಃಖಕರ ನಿದರ್ಶನವೆಂದರೆ ಸ್ಥಳೀಯ ಮಾರುಕಟ್ಟೆಯಿಂದ ಫೋರ್ಡ್ ನಿರ್ಗಮನ. ಆದರೆ ಭಾರತದಲ್ಲಿ ಫೋರ್ಡ್ ಕಂಪನಿಯು ಕೊಟ್ಟ ಮಾತಿನಂತೆ ಪ್ರಸ್ತುತ ತಮ್ಮ ಗ್ರಾಹಕರಿಗೆ ಸೇವೆಯನ್ನು ಒದಗಿಸುತ್ತಿದೆ.

ಇನ್ನು ಭಾರತದಲ್ಲಿ ಒಟ್ಟು ಐದು ಕಾರು ಮಾದರಿಗಳ ಉತ್ಪಾದನೆಯನ್ನು ಹೊಂದಿದ್ದ ಫೋರ್ಡ್ ಕಂಪನಿಯು ಇಕೋಸ್ಪೋರ್ಟ್, ಫಿಗೋ, ಫ್ರೀಸ್ಟೈಲ್, ಎಂಡೀವರ್ ಮತ್ತು ಆಸ್ಪೈರ್ ಕಾರು ಮಾದರಿಗಳನ್ನು ಸ್ಥಳೀಯವಾಗಿಯೇ ಅಭಿವೃದ್ದಿಗೊಳಿಸಿ ಮಾರಾಟ ಸೌಲಭ್ಯವನ್ನು ಹೊಂದಿತ್ತು. ಆದರೆ ಫೋರ್ಡ್ ಕಾರುಗಳಲ್ಲಿ ಇಕೋಸ್ಪೋರ್ಟ್ ಮಾದರಿಯನ್ನು ಹೊರತುಪಡಿಸಿ ಇನ್ನುಳಿದ ಕಾರು ಮಾದರಿಗಳು ನೀರಿಕ್ಷೆಯ ಮಟ್ಟದಲ್ಲಿ ಮಾರಾಟಗೊಳ್ಳಲು ಸಾಧ್ಯವಾಗಿರಲಿಲ್ಲ. ಅದರಲ್ಲೂ ಇತ್ತೀಚೆಗೆ ಬಿಡುಗಡೆಯಾಗಿದ್ದ ಹೊಸ ವಿನ್ಯಾಸದ ಕಾರುಗಳ ಅಬ್ಬರ ನಡುವೆ ಫೋರ್ಡ್ ಕಾರುಗಳ ಮಾರಾಟವು ತೀವ್ರ ಹಿನ್ನಡೆ ಕಂಡಿದ್ದವು.

ದೇಶಿಯ ಮಾರುಕಟ್ಟೆಯಲ್ಲಿನ ಕಾರು ಮಾರಾಟದಲ್ಲಿ ಕೇವಲ ಶೇ. 1.70 ರಷ್ಟು ಮಾರಾಟ ಪಾಲು ಹೊಂದಿದ್ದ ಫೋರ್ಡ್ ಕಂಪನಿಯು ಹಲವಾರು ಮಾರುಕಟ್ಟೆ ಸುಧಾರಣಾ ಕ್ರಮಗಳ ಹೊರತಾಗಿಯು ಗ್ರಾಹಕರ ಬೇಡಿಕೆ ಅನುಭವಿಸಿತು. ಹೀಗಾಗಿ 2019ರಲ್ಲೇ ಭಾರತದಿಂದ ಹೊರಹೊಗುವ ಬಗ್ಗೆ ತೀರ್ಮಾಸಿದ್ದ ಕಂಪನಿಯು ಹೊಸ ಯೋಜನೆಯನ್ನು ತಟಸ್ಥಗೊಳಿಸಿ ಅಂತಿಮವಾಗಿ 2021ರಲ್ಲಿ ತನ್ನ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸಿತು. ಕಾಲಾಂತರದಲ್ಲಿ ಸಾಕಷ್ಟು ಮಾರುಕಟ್ಟೆಯಲ್ಲಿ ಏರಿಳಿತಗಳನ್ನು ಕಂಡಿತ್ತು. ಹೀಗಾಗಿ ಅಂತಿಮ ನಿರ್ಧಾರ ಪ್ರಕಟಿಸಿದ ಫೋರ್ಡ್ ಕಂಪನಿಯು ಭಾರತದಲ್ಲಿನ ಉದ್ಯಮ ಕಾರ್ಯಾಚರಣೆಗೆ ಅಧಿಕೃತವಾಗಿ ಸ್ಥಗಿತಗೊಳಿಸಿತು.

Article Published On: Friday, December 30, 2022, 19:37 [IST]
English summary
Tata motors ford sanand plant takeover date details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+